Mudigere: ನಕಲಿ ಪರಿವಾಹನ್ ಲಿಂಕ್ ಕ್ಲಿಕ್ ಮಾಡಿ ₹1.89 ಲಕ್ಷ ಕಳೆದುಕೊಂಡ ಮಹಿಳೆ

Mudigere: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಸೈಬರ್ ವಂಚನೆಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಮೊಬೈಲ್‌ಗೆ ಬಂದಿದ್ದ ನಕಲಿ ಪರಿವಾಹನ್ (Parivahan) ಲಿಂಕ್ ಅನ್ನು ಕ್ಲಿಕ್ ಮಾಡಿದ ಮಹಿಳೆಯೊಬ್ಬರು ಬರೋಬ್ಬರಿ 1.89 ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾರೆ.
ವಾಹನದ ದಾಖಲೆ ಪರಿಶೀಲನೆ ಅಥವಾ ಸಂಚಾರ ನಿಯಮ ಉಲ್ಲಂಘನೆಯ ದಂಡ ಪಾವತಿಸುವ ನೆಪದಲ್ಲಿ ಸೈಬರ್ ವಂಚಕರು ಜನರನ್ನು ಗುರಿಯಾಗಿಸುತ್ತಿದ್ದಾರೆ.
ಇದೇ ರೀತಿಯಲ್ಲಿ ಮಹಿಳೆಯ ಮೊಬೈಲ್‌ಗೆ ಬಂದಿದ್ದ ಸಂಶಯಾಸ್ಪದ ಲಿಂಕ್ ಅನ್ನು ಕ್ಲಿಕ್ ಮಾಡಿದ ಬಳಿಕ, ವಂಚಕರು ಆಕೆಯ ಬ್ಯಾಂಕ್ ಖಾತೆಯ ನಿಯಂತ್ರಣ ಪಡೆದು ಹಣವನ್ನು ದೋಚಿದ್ದಾರೆ ಎನ್ನಲಾಗಿದೆ.
ಇತ್ತೀಚಿನ ದಿನಗಳಲ್ಲಿ ವಾಹನದ ಇ-ಚಲನ್ (e-Challan) ಪಾವತಿಸುವಂತೆ ಸಂದೇಶ ಕಳುಹಿಸಿ, ಅದರಲ್ಲಿರುವ ಲಿಂಕ್ ಮೂಲಕ ನಕಲಿ APK ಫೈಲ್‌ಗಳನ್ನು ಡೌನ್‌ಲೋಡ್ ಮಾಡಿಸುವ ವಂಚನೆ ಪ್ರಕರಣಗಳು ವರದಿಯಾಗುತ್ತಿವೆ.
ಇಂತಹ ಲಿಂಕ್‌ಗಳ ಮೂಲಕ ಮೊಬೈಲ್‌ನಲ್ಲಿರುವ ವೈಯಕ್ತಿಕ ಮಾಹಿತಿ ಹಾಗೂ ಬ್ಯಾಂಕಿಂಗ್ ವಿವರಗಳನ್ನು ಕದಿಯುವ ಅಪಾಯವಿದೆ.
ಅಪರಿಚಿತ ನಂಬರ್‌ಗಳಿಂದ ಬರುವ ಟ್ರಾಫಿಕ್ ದಂಡ ಅಥವಾ ಪರಿವಾಹನ್ ಹೆಸರಿನ ಲಿಂಕ್‌ಗಳನ್ನು ಪರಿಶೀಲಿಸದೆ ಕ್ಲಿಕ್ ಮಾಡಬಾರದು.
ಅಪರಿಚಿತ APK ಫೈಲ್‌ಗಳನ್ನು ಡೌನ್‌ಲೋಡ್ ಮಾಡುವುದು ಹಾಗೂ ಅನಧಿಕೃತ ಆ್ಯಪ್‌ಗಳಿಗೆ ಅನುಮತಿ ನೀಡುವುದನ್ನು ತಪ್ಪಿಸಬೇಕು. ವಾಹನದ ದಂಡದ ಮಾಹಿತಿಯನ್ನು ಅಧಿಕೃತ ಪೋರ್ಟಲ್ ಮೂಲಕವೇ ಪರಿಶೀಲಿಸುವುದು ಸುರಕ್ಷಿತವಾಗಿದೆ.
ಸೈಬರ್ ವಂಚನೆಗೆ ಒಳಗಾದರೆ ತಕ್ಷಣವೇ 1930 ಸೈಬರ್ ಅಪರಾಧ ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸುವುದು ಹಾಗೂ ಬ್ಯಾಂಕ್‌ಗೆ ಮಾಹಿತಿ ನೀಡುವುದು ಅಗತ್ಯ.