ULLAS Scheme: ಉಲ್ಲಾಸ್ ಎಂಬುದು ಭಾರತ ಸರ್ಕಾರದ ಒಂದು ಮಹತ್ವದ ಯೋಜನೆಯಾಗಿದೆ. ಇದು 15 ವರ್ಷ ಮತ್ತು ಅದಕ್ಕೂ ಮೇಲ್ಪಟ್ಟ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿ ಮಾಡುವಂತಹ ಗುರಿಯನ್ನು ಹೊಂದಿದೆ. ಹಾಗೂ ಈ ಯೋಜನೆ 2022 ರಿಂದ 2027 ರ ತನಕ ಜಾರಿಯಲ್ಲಿರುತ್ತದೆ.

ULLAS Scheme: ಉಲ್ಲಾಸ್ (Understanding Lifelong Learning for All in Society) ಅಧಿಕೃತವಾಗಿ ಫೆಬ್ರವರಿ 2022 ರಲ್ಲಿ ಜಾರಿಗೆ ಬಂದಿತು. ‘ನವ ಭಾರತ ಸಾಕ್ಷರತಾ ಕಾರ್ಯಕ್ರಮ’ ಎಂಬ ಹೆಸರಿನ ಮೂಲಕ, ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆಯ ಇದನ್ನು ಆರಂಭಿಸಿತು.
ULLAS Scheme:ಉಲ್ಲಾಸ್ ಯೋಜನೆಯ ಆರಂಭವಾದ ಹಂತಗಳು:
• ಫೆಬ್ರವರಿ 2022ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (NEP) ಅಡಿಯಲ್ಲಿ ಈ ಯೋಜನೆಯನ್ನು ಆರಂಭಿಸಲಾಯಿತು.
•ಜುಲೈ 29, 2023ರಂದು ದೆಹಲಿಯಲ್ಲಿ ನಡೆದಂತಹ ಅಖಿಲ ಭಾರತೀಯ ಶಿಕ್ಷಾ ಸಮಾಗಮ ಕಾರ್ಯಕ್ರಮದಲ್ಲಿ ಯೋಜನೆಯ ಹೆಸರು, ಲೋಗೋ ಬಿಡುಗಡೆ ಮಾಡಲಾಯಿತು.
•ಯೋಜನೆಗೆ ಉಲ್ಲಾಸ್ ಎಂದು ಹೆಸರು,ಹಾಗೂ ತಕ್ಕುದಾದಾ ಲೋಗೋ ಜಾರಿಗೊಳಿಸಲಾಯಿತು.
•ಮತ್ತು ಜನ್ ಜನ್ ಸಾಕ್ಷರ್ ಎಂಬ ಘೋಷಣಾ ವಾಕ್ಯದೊಂದಿಗೆ ಅಧಿಕೃತವಾಗಿ ಯೋಜನೆ ಬಿಡುಗಡೆಯಾಯಿತು.
•ಹಾಗೂ ಅದೇ ಜುಲೈ 29, 2023 ರಂದು ಕಲಿಕೆಗೆ ಅಗತ್ಯವಾಗುವಂತೆ ಉಲ್ಲಾಸ್ ಮೊಬೈಲ್ ಅಪ್ಲಿಕೇಶನ್ ಅನ್ನು ಕೂಡ ಲಾಂಚ್ ಮಾಡಲಾಯಿತು.
•ಒಟ್ಟಾರೆಯಾಗಿ ಐದು ವರ್ಷಗಳಂತೆ 2022 ರಲ್ಲಿ ಜಾರಿಯಾದ ಈ ಯೋಜನೆಯು 2027 ರ ತನಕ ಚಾಲ್ತಿಯಲ್ಲಿ ಇರುತ್ತದೆ.
ಈ ಯೋಜನೆಯ ಅನಕ್ಷರತೆಯನ್ನು ಸಂಪೂರ್ಣ ಹೋಗಲಾಡಿಸುವ ಮುಖ್ಯ ಉದ್ದೇಶವನ್ನು ಹೊಂದಿದೆ. ಪ್ರತಿಯೊಂದು ನಾಗರಿಕನೂ ಕೂಡ ಅಕ್ಷರಸ್ಥನಾಗಬೇಕು ಜೊತೆಗೆ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕು. ಇವುಗಳು ಇದರ ಮುಖ್ಯ ಉದ್ದೇಶವಾಗಿದೆ.
ಈ ಯೋಜನೆಯ ಪ್ರಾರಂಭಕ್ಕೆ ಮುಖ್ಯ ಕಾರಣಗಳು ಈ ಕೆಳಗಿನಂತಿವೆ:
•ಇಂದಿಗೂ ಕೂಡ ದೇಶದಲ್ಲಿ ಹಲವಾರು ಜನರು ವಿದ್ಯೆ ಇಲ್ಲದೆ ಪರದಾಡುತ್ತಿದ್ದಾರೆ. ಮೂಲಭೂತವಾಗಿ ಬೇಕಾದಂತಹ ಜ್ಞಾನವು ಕೂಡ ಇಲ್ಲದಂತಾಗಿದೆ.
ಹಾಗಾಗಿ 15 ವರ್ಷ ಮೇಲ್ಪಟ್ಟು ಅನಕ್ಷರಸ್ಥರಾಗಿರುವ ಜನರಿಗೆ ಕನಿಷ್ಠ ವಿದ್ಯೆಯಾದರೂ ಕಲಿಸಬೇಕು ಎಂಬುದು ಮೂಲ ಗುರಿಯಾಗಿದೆ.
•ಕೇವಲ ಸಾಮಾನ್ಯ ವಿದ್ಯೆ ಮಾತ್ರವಲ್ಲದೆ, ಡಿಜಿಟಲ್ ಜ್ಞಾನವನ್ನು ಕೂಡ ನೀಡಬೇಕು ಎಂಬುದಾಗಿದೆ.
ಡಿಜಿಟಲ್ ಸೇವೆಗಳ ಮೂಲಕ ಬ್ಯಾಂಕ್ ವ್ಯವಹಾರ ಮಾಡುವುದು. ಹಾಗೂ ಅನೇಕ ಆನ್ಲೈನ್ ಸೇವೆಗಳನ್ನು ಬಳಸಿಕೊಳ್ಳಲು ಜನರನ್ನು ತಯಾರು ಮಾಡುವಂಥದ್ದು ಉದ್ದೇಶವಾಗಿದೆ.
•ಜನರಿಗೆ ಕಾನೂನುಗಳ ಬಗ್ಗೆ ತಿಳುವಳಿಕೆ ನೀಡಿ ಅವರಿಗಾಗುವಂತಹ ಅನ್ಯಾಯಗಳನ್ನು ತಪ್ಪಿಸುವುದು ಈ ಯೋಜನೆಯ ಉದ್ದೇಶವೂ ಹೌದು.
•ಹಾಗೂ ನಿರುದ್ಯೋಗಿಗಳಿಗೆ ಕೆಲಸ ಸಿಗದಿರಲು ಅನಕ್ಷರತೆ ಕೂಡ ಒಂದು ಕಾರಣ. ಅಂತವರಿಗೆ ಸ್ವಯಂ ಉದ್ಯೋಗದ ಕೌಶಲ್ಯಗಳನ್ನು ವೃದ್ಧಿಸುವಂತೆ.
•ಆರೋಗ್ಯ, ಸ್ವಚ್ಛತೆ ಮತ್ತು ಕುಟುಂಬ ಕಲ್ಯಾಣದ ಕುರಿತಾಗಿ ತಿಳಿಸುವುದಾಗಿದೆ.
ಒಟ್ಟಾರೆಯಾಗಿ ಸಮಾಜದ ಪ್ರತಿಯೊಬ್ಬ ವ್ಯಕ್ತಿಯು ಮುಖ್ಯ ವಾಹಿನಿಗೆ ಬರಬೇಕು ಎಂಬುದು ಈ ಯೋಜನೆಯ ಉದ್ದೇಶವಾಗಿದೆ.
ಈ ಯೋಜನೆಗೆ ಸಂಬಂಧಪಟ್ಟಂತೆ ಐದು ಪ್ರಮುಖ ಸ್ಥಂಭಗಳು ಈ ರೀತಿಯಾಗಿವೆ:
•15 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೂಡ ಸಾಕ್ಷರತೆಯನ್ನು ಒದಗಿಸುವಂತದ್ದು. ಜೊತೆಗೆ ಸಾಮಾನ್ಯವಾಗಿ ಅಗತ್ಯವಿರುವಂತಹ ಲೆಕ್ಕಾಚಾರದ ಕುರಿತಾಗಿ ಅರಿವು ಮೂಡಿಸುವುದು.
•ಪ್ರತಿಯೊಬ್ಬರಿಗೂ ಕೂಡ ಹಣಕಾಸು ಸಾಕ್ಷರತೆ ನೀಡುವುದು.ಅಂದರೆ ಬ್ಯಾಂಕ್ ವ್ಯವಹಾರದ ಕುರಿತಾಗಿ ತಿಳಿಸುವುದು. ಮತ್ತು ಸಾಲ, ಉಳಿತಾಯಗಳ ಜ್ಞಾನವನ್ನು ನೀಡುವುದು.
ಹಾಗೂ ಆನ್ಲೈನ್ ಸೇವೆ, ಡಿಜಿಟಲ್ ಬ್ಯಾಂಕಿಂಗ್, ಕಾನೂನಿನ ಅರಿವು ಮತ್ತು ತಮ್ಮ ಯೋಗಕ್ಷೇಮದ ಕುರಿತಾಗಿ ತಿಳಿಸುವುದು.
•ಶಿಕ್ಷಣವನ್ನು ಪಡೆಯದವರಿಗೆ ಮೂರನೇ, ಐದನೇ ಮತ್ತು ಎಂಟನೇ ತರಗತಿಗೆ ಸಂಬಂಧಪಟ್ಟಂತಹ ಜ್ಞಾನವನ್ನು ನೀಡುವುದು.
•ವೃತ್ತಿಪರ ಕೌಶಲ್ಯದ ಅಭಿವೃದ್ಧಿ ಮಾಡುವುದು. ಸ್ವಯಂ ಉದ್ಯೋಗಕ್ಕೆ ಸಹಾಯ ಮಾಡುವ ಜೊತೆಗೆ ಸ್ಥಳೀಯವಾಗಿ ಉದ್ಯೋಗವನ್ನು ನೀಡುವಂತದ್ದು.
•ಕಲಿಯುವವರ ಆಸಕ್ತಿಗಳಿಗೆ ಅನುಸಾರವಾಗಿ ಕ್ರೀಡೆ,ವಿಜ್ಞಾನ, ತಂತ್ರಜ್ಞಾನ, ಸಾಂಸ್ಕೃತಿಕ ಇತ್ಯಾದಿ ಕ್ಷೇತ್ರಗಳನ್ನು ಉತ್ತೇಜಿಸುವುದು. ಹಾಗೂ ನಿರಂತರವಾಗಿ ಕಲಿಕೆಯಲ್ಲಿರುವಂತೆ ಮಾಡುವುದು.
ಯೋಜನೆಯಿಂದ ಲಾಭ ಪಡೆಯುವವರು:
•ಮುಖ್ಯವಾಗಿ ಕಲಿಯುವವರು ಈ ಯೋಜನೆಯಿಂದ ಲಾಭ ಪಡೆಯುತ್ತಾರೆ.
>15 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ಭಾರತೀಯ ನಾಗರಿಕರು.
>ಅರ್ಧದಲ್ಲೇ ಶಾಲೆ ಬಿಟ್ಟವರು ಜೊತೆಗೆ ತಮ್ಮ ಶಿಕ್ಷಣವನ್ನು ಮುಂದುವರಿಸಲು ಬಯಸುವವರು.
>ಶಿಕ್ಷಣದ ಅವಕಾಶ ದೊರೆಯದಂತಹ ಗ್ರಾಮೀಣ ಭಾಗದ ಹಿಂದುಳಿದ ವರ್ಗದ ಜನರು ಮತ್ತು ಮಹಿಳೆಯರು.
•ಸ್ವಯಂಸೇವಕರು
>ವಿದ್ಯಾರ್ಥಿಗಳಿಗೆ ಸಮಾಜಕ್ಕೆ ಸಹಾಯ ಮಾಡುವಂತಹ ಅವಕಾಶ ಈ ಮೂಲಕ ಸಿಗುತ್ತದೆ. ಜೊತೆಗೆ ಇಲ್ಲಿ ವಿದ್ಯೆಗೆ ಸಹಾಯ ಮಾಡುವುದರಿಂದಾಗಿ ಅವರಿಗೆ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚುವರಿ ಅಂಕಗಳು ಕೂಡ ಸಿಗಬಹುದು.
>ಶಿಕ್ಷಕರು ಅಥವಾ ನಿವೃತ್ತ ನೌಕರರು ಕೂಡ ಸಮಾಜದ ಸೇವೆಯನ್ನು ಈ ಮೂಲಕ ಮಾಡಬಹುದು.
>ಹಾಗೂ ಸೇವೆ ಮಾಡುವವರಿಗೆ ಸರ್ಕಾರದಿಂದ ಅಧಿಕೃತ ಪ್ರಮಾಣ ಪತ್ರ ದೊರೆಯುತ್ತದೆ.
•ದೇಶಕ್ಕೆ ಅನುಕೂಲ
>ಈ ಯೋಜನೆಯಿಂದಾಗಿ ದೇಶದಲ್ಲಿ ಪ್ರತಿಶತ 100 ಸಾಕ್ಷರತಾ ದರವನ್ನು ತಲುಪಬಹುದು.
>ಹಾಗೂ ಆನ್ ಲೈನ್ ನಲ್ಲಿ ನಡೆಯುವಂತಹ ಮೋಸಗಳನ್ನು ತಡೆಗಟ್ಟಬಹುದಾಗಿದೆ. ಎಲ್ಲರಿಗೂ ಬ್ಯಾಂಕಿಂಗ್ ಮತ್ತು ಹಣಕಾಸಿನ ಜ್ಞಾನ, ಡಿಜಿಟಲ್ ಜ್ಞಾನ ಇರುವುದರಿಂದ ವಂಚನೆಗಳನ್ನು ತಡೆಯಬಹುದಾಗಿದೆ.
ಈ ಯೋಜನೆಯ ಪ್ರಮುಖ ವೈಶಿಷ್ಟ್ಯತೆಗಳು ಈ ಕೆಳಗಿನಂತಿವೆ:
ಸ್ವಯಂ ಸೇವೆ:
ಈ ಯೋಜನೆಗೆ ಸಂಬಂಧಪಟ್ಟಂತೆ ಪ್ರತ್ಯೇಕವಾಗಿ ಶಿಕ್ಷಕರನ್ನು ನೇಮಿಸುವುದಿಲ್ಲ.
ಇಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ನೆಹರು ಕೇಂದ್ರದ ಸ್ವಯಂ ಸೇವಕರು ಅದು ಯಾವುದೇ ರೀತಿಯ ಸ್ವಯಂಸೇವಕರು ಕೂಡ ಉಚಿತವಾಗಿ ಪಾಠ ಮಾಡಬಹುದು.
ಡಿಜಿಟಲ್ ತಂತ್ರಜ್ಞಾನದ ಬಳಕೆ :
ಇಲ್ಲಿ ಉಲ್ಲಾಸ್ ಯೋಜನೆಯ ತಮ್ಮದೇ ಆದ ಪ್ರತ್ಯೇಕ ಮೊಬೈಲ್ ಅಪ್ಲಿಕೇಶನ್ ಅನ್ನು ಹೊಂದಿದೆ. ಈ ಅಪ್ಲಿಕೇಶನ್ ಮೂಲಕ ಶಿಕ್ಷಕರು ಮತ್ತು ಕಲಿಯುವವರು ಕೂಡ ನೋಂದಾವಣೆ ಮಾಡಿಕೊಳ್ಳಬಹುದು.
ಹಾಗೂ ದೀಕ್ಷಾ ಆನ್ಲೈನ್ ಪೋರ್ಟಲ್ ನಲ್ಲಿ ಕಲಿಯುವಿಕೆಗೆ ಅಗತ್ಯವಾದಂತಹ ಕಲಿಕಾ ಸಾಮಗ್ರಿಗಳು ಉಚಿತವಾಗಿ ದೊರೆಯುತ್ತದೆ.
ಜನಾಂದೋಲನ :
ಈ ಯೋಜನೆಯ ಪ್ರಮುಖವಾಗಿ ಜನ್ ಜನ್ ಸಾಕ್ಷರ್ ಎಂಬ ಘೋಷ ವಾಕ್ಯದೊಂದಿಗೆ ಜಾರಿಯಾಗಿದೆ. ಇಲ್ಲಿ ಪ್ರತಿಯೊಬ್ಬರನ್ನು ಸಾಕ್ಷರರನ್ನಾಗಿ ಮಾಡಿ ಸಾಮೂಹಿಕ ಜನಾಂದೋಲನ ನಡೆಸುವುದು ಇದರ ಉದ್ದೇಶವಾಗಿದೆ.
ಸುಲಭವಾದ ಸಮಯದ ತರಗತಿಗಳು :
ಇಲ್ಲಿ ಕಲಿಯುವವರು ದಿನಗೂಲಿ ನೌಕರರು, ಗೃಹಿಣಿಯರು ಮತ್ತು ಇತರರು ಆಗಿರುವ ಕಾರಣದಿಂದಾಗಿ ಕಲಿಯುವಿಕೆಗೆ ನಿರ್ದಿಷ್ಟ ಸಮಯ ಇರುವುದಿಲ್ಲ.
ಪ್ರತಿಯೊಬ್ಬರ ಸಮಯಕ್ಕೆ ತಕ್ಕಂತೆ ವಾರಾಂತ್ಯದಲ್ಲಿ ಅಥವಾ ಸಂಜೆ ಸಮಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ಅಥವಾ ಸಮುದಾಯ ಭವನಗಳಲ್ಲಿ ಈ ತರಗತಿಗಳು ನಡೆಯುತ್ತವೆ.
ಅಧಿಕೃತ ಪ್ರಮಾಣೀಕರಣ :
ರಾಷ್ಟ್ರೀಯ ಮುಕ್ತ ಶಾಲಾ ಶಿಕ್ಷಣ ಸಂಸ್ಥೆ (NIOS) ಮೂಲಕ ವರ್ಷಕ್ಕೆ ಎರಡು ಬಾರಿ ಸಾಕ್ಷರತಾ ಪರೀಕ್ಷೆಯನ್ನು ನಡೆಸಲಾಗುತ್ತದೆ. ಹಾಗೂ ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಅಧಿಕೃತ ಸಾಕ್ಷರತಾ ಪ್ರಮಾಣಪತ್ರವನ್ನು ನೀಡಲಾಗುತ್ತದೆ.
ಯೋಜನೆಗೆ ಸಂಬಂಧಿಸಿದಂತೆ 2025 26 ರಲ್ಲಿ ಆದಂತಹ ಪ್ರಮುಖ ವಿದ್ಯಮಾನಗಳು:
•2026 ಜುಲೈ 8ರಂದು ಉತ್ತರಖಂಡ ರಾಜ್ಯವನ್ನು ಸಂಪೂರ್ಣ ಸಾಕ್ಷರತಾ ರಾಜ್ಯ ಎಂದು ಘೋಷಿಸಲಾಯಿತು. ಇದು ಸಾಕ್ಷರತಾ ರಾಜ್ಯಗಳಲ್ಲಿ ಆರನೇ ರಾಜ್ಯವಾಗಿ ಹೊರಹೊಮ್ಮಿದೆ. ಹಾಗೂ ಇಲ್ಲಿ ಶೇಕಡ 98 ಕ್ಕಿಂತ ಹೆಚ್ಚು ವಯಸ್ಕರು ಸಾಕ್ಷರರಾಗಿದ್ದಾರೆ.
•ಸಾಕ್ಷರತೆಯನ್ನು ಸಾಧಿಸಿದ ಇತರ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ರೀತಿ ಇವೆ:
>ಮೇ 2026ರಲ್ಲಿ ಸಿಕ್ಕಿಂ ರಾಜ್ಯವು 99.82 ಶೇಕಡ ಸಾಕ್ಷರತೆಯನ್ನು ಹೊಂದುವ ಮೂಲಕ ಐದನೇ ರಾಜ್ಯವಾಗಿದೆ.
>2026 ಜನವರಿಯಲ್ಲಿ ಅಂಡಮಾನ್ ಮತ್ತು ನಿಕೋಬಾರ್ ಶೇಕಡ 99 ರಷ್ಟು ಸಾಕ್ಷರತಾ ದರವನ್ನು ಹೊಂದಿದೆ.
> ಚಂಡಿಗಡ ಡಿಸೆಂಬರ್ 2025ರಲ್ಲಿ ಶೇಕಡ 99.93 ಸಾಕ್ಷರತೆಯನ್ನು ಸಾಧಿಸಿದೆ.
>ಇದೆಲ್ಲಕ್ಕಿಂತಲೂ ಮೊದಲೇ ಗೋವಾ, ಮಿಜೋರಾಂ ಹಾಗೂ ಸಾಕ್ಷರತೆಯನ್ನು ಸಾಧಿಸಿರುವ ರಾಜ್ಯಗಳಾಗಿವೆ.
•ಪರೀಕ್ಷೆಯ ಫಲಿತಾಂಶಗಳು
>ಆಂಧ್ರ ಪ್ರದೇಶ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ , ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳ ಫಲಿತಾಂಶವನ್ನು ಜುಲೈ 5, 2026 ರಂದು ಪ್ರಕಟಿಸಲಾಯಿತು.
ಹಾಗೂ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನ ಪರೀಕ್ಷೆ ಫಲಿತಾಂಶವನ್ನು ಉಲ್ಲಾಸ್ ಪೋರ್ಟಲ್ ಅಡಿಯಲ್ಲಿ ಬಿಡುಗಡೆ ಮಾಡಲಾಗಿದೆ.
•ಯೋಜನೆಯ ದಾಖಲೆ ಮತ್ತು ಪ್ರಗತಿ
>ಇದುವರೆಗೂ ದೇಶದಾದ್ಯಂತ 3 ಕೋಟಿಗೂ ಹೆಚ್ಚು ಅನಕ್ಷರಸ್ಥರನ್ನು ಈ ಯೋಜನೆಯ ಅಡಿಯಲ್ಲಿ ನೋಂದಾಯಿಸಲಾಗಿದೆ.
>ಹಾಗೂ ಈ ಪೋರ್ಟಲ್ ಅಡಿಯಲ್ಲಿ ಕೋಟ್ಯಾಂತರ ಶಿಕ್ಷಕರು, ಸ್ವಯಂ ಸೇವಕರು ಹಾಗೂ ಕಲಿಯುವವರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ.
ಕೇವಲ ಕಲಿಯುವವರು ಮತ್ತು ಸ್ವಯಂಸೇವಕರು ಅಷ್ಟೇ ಅಲ್ಲದೆ ಸಮಾಜಕ್ಕೂ ಕೂಡ ಲಾಭಗಳಿವೆ.
ಅವು ಈ ಕೆಳಗಿನಂತೆ ಇವೆ:
•ಇಲ್ಲಿ ಜನರಿಗೆ ಪ್ರತಿಯೊಂದು ಬ್ಯಾಂಕಿಂಗ್ ಮತ್ತು ಡಿಜಿಟಲ್ ಜ್ಞಾನ ಸಿಗುವುದರಿಂದಾಗಿ ಅವರು ಸ್ವಾವಲಂಬಿಗಳಾಗುತ್ತಾರೆ.
•ಹಾಗೂ ಯಾವುದೇ ರೀತಿಯ ಆನ್ಲೈನ್ ವಂಚನೆಗಳಿಗೆ ಜನರು ಬಲಿಯಾಗುವುದು ತಪ್ಪುತ್ತದೆ.
•ಸಮಾಜದಲ್ಲಿ ಇರುವಂತಹ ಅನಕ್ಷರಸ್ಥರಲ್ಲಿ ಹೆಚ್ಚಿನ ಪಾಲು ಮಹಿಳೆಯರದ್ದಾಗಿದೆ.
•ಈ ನಿಟ್ಟಿನಲ್ಲಿ ಮಹಿಳೆಯರ ಸಾಕ್ಷರತಾ ದರವನ್ನು ಹೆಚ್ಚಿಸಬಹುದಾಗಿದೆ. ಹಾಗೂ ಅವರು ಈ ಮೂಲಕ ಸಮಾಜದಲ್ಲಿ ಧೈರ್ಯವಾಗಿ ಬದುಕಬಹುದು ಮತ್ತು ತಮ್ಮ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಬಹುದಾಗಿದೆ.
•ಇಲ್ಲಿ ಕಾನೂನಿನ ಅರಿವನ್ನು ಮೂಡಿಸಲು ಸುಲಭವಾಗಿದೆ. ಹಾಗೂ ಇದರಿಂದಾಗಿ ಜನರು ತಮ್ಮ ಹಕ್ಕುಗಳ ರಕ್ಷಣೆ ಮಾಡಿಕೊಳ್ಳುತ್ತಾರೆ. ಜೊತೆಗೆ ಸಣ್ಣಪುಟ್ಟ ಅಪರಾಧಗಳು ಶೋಷಣೆಗಳು ಕೂಡ ಕಡಿಮೆಯಾಗುತ್ತದೆ.
•ಯುವ ಜನತೆಯು ವಯಸ್ಕರ ಶಿಕ್ಷಣ ನೀಡುವುದರಿಂದಾಗಿ ಅವರ ನಡುವೆ ಪರಸ್ಪರ ಬಾಂಧವ್ಯಗಳು ಹೆಚ್ಚುತ್ತವೆ. ಹಾಗೂ ಈ ಜನಾಂಗೋಲನ ಕ್ರಮದಿಂದಾಗಿ ಜನರಲ್ಲಿ ಒಗ್ಗಟ್ಟು ಮೂಡಿಸಲು ಸಹಾಯವಾಗುತ್ತದೆ.
•ವಿದ್ಯೆಯು ಆರೋಗ್ಯದ ಕುರಿತಾಗಿ ತಿಳಿಸಿ ಸಮಾಜದ ಸ್ವಚ್ಛತೆ, ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದೆ.
•ಇಲ್ಲಿ ಸ್ಥಳೀಯ ಉದ್ಯೋಗ ಮತ್ತು ಸ್ವಯಂ ಉದ್ಯೋಗಗಳಿಗೆ ಅವಕಾಶಗಳಿರುತ್ತವೆ. ಹಾಗೂ ಇದರಿಂದ ಬಡತನವನ್ನು ನಿರ್ಮೂಲನೆ ಮಾಡುವುದು. ಜೊತೆಗೆ ಆರ್ಥಿಕವಾಗಿ ದೇಶವು ಬೆಳೆಯಲು ಸಹಾಯವಾಗುತ್ತದೆ.
ಈ ರೀತಿಯಾಗಿ ಕೇವಲ ಕಲಿಯುವವರು ಮತ್ತು ಕಲಿಸುವವರಿಗೆ ಮಾತ್ರವೇ ಉಲ್ಲಾಸ್ ಯೋಜನೆಯು ಸಹಕಾರಿಯಾಗಿಲ್ಲ. ಜೊತೆ ಜೊತೆಗೆ ಇದು ಸಮಾಜ ಮತ್ತು ದೇಶಕ್ಕೂ ಕೂಡ ಒಂದು ಮಹತ್ವದ ಹೆಜ್ಜೆಯಾಗಿದೆ.
ಈ ರೀತಿ ಯೋಜನೆಗಳಿಂದಾಗಿ ಸಮಾಜವು ಉನ್ನತ ದಿಕ್ಕಿನೆಡೆಗೆ ಸಾಗುತ್ತಿದೆ. ಹಾಗೂ ಈ ಯೋಜನೆಗಳು ದೇಶದ ಸರ್ವತೋಮುಖ ಬೆಳವಣಿಗೆ ಮತ್ತು ಪ್ರಗತಿಗಳಿಗೆ ದಾರಿ ದೀಪವಾಗಲಿದೆ.
ಇನ್ನಷ್ಟು ಮಾಹಿತಿಗಾಗಿ: ULLAS
ಇದನ್ನು ಓದಿ: ಮುಟ್ಟಿನ ಸಮಸ್ಯೆಗೆ 10 ಪರಿಹಾರಗಳು