Benefits of Castor Oil: ಹರಳೆಣ್ಣೆ ಬಳಸುವುದರಿಂದ ಆಗುವ ಲಾಭ-ನಷ್ಟಗಳು

Spread the love

Benefits of Castor Oil:ನಮ್ಮ ಹಲವಾರು ಸಮಸ್ಯೆಗಳಿಗೆ ನಮ್ಮ ಮನೆಗಳಲ್ಲಿಯೇ ಪರಿಹಾರಗಳು ಸಿಗುತ್ತವೆ. ಹೌದು ಭಾರತೀಯ ಆರೋಗ್ಯ ಶಾಸ್ತ್ರದಲ್ಲಿ ಹಲವಾರು ಸಾಂಪ್ರದಾಯಿಕ ಔಷಧಿಗಳನ್ನು ನಾವು ಕಾಣಬಹುದಾಗಿದೆ. ಇವುಗಳು ಇಂಗ್ಲಿಷ್ ಮೆಡಿಸಿನ್ ಪ್ರಭಾವವಿಲ್ಲದೆ ನಮ್ಮನ್ನು ಗುಣಮುಖರನ್ನಾಗಿ ಮಾಡುತ್ತದೆ. 

Benefits of Castor Oil
Benefits of Castor Oil

Benefits of Castor Oil: ಆಯುರ್ವೇದದಲ್ಲಿ ಹರಳೆಣ್ಣೆ ಕೂಡ ಒಂದು. ಇದು ರಿಕಿನಸ್ ಕಮ್ಯುನಿಸ್ ಎಂಬ ಸಸ್ಯದ ಹರಳು ಬೀಜಗಳಿಂದ ತೆಗೆಯುವಂತಹ ಒಂದು ಎಣ್ಣೆಯಾಗಿದೆ.

ಇದು ಕೂಡ ತನ್ನಲ್ಲಿ ಹಲವಾರು ಸಮಸ್ಯೆಗಳಿಗೆ ಔಷಧೀಯ ಗುಣಗಳನ್ನು ಇಟ್ಟುಕೊಂಡಿದ್ದು, ವಿಟಮಿನ್ ಇ ಮತ್ತು ಕೊಬ್ಬಿನ ಅಂಶಗಳಿಂದ ಸಮೃದ್ಧವಾಗಿದೆ.

Benefits of Castor Oil: ಈ ಹರಳೆಣ್ಣೆಯಲ್ಲಿ ಇರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಗುಣಗಳು ಈ ರೀತಿಯಾಗಿವೆ:

 

ಮಲಬದ್ಧತೆಯ ನಿವಾರಣೆ 

ಈ ಹರಳೆಣ್ಣೆಯು ಮಲಬದ್ಧತೆಯ ನಿವಾರಣೆಯಲ್ಲಿ ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ. ಇದು ದೇಹದಲ್ಲಿನ ಕರುಳಿನಲ್ಲಿ ಇರುವಂತಹ ಮಲವನ್ನು ಹೊರತೆಗೆಯುವಲ್ಲಿ ಸಹಕಾರಿ ಮತ್ತು ಕರುಳಿನ ಚಲನೆಯನ್ನು ಉತ್ತಮಪಡಿಸುತ್ತದೆ.

ಜೊತೆಗೆ ಇದರಿಂದಾಗಿ ಮಲಮೂತ್ರ ವಿಸರ್ಜನೆಗಳು ಸರಿಯಾಗಿ ಆಗುತ್ತದೆ. ಪ್ರತಿನಿತ್ಯವು ಒಂದು ಚಮಚ ಹರಳೆಣ್ಣೆಯನ್ನು ಸೇವಿಸುವ ಮೂಲಕ, ಹೊಟ್ಟೆಗೆ ಸಂಬಂಧಪಟ್ಟ ಮಲಬದ್ಧತೆಯಿಂದ ಸಮಸ್ಯೆಗಳನ್ನು ನಿವಾರಿಸಬಹುದಾಗಿದೆ.

 

ಬಾಯಿಯ ಆರೋಗ್ಯವನ್ನು ಕಾಪಾಡುತ್ತದೆ

ಹರಳೆಣ್ಣೆಯಲ್ಲಿ ಇರುವಂತಹ ಆಂಟಿ ಬ್ಯಾಕ್ಟೀರಿಯಲ್ ಹಾಗೂ “ಆಂಟಿ-ಇನ್‌ಫ್ಲಮೇಟರಿ ಲಕ್ಷಣಗಳು ಹಲ್ಲಿನ ಆರೋಗ್ಯವನ್ನು ಕಾಪಾಡುತ್ತವೆ. ಈ ಎಣ್ಣೆಯ ಬಳಕೆಯು ನಮ್ಮ ವಸಡುಗಳಲ್ಲಿ ಇರುವಂತಹ ಸೋಂಕನ್ನು ನಿವಾರಿಸುವ ಜೊತೆಗೆ, ಹಲ್ಲುಗಳ ಬೇರಿನಲ್ಲಿ ಉಂಟಾಗುವಂತಹ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತದೆ.

ಜೊತೆಗೆ ವಯಸ್ಸಾದವರಿಗೆ ಹಲ್ಲುಗಳ ಸಮಸ್ಯೆ ಉಂಟಾಗುತ್ತವೆ. ಅದರ ನಿವಾರಣೆಗೂ ಇದು ಸಹಕಾರಿಯಾಗಿದೆ.

ಪ್ರತಿನಿತ್ಯವು ಬ್ರಷ್ ಮಾಡುವಾಗ ಟೂತ್ಪೇಸ್ಟ್ ಜೊತೆಗೆ ಹರಳೆಣ್ಣೆಯ ಒಂದು ಹನಿಯನ್ನು ಸೇರಿಸಿ ಬ್ರಷ್ ಮಾಡುವುದು ಬಹಳ ಉತ್ತಮವಾಗಿದೆ.

 

ಚರ್ಮದ ಆರೋಗ್ಯಕ್ಕೆ ಸಹಕಾರಿ 

ಹರಳೆಣ್ಣೆ ನೀವು ತನ್ನಲ್ಲಿ ಅತ್ಯಂತ ಪೋಷಕಾಂಶಗಳನ್ನು ಹೊಂದಿದ್ದು, ನೈಸರ್ಗಿಕದ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಚರ್ಮಕ್ಕೆ ಕಾಂತಿಯನ್ನು ಉಂಟುಮಾಡುತ್ತದೆ.

ಇದರಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್‌ಗಳು ಚರ್ಮಗು ವಯಸ್ಸಾಗುವಿಕೆಯನ್ನು ತಡೆಗಟ್ಟಿ, ಸುಕ್ಕು ಸುಕ್ಕಾದ ಚರ್ಮಗಳಿಗೆ ಮುಕ್ತಿ ನೀಡುತ್ತದೆ.

ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿದ್ದು, ಇದು ಮುಖದಲ್ಲಿ ಇರುವಂತಹ ಕೊಳೆಯನ್ನು ತೆಗೆದು, ಮೊಡವೆಗಳು ಉಂಟಾಗುವುದನ್ನು ನಿಲ್ಲಿಸುತ್ತದೆ.

ಹರಳೆಣ್ಣೆಯನ್ನು ನೇರವಾಗಿ ಬಳಸುವುದರ ಬದಲು ಕೊಬ್ಬರಿ ಎಣ್ಣೆ ಅಥವಾ ಬಾದಾಮಿ ಎಣ್ಣೆಗಳ ಜೊತೆ ಮಿಶ್ರಣ ಮಾಡಿ ಬಳಸುವುದು ಉತ್ತಮವಾಗಿದೆ.

ಇದು ಚರ್ಮದ ಮೇಲೆ ಮಾಯಿಶ್ಚರೈಸರ್ ರೀತಿಯಲ್ಲಿ ಕೆಲಸ ಮಾಡುತ್ತದೆ. ಇದರ ಬಳಕೆಯಿಂದಾಗಿ ಚರ್ಮದ ಮೇಲೆ ಬ್ಯಾಕ್ಟೀರಿಯಾ ಗಳ ಬೆಳವಣಿಗೆಯನ್ನು ಕಡಿಮೆ ಮಾಡಬಹುದು.

ಈಗಾಗಲೇ ಚರ್ಮವು ಎಣ್ಣೆಯಿಂದ ಕೂಡಿದರೆ ಅಥವಾ ಹೆಚ್ಚಿನ ಮೊಡವೆಗಳಿಂದ ಕೂಡಿದರೆ ಹರಳೆಣ್ಣೆಯನ್ನು ಬಳಸದೆ ಇರುವುದು ಉತ್ತಮ.

ಹರಳೆಣ್ಣೆಯಲ್ಲಿ ರಿಸಿನೋಲಿಕ್ ಆಮ್ಲ ಹೆಚ್ಚಿನ ಪ್ರಮಾಣದಲ್ಲಿ ಇದೆ. ಇದು ನಿಮ್ಮ ಚರ್ಮಕ್ಕೆ ಸಂಬಂಧಪಟ್ಟ ತಡೆಗೋಡೆಯನ್ನು ಗಟ್ಟಿಯಾಗಿಸುತ್ತದೆ. ಇದರಿಂದಾಗಿ ಚರ್ಮಕ್ಕೆ ಸಂಬಂಧಪಟ್ಟ ಕಾಯಿಲೆಗಳು ಕಡಿಮೆಯಾಗುತ್ತವೆ.

 

ಕೀಲು ನೋವಿಗೆ ಪರಿಹಾರ 

ಸಾಮಾನ್ಯವಾಗಿ ನಾವು ಮನೆಗಳಲ್ಲಿ ಹರಳೆಣ್ಣೆಯನ್ನು ಕೈಕಾಲುಗಳಿಗೆ ಹಚ್ಚುವುದನ್ನು ನೋಡಿರುತ್ತೇವೆ. ಇದರಲ್ಲಿ ಆಂಟಿ-ಇನ್‌ಫ್ಲಮೇಟರಿ ಗುಣಗಳು ಹೆಚ್ಚಾಗಿ ಇರುವುದರಿಂದಾಗಿ ಇವು ಮೂಳೆ ಮತ್ತು ಕೀಲುಗಳಿಗೆ ಸಂಬಂಧಪಟ್ಟ ನೋವುಗಳನ್ನು ನಿವಾರಿಸುತ್ತದೆ. ಜೊತೆಗೆ ಉರಿ ಊತದ ನಿವಾರಣೆಯನ್ನು ಮಾಡುತ್ತದೆ.

 

ಕೂದಲಿನ ಸಮಸ್ಯೆಗೆ ಪರಿಹಾರ 

ಸಾಮಾನ್ಯವಾಗಿ ಇವತ್ತಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು, ದೊಡ್ಡವರ ತನಕವೂ ಕೂದಲು ಉದುರುವ ಸಮಸ್ಯೆಗಳು ಹಾಗೂ ನೆತ್ತಿಗೆ ಸಂಬಂಧ ಪಟ್ಟಂತಹ ಸಮಸ್ಯೆಗಳು ಅತಿಯಾಗಿ ಕಾಣುತ್ತಿವೆ. ಹಗುರವು ಹಿಂದಿನಿಂದಲೂ ನಮ್ಮ ಮನೆಗಳಲ್ಲಿ ಹರಳೆಣ್ಣೆಯನ್ನು ಕೂದಲಿಗೆ ಹಚ್ಚುವುದನ್ನು ಕಾಣುತ್ತ ಬರುತ್ತಿದ್ದೇವೆ.

ಈ ಹರಳೆಣ್ಣೆಯಲ್ಲಿ ನೈಸರ್ಗಿಕವಾಗಿ ಸೂಕ್ಷ್ಮ ಜೀವಿಗಳ ವಿರುದ್ಧ ಹೋರಾಡುವಂತಹ ಗುಣಲಕ್ಷಣಗಳು ಇದ್ದು,ಇದು ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿಯಾಗಿದೆ. ಇದು ಕೂದಲನ್ನು ಮತ್ತು ನೆತ್ತಿಯನ್ನು ಹೈಡ್ರೇಟ್ ಮಾಡುವ ಮೂಲಕ ಮಾಯಿಶ್ಚರೈಸರ್ ನಂತೆ ಕೆಲಸ ಮಾಡುತ್ತದೆ.

ಇದರಲ್ಲಿ ಒಮೇಗಾ 6 ಮತ್ತು ಒಮೇಗಾ 9 ಸಮೃದ್ಧವಾಗಿದ್ದು, ಕೂದಲಿನ ಶುಷ್ಕತೆಯನ್ನು ಕಡಿಮೆ ಮಾಡುತ್ತದೆ. ಕೂದಲು ಮೃದುವಾಗಿ ಮತ್ತು ದಟ್ಟವಾಗಿ ಬೆಳೆಯುವಲ್ಲಿ ಇದು ಸಹಾಯ ಮಾಡುತ್ತಾ, ಕಂಡೀಷನರ್ ನಂತೆ ಕಾರ್ಯನಿರ್ವಹಿಸುತ್ತದೆ. ಹಾಗೂ ನೆತ್ತಿಗೆ ಸಂಬಂಧಪಟ್ಟ ಹೊಟ್ಟನ್ನು ಕೂಡ ತೊಲಗಿಸುವಲ್ಲಿ ಸಹಾಯ ಮಾಡುತ್ತದೆ.

ಇದರಲ್ಲಿ ಹೆಚ್ಚಿನ ಬ್ಯಾಕ್ಟೀರಿಯ ವಿರೋಧಿ ಗುಣಗಳಿದ್ದು, ಮಳೆಗಾಲ ಹಾಗೂ ಚಳಿಗಾಲದಲ್ಲಿ ಬರುವಂತಹ ನೆತ್ತಿಗೆ ಸಂಬಂಧಪಟ್ಟ ಸೋಂಕುಗಳ ನಿವಾರಣೆಯನ್ನು ಮಾಡುತ್ತದೆ. ಹಾಗೂ ವಿಟಮಿನ್ ಇ ಇದರಲ್ಲಿ ಸಮೃದ್ಧವಾಗಿರುವ ಕಾರಣ ಕೂದಲ ಆರೋಗ್ಯಕರ ಬೆಳವಣಿಗೆ ಸಹಾಯಕಾರಿಯಾಗಿದೆ.

 

ಇತರ ಪ್ರಯೋಜನಗಳು:

•ಹರಳೆಣ್ಣೆ ನೀವು ಕರುಳಿನ ಸಮಸ್ಯೆಗಳನ್ನು ಪರಿಹರಿಸುತ್ತಾ ಕರುಳನ್ನು ಶುದ್ಧೀಕರಿಸುತ್ತದೆ. ಹಾಗೂ ಕೊಲೊನೋಸ್ಕೋಪಿಗಳಂತಹ ಚಿಕಿತ್ಸೆಗಳಿಗೆ ಸಹಾಯ ಮಾಡುತ್ತದೆ.

•ಅಜೀರ್ಣದ ಸಮಸ್ಯೆಗೆ ಹರಳೆಣ್ಣೆಯೂ ಉತ್ತಮ ಔಷಧಿ, ಜೀರ್ಣಕ್ರಿಯೆಗೆ ಸಹಾಯ ಮಾಡಬಹುದು.

•ಇನ್ನು ಕೈಗಾರಿಕಾ ಕ್ಷೇತ್ರಕ್ಕೆ ಬಂದಾಗ ಇದನ್ನು ಹಲವು ಉತ್ಪಾದನಾ ಪ್ರಕ್ರಿಯೆಗಳಲ್ಲಿ ಲೂಬ್ರಿಕೆಂಟ್ ಆಗಿ ಬಳಸಲಾಗುತ್ತದೆ.

•ಕಿಲೋಮೀಟರ್ ತೂಕ ಹೆಚ್ಚಳದಿಂದಾಗಿ ಅಥವಾ ತೂಕವನ್ನು ಇಳಿಸುವ ಸಮಯದಲ್ಲಿ ಮತ್ತು ಗರ್ಭಧಾರಣೆಯ ಸಂಬಂಧವಾಗಿ ದೇಹದ ಮೇಲೆ ಸ್ಟ್ರೆಚ್ ಮಾರ್ಕ್ ಗಳು ಬಂದಿರುತ್ತವೆ. ಇಂತಹ ಮಾರ್ಕ್ ಗಳನ್ನು ತೊಳೆದು ಹಾಕಲು ಹರಳೆಣ್ಣೆಯಲ್ಲಿರುವ ವಿವಿಧ ಕೊಬ್ಬಿನ ಅಂಶಗಳು ಸಹಾಯ ಮಾಡುತ್ತವೆ.

• ಈ ಎಣ್ಣೆಯ ಬಳಕೆಯಿಂದ ಬಿಳಿ ರಕ್ತ ಕಣಗಳನ್ನು ಹೆಚ್ಚಿಸಬಹುದಾಗಿದೆ. ಇದರಿಂದಾಗಿ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದಾಗಿದೆ.

•ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಒಮ್ಮೆಯಾದರೂ ರಿಂಗ್ ವರ್ಮ್ ಬಂದಿರುತ್ತದೆ. ಇಲ್ಲಿ ಈ ಸೋಂಕನ್ನು ತಡೆಗಟ್ಟುವ ಏಜೆಂಟ್ ಆಗಿ ಹರಳೆಣ್ಣೆಗೆ ಕಾರ್ಯನಿರ್ವಹಿಸುತ್ತದೆ.

•ಒಣಗಿ ಹೋದಂತಿರುವ ಚರ್ಮವನ್ನು ಹೈಡ್ರೇಟ್ ಮಾಡುವ ಅದ್ಭುತ ಶಕ್ತಿಯನ್ನು ಹೊಂದಿರುವ ಹರಳೆಣ್ಣೆಯು, ಚಳಿಗಾಲದಲ್ಲಿ ಅಥವಾ ಇನ್ನಿತರ ಸಮಸ್ಯೆಗಳಿಂದ ಒಡೆದು ಹೋಗಿರುವಂತಹ ಹಿಮ್ಮಡಿಗಳಿಗೆ ಪರಿಹಾರವನ್ನು ನೀಡುತ್ತದೆ.

•ಅತೀವ ತಲೆನೋವು ಅಥವಾ ಮೈಗ್ರೇನ್ ಸಮಸ್ಯೆಯನ್ನು ನಿವಾರಿಸಲು ಹರಳೆಣ್ಣೆಯ ಒಂದು ಚಮಚವನ್ನು ತಲೆಗೆ ಹಚ್ಚಿ ಮಸಾಜ್ ಮಾಡಿಕೊಳ್ಳಬಹುದು.

•ಇನ್ನು ಅತಿಯಾಗಿ ನೀರಿನಲ್ಲಿ ಓಡಾಡುವವರ ಕಾಲುಗಳ ಬೆರಳಿನ ಉಗುರಿನಲ್ಲಿ ಉಂಟಾಗುವ ಶಿಲೀಂದ್ರಗಳನ್ನು ಕಡಿಮೆಯಾಗಿಸಲು ಹರಳೆಣ್ಣೆಯನ್ನು ಬಳಸಬಹುದು.

 

ಅತಿಯಾದರೆ ಅಮೃತವು ವಿಷ ಎನ್ನುವಂತೆ, ಪ್ರಯೋಜನಗಳ ಜೊತೆಗೆ ಹರಳೆಣ್ಣೆಯು ಕೆಲವೊಂದು ಅಡ್ಡ ಪರಿಣಾಮಗಳನ್ನು ಕೂಡ ಉಂಟುಮಾಡುತ್ತದೆ.

ಹರಳೆಣ್ಣೆಯಿಂದ ಉಂಟಾಗುವ ಅಡ್ಡ ಪರಿಣಾಮಗಳು ಈ ರೀತಿಯಾಗಿವೆ:

• ಹರಳೆಣ್ಣೆ ಸೇವನೆಯ ಪ್ರಮಾಣ ಹೆಚ್ಚಾದಲ್ಲಿ ಅದು ವಾಕರಿಕೆ ಉಂಟುಮಾಡುತ್ತದೆ. ಮತ್ತು ಇದು ದೇಹದಲ್ಲಿ ಎಲೆಕ್ಟ್ರೋಲೈಟ್‌ಗಳ ಅಸಮತೋಲನಕ್ಕೆ ಕಾರಣವಾಗಬಹುದು.

ಇರಾನ್ ದೇಶದಲ್ಲಿ ನಡೆಸಿದ ಒಂದು ಅಧ್ಯಯನದ ಪ್ರಕಾರ, ಹಲವರಿಗೆ ಈ ರೀತಿಯಾಗಿ ವಾಕರಿಕೆ ವಾಂತಿ ಮತ್ತು ಸ್ನಾಯುಗಳಲ್ಲಿ ಸೆಳೆತ ಕಂಡು ಬಂದಿದೆ.

•ಕೆಲವೊಂದು ಅಧ್ಯಯನ ಗಳ ಪ್ರಕಾರ ಈ ಎಣ್ಣೆಯನ್ನು ಪ್ರಾಣಿಗಳಿಗೆ ಹಚ್ಚಿದಾಗ ಆ ಸ್ಥಳದಲ್ಲಿ ಕೆಂಪಗಾಗುವುದು ಮತ್ತು ಸ್ವಲ್ಪ ಪ್ರಮಾಣದಲ್ಲಿ ಉರಿ ಕಂಡು ಬಂದಿದೆ. ಆದರೆ ಮನುಷ್ಯರಿಗೆ ಯಾವುದೇ ರೀತಿಯಾದ ತೊಂದರೆ ಉಂಟಾಗಿಲ್ಲ.

•ಹರಳೆಣ್ಣೆಯನ್ನು ಹೆಚ್ಚಾಗಿ ಸೇವನೆ ಮಾಡುತ್ತಾರೆ ಸ್ನಾಯುಗಳಲ್ಲಿ ಸೆಳೆತ ಉಂಟಾಗುವುದನ್ನು ಕಾಣಬಹುದಾಗಿದೆ. ಹಾಗಾಗಿ ಮಹಿಳೆಯರು ಮುಟ್ಟಿನ ದಿನಗಳಲ್ಲಿ ಅಥವಾ ಗರ್ಭವತಿಯರು ಇದನ್ನು ಬಳಸಬಾರದು.

ಜೊತೆಗೆ ಇದರ ಹೆಚ್ಚಾದ ಬಳಕೆ ಗರ್ಭಕೋಶವನ್ನು ಸಂಕೋಚನಗೊಳಿಸುವ ಸಾಧ್ಯತೆ ಇರುತ್ತದೆ. ಸೇವನಿಗೂ ಮುನ್ನ ವೈದ್ಯರ ಸಲಹೆ ಅತ್ಯಗತ್ಯ.

•ಕೆಲವೊಮ್ಮೆ ಇದರ ಬಳಕೆ ಹೆಚ್ಚಾದುದರಿಂದ ತಲೆ ಸುತ್ತುವಿಕೆ, ವಾಕರಿಕೆ ಉಂಟಾಗುತ್ತದೆ. ಕೀಮೋಥೆರಪಿ ಔಷಧಿಗಳಲ್ಲಿ ಹರಳೆಣ್ಣೆಯಿಂದ ಪ್ರತ್ಯೇಕ ಮಾಡಲ್ಪಟ್ಟಂತಹ ಪೋಷಕಾಂಶಗಳನ್ನು ಬಳಸಲಾಗುತ್ತದೆ.

•ಹಿನ್ನೆಲ್ಲಾ ಮಕ್ಕಳು ಜನಿಸಿದಾಗ ಸ್ನಾನ ಮಾಡಿಸಲು ಹರಳೆಣ್ಣೆಯನ್ನು ಬಳಸುತ್ತಿದ್ದರು. ಈಗಲೂ ಕೆಲವೊಂದು ಕಡೆ ಕ್ರಮ ಉಂಟು. ಅದಕ್ಕೂ ಮುಂಚೆ ವೈದ್ಯರ ಸಲಹೆ ಪಡೆದುಕೊಳ್ಳುವುದು ಉತ್ತಮ.

•ಚಿಕ್ಕ ಮಕ್ಕಳಿಗೆ ಹರಳೆಣ್ಣೆಯನ್ನು ಸೇವಿಸಲು ಬಿಡಲೇಬಾರದು, ಅಗತ್ಯವಿದ್ದಲ್ಲಿ ಮೊದಲು ವೈದ್ಯರ ಸಲಹೆಯನ್ನು ಪಡೆದುಕೊಳ್ಳಬೇಕು.

• ಹಾಗೂ ದೇಹದ ವಿವಿಧ ಅಂಗಾಂಗಗಳ ಸಮಸ್ಯೆಯನ್ನು ಹೊಂದಿರುವವರು, ಮೊದಲು ವೈದ್ಯರ ಸಲಹೆಯನ್ನು ಪಡೆದುಕೊಂಡ ನಂತರ ಮುಂದುವರಿಯಬೇಕು.

•ಇನ್ನೂ ಕೆಲವರಿಗೆ ಸೂಕ್ಷ್ಮ ಚರ್ಮ ಇರುವುದರಿಂದಾಗಿ ಅವರು ಇದರ ಬಳಕೆಯನ್ನು ಮಾಡಬಾರದು. ಇದರಿಂದ ತೂರಿಕೆ ಉಂಟಾಗುವ ಸಾಧ್ಯತೆ ಇರುತ್ತದೆ.

•ಕೆಲವೊಮ್ಮೆ ಹೆಚ್ಚಾದ ಸೇವನೆಯು ವಾಕರಿಕೆ, ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳು ಮತ್ತು ವಾಂತಿ ,ಹೊಟ್ಟೆಯುಬ್ಬರಕ್ಕೆ ಕಾರಣವಾಗಬಹುದು.

ಹೀಗೆ, ಹರಳೆಣ್ಣೆಯಿಂದ ಹಲವಾರು ಪ್ರಯೋಜನಗಳಿವೆ. ಜೊತೆಗೆ ಅಡ್ಡ ಪರಿಣಾಮಗಳು ಕೂಡ ಇವೆ. ಇದರ ಕುರಿತಾಗಿ ಹಲವಾರು ಸಂಶೋಧನೆಗಳು ಅಧ್ಯಯನಗಳು ನಡೆದಿದ್ದು, ಇನ್ನೂ ನಡೆಯುತ್ತಲೇ ಇವೆ.

ಹಿಂದಿನಿಂದಲೂ ಇದನ್ನು ಸಂಪ್ರದಾಯವಾಗಿ ಬಳಸಿಕೊಂಡು ಬಂದಿದ್ದಾರೆ. ಆದರೆ ಕೆಲವೊಮ್ಮೆ ಹೆಚ್ಚಾದ ಸೇವನೆಯೂ ಹೆಚ್ಚಾದ ಬಳಕೆಯು ಆರೋಗ್ಯವನ್ನು ಹಾಳು ಮಾಡಿ ಬಿಡಬಹುದು.

ಹೀಗಾಗಿ ಈ ಲೇಖನದಲ್ಲಿರುವ ಎಲ್ಲಾ ಅಂಶಗಳು ವೈದ್ಯಕೀಯ ಕ್ಷೇತ್ರದಲ್ಲಿ ಸಾಬೀತಾಗಿರುವುದಿಲ್ಲ. ಹೊರತಾಗಿ ಇಲ್ಲಿರುವ ಅಂಶಗಳನ್ನು ಸಾಂಪ್ರದಾಯಿಕ ಬಳಕೆ ಮತ್ತು ಲಭ್ಯವಿರುವಂತಹ ದಾಖಲೆಗಳ ಆಧಾರದ ಮೇಲೆ ನೀಡಲಾಗಿದೆ.

ಹಾಗಾಗಿ ಪ್ರತಿ ಬಾರಿ ಅದನ್ನು ಬಳಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳುವುದು ಅತ್ಯಗತ್ಯವಾಗಿದೆ. ಮತ್ತು ಆ ಮೂಲಕ ಅಡ್ಡ ಪರಿಣಾಮಗಳನ್ನು ತಪ್ಪಿಸಬಹುದು.

ಇನ್ನಷ್ಟು ಮಾಹಿತಿಗಾಗಿ: Castor Oil

 

ಇದನ್ನು ಓದಿ: Semicon 2.0

 

Leave a Comment

Scroll to Top

Discover more from nirantarasuddhi

Subscribe now to keep reading and get access to the full archive.

Continue reading