Chikkamagaluru: ಆನ್‌ಲೈನ್ ಲಾಟರಿ ಹೆಸರಿನಲ್ಲಿ ₹4.30 ಲಕ್ಷ ಕಳೆದುಕೊಂಡ ವ್ಯಕ್ತಿ

Chikkamagaluru: ಸುಲಭವಾಗಿ ಹಣ ಗಳಿಸಲು ಹೋಗಿ ₹4.30 ಲಕ್ಷ ಕಳೆದುಕೊಂಡ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಫೇಸ್‌ಬುಕ್‌ನಲ್ಲಿ ನಕಲಿ ಕೇರಳ ಲಾಟರಿ ಜಾಹೀರಾತು ನೋಡಿ ಸೈಬರ್ ವಂಚನೆಗೆ ಒಳಗಾಗಿರುವಂಥದ್ದು.
ಫೇಸ್‌ಬುಕ್ ನೋಡುವಾಗ ಕೇರಳ ಲಾಟರಿ ಎಂಬ ಆಕರ್ಷಕ ಜಾಹೀರಾತಿನ ಲಿಂಕನ್ನು ವ್ಯಕ್ತಿಯೊಬ್ಬರು ನೋಡಿರುತ್ತಾರೆ. ಕುತೂಹಲದಿಂದ ಅದರ ಮೇಲೆ ಕ್ಲಿಕ್ ಮಾಡಿದ್ದಾರೆ.
ಅನಂತರ ಸ್ವಲ್ಪ ಸಮಯದ ಬಳಿಕ ಅವರಿಗೆ ಅಪರಿಚಿತ ನಂಬರ್‌ನಿಂದ ಕರೆ ಬಂದಿರುತ್ತದೆ. ಲಾಟರಿ ಟಿಕೆಟ್ ಅನ್ನು ಖರೀದಿಸಿ ಎಂದು ಹೇಳಿರುತ್ತಾರೆ. ನಂಬಿದಂಥ ವ್ಯಕ್ತಿ ವಾಟ್ಸ್‌ಆಪ್ ಮೂಲಕ ಬಂದ ಟಿಕೆಟ್ ಸಂಕೇತಗಳಲ್ಲಿ ಒಂದನ್ನು ಆಯ್ಕೆ ಮಾಡಿ ಕೇವಲ ₹149ಗಳನ್ನು ಪಾವತಿಸಿರುತ್ತಾರೆ.
ಹಾಗೂ ಅವತ್ತಿನ ದಿನವೇ ಒಂದಷ್ಟು ಮಧ್ಯಾಹ್ನ ಅವರಿಗೆ ಕರೆ ಮಾಡಿ ₹12 ಲಕ್ಷ ರೂಪಾಯಿಯನ್ನು ನೀವು ಗೆದ್ದಿದ್ದೀರಿ ಎಂದು ಪ್ರಮಾಣ ಪತ್ರವನ್ನು ನೀಡಿರುತ್ತಾರೆ. ಹಾಗೂ ಖಾತೆಗೆ ₹12 ಲಕ್ಷವನ್ನು ಜಮಾ ಮಾಡಲು ಕೆಲವು ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದಿರುತ್ತಾರೆ.
ಬಹುಮಾನದ ಹಣವನ್ನು ಗೆಲ್ಲುವ ಆಸೆಯಲ್ಲಿ ಒಟ್ಟಾಗಿ ₹4,30,000 ಹಣವನ್ನು ವಿವಿಧ ಯುಪಿಐ ಮತ್ತು ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ವರ್ಗಾಯಿಸಿರುತ್ತಾರೆ. ನಂತರ ಯಾವುದೇ ಹಣ ಪಡೆಯದೆ ಮೋಸ ಹೋಗಿರುವುದಾಗಿ ತಿಳಿದು ಸೈಬರ್ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರನ್ನು ದಾಖಲಿಸಿರುವಂತದ್ದು.
ಈ ಪ್ರಕರಣವನ್ನು ಚಿಕ್ಕಮಗಳೂರು ಸಿಇಎನ್ ಪೊಲೀಸರು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
Read this: Chikkamagaluru: ಕಾಫಿ ನಾಡಿನ ಕತ್ತಲೆ ರಸ್ತೆಯಲ್ಲಿ ಹೆಡ್‌ಲೈಟ್‌ಗಳಿಲ್ಲದ KSRTC!