Public Examinations Amendment Bill2026:ಕೇಂದ್ರ ಸರ್ಕಾರವು ಇತ್ತೀಚಿಗೆ ಸಾರ್ವಜನಿಕ ಪರೀಕ್ಷೆಗಳ ತಿದ್ದುಪಡಿ ಮಸೂದೆಯನ್ನು ಮಂಡಿಸಿತು.

Public Examinations Amendment Bill2026: ದೇಶದಲ್ಲಿ ನಡೆಯುತ್ತಿರುವ ಪ್ರಶ್ನೆ ಪತ್ರಿಕೆ ಸೋರಿಕೆ. ಮತ್ತು ಪರೀಕ್ಷೆ ಅಕ್ರಮಗಳನ್ನು ಇದನ್ನು ತಡೆಯಲು ಈ ಕಠಿಣ ಕಾನೂನು ಜಾರಿಗೊಳಿಸಲಾಗಿದೆ.
ಈ ಮಸೂದೆಯನ್ನು ಜುಲೈ 27, 2026ರಂದು ಲೋಕಸಭೆಯಲ್ಲಿ ಮಂಡಿಸಲಾಯಿತು.
Public Examinations Amendment Bill2026: ಈ ಕೆಳಗಿನ ಹಂತಗಳಲ್ಲಿ ಮಸೂದೆಯನ್ನು ಮಂಡಿಸಲಾಯಿತು.
•ಜುಲೈ 24ರಂದು ಪ್ರಧಾನಿ ಮೋದಿ ನೇತೃತ್ವದ ಸಚಿವ ಸಂಪುಟ ಈ ಕರಡು ಮಸೂದೆಗೆ ಅನುಮೋದನೆ ನೀಡಿತು.
•ಜುಲೈ 25ರಂದು ಮಸೂದೆಯ ಪ್ರತಿಯನ್ನು ಸಂಸತ್ತಿನ ಸದಸ್ಯರಿಗೆ ಅಧ್ಯಯನ ನಡೆಸಲು ನೀಡಲಾಯಿತು.
•ಜುಲೈ 27ರಂದು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಲೋಕಸಭೆಯಲ್ಲಿ ಮಸೂದೆಯನ್ನು ಅಧಿಕೃತವಾಗಿ ಮಂಡನೆ ಮಾಡಿದರು.
“ಸಾರ್ವಜನಿಕ ಪರೀಕ್ಷೆಗಳ ಕಾಯ್ದೆ 2024” ಇದು ಮೂಲ ಕಾಯ್ದೆಯಾಗಿರುತ್ತದೆ. ಹಾಗೂ ಈಗ ಮಂಡಿಸಿರುವಂತಹ ಮಸೂದೆ ಮೂಲ ಕಾಯಿದೆಯಲ್ಲಿಯೇ ತಿದ್ದುಪಡಿ ಆಗಲಿದೆ.
ಇತ್ತೀಚಿನ ದಿನಗಳಲ್ಲಿ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳ ಪತ್ರಿಕೆಗಳು ಸೋರಿಕೆ ಆಗಿರುವಂತದ್ದು. ಜೊತೆಗೆ ನೀಟ್ ಪತ್ರಿಕೆ ಕೂಡ ಇತ್ತೀಚಿಗೆ ಸೋರಿಕೆಯಾಗಿದೆ. ಇದೆಲ್ಲವೂ ಕೂಡ ಕಾಯ್ದೆಯ ತಿದ್ದುಪಡಿಗೆ ಪ್ರೇರಣೆಯಾಗಿದೆ.
ಹಾಗೂ ಈ ಮಸೂದೆ ಜಾರಿಗೊಳಿಸಲು ಹಲವಾರು ಉದ್ದೇಶಗಳನ್ನು ಸರ್ಕಾರವು ಹೊಂದಿದೆ.
Public Examinations Amendment Bill2026:ತಿದ್ದುಪಡಿ ಮಸೂದೆ ಜಾರಿಯ ಉದ್ದೇಶಗಳು:
ನಂಬಿಕೆಯ ಮರುಸ್ಥಾಪನೆ:
ಪರೀಕ್ಷೆಗಳಲ್ಲಿ ಪಾರದರ್ಶಕತೆಯನ್ನು ತರುವುದು. ಮತ್ತು ನ್ಯಾಯವನ್ನು ತರುವುದು ಈ ಕಾಯ್ದೆಯ ಮೂಲ ಉದ್ದೇಶವಾಗಿದೆ.
ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕ ವ್ಯವಸ್ಥೆಯನ್ನು ಜಾರಿ ಮಾಡುವ ಮೂಲಕ ಮತ್ತೆ ವಿಶ್ವಾಸವನ್ನು ಮೂಡಿಸುವಂಥದ್ದು.
ಅಪರಾಧ ಜಾಲಗಳಿಗೆ ಮಟ್ಟ:
ಪರೀಕ್ಷಾ ಅಕ್ರಮಗಳು ಕೇವಲ ವ್ಯಕ್ತಿಗಳಿಗೆ ಸೀಮಿತವಾಗಿಲ್ಲ. ಇದು ದೊಡ್ಡ ದೊಡ್ಡ ಜಾಲಗಳಾಗಿ ರೂಪಗೊಂಡಿವೆ. ದೊಡ್ಡ ದೊಡ್ಡ ಸಂಘಟನೆಗಳಾಗಿ ರೂಪಗೊಂಡಿವೆ.
ಸೋರಿಕೆಗಳ ಹಿಂದಿರುವ ಹ್ಯಾಕರ್ಗಳು, ದಲ್ಲಾಳಿಗಳು. ಹಾಗೂ ಇತರರನ್ನು ಹತ್ತಿಕುವುದೇ ಈ ಯೋಜನೆಯ ಉದ್ದೇಶವಾಗಿರುತ್ತದೆ.
ಶೀಘ್ರಕ್ರಮ:
ಮೊದಲಿಗೆ ಈ ಕುರಿತಾದ ತನಿಖೆಗಳು ನಡೆಯಲು ಕೋರ್ಟ್ ಹಾಗೂ ಕಾನೂನು ಬಹಳ ಸಮಯವನ್ನು ತೆಗೆದುಕೊಳ್ಳುತ್ತಿತ್ತು. ಹಾಗೂ ಇದರಿಂದ ತಪ್ಪುಗಳು ಮುಚ್ಚಿ ಹೋಗಲು ಸುಲಭವಾಗುತ್ತಿತ್ತು.
ಆದರೆ ತಿದ್ದುಪಡಿ ಮಸೂದೆಯು, ಇದಕ್ಕೆ ಅನುವು ಮಾಡಿಕೊಡುತ್ತಿಲ್ಲ. ಬದಲಿಗೆ ತನಿಖೆ ನಡೆಸಲು 2 ತಿಂಗಳು ಮತ್ತು ತೀರ್ಪು ನೀಡಲು 3 ತಿಂಗಳು ಕಾಲಾವಕಾಶ ನೀಡುತ್ತದೆ.
ಇದರಿಂದ ಶೀಘ್ರ ತನಿಖೆ ಮತ್ತು ತೀರ್ಪುಗಳು ಬರಲು ಸಹಾಯವಾಗುತ್ತದೆ.
ಹೊಣೆಗಾರಿಕೆ:
ಮುಂಚೆ ಪೇಪರ್ ಲೀಕ್ ಮಾಡಿದವರಿಗೆ ಮಾತ್ರವೇ ಶಿಕ್ಷಿಸಲಾಗುತ್ತಿತ್ತು. ಆದರೆ ಪ್ರಸ್ತುತ ಮಸೂದೆಯಲ್ಲಿ ಇದರ ವ್ಯಾಪ್ತಿ ಬಹಳ ದೊಡ್ಡದಾಗಿದೆ.
ಇದಕ್ಕೆ ಕೈಜೋಡಿಸುವ ಪರೀಕ್ಷೆ ಕೇಂದ್ರಗಳು, ಅಧಿಕಾರಿಗಳು, ಹಾಗೂ ಖಾಸಗಿ ಸಂಸ್ಥೆಗಳನ್ನು ಕೂಡ ಶಿಕ್ಷೆಗೆ ಒಳಪಡಿಸಲಾಗುವುದು.
ಶಿಕ್ಷೆಯ ಭಯ ಹುಟ್ಟಿಸುವುದು:
ಇಲ್ಲಿ ಶಿಕ್ಷೆಗಳು ತಪ್ಪನ್ನು ಮಾಡಲು ಹೆದರುವಂತೆ ಮಾಡುತ್ತವೆ.
ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಹೇಳಿರುವಂತೆ,: ಪತ್ರಿಕೆ ಸೋರಿಕೆ ಮಾಡಲು ಯೋಚಿಸುವವರು ಕಠಿಣ ಶಿಕ್ಷೆ ಹಾಗೂ 10 ಕೋಟಿ ದಂಡದ ಕುರಿತಾಗಿ ನೂರು ಬಾರಿ ಯೋಚಿಸುವಂತೆ ಮಾಡುವುದು ಈ ಮಸೂದೆಯ ಉದ್ದೇಶವಾಗಿದೆ” ಎಂದಿದ್ದಾರೆ.
ಈ ರೀತಿಯಾಗಿ ಕೇಂದ್ರ ಸರ್ಕಾರವು ಈ ಕಾಯ್ದೆಯ ಹಿಂದೆ ಹಲವು ಉದ್ದೇಶಗಳನ್ನು ಒಳಗೊಂಡಿದೆ.
ಬಹುಶಃ ಇದರ ಕನಸುಗಳು ಸಾಕಾರಗೊಂಡಲ್ಲಿ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಉನ್ನತ ಜೀವನವನ್ನು ಕಟ್ಟಿಕೊಳ್ಳಬಹುದು.
ಕಾಯ್ದೆಯು ಬಗೆಹರಿಸಲು ಪ್ರಯತ್ನಿಸುತ್ತಿರುವ ಐದು ಸಮಸ್ಯೆಗಳು:
ಸಂಘಟಿತ ಮಾಫಿಯಾ:
ಇತ್ತೀಚಿನ ದಿನಗಳಲ್ಲಿ ಪ್ರಶ್ನೆ ಪತ್ರಿಕೆ ಈ ಸೋರಿಕೆ ಎಂಬುದು ದೊಡ್ಡ ಸಮಸ್ಯೆಯಾಗಿದೆ. ಇದು ಕೇವಲ ಒಬ್ಬ ವ್ಯಕ್ತಿ ಅಥವಾ ಸಂಸ್ಥೆಗೆ ಸೀಮಿತವಾಗಿ ಉಳಿದಿಲ್ಲ. ಬದಲಾಗಿ ದೊಡ್ಡ ಕ್ರಿಮಿನಲ್ ಜಾಲಗಳೇ ಹುಟ್ಟಿಕೊಂಡಿವೆ.
ಈ ಮಸೂದೆಯು ಈ ರೀತಿಯಾದ ಸೋರಿಕೆಯನ್ನು ಸಂಘಟಿತ ಅಪರಾಧ ಎಂದು ಪರಿಗಣಿಸಲಿದೆ. ಹಾಗೂ ಇದಕ್ಕೆ 10 ಕೋಟಿ ತಲೆತಂಡ ಮತ್ತು ಆಸ್ತಿ ಮುಟ್ಟುಗೋಲು ಹಾಕಲಾಗುತ್ತದೆ.
ಶೀಘ್ರವೇ ಕ್ರಮ ಕೈಗೊಳ್ಳುವಿಕೆ:
ಮೊದಲೇ ತಿಳಿದಂತೆ ಕೇವಲ 2 ತಿಂಗಳಲ್ಲಿ ತನಿಖೆ ನಡೆಯಲಿದೆ. ಮತ್ತು 3 ತಿಂಗಳಲ್ಲಿ ಕೋರ್ಟಿನ ತೀರ್ಪು ಹೊರಬರುತ್ತದೆ. ಇದರಿಂದಾಗಿ ಅಪರಾಧಿಗಳು ತಪ್ಪಿಸಿಕೊಳ್ಳುವ ಸಾಧ್ಯತೆ ಕಡಿಮೆ ಇರಲಿದೆ.
ಪರೀಕ್ಷಾ ಕೇಂದ್ರ ಮತ್ತು ಸಂಸ್ಥೆಗಳು ಭಾಗಿ:
ಪರೀಕ್ಷೆ ನಡೆಸುವ ಸೆಂಟರ್ ಗಳು, ಅಧಿಕಾರಿಗಳು. ಮತ್ತು ಪರೀಕ್ಷೆಗೆ ತಂತ್ರಜ್ಞಾನ ಒದಗಿಸುವಂತಹ ಖಾಸಗಿ ಏಜೆನ್ಸಿಗಳು ಇನ್ನಿತರರು ಪತ್ರಿಕೆ ಸೋರಿಕೆಯಲ್ಲಿ ಮುಖ್ಯವಾಗಿ ಭಾಗವಹಿಸುವವರು.
ಇಂತಹ ಏಜೆನ್ಸಿಗಳಿಗೆ 5 ಕೋಟಿ ತಲೆದಂಡ ಹಾಗೂ ನಾಲ್ಕು ವರ್ಷದ ಕಠಿಣ ಶಿಕ್ಷೆ ವಿಧಿಸಲಾಗುವುದು. ಮತ್ತು ಇವರಿಗೆ ಪರೀಕ್ಷೆ ನಡೆಸಿದಂತೆ ನಿಷೇಧ ಹೇರಲಾಗುವುದು.
ಶಿಕ್ಷೆಯ ಪ್ರಮಾಣದಲ್ಲಿ ಹೆಚ್ಚಳ:
ಹಳೆಯ ಕಾನೂನಿನಲ್ಲಿ ಕಡಿಮೆ ಶಿಕ್ಷೆ ಪ್ರಮಾಣವಿತ್ತು. ಜೊತೆಗೆ ಸುಲಭವಾಗಿ ಜಾಮೀನು ಸಿಗುತ್ತಿತ್ತು. ಇದರಿಂದಾಗಿ ತಪ್ಪು ಮಾಡಲು ಭಯ ಪಡುತ್ತಿರಲಿಲ್ಲ.
ಇದೀಗ ಹೊಸ ಮಸೂದೆಯ ಪ್ರಕಾರ ಜೈಲು ಶಿಕ್ಷೆಯನ್ನು 10 ವರ್ಷಕ್ಕೆ ಏರಿಕೆ ಮಾಡಲಾಗಿದೆ. ಇದರಿಂದಾಗಿ ತಪ್ಪು ಮಾಡುವವರು ಅನೇಕ ಬಾರಿ ಯೋಚಿಸಲು ಪ್ರಾರಂಭ ಮಾಡುತ್ತಾರೆ.
ವಿದ್ಯಾರ್ಥಿಗಳ ನಂಬಿಕೆ ಮತ್ತು ಭವಿಷ್ಯ:
ಎಲ್ಲಾ ಅಕ್ರಮಗಳಿಂದಾಗಿ ವಿದ್ಯಾರ್ಥಿಗಳು ಭವಿಷ್ಯ ಮತ್ತು ವ್ಯವಸ್ಥೆಯ ಮೇಲೆ ನಂಬಿಕೆಯನ್ನು ಕಳೆದುಕೊಂಡಿದ್ದರು.
ಹೊಸ ಕಾನೂನಿನಿಂದಾಗಿ ಅವರ ಭವಿಷ್ಯ ಮತ್ತು ನಂಬಿಕೆಯ ಮರು ಸೃಷ್ಟಿ ಮಾಡಲಾಗುತ್ತಿದೆ. ಇದರಿಂದಾಗಿ ಪರೀಕ್ಷೆಗಳಲ್ಲಿ ಪಾರದರ್ಶಕತೆ ಮತ್ತು ವಿದ್ಯಾರ್ಥಿಗಳ ಅರ್ಹತೆಗೆ ಬೆಲೆ ದೊರೆಯುತ್ತದೆ.
ಈ ರೀತಿಯಾಗಿ ಪರೀಕ್ಷೆಗಳನ್ನು ನಡೆಸುವಲ್ಲಿ ಬಹಳಷ್ಟು ಸಮಸ್ಯೆಗಳಿದ್ದವು.
ಹಾಗೂ ಅವುಗಳಿಗೆ ಸೂಕ್ತವಾದ ಪರಿಹಾರಗಳನ್ನು ಇದೀಗ ಒದಗಿಸಲಾಗಿದೆ. ಈ ಕಾನೂನುಗಳು ಸರಿಯಾದ ರೀತಿಯಲ್ಲಿ ನಡೆದುಕೊಂಡು ಹೋದಲ್ಲಿ, ಯಶಸ್ಸು ಖಚಿತ.
ಸಾರ್ವಜನಿಕ ಪರೀಕ್ಷೆಗಳ ತಿದ್ದುಪಡಿ ಮಸೂದೆ 2026: ಈ ಕಾಯ್ದೆಯ ಪ್ರಮುಖ ನಿಬಂಧನೆಗಳು ಈ ರೀತಿ ಇವೆ:
ಶಿಕ್ಷೆಯ ಪ್ರಮಾಣ ಹೆಚ್ಚಳ:
•ಹಳೆಯ ಕಾಯ್ದೆಗೆ ಹೋಲಿಸಿದರೆ ತಿದ್ದುಪಡಿಯಲ್ಲಿ ಶಿಕ್ಷೆ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಳ ಮಾಡಲಾಗಿದೆ.
•ಇಲ್ಲಿ ಅಪರಾಧವನ್ನು ಸಾಮಾನ್ಯ ಮತ್ತು ಸಂಘಟಿತ ಅಪರಾಧ ಎಂಬ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ.
•ಸಾಮಾನ್ಯ ಅಪರಾಧಗಳು: ಅಪರಾಧಗಳಲ್ಲಿ ಭಾಗವಹಿಸುವ ವ್ಯಕ್ತಿಗಳಿಗೆ ನೀಡುವ ಶಿಕ್ಷೆ ಪ್ರಮಾಣವನ್ನು 3ರಿಂದ 5 ವರ್ಷಕ್ಕೆ ಏರಿಕೆ ಮಾಡಲಾಗಿದೆ.
ಅಗತ್ಯವಿದ್ದಲ್ಲಿ ಈ ಶಿಕ್ಷೆಯ ಪ್ರಮಾಣವನ್ನು 10 ವರ್ಷಗಳಿಗೆ ವಿಸ್ತರಿಸಿಕೊಳ್ಳಬಹುದು. ಹಾಗೂ ಪ್ರತಿ ವ್ಯಕ್ತಿಗೆ 50 ಲಕ್ಷ ತಲೆ ತಂಡವನ್ನು ಹಾಕಲಾಗುವುದು.
•ಸಂಘಟಿತ ಅಪರಾಧಗಳು: ಇದು ಅಪರಾಧದಲ್ಲಿ ಭಾಗವಹಿಸುವ ಸಂಸ್ಥೆಗಳಿಗೆ ಸಂಬಂಧಪಟ್ಟರುತ್ತದೆ. ಇಲ್ಲಿ 7ರಿಂದ 10 ವರ್ಷದ ತನಕ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಮತ್ತು 10 ಕೋಟಿಯ ತನಕ ದಂಡ ವಿಧಿಸಲಾಗುವುದು.
ತನಿಖೆಗೆ ಕಾಲಮಿತಿ:
•ಮೊದಲೇ ತಿಳಿಸಿದಂತೆ ಪ್ರಕರಣ ಸಲ್ಲಿಕೆ ಆದ ದಿನದಿಂದ. ಅಥವಾ ಚಾರ್ಜ್ ಶೀಟ್ ಸಲ್ಲಿಕೆಯಾದ ದಿನದಿಂದ 60 ದಿನದೊಳಗೆ ತನಿಖೆ ಮುಗಿಯಬೇಕು.
•ಹಾಗೂ ಚಾರ್ಜ್ ಶೀಟ್ ಸಲ್ಲಿಸಿದ 90 ದಿನದೊಳಗೆ ನ್ಯಾಯಾಲಯ ತೀರ್ಪು ನೀಡಬೇಕು.
ಫಾಸ್ಟ್ ಟ್ರ್ಯಾಕ್ ಕೋರ್ಟುಗಳ ಸ್ಥಾಪನೆ:
ಪರೀಕ್ಷಾ ವಂಚನೆಗಳಿಗೆ ಸಂಬಂಧಪಟ್ಟಂತೆ ತನಿಖೆಗಳು ಹಾಗೂ ತೀರ್ಪುಗಳು ಅತಿ ಬೇಗನೆ ನಡೆಯಬೇಕು. ಇದಕ್ಕೆ ಸಂಬಂಧಿಸಿದಂತೆ ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಶೇಷ ಫಾಸ್ಟ್ ಟ್ರ್ಯಾಕ್ ಸೆಷನ್ಸ್ ನ್ಯಾಯಾಲಯಗಳನ್ನು ಸ್ಥಾಪಿಸಲಾಗುತ್ತದೆ.
ಖಾಸಗಿ ಸಂಸ್ಥೆಗಳ ಮೇಲೆ ಕಠಿಣ ಕ್ರಮ:
ಕೆಲವು ಪರೀಕ್ಷೆಗಳನ್ನು ಕಂಪ್ಯೂಟರ್ ಸೆಂಟರ್ ಗಳಲ್ಲಿ ಮತ್ತು ಖಾಸಗಿ ಕಂಪನಿಗಳಲ್ಲಿ ನಡೆಸಲಾಗುತ್ತದೆ. ಇಲ್ಲಿನ ಸಿಬ್ಬಂದಿಗಳು ಅಕ್ರಮದಲ್ಲಿ ಭಾಗಿಯಾದರೆ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಲಾಗುವುದು.
•ಇಲ್ಲಿ 5 ಕೋಟಿಯ ತನಕ ತಲೆದಂಡವನ್ನು ವಿಧಿಸಲಾಗುವುದು.
•ಪರೀಕ್ಷೆಗೆ ತಗುಲಿದಂತಹ ಸಂಪೂರ್ಣ ವೆಚ್ಚವನ್ನು ಅದೇ ಸಂಸ್ಥೆಯಿಂದ ವಸೂಲಿ ಮಾಡಲಾಗುವುದು.
•ಹಾಗೂ 4 ವರ್ಷಗಳ ಕಾಲ ಯಾವುದೇ ಸಾರ್ವಜನಿಕ ಪರೀಕ್ಷೆಗಳನ್ನು ನಡೆಸದಂತೆ ಸಂಪೂರ್ಣವಾಗಿ ನಿಷೇಧ ಹೇರಲಾಗುವುದು.
ಅಪರಾಧಿಗಳ ಆಸ್ತಿ:
•ಹಗರಣದಲ್ಲಿ ಭಾಗಿಯಾದ ವ್ಯಕ್ತಿ ಅಥವಾ ಸಂಸ್ಥೆಯು ಅಕ್ರಮವಾಗಿ ಮಾಡಿರುವ ಆಸ್ತಿಗಳನ್ನು ಮುಟ್ಟುಗೋಲು ಹಾಕಲಾಗುವುದು.
•ಹಾಗೂ ಹಗರಣದಿಂದ ಉಂಟಾಗುವ ನಷ್ಟವನ್ನು ಆ ಆಸ್ತಿಗಳ ಮೂಲಕವೇ ಭರಿಸಲಾಗುತ್ತದೆ. ಹಾಗೂ ಈ ಕ್ರಮಕ್ಕೆ ಕಾನೂನಿನಲ್ಲಿ ಅವಕಾಶ ಕಲ್ಪಿಸಿಕೊಡಲಾಗಿದೆ.
ಈ ಕಾಯ್ದೆಯಲ್ಲಿ ಎಲ್ಲ ಕೇಂದ್ರ ನೇಮಕಾತಿ ಪರೀಕ್ಷೆಗಳು ಮತ್ತು ಮಟ್ಟದ ಪ್ರವೇಶ ಪರೀಕ್ಷೆಗಳು ಒಳಪಡುತ್ತವೆ.
ಆ ಪರೀಕ್ಷೆಗಳ ಪಟ್ಟಿ ಈ ರೀತಿ ಇದೆ:
ಕೇಂದ್ರ ನೇಮಕಾತಿ ಪರೀಕ್ಷೆಗಳು:
•ಯುಪಿಎಸ್ಸಿ: ಇಲ್ಲಿ ಕೇಂದ್ರ ನಾಗರೀಕ ಪರೀಕ್ಷೆಗಳಾದ ಐಎಎಸ್, ಐಪಿಎಸ್, ಐಎಫ್ಎಸ್ ಹಾಗೂ ಇತ್ಯಾದಿಗಳು ಒಳಪಡುತ್ತವೆ.
•ಎಸ್ ಎಸ್ ಸಿ: ಇದರಡಿಯಲ್ಲಿ ಸಿಬ್ಬಂದಿ ನೇಮಕಾತಿ ಆಯೋಗದ ಪರೀಕ್ಷೆಗಳು ಬರಲಿವೆ. ( ಸಿಜಿಎಲ್, ಸಿಎಚ್ಎಸ್ಎಲ್ ಇತ್ಯಾದಿ.)
•ಆರ್ ಆರ್ ಬಿ: ಇಲ್ಲಿ ರೈಲ್ವೆ ನೇಮಕಾತಿ ಮಂಡಳಿ ನಡೆಸುವಂತಹ ಎಲ್ಲಾ ಪರೀಕ್ಷೆಗಳು ಒಳಪಡುತ್ತವೆ.
•ಸಚಿವಾಲಯಗಳು ಮತ್ತು ಇಲಾಖೆಗಳು: ಕೇಂದ್ರ ಸರ್ಕಾರದ ಸಚಿವಾಲಯಗಳು ಮತ್ತು ಇಲಾಖೆಗಳು ತಮ್ಮ ಸಿಬ್ಬಂದಿ ನೇಮಕಾತಿಗಾಗಿ ನಡೆಸುವ ಎಲ್ಲಾ ಪರೀಕ್ಷೆಗಳು.
ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಗಳು:
•NEET UG/PG: ವೈದ್ಯಕೀಯ ಪ್ರವೇಶ ಪರೀಕ್ಷೆಗಳು ಒಳಪಡಲಿವೆ.
•JEE MAIN/ADVANCED: ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳು.
•CUET: ಕೇಂದ್ರಿಯ ವಿಶ್ವವಿದ್ಯಾಲಯಗಳ ಜಂಟಿ ಪ್ರವೇಶ ಪರೀಕ್ಷೆಗಳು ಕೂಡ ಒಳಪಡಲಿವೆ.
•UGC-NET: ಸಹಪ್ರಾಧ್ಯಾಪಕರು ಮತ್ತು ಜೆಆರ್ಎಫ್ ಅರ್ಹತಾ ಪರೀಕ್ಷೆಗಳು ಕೂಡ ಈ ಕಾಯ್ದೆ ಅಡಿ ಬರಲಿವೆ.
ಆನ್ಲೈನ್ ಪರೀಕ್ಷೆಗಳು:
ಇಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ನಡೆಸುವಂತಹ ಎಲ್ಲ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳು. ಮತ್ತು ಆನ್ಲೈನ್ ಲಿಖಿತ ಪರೀಕ್ಷೆಗಳು ಈ ಕಾಯ್ದೆ ಅಡಿ ಬರುತ್ತವೆ.
ಇ ಮೇಲಿನ ಎಲ್ಲಾ ಪರೀಕ್ಷೆಗಳು ಕೂಡ ಇನ್ಮುಂದೆ ಸರ್ಕಾರದ ಕಣ್ಗಾವಲಿನಲ್ಲಿ ನಡೆಯುತ್ತವೆ.
ಈ ಕಾಯ್ದೆಯ ಜಾರಿಗೆ ಇರುವ ಸವಾಲುಗಳೇನು?
•60 ದಿನಗಳ ಕಾಲ ಮಿತಿಯ ಒತ್ತಡ:
ಹೆಚ್ಚಾಗಿ ಇಂತಹ ಸಮಸ್ಯೆಗಳು ಟೆಲಿಗ್ರಾಂ ಚಾನೆಲ್ ಗಳು, ನಕಲಿ ಖಾತೆಗಳು, ಡಾರ್ಕ್ ವೆಬ್ ಗಳಿಗೆ ಸಂಬಂಧ ಪಟ್ಟಿರುತ್ತದೆ.
ಈ ಎಲ್ಲದರ ಕುರಿತಾಗಿ ಶೋಧನೆ ನಡೆಸಿ, ಸಾಕ್ಷಿಗಳನ್ನು ಸಂಗ್ರಹಿಸುವುದು ಬಹುದೊಡ್ಡ ಕೆಲಸವಾಗಿದೆ. ಈ ಪ್ರಕ್ರಿಯೆಯು ಇರುವಂತಹ ಸೀಮಿತ ಪೊಲೀಸ್ ಸಿಬ್ಬಂದಿಗೆ ಹೊರೆಯಾಗಲಿದೆ.
ಕಡಿಮೆ ಸಮಯದಲ್ಲಿ ಅವರಿಗೆ ಕಡಿಮೆ ಸಾಕ್ಷಿಗಳು ಸಿಗುವ ಅವಕಾಶ ಇರುತ್ತದೆ. ಹಾಗೂ ಇಂತಹ ಸಂದರ್ಭದಲ್ಲಿ ಕಡಿಮೆ ಸಾಕ್ಷಿ ಇಂದಾಗಿ ಅಪರಾಧಿಯು ಸುಲಭವಾಗಿ ಪಾರಾಗಬಹುದು.
•ಮೂಲಸೌಕರ್ಯ ಮತ್ತು ನ್ಯಾಯಾಂಗ:
ದೇಶದ ನ್ಯಾಯಾಲಯಗಳಲ್ಲಿ ಈಗಾಗಲೇ ಸಾವಿರಾರು ಪ್ರಕರಣಗಳು ಬಾಕಿ ಇವೆ. ಇದರ ಮಧ್ಯೆ ಈ ಪ್ರಕರಣಗಳು ಕೂಡ ಹೊರೆಯಾಗಬಹುದು. ಹಾಗೂ ಕಡಿಮೆ ಸಮಯದಲ್ಲಿ ಹೆಚ್ಚಿನ ಕೆಲಸ ಉಂಟಾಗಲಿದೆ.
ಪ್ರತಿ ರಾಜ್ಯದಲ್ಲೂ ವಿಶೇಷ ಕೋರ್ಟುಗಳ ಸ್ಥಾಪನೆಗೆ ಮೂಲಸೌಕರ್ಯ, ಮತ್ತು ಸಿಬ್ಬಂದಿ ಹಾಗೂ ನ್ಯಾಯಾಧೀಶರ ಕೊರತೆ ಉಂಟಾಗಬಹುದು. ಜೊತೆಗೆ ಇದು ಆರ್ಥಿಕ ಮತ್ತು ಆಡಳಿತಾತ್ಮಕವಾಗಿ ಹೊರೆಯಾಗಲಿದೆ.
•ಸೈಬರ್ ಅಪರಾಧಗಳು:
ಪ್ರಸ್ತುತ ಪರೀಕ್ಷಾ ಕೇಂದ್ರಗಳ ಕಂಪ್ಯೂಟರ್ ಗಳನ್ನು ಆಕ್ಸೆಸ್ ಸಾಫ್ಟ್ವೇರ್ ಮೂಲಕ ಹ್ಯಾಕ್ ಮಾಡಲಾಗುತ್ತಿದೆ. ಇದರಿಂದಾಗಿ ಬೇರೆಡೆ ಕುಳಿತು ಅಭ್ಯರ್ಥಿಯು ಪರೀಕ್ಷೆ ಬರೆಯಬಹುದಾಗಿದೆ.
ಇವುಗಳ ಕುರಿತು ತನಿಖೆ ನಡೆಸುವಾಗ ಕೋರ್ಟಿಗೆ ಡಿಜಿಟಲ್ ಫೋರೆನ್ಸಿಕ್ ಸಾಕ್ಷಿಗಳನ್ನು ನೀಡಬೇಕಾಗುತ್ತದೆ. ಇದಕ್ಕೆ ಸುಧಾರಿತ ಸೈಬರ್ ತರಬೇತಿ ಅಗತ್ಯವಿದೆ. ಹಾಗೂ ದೇಶದ ಹಲವು ತನಿಖಾ ಸಂಸ್ಥೆಗಳಿಗೆ ಈ ತರಬೇತಿಯ ಕೊರತೆ ಇದೆ.
•ಹೊಂದಾಣಿಕೆಯ ಸಮಸ್ಯೆ:
ಪರೀಕ್ಷೆಗಳು ರಾಜ್ಯಗಳ ಹಲವು ಜಿಲ್ಲೆಗಳಲ್ಲಿ ನಡೆಯುತ್ತವೆ. ಹಾಗೂ ಅಲ್ಲಿನ ಸ್ಥಳೀಯ ಪೊಲೀಸರು ಇವುಗಳ ಹೊಣೆಗಾರಿಕೆಯನ್ನು ಹೊತ್ತುಕೊಳ್ಳುತ್ತಾರೆ.
ಇಂತಹ ಸಂದರ್ಭದಲ್ಲಿ ಕೇಂದ್ರ ತನಿಖಾ ಸಂಸ್ಥೆಗಳು ಮತ್ತು ಸ್ಥಳೀಯ ಪೊಲೀಸರ ನಡುವೆ ಹೊಂದಾಣಿಕೆ ಇರಬೇಕಾಗುತ್ತದೆ. ಇಲ್ಲವಾದಲ್ಲಿ ಅಪರಾಧಿಯು ತಪ್ಪಿಸಿಕೊಳ್ಳುವ ಸಾಧ್ಯತೆಯಿರಲಿದೆ.
•ಆಸ್ತಿ ಮುಟ್ಟುಗೋಲಿಗೆ ಅಡೆತಡೆಗಳು:
ತಮ್ಮ ಆಸ್ತಿಗಳನ್ನು ಬೇರೆಯವರ ಹೆಸರಿನಲ್ಲಿ ನೋಂದಾಯಿಸಿರುವ ಸನ್ನಿವೇಶಗಳು ಇರಲಿವೆ. ಅಥವಾ ಬೇರೆಡೆ ಹೂಡಿಕೆ ಮಾಡಿರುವ ಸಾಧ್ಯತೆ ಕೂಡ ಇರುತ್ತದೆ.
ಇಂತಹ ಸಂದರ್ಭದಲ್ಲಿ ಅವರು ಪರೀಕ್ಷಾ ಅಕ್ರಮದಿಂದಲೇ ಆ ಆಸ್ತಿಯನ್ನು ಮಾಡಿರುತ್ತಾರೆ ಎಂದು ಕೋರ್ಟ್ ನಲ್ಲಿ ಸಾಬೀತುಪಡಿಸುವುದು ಸವಾಲಿನ ವಿಷಯವಾಗಿದೆ.
ಹಾಗೂ ಸಾಬೀತುಪಡಿಸಲು ಬಹಳ ಸಮಯ ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ತೀರ್ಪು ಕೂಡ ತಡವಾಗಬಹುದು.
ಈ ರೀತಿಯಾದ ಹಲವಾರು ಸವಾಲುಗಳನ್ನು ಈ ಒಂದು ಕಾಯ್ದೆಯು ಎದುರಿಸುತ್ತದೆ.
ಆದರೆ ಇದೆಲ್ಲದಕ್ಕೂ ಅಗತ್ಯವಿರುವ ಕ್ರಮಗಳನ್ನು ಕೈಗೊಂಡಲ್ಲಿ ಕಾನೂನು ಚಟುವಟಿಕೆಗಳು ಸರಾಗವಾಗಿ ಸಾಗಲು ಸುಲಭವಾಗುತ್ತದೆ.
ಈ ಒಂದು ತಿದ್ದುಪಡಿ ಮಸೂದೆಯು ಕೇಂದ್ರ ಸರ್ಕಾರದ ಮಹತ್ವದ ಹೆಜ್ಜೆಯಾಗಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಭವಿಷ್ಯ ಹಾಗೂ ದೇಶದ ಭವಿಷ್ಯ ಇದರಿಂದ ನಿರ್ಧಾರವಾಗುತ್ತದೆ.
ಹಾಗೂ ಅಕ್ರಮಗಳನ್ನು ತಡೆಯಲು ಈ ಕಾಯ್ದೆಯು ಮುಂಚೂಣಿಯಲ್ಲಿರಲಿದೆ.
ಇನ್ನಷ್ಟು ಮಾಹಿತಿಗಾಗಿ: public examination amendment Bill 2026
ಇದನ್ನು ಓದಿ: chandrayaan-5 mission