Bengaluru: ಬೆಂಗಳೂರಿನಲ್ಲಿ ₹600 ಕೋಟಿ ಹೂಡಿಕೆಯ ಡಿಎನ್ ಸೊಲ್ಯೂಷನ್ಸ್ ಘಟಕ ಆರಂಭ; 350 ಮಂದಿಗೆ ಉದ್ಯೋಗ

Bengaluru:ದಕ್ಷಿಣ ಕೊರಿಯಾ ಮೂಲದ ಪ್ರಮುಖ ಮಷೀನ್ ಟೋಲ್ ತಯಾರಿಕಾ ಕಂಪನಿ ಡಿಎನ್ ಸೊಲ್ಯೂಷನ್ ಬೆಂಗಳೂರಿನಲ್ಲಿ ತನ್ನ ತಯಾರಿಕಾ ಘಟಕವನ್ನು ಆರಂಭಿಸಿದೆ. ಇದು ಕಂಪನಿಯ ಮೊದಲ ಭಾರತದ ತಯಾರಿಕಾ ಘಟಕವಾಗಿದೆ.
ಸುಮಾರು 600 ಕೋಟಿ ಹೂಡಿಕೆಯನ್ನು ಮಾಡಿದ್ದು ಕರ್ನಾಟಕದ ಉತ್ಪಾದನಾ ಮತ್ತು ಯಂತ್ರೋಪಕರಣ ಕೈಗಾರಿಕಾ ವಲಯಕ್ಕೆ ಮತ್ತಷ್ಟು ಉತ್ತೇಜನ ನೀಡುವ ನಿರೀಕ್ಷೆಯನ್ನು ಮೂಡಿಸಿದೆ ಹಾಗೂ ಈಗಾಗಲೇ ಘಟಕದಿಂದ ಸುಮಾರು 350 ಮಂದಿಗೆ ಉದ್ಯೋಗಾವಕಾಶ ದೊರೆತಿದೆ.
Bengaluru: ದೇವನಹಳ್ಳಿ ಸಮೀಪ ಘಟಕದ ನಿರ್ಮಾಣ:
ಬೆಂಗಳೂರಿನ ದೇವನಹಳ್ಳಿ ತಾಲ್ಲೂಕಿನ ಕುಂದಾಣದ ಜನರಲ್ ಇಂಡಸ್ಟ್ರಿಯಲ್ ಏರಿಯಾದಲ್ಲಿ ಡಿಎನ್ ಸೊಲ್ಯೂಷನ್ಸ್‌ನ ಈ ಉತ್ಪಾದನಾ ಮತ್ತು ಸಂಶೋಧನಾ ಘಟಕವನ್ನು ಸ್ಥಾಪಿಸಲಾಗಿದೆ.
ಸುಮಾರು 25 ಎಕರೆ ಪ್ರದೇಶದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (KIADB) ಸಹಯೋಗದೊಂದಿಗೆ ಈ ಘಟಕವನ್ನು ಅಭಿವೃದ್ಧಿಪಡಿಸಲಾಗಿದೆ.
ಇಲ್ಲಿ ಉತ್ಪಾದನೆಯ ಜೊತೆಗೆ ಸಂಶೋಧನೆ ಮತ್ತು ಅಭಿವೃದ್ಧಿ, ತಾಂತ್ರಿಕ ಕೇಂದ್ರ ಹಾಗೂ ಮಾರಾಟೋತ್ತರ ಸೇವೆಗಳು ಕೂಡ ಇರಲಿದೆ. ಹಾಗೂ ಭಾರತೀಯ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಯಂತ್ರೋಪಕರಣಗಳ ಅಭಿವೃದ್ಧಿಯನ್ನು ಇಲ್ಲಿ ನಡೆಸಲಾಗುತ್ತದೆ.
600 ಕೋಟಿ ಹೂಡಿಕೆಯ ಕಂಪನಿ:
ಈಗಾಗಲೇ ಕಂಪನಿಯ ಮೊದಲ ಹಂತದಲ್ಲಿ 600 ಕೋಟಿ ಹೂಡಿಕೆಯನ್ನು ಮಾಡಿದೆ ಮುಂದೆ. ಮಾರುಕಟ್ಟೆಯ ಬೇಡಿಕೆ ಮತ್ತು ಕಂಪನಿಯ ಬೆಳವಣಿಗೆಯನ್ನು ಆಧರಿಸಿ ಮತ್ತಷ್ಟು ಹೂಡಿಕೆ ಮಾಡುವ ಸಾಧ್ಯತೆ ಇದೆ.
2024ರಲ್ಲಿ ಕರ್ನಾಟಕ ಸರ್ಕಾರದೊಂದಿಗೆ ಮಾಡಿಕೊಂಡಿದ್ದ ಒಪ್ಪಂದದಲ್ಲಿ ಸಾವಿರ ಕೋಟಿ ಹೂಡಿಕೆ ಮಾಡುವುದಾಗಿ ತಿಳಿಸಿತ್ತು. ಹಾಗೂ ಅದರಲ್ಲಿ ಸಂಶೋಧನಾ ಕೇಂದ್ರ ಮತ್ತು ಭಾರತೀಯ ಉತ್ಪಾದನೆ ಸಂಸ್ಥೆಗಳಿಗೆ ತಾಂತ್ರಿಕ ಬೆಂಬಲವನ್ನು ನೀಡುವುದಾಗಿ ತಿಳಿಸಿತ್ತು.
ಉತ್ಪಾದನೆಯಾಗುವ ಯಂತ್ರಗಳು:
ಬೆಂಗಳೂರಿನ ಘಟಕದಲ್ಲಿ ಆರಂಭಿಕ ಹಂತದಲ್ಲಿ SVM ಸರಣಿಯ ವರ್ಟಿಕಲ್ ಮೆಷಿನಿಂಗ್ ಸೆಂಟರ್‌ಗಳು ಹಾಗೂ LYNX ಮತ್ತು LEO ಸರಣಿಯ ಹಾರಿಜಾಂಟಲ್ ಟರ್ನಿಂಗ್ ಸೆಂಟರ್‌ಗಳನ್ನು ಉತ್ಪಾದಿಸಲು ಉದ್ದೇಶಿಸಲಾಗಿದೆ. ಮುಂದಿನ ಹಂತಗಳಲ್ಲಿ ಐದು-ಆಕ್ಸಿಸ್ ಯಂತ್ರಗಳ ಉತ್ಪಾದನೆಯನ್ನೂ ಕೈಗೊಳ್ಳುವ ಯೋಜನೆ ಇದೆ.
ಕರ್ನಾಟಕ, ವಿಶೇಷವಾಗಿ ಬೆಂಗಳೂರು, ನಿಖರ ತಯಾರಿಕೆ, ಆಟೊಮೇಷನ್, ಎಂಜಿನಿಯರಿಂಗ್ ಪ್ರತಿಭೆ ಹಾಗೂ ಪೂರೈಕೆ ಸರಪಳಿ ವ್ಯವಸ್ಥೆಯಲ್ಲಿ ಉತ್ತಮ ಪರಿಸರ ಹೊಂದಿರುವುದರಿಂದ ಡಿಎನ್ ಸೊಲ್ಯೂಷನ್ಸ್ ಈ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿದೆ ಎಂದು ಕಂಪನಿ ಹೇಳಿದೆ.
ಕರ್ನಾಟಕದಲ್ಲಿ ದೇಶದ ಮೆಷಿನ್ ಟೂಲ್ ಉತ್ಪಾದನೆಯ ಸುಮಾರು 52 ಪ್ರತಿಶತ ನಡೆಯುತ್ತಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ. ವಾಹನ, ಏರೋಸ್ಪೇಸ್, ರಕ್ಷಣಾ, ಭಾರೀ ಎಂಜಿನಿಯರಿಂಗ್ ಮತ್ತು ನಿಖರ ತಯಾರಿಕಾ ಕ್ಷೇತ್ರಗಳಿಗೆ ಮೆಷಿನ್ ಟೂಲ್‌ಗಳು ಪ್ರಮುಖವಾಗಿರುವ ಹಿನ್ನೆಲೆಯಲ್ಲಿ ಈ ಹೂಡಿಕೆ ರಾಜ್ಯದ ಕೈಗಾರಿಕಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ.
ಡಿಎನ್ ಸೊಲ್ಯೂಷನ್ಸ್ ಘಟಕದ ಉದ್ಘಾಟನೆ ಸಂದರ್ಭದಲ್ಲಿ ಕರ್ನಾಟಕದಲ್ಲಿ ಮತ್ತಷ್ಟು ಕೊರಿಯಾ ಮೂಲದ ಕಂಪನಿಗಳನ್ನು ಆಕರ್ಷಿಸುವ ಉದ್ದೇಶದಿಂದ ಕೊರಿಯಾ ಕೈಗಾರಿಕಾ ಪಾರ್ಕ್ ಅಭಿವೃದ್ಧಿಪಡಿಸುವ ಬಗ್ಗೆ ರಾಜ್ಯ ಸರ್ಕಾರ ಆಸಕ್ತಿ ವ್ಯಕ್ತಪಡಿಸಿದೆ.
ಜಪಾನ್ ಇಂಡಸ್ಟ್ರಿಯಲ್ ಪಾರ್ಕ್ ಮಾದರಿಯಲ್ಲಿ ಕೊರಿಯಾ ಪಾರ್ಕ್ ಅಭಿವೃದ್ಧಿಪಡಿಸುವ ಯೋಜನೆ ಕುರಿತು ಸಚಿವ ಎಂ.ಬಿ. ಪಾಟೀಲ್ ಮಾಹಿತಿ ನೀಡಿದ್ದಾರೆ.
Read this: Scholarship 2026:₹30,000 ವಿದ್ಯಾರ್ಥಿವೇತನ; ಆಗಸ್ಟ್ 31 ಕೊನೆ ದಿನಾಂಕ