Gastric Relief:ಆಧುನಿಕತೆಗೆ ಜಾರಿದಂತೆ ಆರೋಗ್ಯ ಸ್ಥಿತಿ ಹದಗೆಡುತ್ತಿದೆ. ಬದಲಾಗುತ್ತಿರುವ ಆರೋಗ್ಯ ಶೈಲಿ ಮತ್ತು ಜೀವನಶೈಲಿಗಳು ಹೆಚ್ಚಿನ ಖಾಯಿಲೆಗಳನ್ನು ತಂದೊಡ್ಡುತ್ತಿವೆ.

Gastric Relief: ಗ್ಯಾಸ್ಟ್ರಿಕ್ ಸಮಸ್ಯೆಯು ಇದೀಗ ಚಿಕ್ಕ ಮಕ್ಕಳಲ್ಲೂ ಹೆಚ್ಚಾಗುತ್ತಿರುವುದು ಆಶ್ಚರ್ಯಕರವಾದ ವಿಷಯ. ಹಾಗೂ ಸಮಸ್ಯೆಗಳಿಗೆ ಮದ್ದುಗಳು ಕೂಡ ಇವೆ.
ಹಾಗೂ ನೈಸರ್ಗಿಕ ಮದ್ದುಗಳು ಇಂಗ್ಲೀಷ್ ಮೆಡಿಸಿನ್ ಗಿಂತಲೂ ಕೂಡ ಬಹಳ ಉತ್ತಮವಾದದ್ದು. ಮನೆ ಮದ್ದುಗಳು ಆರೋಗ್ಯಕ್ಕೂ ಒಳಿತು ಮತ್ತು ಆರೋಗ್ಯದ ಸಮಸ್ಯೆಗೂ ಕೂಡ ಒಳಿತಾಗಿದೆ.
Gastric Relief: ಗ್ಯಾಸ್ಟಿಕ್ ನಿವಾರಣೆಗೊಳಿಸಲು ಕೆಲವು ಮನೆ ಮದ್ದುಗಳು ಈ ರೀತಿ ಇವೆ:
1. ಶುಂಠಿ:
ಶುಂಠಿಯ ಬಳಕೆಯು ಜೀರ್ಣಕಾರಿ ಕಿಣ್ವಗಳನ್ನು ಹೆಚ್ಚುಗೊಳಿಸುತ್ತದೆ. ಮತ್ತು ಹೊಟ್ಟೆಯಲ್ಲಿನ ಉರಿಯೂತವನ್ನು ಕಡಿಮೆಯಾಗಿಸುತ್ತದೆ. ಇದನ್ನು ಚಹಾ ಮಾಡಿ ಕುಡಿಬಹುದು. ಅಥವಾ ಬಿಸಿ ನೀರಿನಲ್ಲಿ ಕುದಿಸಿ ಕೂಡ ಕುಡಿಯಬಹುದಾಗಿದೆ.
ಈ ರೀತಿ ಮಾಡುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ. ಜೊತೆಗೆ ಹೊಟ್ಟೆಯ ಸಮಸ್ಯೆ ಗ್ಯಾಸ್ಟಿಕ್ ಸಮಸ್ಯೆ ಕೂಡ ಕಡಿಮೆಯಾಗುತ್ತದೆ.
2. ಜೀರಿಗೆ ನೀರು:
ಹೊಟ್ಟೆಯಲ್ಲಿ ಇರುವಂತಹ ಆಮ್ಲದ ಉತ್ಪಾದನಾ ಪ್ರಮಾಣವು ಅಸಮತೋಲನಗೊಳ್ಳುತ್ತದೆ. ಇಂತಹ ಸಮಯದಲ್ಲಿ ಗ್ಯಾಸ್ಟ್ರಿಕ್ ಉಂಟಾಗುವಂತದ್ದು.
ಜೀರಿಗೆ ನೀರು ಕುಡಿಯುವುದರಿಂದ ಆಮ್ಲದ ಉತ್ಪಾದನ ಪ್ರಮಾಣವನ್ನು ಸಮತೋಲನದಲ್ಲಿ ಇಡಲು ಸಾಧ್ಯವಾಗುತ್ತದೆ.
ಹೀಗಾಗಿ ಜೀರಿಗೆ ನೀರನ್ನು ದಿನಕ್ಕೆ ಎರಡು ಬಾರಿ ಕುಡಿಯುವುದು ಆರೋಗ್ಯಕ್ಕೆ ಹಿತಕರವಾಗಿದೆ.
3. ಕಪ್ಪು ಉಪ್ಪು ಮತ್ತು ಓಂ ಕಾಳು:
ಇಲ್ಲಿ ಒಂದು ಚಮಚ ಓಂ ಕಾಳನ್ನು ಕಪ್ಪು ಉಪ್ಪಿನ ಜೊತೆ ಬೆರೆಸಿ ಆಗಿದೂ ತಿನ್ನಬೇಕು. ಈ ರೀತಿ ಮಾಡುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಉಂಟಾಗುವ ಹೊಟ್ಟೆ ನೋವನ್ನು ತಕ್ಷಣವೇ ಸರಿಪಡಿಸಬಹುದು.
ಕೇವಲ ಗ್ಯಾಸ್ಟ್ರಿಕ್ ಬಂದಾಗ ಅಷ್ಟೇ ಅಲ್ಲ. ಬೇರೆ ಸಮಯದಲ್ಲೂ ಕೂಡ ಓಂ ಕಾಳು, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದನ್ನು ಸಹಜವಾಗಿ ತಿನ್ನುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆಗಳು ಬರುವುದಿಲ್ಲ.
4. ಇಂಗು:
ಇಂಗು ಕರುಳಿನಲ್ಲಿ ಇರುವಂತಹ ಬ್ಯಾಕ್ಟೀರಿಯಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾಗೂ ಈ ಮೂಲಕ ಗ್ಯಾಸ್ಟ್ರಿಕ್ ಅನ್ನು ಹೊರ ಹಾಕಬಹುದಾಗಿದೆ.
ಬೆಚ್ಚಗಿನ ನೀರಿನ ಜೊತೆಗೆ ಇಂಗನ್ನು ಹಾಕಿ ಕುಡಿಯಬಹುದಾಗಿದೆ. ಹಾಗೂ ಹೆಚ್ಚಿನ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳಿದ್ದರೆ ಇಂದಿನ ಪೇಸ್ಟ್ ಮಾಡಿ ಹೊಕ್ಕಳಿನ ಸುತ್ತಲೂ ಹಚ್ಚಬಹುದು. ಈ ಮೂಲಕ ಅತಿ ಬೇಗನೆ ಸಮಸ್ಯೆಗಳನ್ನು ಕಡಿಮೆಗೊಳಿಸಬಹುದಾಗಿದೆ.
5. ಎಳನೀರು:
ಇದರಲ್ಲಿ ಆಂಟಿ-ಆಕ್ಸಿಡೆಂಟ್‌ಗಳು ಹೆಚ್ಚಾಗಿದೆ. ಇದು ಆಮ್ಲೀಯತೆಯನ್ನು ಕಡಿಮೆ ಮಾಡಲು ಸಹಕರಿಸುತ್ತದೆ.
ಕೇವಲ ಗ್ಯಾಸ್ಟ್ರಿಕ್ ಅಲ್ಲದೆ ದೇಹಕ್ಕೆ ಸಂಬಂಧಪಟ್ಟಂತಹ ಹಲವು ಸಮಸ್ಯೆಗಳಿಗೆ ಎಳನೀರು ಪರಿಹಾರವಾಗಿದೆ. ಪ್ರತಿ ದಿನವೂ ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳುವುದು ಉತ್ತಮ.
6. ಮಜ್ಜಿಗೆ ಮತ್ತು ಜೀರಿಗೆ:
ಮಜ್ಜಿಗೆಯಲ್ಲಿ ಹೆಚ್ಚಿನ ಮಟ್ಟದ ಲ್ಯಾಕ್ಟಿಕ್ ಆಸಿಡ್ ಇರುತ್ತದೆ. ಹಾಗೂ ಇದು ಗ್ಯಾಸ್ಟಿಕ್ ಸಮಸ್ಯೆಗೆ ತಕ್ಷಣದ ಪರಿಹಾರವಾಗಿದೆ.
ಹಾಗೂ ಮಜ್ಜಿಗೆಯೊಂದಿಗೆ ಜೀರಿಗೆ ಪುಡಿ ಮತ್ತು ಉಪ್ಪು ಹಾಕಿ ಕುಡಿಯಬೇಕು. ಅದರಲ್ಲೂ ಕೂಡ ಊಟದ ನಂತರ ಇದನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಹೆಚ್ಚುತ್ತದೆ. ಮತ್ತು ಆಮ್ಲಿಯತೆಯನ್ನು ಕೂಡ ಕಡಿಮೆಗೊಳಿಸಬಹುದು.
ದಿನನಿತ್ಯದ ಅಭ್ಯಾಸಗಳಲ್ಲಿ ಬದಲಾವಣೆ:
•ಊಟದ ನಂತರ ಒಂದಷ್ಟು ದೂರ ನಡೆಯುವುದು. ಹಾಗೂ ಮಲಗುವುದಕ್ಕೂ ಎರಡು ಅಥವಾ ಮೂರು ಗಂಟೆ ಮೊದಲು ಊಟ ಮಾಡುವ ಅಭ್ಯಾಸ ಒಳ್ಳೆಯದು. ಇದು ಗ್ಯಾಸ್ಟ್ರಿಕ್ ಸಮಸ್ಯೆಗೆ ಮುಕ್ತಿ ನೀಡುತ್ತದೆ.
•ಆಹಾರವನ್ನು ಸರಿಯಾಗಿ ಅಗಿದು ತಿನ್ನಬೇಕು. ಅರ್ಧಂ ಬರ್ದ ತಿಂದಾಗ ಜೀರ್ಣ ಕ್ರಿಯೆಯೂ ಸರಿಯಾಗಿ ಆಗುವುದಿಲ್ಲ. ಹಾಗೂ ಇದರಿಂದ ಹೊಟ್ಟೆಯ ಮೇಲೆ ಬೀಳುವ ಒತ್ತಡವು ಗ್ಯಾಸ್ಟ್ರಿಕ್ ಅನ್ನು ಹುಟ್ಟು ಹಾಕುತ್ತದೆ.
•ಹೆಚ್ಚಿನ ಹೊತ್ತು ಖಾಲಿ ಹೊಟ್ಟೆಯನ್ನು ಬಿಡಕೂಡದು. ಇದು ಕೂಡ ಗ್ಯಾಸ್ಟ್ರಿಕ್ ಉಂಟು ಮಾಡುತ್ತದೆ. ಮತ್ತು ಸಮಯಕ್ಕೆ ಸರಿಯಾದ ಆಹಾರ ದೇಹದ ಆರೋಗ್ಯವನ್ನು ಕಾಪಾಡುತ್ತದೆ.
ಇವುಗಳ ಹೆಚ್ಚಿನ ಬಳಕೆ ಬೇಡ:
•ಎಣ್ಣೆ ಪದಾರ್ಥ ಮತ್ತು ಖಾರ ಪದಾರ್ಥ
•ಕಾಫಿ ಮತ್ತು ಚಹಾ
•ಕಾರ್ಬೊನೇಟೆಡ್ ಪಾನೀಯಗಳು( ಸೋಡಾ ಮತ್ತು ಕೂಲ್ ಡ್ರಿಂಕ್ಸ್ ಹಾಗೂ ಇತ್ಯಾದಿ.)
ಇವುಗಳನ್ನು ಕಡಿಮೆ ಬಳಸುವಿಕೆಯಿಂದಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುವುದಿಲ್ಲ. ಮತ್ತು ದೇಹವನ್ನು ಆರೋಗ್ಯವಾಗಿ ಕಾಪಾಡಿಕೊಳ್ಳಬಹುದು.
ಇದನ್ನು ಓದಿ: ಚಿಕ್ಕಮಗಳೂರು: ವಡೆಯಲ್ಲಿ ಹಲ್ಲಿ, ಕೊಳೆತಿರುವ ಕೇಕ್
ಒಟ್ಟಾರೆಯಾಗಿ ಪ್ರತಿ ಸಮಸ್ಯೆಗಳಿಗೂ ನಮ್ಮಲ್ಲೇ ಉತ್ತರಗಳಿವೆ. ಮನೆಯಲ್ಲಿರುವ ಆಯುರ್ವೇದ ಸಾಮಗ್ರಿಗಳು, ದಿನನಿತ್ಯದ ಬಳಕೆಯ ವಸ್ತುಗಳಲ್ಲಿಯೇ ಔಷಧಿಗಳು ಕೂಡ ಇವೆ.
ನಾವು ಹುಡುಕಬೇಕು ಮತ್ತು ಅವುಗಳ ಸರಿಯಾದ ಬಳಕೆಯನ್ನು ಮಾಡಬೇಕು. ಹಾಗೂ ಅನಗತ್ಯ ವಸ್ತುಗಳ ಬಳಕೆಯನ್ನು ನಿಲ್ಲಿಸಿದಾಗ ನಮ್ಮ ಆರೋಗ್ಯವನ್ನು ನಾವು ಸುಲಭವಾಗಿ ಕಾಪಾಡಬಹುದಾಗಿದೆ.