Bengaluru: ಬೆಂಗಳೂರಿನ ಕಲಾರಂಗದಲ್ಲಿ ಸಾಕ್ಷಾತ್ಕರಿಸಿದ ‘ಅರಹಂತ’ ನಾಟಕ.

Bengaluru: ಅಹಿಂಸೆಯ ದಿವ್ಯ ತಪಸ್ಸಿನಿಂದಲೇ ಜಗತ್ತಿನ ಕಲ್ಮಷಗಳನ್ನು ಗೆಲ್ಲಬಹುದು ಎಂಬುದಕ್ಕೆ ಕಾಲದ ಪರಂಪರೆಯಲ್ಲಿ ಸಾಲು ಸಾಲು ಉದಾಹರಣೆಗಳಿವೆ.
ಮಹಾತ್ಮ ಗಾಂಧೀಜಿಯವರು ತೋರಿಸಿಕೊಟ್ಟ ಅಹಿಂಸಾ ಮಾರ್ಗವು ಈ ಜಗತ್ತಿಗೆ ಶಾಂತಿಯ ಸಂದೇಶ ಸಾರಿದಂತೆ, ಜೈನ ಧರ್ಮದ ಮೂಲಸಾರವನ್ನು ರಂಗದ ಮೇಲೆ ಜೀವಂತಗೊಳಿಸಿದ ಪ್ರಭಾವಶಾಲಿ ಸಾಂಸ್ಕೃತಿಕ ಕಾವ್ಯವೇ ‘ಅರಹಂತ’.
ಬೆಂಗಳೂರಿನ ಕಲಾಗ್ರಾಮದ ರಂಗವೇದಿಕೆಯಲ್ಲಿ ದಿನಾಂಕ 09/10/2026ರ ಶುಕ್ರವಾರ ಸಂಜೆ ‘ಜಿನರಂಗ’ ಅಭಿನಯತಂಡವು ಪ್ರಸ್ತುತಪಡಿಸಿದ ಈ ನಾಟಕವು, ನೆರೆದಿದ್ದ ಸಹೃದಯಿ ಪ್ರೇಕ್ಷಕರ ಅಂತರಂಗವನ್ನು ಸ್ಪರ್ಶಿಸುವಲ್ಲಿ ಸಂಪೂರ್ಣ ಯಶಸ್ವಿಯಾಯಿತು.

ಇತಿಹಾಸದ ದಿವ್ಯ ಸ್ಪಂದನ ಹಾಗೂ ಕಥಾಹಂದರ
ಕ್ರಿಸ್ತಪೂರ್ವ ಹಾಗೂ ಕ್ರಿಸ್ತಶಕ ಒಂದನೇ ಶತಮಾನದ ಐತಿಹಾಸಿಕ ಪಟಭೂಮಿಯಲ್ಲಿ ಮೂಡಿಬಂದ ರಂಗಕೃತಿ ಇದು. ಜೈನ ಧರ್ಮದ ಪ್ರಥಮ ತೀರ್ಥಂಕರರಾದ ಶ್ರೀ ವೃಷಭನಾಥರ ದಿವ್ಯಮೂರ್ತಿಯ ಸುತ್ತ ಈ ಕಥಾನಕವು ಅರಳುತ್ತದೆ.
ಅಂತರಂಗವನ್ನು ತಟ್ಟಿದ ಅಹಿಂಸಾ ದರ್ಶನ, ಕಲಾರಂಗದಲ್ಲಿ ಸಾಕ್ಷಾತ್ಕರಿಸಿದ ‘ಅರಹಂತ’
ಅಹಿಂಸೆಯ ದಿವ್ಯ ತಪಸ್ಸಿನಿಂದಲೇ ಜಗತ್ತಿನ ಕಲ್ಮಷಗಳನ್ನು ಗೆಲ್ಲಬಹುದು ಎಂಬುದಕ್ಕೆ ಕಾಲದ ಪರಂಪರೆಯಲ್ಲಿ ಸಾಲು ಸಾಲು ಉದಾಹರಣೆಗಳಿವೆ. ಮಹಾತ್ಮ ಗಾಂಧೀಜಿಯವರು ತೋರಿಸಿಕೊಟ್ಟ ಅಹಿಂಸಾ ಮಾರ್ಗವು ಈ ಜಗತ್ತಿಗೆ ಭಗವಾನ್ ಮಹಾವೀರರ ಶಾಂತಿಯ ಸಂದೇಶ ಸಾರಿದಂತೆ, ಜೈನ ಧರ್ಮದ ಮೂಲಸಾರವನ್ನು ರಂಗದ ಮೇಲೆ ಜೀವಂತಗೊಳಿಸಿದ ಪ್ರಭಾವಶಾಲಿ ಸಾಂಸ್ಕೃತಿಕ ಕಾವ್ಯವೇ ‘ಅರಹಂತ’.

ಬೆಂಗಳೂರಿನ ಕಲಾಗ್ರಾಮದ ರಂಗವೇದಿಕೆಯಲ್ಲಿ ದಿನಾಂಕ 09/10/2026ರ ಶುಕ್ರವಾರ ಸಂಜೆ ‘ಜಿನರಂಗ’ ಅಭಿನಯತಂಡವು ಪ್ರಸ್ತುತಪಡಿಸಿದ ಈ ನಾಟಕವು ರಂಗ ಕ್ಷೇತ್ರದಲ್ಲಿ ಒಂದು ಟಿಕೇಟಿಗೆ ರೂ 10 ಸಾವಿರ ಮೊಬಲಗನ್ನು ನೀಡಿ ಹೊಸ ಚರಿತ್ರೆಯನ್ನು ಸೃಷ್ಟಿಸಿದೆ , ರಂಗಮಂದಿರ ಸಂಪೂರ್ಣ ಹೌಸ್ ಫುಲ್ ಆಗಿ ಕಿಕ್ಕಿರಿದು ನೆರೆದಿದ್ದ ಸಹೃದಯಿ ಪ್ರೇಕ್ಷಕರ ಅಂತರಂಗವನ್ನು ಸ್ಪರ್ಶಿಸುವಲ್ಲಿ ಸಂಪೂರ್ಣ ಯಶಸ್ವಿಯಾಯಿತು.
ಇತಿಹಾಸದ ದಿವ್ಯ ಸ್ಪಂದನ ಹಾಗೂ ಕಥಾಹಂದರ
ಕ್ರಿಸ್ತಪೂರ್ವ ಹಾಗೂ ಕ್ರಿಸ್ತಶಕ ಒಂದನೇ ಶತಮಾನದ ಐತಿಹಾಸಿಕ ಪಟಭೂಮಿಯಲ್ಲಿ ಮೂಡಿಬಂದ ರಂಗಕೃತಿ ಇದು. ಜೈನ ಧರ್ಮದ ಪ್ರಥಮ ತೀರ್ಥಂಕರರಾದ ಶ್ರೀ ವೃಷಭನಾಥರ ದಿವ್ಯಮೂರ್ತಿಯ ಸುತ್ತ ಈ ಕಥಾನಕವು ಅರಳುತ್ತದೆ.
ಒಂದೆಡೆ ಧರ್ಮದ ಸಿದ್ಧಿಗಾಗಿ ಅಹಿಂಸೆಯ ಹಾದಿ; ಯಶಸ್ಸು ಸಿಗದಿದ್ದರೂ ಪರಹಿಂಸೆಗೆ ಕೈಚಾಚದೆ, ತನ್ನನ್ನೇ ಧಾರೆ ಎರೆಯುವ ಆತ್ಮಸ್ಥೈರ್ಯ. ಇನ್ನೊಂದೆಡೆ, ಭೋಗ-ಸಾಮ್ರಾಜ್ಯಕ್ಕಾಗಿ ಯುದ್ಧದ ದಾರಿ ತುಳಿದು, ಆ ಹಿಂಸೆಯ ಭೀಕರತೆಗೆ ಮನನೊಂದು ಕೊನೆಗೆ ವೈರಾಗ್ಯದ ಸಿದ್ಧಿ ಪಡೆಯುವ ತಳಮಳ!
ಹೀಗೆ ಬದುಕಿನ ಮೂಲಭೂತ ಕರ್ಮ ಸಿದ್ಧಾಂತವನ್ನು ಎತ್ತಿಹಿಡಿಯುತ್ತಾ ಜಾಗೃತಿ ಮೂಡಿಸುವ ಮಹೋನ್ನತ ಕೆಲಸವನ್ನು ಈ ರಂಗಪ್ರಯೋಗ ನಿರ್ವಹಿಸಿದೆ.
ರಂಗದ ಮೇಲಿನ ಭಾವಸಾಕ್ಷಾತ್ಕಾರ
ಈ ನಾಟಕವು ಪ್ರೇಕ್ಷಕರ ಎದುರು ಅನಾವರಣಗೊಳ್ಳುತ್ತಿದ್ದಂತೆ, ಅದರ ಪ್ರತಿಯೊಂದು ರಂಗಸಂಭಾಷಣೆಯೂ ಕಾವ್ಯಾತ್ಮಕವಾಗಿ ಧ್ವನಿಸುತ್ತಿತ್ತು. ಪ್ರದರ್ಶನವು ಸಾಗಿದಂತೆ ವೀಕ್ಷಕರ ಕಣ್ಣಂಚಿನಲ್ಲಿ ಅರಿವಿಲ್ಲದೆ ಹರಿದ ಭಾವಶ್ರದ್ಧೆಯ ಹನಿಗಳು, ಈ ಪ್ರಯೋಗಕ್ಕಿದ್ದ ಶಕ್ತಿಯನ್ನು ಸಾರುತ್ತಿದ್ದವು. ರಂಗಭೂಮಿಯ ಈ ದಿವ್ಯ ಚೇತನಕ್ಕೆ ಅಕ್ಷರ ರೂಪ ನೀಡುವುದು ಪ್ರತಿಯೊಬ್ಬ ಕಲಾಪ್ರೇಮಿಯ ಪವಿತ್ರ ಕರ್ತವ್ಯವೆನಿಸುತ್ತದೆ.
ಹಿಂಸೆಯ ತಮಸ್ಸಿನಿಂದ ಅಹಿಂಸೆಯ ಬೆಳಕಿಗೆ
ಪ್ರಾರಂಭದಲ್ಲಿ ನಾಟಕವು ಹಿಂಸೆಯ ಭೀಕರತೆ ಹಾಗೂ ಸಾಮ್ರಾಜ್ಯಶಾಹಿ ವೈಭವೀಕರಣದೊಂದಿಗೆ ತೆರೆದುಕೊಳ್ಳುತ್ತದೆ.
ಆದರೆ, ಕಥೆಯ ಓಟದಲ್ಲಿ ಹಿಂಸೆಯ ತಮಸ್ಸನ್ನು ತೂರಿ ಅಹಿಂಸೆಯ ಸತ್ಯಜ್ಯೋತಿ ಪ್ರಜ್ವಲಿಸುತ್ತದೆ. ಅಂತಿಮವಾಗಿ ನಾಟಕವು ಅಹಿಂಸೆಯ ದೃಢತೆ ಹಾಗೂ ವಿಜಯದೊಂದಿಗೆ ಮುಕ್ತಾಯಗೊಂಡು, ವೀಕ್ಷಕರ ಭಾವಕೋಶದಲ್ಲಿ ಶಾಶ್ವತ ಛಾಪನ್ನು ಮೂಡಿಸುತ್ತದೆ.
ಹವ್ಯಾಸಿ ತಪಸ್ವಿಗಳ ಅಭಿನಯ ಸಿದ್ಧಿ
ಈ ರಂಗಕೃತಿಯ ಪರಮ ವಿಶೇಷವೆಂದರೆ ಇದರ ಕಲಾವಿದರು! ಇವರಾರೂ ವೃತ್ತಿಪರ ನಟರಲ್ಲ. ಜೈನ ಸಮಾಜದ ವಿವಿಧ ರಂಗಗಳಲ್ಲಿ ನಿರತರಾಗಿರುವ ಸಾಫ್ಟ್ವೇರ್ ಎಂಜಿನಿಯರ್ಗಳು, ಮಾಧ್ಯಮ ಪ್ರತಿನಿಧಿಗಳು, ಅಂಕಣಕಾರರು ಹಾಗೂ ಸಾಂಸ್ಕೃತಿಕ ಮನಸ್ಸುಗಳು.
ಇವರೆಲ್ಲರೂ ತಮ್ಮ ಕಾಯಕದ ಜಂಜಾಟಗಳ ನಡುವೆಯೂ ನಿರಂತರ ಮೂರರಿಂದ ನಾಲ್ಕು ತಿಂಗಳುಗಳ ಕಾಲ ಪ್ರತಿದಿನ ಬೆಳಗಿನ ಜಾವ ಶ್ರದ್ಧೆಯಿಂದ ನಡೆಸಿದ ರಂಗಸಾಧನೆ, ಇಂದು ರಂಗದ ಮೇಲೆ ಸಿದ್ಧಿಪಡೆದು ಸಾಕ್ಷಾತ್ಕಾರಗೊಂಡಿದೆ.
ಅಪೂರ್ವ ಅಭಿನಯ ಮತ್ತು ಮನಸೆಳೆದ ಪಾತ್ರಗಳು
ಪ್ರತಿಯೊಬ್ಬ ಕಲಾವಿದನ ರಂಗಚಲನೆ ಮತ್ತು ಸಂಭಾಷಣೆ ಒಬ್ಬರಿಗಿಂತ ಒಬ್ಬರು ಮೀರಿದಂತಿತ್ತು. ಸಣ್ಣ ಪಾತ್ರದಿಂದ ಹಿಡಿದು ನಾಯಕ ಪಾತ್ರದವರೆಗೆ ಪ್ರತಿಯೊಬ್ಬರೂ ತಮ್ಮ ಅಭಿನಯದ ಮೂಲಕ ರಂಗಕ್ಕೆ ಜೀವ ತುಂಬಿದ್ದಾರೆ.
ಅನುಪಮ ರಂಗನಿರ್ದೇಶನ ಹಾಗೂ ಸಂಘಟನೆ
ಎಸ್. ರಾಮನಾಥ್ ಅವರ ಅರ್ಥಪೂರ್ಣ ರಂಗಕೃತಿಯನ್ನು ಅತ್ಯಂತ ಪ್ರಬುದ್ಧವಾಗಿ ರಂಗದ ಮೇಲೆ ಸಂಘಟಿಸಿ, ಪ್ರತಿಯೊಬ್ಬ ಕಲಾವಿದರಿಂದಲೂ ನೈಜ ಅಭಿನಯವನ್ನು ಹೊರತಂದ ಶ್ರೇಯಸ್ಸು ನಿರ್ದೇಶಕರಾದ ಮಂಜುನಾಥ ಎಲ್. ಬಡಿಗೇರ್ ಅವರಿಗೆ ಸಲ್ಲುತ್ತದೆ.
ದಕ್ಷ ಸಂಘಟಕ ಸಮಾಜ ಸೇವಕ ಮಾಳ ಹರ್ಷೇಂದ್ರ ಜೈನ್, ತಂಡದ ಸಂಸ್ಥಾಪಕಿ ಲೋಕನ ಜೈನ್, ಛಾಯಾಚಿತ್ರ ಪತ್ರಕರ್ತ ಸುಧಾಕರ್ ಜೈನ್ ಹೊಸಬೆಟ್ಟುಗುತ್ತು, ಸುದ್ದಿ ನಿರೂಪಕಿ ನವಿತಾ ಜೈನ್, ಯಕ್ಷಗಾನ ಕಲಾವಿದೆ ಮಾನಸ ಉಪಾಧ್ಯ, ರಂಗಕಲಾವಿದರಾದ ಸಚಿನ್ ಸೂರ್ಯ, ಯೋಗೇಶ್, ಅಕ್ಷತ ಕುಲಕರ್ಣಿ, ವಿಮರ್ಶ್ ಜೈನ್, ಸಚಿನ್ ಧ್ವಜ, ಬ್ರಹ್ಮಾನಂದ ಜೈನ್, ಶೀತಲ್ ಜೈನ್, ಶ್ರೇಣಿಕ್ ರೋಖಡೆ, ಸಮ್ಮೇದ್ ಜೈನ್, ರಶ್ಮಿ ಹೆಚ್. ಜೈನ್, ಕಾವೇರಿ ಸುನಿಲ್ ಜೈನ್, ಅರ್ಜುನ್, ನರಸಿಂಹ ಆಚಾರ್ ಹಾಗೂ ಶ್ರವ್ಯ ಸಂಗೀತ ನೀಡಿದ ಆಶಿತ್ ಸಾಲ್ಯಾನ್, ರಾಘವಾಂಕ, ಅನಂತ ಕುಮಾರಿ ಜೈನ್ ಮತ್ತು ವೈಜಯಂತಿ ಜೈನ್ ಹೊಸಬೆಟ್ಟುಗುತ್ತು ಅವರನ್ನೊಳಗೊಂಡ ಇಡೀ ತಂಡದ ಸಾಂಸ್ಕೃತಿಕ ಶ್ರಮ ಅಭಿನಂದನಾರ್ಹ.
ಒಟ್ಟಿನಲ್ಲಿ, ‘ಅರಹಂತ’ ಕೇವಲ ರಂಗದ ಮೇಲೊಂದು ನಾಟಕವಾಗಿ ಉಳಿಯದೇ, ಪ್ರತಿಯೊಬ್ಬ ಸಹೃದಯಿಯ ಅಂತರಂಗದಲ್ಲೂ ಅಹಿಂಸಾ ಚೇತನವನ್ನು ಜಾಗೃತಗೊಳಿಸಿದ ಭಾವಪೂರ್ಣ ರಂಗದರ್ಶನವಾಗಿದೆ.
(ಸಂಪರ್ಕಕ್ಕೆ: ಮಾಳ ಹರ್ಷೇಂದ್ರ ಜೈನ್ – 9845888889,
ಲೋಕನ ಜೈನ್ – 8310175263, ಸುಧಾಕರ ಜೈನ್ ಹೊಸಬೆಟ್ಟುಗುತ್ತು – 9900500832)