Friday: ಶುಕ್ರವಾರದಂದು ಈ ಕೆಲಸ ಮಾಡಿದರೆ ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆಯಂತೆ!

Spread the love

Friday: ಶುಕ್ರವಾರ ಈ ಕೆಲಸ ಮಾಡಿದರೆ ಶುಭವಾಗುತ್ತದೆ ಎಂಬ ನಂಬಿಕೆ ಏಕೆ? ಮನೆಯಲ್ಲಿ ಲಕ್ಷ್ಮಿ ನೆಲೆಸಲು ಹಿರಿಯರು ಹೇಳುತ್ತಿದ್ದ ಆಚರಣೆಗಳಿವು!

Friday rituals for prosperity with a traditional oil lamp and lotus flowers.
Friday rituals for prosperity with a traditional oil lamp and lotus flowers.

Friday: ಸಾಮಾನ್ಯವಾಗಿ ಶುಕ್ರವಾರ ಎಂದರೆ ಎಲ್ಲರಿಗೂ ನೆನಪಾಗುವಂತಹದ್ದು ಲಕ್ಷ್ಮಿದೇವಿಯ ಆರಾಧನೆ. ವಾರದ ಇತರ ದಿನಗಳಿಗಿಂತಲೂ ಶುಕ್ರವಾರವನ್ನು ವಿಶೇಷವಾಗಿ ಪೂಜಾ ಪುನಸ್ಕಾರಗಳಿಂದ ಕರ್ನಾಟಕ ಸೇರಿದಂತೆ ಭಾರತದ ಹಲವು ಭಾಗಗಳಲ್ಲಿ ಆಚರಿಸುತ್ತೇವೆ.

ಶುಕ್ರವಾರದಂದು ಬೇಗ ಎದ್ದು ಮನೆ ಸ್ವಚ್ಛಪಡಿಸಿ, ಪೂಜೆ ಮಾಡುವಂಥದ್ದು, ರಂಗೋಲಿ ಹಾಕುವಂಥದ್ದು, ಮಂತ್ರಗಳ ಪಠಣೆಯನ್ನು ಮಾಡುವಂಥದ್ದು ಹಿಂದಿನಿಂದಲೂ ರೂಢಿಸಿಕೊಂಡು ಬಂದಿರುವುದು.

ಶುಕ್ರವಾರ ಈ ಕೆಲಸಗಳನ್ನು ಮಾಡಿದರೆ ಮನೆಯಲ್ಲಿ ಸಂಪತ್ತು, ಸಮೃದ್ಧಿ, ನೆಮ್ಮದಿ ಎಲ್ಲವೂ ನೆಲೆಸುತ್ತದೆ, ಧನಾತ್ಮಕವಾಗಿರುತ್ತದೆ ಎಂಬುದು ನಂಬಿಕೆ.

ಶುಕ್ರವಾರವನ್ನು ಲಕ್ಷ್ಮಿದೇವಿಗೆ ವಿಶೇಷ ದಿನ ಎನ್ನುವುದೇಕೆ?

ಹಿಂದೂ ಧಾರ್ಮಿಕ ನಂಬಿಕೆಗಳಲ್ಲಿ ಶುಕ್ರವಾರವನ್ನು ಮಹಾಲಕ್ಷ್ಮಿ ಆರಾಧನೆಗೆ ಮೀಸಲಿಡುವಂತಹ ದಿನ ಎಂದು ಪರಿಗಣಿಸಲಾಗುತ್ತದೆ. ಅಂದು ಲಕ್ಷ್ಮಿದೇವಿಯನ್ನು ಪೂಜೆ ಮಾಡಿದರೆ ಸಂಪತ್ತು, ಐಶ್ವರ್ಯ, ಸಮೃದ್ಧಿ ಎಲ್ಲವೂ ಸಿಗುತ್ತದೆ ಎಂಬುದು ನಂಬಿಕೆ. ಆಕೆಯನ್ನು ಸೌಭಾಗ್ಯದೇವತೆ ಎಂದು ಕರೆಯುತ್ತಾರೆ.

ಶುಕ್ರವಾರ ಮನೆ ಸ್ವಚ್ಛಗೊಳಿಸುವುದೇಕೆ?

ಸ್ವಚ್ಛತೆ ಇರುವ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ ಎಂಬುದು ಹಿರಿಯರಿಂದ ಕೇಳಿಕೊಂಡು ಬಂದಿರುವಂತಹ ಪಾಠ.

ಮನೆಯ ಮೂಲೆ ಮೂಲೆಗಳನ್ನು ಸ್ವಚ್ಛಗೊಳಿಸುವಂಥದ್ದು, ದ್ವಾರವನ್ನು ಸ್ವಚ್ಛಗೊಳಿಸುವುದು, ದೇವರ ಕೋಣೆ, ಪೂಜಾ ಸ್ಥಳ, ಅಡುಗೆ ಸ್ಥಳವನ್ನು ಸ್ವಚ್ಛವಾಗಿ ಇಡುವುದು ಸಾಮಾನ್ಯ.

ನಂಬಿಕೆಗಳ ಹೊರತಾಗಿ, ಸ್ವಚ್ಛವಾದ ಮನೆ ಒಂದು ಆರೋಗ್ಯಕರವಾದ ವಾತಾವರಣವನ್ನು ಸೃಷ್ಟಿ ಮಾಡುತ್ತದೆ. ಜೊತೆಗೆ, ಮನಸ್ಸಿಗೆ ಒಂದು ರೀತಿಯ ನೆಮ್ಮದಿಯ ವಾತಾವರಣವನ್ನು ಸೃಷ್ಟಿ ಮಾಡುತ್ತದೆ.

ಶುಕ್ರವಾರ ಸಂಜೆ ದೀಪ ಹಚ್ಚುವುದೇಕೆ?

ಸಂಜೆ ಹೊತ್ತು ದೇವರಿಗೆ ದೀಪ ಹಚ್ಚುವುದು ಒಂದು ಪ್ರಮುಖ ಆಚರಣೆ. ಕೆಲವರು ಶುಕ್ರವಾರದ ದಿನ ಮನೆಯ ಪ್ರವೇಶ ದ್ವಾರದಲ್ಲೂ ಕೂಡ ದೀಪ ಹಚ್ಚುವುದುಂಟು.

ಬೆಳಕು ಎಂಬುದು ಸಕಾರಾತ್ಮಕತೆ ಮತ್ತು ಜ್ಞಾನದ ಸಂಕೇತವಾಗಿದೆ. ಕತ್ತಲೆಯನ್ನು ದೂರ ಮಾಡಿ, ಬೆಳಕಿನಂತೆ ಜೀವನವೂ ಇರಲಿ ಎಂಬುದೇ ದೀಪ ಹಚ್ಚುವ ಪ್ರಮುಖ ಉದ್ದೇಶ.

ಮನೆಯ ಬಾಗಿಲಿಗೆ ರಂಗೋಲಿ ಹಾಕುವುದೇಕೆ?

ಹಬ್ಬ-ಹರಿದಿನಗಳಲ್ಲಿ, ವಿಶೇಷ ದಿನಗಳಲ್ಲಿ ಮನೆ ಮುಂದೆ ರಂಗೋಲಿ ಹಾಕುವುದು ಸಾಮಾನ್ಯವಾದ ಸಂಗತಿ. ಕೆಲವು ಮನೆಗಳಲ್ಲಿ ಪ್ರತಿದಿನವೂ ರಂಗೋಲಿ ಹಾಕುವುದುಂಟು. ಕೆಲವು ಮನೆಗಳಲ್ಲಿ ಶುಕ್ರವಾರ ಮಾತ್ರವೇ ಹಾಕುವುದುಂಟು.

ಒಟ್ಟಾರೆಯಾಗಿ, ಮನೆಯ ಬಾಗಿಲು ಒಂದು ಶುಭ ಸಂಕೇತ. ಅದರಿಂದಾಗಿ ಅದನ್ನು ಸ್ವಚ್ಛವಾಗಿ ಇಟ್ಟುಕೊಂಡು, ಅದಕ್ಕೆ ಸಿಂಗರಿಸುವುದು ಲಕ್ಷ್ಮಿಯನ್ನು ಮನೆಗೆ ಆಹ್ವಾನಿಸುವ ಒಂದು ಸಂಕೇತವಾಗಿದೆ.

ಶುಕ್ರವಾರ ತುಳಸಿ ಪೂಜೆ ಮಾಡುವುದೇಕೆ?

ಇನ್ನು, ಭಾರತೀಯರಲ್ಲಿ ತುಳಸಿ ಗಿಡಕ್ಕೆ ವಿಶೇಷ ಸ್ಥಾನವಿದೆ. ತುಳಸಿಗೆ ದೀಪ ಹಚ್ಚುವಂಥದ್ದು ಒಂದು ಸಂಪ್ರದಾಯ. ತುಳಸಿಯನ್ನು ಪವಿತ್ರ ಸಸ್ಯ ಎಂದು ಪರಿಗಣಿಸುತ್ತೇವೆ. ಹಾಗೂ ವೈಜ್ಞಾನಿಕ ದೃಷ್ಟಿಯಿಂದಲೂ ಕೂಡ ತುಳಸಿ ಬಹಳ ಉತ್ತಮವಾದದ್ದು.

ಅರಿಶಿನ-ಕುಂಕುಮಕ್ಕೆ ಏಕೆ ಇಷ್ಟು ಮಹತ್ವ?

ಶುಕ್ರವಾರದ ಪೂಜೆಯಲ್ಲಿ ಅರಿಶಿನ-ಕುಂಕುಮ ತನ್ನದೇ ಆದ ಮಹತ್ವವನ್ನು ಹೊಂದಿದೆ. ಮಹಿಳೆಯರು ದೇವರಿಗೆ ಅರಿಶಿನ-ಕುಂಕುಮವನ್ನು ಅರ್ಪಿಸುವ ಜೊತೆಗೆ, ಪರಸ್ಪರ ಅರಿಶಿನ-ಕುಂಕುಮವನ್ನು ಶುಕ್ರವಾರದ ದಿನ ಬೇರೆ ಮಹಿಳೆಯರಿಗೆ ನೀಡುವಂತಹ ಸಂಪ್ರದಾಯ ಕೂಡ ಇದೆ.

ಇದು ಮುಖ್ಯವಾಗಿ ಮುತ್ತೈದೆತನದ ಸಂಕೇತವಾಗಿದೆ. ಹಾಗೂ ಅರಿಶಿನ ಶುಭದ ಸಂಕೇತವಾದರೆ, ಕುಂಕುಮ ಮಂಗಳದ ಸಂಕೇತವಾಗಿದೆ.

ಲಕ್ಷ್ಮಿದೇವಿಗೆ ಹೂವು, ಹಣ್ಣು ಮತ್ತು ನೈವೇದ್ಯ

ದೇವರಿಗೆ ಹಣ್ಣು, ಹೂವು, ನೈವೇದ್ಯವನ್ನು ಅರ್ಪಿಸುವಂಥದ್ದು ಕೂಡ ಪೂಜೆಯ ಒಂದು ಭಾಗ. ಹಾಗೂ ಪೂಜೆಯ ಮುಖ್ಯ ಉದ್ದೇಶ ಭಕ್ತಿ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವುದು.

ದೊಡ್ಡ ಪ್ರಮಾಣದಲ್ಲಿ ಖರ್ಚು ಮಾಡಿ ಪೂಜೆ ಮಾಡಬೇಕು ಎಂಬ ಯಾವುದೇ ನಿಯಮ ಯಾರಿಗೂ ಕೂಡ ಅನ್ವಯಿಸುವುದಿಲ್ಲ.

ಸರಳವಾಗಿ ಪೂಜೆ ಮಾಡಬಹುದು. ಹಾಗೂ ಮನಸ್ಸು ಎಷ್ಟು ಶುದ್ಧವಾಗಿದೆ ಎಂಬುದು ಮಾತ್ರವೇ ಇಲ್ಲಿ ಮುಖ್ಯವಾಗುತ್ತದೆ.

Leave a Comment

Scroll to Top

Discover more from nirantarasuddhi

Subscribe now to keep reading and get access to the full archive.

Continue reading