Medicinal Plants:ಹಿಂದಿನ ದಿನಗಳಲ್ಲಿ ಕಾಯಿಲೆಗಳು ಬಂದರೆ ನಮ್ಮ ಪೂರ್ವಜರು ಸಾಧಾರಣವಾಗಿ ಆಸ್ಪತ್ರೆಗೆ ಹೋಗುತ್ತಿರಲಿಲ್ಲ ಇಂಗ್ಲಿಷ್ ಮೆಡಿಸಿನ್ಗಳ ಬಳಕೆಯನ್ನು ಮಾಡುತ್ತಿರಲಿಲ್ಲ. ತಮ್ಮ ಹಿತ್ತಲಲ್ಲೇ ಬೆಳೆದ ತಮ್ಮ ಸುತ್ತಮುತ್ತಲೇ ಬೆಳೆದಂತಹ ಅನೇಕ ಗಿಡಗಳ ಮೂಲಕ ತಮ್ಮ ಖಾಯಿಲೆಗಳನ್ನು ನಿವಾರಿಸಿಕೊಳ್ಳುತ್ತಿದ್ದರು.

Medicinal Plants: ಹೌದು ಭಾರತೀಯ ಸಾಂಪ್ರದಾಯಿಕ ಔಷಧಿಗಳು, ಆಯುರ್ವೇದ ಸ್ವಲ್ಪ ತಡವಾಗಿ ಆದರೂ ಸರಿಯೇ ಆಳಕ್ಕಿಳಿದು ಅವುಗಳ ಫಲಿತಾಂಶಗಳನ್ನು ಕೊಡುತ್ತವೆ.
Medicinal Plants: ನಮ್ಮ ಸುತ್ತಮುತ್ತಲೇ ಬೆಳೆದು ನಿಂತ ಅನೇಕ ಗಿಡಗಳು ನಮಗೆ ಆರೋಗ್ಯವನ್ನು ನೀಡುವಂತವು. ಅಂತಹ ಗಿಡಗಳು ಹೀಗಿವೆ:
ಅಮೃತಬಳ್ಳಿ:
ಅಮೃತಬಳ್ಳಿ ಆಯುರ್ವೇದದಲ್ಲಿ ಬಹಳ ಪ್ರಸಿದ್ಧವಾದ ಗಿಡಮೂಲಿಕೆ. ನಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಜೊತೆಗೆ ಅನೇಕ ಅನಾರೋಗ್ಯಗಳಿಗೆ ಪೂರಕವಾಗಿ ಸಹಾಯ ಮಾಡಬಹುದು.
•ಜೀರ್ಣಾಂಗದ ಸಮಸ್ಯೆಗಳನ್ನು ಕಡಿಮೆಯಾಗಿಸಬಹುದು. ಜೀರ್ಣಕ್ರಿಯೆಯನ್ನು ಸರಿಯಾಗಿಸುವ ಜೊತೆಗೆ ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ.
•ಮಲೇರಿಯಾ, ಹಂದಿ ಜ್ವರ, ಡೆಂಗ್ಯೂ ಜ್ವರ ಈ ರೀತಿಯಾದ ಮುಂತಾದ ಹರಡುವಂತಹ ಕಾಯಿಲೆಗಳ ನಿವಾರಣೆಗೆ ಬಳಸಲಾಗುತ್ತದೆ. ಅಮೃತ ಬಳ್ಳಿಯನ್ನು ಕೆಲವು ಅಧ್ಯಯನಗಳು ಸೂಚಿಸುತ್ತವೆ.
•ಕೆಮ್ಮು, ಕಫ, ನೆಗಡಿ ಶೀತ, ಅಸ್ತಮಾ ದಂತಹ ಕಾಯಿಲೆಗಳಿಗೆ ಅಮೃತಬಳ್ಳಿಯ ಕಷಾಯವನ್ನು ಸೇವಿಸಿದಲ್ಲಿ ಗುಣಮುಖರಾಗಬಹುದು.
• ದೇಹದಲ್ಲಿ ಸಕ್ಕರೆ ಅಂಶವನ್ನು ಕಡಿಮೆಯಾಗಿಸಿ ಮಧುಮೇಹ ನಿವಾರಣೆಗೆ ಇದು ಸಹಕಾರಿಯಾಗುತ್ತದೆ.
• ಚರ್ಮಕ್ಕೆ ಸಂಬಂಧಪಟ್ಟಂತಹ ತುರಿಕೆ, ಅಲರ್ಜಿಗಳ ಭರಣಿಗೆ ಇದು ಸಹಾಯಕವಾಗಿದೆ.
•ಕೀಲು ನೋವು, ಸಂಧಿವಾತ ಈ ರೀತಿಯ ನೋವುಗಳಿಗೂ ಕೂಡ ಇದು ಸಹಾಯವಾಗಬಹುದು. ಕನಿಷ್ಠ ಆರರಿಂದ ಎಂಟು ತಿಂಗಳು ಇದರ ಕಷಾಯ ಸೇವನೆಯಿಂದಾಗಿ ಆ ಎಲ್ಲಾ ನೋವುಗಳನ್ನು ಕಳೆದುಕೊಳ್ಳಬಹುದು.
•ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಇದು ಸಹಕಾರಿಯಾಗುತ್ತದೆ. ಮಹಿಳೆಯರಿಗೆ ತಿಂಗಳ ಸಮಯದಲ್ಲಿ ಅಧಿಕ ರಕ್ತ ಹೋಗಿರುತ್ತದೆ. ಕೇವಲ ಮಹಿಳೆಯರಿಗು ಅಷ್ಟೇ ಅಲ್ಲದೆ ಪುರುಷರಿಗೂ ಕೂಡ ಕೆಲವೊಮ್ಮೆ ರಕ್ತ ಹೀನತೆ ಇರುವುದುಂಟು.
ಹಲವಾರು ಸಮಸ್ಯೆಗಳಿಗೆ ಅಮೃತಬಳ್ಳಿ ಪರಿಹಾರವಾಗಿದೆ. ಹಾಗೆಂದು ಬೇಕಾಬಿಟ್ಟಿ ಉಪಯೋಗಿಸುವ ಹಾಗೂ ಕೂಡ ಇಲ್ಲ. ಏಕೆಂದರೆ ಅಮೃತ ಬಳ್ಳಿಯು ಬಹಳ ಉಷ್ಣತೆಯನ್ನು ಹೊಂದಿರುವುದರಿಂದಾಗಿ ಮಿತವಾಗಿ ಬಳಸಬೇಕಾಗುತ್ತದೆ.
ಇಲ್ಲವಾದಲ್ಲಿ ಇದು ದೇಹದ ಮೇಲೆ ಕೆಟ್ಟ ರೀತಿಯಾದ ಪರಿಣಾಮವನ್ನು ಕೂಡ ಬೀರಬಹುದು.
ಈ ಅಮೃತಬಳ್ಳಿಯನ್ನು ನೀರಿಗೆ ಹಾಕಿ ಕುದಿಸುವ ಮೂಲಕ ಆ ನೀರಿನ ಸೇವನೆ ಮಾಡಬಹುದು. ಅಥವಾ ಇದನ್ನು ಪುಡಿ ಮಾಡಿ ಜೇನುತುಪ್ಪದ ಜೊತೆಯಲ್ಲೂ ಕೂಡ ಮಿಶ್ರಣ ಮಾಡಿ ತಿನ್ನಬಹುದು.
ದೊಡ್ಡಪತ್ರೆ (ಸಾಂಬಾರ್ ಬಳ್ಳಿ) :
ಸಾಮಾನ್ಯವಾಗಿ ಮನೆಯಲ್ಲೇ ಬೆಳೆದುಕೊಳ್ಳಬಹುದು ಆದಂತಹ ಸೊಪ್ಪು ಆಯುರ್ವೇದದಲ್ಲಿ ತನ್ನ ಪ್ರಬಲ ಬಳಕೆಯನ್ನು ಹೊಂದಿರುವುದೇ ದೊಡ್ಡಪತ್ರೆ. ದಕ್ಷಿಣ ಆಫ್ರಿಕಾದಲ್ಲಿ ಇದನ್ನು ಪುದಿನಾ ಸೊಪ್ಪಿನ ಬದಲಿಗೆ ಬಳಸಲಾಗುತ್ತದೆ.
ಹಾಗೂ ಸಾಮಾನ್ಯವಾಗಿ ನಮ್ಮಲ್ಲಿ ಈ ಸೊಪ್ಪನ್ನು ಶೀತ ಕೆಮ್ಮು ಜ್ವರದ ನಿವಾರಣೆಗೆ ಬಳಸಲಾಗುತ್ತದೆ.
• ಈ ಸಾಂಬಾರು ಬಳ್ಳಿ ಸೊಪ್ಪನ್ನು ಪ್ರಥಮ ಚಿಕಿತ್ಸೆಯಾಗಿ ಚೇಳು ಕಚ್ಚಿದಾಗ ಬಳಸಲಾಗುತ್ತದೆ. ಇದನ್ನು ಜಜ್ಜಿದಾಗ ಬರುವಂತಹ ರಸವನ್ನು ಚೇಳು ಕಚ್ಚಿದ ಜಾಗಕ್ಕೆ ಹಚ್ಚಲಾಗುತ್ತದೆ.
• ಸಾಮಾನ್ಯವಾಗಿ ಕೆಲವೊಮ್ಮೆ ಹವಮಾನವ ಇಬ್ಬರಿಗೆ ಬಹಳ ದಿನಗಳ ಕಾಲ ಕೆಮ್ಮು ಜ್ವರ ನೆಗಡಿಗಳು ಕಡಿಮೆಯಾಗುವುದಿಲ್ಲ.
ಅಂತಹ ಸಮಯದಲ್ಲಿ ತುಳಸಿ ವೀಳ್ಯದೆಲೆ ಹಾಗೂ ಈ ದೊಡ್ಡಪತ್ರೆಯ ಸೊಪ್ಪನ್ನು ಜಜ್ಜಿ ಆ ರಸಕ್ಕೆ ಜೇನುತುಪ್ಪವನ್ನು ಹಚ್ಚಿ ಬಳಸುವುದರಿಂದಾಗಿ ಈ ಕಫದಿಂದ ಮುಕ್ತಿ ಪಡೆಯಬಹುದು. ಇದನ್ನು ಚಿಕ್ಕ ಮಕ್ಕಳಿಗೂ ಕೂಡ ತಿನ್ನಿಸಲಾಗುತ್ತದೆ.
ಹಾಗೂ ಈ ಸೊಪ್ಪನ್ನು ಸುಟ್ಟು ಅದರ ರಸವನ್ನು ಹಿಂಡಿ ತೆಗೆದು ಅದಕ್ಕೆ ಬೆಲ್ಲವನ್ನು ಸೇರಿಸಿ ತಿಂದರೂ ಕೂಡ ಕಫ ಕಡಿಮೆಯಾಗುವುದು.
• ಈ ಎಲೆಗಳಲ್ಲಿ ವಿಟಮಿನ್ ಸಿ, ಕ್ಯಾಲ್ಸಿಯಂ, ಮತ್ತು ಫೈಬರ್ ಹೇರಳವಾಗಿ ಇದೆ. ಇದರ ಸೇವನೆ ಮಾಡುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದಾಗಿದೆ.
• ಇದನ್ನು ಸಾಮಾನ್ಯವಾಗಿ ದಕ್ಷಿಣ ಕರ್ನಾಟಕದ ಭಾಗಗಳಲ್ಲಿ ಚಟ್ನಿ ತಂಬುಳಿ ಮಾಡಲು ಬಳಸುತ್ತಾರೆ. ಇದನ್ನು ದೋಸೆಯ ಜೊತೆಗೂ ಕೂಡ ಮಿಶ್ರಣ ಮಾಡಿಕೊಳ್ಳಬಹುದು.
ಇದರ ಸೇವನೆಯಿಂದಾಗಿ ರುಚಿಯು ಹೆಚ್ಚುತ್ತದೆ ಜೊತೆಗೆ ದೇಹದಲ್ಲಿ ಬೇಡವಾದ ಅಂಶವು ಹೋಗುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
• ಈ ಸೊಪ್ಪನ್ನು ಉಪ್ಪಿನೊಂದಿಗೆ ಸೇರಿಸಿ ಜಗಿದು ತಿನ್ನುವುದರಿಂದಾಗಿ ಜೀರ್ಣಕ್ರಿಯೆ ಸರಿಯಾದ ಮಟ್ಟಿಗೆ ಆಗುತ್ತದೆ. ಜೊತೆಗೆ ಮಲ ಬದ್ಧತೆಯು ನಿವಾರಣೆಯಾಗುತ್ತದೆ.
ನೆಲ ನೆಲ್ಲಿ:
ಇದು ಕೂಡ ಆಯುರ್ವೇದದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಲಿವರ್ ಸಮಸ್ಯೆಗೆ ತಕ್ಕ ಪರಿಹಾರವನ್ನು ಒದಗಿಸುತ್ತದೆ. ಬಹಳ ಪುಟ್ಟ ಪುಟ್ಟದಾಗಿ ಬೆಳೆದುಕೊಳ್ಳುವ ಇದರ ಎಲೆಗಳು ಇದರ ಗಿಡಗಳಿಂದಾಗಿ ದೊಡ್ಡ ದೊಡ್ಡ ಲಾಭವೇ ಇದೆ.
ಇದು ಸಾಮಾನ್ಯವಾಗಿ ನೆಲದ ಮೇಲೆ ಹರಡಿಕೊಂಡು ಬೆಳೆಯುತ್ತದೆ. ಮಲೆನಾಡಿನ ಭಾಗಗಳಲ್ಲಿ ಇದು ಹೆಚ್ಚಾಗಿ ಕಂಡುಬರುವುದರ ಜೊತೆಗೆ, ಹಲವರ ಆದಾಯದ ಬೆಳೆ ಕೂಡ ಆಗಿದೆ ಇದು.
ಜ್ವರ ಕೆಮ್ಮು ಕಫ ದಂತಹ ಸಮಸ್ಯೆಗಳಿಗೆ ಇದರ ರಸ ಮನೆ ಮದ್ದಾಗಿದೆ. ಚಟ್ನಿ ತಂಬುಳಿ ಅಂತಹ ಪದಾರ್ಥವನ್ನು ಮಾಡಿ ತಿಂದಲ್ಲಿ ರುಚಿ ಕೂಡ ಹೆಚ್ಚಿರುತ್ತದೆ.
• ಮಧ್ಯಪಾನ ಅಥವಾ ಧೂಮಪಾನಗಳಿಂದ ಲಿವರ್ ಸಮಸ್ಯೆಯನ್ನು ಎದುರಿಸುತ್ತಿರುವವರಿಗೆ ಈ ನೆಲನೆಲ್ಲಿಯೂ ಅತ್ಯಂತ ಸಹಾಯಕಾರಿಯಾಗಿದೆ. ಲಿವರ್ ಸಮಸ್ಯೆಯನ್ನು ಇದರಿಂದ ತಡೆಯಬಹುದಾಗಿದೆ.
• ಇದನ್ನು ಜಜ್ಜಿ ಇದರಿಂದ ಬರುವ ರಸಕ್ಕೆ ಬೆಲ್ಲ ಹಾಕಿ ಕುಡಿಯುವುದರಿಂದಾಗಿ ಜ್ವರ ಶೀತ ಕೆಮ್ಮು ಈ ರೀತಿಯಾದ ಚಿಕ್ಕಪುಟ್ಟ ಸಮಸ್ಯೆಗಳು ಅತಿ ಬೇಗನೆ ನಿವಾರಣೆಯಾಗುತ್ತದೆ.
• ಆಗಾಗ ಇದನ್ನು ಪದಾರ್ಥಗಳಾಗಿ ಮಾಡಿಕೊಂಡು ತಿನ್ನುವುದರಿಂದಾಗಿ ದೇಹವು ಶಕ್ತಿಯನ್ನು ಹೊಂದಿರುತ್ತದೆ. ಜೊತೆಗೆ ರೋಗನಿರೋಧಕ ಶಕ್ತಿಯು ಹೆಚ್ಚುತ್ತದೆ.
• ಇದರ ರಸ ಕುಡಿಯುವುದರಿಂದಾಗಿ ಮೂತ್ರ ಕೋಶದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಉರಿ ಮೂತ್ರವನ್ನು ತಡೆಯಲು ಇದು ಸಹಕಾರಿಯಾಗಿದೆ. ಜೊತೆಗೆ ಯೋನಿಯಲ್ಲಿ ಉಂಟಾಗುವ ನೋವನ್ನು ಕೂಡ ಇದರಿಂದಾಗಿ ತಡೆಯಬಹುದು.
ಒಂದೆಲಗ:
ಒಂದೆಲಗ ಸೊಪ್ಪು ಆಯುರ್ವೇದದಲ್ಲಿ ತನ್ನದೇ ಆದ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಪ್ರತಿನಿತ್ಯ ಇದರ ಬಳಕೆ ಮಾಡುವುದರಿಂದಾಗಿ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಮೆದುಳಿನ ಕಾರ್ಯಕ್ಷಮತೆಯನ್ನು ಚುರುಕುಗೊಳಿಸಬಹುದಾಗಿದೆ.
ಈ ಸೊಪ್ಪನ್ನು ಪ್ರತಿನಿತ್ಯವೂ ತಿನ್ನುವ ರೂಡಿಯನ್ನು ಕೆಲವರು ಮಾಡಿಕೊಂಡಿರುತ್ತಾರೆ. ಜೊತೆಗೆ ಇದನ್ನು ಸರಸ್ವತಿ ಸೊಪ್ಪು ಮತ್ತು ಬ್ರಾಹ್ಮಿ ಎಂದು ಕೂಡ ಕರೆಯಲಾಗುತ್ತದೆ.
• ಗಾಯ ಅಥವಾ ಸುಟ್ಟ ಗಾಯಗಳು ಗುಣಮುಖವಾದ ನಂತರ ಅದರಿಂದಾಗಿ ಉಳಿದ ಕಲೆಯನ್ನು ತೊಡೆದು ಹಾಕಲು ಸೊಪ್ಪು ಒಂದೆಲಗ ಉಪಕಾರಿಯಾಗಿದೆ. ಹಾಗೂ ಇದರ ಬಳಕೆ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.
•ಇದು ದೇಹದಲ್ಲಿನ ಉಷ್ಣಾಂಶವನ್ನು ಹೆಚ್ಚಿಸುತ್ತದೆ. ಅದನ್ನು ಸಮತೋಲನದಲ್ಲಿ ಇರಿಸುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
•ಈ ಸೊಪ್ಪಿನ ಸೇವನೆಯೂ ಅಜೀರ್ಣದಂತಹ ಸಮಸ್ಯೆಯನ್ನು ನಿವಾರಿಸಬಹುದು. ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ ಜೊತೆಗೆ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಸುಧಾರಿಸುತ್ತದೆ.
•ಇದರ ದಿನನಿತ್ಯದ ಬಳಕೆಯಿಂದ ರಕ್ತವನ್ನು ಶುದ್ಧೀಕರಿಸಬಹುದು. ಮತ್ತು ಚರ್ಮದ ಕಾಯಿಲೆಯನ್ನು ದೂರ ಮಾಡುವಲ್ಲಿ ಇದು ಯಶಸ್ವಿಯಾಗುತ್ತದೆ.
•ಇದು ನೆನಪಿನ ಶಕ್ತಿಯನ್ನು ಹೆಚ್ಚಿಸಲು ಸಹಾಯಕ ಮತ್ತು ಏಕಾಗ್ರತೆಯನ್ನು ಹೆಚ್ಚಿಸುವಲ್ಲಿ ಇದು ಸಹಕಾರಿಯಾಗುತ್ತದೆ.
• ಇದರ ಬಳಕೆಯಿಂದಾಗಿ ಮಾನಸಿಕ ಖಿನ್ನತೆ, ಒತ್ತಡ ಮತ್ತು ನಿದ್ರಾಹೀನ ಸಮಸ್ಯೆಗಳಿಂದ ಪರಿಹಾರವನ್ನು ಪಡೆದುಕೊಳ್ಳಬಹುದಾಗಿದೆ.
ಅಲೋವೆರಾ:
ಈ ಸಸ್ಯವನ್ನು ಲೋಳೆಸರ ಎಂದು ಕೂಡ ಕರೆಯಲಾಗುತ್ತದೆ. ಔಷಧೀಯ ಗುಣಗಳನ್ನು ಹೇರಳವಾಗಿ ತನ್ನಲ್ಲಿ ಇರಿಸಿಕೊಂಡಿರುವ ಈ ಸಸ್ಯವು ತನ್ನದೇ ಆದ ಹಲವಾರು ಉಪಯೋಗಗಳನ್ನು ಹೊಂದಿದೆ.
• ಇದರ ಬಳಕೆಯಿಂದಾಗಿ ತ್ವಚೆಯ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಇದು ಚರ್ಮವನ್ನು ಹೈಡ್ರೇಟ್ ಮಾಡುವ ಜೊತೆಗೆ ಮೊಡವೆಗಳನ್ನು ಕಡಿಮೆಯಾಗಿಸುತ್ತದೆ. ಹಾಗೂ ಚರ್ಮದಲಿನ ಸುಕ್ಕನ್ನು ತಡೆಯಲು ಇದು ಸಹಕಾರಿಯಾಗಿದೆ.
•ಇದನ್ನು ತಲೆಗೆ ಹಚ್ಚುವುದರಿಂದಾಗಿ ತಲೆ ಹೊಟ್ಟು ಕಡಿಮೆಯಾಗಿಸಬಹುದು. ಕೂದಲು ಸಮೃದ್ಧವಾಗಿ ಬೆಳೆಯಲು ಇದು ಸಹಕಾರಿಯಾಗುತ್ತದೆ.
•ಈ ಒಂದು ಗಿಡದಲ್ಲಿರುವ ನಿಸರ್ಗದತ್ತವಾದ ಬ್ಯಾಕ್ಟೀರಿಯಾ ವಿರೋಧಿ ಗುಣವು ತುರಿಕೆಗಳು, ಗಾಯಗಳು ಮತ್ತು ಸುಟ್ಟ ಗಾಯಗಳನ್ನು ಬೇಗನೆ ಗುಣ ಮಾಡುವಲ್ಲಿ ಯಶಸ್ವಿಯಾಗುತ್ತದೆ.
•ಇನ್ನು, ಇದನ್ನು ಸೇವಿಸುವುದರಲ್ಲೂ ಬಹಳ ಉಪಯೋಗಗಳಿವೆ. ಇದರಲ್ಲಿ ನಿರಂತರ ಸೇವನೆಯಿಂದಾಗಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಸಮತೋಲನ ಸ್ಥಿತಿಗೆ ತಂದು, ಮಧುಮೇಹದಿಂದ ಪಾರಾಗಬಹುದಾಗಿದೆ.
•ನಿರಂತರವಾಗಿ ಅಲೋವೆರಾದ ಜ್ಯೂಸ್ ಮಾಡಿ ಕುಡಿಯುವುದರಿಂದಾಗಿ ಹೊಟ್ಟೆಉಬ್ಬರ ಮತ್ತು ಮಲಬದ್ಧತೆ ಅಂತಹ ಸಮಸ್ಯೆಯಿಂದ ಪಾರಾಗಬಹುದು. ಜೊತೆಗೆ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿ ಇಡಬಹುದಾಗಿದೆ.
•ಈ ಒಂದು ಸಸ್ಯದಲ್ಲಿ ಉತ್ಕರ್ಷಣ ನಿರೋಧಕ ಮತ್ತು ಪಾಲಿಸ್ಯಾಕರೈಡ್ ಹೆಚ್ಚಾಗಿ ಇರಲಿದೆ. ಇದು ನಮ್ಮಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
• ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಇದನ್ನು ಮೌತ್ ವಾಶ್ ಆಗಿ ಕೂಡ ಬಳಸಲಾಗುತ್ತದೆ.
ತುಳಸಿ:
ತುಳಸಿ ಕೇವಲ ಔಷಧಿಯ ಸಸ್ಯವಾಗಿರದೇ, ಭಾರತೀಯರ ಧಾರ್ಮಿಕ ನಂಬಿಕೆಯ ಪವಿತ್ರ ಗುರುತು ಆಗಿದೆ. ಇದರ ಲ್ಯಾಟಿನ್ ಹೆಸರು ಒಸಿಮಮ್ ಸ್ಯಾಕ್ಟಮ್ ಲಿನ್ನ್ ಆಗಿದೆ. ಭಾರತದಲ್ಲಿ ಮನೆಯ ಹೊರಂಗಳ ಮತ್ತು ಒಳಾಂಗಣ ಭಾಗಗಳಲ್ಲಿ ಇದನ್ನು ಇರಿಸಿ ಪೂಜಿಸಲಾಗುತ್ತದೆ.
• ಇದರಲ್ಲಿ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕ ಶಕ್ತಿಗಳು ಹೆಚ್ಚಿರುವ ಕಾರಣ ಇದು ಹೃದಯವನ್ನು ರಕ್ಷಿಸುತ್ತದೆ. ಮತ್ತು ರಕ್ತದಲ್ಲಿ ಇರುವಂತಹ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆಯಾಗಿಸಲು ಸಹಕಾರಿಯಾಗಿದೆ.
• ತುಳಸಿ ಸೇವನೆಯೂ ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಮತ್ತು ಇದರಲ್ಲಿ ಇರುವಂತಹ ಆಸಿಟಿಕ್ ಆಮ್ಲ ಮೂತ್ರಪಿಂಡದಲ್ಲಿ ಇರುವಂತಹ ಕಲ್ಲುಗಳನ್ನು ಕರಗಿಸಲು ಸಹಾಯಕಾರಿಯಾಗುತ್ತದೆ.
• ಜ್ವರ, ಶೀತ, ಕೆಮ್ಮು, ಕಫ, ಇವುಗಳ ಶ್ರಮನ ಮಾಡಲು ತುಳಸಿಯನ್ನು ಕಷಾಯದ ರೂಪದಲ್ಲಿ ಸೇವಿಸಬಹುದಾಗಿದೆ.
•ಇದೊಂದು ನೈಸರ್ಗಿಕ ಸಸ್ಯವಾಗಿದೆ. ತಲೆನೋವನ್ನು ಕಡಿಮೆ ಮಾಡಿ ಮೈಗ್ರೇನ್ ಅನ್ನು ತೊಡೆದು ಹಾಕುವಲ್ಲಿ ಸಹಕಾರಿಯಾಗಿದೆ.
•ಇದರಲ್ಲಿ ಇರುವಂತಹ ಉರಿಯೂತ ನಿವಾರಕ ಗುಣಗಳು ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ. ಜೊತೆಗೆ ಕಣ್ಣಿನ ಮೇಲೆ ಇರುವಂತಹ ಒತ್ತಡವನ್ನು ಕಡಿಮೆಯಾಗಿಸುತ್ತದೆ.
• ತುಳಸಿಯನ್ನು ಮೌತ್ ಫ್ರೆಶ್ನರ್ ಆಗಿ ಬಳಸಬಹುದು. ಇದು ಹಲ್ಲುಗಳ ರಕ್ಷಣೆ ಹಾಗೂ ಬಾಯಿಯ ದುರ್ವಾಸನೆಯನ್ನು ತಡೆಯುವಲ್ಲಿ ಸಹಕಾರಿಯಾಗಿದೆ. ಮತ್ತು ಇದರಿಂದಾಗಿ ಬಾಯಿಯಲ್ಲಿ ಉಂಟಾಗುವ ಹುಣ್ಣುಗಳನ್ನು ತಡೆಯಬಹುದಾಗಿದೆ.
•ತುಳಸಿಯ ಬಳಕೆಯು ತ್ವಚೆಗೆ ಅಥವಾ ಚರ್ಮಕ್ಕೆ ಅಂಟಿದ ಸೋಂಕುಗಳನ್ನು ನಿವಾರಿಸಲು ಸಹಾಯಕವಾಗಿದೆ. ಜೊತೆಗೆ ಇದು ಮೊಡವೆಗಳನ್ನು ಕಡಿಮೆಯಾಗಿಸುತ್ತದೆ.
•ತುಳಸಿಯಲ್ಲಿರುವ ಕ್ಯಾಂಫೀನ್, ಯುಜೆನಾಲ್ ಮತ್ತು ಸಿನೋಲ್ ಸಂಯುಕ್ತಗಳು ಉಸಿರಾಟಕ್ಕೆ ಸಂಬಂಧ ಪಟ್ಟಂತಹ ಸಮಸ್ಯೆಗಳನ್ನು ಬಗೆಹರಿಸಬಹುದು. ಜೊತೆಗೆ, ಕ್ಷಯಾ ರೋಗ ದಂತಹ ಕಾಯಿಲೆಗೆ ಪರಿಹಾರವನ್ನು ಒದಗಿಸುತ್ತದೆ.
• ಇದು ಮೂಳೆಗಳ ಆರೋಗ್ಯ ಮತ್ತು ಹೃದಯದ ರಕ್ಷಣೆಯನ್ನು ಮಾಡುತ್ತದೆ.
• ಇದರ ಬಳಕೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮತ್ತು ಇದನ್ನು ಚಹಾ ಮಾಡಿ ಕುಡಿಯುವುದರಿಂದಾಗಿ ಮಾನಸಿಕ ಒತ್ತಡದಿಂದ ಪಾರಾಗಬಹುದಾಗಿದೆ. ಹಾಗೂ ಮನಸ್ಸಿಗೆ ಶಾಂತಿ ದೊರೆಯುತ್ತದೆ.
•ಈ ಸೊಪ್ಪಿನ ಬಳಕೆಯು ಹೊಟ್ಟೆ ಉಬ್ಬರವನ್ನು ಕಡಿಮೆಯಾಗಿಸಲು ಸಹಾಯ ಮಾಡಬಹುದು. ಮಲಬದ್ಧತೆಯನ್ನು ನಿವಾರಿಸುವ ಮೂಲಕ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳಿಂದ ದೂರಗೊಳಿಸುತ್ತದೆ.
ಕಾಡು ಬಸಳೆ:
ಕಲಾಂಚೋ ಪಿನ್ನಾಟಾ ಎಂಬ ವೈಜ್ಞಾನಿಕ ಹೆಸರನ್ನು ಹೊಂದಿರುವ ಕಾಡು ಬಸಳೆಯನ್ನು ಮಿರಾಕಲ್ ಲೀಫ್ (Miracle Leaf). ಹಾಗೂ ಲೈಫ್ ಲೈಫ್ ಪ್ಲಾಂಟ್ (Life Plant) ಹಾಗೂ ಏರ್ ಪ್ಲಾಂಟ್ (Air Plant) ಎಂದು ಕರೆಯುತ್ತಾರೆ.
ಹೆಚ್ಚಿನ ಪೋಷಕಾಂಶಗಳನ್ನು ಹೊಂದಿದ್ದು, ಯಾವುದೇ ಗಿಡಗಳಲ್ಲಿ ಇಲ್ಲದಂತಹ ಅಂಶಗಳು ಇದರಲ್ಲಿ ಕಾಣಸಿಗುತ್ತದೆ. ಈ ಈ ಕಾರಣದಿಂದಾಗಿ ಔಷಧೀಯ ಸಸ್ಯಗಳಲ್ಲಿ ಕಾಡು ಬಸಳೆ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ.
•ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇರುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
•ಸಾಮಾನ್ಯವಾಗಿ ಇದರ ರುಚಿ ಕಹಿ ಆಗಿರುವುದರಿಂದ, ಈ ಸಸ್ಯವನ್ನು ಅಡುಗೆಗಳಲ್ಲಿ ಬಳಸುವುದಿಲ್ಲ. ಹಾಗಾಗಿ ಇದು ಜನರಿಗೆ ಅಷ್ಟೊಂದು ಚಿರಪರಿಚಿತವಲ್ಲ.
• ಗಾಯಗಳು, ಚರ್ಮ ಕೆಂಪಗಾಗಿರುವುದು, ತುರಿಕೆಗಳು ಇವುಗಳಿಗೆ ಈ ಎಲೆಯನ್ನು ಅರೆದು ಹಚ್ಚಲಾಗುತ್ತದೆ. ಮತ್ತು ಇದರಲ್ಲಿ ನೋವು ನಿವಾರಣ ಗುಣ ಇದೆ ಎನ್ನಲಾಗುತ್ತದೆ.
• ತಲೆನೋವು, ಜ್ವರ, ಸಂಧಿವಾತ, ಇತರ ಕಾಯಿಲೆಗಳಿಗೆ ಇದು ಮನೆ ಮದ್ದಾಗಿದೆ. ಇದರ ರಸದ ಮೂಲಕ ನಿವಾರಣೆ ಮಾಡಬಹುದಾಗಿದೆ.
ಕಾಡು ಬಸಳೆಯ ಕುರಿತಾಗಿ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿದೆ. ಕೆಲವು ಕಾಯಿಲೆಗಳಿಗೆ ಅಥವಾ ಗರ್ಭವತಿಯರು ಇದನ್ನು ಬಳಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಒಳಿತು.
ಇನ್ನಷ್ಟು ಮಾಹಿತಿಗಾಗಿ: WHO
ಇದನ್ನು ಓದಿ:LIFE LESSONS