Bomb Threat: ಬೆಂಗಳೂರಿನ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ

Spread the love

Bomb Threat : ಬೆಂಗಳೂರಿನ ಖಾಸಗಿ ಶಾಲೆಯೊಂದಕ್ಕೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಜಯನಗರ 4ನೇ ಬ್ಲಾಕ್ ನಲ್ಲಿರುವ ಶಾಲೆಗೆ ಬಂದಿರುವಂತಹದ್ದು. ಶಾಲೆಯ ನಾಲ್ಕು ಕಡೆ ಬಾಂಬ್ ಇಡಲಾಗಿದೆ ಎಂದು ಸಂದೇಶ ಬಂದಿತ್ತು.

Bomb threat email sent to private school in Jayanagar Bengaluru
Bomb threat email sent to private school in Jayanagar Bengaluru

ಮೊಹಮ್ಮದ್ ಇಕ್ಬಾಲ್ ಎಂಬುವವನು ಸಂದೇಶ ಕಳುಹಿಸಿದ್ದು ಎಂದು ಖಚಿತವಾಗಿದೆ. ಬಾಂಬ್ ಬೆದರಿಕೆ ಸಂದೇಶ ಬಂದ ಹಿನ್ನೆಲೆ ಆತಂಕಗೊಂಡ ಸಿಬ್ಬಂದಿಗಳು ಕೂಡಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಬೆಂಗಳೂರಿನ ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಬರುತ್ತಿರುವುದು ಇದೇನು ಮೊದಲ ಬಾರಿಯಲ್ಲ.ಹಲವು ಬಾರಿ ಶಾಲೆಗಳಿಗೆ ಕಿಡಿಗೇಡಿಗಳು ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದರು.

ನಿನ್ನೆ ಏಳು ಜಿಲ್ಲೆಗಳಿಗೆ ಬೆದರಿಕೆ:

ರಾಜ್ಯದಲ್ಲಿ ನಿನ್ನೆ ಒಂದೇ ದಿನ ಹಲವು ಕಡೆ ಹುಸಿ ಬಾಂಬ್ ಬೆದರಿಕೆ ಇಮೇಲ್ ಬಂದಿದೆ. ಇದರಿಂದಾಗಿ, ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ನಿನ್ನೆ ಒಂದೇ ದಿನ ಬೆಂಗಳೂರು, ಮೈಸೂರು, ಹಾಸನ, ಬಾಗಲಕೋಟೆ, ಗದಗ, ಧಾರವಾಡ, ಹಾಸನ ಸೇರಿ 7 ಜಿಲ್ಲೆಗಳಿಗೆ ಕಿಡಿಗೇಡಿಗಳು ಬಾಂಬ್ ಬೆದರಿಕೆ ಇಮೇಲ್ ಕಳುಹಿಸಿದ್ದಾರೆ.

ಮೈಸೂರು ಹಳೆ ಕೋರ್ಟ್, ಬಾಗಲಕೋಟೆ ಜಿಲ್ಲಾ ನ್ಯಾಯಾಲಯ, ಹಾಗೂ ಬೆಂಗಳೂರಿನ ಪಾಸ್ಪೋರ್ಟ್ ಕಚೇರಿಕೆ ಬೆದರಿಕೆ ಬಂದಿತ್ತು. ವಿಷಯ ತಿಳಿಯುತ್ತಿದ್ದಂತೆ ತನಿಖೆ ನಡೆಸಿದ್ದು, ಎಲ್ಲವೂ ಹುಸಿಬಾಂಬ್ ಆಗಿರುತ್ತದೆ.

Leave a Reply

Scroll to Top

Discover more from nirantarasuddi

Subscribe now to keep reading and get access to the full archive.

Continue reading