EPFO New Portal 2026: ಹೊಸ ಪಿಎಫ್ ಪೋರ್ಟಲ್ ಜಾರಿ

Spread the love

EPFO New Portal 2026: ಹೊಸ EPFO ಕೇಂದ್ರೀಕೃತ ಡಿಜಿಟಲ್ ಪೋರ್ಟಲ್ ಇದೊಂದು ಭಾರತದ ಭವಿಷ್ಯ ನಿಧಿ (PF) ವ್ಯವಸ್ಥೆಯಲ್ಲಿ ತರಲಾದಂತಹ ಬಹುದೊಡ್ಡ ಬದಲಾವಣೆಯಾಗಿದೆ. ಇದು ಡಿಜಿಟಲ್ ದಾಪುಗಾಲಾಗಿದ್ದು, ಸುಮಾರು 138 ಪ್ರಾದೇಶಿಕ ಕಚೇರಿಗಳ ಡೇಟಾವನ್ನು ಒಂದೇ ಕಡೆ ತರಲಾಗಿದೆ.

 

EPFO New Portal 2026: ಪಿಎಫ್ ಹಣಕ್ಕೆ ಸಂಬಂಧಪಟ್ಟಂತೆ ಹೊಸ ಇಪಿಎಫ್‌ಒ (EPFO) ಅನ್ನು 2026 ಜುಲೈ 8ರಂದು ಅಧಿಕೃತವಾಗಿ ಜಾರಿಗೊಳಿಸಲಾಯಿತು.

ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವೀಯ ಈ ಸುಧಾರಿತ ತಂತ್ರಜ್ಞಾನವನ್ನು ದೆಹಲಿಯಲ್ಲಿ ಉದ್ಘಾಟಿಸಿದರು.

ಈ ಹಿಂದೆ ಇದ್ದಂತಹ ಹಳೆಯ ಇಪಿಎಫ್‌ ಪೋರ್ಟಲ್ ಮತ್ತು ಡೇಟಾಬೇಸ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ. ಹಾಗೂ, ಅದರ ಬದಲಾಗಿ ಈ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.

ಹಳೆಯ ಪೋರ್ಟಲ್ ನಲ್ಲಿ ಹಲವಾರು ನಿಯಮಿತ ಮಿತಿಗಳು ಇದ್ದವು. ಇದರಿಂದಾಗಿ ಉದ್ಯೋಗಿಗಳು ಹಾಗೂ ಉದ್ಯೋಗದಾತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಮತ್ತು ಈಗ ಆ ಸಮಸ್ಯೆಗಳಿಗೆ ಪರಿಹಾರ ದೊರಕಿದಂತಾಗಿದೆ.

ಈ ಹಿಂದೆ ಎದುರಾಗುತ್ತಿದ್ದ ಸಮಸ್ಯೆಗಳು:

 

•ಇದಕ್ಕೆ ಸಂಬಂಧಪಟ್ಟಂತೆ, ದೇಶದಾದ್ಯಂತ ಒಟ್ಟು 138 ಪ್ರಾದೇಶಿಕ ಕಚೇರಿಗಳಿವೆ.

• ಒಂದು ಕಚೇರಿಯಿಂದ ಮತ್ತೊಂದು ಕಚೇರಿಗೆ ಪಿಎಫ್ ವರ್ಗಾವಣೆಗೊಳಿಸಲು ಬಹಳಷ್ಟು ಸಮಯ ತೆಗೆದುಕೊಳ್ಳುತ್ತಿತ್ತು.

•ಇದಕ್ಕೂ ಮುಂಚೆ ಇದ್ದಂತಹ ಸರ್ವರ್ ಹೆಚ್ಚಿನ ಟ್ರಾಫಿಕ್ ಅನ್ನು ತಡೆದುಕೊಳ್ಳುತ್ತಿರಲಿಲ್ಲ.

• ತಿಂಗಳ ಮೊದಲಿನ ಸಮಯದಲ್ಲಿ ಹಾಗೂ ಇ-ಪಾಸ್‌ಬುಕ್ ಚೆಕ್ ಮಾಡುವಂತಹ ಸಮಯದಲ್ಲಿ ಪದೇ ಪದೇ ಸರ್ವರ್ ಡೌನ್ ಆಗುತ್ತಿತ್ತು.

•ಬಳಕೆದಾರರು ಲಾಗಿನ್ ಆಗುವ ಸಮಯದಲ್ಲಿ, ಸರ್ವರ್ ಎರರ್ ಹಾಗೂ ಸೈಟ್ ಅಂಡರ್ ಮೇಂಟೆನೆನ್ಸ್ ಎಂಬ ಸಂದೇಶಗಳು ಆಗಾಗ್ಗೆ ಬರುತ್ತಿದ್ದವು.

•ದಾಖಲೆಗಳಲ್ಲಿ ಸಣ್ಣ ಪುಟ್ಟ ವ್ಯತ್ಯಾಸಗಳು ಆದರೂ ಕೂಡ, ಈ ಸಿಸ್ಟಮ್ ಪತ್ತೆ ಹಚ್ಚುವ ಕಾರ್ಯವನ್ನು ಮಾಡುತ್ತಿರಲಿಲ್ಲ.

•ಈ ಕಾರಣದಿಂದಾಗಿ, ಅಪ್ಲೈ ಮಾಡಿ 20-30 ದಿನಗಳ ಬಳಿಕ ರಿಜಿಸ್ಟ್ ಆಗುವ ಸಾಧ್ಯತೆಗಳು ಹೆಚ್ಚಿರುತ್ತಿದ್ದವು.

•ರಿಜೆಕ್ಟ್ ಆದ ನಂತರ ಮತ್ತೆ ಪುನಃ ಅಪ್ಲೈ ಮಾಡಬೇಕಿತ್ತು. ಇದರಿಂದಾಗಿ ಬಹಳ ಸಮಯ ವ್ಯಯ ಆಗುತ್ತಿತ್ತು.

•ಹಾಗೂ ಸಾಫ್ಟ್ವೇರ್ ವೇಗವಾಗಿ ಇಲ್ಲದ ಕಾರಣದಿಂದಾಗಿ, ಮಾರ್ಚ್ ತಿಂಗಳ ಕೊನೆಯಲ್ಲಿ ಘೋಷಣೆಯಾಗುತ್ತಿದ್ದಂತಹ ಬಡ್ಡಿ ಮತ್ತು ಹಣವನ್ನು ಖಾತೆಗಳಿಗೆ ಜಮಾ ಮಾಡಲು ಸಾಧ್ಯವಾಗುತ್ತಿರಲಿಲ್ಲ.                   ನಿಧಾನ ಗತಿಯಿಂದಾಗಿ ಆ ಪ್ರಕ್ರಿಯೆಯು ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ತನಕ ಸಮಯ ತೆಗೆದುಕೊಳ್ಳುತ್ತಿತ್ತು.

•ಆಧಾರ್ ಲಿಂಕ್ ಮಾಡುವ ಸಮಯದಲ್ಲಿ ಓಟಿಪಿ ಬರುವುದು ಬಹಳ ಕಷ್ಟದ ಸಮಸ್ಯೆ ಆಗಿತ್ತು. ಇದನ್ನು ಸಾಫ್ಟ್ವೇರ್ ಗಳು ತಡೆ ಹಿಡಿಯುತ್ತಿದ್ದವು.

•ಇನ್ನು ಉದ್ಯೋಗಿಗಳ ಕೆವೈಸಿ ಗೆ ಡಿಜಿಟಲ್ ಸಹಿ ಹಾಕಲು ಕೂಡ ಬಹಳ ತೊಂದರೆ ಉಂಟಾಗುತ್ತಿತ್ತು.

ಈ ಎಲ್ಲ ಸಮಸ್ಯೆಗಳನ್ನು ನಿವಾರಿಸುವ ಸಲುವಾಗಿ ಇದೀಗ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಈಗ ಜಾರಿಯಾಗಿರುವಂತಹ ಪೋರ್ಟಲ್, ಏಕೀಕೃತ ಕ್ಲೌಡ್ ತಂತ್ರಜ್ಞಾನವಾಗಿದೆ.

 

EPFO New Portal 2026:

ಹೊಸ ಪೋರ್ಟಲ್ ನ ವೈಶಿಷ್ಟತೆಗಳು:

 

•ಇನ್ಮುಂದೆ ಒಂದೇ ಡ್ಯಾಶ್ ಬೋರ್ಡ್

ಇದು ಏಕೀಕೃತ ಡ್ಯಾಶ್ ಬೋರ್ಡ್ ಅನ್ನು ಹೊಂದಿದೆ. ಒಂದೇ ಲಾಗಿನ್ ಮುಖಾಂತರ ಪಿಎಫ್ ಬ್ಯಾಲೆನ್ಸ್ ಅನ್ನು ತಿಳಿದುಕೊಳ್ಳಬಹುದು. ಕ್ಲೈಂ ಅನ್ನು ಟ್ರ್ಯಾಕ್ ಮಾಡಬಹುದಾಗಿದೆ. ಮತ್ತು ನಿಮ್ಮ ಪಿಎಫ್ ಖಾತೆಯನ್ನು ವರ್ಗಾಯಿಸಿಕೊಳ್ಳಬಹುದಾಗಿದೆ.

•ಎಲ್ಲಾ ಡೇಟಾ ಒಂದೇ ಕಡೆ

ದೇಶದ ಎಲ್ಲಾ ಪ್ರಾದೇಶಿಕ ಕಚೇರಿಗೆ ಸಂಬಂಧಪಟ್ಟ ಡೇಟ್ ಅನ್ನು ಒಂದೇ ಕಡೆ ವರ್ಗಾಯಿಸಲಾಗಿದೆ. ಸಿ-ಡಾಕ್ ಎಂಬ ಸಂಸ್ಥೆಯ ಸಹಕಾರದಿಂದ ಈ ಕಾರ್ಯವನ್ನು ಸಾಧಿಸಲಾಗಿದೆ.

•ಪ್ರಾದೇಶಿಕ ಕಚೇರಿಯೆ ಬೇಕೆಂದಿಲ್ಲ

ಹೊಸ ಸಿಸ್ಟಮ್ ನಿಂದಾಗಿ, ನೀವು ಪಿಎಫ್ ಸೇವೆಯನ್ನು ಕೇವಲ ನಿಮ್ಮ ಬಳಿಯ ಪ್ರಾದೇಶಿಕ ಕಚೇರಿಯಿಂದ ಪಡೆಯಬೇಕು ಎಂದಿಲ್ಲ. ದೇಶದ ಯಾವುದೇ ಪಿಎಫ್ ಕಚೇರಿಯಿಂದ ನೀವು ಸೇವೆಗಳನ್ನು ಪಡೆದುಕೊಳ್ಳಬಹುದು.

•ಸ್ವಯಂಚಾಲಿತಾ ತಪ್ಪುಗಳ ಗ್ರಹಿಸುವಿಕೆ

ಈ ಸಿಸ್ಟಮ್ ತಪ್ಪುಗಳನ್ನು ಸುಲಭವಾಗಿ ಕಂಡುಹಿಡಿಯುತ್ತದೆ. ಇದರಿಂದಾಗಿ ನೀವು ಅಪ್ಲೈ ಮಾಡುವ ಸಮಯದಲ್ಲೇ ತಪ್ಪುಗಳನ್ನು ನಿಮಗೆ ಸೂಚಿಸುತ್ತದೆ. ಈ ಮೂಲಕವಾಗಿ ಅಪ್ಲೈ ಮಾಡಿದ ನಂತರ ಅರ್ಜಿ ತಿರಸ್ಕಾರ ಆಗುವುದನ್ನು ತಪ್ಪಿಸಬಹುದಾಗಿದೆ. ಹಾಗೂ ಇದರಿಂದಾಗಿ, ಪ್ರಕ್ರಿಯೆಯು ಬೇಗ ಮುಗಿಯಲು ಸಾಧ್ಯವಾಗುತ್ತದೆ.

•ಯುಪಿಐ ಮತ್ತು ಎಟಿಎಂ ಮೂಲಕ ಸೇವೆ

ಇಲ್ಲಿ ಯುಪಿಐ ಮತ್ತು ಎಟಿಎಂ ಮೂಲಕ ಹಣವನ್ನು ಹಿಂಪಡೆಯಬಹುದಾಗಿದೆ. ಉದ್ಯೋಗಿಗಳು ತಮಗೆ ಬರಬೇಕಾದ ಹಣದಲ್ಲಿ ಶೇಕಡ 75ರಷ್ಟು ಭಾಗವನ್ನು ಯುಪಿಐ ಅಥವಾ ಎಟಿಎಂ ಮೂಲಕವೇ ಹಿಂಪಡೆಯಬಹುದು.

ಉಳಿದ ಹಣವು ನಿವೃತ್ತಿಯ ನಂತರದ ಜೀವನದ ಭದ್ರತೆಗಾಗಿ ಖಾತೆಯಲ್ಲಿಯೇ ಉಳಿಯುತ್ತದೆ.

•ಕೊನೆಯ ತನಕ ಬಡ್ಡಿ

ಕೊನೆಯದಾಗಿ, ಹಣದ ಸೆಟಲ್ಮೆಂಟ್ ಮಾಡುವಾಗ ಹಣ ಪೂರ್ಣವಾಗಿ ಪಾವತಿಯಾಗುವ ದಿನಾಂಕದ ತನಕ ಬಡ್ಡಿ ಸಿಗುತ್ತದೆ.

•ಮುಂಗಡವಾಗಿ ದೊರೆಯುವ ಹಣದ ಪ್ರಮಾಣದಲ್ಲಿ ಹೆಚ್ಚಳ

ಹಣವನ್ನು ಸ್ವಯಂ ಚಾಲಿತವಾಗಿ ಪಡೆಯಬಹುದು. ಜೊತೆಗೆ ಈ ರೀತಿಯಾಗಿ ಪಡೆಯುವ ಮುಂಗಡ ಹಣದ ಮಿತಿಯನ್ನು 1 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಲಾಗಿದೆ.

•ನಿಯಮಗಳ ಸಡಿಲಿಕೆ

ಮೊದಲು ಹಣವನ್ನು ಪಡೆಯುವಾಗ ಹಲವಾರು ಕಠಿಣ ನಿಯಮಗಳಿದ್ದವು. ಇದೀಗ ಆ ನಿಯಮಗಳನ್ನು ಸರಳಗೊಳಿಸಿ ಕೇವಲ ಮೂರು ವಿಭಾಗಗಳನ್ನು ಅಳವಡಿಸಲಾಗಿದೆ. ಅವುಗಳು: ಅಗತ್ಯ ಅಗತ್ಯತೆಗಳು, ವಸತಿ, ಮತ್ತು ವಿಶೇಷ ಸಂದರ್ಭಗಳು. ಈ ಸಮಯಗಳಲ್ಲಿ ಹಣವನ್ನು ಪಡೆಯಬಹುದು.

•ಸ್ವಯಂಚಾಲಿತ ಖಾತೆಗಳ ವರ್ಗಾವಣೆ

ಇಲ್ಲಿ ಸ್ವಯಂ ಚಾಲಿತ ಪಿಎಫ್ ವರ್ಗಾವಣೆ ಆಗುತ್ತದೆ. ಕೆಲಸ ಬದಲಾಯಿಸುವಂತಹ ಸಮಯದಲ್ಲಿ ಹಳೆ ಖಾತೆಯಿಂದ ಹೊಸ ಖಾತೆಗೆ ಹಣವು ತಾನಾಗಿಯೇ ವರ್ಗಾವಣೆಗೊಳ್ಳುತ್ತದೆ.

•ಬಡ್ಡಿ ಹಣ ನೇರ ಖಾತೆಗೆ

ಬಡ್ಡಿ ಹಣವನ್ನ ನೇರವಾಗಿ ಖಾತೆಗೆ ಬರುವಂತೆ ಮಾಡಲಾಗಿದೆ. ಹಾಗೂ ಈ ಪ್ರಕ್ರಿಯೆಯನ್ನು ವೇಗಗೊಳಿಸುವ ಸಲುವಾಗಿ ಇದು ಸ್ವಯಂ ಚಾಲಿತವಾಗಿ ಬರಲಿದೆ.

 

EPFO New Portal 2026: ಮುಖ್ಯ ಪ್ರಯೋಜನಗಳು:

• ಇಲ್ಲಿ ತಪ್ಪುಗಳನ್ನು ಮೊದಲೇ ತಿಳಿಸುವ ಕಾರಣದಿಂದಾಗಿ, ಕೆಲಸವೂ ಅತಿ ಬೇಗನೆ ಮುಗಿಯುತ್ತದೆ.

• ಹಾಗೂ, ಎಲ್ಲವೂ ಸ್ವಯಂ ಚಾಲಿತವಾಗಿರುವ ಕಾರಣ, ಉದ್ಯೋಗದಾತರ ಅನುಮೋದನೆಗೆ ಕಾಯುವ ಅಗತ್ಯ ಬರುವುದಿಲ್ಲ.

ಈ ಹೊಸ ವೈಶಿಷ್ಟತೆಗಳಿಂದಾಗಿ, ಪಿಎಫ್ ಹಣಕ್ಕೆ ಸಂಬಂಧಪಟ್ಟಂತೆ ಎಲ್ಲಾ ರೀತಿಯ ಕೆಲಸಗಳು ಅತಿ ಬೇಗನೆ ಕಾರ್ಯಗತಗೊಳ್ಳುತ್ತವೆ. ಹಾಗೂ ಮಧ್ಯವರ್ತಿಗಳ ಯಾವುದೇ ರೀತಿಯ ಕಿರಿಕಿರಿ ಇರುವುದಿಲ್ಲ.

 

EPFO New Portal 2026: ಹೊಸ ಪೋರ್ಟಲ್ ಅನ್ನು ಬಳಸುವುದು ಹೀಗೆ:

 

  1. ಮೊದಲಿಗೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
  2. ನಂತರ ನಿಮ್ಮ UAN ಸಂಖ್ಯೆ ಹಾಗೂ ಕ್ಯಾಪ್ಚ ಹಾಕುವ ಮೂಲಕ ಲಾಗಿನ್ ಆಗಿ.
  3. ನಂತರದಲ್ಲಿ ಆಧಾರ್ ಲಿಂಕ್ ಆಗಿರುವ ನಿಮ್ಮ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ. ಓಟಿಪಿಯನ್ನು ನಮೂದಿಸುವ ಮೂಲಕ ಲಾಗಿನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
  4. ಆನಂತರದಲ್ಲಿ ನಿಮ್ಮ ಮಾಹಿತಿಗಳಾದಂತಹ ಹೆಸರು, ಪ್ಯಾನ್ ಸಂಖ್ಯೆ, ಬ್ಯಾಂಕ್ ಖಾತೆಗೆ ಸಂಬಂಧ ಪಟ್ಟಂತೆ ಎಲ್ಲವೂ ಸರಿಯಾಗಿದೆಯೇ ಎಂದು ಪರಿಶೀಲಿಸಿ.
  5. ಒಂದು ವೇಳೆ ಬ್ಯಾಂಕ್ ಖಾತೆಗೆ ಪ್ಯಾನ್ ಕಾರ್ಡ್ ಲಿಂಕ್ ಆಗದೆ ಇರುವಲ್ಲಿ, ಮ್ಯಾನೇಜ್ ಮೆನು ಗೆ ಹೋಗಿ ಕೆ ವೈ ಸಿ ಅಪ್ಡೇಟ್ ಮಾಡಿ.
  6. ಹಾಗೂ, ಪ್ರತಿ ಖಾತೆಗೂ ಇ ನಾಮಿನೇಷನ್ ಮಾಡುವುದು ಕಡ್ಡಾಯವಾಗಿದೆ. ಹಾಗಾಗಿ ಮೆನು ಗೆ ಹೋಗಿ ಕುಟುಂಬದ ಸದಸ್ಯರ ವಿವರಗಳನ್ನು ನಮೂದಿಸಿ.
  7. ನೀವು ಹಣವನ್ನು ಹಿಂಪಡೆಯುವುದು ಅಥವಾ ಮುಂಗಡವಾಗಿ ಹಣವನ್ನು ಹಿಂಪಡೆಯಲು ಬಯಸಬಹುದು. ಈ ಸಮಯದಲ್ಲಿ ಆನ್ಲೈನ್ ಸರ್ವಿಸ್ ಎಂಬ ಮೆನು ಗೆ ಹೋಗಿ ಕ್ಲೈಂ ಎಂಬುದನ್ನು ಆಯ್ಕೆ ಮಾಡಿ.
  8. ನಂತರದಲ್ಲಿ, ಹೊಸ ಸಿಸ್ಟಮ್ ನಿಮ್ಮ ಎಲ್ಲಾ ಮಾಹಿತಿಗಳನ್ನು ಸ್ವಯಂ ಚಾಲಿತವಾಗಿ ಪರಿಶೀಲನೆ ನಡೆಸುತ್ತದೆ. ಆನಂತರ ಓ ಟಿ ಪಿ ಮೂಲಕ ಸಬ್ಮಿಟ್ ಮಾಡಿಕೊಳ್ಳಿ.

ಈ ರೀತಿಯಾಗಿ ನಾವಾಗಿಯೇ ಹೊಸ ಸಿಸ್ಟಮ್ ಅನ್ನು ಬಳಸಬಹುದಾಗಿದೆ. ಇದರಿಂದಾಗಿ ನಾವು ಎಲ್ಲಿಗೂ ಹೋಗುವ ಅಗತ್ಯ ಬರುವುದಿಲ್ಲ. ಹಾಗೂ ಕೆಲಸವೂ ಕೂಡ ಅತಿ ಬೇಗನೆ ಮುಗಿಯಲು ಸಾಧ್ಯವಾಗುತ್ತದೆ.

ಸರ್ಕಾರವು ಈ ಬದಲಾವಣೆಯನ್ನು ತರಲು ಮುಖ್ಯ ಕಾರಣಗಳು:

 

•ಭ್ರಷ್ಟಾಚಾರ ತಡೆಯಲು

ಇಲ್ಲಿ ಕೇಂದ್ರೀಕೃತ ಐಟಿ ವ್ಯವಸ್ಥೆ ಮತ್ತು ದ್ವಿಮುಖ ಭದ್ರತಾ ದೃಢೀಕರಣ ಇದೆ. ಇದರಿಂದಾಗಿ ಹಣದ ದುರುಪಯೋಗ ಆಗುವುದಿಲ್ಲ. ಹಾಗೂ ಇದರಿಂದಾಗಿ ದೇಶದ ಯಾವ ಮೂಲೆಯಿಂದ ಆದರೂ ಕೂಡ ಇದರ ಲಾಭವನ್ನು ಪಡೆಯಬಹುದು.

•ಸರ್ಕಾರಿ ಕಚೇರಿಗೆ ಅಲೆದಾಟ ತಡೆಯಲು

ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವ ಸಲುವಾಗಿಯೂ ಕೂಡ ಆಗಿದೆ. ಇದರ ಮೂಲಕ ಭ್ರಷ್ಟಾಚಾರವನ್ನು ನಿಗ್ರಹಿಸಬಹುದು. ಜೊತೆಗೆ ಯಾವುದೇ ಗೊಂದಲಗಳು ಉಂಟಾಗುತ್ತದೆ ಕೆಲಸ ಬೇಗನೆ ಮುಗಿಯುತ್ತದೆ.

•ವಿಳಂಬವನ್ನು ತಪ್ಪಿಸಲು

ಹಾಗೂ ಮೊದಲು ಈ ಕೆಲಸಗಳು ಬಹಳ ವಿಳಂಬವಾಗುತ್ತಿದ್ದವು. ಇದೀಗ ವಿಳಂಬವನ್ನು ತಡೆಗಟ್ಟಬಹುದು ಜೊತೆಗೆ ಸರ್ಕಾರಿ ಕೆಲಸಗಳು ಕೂಡ ಸಮಯಕ್ಕೆ ಸರಿಯಾಗಿ ನೆರವೇರುತ್ತದೆ.

ಮೊದಲೇ ತಿಳಿಸಿದಂತೆ, ಸ್ವಯಂ ಚಾಲಿತ ಸರಿಪಡಿಸುವಿಕೆ ಇರುವುದರಿಂದಾಗಿ ಅನಗತ್ಯ ಅರ್ಜಿ ರಿಜೆಕ್ಟ್ ಆಗುವುದು ತಪ್ಪುತ್ತದೆ. ಜೊತೆಗೆ ಅನಗತ್ಯವಾಗಿ ಪದೇ ಪದೇ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದು ಕೂಡ ತಪ್ಪುತ್ತದೆ.

ಹೆಚ್ಚಿನ ಮಾಹಿತಿಗಾಗಿ: EPFO

ಇದನ್ನು ಓದಿ: ಭಾರತದಲ್ಲಿ ನಡೆಯಲಿದೆ 18ನೇ ಬ್ರಿಕ್ಸ್ ಶೃಂಗಸಭೆ

Leave a Comment

Scroll to Top

Discover more from nirantarasuddhi

Subscribe now to keep reading and get access to the full archive.

Continue reading