Balehonnuru: ಸೆ.10ರಂದು ಬಾಳೆಹೊನ್ನೂರು ಬಂದ್; ಪಟ್ಟಣದ ಎಲ್ಲ ಅಂಗಡಿ-ಮುಂಗಟ್ಟುಗಳು ಮುಚ್ಚಲಿವೆ

Balehonnuru: ಕಸ್ತೂರಿ ರಂಗನ್ ವರದಿಯನ್ನು ಹಿಂಪಡೆಯುವಂತೆ ಆಗ್ರಹಿಸಿ ಸೆಪ್ಟೆಂಬರ್ 10ರಂದು ಬಾಳೆಹೊನ್ನೂರು ಪಟ್ಟಣ ಬಂದ್ ಗೆ ಕರೆ ನೀಡಲಾಗಿದೆ ಗುರುವಾರ ನಡೆಯಲಿರುವ ಬಂದ್ ಗೆ ಪಟ್ಟಣದ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಬೆಂಬಲ ನೀಡುವಂತೆ ಮಾಡಲಾಗಿದೆ.
ಬಂದ್ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 10ರಂದು ಬಾಳೆಹೊನ್ನೂರು ಪಟ್ಟಣದ ಎಲ್ಲ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಮೂಲಕ ತಮ್ಮ ಬೇಡಿಕೆಗೆ ಬೆಂಬಲ ಸೂಚಿಸುವಂತೆ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರಲ್ಲಿ ಮನವಿ ಮಾಡಲಾಗಿದೆ.
ಬಂದ್ ದಿನಾಂಕ: ಸೆಪ್ಟೆಂಬರ್ 10, 2026 (ಗುರುವಾರ)
ಸ್ಥಳ: ಬಾಳೆಹೊನ್ನೂರು