India UK CETA 2026: CETA ಎಂಬುದು ಭಾರತ ಯುಕೆ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದವಾಗಿದೆ. ಇದು ಭಾರತ ಮತ್ತು ಯು ಕೆ ನಡುವಿನ ಸಮಗ್ರ ಮುಕ್ತ ವ್ಯಾಪಾರ ಮತ್ತು ಆರ್ಥಿಕ ಸಹಕಾರದ ಒಪ್ಪಂದವಾಗಿದೆ. ಇದನ್ನು 2026 ಜುಲೈ 15ರಂದು ಜಾರಿಗೊಳಿಸಲಾಗಿದೆ.

India UK CETA 2026: ಈ ಒಪ್ಪಂದಕ್ಕೆ ಸಂಬಂಧಪಟ್ಟಂತಹ ಅಧಿಕೃತ ಮಾತುಕತೆಗಳು ಜನವರಿ 2022 ರಲ್ಲಿ ಪ್ರಾರಂಭವಾಗಿದ್ದವು.
ಈ ಒಪ್ಪಂದವು ಜಾರಿಯಾದ ಹಂತಗಳು ಈ ರೀತಿಯಾಗಿದೆ:
>2021 ಮೇ ತಿಂಗಳಲ್ಲಿ ಪ್ರಧಾನಿ ಮೋದಿ ಮತ್ತು ಯುಕೆ ದೇಶದ ಆಗಿನ ಪ್ರಧಾನಿ ಬೋರಿಸ್ ಜಾನ್ಸಸ್ ವರ್ದಿತ ವ್ಯಾಪಾರ ಸಹಭಾಗಿತ್ವಕ್ಕೆ ಸಹಿ ಮಾಡಿದ್ದರು.
>2022 ಜನವರಿಯಲ್ಲಿ ಭಾರತದ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಜೊತೆ ಮಾತುಕತೆಗಳು ನಡೆದಿದ್ದವು. ನವದೆಹಲಿಯಲ್ಲಿ ಯುಕೆ ಪ್ರತಿನಿಧಿಗಳು ಸಚಿವರ ಜೊತೆ ಅಧಿಕೃತ ಮಾತುಕತೆಯನ್ನು ನಡೆಸಿದ್ದರು.
>ನಂತರ 2025 ಇದರ ತನಕ 14 ಸುತ್ತುಗಳ ದೀರ್ಘ ಮಾತುಕತೆಗಳು, ಚರ್ಚೆಗಳು ನಡೆದಿವೆ. ಕೆಲವು ಚುನಾವಣೆಗಳ ಕಾರಣದಿಂದಾಗಿ ವಿಳಂಬ ಉಂಟಾಗಿತ್ತು.
>ನಂತರ 2025 ಮೇ 6 ರಂದು ಎಲ್ಲಾ ಸೂಚನೆಗಳಿಗೂ ಅಂತಿಮ ಒಪ್ಪಿಗೆ ದೊರಕಿತು.
>2025 ಜುಲೈ 24ರಂದು ಪ್ರಧಾನಿ ಮೋದಿ ಹಾಗೂ ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಒಪ್ಪಂದಕ್ಕೆ ಸಹಿ ಹಾಕಿದರು.
>ಇದೀಗ 2026 ಜುಲೈ 15 ರಂದು ಎಲ್ಲಾ ಪ್ರಕ್ರಿಯೆಯು ಪೂರ್ಣಗೊಂಡು, ಅಧಿಕೃತವಾಗಿ ಈ ಒಪ್ಪಂದವು ಜಾರಿಗೊಂಡಿದೆ.
ಯುಕೆ ಯುರೋಪಿಯನ್ ಯೂನಿಯನ್ ದೇಶಗಳಿಂದ ಹೊರಗೆ ಬಂದಿದೆ. ಈ ನಿಟ್ಟಿನಲ್ಲಿ ಉಭಯ ದೇಶಗಳೊಂದಿಗೆ ವ್ಯಾಪಾರ ಸಂಬಂಧವನ್ನು ಹೊಂದುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಹಾಗೂ ಇದರ ಮೂಲ ಉದ್ದೇಶ ಎರಡು ದೇಶಗಳ ನಡುವಿನ ವ್ಯಾಪಾರ ಸಂಬಂಧವನ್ನು ಗಟ್ಟಿಯಾಗಿಸುವುದು. ಜೊತೆಗೆ ಸಮಗ್ರ ಬೆಳವಣಿಗೆಯನ್ನು ಹೊಂದುವುದು.
India UK CETA 2026: ಈ ಒಪ್ಪಂದದ ಪ್ರಮುಖ ವೈಶಿಷ್ಟ್ಯತೆಗಳು:
•ರಫ್ತು ಉತ್ತೇಜಿಸುವುದು: ಭಾರತದಿಂದ ಯುಕೆಗೆ ರಫ್ ಆಗಲ್ಪಡುವಂತಹ 99% ವಸ್ತುಗಳಿಗೆ ಯಾವುದೇ ರೀತಿಯ ತೆರಿಗೆ ಇರುವುದಿಲ್ಲ. ಇದರಿಂದಾಗಿ ಬಟ್ಟೆ ಮತ್ತು ಚರ್ಮಕ್ಕೆ ಸಂಬಂಧಪಟ್ಟಂತಹ ವಸ್ತುಗಳ ಮಾರಾಟಗಾರರಿಗೆ ಬಹಳ ಲಾಭವಾಗಲಿದೆ.
•ವ್ಯಾಪಾರ ದುಪ್ಪಟ್ಟು: ಪ್ರಸ್ತುತ ಎರಡು ದೇಶಗಳ ನಡುವೆ 56 ಬಿಲಿಯನ್ ನಷ್ಟು ವ್ಯಾಪಾರ ನಡೆಯುತ್ತಿದೆ. 2030ರ ಒಳಗೆ ಈ ವ್ಯಾಪಾರದ ಪ್ರಮಾಣವನ್ನು 112 ಬಿಲಿಯನ್ ಮಾಡುವ ಯೋಜನೆಯನ್ನು ಈ ಒಪ್ಪಂದ ಹೊಂದಿದೆ.
•ವೀಸಾ ನಿಯಮಗಳ ಸಡಿಲಿಕೆ: ಭಾರತೀಯ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳಿಗೆ ಯುಕೆಗೆ ಪ್ರಯಾಣಿಸಲು ಅನುಕೂಲ. ಇದಕ್ಕೆ ಸಂಬಂಧಪಟ್ಟಂತೆ ಈ ವೀಸಾ ನಿಯಮಗಳನ್ನು ಸರಲೀಕರಣ ಗೊಳಿಸಲಾಗುತ್ತದೆ.
•ಸೇವೆಗಳು ಸುಲಭ: ಮೂಲಕ ಕಾನೂನು ಸೇವೆಗಳು, ಡಿಜಿಟಲ್ ಸೇವೆಗಳು, ಹೂಡಿಕೆ ಹಾಗೂ ಐಟಿ ಸೇವೆಗಳಿಗೂ ಮುಕ್ತ ಅವಕಾಶಗಳು ದೊರೆಯಲಿದೆ.
•ದೇಶಿಯ ಉದ್ಯಮಗಳನ್ನು ಕಾಪಾಡಿಕೊಳ್ಳುವಿಕೆ: ಈ ಒಪ್ಪಂದದಿಂದಾಗಿ ದೇಶದ ಕೃಷಿ, ಕೈಗಾರಿಕೆ ಮತ್ತು ಹೈನುಗಾರಿಕೆಗಳಿಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ. ಇದಕ್ಕೆ ಸಂಬಂಧಪಟ್ಟಂತಹ ಹಲವಾರು ನಿಯಮಗಳನ್ನು ಜಾರಿಗೊಳಿಸಲಾಗಿದೆ.
ಒಟ್ಟಾರೆಯಾಗಿ ನೋಡುತ್ತಾ ಹೋದಾಗ ಇಲ್ಲಿ ಲಾಭ ತರುವಂತಹ ಅಂಶಗಳೇ ಹೆಚ್ಚಾಗಿವೆ. ಆದರೂ ಪರಿಣಾಮಗಳ ಕುರಿತಾಗಿಯೂ ಕೂಡ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸರ್ಕಾರದ ಮುಂದಿರುವಂಥದ್ದು.
This is a significant moment in the India-United Kingdom partnership!
With the coming into force of the Comprehensive Economic and Trade Agreement and the Agreement on Social Security, our economic linkages are going to get even deeper. Together, these agreements translate our… https://t.co/6yZR0IUfCP
— Narendra Modi (@narendramodi) July 15, 2026
CETA ಒಪ್ಪಂದದ ಪ್ರಮುಖ ನಿಯಮಗಳು:
•ತೆರಿಗೆಯಲ್ಲಿ ಕಡಿತ:
>ದೇಶಕ್ಕೆ ಲಾಭ:
ಭಾರತ ರಫ್ತು ಮಾಡುವಂತ ಶೇಕಡ 99 ಪ್ರಮಾಣದ ವಸ್ತುಗಳಿಗೆ ಸುಂಕವನ್ನು ವಿಧಿಸಲಾಗುವುದಿಲ್ಲ. ಇದರಿಂದ ಯುಕೆ ದೇಶದಲ್ಲಿ ಭಾರತದ ಜವಳಿ ಹಾಗೂ ಚರ್ಮೋದ್ಯಮದ ಉತ್ಪನ್ನಗಳಿಗೆ ಹಲವು ವಸ್ತುಗಳಿಗೆ ಬಾರಿ ಬೇಡಿಕೆ ಉಂಟಾಗಲಿದೆ. ಇದು ಭಾರತ ದೇಶಕ್ಕೆ ಲಾಭ ತರಲಿದೆ.
>ಆಮದು ತೆರಿಗೆ ಕಡಿತ:
ಭಾರತಕ್ಕೆ ಬ್ರಿಟಿಷ್ ಕಾರುಗಳು ಯುಕೆ ದೇಶದಿಂದ ಆಮದಾಗುತ್ತವೆ. ಹಾಗೂ ಪ್ರಸ್ತುತ ಇವುಗಳ ಮೇಲೆ ಇರುವಂತಹ 60-100 ಶೇಕಡಾ ತೆರಿಗೆಯಿಂದ ಶೇಕಡ 10 ಕ್ಕೆ ಇಳಿಸಲಾಗುತ್ತದೆ.
ಪ್ರಸ್ತುತ ಸ್ಕಾಚ್ ವಿಸ್ಕಿ ಮೇಲೆ 150 ಶೇಕಡ ತೆರಿಗೆ ಇದೆ. ಇದನ್ನು ಶೇಕಡ 75 ಕ್ಕೆ ಇಳಿಸಲಾಗುತ್ತದೆ. ಮಧು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಶೇಕಡ 40ಕ್ಕೆ ಇಳಿಸುವ ಯೋಜನೆ ಇದೆ.
•ವೀಸಾಗಾಗಿ ಪರದಾಟವಿಲ್ಲ:
>ನಿಯಮ ಸರಳ: ಇಲ್ಲಿ ವಿದ್ಯಾರ್ಥಿಗಳು, ಸಂಶೋಧಕರು, ಉದ್ಯೋಗಿಗಳು, ಹೂಡಿಕೆದಾರರಿಗೆ ಯುಕೆ ವೀಸಾ ಪಡೆಯಲು ನಿಯಮಗಳನ್ನು ಸರಳಿಕರಣಗೊಳಿಸಲಾಗಿದೆ.
>ಸಂಗೀತಗಾರರು ಯೋಗ ಶಿಕ್ಷಕರು ಇನ್ನಿತರರಿಗೆ ಸ್ವತಂತ್ರ ಉದ್ಯೋಗಿಗಳಾಗಿ ಯುಕೆ ದೇಶದಲ್ಲಿ ಉದ್ಯೋಗ ಪಡೆಯುವ ಅವಕಾಶವಿದೆ.
•ಎರಡು ಕಡೆ ಹಣ ಪಾವತಿ ಬೇಡ:
>ಈ ಹಿಂದೆ ಭಾರತವು ಕೆಲಸದ ನಿಮಿತ್ತ ಉದ್ಯೋಗಿಗಳನ್ನು ಯುಕೆಗೆ ಕಳಿಸಿದಾಗ, ಕಡ್ಡಾಯವಾಗಿ ಯುಕೆ ರಾಷ್ಟ್ರೀಯ ವಿಮೆಯನ್ನು ಉದ್ಯೋಗಿಗಳು ಪಾವತಿಸಬೇಕಿತ್ತು. ಜೊತೆಗೆ ಭಾರತದ ಪಿಎಫ್ ಅನ್ನು ಕೂಡ ಪಾವತಿ ಮಾಡಬೇಕಿತ್ತು.
>ಹೊಸ ನಿಯಮದ ಪ್ರಕಾರ ಉದ್ಯೋಗಿಗಳು ಭಾರತ ಪಿಎಫ್ ಅನ್ನು ಪಾವತಿ ಮಾಡಿದರೆ ಸಾಕು.
>ಹಾಗೂ ಈ ವಿನಾಯಿತಿಯನ್ನು 3 ವರ್ಷಗಳಿಂದ 5 ವರ್ಷಗಳಿಗೆ ಹೆಚ್ಚಿಸಲಾಗಿದೆ. ಅಂದರೆ ಐದು ವರ್ಷಗಳ ತನಕ ಯಾವುದೇ ವಿಮೆಯನ್ನು ಪಾವತಿಸದೆ ಯುಕೆಯಲ್ಲಿ ಕೆಲಸ ಮಾಡಬಹುದು.
>ಸಂಬಳದ ಬಹುದೊಡ್ಡ ಪಾಲನ್ನು ಈ ಹಿಂದೆ ಯುಕೆ ರಾಷ್ಟ್ರೀಯ ವಿಮೆಗೆ ನೀಡಬೇಕಾಗಿತ್ತು.
>ಈ ಬದಲಾವಣೆಯಿಂದಾಗಿ ಸಂಬಳದಲ್ಲಿ ಹೆಚ್ಚಿನ ಭಾಗವನ್ನು ಉಳಿತಾಯ ಮಾಡಬಹುದು.
>ಜೊತೆಯಲ್ಲಿ ಭಾರತದ ಕಂಪನಿಗಳ ಸೇವಾ ವೆಚ್ಚವು ಕೂಡ ಕಡಿಮೆಯಾಗುತ್ತದೆ.
•ಕಸ್ಟಮ್ ಪ್ರಕ್ರಿಯೆ ಸುಲಭ:
>ಇಲ್ಲಿ ರಫ್ತು ಮತ್ತು ಆಮದು ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣ ಮಾಡಲಾಗಿದೆ.
>ಇಲ್ಲಿ ಕಚೇರಿಗಳಿಗೆ ಅಲೆದಾಡುವಂತಹ ಪ್ರಮೇಯವೆ ಬರುವುದಿಲ್ಲ. ಎಲ್ಲ ರೀತಿಯ ದಾಖಲೆಗಳನ್ನು ಆನ್ಲೈನ್ ಮೂಲಕವೇ ಸಲ್ಲಿಸಬಹುದಾಗಿದೆ.
>ಗಡಿಗೆ ತಲುಪುವಂತಹ ಎಲ್ಲ ಸರಕುಗಳನ್ನು ವಿಳಂಬ ಮಾಡದೇ ಬಿಡುಗಡೆಗೊಳಿಸಲಾಗುತ್ತದೆ. ಇದಕ್ಕೆ ಸಹಕಾರಿಯಾಗುವಂತೆ ಗ್ರೀನ್ ಚಾನೆಲ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.
>ಸರಕುಗಳನ್ನು ಕಳಿಸುವ ಮೊದಲೇ ಉದ್ಯಮಿಗಳು ಅಧಿಕಾರಿಗಳಿಂದ ತೆರೆದರ ಮತ್ತು ಇನ್ನಿತರ ನಿಯಮಗಳ ಕುರಿತಾಗಿ ಲಿಖಿತವಾಗಿ ತಿಳಿದುಕೊಳ್ಳಬಹುದು.
>ಇದರಿಂದಾಗಿ ಯಾವುದೇ ರೀತಿಯ ಗೊಂದಲಗಳು,ವಿಳಂಬಗಳು ಉಂಟಾಗುವುದಿಲ್ಲ.
>ರಫ್ತುದಾರರು ಸ್ವಯಂ ಪ್ರಾಮಾಣಿಕರಣ ಮಾಡಿಕೊಳ್ಳಬಹುದು. ಇದರಿಂದಾಗಿ ಸುಂಕ ರಹಿತ ಸೌಲಭ್ಯವನ್ನು ಪಡೆಯಬಹುದಾಗಿದೆ.
>ಈ ಪ್ರಕ್ರಿಯೆಗಳಲ್ಲಿ ವಿಳಂಬಗಳು ಉಂಟಾದರೆ ಪರಿಹಾರ ಶೀಘ್ರವೇ ದೊರಕುತ್ತದೆ. ಇದಕ್ಕಾಗಿ ಉಭಯ ದೇಶಗಳ ಅಧಿಕಾರಿಗಳ ಜಂಟಿ ಸಮಿತಿಯನ್ನು ರಚಿಸಲಾಗಿದೆ.
•ದೇಶಿ ಉದ್ಯಮಗಳನ್ನು ರಕ್ಷಿಸುವುದು:
>ಹಿತದೃಷ್ಟಿಯಿಂದಾಗಿ ಕೆಲವು ಸೂಕ್ಷ್ಮ ಉದ್ಯಮಗಳನ್ನು ಈ ಮುಕ್ತ ವ್ಯಾಪಾರದಿಂದ ಹೊರಗಿಡಲಾಗಿದೆ.
>ಹಾಲಿನ ಉತ್ಪನ್ನಗಳು, ಬೇಳೆಕಾಳುಗಳು, ಹಣ್ಣುಗಳು ಮತ್ತು ತೈಲಗಳ ಆಮದು ಸುಂಕವನ್ನು ಕಡಿಮೆ ಮಾಡಲಾಗುವುದಿಲ್ಲ.
>ಇದರಿಂದಾಗಿ ವಿದೇಶಿ ವಸ್ತುಗಳು ದೇಶಿಯ ವಸ್ತುಗಳಿಗೆ ಪೈಪೋಟಿ ನೀಡಲಾರವು.
>ಮೇಕ್ ಇನ್ ಇಂಡಿಯಾ ಅಡಿಯಲ್ಲಿರುವ ಕೈಗಾರಿಕೆಗಳಿಗೆ ತಕ್ಷಣವೇ ಹೊಡೆತ ಬೀಳದಂತೆ ನೋಡಿಕೊಳ್ಳಲಾಗುತ್ತದೆ.
>ಕೆಲವು ಸುಂಕಗಳನ್ನು ಹಂತ ಹಂತವಾಗಿ ಕಡಿಮೆ ಮಾಡಲಾಗುತ್ತದೆ. ಇದರಿಂದಾಗಿ ದೇಶಿಯ ವಸ್ತುಗಳು ಹಂತ ಹಂತವಾಗಿ ಪೈಪೋಟಿಗೆ ಸಿದ್ಧವಾಗಲು ಸಮಯ ದೊರೆಯುತ್ತದೆ.
>ಒಂದು ವೇಳೆ ಆಮದು ಸುಂಕ ಕಡಿಮೆಯಾಗಿ ದೇಶಿಯ ವಸ್ತುಗಳಿಗೆ ಪೈಪೋಟಿ ಉಂಟಾಗುತ್ತದೆ. ಅಂತ ಸಮಯದಲ್ಲಿ ಅವುಗಳ ಮೇಲೆ ತಾತ್ಕಾಲಿಕವಾಗಿ ಹೆಚ್ಚುವರಿ ಸುಂಕ ವಿಧಿಸಲಾಗುತ್ತದೆ.
>ಭಾರತಕ್ಕೆ ಬರುವ ವಸ್ತುಗಳು ಯುಕೆ ದೇಶದಲ್ಲೇ ಕಡ್ಡಾಯವಾಗಿ ಉತ್ಪಾದನೆ ಆಗಬೇಕು.
>ಇನ್ನಿತರ ಯಾವುದೇ ಮೂರನೇ ದೇಶಗಳು ತಮ್ಮ ವಸ್ತುಗಳನ್ನು ಯುಕೆ ಹೆಸರಿನ ಮೂಲಕ ಕಳ್ಳ ಮಾರ್ಗದಲ್ಲಿ ಭಾರತಕ್ಕೆ ಕಳಿಸುವಂತಿಲ್ಲ.
>ಇದನ್ನು ತಡೆಗಟ್ಟಲು ಕ್ರಮಗಳನ್ನು ರೂಪಿಸಲಾಗಿದೆ.
CETA ಒಪ್ಪಂದದಿಂದ ಭಾರತಕ್ಕಾಗುವ ಲಾಭಗಳು:
•ಆರ್ಥಿಕ ಬೆಳವಣಿಗೆ:
>ಇದರಿಂದಾಗಿ ಭಾರತದಲ್ಲಿ ಯುಕೆ ಕಂಪನಿಗಳು ವಿದೇಶಿ ಹೂಡಿಕೆಯನ್ನು ಹೆಚ್ಚಿಸಲಿವೆ.
>ಹಸಿರು ಇಂಧನ, ಆರೋಗ್ಯ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಬ್ರಿಟಿಷ್ ಹಣ ಹರಿದು ಬರುವ ಸಾಧ್ಯತೆ ಇದೆ.
>ಮೇಕ್ ಇನ್ ಇಂಡಿಯಾ ಯೋಜನೆಗೆ ಇನ್ನಷ್ಟು ಪೋಷಣೆ ಸಿಗಲಿದೆ.
>ಯುಕೆ ರಕ್ಷಣಾ ಸಂಸ್ಥೆಗಳು ಭಾರತದ ರಕ್ಷಣಾ ಸಂಸ್ಥೆಗಳೊಂದಿಗೆ ಜಂಟಿಯಾಗಲಿವೆ.
>ಇದರಿಂದ ಈ ರಕ್ಷಣಾ ಉಪಕರಣಗಳನ್ನು ಎರಡು ದೇಶಗಳು ಕೂಡಿ ಭಾರತದಲ್ಲಿ ತಯಾರಿಸಲು ಪ್ರಾರಂಭಿಸುತ್ತವೆ.
>ಭಾರತದಲ್ಲಿ ಇರುವಂತಹ ಗಿಫ್ಟ್ ಸಿಟಿ ಅಂತಹ ಆರ್ಥಿಕತೆಗಳಿಗೆ ಬ್ರಿಟಿಷ್ ಬ್ಯಾಂಕುಗಳು ಮತ್ತು ಹೂಡಿಕೆದಾರರು ಸುಲಭವಾಗಿ ಪ್ರವೇಶಿಸಲಿದ್ದಾರೆ.
>ಈ ಮೂಲಕವಾಗಿ ಭಾರತದಲ್ಲಿ ಜಾಗತಿಕ ಮಟ್ಟದ ಹಣಕಾಸು ಸೇವೆಗಳು ಇನ್ನಷ್ಟು ಹರಡುತ್ತವೆ.
>ಮೊದಲೇ ತಿಳಿಸಿದಂತೆ ಉಭಯ ದೇಶಗಳ ನಡುವಿನ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿ ಹೊಂದಲಾಗಿದೆ. ಇದು ಭಾರತದ ಜಿಡಿಪಿ ಮಟ್ಟವನ್ನು ಏರಿಸಲು ಸಹಕಾರವಾಗುತ್ತದೆ.
>ಈ ಒಪ್ಪಂದವು ಭಾರತ ಮೂಲದ ಕಂಪನಿಗಳು ಯುಕೆಯಲ್ಲಿ ವಿಸ್ತರಣೆಯಾಗಲು ಸಹಕಾರಿಯಾಗಿದೆ. ಮತ್ತು ಕಾನೂನು ರಕ್ಷಣೆಯನ್ನು ಈ ಒಪ್ಪಂದದ ಮೂಲಕ ನೀಡಲಾಗುತ್ತದೆ.
•ಅಗ್ಗದ ದರ:
>ಇಲ್ಲಿ ಬ್ರಿಟಿಷ್ ಕಾರುಗಳ ಮೇಲಿನ ಆಮದು ಸುಂಕ ಶೇಕಡ 10ರಷ್ಟು ಇಳಿಯಲಿದೆ. ಇದರಿಂದಾಗಿ ಅತಿ ಕಡಿಮೆ ಬೆಲೆಗೆ ಭಾರತದಲ್ಲಿ ಐಷಾರಾಮಿ ಕಾರುಗಳು ದೊರಕಲಿವೆ.
>ಭಾರತದಲ್ಲಿ ಬ್ರಿಟಿಷ್ ಸ್ಕಾಚ್ ವಿಸ್ಕಿಯ ಆಮದು ಬೆಲೆ ಎಲ್ಲಾ ರಾಷ್ಟ್ರಗಳಿಗೂ ಹೋಲಿಸಿದರೆ ದುಬಾರಿಯಾಗಿದೆ.
>ವಿಸ್ಕಿ ಮೇಲಿನ ಆಮದು ಸುಂಕ ಕೂಡ ಹಂತ ಹಂತವಾಗಿ ಕಡಿಮೆಯಾಗಲಿದೆ.
>ಯುಕೆ ದೇಶದಲ್ಲಿ ತಯಾರಾಗುವಂತಹ ಗ್ಯಾಜೆಟ್ ಗಳು, ಎಲೆಕ್ಟ್ರಾನಿಕ್ ವಸ್ತುಗಳು, ವೈದ್ಯಕೀಯ ಉಪಕರಣಗಳು ಅತಿ ಕಡಿಮೆ ದರದಲ್ಲಿ ದೊರಕಲಿದೆ.
>ಯುಕೆಯಲ್ಲಿ ತಯಾರಾಗುವ ತಿಂಡಿ ತಿನಿಸುಗಳ ಜೊತೆಗೆ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಔಷಧಿಗಳು ಕೂಡ ಕಡಿಮೆ ಬೆಲೆಯಲ್ಲಿ ಭಾರತದಲ್ಲಿ ದೊರಕಲಿವೆ.
•ಐಟಿ ಮತ್ತು ಸೇವಾ ವಲಯಕ್ಕೆ ಉಳಿತಾಯ
>ಮೊದಲು ಭಾರತದ ಕಂಪನಿಗಳು ಮತ್ತು ಉದ್ಯೋಗಿಗಳು ಒಟ್ಟಾರೆಯಾಗಿ ಸಂಬಳದಲ್ಲಿ ಶೇ. 8 ರಿಂದ 13.8 ರಷ್ಟು ಭಾಗವನ್ನು ವಿಮೆಗಾಗಿ ಪಾವತಿ ಮಾಡಬೇಕಿತ್ತು.
>ಮೊದಲ ತಿಳಿಸಿರುವಂತೆ ಇದೀಗ ವಿಮೆಯಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.
>ಇದರಿಂದಾಗಿ ಭಾರತೀಯ ಕಂಪನಿಗಳಿಗೆ ವಾರ್ಷಿಕವಾಗಿ ಸುಮಾರು 500 ಮಿಲಿಯನ್ ಉಳಿತಾಯವಾಗುತ್ತದೆ.
>ಹಾಗೂ ಸಂಬಳದ ಉಳಿತಾಯದಿಂದಾಗಿ ವಿದೇಶದಲ್ಲಿ ಭಾರತೀಯರ ಜೀವನ ಮಟ್ಟವನ್ನು ಸುಧಾರಿಸಬಹುದು.
>ವಿಮೆ ಕಡಿತದಿಂದಾಗಿ ಭಾರತದ ಕಂಪನಿಗಳು ಯುಕೆ ದೇಶದಲ್ಲಿ ಕಡಿಮೆ ದರದಲ್ಲಿ ಬಿಡ್ ಮಾಡಲು ಸಾಧ್ಯವಾಗುತ್ತದೆ.
>ಇದು ಭಾರತೀಯ ಕಂಪನಿಗಳಿಗೆ ಹೆಚ್ಚಿನ ಪಾಲನ್ನು ತಂದುಕೊಡಲು ಸಹಾಯ ಮಾಡುತ್ತದೆ.
>ಇನ್ನು ಕಾನೂನು ಸೇರಿದಂತೆ ಇನ್ನಿತರ ಡಿಜಿಟಲ್ ಸೇವೆಗಳನ್ನು ಭಾರತದಲ್ಲಿ ಇದ್ದುಕೊಂಡೇ ಯುಕೆಗೆ ನೀಡಬಹುದು.
•ವೀಸಾ ಪ್ರಕ್ರಿಯೆ ಸುಲಭವಾಗಿದೆ:
>ಮೊದಲೇ ತಿಳಿಸಿದಂತೆ ವಿಸಪತ್ರೆಯಲ್ಲಿ ನಿಯಮಗಳು ಸರಳೀಕರಣಗೊಂಡಿದೆ.
>ಇದರಿಂದ ಅತಿ ಬೇಗನೆ ಕಡಿಮೆ ಸಮಯದಲ್ಲಿ ವೀಸಾ ವನ್ನು ಪಡೆದುಕೊಳ್ಳಬಹುದಾಗಿದೆ.
>ಭಾರತದ ವಿಶ್ವವಿದ್ಯಾಲಯಗಳಿಂದ ಪಡೆಯುವಂತಹ ಪದವಿ ಮತ್ತು ಅರ್ಹತೆಗಳಿಗೆ ಯುಕೆ ದೇಶದಲ್ಲಿ ಅಧಿಕೃತವಾಗಿ ಮಾನ್ಯತೆ ನೀಡಲಾಗುತ್ತದೆ.
>ಇನ್ನು ಮುಂದೆ ಭಾರತದಲ್ಲಿ ಓದಿದಂತಹ ಚಾರ್ಟೆಡ್ ಅಕೌಂಟೆಂಟ್, ಆರ್ಕಿಟೆಕ್ಟ್ ಮತ್ತು ಇಂಜಿನಿಯರ್ ಗಳಿಗೆ ಯುಕೆಯಲ್ಲಿ ಹೆಚ್ಚುವರಿ ಪರೀಕ್ಷೆ ಬರೆಯುವ ಅಗತ್ಯವಿಲ್ಲ.
CETA ಒಪ್ಪಂದದಿಂದಾಗುವ ಪರಿಣಾಮಗಳು:
>ರಫ್ತು ಪ್ರಮಾಣ ಹೆಚ್ಚಾಗುವುದರಿಂದಾಗಿ ಎಲ್ಲಾ ವಲಯಗಳಲ್ಲೂ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತವೆ.
>ವೀಸಾ ಪ್ರಕ್ರಿಯೆ ಸುಲಭ ಆಗುವ ಕಾರಣ ಹೆಚ್ಚಿನ ಮಂದಿಗೆ ಯುಕೆಯಲ್ಲಿ ಉದ್ಯೋಗ ಪ್ರಾಪ್ತಿಯಾಗುತ್ತದೆ.
>ಜವಳಿ ಮತ್ತು ಉಡುಪುಗಳಿಗೆ ಸಂಬಂಧಪಟ್ಟ ಹೆಚ್ಚಿನ ಕೆಲಸಗಳಲ್ಲಿ ಮಹಿಳೆಯರೇ ಹೆಚ್ಚಿನ ಮಟ್ಟದಲ್ಲಿದ್ದಾರೆ. ಇದರಿಂದಾಗಿ ಮಹಿಳಾ ಸಬಲೀಕರಣಕ್ಕೆ ಪುಷ್ಠಿ ನೀಡಿದಂತಾಗುತ್ತದೆ.
>ಜಾಗತಿಕ ಮಟ್ಟದಲ್ಲಿ ಭಾರತದ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಲಿದೆ.
>ಡಿಜಿಟಲ್ ವ್ಯವಸ್ಥೆಯನ್ನು ಬಳಕೆ ಮಾಡುವ ಕಾರಣದಿಂದಾಗಿ ವೆಚ್ಚ ಮತ್ತು ಸಮಯದ ಉಳಿತಾಯವಾಗಲಿದೆ.
ಒಟ್ಟಾರೆಯಾಗಿ ಎಲ್ಲಾ ಅಂಶಗಳನ್ನು ಗಮನಿಸುತ್ತಾ ಹೋದರೆ ಇದು ಎರಡು ದೇಶಗಳ ಸರ್ವತೋಮುಖ ಅಭಿವೃದ್ಧಿಗೆ ಉತ್ತಮ ಹೆಜ್ಜೆಯಾಗಿದೆ. ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಭಾರತವು ಇನ್ನಷ್ಟು ಮಟ್ಟಿಗೆ ತನ್ನನ್ನು ತಾನು ಗುರುತಿಸಿಕೊಳ್ಳಲು ಇದು ಸಹಾಯ ಮಾಡಲಿದೆ.
ಇನ್ನಷ್ಟು ಮಾಹಿತಿಗಾಗಿ: ministry of commerce and industry
ಇದನ್ನು ಓದಿ: ಇಸ್ರೋದ ಮೊದಲ ಮಾನವ ಬಾಹ್ಯಾಕಾಶಯಾನ