National Green Hydrogen Mission2026:2023 ಜನವರಿಯಲ್ಲಿ ಭಾರತ ಸರ್ಕಾರವು ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಅನ್ನು ಜಾರಿಗೊಳಿಸಿತು.

National Green Hydrogen Mission2026: ಹೈಡ್ರೋಜನ್ ಉತ್ಪಾದನೆ, ಬಳಕೆ, ರಫ್ತು ಮಾಡುವುದು ಇದರ ಉದ್ದೇಶ. ಹಾಗೂ ಹೈಡ್ರೋಜನ್ ಉತ್ಪಾದನೆಯಲ್ಲಿ ಭಾರತವನ್ನು ಜಾಗತಿಕ ಹಬ್ ಮಾಡಬೇಕು ಎಂಬುದು ಮೂಲ ಗುರಿಯಾಗಿದೆ.
ಇತ್ತೀಚೆಗೆ ಹೈಡ್ರೋಜನ್ ಮಿಷನ್ ಬಾರಿ ಸುದ್ದಿಯಲ್ಲಿದೆ. ಈ ಮಿಷನ್ ಅಡಿಯಲ್ಲಿ ಹಲವಾರು ಪ್ರಮುಖ ಬೆಳವಣಿಗೆಗಳು ನಡೆಯುತ್ತಿವೆ.
National Green Hydrogen Mission2026:ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ನ ಉದ್ದೇಶಗಳು:
•ಉತ್ಪಾದನೆಯ ಹೆಚ್ಚಳ:
2030ರ ವೇಳೆಗೆ ಭಾರತದಲ್ಲಿ ಸುಮಾರು 5 ಮಿಲಿಯನ್ ಮೆಟ್ರಿಕ್ ಟನ್ ಗಳಷ್ಟು ಹೈಡ್ರೋಜನ್ ಉತ್ಪಾದಿಸುವುದು ಮೂಲ ಗುರಿಯಾಗಿದೆ.
ಹಾಗೂ ಈ ಉತ್ಪಾದನೆಗೆ ಪೂರಕವಾಗಿ 125 ಗಿಗಾವ್ಯಾಟ್ (GW) ನವೀಕರಿಸಬಹುದಾದ ಇಂಧನವನ್ನು ಹೊಂದುವುದು ಕೂಡ ಉದ್ದೇಶವಾಗಿದೆ.
•ಪಳೆಯುಳಿಕೆ ಇಂಧನದ ಮೇಲಿನ ಅವಲಂಬನೆ:
ದೇಶದಲ್ಲಿ ಬಳಸಲ್ಪಡುವ ಕಚ್ಚಾ ತೈಲದ ಅತಿ ಹೆಚ್ಚಿನ ಭಾಗವನ್ನು ನಾವು ಆಮದು ಮಾಡಿಕೊಳ್ಳುತ್ತಿದ್ದೇವೆ.
ಹಾಗೂ ಈ ಮಿಷನ್ ನ ಉದ್ದೇಶ ಆಮದು ಪ್ರಮಾಣವನ್ನು ಕಡಿತಗೊಳಿಸುವುದಾಗಿದೆ. ಜೊತೆಗೆ ನಮ್ಮಲ್ಲಿ ತಯಾರಾಗುವ ಹೈಡ್ರೋಜನ್ ಮೇಲೆ ಅವಲಂಬಿತವಾಗುವುದು ಮುಖ್ಯವಾಗಿದೆ.
ಹಾಗೂ ಇದರಿಂದಾಗಿ 2030ರ ವೇಳಗೆ ಸುಮಾರು 1 ಲಕ್ಷ ಕೋಟಿಯಷ್ಟು ಹಣವನ್ನು ಉಳಿಸಬಹುದಾಗಿದೆ.
•ಮಾಲಿನ್ಯ ಕಡಿತ:
ಪ್ರಸ್ತುತ ಕೈಗಾರಿಕೆ ಮತ್ತು ಸಾರಿಗೆ ವಲಯದಿಂದ ಹೆಚ್ಚಿನ ಹಸಿರು ಮನೆ ಅನಿಲಗಳು ಹೊರ ಬರುತ್ತಿವೆ. ಇವುಗಳ ಪ್ರಮಾಣವನ್ನು ಕುಗ್ಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
2030ರ ವೇಳೆಗೆ 50 ಪ್ರಮುಖ ಮೆಟ್ರಿಕ್ ಟನ್ (MMT) ನಷ್ಟು ಪ್ರಮಾಣ ಕಾರ್ಬನ್ ಡೈ ಆಕ್ಸೈಡ್ ಕಡಿಮೆಯಾಗಿಸಬೇಕಿದೆ.
ಆರ್ಥಿಕ ಲಾಭ ಮತ್ತು ಉದ್ಯೋಗ:
ಈ ಯೋಜನೆಗೆ ಹೆಚ್ಚಿನ ಹೂಡಿಕೆಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಸುಮಾರು 8 ಲಕ್ಷ ಕೋಟಿಗು ಹೆಚ್ಚು ದೇಶಿಯ ಮತ್ತು ವಿದೇಶಿಯ ಹೂಡಿಕೆಯನ್ನು ಆಕರ್ಷಿಸುವ ಗುರಿಯನ್ನು ಹೊಂದಲಾಗಿದೆ.
ಮತ್ತು ಇದಕ್ಕೆ ಸಂಬಂಧಪಟ್ಟಂತಹ ವಲಯದಲ್ಲಿ, 6 ಲಕ್ಷಕ್ಕೂ ಹೆಚ್ಚು ಉದ್ಯೋಗವನ್ನು ಸೃಷ್ಟಿ ಮಾಡಬಹುದಾಗಿದೆ.
ಜಾಗತಿಕ ನಾಯಕತ್ವ ಮತ್ತು ರಫ್ತು:
ಭಾರತವನ್ನು ಹೈಡ್ರೋಜನ್ ಇಂಧನ ಮತ್ತು ಅದರ ಉಪ ಉತ್ಪನ್ನಗಳ ಜಾಗತಿಕ ಹಬ್ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ.
ಇದರಿಂದಾಗಿ ರಫ್ತು ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹಾಗೂ ಇದು ದೇಶಕ್ಕೆ ಆರ್ಥಿಕ ಲಾಭವನ್ನು ಕೂಡ ತಂದು ಕೊಡಲಿದೆ.
ಹಾಗೂ ಎಲೆಕ್ಟ್ರೋಲೈಜರ್ಗಳಂತಹ ಪ್ರಮುಖ ಉಪಕರಣಗಳನ್ನು ಭಾರತದಲ್ಲಿ ಉತ್ಪಾದನೆ ಮಾಡುವುದು. ಈ ಮೂಲಕ ತಂತ್ರಜ್ಞಾನದಲ್ಲಿ ಕೂಡ ಸ್ವಾವಲಂಬಿಯಾಗುವುದಾಗಿದೆ.
ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಈ ಕೆಳಗಿನ ಕಾರಣಗಳಿಂದ ಇತ್ತೀಚಿಗೆ ಸುದ್ದಿಯಲ್ಲಿದೆ:
ಹೈಡ್ರೋಜನ್ ರೈಲು:
ಇತ್ತೀಚಿಗೆ ಭಾರತದಲ್ಲಿ ಮೊದಲ ಹೈಡ್ರೋಜನ್ ರೈಲನ್ನು ಚಾಲನೆಗೊಳಿಸಲಾಯಿತು. ಇದು ಡೀಸೆಲ್ ಇಂಜಿನ್ ರೈಲಿಗಿಂತ ಬಹಳ ಲಾಭದಾಯಕವಾದದ್ದು.
ಭಾರತ್ ಗ್ರೀನ್ ಹೈಡ್ರೋಜನ್ ಶೃಂಗಸಭೆ:
ಎರಡನೇ ಭಾರತ್ ಗ್ರೀನ್ ಹೈಡ್ರೋಜನ್ ಶೃಂಗಸಭೆಯು ನವ ದೆಹಲಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ FICCI ಸಂಸ್ಥೆಯು
ವ್ಯೂಹಾತ್ಮಕ ವರದಿಯೊಂದನ್ನು ಬಿಡುಗಡೆ ಮಾಡಿದೆ. ಇಲ್ಲಿ ಜಾಗತಿಕ ಮಾರುಕಟ್ಟೆಯ ಶೇಕಡ 10 ಪಾಲನ್ನು ಭಾರತ ಪಡೆದುಕೊಳ್ಳುವ ಗುರಿಯನ್ನು ತಿಳಿಸಲಾಗಿದೆ.
ಆರ್ಥಿಕ ಪ್ರೋತ್ಸಾಹ:
ಸೈಟ್ ಯೋಜನೆಯಡಿ ಪ್ರೋತ್ಸಾಹ ಧನ ನೀಡಲಾಗುವುದು.
ಇಲ್ಲಿ ಸರ್ಕಾರವು ವಾರ್ಷಿಕವಾಗಿ 8.62 ಲಕ್ಷ ಮೆಟ್ರಿಕ್ ಟನ್ ಹಸಿರು ಹೈಡ್ರೋಜನ್ ಉತ್ಪಾದನಾ ಸಾಮರ್ಥ್ಯಕ್ಕೆ ಪ್ರೋತ್ಸಾಹ ಧನ ನೀಡುತ್ತದೆ.
ಗೊಬ್ಬರ ವಲಯದಲ್ಲಿ ಒಪ್ಪಂದಗಳು:
ಇಲ್ಲಿನ ಮೂಲ ಉದ್ದೇಶ ಪಡುವಳಿಕೆ ಇಂಧನಗಳ ಆಮದನ್ನು ಕಡಿಮೆಗೊಳಿಸುವುದಾಗಿದೆ.
ಇದಕ್ಕಾಗಿ ದೇಶದ 11 ಪ್ರಮುಖ ರಸಗೊಬ್ಬರ ಕಾರ್ಖಾನೆಗಳಿಗೆ ವಾರ್ಷಿಕವಾಗಿ 6.7 ಲಕ್ಷ ಮೆಟ್ರಿಕ್ ಟನ್ ಹಸಿರು ಅಮೋನಿಯಾವನ್ನು ಪೂರೈಸುವ ಒಪ್ಪಂದ ಮಾಡಿಕೊಳ್ಳಲಾಗಿದೆ.
ಬಂದರುಗಳ ಬೆಳವಣಿಗೆ:
ಹಸಿರು ಅಮೋನಿಯರ ರಫ್ತು ಹಬ್ ಗಳನ್ನು ಸ್ಥಾಪಿಸುವ ಮೂಲ ಗುರಿಯನ್ನು ಸರ್ಕಾರ ಹೊಂದಿದೆ.
ಇದಕ್ಕಾಗಿ ತೂತುಕುಡಿಯ ಪಿ ಚಿದಂಬರನಾರ್ ಬಂದರು ಸೇರಿದಂತಹ ಹಲವು ಕರಾವಳಿ ತೀರಗಳಲ್ಲಿ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ.
ಸ್ಟಾರ್ಟ್ಅಪ್ಗಳಿಗೆ ಧನ ಸಹಾಯ:
ಸ್ಟಾರ್ಟ್ಅಪ್ಗಳು ದೇಶಿಯ ಹೈಡ್ರೋಜನ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿವೆ. ಸ್ಟಾರ್ಟ್ಅಪ್ಗಳಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ 100 ಕೋಟಿ ವಿಶೇಷ ನಿಧಿಯನ್ನು ಘೋಷಣೆ ಮಾಡಿದ್ದಾರೆ.
ರಫ್ತು ಮೂಲಸೌಕರ್ಯ:
ಭಾರತದಲ್ಲಿ ಸರಬರಾಜು ಸಾಮರ್ಥ್ಯ ಉತ್ತಮವಾಗಿದೆ. ಆದರೂ ಕೂಡ ರಫ್ತು ಮಾಡಲು ಅನೇಕ ಮೂಲ ಸೌಕರ್ಯಗಳು ಬೆಳವಣಿಗೆ ಹೊಂದಬೇಕಾಗಿದೆ.
ಸರ್ಕಾರವು 2027-29ರ ವೇಳೆಗೆ ವಾಣಿಜ್ಯ ಮತ್ತು ಪ್ರಾರಂಭಿಸುವ ಗುರಿಯನ್ನು ಹೊಂದಿದೆ. ಹೀಗಾಗಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕಾಗಿದೆ.
ಈ ಮಿಷನ್ ಅಡಿಯಲ್ಲಿ ಇತ್ತೀಚೆಗೆ ಆಗಿರುವಂತಹ ಪ್ರಮುಖ ಬೆಳವಣಿಗೆಗಳು:
•ಅಧಿಕೃತ ಪೋರ್ಟಲ್:
ಗ್ರೀನ್ ಹೈಡ್ರೋಜನ್ ಸರ್ಟಿಫಿಕೇಷನ್ ಪೋರ್ಟಲ್ ಆಫ್ ಇಂಡಿಯಾ (GHCI) ಎಂಬುದು ಅಧಿಕೃತ ಪೋರ್ಟಲ್ ಆಗಿರುತ್ತದೆ.
ಇದನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಧಿಕೃತವಾಗಿ ಬಿಡುಗಡೆಗೊಳಿಸಿರುತ್ತಾರೆ.
ಇದನ್ನು ದೇಶದಲ್ಲಿ ಉತ್ಪಾದನೆ ಆಗುವಂತಹ ಹಸಿರು ಹೈಡ್ರೋಜನ್ ಗುಣಮಟ್ಟ ಮತ್ತು ಪರಿಸರ ನಿಯಮಗಳ ಪಾಲನೆಯನ್ನು ಖಚಿತ ಪಡಿಸಿಕೊಳ್ಳುವ ಸಲುವಾಗಿ ಬಿಡುಗಡೆಗೊಳಿಸಲಾಗಿದೆ. ಇದು ಡಿಜಿಟಲ್ ವೇದಿಕೆಯಾಗಿರುತ್ತದೆ.
•ಎರಡನೇ ಹಂತ:
ಈ ಮಿಷನ್ 2026ರಲ್ಲಿ ತನ್ನ ಮೊದಲ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಮತ್ತು ಎರಡನೇ ಹಂತಕ್ಕೆ ಪ್ರವೇಶ ಪಡೆದುಕೊಂಡಿದೆ. ಎರಡನೇ ಹಂತವು 2026-27ರಿಂದ 2029-30ರ ತನಕ ಇರಲಿದೆ.
ಈ ಹಂತದಲ್ಲಿ ಹಸಿರು ಇಂಧನವನ್ನು ಹೊಳೆಯುಳಿಕೆ ಇಂಧನಗಳಿಗೆ ಪರ್ಯಾಯವಾಗಿ ಸ್ಪರ್ಧಾತ್ಮಕ ವೆಚ್ಚದಲ್ಲಿ ಉತ್ಪಾದನೆ ಮಾಡಲಾಗುತ್ತದೆ.
ಮತ್ತು ಈ ಹಂತದಲ್ಲಿ ಹಸಿರು ಇಂಧನವನ್ನು ವಾಯು ಧ್ಯಾನ ಮತ್ತು ರೈಲ್ವೆ ವಲಯಗಳಿಗೆ ಬಳಸಲು ನಿರ್ಧರಿಸಲಾಗಿದೆ.
•ರಸ ಗೊಬ್ಬರದ ಬೃಹತ್ ಒಪ್ಪಂದಗಳು:
ಸೈಟ್ ಪ್ರೋಗ್ರಾಮ್ ಅಡಿಯಲ್ಲಿ ಹಸಿರು ಅಮೋನಿಯಾದ ದರವನ್ನು ₹49.75 ರಿಂದ ₹64.74 ಕ್ಕೆ ನಿಗದಿಪಡಿಸಲಾಗಿದೆ.
ಹಾಗೂ ದೇಶದ 13ರ ರಸ ಗೊಬ್ಬರ ಘಟಕಗಳಿಗೆ 7,24,000 ಟನ್ ಹಸಿರು ಅಮೋನಿಯಾ ಪೂರೈಸುವ ಒಪ್ಪಂದ ಮಾಡಿಕೊಳ್ಳಲಾಗಿದೆ.
•ಉತ್ಪಾದನೆ ಸಾಮರ್ಥ್ಯ ಹೆಚ್ಚಳ:
2026ರ ಆರಂಭದ ವೇಳೆಗೆ ಹೈಡ್ರೋಜನ್ ಉತ್ಪಾದನೆಯ ಪ್ರಮಾಣದ 8,000 ಟನ್ ಅಷ್ಟು ವಾರ್ಷಿಕವಾಗಿ ಹೆಚ್ಚಾಗಿದೆ. ಇನ್ನು ಹೆಚ್ಚಾಗಿಸುವ ಗುರಿಯನ್ನು ಹೊಂದಲಾಗಿದೆ.
•ಹೈಡ್ರೋಜನ್ ರೈಲು ಯೋಜನೆ:
ಸಮುದ್ರಮಟ್ಟದಿಂದ 15,000 ಅಡಿ ಎತ್ತರದಲ್ಲಿ ಮತ್ತು ಸುಮಾರು -40 ಡಿಗ್ರಿ ತಾಪಮಾನದಲ್ಲಿ ಭಾರತೀಯ ಸೇನೆಗಾಗಿ ಅತ್ಯುನ್ನತ ಹೈಡ್ರೋಜನ್ ಯೋಜನೆಯೊಂದನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಹಾಗೂ NTPC ಸಂಸ್ಥೆಯು ಕಲ್ಲಿದ್ದಲು ಸಾಗಣೆಯ ಲೋಕೋಮೋಟಿವ್ ರೈಲುಗಳನ್ನು ಹೈಡ್ರೋಜನ್ ಫ್ಯುಯೆಲ್ ಸೆಲ್ ಚಾಲಿತ ಇಂಜಿನ್ ಗಳಾಗಿ ಮಾಡುವ ಕೆಲಸವನ್ನು ಚುರುಕುಗೊಳಿಸಿದೆ.
ಹೈಡ್ರೋಜನ್ ಮಿಷನ್ ಯೋಜನೆಗೆ ಇರುವ ಸವಾಲುಗಳು:
•ಹೆಚ್ಚಿನ ಉತ್ಪಾದನಾ ವೆಚ್ಚ:
ಪ್ರಸ್ತುತ ಹೈಡ್ರೋಜನ್ ಉತ್ಪಾದನೆಗೆ ಕೆಜಿಗೆ 250 ರಿಂದ 400ರೂ ಗಳು ($3-$5) ತಗುಲುತ್ತವೆ.
ಇದು ಪಳಿಯುಳಿಕೆ ಇಂಧನಗಳ ಜೊತೆಗೆ ಸ್ಪರ್ಧಿಸಬೇಕಾಗಿದೆ. ಹಾಗೂ ಆ ರೀತಿಯಲ್ಲಿ ಸ್ಪರ್ಧಿಸಲು ಇದರ ಬೆಲೆ ಕೆಜಿಗೆ $1 ರಿಂದ $1.5 ಗೆ ಇಳಿಯುವ ಅವಶ್ಯಕತೆ ಇದೆ.
ಹಾಗೂ ಹೈಡ್ರೋಜನ್ ಉತ್ಪಾದನೆಗೆ ಎಲೆಕ್ಟ್ರೋಲೈಜರ್ ನ ಅಗತ್ಯವಿರುತ್ತದೆ. ಹಾಗೂ ಇದರ ಬೆಲೆ ಜಾಗತಿಕವಾಗಿ ಇನ್ನೂ ಅಧಿಕವಾಗಿದೆ.
•ನವೀಕರಿಸಬಹುದಾದ ಇಂಧನದಲ್ಲಿ ಕೊರತೆ:
ಭಾರತವು 2030ರ ಒಳಗೆ ಸಾಧಿಸಲು ಹಲವು ಗುರಿಗಳನ್ನು ಹೊಂದಿದೆ. ಆ ಗುರಿಗಳನ್ನು ಸಾಧಿಸಲು 125 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನದ ಅವಶ್ಯಕತೆ ಇದೆ.
ಹಾಗೂ ಅಷ್ಟು ಬೃಹತ್ ಪ್ರಮಾಣದ ಸೌರ ಮತ್ತು ಪವನ ಶಕ್ತಿಯನ್ನು ಗ್ರಿಡ್ ಗೆ ಜೋಡಿಸುವುದು ಸವಾಲಾಗಿದೆ. ಮತ್ತು ಹೈಡ್ರೋಜನ್ ಸ್ಥಾವರಗಳಿಗೆ ಅವುಗಳನ್ನು ಅಡೆತಡೆ ಇಲ್ಲದೆ ಪೂರೈಸಬೇಕು. ಹಾಗೂ ಈ ಪೂರೈಕೆಯು ತಾಂತ್ರಿಕವಾಗಿ ದೊಡ್ಡ ಸವಾಲಿನ ವಿಷಯವಾಗಿದೆ.
•ಹೆಚ್ಚಿನ ನೀರಿನ ಬಳಕೆ:
1 ಲೀಟರ್ ಹೈಡ್ರೋಜನ್ ತಯಾರು ಮಾಡಲು 9 ಲೀಟರ್ ಶುದ್ದ ನೀರಿನ ಅವಶ್ಯಕತೆ ಇರುತ್ತದೆ. ಈಗಾಗಲೇ ಭಾರತದಲ್ಲಿ ನೀರಿಗೆ ಹಲವೆಡೆ ಆಭಾವವಿದೆ.
ಇಂತಹ ಸಂದರ್ಭದಲ್ಲಿ ಹೈಡ್ರೋಜನ್ ತಯಾರಿಕೆಗೆ ನಿರಂತರವಾಗಿ ನೀರನ್ನು ಒದಗಿಸುವುದು ಸವಾಲಾಗಿದೆ.
•ಸಂಗ್ರಹಣೆ ಮತ್ತು ಸಾಗಣೆಗೆ ಮೂಲ ಸೌಕರ್ಯ:
ಹೈಡ್ರೋಜನ್ ತುಂಬಾ ಹಗುರವಾಗಿ ಮತ್ತು ಅತಿ ಬೇಗನೆ ಜ್ವಲಿಸುವಂತಹ ಅಂಶವಾಗಿದೆ. ಇದರ ಸಂಗ್ರಹಕ್ಕೆ ಮೈನಸ್ ತಾಪಮಾನದ ಮತ್ತು ಅತಿ ಒತ್ತಡದ ಸಿಲಿಂಡರ್ಗಳ ಅವಶ್ಯಕತೆ ಇರುತ್ತದೆ.
ಒಂದೆಡೆಯಿಂದ ಮತ್ತೊಂದೆಡೆ ಇದನ್ನು ಸಾಗಿರಿಸಲು ಪೈಪ್ ಲೈನ್ ಗಳ ಅಗತ್ಯವಿರುತ್ತದೆ. ಮತ್ತು ವಿಶೇಷ ರಫ್ತು ಟರ್ಮಿನಲ್ಗಳ ನಿರ್ಮಾಣದ ಅಗತ್ಯ ಇದೆ. ಆದರೆ ಪ್ರಸ್ತುತ ಇವೆರಡರ ಕೊರತೆ ಇದೆ.
•ಬೇಡಿಕೆ ಕಡಿಮೆ:
ಉಕ್ಕು, ರಸ ಗೊಬ್ಬರ ಉದ್ಯಮ, ಮತ್ತು ತೈಲ ಸಂಸ್ಕರಣ ಘಟಕಗಳಲ್ಲಿ ಹೈಡ್ರೋಜನ್ ಅನ್ನು ಬಳಸುವುದು ಕಠಿಣ.
ಇದಕ್ಕಾಗಿ ಅವರು ಪ್ರಸ್ತುತ ಇರುವಂತಹ ಎಲ್ಲ ಯಂತ್ರೋಪಕರಣಗಳನ್ನು ಬದಲಾಯಿಸಬೇಕಾಗುತ್ತದೆ.
ಹಾಗೂ ಇದು ಬಾರಿ ವೆಚ್ಚಕ್ಕೆ ಅನುವು ಮಾಡಿಕೊಡುತ್ತದೆ. ಹಾಗಾಗಿ ದೇಶಿಯವಾಗಿ ಪ್ರಸ್ತುತ ಹೈಡ್ರೋಜನ್ ಗೆ ಬೇಡಿಕೆ ಕಡಿಮೆ ಇದೆ.
•ಜಾಗತಿಕ ಪೈಪೋಟಿ:
ಅಮೇರಿಕಾದ ಇನ್ಫ್ಲೇಷನ್ ರಿಡಕ್ಷನ್ ಆಕ್ಟ್ ಮತ್ತು ಯುರೋಪಿನ ಒಕ್ಕೂಟ ನೀತಿಗಳು ಭಾರಿ ಸಬ್ಸಿಡಿ ನೀಡುತ್ತಿವೆ. ನೀವು ತಮ್ಮ ದೇಶಗಳಲ್ಲಿ ಹೈಡ್ರೋಜನ್ ಉತ್ಪಾದಕರಿಗೆ ಹೆಚ್ಚಿನ ಸಬ್ಸಿಡಿಯನ್ನು ನೀಡುತ್ತಿವೆ.
ಇವುಗಳ ಮಧ್ಯೆ ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿ ಬೆಲೆ ನಿಗದಿಪಡಿಸುವುದು. ಭಾರತಕ್ಕೆ ಕ್ಲಿಷ್ಟಕರ ವಿಷಯವಾಗಿದೆ.
ಈ ಮಿಷನ್ ಸ್ವಚ್ಛ ಇಂಧನ ಮತ್ತು ಹವಮಾನಕ್ಕೆ ಯಾವ ರೀತಿ ಕೊಡುಗೆಯನ್ನು ನೀಡುತ್ತದೆ?
•2030 ವೇಳೆಗೆ 50 ಮಿಲಿಯನ್ ಮೆಟ್ರಿಕ್ ಟನ್ (MMT) ಅಷ್ಟು ಇಂಗಾಲದ ಡೈ ಆಕ್ಸೈಡ್ ಪ್ರಮಾಣವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಲಾಗಿದೆ.
•ಹೈಡ್ರೋಜನ್ ಅನ್ನು ಇಂಧನವಾಗಿ ಬಳಸಿದರೆ, ಅದರಿಂದ ಉಪ ಉತ್ಪನ್ನವಾಗಿ ಕೇವಲ ನೀರು ಮತ್ತು ನೀರಾವಿ ಬಿಡುಗಡೆಗೊಳ್ಳುತ್ತದೆ.
•ದೊಡ್ಡ ಮಟ್ಟದ ಕೈಗಾರಿಕೆಗಳಲ್ಲಿ ಸಂಪೂರ್ಣವಾಗಿ ಹೈಡ್ರೋಜನ್ ಬಳಕೆ ಕಷ್ಟವಾಗಲಿದೆ. ಆದರೆ ಸ್ವಲ್ಪ ಮಟ್ಟದ ಬಳಕೆಯಿಂದಾಗಿ ಹೊರಬರುವ ಇಂಗಾಲದ ಪ್ರಮಾಣವನ್ನು ರೂಪಿಸಬಹುದಾಗಿದೆ.
•ನವೀಕರಿಸಬಹುದಾದ ಹಸಿರು ಇಂಧನವನ್ನು ದೀರ್ಘಕಾಲ
ಸಂಗ್ರಹಿಸಿ ಇಡಬಹುದು. ಇದರಿಂದಾಗಿ ಇಂಧನ ಬಳಕೆಯಲ್ಲಿ ಸ್ಥಿರತೆ ಹೆಚ್ಚಲಿದೆ.
•ಕೇವಲ ಬ್ಯಾಟರಿ ಮೂಲಕ ಬಳಸಲಾಗದ ಬೃಹತ್ ವಾಹನಗಳಿಗೆ ಹಸಿರು ಹೈಡ್ರೋಜನ್ ಉತ್ತಮವಾಗಿದೆ. ಇದರಿಂದಾಗಿ ಮಾಲಿನ್ಯವನ್ನು ತಡೆಗಟ್ಟಬಹುದು.
ಒಟ್ಟಾರೆಯಾಗಿ ಭಾರತವು 2070 ವೇಳೆಗೆ ಶೂನ್ಯ ಇಂಗಾಲ ಹೊರೆಸುವಿಕೆ ಗುರಿಯನ್ನು ಹೊಂದಿದೆ. ಹಾಗೂ ಈಗಾಗಲೇ ಒಂದು ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಮತ್ತೊಂದು ಹಂತ ಈಗಾಗಲೇ ಕಾರ್ಯಗತಗೊಂಡಿದೆ.
ಇದು ಭಾರತದ ಬೃಹತ್ ಐತಿಹಾಸಿಕ ಹೆಜ್ಜೆಯಾಗಿದೆ. ಭವಿಷ್ಯದಲ್ಲಿ ಭಾರತ ದೇಶವನ್ನು ಹೆಚ್ಚು ಸ್ವಾವಲಂಬಿಯಾಗಿಸಲು ಹೈಡ್ರೋಜನ್ ಹೆಚ್ಚಿನ ಒತ್ತು ನೀಡುತ್ತದೆ.
ಇನ್ನಷ್ಟು ಮಾಹಿತಿಗಾಗಿ: hydrogen mission
ಇದನ್ನು ಓದಿ: public examinations amendment Bill 2026