Semicon 2.0 Programme India:ಭಾರತದಲ್ಲಿ ಸೆಮಿಕಾನ್ ಕ್ರಾಂತಿ!

Spread the love

Semicon 2.0 Programme India: ಭಾರತ ಸರ್ಕಾರವು 2026 ರ ಜುಲೈ 15 ರಂದು ಸೆಮಿಕಾನ್ 2.0 (Semicon 2.0 Programme) ಎಂಬ ಬೃಹತ್ ಯೋಜನೆಗೆ ಅನುಮೋದನೆ ನೀಡಿದೆ. ಇದೊಂದು ಮಹತ್ವದ ಯೋಜನೆಯಾಗಿದೆ. ಇದು ಭಾರತವನ್ನು ಜಾಗತಿಕ ಸೆಮಿಕಂಡಕ್ಟರ್ ಮಾರುಕಟ್ಟೆಯಲ್ಲಿ ಪ್ರಮುಖ ಕೇಂದ್ರವನ್ನಾಗಿಸುವ ಗುರಿಯನ್ನು ಹೊಂದಿದೆ.

Semicon 2.0 Programme India
Semicon 2.0 Programme India

Semicon 2.0 Programme India: ಮೊಬೈಲ್, ಕಾರು, ಎಟಿಎಂ ಯಂತ್ರ ಸೇರಿದಂತೆ ನಾವು ಬಳಸುವ ಎಲ್ಲಾ ಎಲೆಕ್ಟ್ರಾನಿಕ್ ಮಷೀನ್ ಗಳಿಗೂ ಚಿಪ್ಸ್ ಅಥವಾ ಸೆಮಿಕಂಡಕ್ಟರ್ ನ ಅಗತ್ಯವಿದೆ. ಇದು ಆಯಾ ವಸ್ತುಗಳ ಮೆದುಳಿನಂತೆ ಕೆಲಸ ಮಾಡುತ್ತದೆ.

ಪ್ರಸ್ತುತ ಭಾರತ ದೇಶವು ವಿದೇಶಗಳಿಂದ ಈ ಸೆಮಿಕಂಡಕ್ಟರ್ ಅನ್ನು ಆಮದು ಮಾಡಿಕೊಳ್ಳುತ್ತಿದೆ.

ಈ ಚಿಪ್ ತಯಾರಿಕೆಯಲ್ಲಿ ಭಾರತವನ್ನು ನಂಬರ್ ಒನ್ ದೇಶವನ್ನಾಗಿ ಮಾಡುವ ಉದ್ದೇಶವನ್ನು ಹೊಂದಿರುವುದೇ ಈ ಸೆಮಿಕಾನ್ 2.0. ಯೋಜನೆ. ಇದು ಇಂಡಿಯಾ ಸೆಮಿಕಂಡಕ್ಟರ್ ಮಿಷನ್ (ISM) ನ ಎರಡನೇ ಹಂತವಾಗಿದೆ.

ಈ ಸೆಮಿಕಾನ್ 2.0 ಯೋಜನೆಗಾಗಿ ಭಾರತ ಸರ್ಕಾರವು ಒಟ್ಟು ₹1,27,500 ಕೋಟಿಯನ್ನು ಮೀಸಲಿಟ್ಟಿದೆ. ಹಾಗೂ ಈ ಹಣವನ್ನು ಹಂತ ಹಂತವಾಗಿ ಬಳಸಿಕೊಳ್ಳಲಾಗುತ್ತದೆ.

 

Semicon 2.0 Programme India: ಬಜೆಟ್ ಹಂಚಿಕೆ ಈ ರೀತಿ ಇರಲಿದೆ:

•ಪ್ರಥಮ ಹಂತದಲ್ಲಿ ಸರ್ಕಾರದ ಹಳೆಯ ಬಜೆಟ್ ₹76,000 ಕೋಟಿ ರೂ ಆಗಿತ್ತು. ಆದರೆ ಇದೀಗ ಆ ಬಜೆಟ್ ಅನ್ನು ₹1,27,500 ಕೋಟಿ ರೂಗಳಿಗೆ ಏರಿಕೆ ಮಾಡಲಾಗಿದೆ.

•ಒಟ್ಟಾರೆ ಬಜೆಟ್ ನಲ್ಲಿ ಹೆಚ್ಚಿನ ಭಾಗವನ್ನು ಉತ್ಪಾದನೆಗಾಗಿ ಬಳಸಲಾಗುತ್ತದೆ. ಅಂದರೆ ಈ ಹಣದಲ್ಲಿ ಸಿಲಿಕಾನ್ ಚಿಪ್ ತಯಾರಿಸಲು ಮತ್ತು ಕಾರ್ಖಾನೆಗಳನ್ನು ಸ್ಥಾಪಿಸಲು ಸಬ್ಸಿಡಿ ನೀಡಲಾಗುತ್ತದೆ. ಇದಕ್ಕೆ ಅಗತ್ಯವಿರುವಂತಹ ಹಣದಲ್ಲಿ 50ರಷ್ಟು ಹಣವನ್ನು ಸಬ್ಸಿಡಿಯಾಗಿ ಭಾರತ ಸರ್ಕಾರವೇ ನೀಡಲಿದೆ.

•ಈ ಬಾರಿ ಚಿಪ್ ತಯಾರಿಕೆಗೆ ಅಗತ್ಯವಿರುವ ವಸ್ತುಗಳನ್ನು ಭಾರತದಲ್ಲಿ ತಯಾರಿಸಲು ನಿರ್ಧರಿಸಲಾಗಿದೆ. ಇದಕ್ಕೆ ರಾಸಾಯನಿಕಗಳು, ಅನಿಲಗಳು ಮತ್ತು ಯಂತ್ರಗಳ ಅಗತ್ಯವಿದೆ.

ಈ ನಿಟ್ಟಿನಲ್ಲಿ ಅದನ್ನು ಭಾರತದಲ್ಲಿ ತಯಾರಿಸಲು ಉತ್ತೇಜಿಸಲಾಗುತ್ತಿದೆ. ಈ ಉತ್ತೇಜನಕ್ಕೆ ಸಂಬಂಧಪಟ್ಟಂತೆ ವಿಶೇಷ ಹಣವನ್ನು ಮೀಸಲಿಡಲಾಗಿದೆ.

•ಭಾರತಕ್ಕೆ ಸ್ವಂತ ಐಪಿ ಮತ್ತು ಚಿಪ್ ಡಿಸೈನ್ ಮಾಡುವ ಸ್ಟಾರ್ಟ್ಅಪ್ ಗಳ ಅಗತ್ಯವಿದೆ. ಸ್ಟಾರ್ಟ್ಅಪ್ ಗಳ ಧನ ಸಹಾಯಕ್ಕಾಗಿ ಬಜೆಟ್ ನ ಒಂದು ಭಾಗವನ್ನು ನೀಡಲಾಗುತ್ತದೆ.

•ಹಾಗೂ ದೇಶದ 500ಕ್ಕೂ ಹೆಚ್ಚಿನ ಶಿಕ್ಷಣ ಸಂಸ್ಥೆಗಳಲ್ಲಿ ಸೆಮಿಕಂಡಕ್ಟರ್ ಲ್ಯಾಬ್ ಗಳು ಸ್ಥಾಪನೆಯಾಗಲಿವೆ. ಮತ್ತು ಯುವಕರಿಗೆ ತರಬೇತಿ ನೀಡಲು ವಿಶೇಷ ಅನುದಾನವನ್ನು ಮೀಸಲಿಡಲಾಗಿದೆ.

ಇದರಿಂದಾಗಿ ಭಾರತವು ಸ್ವಾವಲಂಬಿಯಾಗುವುದರ ಜೊತೆಗೆ ನಿರುದ್ಯೋಗ ಸಮಸ್ಯೆಯನ್ನು ಕೂಡ ತೊಡೆದು ಹಾಕಬಹುದಾಗಿದೆ.

 

ಯೋಜನೆಯ ಪ್ರಮುಖ ಉದ್ದೇಶಗಳು:

•ಪೂರ್ಣ ಪ್ರಮಾಣದಲ್ಲಿ ಸ್ವಾವಲಂಬನೆ: 

>ಪ್ರಸ್ತುತ ವಿದೇಶಗಳಲ್ಲಿ ಡಿಸೈನ್ ಆದಂತಹ ಚಿಪ್ಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ಆನಂತರ ಅವುಗಳನ್ನು ಇಲ್ಲಿ ಜೋಡಿಸಲಾಗುತ್ತದೆ.

>ಹೆಚ್ಚಿನ ಪ್ರಮಾಣದಲ್ಲಿ ಪ್ರಸ್ತುತ ಆಮದು ಮಾಡಿಕೊಳ್ಳಲಾಗುತ್ತಿದೆ.

>ಈ ಯೋಜನೆಯ ಪ್ರಕಾರ ಮೊದಲ ಹಂತದಿಂದ ಕೊನೆಯ ಹಂತದ ತನಕ ಎಲ್ಲಾ ಪ್ರಕ್ರಿಯೆಗಳು ಭಾರತದಲ್ಲಿ ನಡೆಯುತ್ತವೆ.

>ಚಿಪ್ ವಿನ್ಯಾಸದಿಂದ ಪ್ರಾರಂಭವಾಗಿ, ತಯಾರಿಕೆ, ಪರೀಕ್ಷೆ ಹಾಗೂ ಪ್ಯಾಕೇಜಿಂಗ್ ತನಕ ಎಲ್ಲಾ ಹಂತಗಳನ್ನು ಭಾರತದಲ್ಲಿಯೇ ಅಭಿವೃದ್ಧಿಪಡಿಸುವಂತಹ ಗುರಿಯನ್ನು ಈ ಯೋಜನೆಯು ಹೊಂದಿದೆ.

ಜಾಗತಿಕ ಮಟ್ಟದಲ್ಲಿ ಬೆಳವಣಿಗೆ:

>ಈ ಯೋಜನೆಯು ಕೇವಲ ಸ್ವದೇಶಕ್ಕೆ ಮಾತ್ರವಲ್ಲದೆ, ಜಾಗತಿಕ ಮಟ್ಟದಲ್ಲಿ ರಫ್ತು ಮಾಡುವಷ್ಟರ ಮಟ್ಟಿಗೆ ಬೆಳೆಯುವ ಉದ್ದೇಶವನ್ನು ಹೊಂದಿದೆ.

>ಪ್ರಸ್ತುತ ಮೈಕ್ರೋಚಿಪ್ ಉತ್ಪಾದನೆಯಲ್ಲಿ ಚೀನಾ, ತೈವಾನ್ ಮತ್ತು ದಕ್ಷಿಣ ಕೊರಿಯಾ ದೇಶಗಳು ಇಡೀ ಜಗತ್ತನ್ನೇ ಆಳುತ್ತಿವೆ.

>ಈ ನಿಟ್ಟಿನಲ್ಲಿ ಇಡೀ ಜಗತ್ತೇ ಭಾರತದ ಕಡೆಗೆ ತಿರುಗಿ ನೋಡುವಂತೆ ಮಾಡುವ ಉದ್ದೇಶವನ್ನು ಹೊಂದಿದೆ.

>ಇದಕ್ಕಾಗಿ ಗುಜರಾತಿನ ಧೋಲೆರಾ ಮತ್ತು ಕರ್ನಾಟಕದ ಬೆಂಗಳೂರು ಮತ್ತು ಮೈಸೂರುಗಳಲ್ಲಿ ಸೆಮಿಕಂಡಕ್ಟರ್ ಪಾರ್ಕ್ ಗಳನ್ನು ನಿರ್ಮಿಸಲಾಗುತ್ತದೆ.

>ಅಮೆರಿಕ ಮೂಲದ ಕಂಪನಿಗಳಾದ ಮೈಕ್ರಾನ್, ಎನ್ ವಿಡಿಯಾ ಹಾಗೂ ತೈವಾನ್ ದೇಶದ ಫಾಕ್ಸ್‌ಕಾನ್ ಬೆಳಂತಹ ದೊಡ್ಡ ದೊಡ್ಡ ಕಂಪನಿಗಳನ್ನು ಆಕರ್ಷಿಸುವುದು. ಮತ್ತು ಭಾರತದಲ್ಲಿ ಅವುಗಳ ಕಾರ್ಖಾನೆಗಳನ್ನು ತೆರೆಯುವಂತೆ ಮಾಡುವುದು.

>ಈ ಮೂಲಕವಾಗಿ ಕೇವಲ ಭಾರತದ ಬಳಕೆಗೆ ಅಷ್ಟೇ ಅಲ್ಲದೆ ವಿದೇಶಗಳಿಗೂ ಕೂಡ ಚಿಪ್ ಅನ್ನು ರಫ್ತು ಮಾಡಬಹುದು.

•ಆಮದು ಪ್ರಮಾಣ ತಗ್ಗಿಸುವುದು:

>ಪ್ರಸ್ತುತ ಭಾರತದಲ್ಲಿ ಯಾವುದೇ ರೀತಿಯ ಚಿಪ್ ಉತ್ಪಾದನೆ ನಡೆಯುತ್ತಿಲ್ಲ.

>ಪೂರ್ಣಪ್ರಮಾಣದಲ್ಲಿ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ ಹಾಗೂ ವೆಚ್ಚವೂ ಕೂಡ ಹೆಚ್ಚಿದೆ.

>ಕೋವಿಡ್ 19 ಸಮಯದಲ್ಲಿ ವಿದೇಶಗಳಲ್ಲಿ ಉತ್ಪಾದನೆಯನ್ನು ನಿಲ್ಲಿಸಲಾಗಿತ್ತು. ಹಾಗೂ ಈ ಸಮಯದಲ್ಲಿ ಭಾರತಕ್ಕೆ ಆಮದು ಕೂಡ ಆಗುತ್ತಿರಲಿಲ್ಲ. ಹೀಗಾಗಿ ಭಾರತದ ಉತ್ಪಾದನೆಯು ನಿಲ್ಲಿಸಬೇಕಾಗಿತ್ತು.

>ಇಂತಹ ಜಾಗತಿಕ ಸಮಸ್ಯೆಗಳು ಎದುರಾದಾಗ ಸ್ವಾವಲಂಬಿ ಆಗಿರುವುದು ಬಹಳ ಅಗತ್ಯವಾಗಿರುತ್ತದೆ.

>ಚಿಪ್ ತಯಾರಿಕೆಗಾಗಿ ಸೂಕ್ತ ಬಜೆಟ್ ಅನ್ನು ನಿರ್ಮಿಸಲಾಗಿದೆ. ಹಾಗೂ ಎಲ್ಲಾ ಉತ್ಪಾದನಾ ಹಂತಗಳು ಭಾರತದಲ್ಲಿ ನಡೆಯಲಿವೆ. ಇದರಿಂದಾಗಿ ಆಮದು ಮಾಡಿಕೊಳ್ಳುವಂತಹ ಪ್ರಮೇಯವೇ ಬರುವುದಿಲ್ಲ. ಜೊತೆಗೆ ಆಮದು ವೆಚ್ಚವು ಉಳಿಯುತ್ತದೆ.

>ಹಾಗೂ 2035 ರ ವೇಳೆಗೆ ಭಾರತದ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯು 150 ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆ ಇದೆ.

•ಮಾನವ ಸಂಪನ್ಮೂಲದ ಅಗತ್ಯತೆ: 

>ಪ್ರಸ್ತುತ ಚಿಪ್ ತಯಾರಿಕೆಗೆ ಬೇಕಾದಂತಹ ನುರಿತ ತಜ್ಞರ ಅವಶ್ಯಕತೆ ಭಾರತಕ್ಕೆ ಬಹಳಷ್ಟು ಇದೆ.

>ಹೀಗಾಗಿ ಭಾರತದಲ್ಲಿ ಇಂಜಿನಿಯರ್ ಗಳ ಪಠ್ಯಕ್ರಮವನ್ನು ಬದಲಾಯಿಸಲಾಗುತ್ತಿದೆ.

>ಪಠ್ಯಕ್ರಮಗಳಿಗೆ ಹೊಸದಾಗಿ ಸೆಮಿಕಂಡಕ್ಟರ್, ವಿಎಲ್‌ಎಸ್‌ಐ , ಹಾಗೂ ನ್ಯಾನೋ ತಂತ್ರಜ್ಞಾನದ ಕುರಿತಾದ ವಿಷಯಗಳನ್ನು ಅಳವಡಿಸಲಾಗುತ್ತಿದೆ.

>ದೇಶದಲ್ಲಿ ಸುಮಾರು 500ಕ್ಕೂ ಹೆಚ್ಚು ಇಂಜಿನಿಯರಿಂಗ್ ಕಾಲೇಜುಗಳು ಹಾಗೂ ಐಐಟಿ ಮತ್ತು ಎನ್ಐಟಿ ಸಂಸ್ಥೆಗಳನ್ನು ಈ ಯೋಜನೆ ಅಡಿ ತರಲಾಗಿದೆ. ಹಾಗೂ ಇದರಲ್ಲಿ ಕರ್ನಾಟಕದ ಹಲವಾರು ಕಾಲೇಜುಗಳು ಸೇರಿಕೊಂಡಿವೆ.

>ಚಿಪ್ ಡಿಸೈನ್ ಕಂಪನಿಗಳಾದಂತಹ ಸಿನಾಪ್ಸಿಸ್ ಹಾಗೂ ಕ್ಯಾಡೆನ್ಸ್ ಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಉಚಿತ ತರಬೇತಿಯನ್ನು ನೀಡಲಾಗುತ್ತಿದೆ.

>ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ 60,000 ನೇರ ಉದ್ಯೋಗಗಳನ್ನು ಹಾಗೂ ಪರೋಕ್ಷ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಲಾಗಿದೆ.

•ರಾಷ್ಟ್ರದ ರಕ್ಷಣೆ: 

>ಪ್ರಸ್ತುತ ಯುದ್ಧ ಉಪಕರಣಗಳು ಮತ್ತು ಯುದ್ಧಕ್ಕೆ ಸಂಬಂಧಪಟ್ಟ ವಸ್ತುಗಳಲ್ಲಿ ಬಳಸುವಂತಹ ಚಿಪ್ಸ್ ಗಳನ್ನು ವಿದೇಶದಿಂದಲೇ ಆಮದು ಮಾಡಿಕೊಳ್ಳಲಾಗುತ್ತಿದೆ.

>ಒಂದು ವೇಳೆ ಇದರಲ್ಲಿ ಗುಪ್ತವಾಗಿ ಮಾಹಿತಿಗಳು ವಿದೇಶಗಳಿಗೆ ರವಾನೆಯಾದರೆ ರಾಷ್ಟ್ರಕ್ಕೆ ತೊಂದರೆ ಉಂಟಾಗುತ್ತದೆ.

>ಪ್ರಸ್ತುತ 9% ಹೆಚ್ಚು ಚಿಪ್‌ಗಳನ್ನು ತೈವಾನ್ ದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ.

>ಒಂದು ವೇಳೆ ತೈವಾನ್ ದೇಶದ ಜೊತೆ ಯಾವುದೇ ದೇಶ ಯುದ್ಧ ಮಾಡಲು ಆರಂಭಿಸಿದರೆ, ಆಮದು ಸಂಪೂರ್ಣವಾಗಿ ನಿಂತು ಹೋಗುತ್ತದೆ. ಇದರಿಂದ ನಮ್ಮ ರಕ್ಷಣಾ ವ್ಯವಸ್ಥೆಗೆ ಉಂಟಾಗಬಹುದು.

>ಹೀಗಾಗಿ ರಕ್ಷಣಾ ವಲಯ ಮತ್ತು ಸೂಕ್ಷ್ಮ ವಲಯಗಳಿಗೆ ಅಗತ್ಯವಿರುವ ಚಿಪ್ ಗಳನ್ನು ಸರ್ಕಾರದ ಕಣ್ಗಾವಲಿನಲ್ಲಿ ತಯಾರಿಸಲು ನಿರ್ಧರಿಸಲಾಗಿದೆ.

>ತೀವ್ರ ತಾಪಮಾನವನ್ನು ತಡೆದುಕೊಳ್ಳಬಲ್ಲ ಮತ್ತು ರೇಡಿಯೇಶನ್ ಅನ್ನು ತಡೆದುಕೊಳ್ಳುವ ವಿಶೇಷ ಚಿಪ್ ಗಳ ಅಗತ್ಯವಿದೆ. ಇದನ್ನು ತಯಾರಿಸಲು ಖಾಸಗಿ ಸಂಸ್ಥೆಗಳು ಮತ್ತು DRDO ಗೆ ವಿಶೇಷ ಅನುದಾನವನ್ನು ನೀಡಲಾಗುತ್ತದೆ.

>ದೇಶದ ಬ್ಯಾಂಕಿಂಗ್ ವ್ಯವಸ್ಥೆ, ಇಂಟರ್ನೆಟ್ ವ್ಯವಸ್ಥೆ, ಇನ್ನಿತರ ಭದ್ರತೆಗೆ ಸಂಬಂಧಪಟ್ಟ ವ್ಯವಸ್ಥೆಗಳಲ್ಲಿ ಸ್ವದೇಶಿ ಚಿಪ್ ಗಳ ಅಗತ್ಯವಿದೆ.

ಈ ಎಲ್ಲಾ ಕಾರಣಗಳಿಂದಾಗಿ ದೇಶದ ಭದ್ರತಾ ದೃಷ್ಟಿಯಿಂದ ನೋಡುತ್ತಾ ಹೋದಾಗ, ಸ್ವದೇಶದಲ್ಲೇ ಚಿಪ್ ತಯಾರಿಕೆ ಮಾಡುವುದು ಬಹಳ ಅಗತ್ಯದ ವಿಷಯವಾಗಿದೆ.

•ವಿದೇಶಿ ಹೂಡಿಕೆ:

>ಪ್ರಸ್ತುತ ಈ ಕಾರ್ಖಾನೆಗಳನ್ನು ಸ್ಥಾಪನೆ ಮಾಡಲು 40,000 ಕೋಟಿ ಯಿಂದ 80,000 ಕೋಟಿಗಳ ತನಕ ಅಗತ್ಯವಿದೆ. ಇದಿಷ್ಟುನ್ನು ಕೇವಲ ಸ್ವದೇಶಿ ಕಂಪನಿಗಳಿಂದ ಹೂಡಿಕೆ ಮಾಡಲು ಸಾಧ್ಯವಿಲ್ಲ.

>ಈ ನಿಟ್ಟಿನಲ್ಲಿ ವಿದೇಶಿ ಕಂಪನಿಗಳನ್ನ ಆಕರ್ಷಿಸುವುದು ಬಹಳ ಅಗತ್ಯದ ವಿಷಯವಾಗಿದೆ.

>ಈಗಾಗಲೇ ಅಮೆರಿಕ ಚೀನಾ ಯುರೋಪ್ ದೇಶಗಳು ಅತ್ಯಾಧುನಿಕ ಸಬ್ಸಿಡಿಗಳನ್ನು ನೀಡುತ್ತಿದೆ. ಮತ್ತು ಈ ಮೂಲಕ ವಿದೇಶಿ ಕಂಪನಿಗಳನ್ನು ಆಕರ್ಷಿಸಲು ಪ್ರಯತ್ನಿಸುತ್ತಿದೆ.

>ಈ ನಡುವೆ ಭಾರತದ ಕಡೆಗೆ ಕಂಪನಿಗಳ ಆಕರ್ಷಿಸುವುದು ದೊಡ್ಡ ಸವಾಲಿನ ವಿಷಯವಾಗಿದೆ.

>ಆದರೂ ಕೂಡ ಮೈಕ್ರಾನ್ ಕಂಪನಿಯು ಗುಜರಾತಿನ ಸಾನಂದ್‌ನಲ್ಲಿ 22,500 ಕೋಟಿ ವೆಚ್ಚದಲ್ಲಿ ಘಟಕವನ್ನು ಸ್ಥಾಪಿಸುತ್ತಿದೆ.

>ಹಾಗೂ ಟಾಟಾ ಗ್ರೂಪ್ ಕಂಪನಿ ಮತ್ತು ತೈವಾನ್ ದೇಶದ PSMC ಕಂಪನಿಯು ಜೊತೆಗೂಡಿ ಗುಜರಾತಿನ ದೊಲೇರಾದಲ್ಲಿ ದೇಶದ ಮೊದಲ ಚಿಪ್ ಫ್ಯಾಬ್ ಅನ್ನು ಸ್ಥಾಪನೆ ಮಾಡುತ್ತಿವೆ.

>ಒಟ್ಟು ವೆಚ್ಚದಲ್ಲಿ 50ರಷ್ಟು ಭಾಗವನ್ನು ಕೇಂದ್ರ ಸರ್ಕಾರವೇ ನೇರವಾಗಿ ಭರಿಸುತ್ತದೆ. ಹಾಗೂ ಶೇಕಡಾ 20-25 ಭಾಗವನ್ನು ಆಯಾ ರಾಜ್ಯ ಸರ್ಕಾರಗಳು ಭರಿಸುತ್ತವೆ.

>ಚಿಪ್ ತಯಾರಿಕೆಗೆ ಅಗತ್ಯ ಇರುವಂತಹ ಕಚ್ಚಾ ಯಂತ್ರೋಪಕರಣಗಳ ತಯಾರಿಕಾ ಕಂಪನಿಗಳ ಅಗತ್ಯತೆ ಕೂಡ ಭಾರತಕ್ಕೆ ಇದೆ.

>ಈ ಸಲುವಾಗಿ ಜಪಾನ್ ಮತ್ತು ಯುರೋಪ್ ದೇಶದ ಕಂಪನಿಗಳು ಭಾರತಕ್ಕೆ ಬಂದು ಹೂಡಿಕೆ ಮಾಡಲು ವಿಶೇಷ ರಿಯಾಯಿತಿಗಳನ್ನು ಘೋಷಿಸಿದೆ.

ಮೇಕ್ ಇನ್ ಇಂಡಿಯಾ ಯೋಜನೆಗೆ ಮತ್ತಷ್ಟು ಪುಷ್ಟಿ:

 

>ಇದುವರೆಗೂ ಮೇಕ್ ಇನ್ ಇಂಡಿಯಾ ಯೋಜನೆ ಅಡಿ ಒಂದಷ್ಟು ಉತ್ಪಾದನೆಗಳನ್ನು ಭಾರತದಲ್ಲೇ ನಡೆಸಲಾಗುತ್ತಿತ್ತು.

>ಈ ಯೋಜನೆ ಅಡಿಯಲ್ಲಿ ಚಿಪ್ ತಯಾರಿಸಲು 12 ಪ್ರಮುಖ ಸೆಮಿಕಂಡಕ್ಟರ್ ತಯಾರಿಕಾ ಘಟಕಗಳಿಗೆ ಅನುಮೋದನೆ ನೀಡಲಾಗಿದೆ.

>ಹಾಗೂ ಈ ನಿಟ್ಟಿನಲ್ಲಿ ₹1.64 ಲಕ್ಷಕೋಟಿಗೂ ಮೀರಿ ಹೂಡಿಕೆಯನ್ನು ಮಾಡಲಾಗಿದೆ.

>ಉತ್ತರ ಪ್ರದೇಶ, ಅಸ್ಸಾಂ, ಒಡಿಸ್ಸಾ, ಆಂಧ್ರಪ್ರದೇಶ, ಗುಜರಾತ್, ಹಾಗೂ ಪಂಜಾಬ್ ಗಳಲ್ಲಿ ಅಡ್ವಾನ್ಸ್ಡ್ ಪ್ಯಾಕೇಜಿಂಗ್ ಮತ್ತು ಸಿಲಿಕಾನ್ ಫ್ಯಾಬ್ ಘಟಕಗಳು ಈಗಾಗಲೇ ನಿರ್ಮಾಣಗೊಳ್ಳಲು ಪ್ರಾರಂಭವಾಗಿವೆ.

ಒಟ್ಟಾರೆಯಾಗಿ ಮುಂದಿನ ಐದು ವರ್ಷಗಳಲ್ಲಿ ಭಾರತವು ತನ್ನ ಗುರಿಯನ್ನು ತಲುಪಲು ಬೇಕಾದಂತಹ ಎಲ್ಲಾ ತಯಾರಿಗಳನ್ನು ನಡೆಸುತ್ತಿದೆ. ಇದು ಯಶಸ್ವಿಯಾಗಲಿ ಭಾರತ ಮತ್ತೊಂದು ಐತಿಹಾಸಿಕ ಹೆಜ್ಜೆಯನ್ನು ಇಟ್ಟಂತಾಗುತ್ತದೆ.

ಮುಖ್ಯಾಂಶಗಳು:

>15 ಜುಲೈ 2026ರಂದು ಸೆಮಿಕಾನ್ 2.0 ಯೋಜನೆಗೆ ಅನುಮೋದನೆ.

>ಇದು ₹1,27,500 ಕೋಟಿ ವೆಚ್ಚದ ಯೋಜನೆಯಾಗಿದೆ.

>60,000 ನೇರ ಉದ್ಯೋಗದ ಸೃಷ್ಟಿ.

>ಆಮದನ್ನು ಕಡಿಮೆಯಾಗಿಸಿ ಸ್ವಾವಲಂಬಿಯಾಗುವ ಗುರಿ.

>ವಿದೇಶಿ ಹೂಡಿಕೆಗೆ ಉತ್ತೇಜನ ನೀಡುವುದು.

>ಭಾರತವನ್ನು ಜಾಗತಿಕ ಹಬ್ ಆಗಿಸುವ ಗುರಿಯನ್ನು ಹೊಂದಿದೆ.

ಹೆಚ್ಚಿನ ಮಾಹಿತಿಗಾಗಿ: India Semiconductor Mission 

ಇದನ್ನು ನೋಡಿ: INDIA UK CETA 2026

Leave a Comment

Scroll to Top

Discover more from nirantarasuddhi

Subscribe now to keep reading and get access to the full archive.

Continue reading