Hassan: ಹಾಸನದಲ್ಲಿ ಕಾಫಿ ಬೆಳೆಗಾರರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕಾಫಿಯನ್ನು ಕಳ್ಳತನ ಮಾಡಿದ ಗ್ಯಾಂಗ್ ಒಂದನ್ನು ಪೊಲೀಸರು ಬಂಧಿಸಿದ್ದಾರೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಅರೆಹಳ್ಳಿ ಗ್ರಾಮದಲ್ಲಿ ಕಾಫಿ ಹಣ್ಣುಗಳನ್ನು ಕಳ್ಳತನ ಮಾಡಲು ಬಂದಿದ್ದ ಗ್ಯಾಂಗ್ ಅನ್ನು ತಡೆಯಲು ಹೋಗಿದ್ದ ಜಗನ್ನಾಥ ಶೆಟ್ಟಿ ಎಂಬುವರ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದು, ಕಾಫಿ ತೋಟದಲ್ಲಿದ್ದಂತಹ ಕಾಫಿ ಹಣ್ಣುಗಳನ್ನು ಕದ್ದು ಪರಾರಿಯಾಗಿರುತ್ತಾರೆ.
ಈ ಕುರಿತಾಗಿ ಅರೇಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇದೀಗ ಕಾಫಿ ಕಳ್ಳರನ್ನ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಅರೇಹಳ್ಳಿ ಗ್ರಾಮದ ಶಾಹಿದ್ ಮುಬಾರಕ್, ಹಜೀಜ್, ಸುನಿಲ್ ,ಸಾಗರ್ ಪ್ರಜ್ವಲ್, ಜಹಿರ್ ಎಂದು ಗುರುತಿಸಲಾಗಿದ್ದು ಸುನಿಲ್ ವ್ಯಾಪಾರಿಯಾಗಿರುತ್ತಾನೆ ಹಾಗೂ ಈತ ಕಳ್ಳತನ ಮಾಡಿದ ಕಾಫಿ ಎಂದು ತಿಳಿದು ಕೂಡ ಅದನ್ನು ಖರೀದಿಸಿರುತ್ತಾನೆ.
ಇದನ್ನು ಓದಿ: Weather Report: ಹೆಚ್ಚಾಗಲಿದೆ ಚಳಿ! 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್