Kalasa: ಚರಂಡಿ ಸ್ಲ್ಯಾಬ್ ನಿರ್ವಹಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ; ನಡೆಯುತ್ತಿರುವ ಕಾಮಗಾರಿ ಶೀಘ್ರ ಪೂರ್ಣ – ಚಂದ್ರಮೋಹನ್

Spread the love

Kalasa: ಇತ್ತೀಚೆಗೆ ಚರಂಡಿಯ ಸ್ಲ್ಯಾಬ್ ಮುರಿದು ಬಿದ್ದ ಪರಿಣಾಮ ಕಳಸದ ಕ್ಯಾಂಟೀನ್ ವ್ಯಾಪಾರಿ ಮಂಜುನಾಥ್ ಅವರು ಗಾಯಗೊಂಡಿರುವ ಘಟನೆ ನಡೆದಿತ್ತು.

 

Kalasa drainage slab maintenance work ongoing under Gram Panchayat jurisdiction.
Kalasa drainage slab maintenance work ongoing under Gram Panchayat jurisdiction.

Kalasa: ಈ ಹಿನ್ನೆಲೆಯಲ್ಲಿ ಚರಂಡಿ ಸ್ಲ್ಯಾಬ್‌ಗಳ ನಿರ್ವಹಣೆ ಹಾಗೂ ದುರಸ್ತಿ ಕುರಿತು ಸಾರ್ವಜನಿಕರಲ್ಲಿ ಚರ್ಚೆ ನಡೆದಿತ್ತು.

ಮುಖ್ಯ ರಸ್ತೆಯ ಚರಂಡಿಗಳ ಸ್ಲ್ಯಾಬ್‌ಗಳ ಅಳವಡಿಕೆ ಹಾಗೂ ನಿರ್ವಹಣೆ ಕಳಸ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುತ್ತದೆ ಎಂದು ಇದೀಗ ಸ್ಪಷ್ಟಪಡಿಸಲಾಗಿದೆ.

ನೀರಿನ ಟ್ಯಾಂಕ್‌ಗಳ ನಿರ್ವಹಣೆ, ಪೈಪ್‌ಗಳ ದುರಸ್ತಿ, ವಿದ್ಯುತ್ ದೀಪಗಳ ನಿರ್ವಹಣೆ ಹಾಗೂ ಕಸ ವಿಲೇವಾರಿ ಸೇರಿದಂತೆ ವಿವಿಧ ಕಾರ್ಯಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತವೆ.

ಹೊಸ ರಸ್ತೆ ಹಾಗೂ ಚರಂಡಿ ನಿರ್ಮಾಣದ ಜವಾಬ್ದಾರಿ ಲೋಕೋಪಯೋಗಿ ಇಲಾಖೆಗೆ ಸೇರಿದ್ದು, ನಿರ್ಮಾಣದ ನಂತರದ ನಿರ್ವಹಣೆ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.

ಈಗಾಗಲೇ ಮುರಿದುಹೋಗಿರುವ ಹಲವು ಚರಂಡಿ ಸ್ಲ್ಯಾಬ್‌ಗಳ ಅಳವಡಿಕೆ ಕಾಮಗಾರಿ ಪಿಡಿಒ ಅವರ ಮೇಲ್ವಿಚಾರಣೆಯಲ್ಲಿ ನಡೆಯುತ್ತಿದ್ದು, ಸದ್ಯದಲ್ಲೇ ಚರಂಡಿಗಳ ಮೇಲೆ ಹೊಸ ಸ್ಲ್ಯಾಬ್‌ಗಳನ್ನು ಅಳವಡಿಸಲಾಗುವುದು ಎಂದು ಕಳಸ ಕಾಂಗ್ರೆಸ್ ವಕ್ತಾರರಾದ ಚಂದ್ರಮೋಹನ್ ತಿಳಿಸಿದ್ದಾರೆ.

Leave a Comment

Scroll to Top