Noida network issue death: ನೆಟ್ವರ್ಕ್ ಹುಡುಕಿ ಹೊರಟ ವ್ಯಕ್ತಿ ಅಮೃತ

Spread the love

Noida network issue death: ಇತ್ತೀಚಿಗೆ ಎಲ್ಲೆಡೆ ನೆಟ್ವರ್ಕ್ ಸಮಸ್ಯೆ ಹೆಚ್ಚಾಗುತ್ತಿದ್ದು, ನೆಟ್ವರ್ಕ್ ಹುಡುಕಿಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ. ಇದೇ ರೀತಿಯಾಗಿ ನೆಟ್ವರ್ಕ್ ಹುಡುಕಿಕೊಂಡು ಹೋದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಎಕ್ಸಿಕ್ಯೂಟಿವ್ ಸಾವನ್ನಪ್ಪಿದ್ದಾರೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಉದ್ಯೋಗಿ ಒಬ್ಬರು ನೆಟ್ವರ್ಕ್ ಸಿಗದ ಕಾರಣ, ಮಹಡಿಯ ಮೇಲೆ ನಿಂತು ಫೋನಿನಲ್ಲಿ ಮಾತನಾಡುವಾಗ ಈ ಘಟನೆ ನಡೆದಿದ್ದು, ನೆಟ್ವರ್ಕ್ ಒಂದು ಜೀವವನ್ನು ಪಡೆದುಕೊಂಡಿದೆ.

ನೋಯ್ಡಾದ ಸೆಕ್ಟರ್ 104ರಲ್ಲಿ ಈ ಘಟನೆ ನಡೆದಿದ್ದು, ಮೃತ ವ್ಯಕ್ತಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಉತ್ತರ ಪ್ರದೇಶ ಕಾನ್ಪುರ ಮೂಲದ ಅಜಯ್ ಗರ್ಗ್ 17ನೆ ಮಹಡಿಯಿಂದ ಬಿದ್ದು ಮೃತಪಟ್ಟ ವ್ಯಕ್ತಿ.

Noida Accident IOC executive fall
Noida Accident IOC executive fall

ಅಜಯ್ ಗರ್ಗ್ ತಮ್ಮ ಪತ್ನಿ ಯೊಂದಿಗೆ ಏಟಿಎಸ್ ವನ್ ಹ್ಯಾಮೆಟ್ ನಲ್ಲಿ ವಾಸವಾಗಿದ್ದರು. ಮನೆಯಲ್ಲಿರುವಾಗ ಈ ತನಗೆ ಒಂದು ಕರೆ ಬಂದಿದ್ದು, ನೆಟ್ವರ್ಕ್ ಸಿಗದ ಕಾರಣ ಮಹಡಿಯನ್ನು ಹತ್ತಿ ಹೋಗಿರುವಂತಹದ್ದು.

ಇನ್ನು ಫೋನಿನಲ್ಲಿ ಮಾತನಾಡುವಂತಹ ಸಮಯದಲ್ಲಿ ಕೆಳಗೆ ಬಿದ್ದಿದ್ದು ಸೊಸೈಟಿ ಅವರು ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ. ಆದರೆ ಅಷ್ಟರೊಳಗಾಗಲೆ ವ್ಯಕ್ತಿ ಮೃತಪಟ್ಟಿರುತ್ತಾರೆ.

ಇನ್ನು ಕಾಲುಜಾರಿ ಬಿದ್ದು ಮೃತರಾಗಿದ್ದಾರೆಯೋ ಅಥವಾ ಆತ್ಮಹತ್ಯೆಯು ಎಂಬುದು ಸ್ಪಷ್ಟವಾಗಬೇಕಿದೆ. ಪೊಲೀಸರು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ತನಿಖೆ ನಡೆಯುತ್ತಿದೆ.

Leave a Reply

Scroll to Top

Discover more from nirantarasuddi

Subscribe now to keep reading and get access to the full archive.

Continue reading