India New Zealand Summit 2026: ಜುಲೈ 10 ಮತ್ತು 11, 2026 ಆಕ್ಲೆಂಡ್‌ನಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವೆ ಶೃಂಗಸಭೆ ನಡೆಯಿತು. ಈ ಶೃಂಗಸಭೆಯು ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ನ್ಯೂಜಿಲ್ಯಾಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ನಡುವೆ ನಡೆದಿರುತ್ತದೆ.

India New Zealand Summit 2026: ಈ ಶೃಂಗ ಸಭೆಯು ಒಂದು ದ್ವಿಪಕ್ಷೀಯ ಶೃಂಗಸಭೆಯಾಗಿದೆ. ಹಾಗೂ ಕಳೆದ 40 ವರ್ಷಗಳಿಂದ, ಮೊಟ್ಟ ಮೊದಲ ಬಾರಿಗೆ ನ್ಯೂಜಿಲ್ಯಾಂಡ್ ಗೆ ಭಾರತದ ಪ್ರಧಾನಿ ಭೇಟಿ ನೀಡಿರುವಂತದ್ದು.
ಪ್ರಧಾನಿ ಮೋದಿ ಅವರು ಕೈಗೊಂಡಂತಹ ಅಂತಾರಾಷ್ಟ್ರೀಯ ಪ್ರವಾಸದಲ್ಲಿ, ಕೊನೆಯ ಹಂತವಾಗಿ ನ್ಯೂಜಿಲ್ಯಾಂಡ್ ಗೆ ಭೇಟಿ ನೀಡಿದರು.
ಇದಕ್ಕೆ ಸಂಬಂಧಪಟ್ಟಂತೆ ದ್ವಿಪಕ್ಷೀಯ ಸಭೆಯು ಸರ್ಕಾರಿ ಮನೆಯಲ್ಲಿ ನಡೆದಿರುತ್ತದೆ. ಮತ್ತು ಸಮುದಾಯ ಕಾರ್ಯಕ್ರಮವು ಸ್ಪಾರ್ಕ್ ಅರೆನಾದಲ್ಲಿ ನಡೆದಿರುತ್ತದೆ.
ಈ ಒಂದು ಶೃಂಗಸಭೆಯಲ್ಲಿ ಒಟ್ಟು 18 ಪ್ರಮುಖ ನಿರ್ಧಾರಗಳು ಮತ್ತು 10 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.
Earlier today, met New Zealand’s Leader of the Opposition, Mr. Chris Hipkins. The discussion covered key aspects of our strategic partnership, including trade, technology and people-to-people ties. Strong bipartisan support for our relationship remains one of its defining… pic.twitter.com/eEPQXjYamb
— Narendra Modi (@narendramodi) July 11, 2026
India New Zealand Summit 2026: ಅವುಗಳು ಇಂತಿವೆ:
•ಮುಕ್ತ ವ್ಯಾಪಾರ:
•ಎರಡು ದೇಶಗಳು ಮುಕ್ತ ವ್ಯಾಪಾರ ಒಪ್ಪಂದಕ್ಕೆ (Free Trade Agreement) ಸಹಿ ಹಾಕಿವೆ.
•ಒಟ್ಟಾರೆಯಾಗಿ ನ್ಯೂಜಿಲ್ಯಾಂಡ್ ನಿಂದ ಭಾರತಕ್ಕೆ ಶೇಕಡ 57 ರಷ್ಟು ರಫ್ತು ಆಗುತ್ತದೆ. ಈ ಒಪ್ಪಂದದ ಅಡಿಯಲ್ಲಿ ಮೊದಲ ದಿನದಿಂದಲೇ ಈ ಎಲ್ಲಾ ರಫ್ತುಗಳಿಗೆ ಸುಂಕ ಇರುವುದಿಲ್ಲ.
•2030ರ ಸಮಯದಲ್ಲಿ ₹35,000 ಕೋಟಿಯ ತನಕ ಈ ದ್ವಿಪಕ್ಷೀಯ ವ್ಯವಹಾರವನ್ನು ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ.
•ಈ ಒಪ್ಪಂದದಿಂದಾಗಿ ವ್ಯಾಪಾರದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ಮತ್ತು ಮಾರುಕಟ್ಟೆಯನ್ನು ಮುಕ್ತವಾಗಿ ಪ್ರವೇಶ ಮಾಡಬಹುದು.
•ರಕ್ಷಣೆ ಮತ್ತು ಭದ್ರತೆ:
•ಭಾರತೀಯ ನೌಕಾಪಡೆಗಳು ಮತ್ತು ನ್ಯೂಜಿಲ್ಯಾಂಡ್ ನ ರಕ್ಷಣಾ ಪಡೆಗಳ ಬೇಸ್ ಗಳನ್ನು ಪರಸ್ಪರವಾಗಿ ಬಳಸಿಕೊಳ್ಳುವಂತೆ ಒಪ್ಪಂದ.
•ಇಂಡೋ ಪೆಸಿಫಿಕ್ ವಲಯದಲ್ಲಿ ಜಂಟಿಯಾಗಿ ನೌಕಾ ತರಬೇತಿಯನ್ನು ನೀಡುವುದು.
•ಮತ್ತು ಕಡಲ ಭದ್ರತಾ ಸಂವಾದವನ್ನು ಪ್ರಾರಂಭ ಮಾಡಲು ನಿರ್ಧರಿಸಲಾಗಿದೆ.
• ನಾಟಿಕಲ್ ಕಾರ್ಟೋಗ್ರಫಿ ಮತ್ತು ಹೈಡ್ರೋಗ್ರಫಿ ಕ್ಷೇತ್ರದಲ್ಲಿ ಜಂಟಿಯಾಗಿ ನಕ್ಷೆ ತಯಾರಿಕೆ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ.
•ಕ್ರೀಡೆ ಮತ್ತು ಪ್ರವಾಸೋದ್ಯಮ:
•ಕ್ರೀಡೆಗೆ ಸಂಬಂಧಪಟ್ಟಂತಹ ಅಭಿವೃದ್ಧಿ ಮತ್ತು ಕ್ರೀಡಾಪಟುಗಳ ಅಭಿವೃದ್ಧಿಗಾಗಿ ಜಂಟಿ ಕ್ರೀಡಾ ಕ್ರಿಯಾ ಯೋಜನೆಯ ವಿನಿಮಯ ಮಾಡಿಕೊಳ್ಳುವುದು.
•ಎರಡು ದೇಶಗಳ ನಡುವೆ ಪ್ರವಾಸ ಉದ್ಯಮದ ಬೆಳವಣಿಗೆ ಹಾಗೂ ಸಾಂಸ್ಕೃತಿಕ ವಿನಿಮಯಕ್ಕಾಗಿ ಪ್ರವಾಸೋದ್ಯಮದ ಒಪ್ಪಂದ ಮಾಡಿಕೊಂಡಿದ್ದಾರೆ.
•ಪಶು ಸಂಗೋಪನೆ ಮತ್ತು ಕೃಷಿ:
•ಈ ಒಂದು ಪಶು ಸಂಗೋಪನೆ ಕ್ಷೇತ್ರದಲ್ಲಿ ಪ್ರಮುಖವಾಗಿ ತಾಂತ್ರಿಕ ಸಹಕಾರ ಮತ್ತು ಜ್ಞಾನವನ್ನು ವಿನಿಮಯ ಮಾಡಿಕೊಳ್ಳುವ ಒಪ್ಪಂದ.
•ಚರ್ಮ ಮತ್ತು ಜವಳಿ ಉದ್ಯಮಗಳಿಗೆ ಹೆಚ್ಚಿನ ರಫ್ತು ಮಾಡಲು ಉತ್ತೇಜಿಸಲಾಗಿದೆ.
•ತಂತ್ರಜ್ಞಾನ ,ಕೃಷಿ, ಶಿಕ್ಷಣ , ಡಿಜಿಟಲ್ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಹೂಡಿಕೆ ಮತ್ತು ಉದ್ಯಮವನ್ನು ವಿಸ್ತರಿಸಲು ನಿರ್ಧರಿಸಲಾಗಿದೆ.
•ವಿಪತ್ತು ನಿರ್ವಹಣೆ:
•ನ್ಯೂಜಿಲ್ಯಾಂಡ್ ನ ತುರ್ತು ನಿರ್ವಹಣಾ ಸಂಸ್ಥೆ (NEMA) ಹಾಗೂ ಭಾರತದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ (NDMA) ಗಳ ನಡುವೆ ಭೂಕಂಪನದ ಸ್ಥಿತಿ ಸ್ಥಾಪಕತೆ ಮತ್ತು ಸುನಾಮಿಯ ಸಿದ್ಧತೆಗಾಗಿ ಒಪ್ಪಂದ ನಡೆದಿದೆ.
•ಬೃಹತ್ ಹೂಡಿಕೆ:
•15 ವರ್ಷಗಳಲ್ಲಿ ಭಾರತದಲ್ಲಿ ನ್ಯೂಜಿಲ್ಯಾಂಡ್ $20 ಬಿಲಿಯನ್ ಅಮೆರಿಕನ್ ಡಾಲರ್, ಹೂಡಿಕೆ ಮಾಡುವುದಾಗಿ ಒಪ್ಪಂದ ನಡೆದಿದೆ.
•ಹಾಗೂ ವಿಕಸಿತ್ ಭಾರತ್ 2047 ಗುರಿಯನ್ನು ತಲುಪುವ ಉದ್ದೇಶವಿದೆ. ಹಾಗಾಗಿ ಎರಡೂ ದೇಶಗಳ ಖಾಸಗಿ ಹೂಡಿಕೆ ಮತ್ತು ಖಾಸಗಿ ವಲಯಗಳನ್ನು ಪ್ರೋತ್ಸಾಹಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಭಾರತ ಹಾಗೂ ನ್ಯೂಜಿಲ್ಯಾಂಡ್ ದೇಶದ ಈ ಒಪ್ಪಂದಗಳು ಭಾರತದ ರಾಜ ತಾಂತ್ರಿಕ ಯಶಸ್ಸು ಎಂದು ಹೇಳಬಹುದು. 40 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿಯು ನ್ಯೂಜಿಲ್ಯಾಂಡ್ ಗೆ ಭೇಟಿ ನೀಡಿರುವಂಥದ್ದು. ಇದು ಭಾರತ ಮತ್ತು ನ್ಯೂಜಿಲ್ಯಾಂಡ್ ನ ಸರ್ವತೋಮುಖ ಅಭಿವೃದ್ಧಿಗೆ ಸಾಕ್ಷಿಯಾಗಲಿದೆ.
Incredible enthusiasm and affection at the community programme in Auckland. https://t.co/u4cv0Mx4ZJ
— Narendra Modi (@narendramodi) July 11, 2026
ಭಾರತಕ್ಕೆ ಇದರಿಂದ ಆಗುವ ಲಾಭಗಳು:
•ಚೀನಾ ದೇಶಕ್ಕೆ ತಂತ್ರಾತ್ಮಕ ಸಂದೇಶ: ಫೆಸಿಫಿಕ್ ದ್ವೀಪ ರಾಷ್ಟ್ರಗಳು ಮತ್ತು ಇಂಡೋ ಫೆಸಿಫಿಕ್ ಪ್ರದೇಶಗಳಲ್ಲಿ ಚೀನಾ ತನ್ನ ಆಕ್ರಮಣಕಾರಿ ವಿಸ್ತರಣೆಯನ್ನು ಹೆಚ್ಚಿಸುತ್ತಿದೆ. ಇದೀಗ ಭಾರತವು ಇದಕ್ಕೆ ಪರ್ಯಾಯವಾಗಿ ತನ್ನನ್ನು ಬಲಪಡಿಸಿಕೊಂಡಿದೆ.
•ಹಾಗೂ ಉಭಯ ದೇಶಗಳು ತಮ್ಮ ಒಪ್ಪಂದವನ್ನು ಕ್ರಾಂತಿಕಾರಿ ಮಟ್ಟಕ್ಕೆ ಏರಿಸಿದ್ದಾವೆ. ಇದರಿಂದಾಗಿ ಕಡಲಿಗೆ ಸಂಬಂಧಪಟ್ಟ ಭದ್ರತೆಯನ್ನು ಇನ್ನಷ್ಟು ಬಲಪಡಿಸಬಹುದಾಗಿದೆ.
VIDEO | Auckland: Addressing MEA briefing on Prime Minister Narendra Modi’s official visit to New Zealand, MEA Secretary (East) Rudrendra Tandon says, “Later, there was an interaction with members of the Indian and New Zealand business communities, followed by an elaborate gala… pic.twitter.com/IIll6NEVq0
— Press Trust of India (@PTI_News) July 11, 2026
ನೌಕಾಪಡೆಗೆ ಇನ್ನಷ್ಟು ಶಕ್ತಿ:
•ಶೃಂಗಸಭೆಯಲ್ಲಿ ಪರಸ್ಪರ ಲಾಜಿಸ್ಟಿಕ್ಸ್ ಬೆಂಬಲ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ.
•ಇದು ಭಾರತ ದೇಶಕ್ಕೆ ಬಹಳ ಪ್ರಮುಖವಾದ ಬೆಳವಣಿಗೆಯನ್ನು ಹೊಂದುವಂತೆ ಮಾಡುತ್ತದೆ. ಇದರಿಂದಾಗಿ ಭಾರತೀಯ ನೌಕಾ ಸೇನೆಯು ದಕ್ಷಿಣ ಪೆಸಿಫಿಕ್ ಮಹಾಸಾಗರದಲ್ಲಿ ನ್ಯೂಜಿಲ್ಯಾಂಡ್ ನ ಸಹಾಯ ಪಡೆಯಬಹುದು.
•ಅಂದರೆ ನ್ಯೂಜಿಲ್ಯಾಂಡ್ ನಿಂದ ಅಗತ್ಯವಾದ ಇಂಧನ ಮತ್ತು ಮಿಲಿಟರಿ ಬೇಸ್ ಗಳ ಸಹಾಯ ಪಡೆಯಬಹುದಾಗಿದೆ. ಈ ಬೆಳವಣಿಗೆಯು ಭಾರತ ದೇಶದ ರಕ್ಷಣಾ ವ್ಯವಸ್ಥೆಯನ್ನು ಇನ್ನಷ್ಟು ವಿಸ್ತರಿಸಿದಂತೆ ಕಾಣುತ್ತದೆ.
•ಹಾರ್ಮೋಜ್ ಜಲಸಂಧಿಯ ಮೂಲಕ ಮತ್ತೊಮ್ಮೆ ಸಂಪೂರ್ಣ ಜಾಗತಿಕ ವ್ಯವಹಾರವನ್ನು ಸ್ಥಾಪಿಸಲು ಈ ಮೂಲಕ ಕರೆ ನೀಡಲಾಗಿದೆ.
ವಿಕಸಿತ ಭಾರತಕ್ಕೆ ಸಹಾಯ:
•’ವಿಕಸಿತ್ ಭಾರತ್ 2047′ ಗುರಿ ತಲುಪಲು ನ್ಯೂಜಿಲೆಂಡ್ ಸಹಾಯ ಮಾಡುತ್ತದೆ. ಕೃಷಿ ,ಪಶು ಸಂಗೋಪನೆ, ತಾಂತ್ರಿಕ ಕ್ಷೇತ್ರ, ಹೀಗೆ ಹಲವಾರು ಕ್ಷೇತ್ರಗಳಲ್ಲಿ ಉಭಯ ದೇಶಗಳು ಒಪ್ಪಂದ ಮಾಡಿಕೊಂಡಿವೆ.
•ಹಾಗೂ ನ್ಯೂಜಿಲೆಂಡ್ ಭಾರತದಲ್ಲಿ ಅಮೆರಿಕನ್ ಡಾಲರ್ ಹೂಡಿಕೆ ಮಾಡಲಿದೆ. ಇದು ಭಾರತದ ಮೂಲ ಸೌಕರ್ಯದ ಬೆಳವಣಿಗೆಗೆ ಸಹಾಯ ಹಸ್ತ ನೀಡುತ್ತದೆ.
•ವಿಶ್ವಸಂಸ್ಥೆ ಮತ್ತು ಹಣಕಾಸು ಕ್ರಿಯಾ ಕಾರ್ಯಪಡೆ (FATF) ಸೇರಿದಂತೆ ಎಲ್ಲಾ ವೇದಿಕೆಗಳಲ್ಲೂ ತಮ್ಮೊಳಗಿನ ಸಹಕಾರವನ್ನು ಭದ್ರ ಪಡಿಸಲು ನಿರ್ಧರಿಸಲಾಯಿತು.
•ಸಂಶೋಧನೆಗೆ ಸಹಾಯ:
•ಭಾರತ ದೇಶದ ಧ್ರುವ ಮತ್ತು ಸಾಗರ ಸಂಶೋಧನಾ ಕೇಂದ್ರವು (NCPOR) ನ್ಯೂಜಿಲ್ಯಾಂಡ್ ನ ವಿಶ್ವವಿದ್ಯಾಲಯಗಳ ಜೊತೆ ಸೇರಿಕೊಂಡಿದೆ. ಈ ಮೂಲಕವಾಗಿ ಅಂಟಾರ್ಟಿಕಾ ವಲಯದಲ್ಲಿ ಜಂಟಿ ವಿಜ್ಞಾನ ಸಂಶೋಧನೆಗಳನ್ನು ನಡೆಸುತ್ತವೆ.
•ಭಾರತೀಯರ ರಕ್ಷಣೆ: ನ್ಯೂಜಿಲ್ಯಾಂಡ್ ನಲ್ಲಿ ಸುಮಾರು 2.5 ಲಕ್ಷಕ್ಕೂ ಹೆಚ್ಚು ಭಾರತೀಯರು ವಾಸವಾಗಿದ್ದಾರೆ. ಈ ಭಾರತೀಯರ ಸುರಕ್ಷತೆ ಮತ್ತು ವೀಸಾ ನಿಯಮದ ಸಡಿಲೀಕರಣಕ್ಕೆ ಶೃಂಗಸಭೆಯು ದಾರಿ ಮಾಡಿಕೊಟ್ಟಿದೆ.
ಹಾಗೂ ನ್ಯೂಜಿಲ್ಯಾಂಡ್ ರಾಷ್ಟ್ರದಲ್ಲಿ ಭಾರತ ವಿರೋಧಿ ಚಟುವಟಿಕೆಗಳು ಜೊತೆಗೆ ಭಯೋತ್ಪಾದನೆ ನಡೆಯುತ್ತಿದೆ. ಇವುಗಳ ನಿಗ್ರಹಕ್ಕಾಗಿ ಜಂಟಿ ಕಾರ್ಯ ಪಡೆಯನ್ನು ರಚಿಸಲಾಗುತ್ತದೆ. ಪ್ರಮುಖವಾಗಿ ಇದು ಈ ಶೃಂಗಸಭೆಯ ಮೂಲಕ ಭಾರತ ದೇಶಕ್ಕೆ ಸಿಕ್ಕಂತಹ ದೊಡ್ಡ ಗೆಲುವು ಎನ್ನಬಹುದಾಗಿದೆ.
ಭಯೋತ್ಪಾದನೆ ನಿಗ್ರಹಕ್ಕೆ ಶೂನ್ಯ ಸಹಿಷ್ಣುತೆ ಮತ್ತು ಸ್ಥಿರವಾದ ವಿಧಾನಕ್ಕೆ ಕರೆ ನೀಡಲಾಯಿತು.
PM @narendramodi, together with PM @chrisluxonmp, took a walkthrough of New Zealand’s innovative sports equipment display.
The leaders witnessed cutting-edge sports equipment and technologies, demonstrated by some of New Zealand’s leading athletes and sporting icons. pic.twitter.com/QojO32rfGC
— Randhir Jaiswal (@MEAIndia) July 11, 2026
ಇವಿಷ್ಟು ರಕ್ಷಣೆ, ಸಂಶೋಧನೆ ಹಾಗೂ ಇನ್ನಿತರ ವಿಷಯಗಳಿಗ ಸಂಬಂಧಸಿದ್ದಾಗಿದೆ. ಹೊರತಾಗಿ ಶಿಕ್ಷಣ, ತಂತ್ರಜ್ಞಾನ ಇನ್ನಿತರ ಕ್ಷೇತ್ರಗಳಲ್ಲೂ ಕೂಡ ಮುಖ್ಯ ಬೆಳವಣಿಗೆಗಳು ಉಂಟಾಗಿದೆ.
ಅವುಗಳು ಈ ಕೆಳಗಿನಂತಿವೆ:
•ಶಿಕ್ಷಣ ಮತ್ತು ಸಂಶೋಧನೆ:
ಎರಡು ದೇಶಗಳು ತಮ್ಮ ಉನ್ನತ ಶಿಕ್ಷಣ ಪದವಿಗಳನ್ನು ಕಡ್ಡಾಯವಾಗಿ ಗುರುತಿಸಬೇಕು. ಮತ್ತು ಮಾನ್ಯತೆ ನೀಡಬೇಕು ಎಂದು ಒಪ್ಪಂದ ಮಾಡಿಕೊಳ್ಳಲಾಗಿದೆ.
ಈ ಮೂಲಕವಾಗಿ ಭಾರತೀಯ ವಿದ್ಯಾರ್ಥಿಗಳಿಗೆ ನ್ಯೂಜಿಲ್ಯಾಂಡ್ ನಲ್ಲಿ ಸುಲಭವಾಗಿ ಉದ್ಯೋಗವನ್ನು ಪಡೆಯಬಹುದಾಗಿದೆ.
‘ಭಾರತ-ನ್ಯೂಜಿಲ್ಯಾಂಡ್ ಶಿಕ್ಷಣ ನಿಧಿ’ಯನ್ನು ಸ್ಥಾಪಿಸುವ ಮೂಲಕ ಜಂಟಿ ಸಂಶೋಧನೆಗಳನ್ನು ಉತ್ತೇಜಿಸಲಾಗಿದೆ.
ಐಐಟಿ ದೆಹಲಿ ಮತ್ತು ನ್ಯೂಜಿಲ್ಯಾಂಡ್ ನ ಆಕ್ಲೆಂಡ್ ವಿಶ್ವವಿದ್ಯಾಲಯಗಳ ನಡುವೆ ಜಂಟಿ ಸಂಶೋಧನಾ ಕೇಂದ್ರಗಳನ್ನು ಸ್ಥಾಪನೆ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ.
ತಂತ್ರಜ್ಞಾನ ಕ್ಷೇತ್ರ:
ಭಾರತದಲ್ಲಿ ಚಾಲ್ತಿಯಲ್ಲಿರುವ ಡಿಜಿಟಲ್ ಪಾವತಿ ವ್ಯವಸ್ಥೆ ಯುಪಿಐ ನ್ಯೂಜಿಲ್ಯಾಂಡ್ ನಲ್ಲಿ ಶೀಘ್ರವೇ ಪರಿಚಯಿಸಲಾಗುವುದು.
ಇದಕ್ಕಾಗಿ ಅಗತ್ಯವಿರುವಂತಹ ತಾಂತ್ರಿಕ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ.
ಭಾರತದಲ್ಲಿ ಇರುವಂತಹ ಡಿಜಿಟಲ್ ಇಂಡಿಯಾ ಮಾದರಿಯ ತಂತ್ರಜ್ಞಾನವನ್ನು, ನ್ಯೂಜಿಲ್ಯಾಂಡ್ ದೇಶದ ಸಾರ್ವಜನಿಕ ಸೇವೆಯಲ್ಲಿ ಬಳಸಿಕೊಳ್ಳಲು ನಿರ್ಧಾರ ಮಾಡಲಾಗಿದೆ. ಹಾಗೂ ಇದಕ್ಕೆ ಸಂಬಂಧಪಟ್ಟಂತಹ ತಾಂತ್ರಿಕ ಒಪ್ಪಂದವನ್ನು ಮಾಡಿಕೊಂಡಿದ್ದಾರೆ.
ಎಐ, ಸೈಬರ್ ಭದ್ರತೆ ಮತ್ತಿತರ ಕ್ಷೇತ್ರಗಳಲ್ಲಿ ಜಂಟಿ ಸ್ಟಾರ್ಟಪ್ ಗಳನ್ನು ಪ್ರೋತ್ಸಾಹಿಸಲು ನಿರ್ಧರಿಸಲಾಗಿದೆ.
My gratitude to PM Luxon, the Government and people of New Zealand for the exceptional warmth during this fruitful visit.
This visit, the first by an Indian Prime Minister in four decades, has opened an important new chapter in our relations. Our decision to elevate ties to a… pic.twitter.com/gCLPniBIe9
— Narendra Modi (@narendramodi) July 11, 2026
ಜನರ ವಲಸೆ ಮತ್ತು ಸಂಪರ್ಕ:
ಎರಡು ದೇಶಗಳ ನಡುವೆ ಉದ್ಯಮ ಮತ್ತು ಪ್ರವಾಸೋದ್ಯಮವನ್ನು ಉತ್ತೇಜನ ಗೊಳಿಸುವ ಸಲುವಾಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಸಲುವಾಗಿ ನೇರ ವಿಮಾನಯಾನ ಸಂಪರ್ಕವನ್ನು ಪ್ರಾರಂಭ ಮಾಡಲು ಹೊಸ ನಾಗರೀಕ ವಿಮಾನಯಾನ ಒಪ್ಪಂದಕ್ಕೆ ಸಹಿ ಮಾಡಲಾಗಿದೆ.
ಭಾರತದ ವಿದ್ಯಾರ್ಥಿಗಳು, ಸಂಶೋಧಕರು, ಉದ್ಯೋಗಿಗಳಿಗೆ ವೀಸಾ ಪ್ರಕ್ರಿಯೆಯನ್ನು ಸುಲಭಗೊಳಿಸುವುದು. ಮತ್ತು ಕಾನೂನು ಬಾಹಿರ ಅಕ್ರಮ ವಲಸೆಯನ್ನು ತಡೆಯಲು ವಲಸೆ ಮತ್ತು ಸಂಚಲನ ಪಾಲುದಾರಿಕೆ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ.
ಕೌಶಲ್ಯ ಮತ್ತು ಯುವ ಕ್ರೀಡಾಪಟುಗಳ ವಿನಿಮಯ ಹಾಗೂ ಚಲನಚಿತ್ರ ಜಂಟಿ ನಿರ್ಮಾಣ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ.
ಈ ರೀತಿಯಾಗಿ ಹಲವು ಒಪ್ಪಂದಗಳಿಗೆ ಸಹಿ ಮಾಡಲಾಗಿದೆ. ಇದು ಎರಡು ದೇಶಗಳಲ್ಲಿ ಹಲವಾರು ಬದಲಾವಣೆಗಳನ್ನು ತರುತ್ತವೆ. ಜೊತೆಗೆ ಎರಡು ದೇಶಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಇನ್ನಷ್ಟು ಮಾಹಿತಿಗಾಗಿ: PM INDIA WEBSITE
ಇದನ್ನು ಓದಿ: ULLAS scheme