Chandrayaan 5 Mission: ಚಂದ್ರಯಾನ-5 ಮಿಷನ್: ಭಾರತದ ಹೊಸ ಹೆಜ್ಜೆ

Spread the love

Chandrayaan 5 Mission: ಭಾರತ ಮತ್ತೊಂದು ಬೃಹತ್ ಹೆಜ್ಜೆಯನ್ನು ಇಡುತ್ತಿವೆ. 2027-28ರ ವೇಳೆಗೆ ಚಂದ್ರಯಾನ-5 ಉಡಾವಣೆಯಾಗುವ ನಿರೀಕ್ಷೆ ಇದೆ. ಈ ಬಾರಿಯ ಚಂದ್ರಯಾನವು ಹಲವಾರು ಮಹತ್ವದ ಉದ್ದೇಶಗಳನ್ನು ಒಳಗೊಂಡಿದೆ.

Chandrayaan 5 Mission
Chandrayaan 5 Mission

Chandrayaan 5 Mission: ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತು ಜಪಾನ್ ದೇಶದ ಜಾಕ್ಸಾ ಸಂಸ್ಥೆಗಳು ಜಂಟಿಯಾಗಿ ನಡೆಸಲಿವೆ. ಈ ಜಂಟಿ ಚಂದ್ರಯಾನಕ್ಕೆ ಲುಪೆಕ್ಸ್ ಎಂದು ಹೆಸರಿಡಲಾಗಿದೆ.

ಈ ಬಾರಿಯ ಚಂದ್ರಯಾನ ಚಂದ್ರನ ದಕ್ಷಿಣದ ಧ್ರುವದಲ್ಲಿ ಹಲವು ಪ್ರಯೋಗಗಳನ್ನು ನಡೆಸಲಿದೆ.

ಚಂದ್ರನ ದಕ್ಷಿಣ ಧ್ರುವದಲ್ಲಿರುವಂತಹ ನೀರಿನ ಮಂಜುಗಡ್ಡೆ ಮತ್ತು ಸಂಪನ್ಮೂಲಗಳ ಪ್ರಮಾಣ. ಮತ್ತು ಗುಣಮಟ್ಟವನ್ನು ತಿಳಿಯುವುದು ಈ ಚಂದ್ರಯಾನದ ಮುಖ್ಯ ಉದ್ದೇಶವಾಗಿದೆ.

Chandrayaan 5 Mission: ಉಡಾವಣೆಯ ಕುರಿತಾದ ಮಾಹಿತಿ:

 

• ಈ ಚಂದ್ರಯಾನದಲ್ಲಿ ಜಪಾನ್ ದೇಶದ H3 ರಾಕೆಟ್ (H3-24L Launch Vehicle) ಅನ್ನು ಬಳಸಲಾಗುತ್ತಿದೆ.

•ಈ ಬಾರಿ ಉಡಾವಣೆಯನ್ನು ಶ್ರೀಹರಿಕೋಟದಲ್ಲಿ ನಡೆಸುವುದಿಲ್ಲ. ಅದರ ಬದಲಾಗಿ ಜಪಾನ್ ದೇಶದ ತನೆಗಾಶಿಮಾ ಬಾಹ್ಯಾಕಾಶ ಕೇಂದ್ರದಲ್ಲಿ ನಡೆಸಲಾಗುವುದು.

•ಇತ್ತೀಚಿಗೆ ವಿಜ್ಞಾನಿಗಳು ಜಪಾನ್ ಗೆ ಭೇಟಿ ನೀಡಿ ಬಾಹ್ಯಾಕಾಶ ಕೇಂದ್ರವನ್ನು ಪರೀಕ್ಷಿಸಿದ್ದಾರೆ.

ಈ ಚಂದ್ರಯಾನವು ಭಾರತಕ್ಕೆ ಬಹಳ ಮುಖ್ಯವಾದ ಹೆಜ್ಜೆಯಾಗಿದೆ. ಹಾಗೂ ಇದು ಹಲವಾರು ಲಾಭಗಳನ್ನು ಕೂಡ ತಂದೊಡ್ಡಲಿದೆ.

ಭಾರತಕ್ಕೆ ಚಂದ್ರಯಾನ-5 ಏಕೆ ಮುಖ್ಯ?

 

•ಭವಿಷ್ಯದ ಇಂಧನ:

ಚಂದ್ರಯಾನ 1 ಮತ್ತು 3ರಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ನೀರಿನ ಮಂಜುಗಡ್ಡೆ ಇರುವುದು ಪತ್ತೆಯಾಗಿದೆ. ಈ ಬಾರಿಯ ಚಂದ್ರಯಾನದಲ್ಲಿ ಚಂದ್ರನ ಮೇಲ್ಮೈಯಲ್ಲಿ ಮಣ್ಣನ್ನು ಕೊರೆಯಲಾಗುತ್ತದೆ.

ಹಾಗೂ ಅಲ್ಲಿ ನೀರಿನ ಪ್ರಮಾಣ ಎಷ್ಟಿದೆ ಎಂಬುದನ್ನು ತಿಳಿಯಲಾಗುತ್ತದೆ. ಜೊತೆಗೆ ಆ ನೀರಲ್ಲಿ ಹೈಡ್ರೋಜನ್ ಮತ್ತು ಆಕ್ಸಿಜನ್ ಅನ್ನು ವಿಭಜಿಸಲಾಗುತ್ತದೆ. ಮತ್ತು ಭವಿಷ್ಯದ ಮಂಗಳಯಾನದಲ್ಲಿ ಇದನ್ನು ಇಂಧನವಾಗಿ ಬಳಸುವ ಉದ್ದೇಶವನ್ನು ಹೊಂದಲಾಗಿದೆ.

ತಂತ್ರಜ್ಞಾನದ ಪ್ರದರ್ಶನ:

ಚಂದ್ರಯಾನ-3 ಅಲ್ಲಿ ಕೇವಲ 26 ಕೆಜಿ ತೂಕದ ರೋವರ್ ಅನ್ನು ಬಳಸಲಾಗಿತ್ತು. ಆದರೆ ಈ ಚಂದ್ರಯಾನದಲ್ಲಿ ಸುಮಾರು 350 ಕೆ.ಜಿಯ ರೋವರ್ ಅನ್ನು ಬಳಸಲಾಗುತ್ತಿದೆ. ಇದನ್ನು ಹೊತ್ತಯ್ಯೋ ಭಾರಿ ಪ್ರಮಾಣದ ಲ್ಯಾಂಡರ್ ನ ಅವಶ್ಯಕತೆ ಇರಲಿದೆ.

ಹಾಗೂ ಅತ್ಯಾಧುನಿಕತಂತ್ರಜ್ಞಾನವನ್ನು ಬಳಸಿ ಭಾರತವು ಲ್ಯಾಂಡರ್ ಅನ್ನು ವಿಶೇಷವಾಗಿ ಅಭಿವೃದ್ಧಿ ಪಡಿಸಿದೆ.

ಹೆಚ್ಚಿನ ಕತ್ತಲೆಯಲ್ಲಿ ಬದುಕುಳಿಯುವುದು:

ಚಂದಿರನ ಮೇಲೆ ದಕ್ಷಿಣ ಧ್ರುವದಲ್ಲಿ ಹೆಚ್ಚಿನ ಬಿಲಗಳು ಇರಲಿವೆ. ಇಲ್ಲಿ ಭೂಮಿಯ ಮೇಲಿನ 14 ದಿನಗಳು ಚಂದಿರನ ಮೇಲಿನ ಒಂದು ರಾತ್ರಿಗೆ ಸಮವಾಗಿರುತ್ತದೆ. ಹಾಗೂ ಮೈನಸ್ 200 ಡಿಗ್ರಿ ಸೆಲ್ಸಿಯಸ್ ಅಷ್ಟು ತಾಪಮಾನ ಇರಲಿದೆ.

ಇಂತಹ ಸಂದರ್ಭದಲ್ಲಿ ಉಪಕರಣಗಳು ಹಾಳಾಗದಂತೆ ತಡೆಯುವುದು ಮುಖ್ಯ ಕೆಲಸ. ಹಾಗೂ ಇದಕ್ಕೆ ಅಗತ್ಯವಿರುವಂತಹ ತಂತ್ರಜ್ಞಾನವನ್ನು ಇಸ್ರೋ ಸಂಸ್ಥೆ ಅಭಿವೃದ್ಧಿಪಡಿಸಿದೆ.

ಜಾಗತಿಕ ನಾಯಕ ಮತ್ತು ಸ್ನೇಹ: 

ಈ ಚಂದ್ರಯಾನದಲ್ಲಿ ಜಪಾನ್ ಮತ್ತು ಭಾರತಾ ದೇಶಗಳು ಜಂಟಿಯಾಗಿ ಕಾರ್ಯನಿರ್ವಹಿಸಲಿವೆ. ಇದರಿಂದಾಗಿ ಸಿಗುವ ಯಶಸ್ಸು ಜಾಗತಿಕವಾಗಿ ಪರಿಣಾಮ ಬೀರಲಿದೆ. ಅಮೆರಿಕ ಮತ್ತು ಚೀನಾದಂತಹ ದೇಶಗಳ ಮುಂದೆ ಜಾಗತಿಕ ನಾಯಕತ್ವವನ್ನು ಭಾರತ ಗಿಟ್ಟಿಸಿಕೊಳ್ಳಲಿದೆ.

ಮಾನವ ಚಂದ್ರನೆಡೆಗೆ: 

ಭಾರತ ದೇಶವು 2040ರ ವೇಳೆಗೆ ಮಾನವನನ್ನು ಚಂದ್ರಗ್ರಹಕ್ಕೆ ಕಳಿಸುವ ಯೋಜನೆಯನ್ನು ಹೊಂದಿದೆ. ಹಾಗೂ ಈ ಚಂದ್ರಯಾನವು ಅದಕ್ಕೆ ಉತ್ತಮ ರೀತಿಯಲ್ಲಿ ಸಹಾಯವನ್ನು ಮಾಡಲಿದೆ. ಈಗ ಚಂದ್ರನಲ್ಲಿ ಸಂಗ್ರಹಿಸುವಂತಹ ಪ್ರತಿಯೊಂದು ಅಂಶಗಳು, ದತ್ತಾಂಶಗಳು ಮುಂದಿನ ಯೋಜನೆಗೆ ಸಹಕಾರಿಯಾಗಲಿದೆ.

ಈ ಚಂದ್ರಯಾನವು ಹಲವಾರು ಉದ್ದೇಶಗಳನ್ನು ಹೊಂದಿದೆ. ಆ ಉದ್ದೇಶಗಳು ಭವಿಷ್ಯದ ಭಾರತಕ್ಕೆ ಸಹಕಾರಿಯಾಗಲಿದೆ.

ಚಂದ್ರಯಾನ-5 ರ ಉದ್ದೇಶಗಳು:

 

•ಮಂಜುಗಡ್ಡೆಯ ಕುರಿತಾದ ಅಧ್ಯಯನ: 

ಇಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇರುವಂತಹ ಮಂಜುಗಡ್ಡೆಯ ಕುರಿತಾಗಿ ಅಧ್ಯಯನ ನಡೆಸಲಾಗುತ್ತದೆ. ಹಾಗೂ ಎಷ್ಟು ಬಿಲಗಳಲ್ಲಿ ಇಂದಿಗೂ ಸೂರ್ಯನ ಬೆಳಕು ಬಿದ್ದೆ ಇಲ್ಲ. ಅಂತಹ ಪ್ರದೇಶದಲ್ಲೂ ಕೂಡ ನೀರಿನ ಪ್ರಮಾಣ ಹಾಗೂ ಗುಣಮಟ್ಟದ ಕುರಿತಾಗಿ ಅಧ್ಯಯನ ನಡೆಸಲಾಗುವುದು.

ಹಾಗೂ ಚಂದ್ರನ ಮೇಲೆ ಇರುವಂತಹ ನೀರು ಒಳಗೊಂಡಿರುವಂತಹ ರಾಸಾಯನಿಕ ಅಂಶಗಳ ಕುರಿತಾಗಿ ತಿಳಿಯಬಹುದು. ಜೊತೆಗೆ ಅದು ಕುಡಿಯಲು ಯೋಗ್ಯವಿದೆಯೇ ಮತ್ತು ಇಂಧನವಾಗಿ ಅದನ್ನು ಬಳಸಬಹುದೆ ಎಂದು ತಿಳಿಯಲಾಗುತ್ತದೆ.

•ಮಣ್ಣಿನ ಸಂಗ್ರಹಣೆ:

ಈ ಯಾನಕ್ಕೆ ಬಳಸಲಾಗುವ ರೋವರ್ ಅನ್ನು ಜಪಾನ್ ದೇಶ ಸಿದ್ದಪಡಿಸಿದೆ. ಹಾಗೂ ಇದು ಚಂದಿರನ ಮೇಲಿನ ಮಣ್ಣನ್ನು 1 ಮೀಟರ್ ಆಳದ ತನಕ ಕೊರೆಯುತ್ತದೆ. ಹಾಗೂ ಆ ಮಣ್ಣನ್ನು ಸಂಗ್ರಹಿಸಲಾಗುತ್ತದೆ.

ಈ ರೋವರ್ ನಲ್ಲಿ ಅತ್ಯುನ್ನತ ಪ್ರಯೋಗಾಲಯಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಇಲ್ಲಿ ಸಂಗ್ರಹಿಸಿದ ಮಣ್ಣನ್ನು ಬಿಸಿ ಮಾಡಲಾಗುವುದು.

ಮತ್ತು ಮಣ್ಣಿನಲ್ಲಿ ಆವಿಯಾಗುವ ಅಂಶಗಳು ಮತ್ತು ಉಳಿಯುವಂತಹ ನೀರಿನ ಅಂಶಗಳನ್ನು ವಿಶ್ಲೇಷಿಸಲಾಗುವುದು.

ಚಂದ್ರನ ರಾತ್ರಿ ಕಳೆಯುವಿಕೆ: 

ಚಂದಿರನ ಮೇಲೆ ರಾತ್ರಿ ಬಹಳ ದೀರ್ಘವಾದುದು. ಹಾಗೂ ಅಲ್ಲಿನ ಕಠಿಣ ಚಳಿಯಲ್ಲೂ ಬ್ಯಾಟರಿಗಳು ಮತ್ತು ಉಪಕರಣಗಳು ಹಾಳಾಗದಂತೆ ಉಳಿಯುವುದು ಬಹಳ ಕಷ್ಟಕರವಾದ ವಿಷಯ.

ಇದನ್ನು ಬಹುಕಾಲದವರೆಗೂ ಉಳಿಸಿಕೊಳ್ಳುವಂತಹ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ.

ಭವಿಷ್ಯದ ತಳಹದಿ: 

ಭಾರತದ ಮುಂದಿನ ಎಲ್ಲಾ ಮಾನವ ಸಹಿತ ಚಂದ್ರಯಾನಗಳಿಗೂ ಈ ಯಾನವು ಬುನಾದಿ ಹಾಕಲಿದೆ.

ಮುಂದಿನ ಚಂದ್ರಯಾನಗಳ ತಯಾರಿ ಯಾವ ರೀತಿಯಾಗಿ ನಡೆಯಬೇಕು ಎಂಬುದು ಈ ಯಾನದಲ್ಲಿ ತಿಳಿಯುತ್ತದೆ.

ಚಂದ್ರಯಾನ-5 ಕ್ಕೆ ಬಳಸಲಾಗುವ ಉಪಕರಣಗಳು:

 

ಈ ಚಂದ್ರಯಾನವು ಒಟ್ಟಾರೆಯಾಗಿ 7 ವೈಜ್ಞಾನಿಕ ಉಪಕರಣಗಳನ್ನು ಹೊಂದಿರಲಿದೆ. ಅವುಗಳನ್ನು ಭಾರತದ ಇಸ್ರೋ ಮತ್ತು ಜಪಾನ್ ದೇಶದ ಜಾಕ್ಸ ತಯಾರಿಸಿರುತ್ತದೆ.

ಕೇವಲ ಭಾರತ ಮತ್ತು ಜಪಾನ್ ಅಲ್ಲದೆ ಅಮೆರಿಕಾದ ನಾಸಾ ಮತ್ತು ಯುರೋಪಿಯನ್ ಸ್ಪೇಸ್ ಏಜೆನ್ಸಿ ಕೂಡ ಹಲವು ಉಪಕರಣಗಳನ್ನು ಅಭಿವೃದ್ಧಿಪಡಿಸಿವೆ.

ಆ ಉಪಕರಣಗಳು ಈ ರೀತಿ ಇವೆ:

 

REIWA (Resource Investigating Water Analyzer) :

ಇದನ್ನು ಜಪಾನ್ ನ ಜಾಕ್ಸ ತಯಾರಿಸಿದೆ. ಇದು ಒಟ್ಟು ನಾಲ್ಕು ಪ್ರಮುಖ ಸೆನ್ಸಾರ್ ಗಳ ಪ್ಯಾಕೇಜ್ ಆಗಿದೆ.

ಇದರಲ್ಲಿ ಇರುವಂತಹ LTGA (Lunar Thermogravimetric Analyzer) ಚಂದ್ರನ ಮಣ್ಣನ್ನು ಬಿಸಿ ಮಾಡುತ್ತದೆ.

ಮತ್ತು TRITON ಬಿಸಿ ಮಾಡಿದ ನಂತರ ಅದರಲ್ಲಿ ಇರುವಂತಹ ಅನಿಲಗಳನ್ನು ವಿಶ್ಲೇಷಣೆ ನಡೆಸುತ್ತದೆ.

 

PRATHIMA (Permittivity and Thermo-physical Investigation for Moon’s Aquatic Scout):

ಇದನ್ನು ಭಾರತದ ಇಸ್ರೋ ಸಂಸ್ಥೆಯು ಅಭಿವೃದ್ಧಿಪಡಿಸಿದೆ. ಇದು ಚಂದಿರನ ಮೇಲ್ಮೆಯಲ್ಲಿರುವ ಮಂಜುಗಡ್ಡೆಯ ಪ್ರಮಾಣವನ್ನು ನಿಖರವಾಗಿ ಲೆಕ್ಕ ಹಾಕುತ್ತದೆ.

GPR (Ground Penetrating Radar):

ಈ ಉಪಕರಣವು ಚಂದ್ರನ ಮೇಲ್ಮೆಯಿಂದ ಕೆಲವು ಮೀಟರ್ ಆಳದವರೆಗೂ ತರಂಗಗಳನ್ನು ಕಳಿಸುತ್ತದೆ. ಹಾಗೂ ಅದರ ಮೂಲಕ ಅಲ್ಲಿನ ಚಿತ್ರಣವನ್ನು ಪಡೆಯಲಾಗುತ್ತದೆ.

ಜೊತೆಗೆ ಈ ಉಪಕರಣವು ಮಂಜುಗಡ್ಡೆಯ ಇರುವಿಕೆಯನ್ನು ಗುರುತಿಸಲು ಸಹಾಯ ಮಾಡುತ್ತದೆ.

ALIS (Advanced Lunar Imaging Spectrometer):

ಈ ಉಪಕರಣವು ಚಂದಿರನ ಮೇಲ್ಮೆಯಲ್ಲಿ ಇರುವಂತಹ ಖನಿಜಗಳು. ಮತ್ತು ಇತರ ಸೂಕ್ಷ್ಮ ಅಂಶಗಳನ್ನು ಮ್ಯಾಪಿಂಗ್ ಮಾಡುತ್ತದೆ. ಇದನ್ನು ಜಾಕ್ಸ ಸಂಸ್ಥೆಯು ಅಭಿವೃದ್ಧಿಪಡಿಸಿದೆ.

ನ್ಯೂಟ್ರಾನ್ ಸ್ಪೆಕ್ಟ್ರೋಮೀಟರ್ :

ಈ ಉಪಕರಣವನ್ನು ಅಮೆರಿಕದ ನಾಸಾ ಸಂಸ್ಥೆಯು ಅಭಿವೃದ್ಧಿಪಡಿಸಿರುತ್ತದೆ. ಇದು ಚಂದ್ರನ ಮಣ್ಣಿನಲ್ಲಿರುವಂತಹ ಹೈಡ್ರೋಜನ್ ಅಂಶವನ್ನು ಪತ್ತೆಹಚ್ಚುತ್ತದೆ. ಜೊತೆಗೆ ನೀರಿನ ಲಭ್ಯತೆಯನ್ನು ಪತ್ತೆಹಚ್ಚಲು ಇದು ಸಹಾಯ ಮಾಡುತ್ತದೆ.

ಮಾಸ್ ಸ್ಪೆಕ್ಟ್ರೋಮೀಟರ್ (ESA): ಈ ಉಪಕರಣವನ್ನು ಯುರೋಪಿಯನ್ ಸ್ಪೇಸ್ ಏಜೆನ್ಸಿ ತಯಾರಿಸುತ್ತದೆ. ಇದು ಚಂದ್ರನ ತೆಳುವಾದ ಪದರವನ್ನು ಮತ್ತು ಮಣ್ಣಿನಲ್ಲಿ ಇರುವಂತಹ ರಾಸಾಯನಿಕ ಧಾತುಗಳನ್ನು ಸರಿಯಾದ ರೀತಿಯಲ್ಲಿ ಲೆಕ್ಕಾಚಾರ ಹಾಕುತ್ತದೆ.

 

ಚಂದ್ರಯಾನ-5 ರಲ್ಲಿ ಈ ತಂತ್ರಜ್ಞಾನಗಳನ್ನು ಬಳಸಲಾಗಿದೆ:

 

•ಡ್ರಿಲ್ ತಂತ್ರಜ್ಞಾನ: ಇಲ್ಲಿ ರೋವರ್ ನಲ್ಲಿ ಡ್ರಿಲ್ ಯಂತ್ರವನ್ನು ಅಳವಡಿಸಲಾಗಿದೆ. ಇದು ಚಂದಿರನ ಮೇಲ್ಮೆಯನ್ನು 1.5 ಮೀಟರ್ ತನಕ ಕೊರೆಯುವ ಸಾಮರ್ಥ್ಯವನ್ನು ಹೊಂದಿದೆ.

•ರಾತ್ರಿಯ ರಕ್ಷಣೆ: ರೋವರ್ ನಲ್ಲಿ ಕಠಿಣವಾದ ಚಳಿಯನ್ನು ತಡೆಯಲು ಹೀಟ್ ಪೈಪ್ ಗಳು ಮತ್ತು ರೇಡಿಯೇಟರ್ ಗಳನ್ನು ಅಳವಡಿಸಲಾಗಿದೆ.

•ಸ್ವಯಂಚಾಲಿತ ನ್ಯಾವಿಗೇಶನ್: ಚಂದ್ರನ ದಕ್ಷಿಣ ಧ್ರುವದ ಭಾಗಗಳಲ್ಲಿ ಬಹಳ ಕತ್ತಲೆ ಇರಲಿದೆ.

ಹಾಗೂ ಹೆಚ್ಚಿನ ಹೊಂಡ ಗುಂಡಿಗಳು ಮತ್ತು ಬಿಲಗಳು ಇರಲಿವೆ. ಇಂತಹ ಜಾಗದಲ್ಲಿ ರೋವರ್ ಸುರಕ್ಷಿತವಾಗಿ ಲ್ಯಾಂಡ್ ಆಗಬೇಕು. ಮತ್ತು ಕಾರ್ಯ ನಿರ್ವಹಿಸಬೇಕು.

ಇದಕ್ಕೆ ಅಗತ್ಯವಿರುವಂತಹ ಹಜಾರ್ಡ್ ಕ್ಯಾಮೆರಾಗಳು ಮತ್ತು ವಿಶೇಷ ಲೈಟಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ.

ಈ ರೀತಿಯಾಗಿ ಭಾರತ ,ಜಪಾನ್, ಅಮೆರಿಕ ಮತ್ತು ಯುರೋಪ್ ದೇಶಗಳು ಸೇರಿ ಚಂದ್ರಯಾನ-5 ಕ್ಕೆ ಕೊಡುಗೆಯನ್ನು ನೀಡಿವೆ.

ಚಂದ್ರಯಾನ-5 ಕ್ಕಿರುವ ಸವಾಲುಗಳು:

 

•ಶೀತ ಮತ್ತು ಕತ್ತಲೆ: 

ಚಂದ್ರನ ದಕ್ಷಿಣ ದ್ರುವದ ಭಾಗವು ಅತ್ಯಂತ ಕತ್ತಲೆ ಮತ್ತು ಶೀತದ ವಾತಾವರಣದಿಂದ ತುಂಬಿರುತ್ತದೆ. ಇಂತಹ ಜಾಗದಲ್ಲಿ ಉಪಕರಣಗಳು ಮತ್ತು ಬ್ಯಾಟರಿಗಳು ಹೆಪ್ಪುಗಟ್ಟದಂತೆ ನೋಡಿಕೊಳ್ಳುವುದು ದೊಡ್ಡ ಸವಾಲಿನ ವಿಷಯವಾಗಿದೆ.

•ಬೃಹತ್ ತೂಕದ ಲ್ಯಾಂಡಿಂಗ್: 

ಹಿಂದಿನ ಚಂದ್ರಯಾನ-3 ರಲ್ಲಿ ಲ್ಯಾಂಡರ್ ತೂಕ ಸುಮಾರು 1,750 ಕೆಜಿ ಇತ್ತು. ಹಾಗೂ ಈ ಚಂದ್ರಯಾನದಲ್ಲಿ ಲ್ಯಾಂಡರ್ ತೂಕ ಸುಮಾರು 6,000 ಕೆಜಿ ಇರಲಿದೆ.

ಚಂದ್ರನ ಮೇಲೆ ಕನಿಷ್ಠ ಗುರುತ್ವಾಕರ್ಷಣ ಶಕ್ತಿ ಇರುತ್ತದೆ. ಮತ್ತು ಅಲ್ಲಿ ಸುರಕ್ಷಿತವಾದ ಸಾಫ್ಟ್ ಲ್ಯಾಂಡಿಂಗ್ ಮಾಡುವುದು ಸವಾಲಿನ ವಿಷಯ ಆಗಿರಲಿದೆ.

•ಕಠಿಣವಾದ ಮೇಲ್ಮೈ ಮತ್ತು ಸಂಪರ್ಕದ ಸಮಸ್ಯೆಗಳು: 

ದಕ್ಷಿಣ ಧ್ರುವದ ಭಾಗದಲ್ಲಿ ಹೆಚ್ಚಿನ ಗುಂಡಿಗಳು,ಬಿಲಗಳು ಇರಲಿವೆ. ಆ ಮೇಲ್ಮೆಯಲ್ಲಿ ಚಲಿಸಲು ಕಠಿಣವಾಗಿರುತ್ತದೆ. ಇಂತಹ ಸಮಯದಲ್ಲಿ ರೋವರ್ ಗುಂಡಿಯೊಳಗೆ ಸಿಲುಕಿ ಕೊಳ್ಳುವ ಸಾಧ್ಯತೆ ಇರಲಿದೆ.

ಹಾಗೂ ರೋವರ್ ಬಿಲಗಳ ಒಳಗೆ ಹೋದಾಗ, ಸೌರಶಕ್ತಿ ದೊರೆಯುವುದಿಲ್ಲ. ಮತ್ತು ಭೂಮಿಯ ಜೊತೆಗೆ ಸಂಪರ್ಕವು ಕಡಿತಗೊಳ್ಳಬಹುದು.

ಇಂತಹ ಸಮಯದಲ್ಲಿ ಬ್ಯಾಟರಿ ಬ್ಯಾಕಪ್ ಅವಶ್ಯಕತೆ ಬಹಳಷ್ಟು ಇರಲಿದೆ. ಹಾಗೂ ಅದು ಸ್ವಯಂ ಚಾಲಿತ ನ್ಯಾವಿಗೇಷನ್ ಮೂಲಕ ತನ್ನ ದಾರಿಯನ್ನು ತಾನೇ ಕಂಡುಕೊಳ್ಳಬೇಕಿದೆ.

ಮಣ್ಣನ್ನು ಕೊರೆಯುವುದು ಕಠಿಣ:

ಚಂದ್ರನ ಮೇಲೆ ಮಂಜುಗಡ್ಡೆ ಮತ್ತು ಮಣ್ಣು ಸೇರಿ ಮೇಲ್ಮೈ ತುಂಬಾ ಕಠಿಣವಾಗಿರುತ್ತದೆ. ಹಾಗೂ ಡ್ರಿಲ್ ಯಂತ್ರವು ಸುಮಾರು 1.5 ಮೀಟರ್ ತನಕ ಮಣ್ಣನ್ನು ಕೊರೆಯಬೇಕಾಗುತ್ತದೆ.

ಈ ಸಮಯದಲ್ಲಿ ತೀವ್ರವಾದ ಕಂಪನ ಉಂಟಾಗಬಹುದು. ಇದರಿಂದ ಡ್ರಿಲ್ ಯಂತ್ರವು ಸಮತೋಲನವನ್ನು ತಪ್ಪುವ ಸಾಧ್ಯತೆ ಇರುತ್ತದೆ. ಹಾಗೂ ಡ್ರಿಲ್ ಬಿಟ್ ಮುರಿದು ಹೋಗಬಹುದು ಕೂಡ.

•ಹೊಂದಿಕೊಳ್ಳುವಿಕೆಯ ಸವಾಲು: 

ಇಲ್ಲಿ ಜಪಾನ್ ದೇಶದ ರೋವರ್ ಮತ್ತು ರಾಕೆಟ್ ಅನ್ನು ಬಳಸಲಾಗುತ್ತಿದೆ. ಹಾಗೂ ಭಾರತದ ಲ್ಯಾಂಡರ್ ಅನ್ನು ಬಳಸಲಾಗುತ್ತದೆ.

ಎರಡು ವಿಭಿನ್ನ ಯಂತ್ರಗಳ ನಡುವೆ ಸಂಬಂಧ ಬೆಸೆಯುವುದು ಬಹಳ ಕಠಿಣ. ಹಾಗೂ ಇವುಗಳನ್ನು ಮ್ಯಾಚಿಂಗ್ ಮಾಡಿ ಸಮೂಹನ ನಡೆಸುವುದು ದೊಡ್ಡ ಸವಾಲಿನ ವಿಷಯವಾಗಿದೆ.

ಈ ರೀತಿಯಾಗಿ ಚಂದ್ರಯಾನ-5 ಉದ್ದೇಶಗಳು ಲಾಭಗಳ ಜೊತೆಗೆ ಸವಾಲುಗಳನ್ನು ಕೂಡ ಒಳಗೊಂಡಿದೆ. ಇವೆಲ್ಲವನ್ನು ಭೇಧಿಸುವುದು ಮುಂದೆ ಇರುವಂತಹ ಗುರಿ.

ಹಾಗೂ ಭಾರತದ ಪ್ರಮುಖ ನಡೆಯಾಗಿದ್ದು, ಮುಂದಿನ ಯಶಸ್ಸಿಗೆ ನಾಂದಿ ಹಾಡಿದೆ. ಇದರ ಯಶಸ್ಸು ಭಾರತದ ಹೆಗ್ಗಳಿಕೆಯನ್ನು ಮತ್ತಷ್ಟು ಹೆಚ್ಚಿಸಲಿದೆ.

ಇನ್ನಷ್ಟು ಮಾಹಿತಿಗಾಗಿ: ISRO

ಇದನ್ನು ಓದಿ: CPC 2026 conference

Leave a Comment

Scroll to Top

Discover more from nirantarasuddhi

Subscribe now to keep reading and get access to the full archive.

Continue reading