Chikkamagaluru: ಇನ್‌ಸ್ಟಾಗ್ರಾಮ್ ನಂಬಿ ₹4.77 ಲಕ್ಷ ಕಳೆದುಕೊಂಡ ವಿದ್ಯಾರ್ಥಿನಿ

Spread the love

Chikkamagaluru: ಇನ್ಸ್ಟಾಗ್ರಾಮ್ ನಂಬಿ ಮೋಸ ಹೋದ ವಿದ್ಯಾರ್ಥಿನಿ;₹4.77 ಲಕ್ಷ ಪಂಗನಾಮ

Chikkamagaluru student loses ₹4.77 lakh in an Instagram cyber fraud.
Chikkamagaluru student loses ₹4.77 lakh in an Instagram cyber fraud.

Chikkamagaluru:ವಿದ್ಯಾರ್ಥಿಗಳಿಗೆ ಸುವರ್ಣ ಅವಕಾಶ ಎಂಬ ಆಮಿಷದ ಜಾಹೀರಾತು ಅಥವಾ ಪೋಸ್ಟ್ ಅನ್ನು ನಂಬಿದ ವಿದ್ಯಾರ್ಥಿನಿಯೊಬ್ಬಳು ಸೈಬರ್ ವಂಚಕರ ಬಲೆಗೆ ಬಿದ್ದಿದ್ದಾಳೆ. ಇನ್‌ಸ್ಟಾಗ್ರಾಮ್ ನಂಬಿ ಬರೋಬ್ಬರಿ ₹4.77 ಲಕ್ಷ ರೂಪಾಯಿ ಹಣ ಕಳೆದುಕೊಂಡ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ “Golden Opportunity for Students” ಜಾಹೀರಾತು ಈ ವಿದ್ಯಾರ್ಥಿನಿಯ ಗಮನಕ್ಕೆ ಬಂದಿತ್ತು. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಅವಕಾಶ ಹಾಗೂ ಸುಲಭವಾಗಿ ಹಣ ಸಂಪಾದನೆ ಮಾಡಬಹುದು ಎಂಬ ಆಮಿಷವನ್ನು ವಂಚಕರು ಇಟ್ಟಿದ್ದರು.

ಇದನ್ನು ನಂಬಿದ ವಿದ್ಯಾರ್ಥಿನಿ, ವಂಚಕರು ಸೂಚಿಸಿದ ರೀತಿಯಲ್ಲಿ ಹಣ ಪಾವತಿಯನ್ನು ಮಾಡಿದ್ದಾರೆ. ಹಂತ ಹಂತವಾಗಿ ಹಣವನ್ನು ವರ್ಗಾವಣೆ ಮಾಡಿಸಿಕೊಂಡ ವಂಚಕರು, ಒಟ್ಟಾರೆಯಾಗಿ ₹4,77,000 ಹಣವನ್ನು ಪಡೆದುಕೊಂಡಿದ್ದಾರೆ.

ಹೂಡಿಕೆ ಶುಲ್ಕ ಹಾಗೂ ತೆರಿಗೆ ಇತ್ಯಾದಿಗಳನ್ನು ವಂಚಕರು ಪಡೆದುಕೊಂಡಿರುವುದು, ವಿದ್ಯಾರ್ಥಿನಿ ಕೇವಲ ತನ್ನ ಖಾತೆಯಿಂದಷ್ಟೇ ಅಲ್ಲದೆ, ತನ್ನ ತಂದೆಯ ಖಾತೆಯಿಂದಲೂ ವಿವಿಧ ಅಕೌಂಟ್‌ಗಳಿಗೆ ಹಣವನ್ನು ಪಾವತಿ ಮಾಡಿರುತ್ತಾಳೆ.

ಕೊನೆಯದಾಗಿ ತಾವು ಹೂಡಿಕೆ ಮಾಡಿರುವ ಹಣ ಹಾಗೂ ಲಾಭವನ್ನು ವಿದ್ಯಾರ್ಥಿನಿ ಕೇಳಿದಾಗ, ಮತ್ತೊಮ್ಮೆ ₹25,000ಗಳಿಗೆ ಬೇಡಿಕೆ ಇಟ್ಟಿದ್ದಾನೆ. ಆಗಲೇ ವಿದ್ಯಾರ್ಥಿನಿ ಹಾಗೂ ಮನೆಯವರಿಗೆ ತಾವು ಮೋಸ ಹೋಗಿದ್ದೇವೆ ಎಂಬುದರ ಅರಿವಾಗಿದೆ.

ಮೋಸದ ಕುರಿತು ಅರಿವಾದ ನಂತರ ವಿದ್ಯಾರ್ಥಿನಿ ಹಾಗೂ ಮನೆಯವರು ಸೈಬರ್ ಸಹಾಯವಾಣಿಯತ್ತ ಮೊರೆ ಹೋಗಿದ್ದಾರೆ. ಪ್ರಸ್ತುತ ಸೈಬರ್ ಕ್ರೈಂ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಯಾವುದೇ ಆನ್‌ಲೈನ್ ಅವಕಾಶದ ಬಗ್ಗೆ ಸಂಪೂರ್ಣ ಪರಿಶೀಲನೆ ನಡೆಸದೆ ಹಣ ವರ್ಗಾವಣೆ ಮಾಡಬಾರದು. ಅಪರಿಚಿತ ವ್ಯಕ್ತಿಗಳು ಕಳುಹಿಸುವ ಲಿಂಕ್‌ಗಳನ್ನು ತೆರೆಯುವುದು, ಬ್ಯಾಂಕ್ ವಿವರಗಳು, OTP, PIN ಅಥವಾ ಇತರ ಗೌಪ್ಯ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ತಪ್ಪಿಸಬೇಕು.

ಸೈಬರ್ ವಂಚನೆಗೆ ಒಳಗಾದರೆ ತಕ್ಷಣವೇ ಬ್ಯಾಂಕ್‌ಗೆ ಮಾಹಿತಿ ನೀಡಿ, ಸಾಧ್ಯವಾದಷ್ಟು ಬೇಗ 1930 ಸೈಬರ್ ಕ್ರೈಂ ಸಹಾಯವಾಣಿಗೆ ದೂರು ನೀಡುವಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ.

Read this: H1N1:ಚಿಕ್ಕಮಗಳೂರಿನಲ್ಲಿ H1N1 ಸೋಂಕು ಹೆಚ್ಚಳ; 44 ಮಂದಿಗೆ ಸೋಂಕು

Leave a Comment

Scroll to Top

Discover more from nirantarasuddhi

Subscribe now to keep reading and get access to the full archive.

Continue reading