ಕದ್ರಿ ಗಣೇಶೋತ್ಸವ: 4ನೇ ವರ್ಷದ ಸಂಭ್ರಮದಲ್ಲಿ ಮಕ್ಕಿಮನೆ ಕಲಾವೃಂದದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ

Spread the love

Kadri: ಮಕ್ಕಿಮನೆ ಕಲಾವೃಂದ ಬಳಗದಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ

Kadri
Kadri

Kadri: ಕದರಿಕಾ ಚಾರಿಟೇಬಲ್ ಟ್ರಸ್ಟ್ (ರಿ.) ಇದರ ಅಂಗಸಂಸ್ಥೆಯಾದ ಕದ್ರಿ ಕ್ರಿಕೆಟರ್ಸ್ (ರಿ.) ವತಿಯಿಂದ ಮಂಗಳೂರು ಕದ್ರಿ ಮೈದಾನದಲ್ಲಿ ಆಯೋಜಿಸಲಾಗಿದ್ದ 4ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಸೋಮವಾರ (ಸೆ. 14) ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಮಕ್ಕಿಮನೆ ಕಲಾವೃಂದ ಬಳಗದ ಕಲಾವಿದರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದ್ದು, ಕಾರ್ಯಕ್ರಮವು ನೆರೆದಿದ್ದವರ ಮೆಚ್ಚುಗೆಗೆ ಪಾತ್ರವಾಯಿತು.

ಈ ಸಂದರ್ಭದಲ್ಲಿ ಮನೋಹರ ಶೆಟ್ಟಿ ಕದ್ರಿ, ತಾರನಾಥ ಶೆಟ್ಟಿ, ಹೇಮಾನಂದ ಕೊಡಿಯಾಲ್ ಬೈಲು, ರವೀಶ್ ರೈ, ಚೇತನ್ ಕದ್ರಿ, ಸುದೇಶ್ ಜೈನ್ ಮಕ್ಕಿಮನೆ, ರಿಮಾ ಜಗನ್ನಾಥ್, ಪ್ರತೀಕ್ಷಾ ಪ್ರಭು, ಆಶೀಶ್ ಅಂಚನ್, ಅನನ್ಯ ನಾರಾಯಣ್ ಮೊದಲಾದವರು ಉಪಸ್ಥಿತರಿದ್ದರು.

ಅರ್ಚಿತ್ ಜೈನ್ ಸಂಸೆ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Comment

Scroll to Top

Discover more from nirantarasuddhi

Subscribe now to keep reading and get access to the full archive.

Continue reading