BRICS 2026: ತನ್ನ ರಾಷ್ಟ್ರಗಳ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಒಕ್ಕೂಟಗಳಲ್ಲಿ ಬ್ರಿಕ್ಸ್ ಕೂಡ ಒಂದು. 2026ರ ಬ್ರಿಕ್ಸ್ ಶೃಂಗಸಭೆಯು ಭಾರತದಲ್ಲಿ ನಡೆಯಲಿದೆ. ಇದು 18ನೇ ಶೃಂಗಸಭೆಯಾಗಿದ್ದು, ಭಾರತ ಅಧ್ಯಕ್ಷತೆಯನ್ನು ವಹಿಸಿದೆ. ಹಾಗೂ ಈಗಾಗಲೇ ಹಲವು ನಗರಗಳಲ್ಲಿ ಸಭೆಗಳು ನಡೆಯುತ್ತಿವೆ.
BRICS SUMMIT 2026
BRICS 2026: ಬ್ರಿಕ್ಸ್ ಒಂದು ಪ್ರಮುಖ ಆರ್ಥಿಕತೆಗಳ ಅಂತರಾಷ್ಟ್ರೀಯ ಒಕ್ಕೂಟ. ಬ್ರಿಕ್ಸ್ ದೇಶಗಳು ಜಾಗತಿಕ ಮಟ್ಟದಲ್ಲಿ ಆರ್ಥಿಕವಾಗಿ ಬಲಗೊಳ್ಳಲು ಮತ್ತು ತಮ್ಮ ಸ್ಥಾನವನ್ನು ಕಾಯ್ದುಕೊಳ್ಳಲು ರೂಪಿತವಾಗಿರುವ ಒಂದು ಒಕ್ಕೂಟವಾಗಿದೆ.
ಬ್ರಿಕ್ಸ್ ಒಕ್ಕೂಟವು ವಿಶ್ವದಲ್ಲಿ ಇರುವಂತಹ ಒಟ್ಟು ಜನಸಂಖ್ಯೆಯ 40 ಶೇಕಡ ಜನಸಂಖ್ಯೆ ಹಾಗೂ ಒಟ್ಟು ಜಿಡಿಪಿಯಲ್ಲಿ 37 ಶೇಕಡಾ ಜಿಡಿಪಿಯನ್ನು ಹೊಂದಿದೆ.
‘ಸ್ಥಿತಿ ಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಗಾಗಿ ನಿರ್ಮಾಣ- building for resilience, innovation, cooperation, and sustainability’ ಎಂಬ ಧ್ಯೇಯ ವಾಕ್ಯದೊಂದಿಗೆ ಈ ಶೃಂಗಸಭೆಗಳು ನಡೆಯುತ್ತಿವೆ.
ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಜನವರಿ 2026ರಲ್ಲಿ ಇದಕ್ಕೆ ಸಂಬಂಧಪಟ್ಟಂತಹ ಲೋಗೋ ಮತ್ತು ವೆಬ್ಸೈಟ್ ಬಿಡುಗಡೆಗೊಳಿಸಿದ್ದಾರೆ. ಮುಖ್ಯ ಶೃಂಗಸಭೆಯು 2026ರ ಸಪ್ಟೆಂಬರ್ 12 ಮತ್ತು 13 ರಂದು ಭಾರತ ಮಂಟಪದಲ್ಲಿ ನಡೆಯಲಿದೆ.
BRICS 2026: ಸಭೆಗೆ ಯಾರೆಲ್ಲಾ ಆಹ್ವಾನಿತರು?
ಶೃಂಗಸಭೆಗೆ ಬ್ರಿಕ್ಸ್ ಸದಸ್ಯ ರಾಷ್ಟ್ರಗಳಾದ 11 ರಾಷ್ಟ್ರಗಳಿಗೂ ಆಹ್ವಾನವಿದೆ. ಇದರ ಹೊರತಾಗಿ, ಕೆಲವು ಪ್ರಮುಖ ಪಾಲುದಾರ ದೇಶಗಳಿಗೂ ಆಹ್ವಾನವನ್ನು ನೀಡಲಾಗಿದೆ.
ಜಾಗತಿಕವಾಗಿ ದಕ್ಷಿಣ ಭಾಗದಲ್ಲಿರುವ ಹಲವು ಅಭಿವೃದ್ಧಿ ಹೊಂದುತ್ತಿರುವ ದೇಶಗಳನ್ನು ಶೃಂಗಸಭೆಗೆ ಕರೆ ತರುವುದು ಭಾರತದ ಉದ್ದೇಶವಾಗಿದೆ.
ಅಧಿಕೃತವಾಗಿ ಬ್ರಿಕ್ಸ್ ವ್ಯಾಪ್ತಿಯನ್ನು ವಿಸ್ತರಿಸಲು ಈ ದೇಶಗಳನ್ನು ಆಹ್ವಾನಿಸಲಾಗಿದೆ: ಉಗಾಂಡ, ವಿಯೆಟ್ನಾಂ, ಉಜ್ಬೇಗಿಸ್ತಾನ್, ಮಲೇಶಿಯಾ, ನೈಜೀರಿಯಾ, ಥೈಲ್ಯಾಂಡ್, ಕ್ಯೂಬಾ, ಕಜಾಕಿಸ್ತಾನ್, ಬೊಲಿವಿಯಾ ಮತ್ತು ಬೆಲಾರಸ್.
ಭಾರತವು ಬ್ರಿಕ್ಸ್ ನ ಭಾಗವಾದ ಬಗೆ:
•ಬ್ರಿಕ್ (BRIC) ಎಂಬ ಪರಿಕಲ್ಪನೆ ಮೊದಲ ಬಾರಿಗೆ ಮೂಡಿದ್ದು 2001ರಲ್ಲಿ.
•ಭಾರತವು ಬ್ರಿಕ್ ನ ಸಂಸ್ಥಾಪಕ ಸದಸ್ಯ ರಾಷ್ಟ್ರವಾಗಿದೆ. ಬ್ರಿಕ್ ಎಂಬ ಪರಿಕಲ್ಪನೆ ಪ್ರಾರಂಭವಾದಾಗಿನಿಂದಲೂ ಭಾರತವು ಅದರಲ್ಲಿ ಸೇರ್ಪಡೆಗೊಂಡಿದೆ.
•2006ರಲ್ಲಿ ನ್ಯೂಯಾರ್ಕ್ ನಲ್ಲಿ ನಡೆದಂತಹ ಬ್ರಿಕ್ ನ ವಿದೇಶಾಂಗ ಮಂತ್ರಿಗಳ ಮೊದಲ ಅಧಿಕೃತ ಸಭೆಯಲ್ಲಿ ಭಾರತವು ಭಾಗವಹಿಸಿತ್ತು.
• 2009ರಲ್ಲಿ ಮೊದಲ ಬಾರಿಗೆ ರಷ್ಯಾದಲ್ಲಿ ಬ್ರಿಕ್ ನ ಅಧಿಕೃತ ಶೃಂಗಸಭೆ ನಡೆಯಿತು.
•2009ರಲ್ಲಿ ಭಾರತದ ಪ್ರಧಾನಿ ಡಾ. ಮನಮೋಹನ್ ಸಿಂಗ್ ಸಂಘ ಸಭೆಗೆ ಹಾಜರಾಗುವ ಮೂಲಕ ಚಾಲನೆ ನೀಡಿದ್ದರು.
•ಇದುವರೆಗೂ 3 ಬಾರಿ ಭಾರತದಲ್ಲಿ ಶೃಂಗಸಭೆ ನಡೆದಿದೆ.
•ಈ ಬಾರಿ ನವದೆಹಲಿಯಲ್ಲಿ ನಡೆಯುತ್ತಿರುವ ಶೃಂಗಸಭೆಯು ನಾಲ್ಕನೇಯದಾಗಿದೆ.
•2012ರಲ್ಲಿ ಬ್ರಿಕ್ ನ ನಾಲ್ಕನೇ ಶೃಂಗಸಭೆಯನ್ನು ನವದೆಹಲಿಯಲ್ಲಿ ನಡೆಸಲಾಗಿತ್ತು.
•2016ರಲ್ಲಿ 8ನೇ ಶೃಂಗಸಭೆಯು ಗೋವಾದಲ್ಲಿ ಜರಗಿತು. ಅಲ್ಲಿ ಭಯೋತ್ಪಾದನೆ ಕುರಿತಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಯಿತು.
• 2021 ರಲ್ಲಿ ಕೋವಿಡ್ ಕಾರಣದಿಂದಾಗಿ, ಸಭೆಯನ್ನು ಮೋದಿ ಯವರ ನೇತೃತ್ವದಲ್ಲಿ ವರ್ಚುಯಲ್ ಮೂಲಕ ನಡೆಸಲಾಯಿತು.
•ಈ ಬಾರಿ ಭಾರತ ಮಂಟಪದಲ್ಲಿ 18ನೇ ಶೃಂಗಸಭೆ ನಡೆಯಲಿದೆ.
BRIC ಟು BRICS
•ಬ್ರಿಕ್ ಒಕ್ಕೂಟಕ್ಕೆ 2010ರಲ್ಲಿ ದಕ್ಷಿಣ ಆಫ್ರಿಕವನ್ನು ಸೇರಿಸಲಾಯಿತು. ಆನಂತರ ಇದು ಬ್ರಿಕ್ಸ್ ಆಗಿ ಬದಲಾಗುತ್ತದೆ.
• 2011ರಲ್ಲಿ ಚೀನಾದಲ್ಲಿ ನಡೆದ ಶೃಂಗಸಭೆಯಲ್ಲಿ, ದಕ್ಷಿಣ ಆಫ್ರಿಕಾವು ಸದಸ್ಯ ರಾಷ್ಟ್ರವಾಗಿ ಭಾಗವಹಿಸುತ್ತದೆ.
ಬ್ರಿಕ್ಸ್ ನ ಮೂಲ ಸ್ಥಾಪಕ ರಾಷ್ಟ್ರಗಳು ಈ ರೀತಿ ಆಗಿವೆ: ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ( 2010ರಲ್ಲಿ ಸೇರ್ಪಡೆಯಾದದ್ದು).
ಹೊಸದಾಗಿ ಸೇರ್ಪಡೆಯಾದ ಆರು ದೇಶಗಳು:
ಈಜಿಪ್ಟ್, ಇರಾನ್, ಸೌದಿ ಅರೇಬಿಯಾ, ಇಥಿಯೋಪಿಯಾ, ಇಂಡೋನೇಷಿಯಾ, ಯುಎಇ.
BRICS 2026: ಶೃಂಗಸಭೆಗೆ ಆಗಮಿಸಲಿರುವ ಹನ್ನೊಂದು ರಾಷ್ಟ್ರದ ನಾಯಕರು:
ನರೇಂದ್ರ ಮೋದಿ: ಭಾರತದ ಪ್ರಧಾನ ಮಂತ್ರಿ ಹಾಗೂ ಈ ಬಾರಿಯ ಶೃಂಗ ಸಭೆಯ ಅಧ್ಯಕ್ಷತೆಯನ್ನು ವಹಿಸಿರುವವರು.
ವ್ಲಾಡಿಮಿರ್ ಪುಟಿನ್: ರಷ್ಯಾದ ಅಧ್ಯಕ್ಷ
ಲುಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ: ಬ್ರೆಜಿಲ್ ಅಧ್ಯಕ್ಷ
ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್: ಯುಎಇ ಅಧ್ಯಕ್ಷ
ಪ್ರಬೋವೊ ಸುಬಿಯಾಂಟೊ: ಇಂಡೋನೇಷ್ಯಾದ ಅಧ್ಯಕ್ಷ
ಅಬ್ದೆಲ್ ಫತ್ತಾಹ್ ಅಲ್-ಸಿಸಿ: ಈಜಿಪ್ಟ್ ಅಧ್ಯಕ್ಷ
ಮಸೂದ್ ಪೆಜೆಶ್ಕಿಯನ್: ಇರಾನ್ ಅಧ್ಯಕ್ಷ
ಅಬಿಯ್ ಅಹ್ಮದ್: ಇಥಿಯೋಪಿಯ ಅಧ್ಯಕ್ಷ
ಮೊಹಮ್ಮದ್ ಬಿನ್ ಸಲ್ಮಾನ್: ಸೌದಿ ಅರೇಬಿಯಾದ ಪ್ರತಿನಿಧಿ
2026 ರಾಷ್ಟ್ರಗಳ ಸಭೆಯ ಪ್ರಮುಖ ಸ್ತಂಭಗಳನ್ನು ಈ ರೀತಿಯಾಗಿ ಹಂಚಿಕೊಳ್ಳಲಾಗಿದೆ:
ಸುಸ್ಥಿರತೆ
ಹವಮಾನ, ಹಣಕಾಸು, ಹಸಿರು, ಇಂಧನ, ಇವುಗಳ ಪರಿವರ್ತನೆ. ಮತ್ತು ರಾಷ್ಟ್ರೀಯ ಮತ್ತು ಜಾಗತಿಕ ಬೇಡಿಕೆಗಳಿಗೆ ಅನುಗುಣವಾಗಿ ಎಲ್ಲರೂ ಸಾಮೂಹಿಕವಾಗಿ ಸುಸ್ಥಿರ ಅಭಿವೃದ್ಧಿಯ ಕಡೆಗೆ ಕೈಜೋಡಿಸುವುದು.
ನಾವೀನ್ಯತೆ
ಭವಿಷ್ಯಕ್ಕೆ ಸಿದ್ಧವಾಗಿರುವ ಮತ್ತು ಅಗತ್ಯವಿರುವ ಡಿಜಿಟಲ್ ಮಾರ್ಗಗಳನ್ನು ಬಲಗೊಳಿಸುವ ಸಲುವಾಗಿದೆ. ಉದಯೋನ್ಮುಖ ತಂತ್ರಜ್ಞಾನಗಳು, AI ತಂತ್ರಜ್ಞಾನ, ಇನ್ನಿತರ ಡಿಜಿಟಲ್ ತಂತ್ರಜ್ಞಾನಗಳ ಬಳಕೆಯ ಉತ್ತೇಜನ.
ಸ್ಥಿತಿ ಸ್ಥಾಪಕತ್ವ
ಜಾಗತಿಕವಾಗಿ ಉಂಟಾಗುವ ಅಡೆತಡೆಗಳು, ಪೂರೈಕೆಯಲ್ಲಿ ಉಂಟಾಗುವ ಲೋಪಗಳನ್ನು ತಡೆಯುವ ಉದ್ದೇಶವಾಗಿದೆ. ಹೌದು ಹವಮಾನ ಮತ್ತು ಆರೋಗ್ಯಕ್ಕೆ ಸಂಬಂಧಪಟ್ಟಂತೆ ಎಲ್ಲ ರೀತಿಯಲ್ಲೂ ದೇಶಗಳನ್ನು ಸ್ಥಿತಿಸ್ಥಾಪಕತ್ವಗೊಳಿಸುವುದು.
ಸಹಕಾರ
ಹಣಕಾಸು, ಅಭಿವೃದ್ಧಿ, ವ್ಯಾಪಾರ ಸೌಲಭ್ಯ, ಆಡಳಿತದಲ್ಲಿನ ಸುಧಾರಣೆ ಇವೆಲ್ಲದರ ಮೂಲಕ ಸದಸ್ಯ ರಾಷ್ಟ್ರಗಳನ್ನು ಇನ್ನೂ ಬಲಗೊಳಿಸುವಿಕೆ.
2026 ಬ್ರಿಕ್ಸ್ ಶೃಂಗಸಭೆಯ ಲೋಗೋ:
ಲೋಗೊ ಗೆ ಸಂಬಂಧಪಟ್ಟಂತೆ, ಭಾರತದ ರಾಷ್ಟ್ರೀಯ ಹೂವಾದ ಕಮಲವನ್ನು ಬಳಸಿಕೊಳ್ಳಲಾಗಿದೆ. ಈ ಕಮಲದ ಹೂವಿನಲ್ಲಿರುವಂತಹ ದಳಗಳು ಪ್ರತಿ ಸದಸ್ಯ ರಾಷ್ಟ್ರದ ಬಣ್ಣವನ್ನು ಹೊಂದಿವೆ ಮತ್ತು ಸೂಚಿಸುತ್ತವೆ. ಹಾಗೂ ಕಮಲದ ನಡುವಿನಲ್ಲಿ ಸಾಮರಸ್ಯ ಮತ್ತು ಗೌರವದ ಪ್ರತೀಕವಾಗಿ ನಮಸ್ತೆ ಎಂಬ ಮುದ್ರೆಯನ್ನು ಬಳಸಲಾಗಿದೆ.
ಬ್ರಿಕ್ಸ್ 2026 ಸಂಘ ಸಭೆಯ ಉದ್ದೇಶಗಳು:
•ಪ್ರಸ್ತುತವಾಗಿ ಜಗತ್ತಿನಲ್ಲಿ ಅನೇಕ ಯುದ್ಧದಂತ ಕಠಿಣ ಸನ್ನಿವೇಶಗಳು ನಡೆಯುತ್ತದೆ. ಬ್ರಿಕ್ಸ್ ಮೂಲಕ ತನ್ನ ಸದಸ್ಯ ರಾಷ್ಟ್ರಗಳಲ್ಲಿ ಆಹಾರ ಮತ್ತು ಇಂಧನ ಭದ್ರತೆಗಳನ್ನು ಕೈಗೊಳ್ಳುವುದು ಇದರ ಮೂಲ ಉದ್ದೇಶವಾಗಿದೆ. ಜೊತೆಗೆ ಭಯೋತ್ಪಾದನೆ ತಡೆಯುವಿಕೆಗೂ ಕ್ರಮ ಕೈಗೊಳ್ಳಲಾಗುತ್ತಿದೆ.
• ಪ್ರಸ್ತುತ ಅಂತರಾಷ್ಟ್ರೀಯ ವ್ಯಾಪಾರದಲ್ಲಿ ಅಮೆರಿಕದ ಡಾಲರ್ ಮುನ್ನಡೆಯುತ್ತಿದೆ. ಇದನ್ನು ತಡೆಗಟ್ಟಿ ಸದಸ್ಯ ರಾಷ್ಟ್ರಗಳು ತಮ್ಮದೇ ಕರೆನ್ಸಿಯಲ್ಲಿ ವ್ಯಾಪಾರ ಮಾಡುವುದಕ್ಕೆ ಉತ್ತೇಜನ ನೀಡಲಾಗುತ್ತದೆ.
•ಅಭಿವೃದ್ಧಿ ಹೊಂದುತ್ತಿರುವ ಮತ್ತು ಹಿಂದುಳಿದ ರಾಷ್ಟ್ರಗಳಿಗೂ ಕೂಡ ಜಾಗತಿಕ ಮಟ್ಟದಲ್ಲಿ ಸಮಾನ ಸ್ಥಾನಮಾನವನ್ನು ನೀಡುವುದಾಗಿದೆ.
ಈಗಾಗಲೇ ಈ ಶೃಂಗಸಭೆಗೆ ಸಂಬಂಧಪಟ್ಟಂತೆ ಹಲವಾರು ಸಭೆಗಳು ಜರುಗಿವೆ. ಸಭೆಗಳ ಮೂಲಕ ಕಂಡುಬಂದಂತಹ ನಾಲ್ಕು ಪ್ರಗತಿಗಳು:
•ಮೇಲೆಯೇ ತಿಳಿಸಿದಂತೆ, ಡಾಲರ್ ಬಳಕೆಯನ್ನು ಕುಂದಿಸುವ ಸಲುವಾಗಿ ಸ್ವಂತ ಕರೆನ್ಸಿ ಇಂದ ವ್ಯಾಪಾರ ವಹಿವಾಟು ಮಾಡುವಂತೆ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ.
•ಭಾರತದಲ್ಲಿ ಇರುವಂತಹ ಯುಪಿಐ ಅನ್ನು ಯು ಎ ಈ ದೇಶದ ಜಯನ್ ಸೇರಿದಂತೆ ಎಲ್ಲಾ ಇತರ ದೇಶಗಳ ಪಾವತಿಗೆ ಜೋಡಿಸಲು ನಿರ್ಧರಿಸಲಾಗಿದೆ.
•ಸುಸ್ತಿರ ಇಂಧನಕ್ಕೆ ಸಂಬಂಧಪಟ್ಟಂತೆ ಜೂನ್ ನಲ್ಲಿ ಇಂಧನ ಮಂತ್ರಗಳ ಸಭೆ ನಡೆಯಿತು. ತೈಲ ಉತ್ಪಾದನಾ ಸದಸ್ಯ ರಾಷ್ಟ್ರಗಳಿಂದ ಇನ್ನುಳಿದ ಸದಸ್ಯ ರಾಷ್ಟ್ರಗಳಿಗೆ ಕಡಿಮೆ ಬೆಲೆಯಲ್ಲಿ ಇಂಧನ ಪೂರೈಕೆ ಮಾಡುವುದು. ಹಾಗೂ ಹಸಿರು ಹೈಡ್ರೋಜನ್ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಯೋಜನೆಗಳನ್ನು ರೂಪಿಸಲಾಯಿತು.
•ಹವಮಾನ ವೈಪರೀತ್ಯದ ಮುನ್ಸೂಚನೆಯನ್ನು ಪಡೆಯಲು, ಸದಸ್ಯ ರಾಷ್ಟ್ರಗಳ ಉಪಗ್ರಹಗಳ ಡೇಟಾವನ್ನು ಪರಸ್ಪರ ಹಂಚಿಕೊಳ್ಳುವುದು.
ಇದೊಂದು ಮಹತ್ವದ ನಿರ್ಧಾರವಾಗಿದೆ. ಹಾಗೂ ಇದರಿಂದಾಗಿ ನೈಸರ್ಗಿಕ ವಿಕೋಪಗಳಿಂದ ಪಾರಾಗಬಹುದು.
•AI ದುರ್ಬಳಕೆ ಆಗದಂತೆ ಮತ್ತು ಸೈಬರ್ ಅಪರಾಧಗಳನ್ನು ತಡೆಯಲು ಜಂಟಿಯಾಗಿ ಕಠಿಣವಾದ ಚೌಕಟ್ಟುಗಳನ್ನು ರೂಪಿಸಲಾಗಿದೆ.
2026 ಬ್ರಿಕ್ಸ್ ವೇಳಾಪಟ್ಟಿ:
•ಜೂನ್ 22ರಿಂದ 24ರ ತನಕ ಗುರುಗ್ರಾಮದಲ್ಲಿ ಹಿರಿಯ ಇಂಧನ ಅಧಿಕಾರಿಗಳ ಸಭೆ ನಡೆಯಿತು.
•ಜೂನ್ 25ರಿಂದ 26 ರ ತನಕ ಗುರುಗ್ರಾಮದಲ್ಲಿ 11ನೇ ಬ್ರಿಕ್ಸ್ ಇಂಧನ ಸಚಿವರ ಸಭೆ ನಡೆಯಿತು.
•ಮುಂಬರುವ ಆಗಸ್ಟ್ 17,18 ರಂದು ಬ್ರಿಕ್ಸ್ ಯುವ ಇಂಧನ ಶೃಂಗ ಸಭೆಯು ವರ್ಚುಯಲ್ ಮೂಲಕ ನಡೆಯಲಿದೆ.
ಬ್ರಿಕ್ಸ್ ಎದುರಿಸುತ್ತಿರುವ ಸವಾಲುಗಳು:
•ಬ್ರಿಕ್ಸ್ ಒಕ್ಕೂಟಕ್ಕೆ ಹಲವಾರು ಹೊಸ ದೇಶಗಳು ಸೇರ್ಪಡೆಯಾಗಿವೆ. ಪಶ್ಚಿಮಾತ್ಯ ದೇಶಗಳಿಗೆ ಸಂಬಂಧಪಟ್ಟಂತೆ, ಪ್ರತಿಯೊಂದು ಸದಸ್ಯ ರಾಷ್ಟ್ರಕೂ ಒಂದೊಂದು ಅಭಿಪ್ರಾಯವಿದೆ. ಈ ನಿಟ್ಟಿನಲ್ಲಿ ಒಗ್ಗಟ್ಟಿನಲ್ಲಿರುವುದು ಹಾಗೂ ನಿರ್ಧಾರಗಳನ್ನು ಕೈಗೊಳ್ಳುವುದು ಕಷ್ಟಕರವಾಗಿದೆ.
•ಇಲ್ಲಿ ಉಳಿದೆಲ್ಲಾ ದೇಶಗಳಿಗೆ ಹೋಲಿಸಿದರೆ ಚೀನಾ ಆರ್ಥಿಕವಾಗಿ ಪ್ರಬಲವಾಗಿದೆ. ಇದರಿಂದಾಗಿ ದೇಶಗಳ ನಡುವೆ ಆರ್ಥಿಕ ಸಂಬಂಧವನ್ನು ಹೊಂದುವುದು ಕಷ್ಟಕರವಾಗಿದ್ದು, ಆರ್ಥಿಕ ಅಸಮತೋಲನತೆ ಎದುರಾಗುತ್ತದೆ.
•ಬ್ರಿಕ್ಸ್ ಒಕ್ಕೂಟಕ್ಕೆ ಯಾವುದೇ ರೀತಿಯ ಶಾಶ್ವತ ಸಚಿವಾಲಯ ಇರುವುದಿಲ್ಲ. ಇದರಿಂದಾಗಿ ಎಲ್ಲಾ ಯೋಜನೆಗಳ ಅನುಷ್ಠಾನ ಮತ್ತು ನಿರ್ಧಾರಗಳ ಕೈಗೊಳ್ಳುವಿಕೆಯು ತಡವಾಗುತ್ತದೆ.
•ಬ್ರಿಕ್ಸ್ ನ ಹಣಕಾಸು ಸಂಸ್ಥೆ ನ್ಯೂ ಡೆವಲಪ್ಮೆಂಟ್ ಬ್ಯಾಂಕ್ (NDB) ಬಹಳ ಚಿಕ್ಕದಾಗಿದೆ. ಇದು ಐಎಂಎಫ್ ಮತ್ತು ವಿಶ್ವ ಬ್ಯಾಂಕ್ ಗೆ ಹೋಲಿಸಿದರೆ ಮಿತವಾಗಿರುತ್ತದೆ. ಇದರಿಂದಾಗಿ ಆರ್ಥಿಕ ವಹಿವಾಟುಗಳಿಗೂ ಕೂಡ ಮಿತಿಯನ್ನು ಹೇರಬೇಕಾಗುತ್ತದೆ.
•ಇನ್ನು ಒಕ್ಕೂಟದಲ್ಲಿರುವಂತಹ ದೇಶಗಳು, ಕ್ರಿಪ್ಟೋ ಕರೆನ್ಸಿ, ಡಾರ್ಕ್ ನೆಟ್ ಈ ರೀತಿಯ ಕೆಲವೊಂದು ಭದ್ರತಾ ಸಮಸ್ಯೆಗಳನ್ನು ಎದುರಿಸುತ್ತಿವೆ.
ಈ ಎಲ್ಲಾ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ಒಂದಷ್ಟು ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ. ಹಾಗೂ ಈ ನಿಟ್ಟಿನಲ್ಲಿ ಈ ಬಾರಿಯ ಹಲವು ಸಭೆಗಳು ನಡೆಯುತ್ತಿದೆ. ಬಹುಶಹ ಮುಂದಿನ ದಿನಗಳಲ್ಲಿ ಬ್ರಿಕ್ಸ್ ಗೆ ಎದುರಾಗಿರುವ ಸವಾಲುಗಳು ಒಂದೊಂದೇ ಪರಿಹಾರವನ್ನು ಕಂಡುಕೊಳ್ಳುತ್ತವೆ.
ಕೊನೆಯದಾಗಿ, ಬ್ರಿಕ್ಸ್ 2026 ಶೃಂಗಸಭೆಯು ಭಾರತ ದೇಶಕ್ಕೆ ಒಂದು ಉತ್ತಮ ಅವಕಾಶವಾಗಿದೆ. ಭಾರತ ದೇಶವು ಅಧ್ಯಕ್ಷತೆ ವಹಿಸಿರುವುದು, ದೇಶದ ಅಭಿವೃದ್ಧಿಯ ಪ್ರತೀಕವಾಗಿದೆ. ಚರ್ಚೆಯಾಗಲಿರುವ ಹಲವಾರು ವಿಷಯಗಳು ಸದಸ್ಯ ರಾಷ್ಟ್ರಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಲಿವೆ.