Hydrogen Train India:ಭಾರತಕ್ಕೆ ಮೊದಲ ಹೈಡ್ರೋಜನ್ ರೈಲು!

Spread the love

Hydrogen Train India: 17 ಜುಲೈ 2026ರಂದು ಭಾರತದ ಮೊಟ್ಟ ಮೊದಲ ಹೈಡ್ರೋಜನ್ ಚಾಲಿತ ರೈಲು ಉದ್ಘಾಟನೆಗೊಳ್ಳಲಿದೆ. ಹರಿಯಾಣದ ಜಿಂದ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಹೊಸ ರೈಲಿಗೆ ಹಸಿರು ನಿಶಾನೆ ನೀಡಲಿದ್ದಾರೆ.

India's first Hydrogen Train
India’s first Hydrogen Train (Source-Indian railways)

Hydrogen Train India: ಈ ರೈಲು ಪರಿಸರ ಸ್ನೇಹಿಯಾಗಿದೆ. ಮತ್ತು ಯಾವುದೇ ರೀತಿಯ ಕಾರ್ಬನ್ ಅಂಶವನ್ನು ಹೊರಸೂಸದಂತಹ ಹಸಿರು ತಂತ್ರಜ್ಞಾನವಾಗಿದೆ. ಇದು ಸಾಮಾನ್ಯವಾಗಿ ಡೀಸೆಲ್ ಇಂಜಿನ್ ಗಿಂತ ವಿಭಿನ್ನವಾಗಿದೆ. ಇಂಧನವನ್ನು ಸುಡುವ ಬದಲು ಇಲ್ಲಿ ವಿದ್ಯುತ್ ಅನ್ನು ಉತ್ಪಾದಿಸಲಾಗುತ್ತದೆ.

ಭಾರತದ ಈ ಮೊಟ್ಟ ಮೊದಲ ಹೈಡ್ರೋಜನ್ ರೈಲು ಹರಿಯಾಣ ರಾಜ್ಯದಲ್ಲಿ ಚಾಲನೆಗೊಳ್ಳಲಿದೆ. ಹರಿಯಾಣದ ಜಿಂದ್ ನಿಂದ ಸೋನಿಪತ್ ತನಕ ಬ್ರಾಡ್-ಗೇಜ್ ಮಾರ್ಗದಲ್ಲಿ ಚಲಿಸಲಿದೆ. ಈ ಮಾರ್ಗವು ಒಟ್ಟು 89 ಕಿಲೋಮೀಟರ್ ಗಳನ್ನು ಒಳಗೊಂಡಿದೆ.

ಭಾರತದ ಮೊದಲ ಹೈಡ್ರೋಜನ್ ಉತ್ಪಾದಕ ಘಟಕವನ್ನು ಜಿಂದ್ ಜಿಲ್ಲೆಯಲ್ಲಿ ಸ್ಥಾಪಿಸಲಾಗಿದೆ. ಈ ರೈಲಿಗೆ ಅಗತ್ಯವಿರುವಂತಹ ಹಸಿರು ಹೈಡ್ರೋಜನ್ ಇಂಧನವನ್ನು ಈ ಘಟಕದ ಮೂಲಕವೇ ಪೂರೈಸಲಾಗುತ್ತದೆ.

Hydrogen Train India:ಈ ರೈಲಿಗೆ ಸಂಬಂಧಪಟ್ಟಂತೆ ಪ್ರಮುಖ ಮಾಹಿತಿಗಳು:

 

•ಈ ರೈಲು ದಿನಕ್ಕೆ ಎರಡು ಬಾರಿ ಜಿಂದ್ ಹಾಗೂ ಸೋನಿಪತ್ ಮಾರ್ಗದಲ್ಲಿ ಓಡಾಡಲಿದೆ. ಒಟ್ಟಾರೆಯಾಗಿ ದಿನಕ್ಕೆ 356 km ಚಲಿಸುತ್ತದೆ.

•ಜಿಂದ್ ನಿಲ್ದಾಣದ ಬಳಿ ಭಾರತದ ಅತಿ ದೊಡ್ಡ ಮತ್ತು ಮೊದಲ ಹೈಡ್ರೋಜನ್ ರಿಫ್ಯುಯೆಲಿಂಗ್ ಸ್ಟೇಷನ್ ಇದೆ. ಈ ಮೂಲಕ ಇಂಧನವನ್ನು ರೈಲಿಗೆ ತುಂಬಿಸಲಾಗುತ್ತದೆ.

•ಈ ರೈಲಿಗೆ ಸಂಬಂಧಪಟ್ಟಂತಹ ತಾಂತ್ರಿಕ ನಿರ್ವಹಣೆಯನ್ನು ದೆಹಲಿಯ ಶಾಕುರ್ಬಸ್ತಿ ಡಿಪೋನಲ್ಲಿ ಮಾಡಲಾಗುತ್ತದೆ.

•2047 ರ ವೇಳೆಗೆ ದೇಶದಲ್ಲಿ ಸುಮಾರು 50 ಹೈಡ್ರೋಜನ್ ರೈಲುಗಳನ್ನು ಚಾಲ್ತಿಗೆ ತರಬೇಕೆಂಬ ಗುರಿಯನ್ನು ಹೊಂದಲಾಗಿದೆ.

•89 ಕಿಲೋಮೀಟರ್ ಚಲಿಸುವಾಗ 12 ಮಧ್ಯಂತರ ನಿಲ್ದಾಣಗಳಲ್ಲಿ ನಿಲ್ಲುತ್ತದೆ. ಮತ್ತು ಆ ನಿಲ್ದಾಣಗಳು ಈ ರೀತಿಯಾಗಿವೆ:

  • ಜಿಂದ್ ಜಂಕ್ಷನ್
  • ಜಿಂದ್ ಸಿಟಿ
  • ಪಾಂಡು ಪಿಂಡಾರ
  • ಲಲಿತ್ ಖೇರಾ
  • ಭಂಭೇವ
  • ಇಶಾಪುರ್ ಖೇರಿ
  • ಖಂಡ್ರಾಯ್
  • ಗೊಹಾನ
  • ರಬ್ರ
  • ಲತ್
  • ಮೋಹಾನಾ ಹರಿಯಾಣ
  • ಬರ್ವಾಸ್ನಿ
  • ಸೋನಿಪಥ್ ಜಂಕ್ಷನ್
ಈ ರೈಲಿನ ಸಂಖ್ಯೆ ಮತ್ತು ವೇಳಾಪಟ್ಟಿ: 

 

•ರೈಲಿನ ಸಂಖ್ಯೆ 74010 ( ಜಿಂದ್ ನಿಂದ ಸೋನಿಪತ್):

ಜಿಂದ್ ನಿಂದ ಹೊರಡುವ ಸಮಯ: ಬೆಳಿಗ್ಗೆ 7:40

ಸೋನಿಪತ್ ತಲುಪುವ ಸಮಯ: ಬೆಳಿಗ್ಗೆ 9:40

ಒಟ್ಟು ಪ್ರಯಾಣದ ಅವಧಿ: 2 ಗಂಟೆ

•ರೈಲಿನ ಸಂಖ್ಯೆ 74009 ( ಸೋನಿಪತ್ ಇಂದ ಜಿಂದ್ ಗೆ):

ಸೋನಿಪತ್ ಇಂದ ಹೊರಡುವ ಸಮಯ: 10:40 ಬೆಳಿಗ್ಗೆ

ಜಿಂದ್ ತಲುಪುವ ಸಮಯ: ಮಧ್ಯಾಹ್ನ 1:00 ಗಂಟೆ

ಒಟ್ಟು ಸಮಯ: 2 ಗಂಟೆ 20 ನಿಮಿಷ

ಇತರ ರೈಲುಗಳಿಗಿಂತ ಭಿನ್ನವಾಗಿದೆ: ಸಂಬಂಧಪಟ್ಟ ಅಂಶಗಳು ಕೆಳಗಿನಂತಿವೆ:

 

•ಹೈಡ್ರೋಜನ್ ರೈಲಿನ ಕೆಲಸದ ವಿಧಾನ: 

>ರೈಲಿನ ಮೇಲ್ಭಾಗದಲ್ಲಿ ಟ್ಯಾಂಕುಗಳು ಇರುತ್ತವೆ. ಆ ಟ್ಯಾಂಕ್ ಗಳಿಂದ ಹೈಡ್ರೋಜನ್ (H2) ಮತ್ತು ಪರಿಸರದಿಂದ ಆಮ್ಲಜನಕ(O2) ವನ್ನು ಇಂಧನ ಕೋಶಕ್ಕೆ (Fuel Cell) ಕಳುಹಿಸಲಾಗುತ್ತದೆ.

>ಇಂಧನ ಕೋಶದೊಳಗೆ ಹೋದಂತಹ ಹೈಡ್ರೋಜನ್ ಮತ್ತು ಆಮ್ಲಜನಕದ ನಡುವೆ ರಾಸಾಯನಿಕ ಕ್ರಿಯೆ ನಡೆಯುತ್ತದೆ. ಇದರಿಂದಾಗಿ ಎಲೆಕ್ಟ್ರಾನ್ ಗಳು ಬಿಡುಗಡೆಯಾಗುತ್ತವೆ. ಮತ್ತು ಇದು ನೇರ ವಿದ್ಯುತ್ ಪ್ರವಾಹವನ್ನು (Direct Current – DC) ಸೃಷ್ಟಿ ಮಾಡುತ್ತದೆ.

>ಹಾಗೂ ಸೃಷ್ಟಿ ಆದಂತಹ ವಿದ್ಯುತ್ ರೈಲಿನ ಇನ್ವರ್ಟರ್ ಮತ್ತು ಮೋಟಾರ್ ಗಳಿಗೆ ತಲುಪುತ್ತದೆ. ಈ ಮೂಲಕ ರೈಲು ಚಲಿಸುತ್ತದೆ.

>ರೈಲಿನಲ್ಲಿ ಲಿಥಿಯಂ-ಐಯಾನ್ ಎಂಬ ಬ್ಯಾಟರಿಗಳ ವ್ಯವಸ್ಥೆ ಇರುತ್ತದೆ. ಹಾಗೂ ಇದು ಹೆಚ್ಚುವರಿ ವಿದ್ಯುತ್ ಅನ್ನು ಹಿಡಿದಿಟ್ಟುಕೊಳ್ಳುತ್ತದೆ.

ರೈಲು ಬ್ರೇಕ್ ಹಾಕುವ ಸಮಯದಲ್ಲಿ ಉತ್ಪತ್ತಿಯಾದ ಶಕ್ತಿಯನ್ನು ಈ ಬ್ಯಾಟರಿಗಳು ಹಿಡಿದಿರುತ್ತವೆ. ಮತ್ತು ಅದನ್ನು ರೈಲು ನ ವೇಗವನ್ನು ಹೆಚ್ಚಿಸುವಾಗ ಬಳಸಲಾಗುತ್ತದೆ.

•ಹೈಡ್ರೋಜನ್ ರೈಲಿನ ವೈಶಿಷ್ಟ್ಯತೆ:

 

>ಈ ರೈಲಿನ ಚಲನೆಯಿಂದ ಉತ್ಪಾದನೆಯಾಗುವ ಏಕೈಕ ಉಪ ಉತ್ಪನ್ನ ಎಂದರೆ ನೀರು ಆಗಿರುತ್ತದೆ. ಹಾಗೂ ಇದರಿಂದ ಯಾವುದೇ ರೀತಿಯ ಮಾಲಿನ್ಯ ಉಂಟಾಗುವುದಿಲ್ಲ.

>ಇಲ್ಲಿ ಇಂಧನ ಕೋಶಗಳು ಶಬ್ದವಿಲ್ಲದೆ ಕೆಲಸ ಮಾಡುತ್ತವೆ. ಅದರಿಂದಾಗಿ ಇತರೆ ರೈಲುಗಳಂತೆ ಯಾವುದೇ ರೀತಿಯ ಹೆಚ್ಚಿನ ಶಬ್ದ ಮತ್ತು ಕಂಪನ ಉಂಟಾಗುವುದಿಲ್ಲ. ಹಾಗೂ ಶಾಂತಿಯುತ ಪ್ರಯಾಣಕ್ಕೆ ಇದು ಸಹಾಯ ಮಾಡುತ್ತದೆ.

>ಇದು ಹೈಡ್ರೋಜನ್ ಇಂಧನವನ್ನು ಹೊಂದಿರುವ ರೈಲು. ಹಾಗೂ ಇತರೆ ಇಂಜಿನ್ ಗಳಿಗೆ ಹೋಲಿಸಿದರೆ ಇದರ ಇಂಧನ ದಕ್ಷತೆ ಎರಡು ಪಟ್ಟು ಹೆಚ್ಚಿರುತ್ತದೆ.

ರೈಲು ಭಾರತದ ಸಾರಿಗೆ ಇಲಾಖೆಗಳಲ್ಲಿ ಅತ್ಯಂತ ದೊಡ್ಡದು. ಭಾರತದ ಮುಕ್ಕಾಲುವಾಸಿ ಪಯಣಿಗರು ರೈಲನ್ನು ಬಳಸುತ್ತಾರೆ. ಇದು ಕೇವಲ ತಂತ್ರಜ್ಞಾನದ ದೃಷ್ಟಿಯಿಂದ ಅಲ್ಲದೆ, ಭವಿಷ್ಯದ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿದೆ.

•ಪ್ರಮುಖ ಪರಿಸರ ಪ್ರಯೋಜನಗಳು:

 

>ಈ ರೈಲು ಚಲಿಸುವಾಗ ಪರಿಸರಕ್ಕೆ ಹಾನಿಯಾಗುವಂತಹ ಹಸಿರು ಮನೆ ಅನಿಲಗಳು ಇತ್ಯಾದಿ ಯಾವುದೇ ಅಂಶಗಳನ್ನು ಬಿಡುಗಡೆ ಮಾಡುವುದಿಲ್ಲ.

>ಇದು ಕಡಿಮೆ ಶಬ್ದವನ್ನು ಹೊರಡಿಸುವುದರಿಂದ, ಅರಣ್ಯ ಮಾರ್ಗದಲ್ಲಿ ಚಲಿಸುವ ವನ್ಯಜೀವಿಗಳಿಗೆ ಯಾವುದೇ ರೀತಿಯ ಅಪಾಯ ಉಂಟಾಗುವುದಿಲ್ಲ.

ಈ ರೈಲಿನಲ್ಲಿ ಹೈಡ್ರೋಜನ್ ಅನ್ನು ನವೀಕರಿಸಬಹುದಾದ ಶಕ್ತಿಯಾಗಿ ಬಳಸಲಾಗಿದೆ. ಹಾಗಾಗಿ ಇದು ಖಾಲಿಯಾಗುವ ಪ್ರಮೇಯವೇ ಬರುವುದಿಲ್ಲ.

 

•ಭಾರತೀಯ ರೈಲ್ವೆ ಇಲಾಖೆಗೆ ಲಾಭ:

 

>ಆರ್ಥಿಕ ಉಳಿತಾಯ ಮತ್ತು ಸ್ವಾವಲಂಬನೆ: 

-ಪ್ರಸ್ತುತ ಭಾರತ ದೇಶವು ಪೆಟ್ರೋಲಿಯಂ ಉತ್ಪನ್ನಗಳಿಗಾಗಿ ಬೇರೆ ದೇಶಗಳನ್ನು ಅವಲಂಬಿಸಿದೆ. ಹೈಡ್ರೋಜನ್ ಬಳಕೆಯಿಂದಾಗಿ ಡೀಸೆಲ್ ಆಮದು ಪ್ರಮಾಣವನ್ನು ಕುಗ್ಗಿಸಬಹುದಾಗಿದೆ.

-ಜಾಗತಿಕವಾಗಿ ಆಗಾಗ ಉಂಟಾಗುವಂತಹ ತೈಲದ ಬೆಲೆ ಏರಿಳಿತಗಳಿಂದ ದೂರವಾಗಬಹುದು.

-ಹಾಗೂ ಆಮದುಗೆ ಸುರಿಯುತ್ತಿದ್ದ ಹಣವನ್ನು ಉಳಿಸಿ, ಆರ್ಥಿಕತೆಯನ್ನು ಬಲಪಡಿಸಿಕೊಳ್ಳಬಹುದು.

>ಕಠಿಣ ಮಾರ್ಗಗಳ ಸಬಲೀಕರಣ:

-ಡಾರ್ಜಿಲಿಂಗ್-ಹಿಮಾಲಯನ್, ಶಿಮ್ಲಾ ಹಾಗೂ ಇನ್ನಿತರ ಸೂಕ್ಷ್ಮ ಪರಿಸರ ಪ್ರದೇಶಗಳಲ್ಲಿ ರೈಲಿನ ಬಳಕೆ ಬಹಳ ಕಷ್ಟ.

-ಹಾಗೂ ಇಂತಹ ಪ್ರದೇಶಕ್ಕೆ ಹೆಚ್ಚು ವೆಚ್ಚದ ಓವರ್ ಹೆಡ್ ಎಲೆಕ್ಟ್ರಿಕ್ ಲೈನ್ ಗಳ ಅಗತ್ಯವಿರುತ್ತದೆ.

-ಅಂತಹ ಪ್ರದೇಶಗಳಿಗೆ ಹೈಡ್ರೋಜನ್ ಚಾಲಿತ ರೈಲು ಸೂಕ್ತವಾಗಿದೆ.

>ನೆಟ್-ಝೀರೋ:

-2030ರ ವೇಳೆಗೆ ಭಾರತೀಯ ರೈಲ್ವೆ ಇಲಾಖೆಯು ನೆಟ್ ಜೀರೋ ಗುರಿಯನ್ನು ತಲುಪುವ ಆಶೆ ಹೊಂದಿದೆ. ನೆಟ್ ಝೀರೋ ಎಂದರೆ ಶೂನ್ಯ ಕಾರ್ಬನ್ ಅನ್ನು ಹೊರ ಸೂಸುವ ಸಂಸ್ಥೆ.

ಪ್ರಸ್ತುತ ಇರುವಂತ ಡೀಸೆಲ್ ಇಂಜಿನ್ ಗಳನ್ನು ಬದಲಿಸಲು ಹೈಡ್ರೋಜನ್ ರೈಲು ಉತ್ತಮ ದಾರಿಯಾಗಿದೆ.

>ಜಾಗತಿಕ ಮಟ್ಟದಲ್ಲಿ ಹೆಸರು: 

-ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ಈ ಒಂದು ರೈಲನ್ನು ತಯಾರಿಸಲಾಗಿದೆ. ಇದು ಜಾಗತಿಕ ಮಟ್ಟದಲ್ಲಿ ಹೆಸರು ತಂದು ಕೊಡಲಿದೆ.

ಹಾಗೂ ಇತರೆ ದೇಶಗಳಿಗೆ ಈ ತಂತ್ರಜ್ಞಾನ ಮತ್ತು ಬಿಡಿ ಭಾಗಗಳನ್ನು ರಫ್ತು ಮಾಡಲು ಇದು ಅವಕಾಶ ಮಾಡಿಕೊಡುತ್ತದೆ.

ಪ್ರತಿಯೊಂದು ಕ್ಷೇತ್ರದಲ್ಲೂ ಕೂಡ ಸಮಸ್ಯೆಗಳು ಇರುತ್ತವೆ. ಅದೇ ರೀತಿ ಹೈಡ್ರೋಜನ್ ರೈಲು ಪರಿಸರ ಸ್ನೇಹಿಯಾದರೂ ಕೂಡ ಇದರ ಅನುಷ್ಠಾನದಲ್ಲಿ ಹಲವಾರು ಸಮಸ್ಯೆಗಳು ಇವೆ.

ಅವುಗಳು ಈ ರೀತಿಯಾಗಿವೆ:

 

ಉತ್ಪಾದನಾ ವೆಚ್ಚ: 

>ಒಂದು ರೈಲು ತಯಾರು ಮಾಡಲು ಸುಮಾರು ₹80 ಕೋಟಿ ರೂಪಾಯಿಗಳು ವೆಚ್ಚವಾಗುತ್ತದೆ.

>ಸಾಮಾನ್ಯವಾಗಿ ಡೀಸೆಲ್ ರೈಲುಗಳು 20 ಕೋಟಿ ₹ವೆಚ್ಚಾಗಿರುತ್ತದೆ.

>ಈ ನಿಟ್ಟಿನಲ್ಲಿ ಡೀಸೆಲ್ ರೈಲಿಗಿಂತ ಹೈಡ್ರೋಜನ್ ರೈಲು ನಾಲ್ಕು ಪಟ್ಟು ಹೆಚ್ಚಿನ ವೆಚ್ಚದ್ದು.

>ಸಂಬಂಧಪಟ್ಟಂತೆ ಅದರ ಇಂಧನ ಉತ್ಪಾದನಾ ಘಟಕಗಳು ಹಾಗೂ ಶೇಖರಣಾ ಟ್ಯಾಂಕ್ ನಿರ್ಮಾಣಕ್ಕೆ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.

ಲಭ್ಯತೆಯ ಕೊರತೆ: 

>ಪ್ರಸ್ತುತ ಭಾರತದಲ್ಲಿ ಗ್ರೀನ್ ಹೈಡ್ರೋಜನ್ ಬಹಳ ಸೀಮಿತ ಮಟ್ಟದಲ್ಲಿ ದೊರಕುತ್ತದೆ.

>ನೀರಿನಿಂದ ಹೈಡ್ರೋಜನ್ ತಯಾರಾಗುತ್ತದೆ. ಆನಂತರ ಅದನ್ನು ಕಂಪ್ರೆಸ್ ಮಾಡಿ ವಿದ್ಯುತ್ ಆಗಿ ಬಳಸಿಕೊಳ್ಳಬೇಕು. ಈ ಒಟ್ಟು ಪ್ರಕ್ರಿಯೆಯಲ್ಲಿ ಸುಮಾರು 60% ರಿಂದ 70% ರಷ್ಟು ಶಕ್ತಿ ವ್ಯರ್ಥವಾಗಿ ಹೋಗುತ್ತದೆ.

ಸಂಗ್ರಹಣೆಯ ಸಮಸ್ಯೆ:

>ಹೈಡ್ರೋಜನ್ ಅನಿಲವು ಬಹಳಷ್ಟು ಹಗುರವಾಗಿರುತ್ತದೆ. ಇದನ್ನು ದ್ರವ ರೂಪದಲ್ಲಿ ಸಂಗ್ರಹಣೆ ಮಾಡಲು ಮೈನಸ್ 53 ಡಿಗ್ರಿ ಸೆಲ್ಸಿಯಸ್ ನ ತಾಪಮಾನ ಅಗತ್ಯವಿದೆ.

>ಹಾಗೂ ಗ್ಯಾಸ್ ರೂಪದಲ್ಲಿ ಸಂಗ್ರಹಿಸಲು ಅತಿ ಹೆಚ್ಚು ಒತ್ತಡದ ಟ್ಯಾಂಕ್ಗಳು ಬೇಕಾಗುತ್ತದೆ.

>ಹೀಗಾಗಿ ರೈಲಿನಲ್ಲಿ ಈ ಟ್ಯಾಂಕ್ಗಳಿಗೆ ಹೆಚ್ಚಿನ ಜಾಗ ಬೇಕಾಗುತ್ತದೆ.

ಸುರಕ್ಷತೆಯ ದೃಷ್ಟಿ: 

>ಹೈಡ್ರೋಜನ್ ಅತಿ ಬೇಗನೆ ಸುಡುವಂತಹ ಮತ್ತು ಆವಿಯಾಗುವಂತಹ ಲಕ್ಷಣಗಳನ್ನು ಹೊಂದಿದೆ.

>ಹಾಗೂ ಸಣ್ಣ ಸೋರುವಿಕೆಯಿಂದಾಗಿ ದೊಡ್ಡ ಸ್ಫೋಟಕ್ಕೆ ಕಾರಣವಾಗಬಹುದು.

>ಹಾಗಾಗಿ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ.

ವೇಗದಲ್ಲಿ ಮಿತಿ: 

>ಪ್ರಸ್ತುತ ಹೈಡ್ರೋಜನ್ ರೈಲುಗಳು ಗಂಟೆಗೆ 120 ಕಿಲೋಮೀಟರ್ ಓಡುತ್ತದೆ.

>ಭಾರತದಲ್ಲಿ ಇರುವಂತಹ ಇತರೆ ಎಲೆಕ್ಟ್ರಿಕ್ ರೈಲುಗಳು ಗಂಟೆಗೆ 130 ರಿಂದ 160 ವೇಗವಾಗಿ ಕಿಲೋಮೀಟರ್ ಚಲಿಸುತ್ತವೆ.

>ರೈಲುಗಳು ಬಹಳಷ್ಟು ತೂಕ ಹೊಂದಿರುತ್ತದೆ. ಹಾಗೂ ಅವುಗಳನ್ನು ಎಳೆದುಕೊಂಡು ಹೋಗಲು ಇನ್ನಷ್ಟು ಬಲವಾದಂತಹ ತಂತ್ರಜ್ಞಾನದ ಅವಶ್ಯಕತೆ ಇದೆ.

ರಾಷ್ಟ್ರೀಯ ಗ್ರೀನ್ ಹೈಡ್ರೋಜನ್ ಮಿಷನ್ ಅಡಿಯಲ್ಲಿ ವೆಚ್ಚವನ್ನು ತಗ್ಗಿಸಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಭಾರತ ಸರ್ಕಾರ ಪ್ರಯತ್ನಿಸುತ್ತಿದೆ.

ಭಾರತ ದೇಶವು ಹಸಿರು ಬಳಕೆಯ ಹೈಡ್ರೋಜನ್ ರೈಲುಗಳನ್ನು ಜಾರಿಗೊಳಿಸುತ್ತಿರುವುದು ಮಹತ್ವದ ಹೆಜ್ಜೆಯಾಗಿದೆ. ಪರಿಸರಕ್ಕೆ ಸಂಬಂಧಪಟ್ಟ ಹಲವು ಸಮಸ್ಯೆಗಳಿಗೆ ಇದು ಉತ್ತರವಾಗಿದೆ.

ಇದು ಇದೇ ರೀತಿಯಲ್ಲಿ ಮುಂದುವರಿದುಕೊಂಡು ಹೋದಲ್ಲಿ ಮುಂದಿನ ದಿನಗಳಲ್ಲಿ ಭಾರತವು ಹಸಿರು ರಾಷ್ಟ್ರವಾಗಬಹುದು.

 

ಇನ್ನಷ್ಟು ಮಾಹಿತಿಗಾಗಿ:Indian Railways|PIB

ಇದನ್ನು ಓದಿ: ಭಾರತ-ನ್ಯೂಜಿಲ್ಯಾಂಡ್ ಶೃಂಗಸಭೆ 2026

 

Leave a Comment

Scroll to Top

Discover more from nirantarasuddhi

Subscribe now to keep reading and get access to the full archive.

Continue reading