Nyaya setu: ವಾಟ್ಸಪ್ ನಲ್ಲಿ ಉಚಿತ ಕಾನೂನು ಸಲಹೆ: ನ್ಯಾಯ ಸೇತು

Spread the love

Nyaya setu: ಕೇಂದ್ರ ಸರ್ಕಾರವು ವಾಟ್ಸಾಪ್ ಮೂಲಕ ಜನರಿಗೆ ಉಚಿತ ಕಾನೂನು ಸೇವೆ ಒದಗಿಸಲು ‘ ನ್ಯಾಯ ಸೇತು’ ಅನ್ನು ಪರಿಚಯಿಸಿದೆ. ಇನ್ನು ಜನರು ಕುಳಿತ ಜಾಗದಲ್ಲಿ, ತಮ್ಮ ಮೊಬೈಲ್ ಮೂಲಕವೇ ಕಾನೂನು ಸೇವೆಯ ಕುರಿತಾಗಿ ತಿಳಿದುಕೊಳ್ಳಬಹುದು.

🖼️ Alt Textಕೇಂದ್ರ ಸರ್ಕಾರ ಪರಿಚಯಿಸಿದ ನ್ಯಾಯ ಸೇತು ವಾಟ್ಸಾಪ್ ಚಾಟ್‌ಬಾಟ್ ಮೂಲಕ ಉಚಿತ ಕಾನೂನು ಸೇವೆ ಪಡೆಯುವ ಮಾಹಿತಿ
🖼️ Alt Text
ಕೇಂದ್ರ ಸರ್ಕಾರ ಪರಿಚಯಿಸಿದ ನ್ಯಾಯ ಸೇತು ವಾಟ್ಸಾಪ್ ಚಾಟ್‌ಬಾಟ್ ಮೂಲಕ ಉಚಿತ ಕಾನೂನು ಸೇವೆ ಪಡೆಯುವ ಮಾಹಿತಿ

ಭಾರತ ಸರ್ಕಾರದ ಕಾನೂನು ಮತ್ತು ನ್ಯಾಯ ಸಚಿವಾಲಯ ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ನೀಡಿದೆ. ಮೆಟ ಒಡೆತನದ ವಾಟ್ಸಾಪ್‌ನಲ್ಲಿ ಈ ಚಾಟ್‌ಬಾಟ್ ಮೂಲಕ ಈ ಸೇವೆ ನೀಡಿದೆ.

ಈ ಮೂಲಕ ಜನರು ಹೇಗೆ ಉಚಿತ ಕಾನೂನು ಸಹಾಯ ಪಡೆಯಬಹುದು ಎಂಬುದನ್ನು ವಿವರಿಸಿದೆ.

ಸಿವಿಲ್/ ಕ್ರಿಮಿನಲ್ ಕಾನೂನು, ರಕ್ಷಣೆ, ಕಾರ್ಪೊರೇಟ್ ಮತ್ತು ಕೌಟುಂಬಿಕ ವಿವಾದಗಳಂತಹ ವಿವಿಧ ಕ್ಷೇತ್ರಗಳಿಗೆ ಅನ್ವಯಿಸುತ್ತದೆ. ಆ ಕ್ಷೇತ್ರಗಳಲ್ಲಿ ಪಡೆಯಲು ಜನರು ನ್ಯಾಯ ಸೇತು ಚಾಟ್‌ಬಾಟ್ ಅನ್ನು ಬಳಕೆ ಮಾಡಬಹುದು, ಈ ಬಳಕೆ ಸಂಪೂರ್ಣ ಉಚಿತವಾಗಿದೆ.

ಕಾನೂನು ಮತ್ತು ನ್ಯಾಯ ಸಚಿವಾಲಯ ತನ್ನ ಪೋಸ್ಟ್‌ನಲ್ಲಿ, “ಕಾನೂನು ಸಹಾಯವು ಈಗ ಕೇವಲ ಒಂದು ಸಂದೇಶದ ದೂರದಲ್ಲಿದೆ. ನ್ಯಾಯ ಸೇತು ನಿಮ್ಮ ವಾಟ್ಸಾಪ್‌ಗೆ ನೇರವಾಗಿ ಸುಲಭವಾಗಿ ನ್ಯಾಯವನ್ನು ತಂದಿದೆ.

ಕಾನೂನು ಸಲಹೆ ಮತ್ತು ಮಾಹಿತಿಯನ್ನು ಪಡೆಯಲು ನಿಮ್ಮ ಮೊಬೈಲ್ ಸಂಖ್ಯೆಯನ್ನು ದೃಢೀಕರಿಸಿ. ಈ ಸ್ಮಾರ್ಟ್ ನ್ಯಾವಿಗೇಷನ್ ಮೂಲಕ ವೃತ್ತಿಪರ ಕಾನೂನು ನೆರವು ಸುಲಭವಾಗಿ ಸಿಗುತ್ತದೆ.

ಹಾಗೂ ಪ್ರತಿ ನಾಗರಿಕರಿಗೂ ಯಾವಾಗಲೂ ವೇಗವಾಗಿ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತದೆ ಎಂದು ಹೇಳಿದೆ.

ಜನರು ಮೊದಲು ತಮ್ಮ ವಾಟ್ಸಾಪ್‌ನಲ್ಲಿ 7217711814 ಸಂಖ್ಯೆಯನ್ನು ಸೇವ್ ಮಾಡಿಕೊಳ್ಳಿ. ಬಳಿಕ ಈ ಚಾಟ್‌ಬಾಟ್ ಬಳಸಲು ಪ್ರಾರಂಭಿಸಬಹುದು. Tele-Law ಎಂಬ ಆಯ್ಕೆ ನಿಮಗೆ ಕಾಣಿಸಿಕೊಳ್ಳುತ್ತದೆ.

ಮೊಬೈಲ್ ಸಂಖ್ಯೆಯ ದೃಢೀಕರಣದ ನಂತರ ಎಐ ತಂತ್ರಜ್ಞಾನ ಆಧಾರಿತ ನ್ಯಾಯ ಸೇತು ಚಾಟ್‌ಬಾಟ್ ಮೂಲಕ ಕಾನೂನು ಸಲಹೆ ಮತ್ತು ಮಾಹಿತಿ ಪಡೆಯಬಹುದು.

ಸೇವೆಯು ಬಳಕ ಹಿಂದೆ ಪ್ರಾರಂಭವಾಗಿದೆ ಪ್ರಸ್ತುತ ಕೆಲವೇ ಬಳಕೆದಾರರು ಇದನ್ನು ಬಳಸಿದ್ದಾರೆ. ಸೇವೆಯನ್ನು ಬಳಸುವಾಗ ತಾಂತ್ರಿಕ ದೋಷಗಳು ಕಂಡುಬರುತ್ತಿವೆ ಎಂದು ಹಲವರು ಹೇಳಿದ್ದಾರೆ.

ಅಲ್ಲದೆ, ನ್ಯಾಯ ಸೇತುವನ್ನು ವಾಟ್ಸಾಪ್ಗೆ ಲಿಂಕ್ ಮಾಡುವ ಬದಲು ಭಾರತದ ಅರಟ್ಟೆ ಪ್ಲಾಟ್‌ಫಾರ್ಮ್‌ಗೆ ಏಕೆ ಲಿಂಕ್ ಮಾಡಿಲ್ಲ? ಎಂದು ಕೆಲವು ಬಳಕೆದಾರರು ಪ್ರಶ್ನಿಸಿದ್ದಾರೆ.

ಕೌಟುಂಬಿಕ ವಿವಾದಗಳು, ಕೌಟುಂಬಿಕ ಹಿಂಸಾಚಾರ ಪ್ರಕರಣ ಇದು ನೆರವು ನೀಡುತ್ತದೆ. ಮತ್ತು ವೈವಾಹಿಕ ಸಮಸ್ಯೆ ಗಳಿಗೆ ನ್ಯಾಯ ಸೇತು ಸಲಹೆ ಬೆಂಬಲಿಸುತ್ತದೆ ಎಂದು ಇಲಾಖೆ ತಿಳಿಸಿದೆ.

Leave a Reply

Scroll to Top

Discover more from nirantarasuddi

Subscribe now to keep reading and get access to the full archive.

Continue reading