Kalasa: ಸೆ.28ರಂದು ಪ್ರವಾಸೋದ್ಯಮ ದಿನಾಚರಣೆ; ಪ್ರವಾಸಿ ಜಾಥಾಕ್ಕೆ ಚಾಲನೆ

Kalasa: ಕಳಸ ಪ್ರವಾಸೋದ್ಯಮ ವೇದಿಕೆ (ರಿ.) ವತಿಯಿಂದ ಕಳಸ ಪ್ರವಾಸೋದ್ಯಮ ದಿನ–2026 ಕಾರ್ಯಕ್ರಮವನ್ನು ಸೆಪ್ಟೆಂಬರ್ 28ರಂದು ಆಯೋಜಿಸಲಾಗಿದೆ.
ಕಾರ್ಯಕ್ರಮದ ಅಂಗವಾಗಿ ಸೋಮವಾರ ಬೆಳಗ್ಗೆ 10 ಗಂಟೆಗೆ ದುಗ್ಗಪ್ಪನ ಕಟ್ಟೆಯಲ್ಲಿ ಪ್ರವಾಸಿ ಜಾಥಾಕ್ಕೆ ಚಾಲನೆ ನೀಡಲಾಗುತ್ತದೆ. ಪ್ರವಾಸೋದ್ಯಮ ದಿನಾಚರಣೆಯ ಪ್ರಯುಕ್ತ ಕಳಸ ತಾಲ್ಲೂಕಿನ ಪ್ರಮುಖ ಪ್ರವಾಸಿ ತಾಣಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ತಾಲ್ಲೂಕಿನ ವಿವಿಧ ಹೊಂಸ್ಟೇ, ರೆಸಾರ್ಟ್ ಪ್ರತಿನಿಧಿಗಳು, ಜೀಪ್ ಮಾಲೀಕರು ಹಾಗೂ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ವಿವಿಧ ಕ್ಷೇತ್ರಗಳ ಪ್ರಮುಖರು ಭಾಗವಹಿಸಲಿದ್ದಾರೆ.
ಪ್ರವಾಸೋದ್ಯಮದ ಮೂಲಕ ಕಳಸ ತಾಲ್ಲೂಕಿನ ಪ್ರಕೃತಿ ಸೌಂದರ್ಯ, ಪ್ರವಾಸಿ ತಾಣಗಳು ಹಾಗೂ ಸ್ಥಳೀಯ ಅವಕಾಶಗಳನ್ನು ಪರಿಚಯಿಸುವ ಜೊತೆಗೆ ಪ್ರವಾಸೋದ್ಯಮದ ಅಭಿವೃದ್ಧಿಗೆ ಸಹಕಾರಿಯಾಗುವ ವಿಚಾರಗಳ ಕುರಿತು ಚರ್ಚೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಕಳಸ ಪ್ರವಾಸೋದ್ಯಮ ವೇದಿಕೆಯ ಪದಾಧಿಕಾರಿಗಳು, ಸದಸ್ಯರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

ಸ್ಥಳ: ದುಗ್ಗಪ್ಪನ ಕಟ್ಟೆ, ಕಳಸ
ದಿನಾಂಕ: ಸೆಪ್ಟೆಂಬರ್ 28, 2026
ಸಮಯ: ಬೆಳಗ್ಗೆ 10 ಗಂಟೆ
ಕಾರ್ಯಕ್ರಮ: ಪ್ರವಾಸಿ ಜಾಥಾ ಧ್ವಜಾರೋಹಣ/ಚಾಲನೆ