Sports Rules 2026:ಭಾರತದ ಹೊಸ ಕ್ರೀಡಾ ನಿಯಮಗಳು: ಪ್ರಮುಖ ಅಂಶಗಳು

Spread the love

Sports Rules 2026:ಕೇಂದ್ರ ಸರ್ಕಾರವು ರಾಷ್ಟ್ರೀಯ ಕ್ರೀಡಾ ಆಡಳಿತ ನಿಯಮಗಳು 2026 ಅನ್ನು ಜಾರಿಗೊಳಿಸಿದೆ. ಇದನ್ನು ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆ 2025 ಅಡಿಯಲ್ಲಿ ಜಾರಿಗೆ ತರಲಾಗಿದೆ.

 

Sports Rules 2026
Sports Rules 2026

Sports Rules 2026: ಕ್ರೀಡಾ ವಿಷಯದಲ್ಲಿ ಪಾರದರ್ಶಕತೆ ಮತ್ತು ಕ್ರೀಡಾಪಟುಗಳ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು ಈ ನಿಯಮವನ್ನು ಜಾರಿಗೊಳಿಸಲಾಗಿದೆ. ಹಾಗೂ ಇದನ್ನು ಮೇ 2026ರಲ್ಲಿ ಕೇಂದ್ರ ಸರ್ಕಾರವು ಅಧಿಕೃತವಾಗಿ ಜಾರಿಗೊಳಿಸಿದೆ.

 

Sports Rules 2026: ಈ ನಿಯಮಗಳನ್ನು ಜಾರಿಗೆ ತರಲು ಪ್ರಮುಖ ಕಾರಣಗಳು:

 

ಕಾನೂನು ಬಲ ನೀಡುವುದು: 

•ಈ ಹಿಂದೆ ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ಕೋಡ್ 2011 ಚಾಲ್ತಿಯಲ್ಲಿತ್ತು. ಇದು ಕೇವಲ ಸರ್ಕಾರದ ನಿಯಮವಾಗಿತ್ತು. ಇಲ್ಲಿನ ಕಾನೂನುಗಳು ಕಡ್ಡಾಯವಾಗಿರಲಿಲ್ಲ.

•ಹಾಗಾಗಿ ಕ್ರೀಡಾ ಒಕ್ಕೂಟಗಳು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮಾಡಲು ಈ ನಿಯಮಗಳನ್ನು ಜಾರಿಗೊಳಿಸಲಾಗಿದೆ.

ರಾಜಕೀಯದಿಂದ ಮುಕ್ತಿ: 

•ಕ್ರೀಡಾಪಟುಗಳು ರಾಜಕಾರಣಿಗಳು ಮತ್ತು ಉದ್ಯಮಿಗಳ ಕೈ ಹಿಡಿತದಲ್ಲಿದ್ದರು. ಇದರಿಂದಾಗಿ ವೃತ್ತಿಪರತೆಯನ್ನು ಕಳೆದುಕೊಂಡು ಬಿಟ್ಟಿದ್ದಾರೆ.

•ಪ್ರಸ್ತುತ ನಿಯಮಗಳ ಪ್ರಕಾರ,ಪದಾಧಿಕಾರಿಗಳ ವಯಸ್ಸು ಮತ್ತು ಅಧಿಕಾರ ಅವಧಿಗೆ ಮಿತಿ ಹೇರಲಾಗುತ್ತದೆ.

•ಹಾಗೂ ಪಾರದರ್ಶಕ ಚುನಾವಣೆ ನಡೆಸಲಾಗುತ್ತದೆ.

ಕ್ರೀಡಾಪಟುಗಳ ಅಭಿಪ್ರಾಯಕ್ಕೆ ಮನ್ನಣೆ: 

•ಈ ಹಿಂದೆ ಕ್ರೀಡಾ ಸಂಸ್ಥೆಗಳು ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳಲ್ಲಿ ಕ್ರೀಡಾಪಟುಗಳಿಗೆ ಅಧಿಕಾರ ಇರುತ್ತಿರಲಿಲ್ಲ.

•ಇನ್ಮುಂದೆ ಕ್ರೀಡಾ ಸಂಸ್ಥೆಗಳು ನಡೆಸುವ ಪ್ರತಿ ಸಭೆಯಲ್ಲೂ ಭಾಗವಹಿಸಲು ಅವಕಾಶ ದೊರೆಯುತ್ತದೆ. ಕನಿಷ್ಠ ನಾಲ್ಕು ಮಂದಿ ಪ್ರಸಿದ್ಧ ಆಟಗಾರರನ್ನು ಸಭೆಗಳಲ್ಲಿ ಸೇರಿಸಿಕೊಳ್ಳಲೇಬೇಕು.

•ಹಾಗೆ ಆ ನಾಲ್ಕು ಮಂದಿಯಲ್ಲಿ 50ರಷ್ಟು ಮಹಿಳೆಯರು ಕಡ್ಡಾಯವಾಗಿ ಇರಬೇಕು.

ನ್ಯಾಯಾಲಯಗಳಿಗೆ ಭಾರ ಕಡಿಮೆ: 

•ಕ್ರೀಡಾಪಟುಗಳ ಆಯ್ಕೆ ಮತ್ತು ಚುನಾವಣಾ ವಿಷಯಗಳು ಪದೇ ಪದೇ ಕೋರ್ಟಿಗೆ ಬರುತ್ತಿದ್ದವು.

•ಈ ನಿಯಮಗಳ ಪ್ರಕಾರ ನ್ಯಾಯಾಲಯಗಳಿಗೆ ಹೋಗುವ ಅವಶ್ಯಕತೆ ಇರುವುದಿಲ್ಲ. ಡಿಜಿಟಲೀಕರಣದಿಂದಾಗಿ ಎಲ್ಲವನ್ನು ಒಂದೇ ಸೂರಿನಡಿ ತರುವ ಪ್ರಯತ್ನ ನಡೆಯುತ್ತಿದೆ.

•ಇದಕ್ಕಾಗಿ ರಾಷ್ಟ್ರೀಯ ಕ್ರೀಡಾ ನ್ಯಾಯಮಂಡಳಿ (NST) ಸ್ಥಾಪಿಸಲಾಗುತ್ತಿದೆ.

ಜಾಗತಿಕ ಮಾನದಂಡಗಳು: 

•ಇಲ್ಲಿ ಫಿಫಾ (FIFA) ಮತ್ತು ಅಂತಾರಾಷ್ಟ್ರೀಯ ಒಲಿಂಪಿಕ್ ಕಮಿಟಿ (IOC). ಇಂತಹ ಜಾಗತಿಕ ನಿಯಮಾವಳಿಗಳಿಗೆ ಭಾರತದ ಕ್ರೀಡಾ ವ್ಯವಸ್ಥೆಯನ್ನು ಹೊಂದಿಸುವುದು.

•ಈ ಮೂಲಕವಾಗಿ ಒಕ್ಕೂಟಗಳಲ್ಲಿ ಇರುವಂತಹ ಅಂತರಾಷ್ಟ್ರೀಯ ನಿಷೇಧ ಭೀತಿಯನ್ನು ತಡೆಗಟ್ಟಲಾಗುತ್ತದೆ.

ಈ ನಿಯಮಗಳನ್ನು ಜಾರಿಗೆ ತಂದುದರ ಉದ್ದೇಶವೇನು?

 

•ಕ್ರೀಡಾಪಟುಗಳ ಸಬಲೀಕರಣ:

•ಕ್ರೀಡಾ ಸಂಸ್ಥೆಗಳ ಸಭೆಯಲ್ಲಿ ಕ್ರೀಡಾಪಟುಗಳಿಗೆ ಕಡ್ಡಾಯ ಸ್ಥಾನವಿರಲಿದೆ.

•ಕಡ್ಡಾಯ ಸ್ಥಾನಗಳಲ್ಲಿ ಶೇಕಡ 50ರಷ್ಟು ಮಹಿಳೆಯರಿಗೆ ಮೀಸಲಾತಿ ಇರುತ್ತದೆ.

•ಈ ಮೂಲಕ ಸಂಸ್ಥೆಗಳು ತೆಗೆದುಕೊಳ್ಳುವ ಪ್ರತಿ ನಿರ್ಧಾರಗಳು. ಮತ್ತು ಮಾತುಕತೆಗಳಲ್ಲಿ ಕ್ರೀಡಾಪಟುಗಳು ಭಾಗಿಯಾಗಲಿದ್ದಾರೆ.

ನ್ಯಾಯ ಪರವಾದ ಚುನಾವಣೆಗಳು: 

•ಇಲ್ಲಿ ಪದಾಧಿಕಾರಿಗಳ ವಯಸ್ಸು ಮತ್ತು ಅಧಿಕಾರಾವಧಿಗೆ ಮಿತಿ ಹೇರಲಾಗುತ್ತದೆ.

•ಈ ಕ್ರಮದಿಂದಾಗಿ ವಂಶ ಪಾರಂಪರ್ಯವಾದ ನಾಯಕತ್ವ ಕೊನೆಗೊಳ್ಳಲಿದೆ.

•ಸ್ವತಂತ್ರ ಸಮಿತಿಯ ಮೇಲುಸ್ತುವಾರಿಯಲ್ಲಿ ಸಮಯಕ್ಕೆ ಸರಿಯಾಗಿ ಚುನಾವಣೆಗಳನ್ನು ನಡೆಸಲಾಗುತ್ತದೆ.

ವಿವಾದಗಳ ಬಗೆಹರಿಯುವಿಕೆ: 

•ಈ ನಿಯಮಗಳ ಪ್ರಕಾರ ರಾಷ್ಟ್ರೀಯ ಕ್ರೀಡಾ ಮಂಡಳಿಯನ್ನು ಸ್ಥಾಪಿಸಲಾಗುತ್ತದೆ.

•ಮತ್ತು ಈ ಮೂಲಕ ಕ್ರೀಡಾಪಟುಗಳ ಆಯ್ಕೆಯಲ್ಲಿನ ತಾರತಮ್ಯ. ಮತ್ತು ಆಡಳಿತಾತ್ಮಕ ವಿವಾದಗಳನ್ನು ಬಗೆಹರಿಸಲು ಸುಲಭವಾಗುತ್ತದೆ.

•ಸಂಸ್ಥೆಗಳು ಮತ್ತು ಕ್ರೀಡಾಪಟುಗಳು ಸಿವಿಲ್ ನ್ಯಾಯಾಲಯಗಳಿಗೆ ಅಲೆದಾಡುವುದನ್ನು ಈ ಮೂಲಕ ತಪ್ಪಿಸಬಹುದಾಗಿದೆ.

•ಜೊತೆಗೆ ಎಲ್ಲಾ ಡಿಜಿಟಲ್ ರೂಪದಲ್ಲಿರುತ್ತದೆ. ಹಾಗೂ ಈ ಮೂಲಕ ವಿವಾದಗಳಿಗೆ ಬಹಳ ಬೇಗ ತೆರೆ ಎಳೆಯಬಹುದಾಗಿದೆ.

ಮೂಲ ಸೌಕರ್ಯ ಮತ್ತು ತರಬೇತಿ: 

•ರಾಷ್ಟ್ರೀಯ ತಂಡಗಳಿಗೆ ಆಟಗಾರರನ್ನು ಆಯ್ಕೆ ಮಾಡುವಾಗ ಹಲವು ನಿಯಮಗಳನ್ನು ಇನ್ಮುಂದೆ ಪಾಲಿಸಬೇಕು.

•ಆಯ್ಕೆಗೆ ಅರ್ಹತೆ ಆಧಾರಿತ 10 ಮಾನದಂಡಗಳನ್ನು ನಿರ್ಧರಿಸಲಾಗಿದೆ. ಈ ಮೂಲಕವೇ ಆಯ್ಕೆಗಳು ನಡೆಯುತ್ತವೆ.

•ಅಂತರಾಷ್ಟ್ರೀಯ ಕ್ರೀಡಾಕೂಟ ಮತ್ತು ಒಲಿಂಪಿಕ್ಸ್ ಗಳಲ್ಲಿ ಭಾರತದ ಪ್ರದರ್ಶನವನ್ನು ಉತ್ತಮಗೊಳಿಸಬೇಕು. ಈ ಕಾರಣಕ್ಕಾಗಿ ಅದಕ್ಕೆ ಸೂಕ್ತವಿರುವ ವಾತಾವರಣವನ್ನು ಕಲ್ಪಿಸಲಾಗುತ್ತದೆ.

ಹೊಣೆಗಾರಿಕೆ:

•ಇನ್ಮುಂದೆ ರಾಷ್ಟ್ರೀಯ ಕ್ರೀಡಾ ಮಂಡಳಿಯು ಎಲ್ಲ ಕ್ರೀಡಾ ಸಂಸ್ಥೆಗಳ ಕಾರ್ಯವನ್ನು ಮೇಲ್ವಿಚಾರಣೆ ನಡೆಸುತ್ತದೆ.

•ಕ್ರೀಡಾ ಒಕ್ಕೂಟಗಳಿಗೆ ಸರ್ಕಾರದ ಅನುದಾನ ಮತ್ತು ಸ್ಪಾನ್ಸರ್ ಶಿಪ್ ಗಳು ದೊರೆಯುತ್ತವೆ. ಹಾಗೂ ಇದರ ಬಳಕೆಯಲ್ಲಿ ಸಂಪೂರ್ಣ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲಾಗುತ್ತದೆ.

ಈ ಕ್ರೀಡಾ ನಿಯಮಗಳಲ್ಲಿ ಹಲವಾರು ಉದ್ದೇಶಗಳಿವೆ. ಮತ್ತು ಅವುಗಳು ಕ್ರೀಡಾಪಟುಗಳು ಮತ್ತು ಸಂಸ್ಥೆಗಳಿಗೆ ಹಿತವನ್ನೇ ಬಯಸುತ್ತವೆ. ಆದರೂ ಕೂಡ ಇವುಗಳನ್ನು ಜಾರಿಗೆ ತರುವಲ್ಲಿ ಹಲವಾರು ಸವಾಲುಗಳಿವೆ.

ಸವಾಲುಗಳು ಈ ರೀತಿಯಾಗಿವೆ:

 

ಕ್ರೀಡ ಒಕ್ಕೂಟಗಳ ವಿರೋಧ: 

•ದಶಕಗಳಿಂದ ಹಲವು ಉದ್ಯಮಿಗಳು ಮತ್ತು ರಾಜಕಾರಣಿಗಳು ಅಧಿಕಾರದಲ್ಲಿದ್ದಾರೆ. ಹಾಗೂ ಹೊಸ ನಿಯಮದ ಪ್ರಕಾರ ಅವರಿಗೆಲ್ಲ ಮಿತಿಗಳನ್ನು ಹೇರಲಾಗುತ್ತದೆ.

ಇದರಿಂದಾಗಿ ಅವರು ಅಧಿಕಾರದಿಂದ ಕೆಳಗಿಳಿಯುವ ಸಾಧ್ಯತೆ ಇರಲಿದೆ. ಹಾಗಾಗಿ ಕ್ರೀಡಾಕೂಟಗಳು ಈ ಹೊಸ ನಿಯಮಕ್ಕೆ ವಿರೋಧ ವ್ಯಕ್ತಪಡಿಸುತ್ತಿವೆ.

•ಹೊಸ ನಿಯಮದಲ್ಲಿ ಅಧಿಕಾರವಧಿ ಮತ್ತು ವಯಸ್ಸಿನ ಮಿತಿಯನ್ನು ಹೇರಲಾಗಿದೆ. ಇದರಿಂದಾಗಿ ಹಲವು ಪದಾಧಿಕಾರಿಗಳು ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆ ಇರುತ್ತದೆ.

ಅಂತರಾಷ್ಟ್ರೀಯ ಒಕ್ಕೂಟಗಳ ಭೀತಿ: 

• IOC ಮತ್ತು FIFA ದಂತಹ ಅಂತರಾಷ್ಟ್ರೀಯ ಒಕ್ಕೂಟಗಳು ಸರ್ಕಾರದ ಹಸ್ತಕ್ಷೇಪವನ್ನು ಒಪ್ಪುವುದಿಲ್ಲ.

•ರಾಷ್ಟ್ರೀಯ ಕ್ರೀಡಾ ಮಂಡಳಿಯು ಕೇಂದ್ರ ಸಂಸ್ಥೆಗಳ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸುತ್ತದೆ. ಇದರಿಂದ ಅಂತರಾಷ್ಟ್ರೀಯ ಒಕ್ಕೂಟಗಳು ಭಾರತದ ಮೇಲೆ ನಿಷೇಧ ಹೇರಬಹುದು.

ಅರ್ಹ ಕ್ರೀಡಾಪಟುಗಳು: 

•ಸಭೆಗಳಲ್ಲಿ ಕ್ರೀಡಾಪಟುಗಳನ್ನು ಕಡ್ಡಾಯವಾಗಿ ಸೇರಿಸಿಕೊಳ್ಳಬೇಕಾಗುತ್ತದೆ. ಆದರೆ ಸಕ್ರಿಯ ಮತ್ತು ನಿವೃತ್ತ ಕ್ರೀಡಾಪಟುಗಳಲ್ಲಿ ಕಾನೂನು. ಮತ್ತು ಆಡಳಿತಾತ್ಮಕ ಜ್ಞಾನದ ಕೊರತೆ ಕೂಡ ಇರುವ ಸಾಧ್ಯತೆ ಇದೆ.

•ಹಾಗೂ ಕ್ರೀಡಾಪಟುಗಳಿಗೆ ಕ್ರೀಡಾಕೂಟಗಳು ಹಾಗೂ ತರಬೇತಿಗಳು ಇರುತ್ತವೆ. ಇಂತಹ ಸಮಯದಲ್ಲಿ ಸಭೆಗಳಿಗೆ ಹಾಜರಾಗಲು ಸಾಧ್ಯವಾಗದೆ ಇರಬಹುದು.

ತಂತ್ರಜ್ಞಾನ ಮತ್ತು ಮೂಲಸೌಕರ್ಯ: 

•ಹೊಸ ನಿಯಮದ ಪ್ರಕಾರ, ಯಾವುದೇ ಸಮಸ್ಯೆ ಉಂಟಾದರೆ ನ್ಯಾಯ ಮಂಡಳಿಗಳ ಮೂಲಕ ಪರಿಹಾರ ಒದಗಿಸಬೇಕು.

•ಆದರೆ ಎಲ್ಲವು ಡಿಜಿಟಲ್ ರೂಪದಲ್ಲಿ ಇರುತ್ತದೆ. ಹಾಗೂ ಇದನ್ನು ಜಾರಿಗೆ ತರಬೇಕಾದರೆ ತಳಮಟ್ಟದ ತನಕ ಬಲಿಷ್ಠವಾದ ತಾಂತ್ರಿಕ ಮೂಲಸೌಕರ್ಯದ ಅಗತ್ಯವಿರಲಿದೆ.

•ಹಿಂದುಳಿದ ಪ್ರದೇಶಗಳಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕ್ರೀಡಾಪಟುಗಳಿದ್ದಾರೆ. ಇವರಿಗೆ ತಮ್ಮ ಹಕ್ಕುಗಳು ಮತ್ತು ಡಿಜಿಟಲ್ ಮಾದರಿಗಳನ್ನು ಬಳಸುವ ಕುರಿತಾಗಿ ತಿಳಿಸಿಕೊಡಬೇಕಾಗುತ್ತದೆ.

ಈ ನಿಯಮಗಳು ಭವಿಷ್ಯದಲ್ಲಿ ಯಾವ ರೀತಿಯಾಗಿ ಪರಿಣಾಮ ಬೀರಲಿದೆ?

 

ಬಲಿಷ್ಠ ಕ್ರೀಡಾ ಸಂಸ್ಕೃತಿ: 

•ಪಾರದರ್ಶಕತೆ ಮತ್ತು ಕ್ರೀಡಾಪಟುಗಳ ಕಲ್ಯಾಣದ ಸಲುವಾಗಿ ಹಲವು ನಿಯಮಗಳನ್ನು ಜಾರಿಗೊಳಿಸಲಾಗಿದೆ.

ಇದು ಭವಿಷ್ಯದಲ್ಲಿ ಪೋಷಕರಿಗೆ ಮಕ್ಕಳನ್ನು ಕ್ರೀಡಾ ಕ್ಷೇತ್ರದಲ್ಲಿ ಮುಂದುವರೆಯಲು ಬಿಡುವಂತೆ ಮಾಡುತ್ತದೆ. ಈ ನಿಯಮಗಳು ಮತ್ತು ಬೆಳವಣಿಗೆಗಳು ಪೋಷಕರಲ್ಲಿ ನಂಬಿಕೆಯನ್ನು ತರಲಿದೆ.

•ಕ್ರೀಡೆಯು ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿ ಉಳಿಯುವುದಿಲ್ಲ. ಹೊಸ ನಿಯಮಗಳಿಂದಾಗಿ ಗ್ರಾಮೀಣ ಮಟ್ಟದ ಪ್ರತಿಭೆಗಳಿಗೂ ಕೂಡ ವೇದಿಕೆಗಳು ದೊರೆಯುತ್ತವೆ. ಹಾಗೂ ಇದರಿಂದಾಗಿ ಕ್ರೀಡೆಯು ದೇಶದಾದ್ಯಂತ ಹರಡಲಿದೆ.

ಮಹಿಳಾ ಕ್ರಾಂತಿ:

•ಈ ನಿಯಮಗಳಲ್ಲಿ ಮಹಿಳೆಯರಿಗೆ ಸಭೆಗಳಲ್ಲಿ ಪಾಲು ದೊರೆಯಲಿದೆ. ಇದರಿಂದಾಗಿ ಭವಿಷ್ಯ ಭಾರತದಲ್ಲಿ ಮಹಿಳಾ ಕ್ರೀಡಾಪಟುಗಳು ಹೆಚ್ಚಾಗಲಿದ್ದಾರೆ.

ಹಾಗೂ ಮಹಿಳಾ ಅಧಿಕಾರಿಗಳು ಕೂಡ ಹೆಚ್ಚಲಿದ್ದಾರೆ. ಇದರಿಂದಾಗಿ ಮಹಿಳೆಯರು ಕ್ರೀಡೆಯನ್ನು ಮುನ್ನಡೆಸುವ ಹಾಗಾಗಬಹುದಾಗಿದೆ.

•ಹಾಗೂ ಈ ನಿಯಮಗಳು ಮಹಿಳೆಯರಿಗೆ ಅವಕಾಶಗಳನ್ನು ಒದಗಿಸುತ್ತದೆ. ಜೊತೆಗೆ ಕ್ರೀಡಾಂಗಣದಲ್ಲಿ ಮತ್ತು ಮಂಡಳಿಗಳಲ್ಲೂ ಸುರಕ್ಷತೆ ನೀಡಲಿವೆ.

ಹೂಡಿಕೆ ಮತ್ತು ಆರ್ಥಿಕ ಪ್ರಗತಿ: 

•ಹೊಸ ನಿಯಮಗಳಿಂದಾಗಿ ಕ್ರೀಡಾ ಕ್ಷೇತ್ರದಲ್ಲಿ ಪಾರದರ್ಶಕತೆ ಹೆಚ್ಚುತ್ತದೆ.

ಇದರಿಂದಾಗಿ ಜಾಗತಿಕ ಕಂಪನಿಗಳು ಮತ್ತು ಬ್ರಾಂಡ್ ಗಳು ಭಾರತೀಯ ಕ್ರೀಡೆಯ ಮೇಲೆ ಹೂಡಿಕೆ ಮಾಡಲು ಮುಂದೆ ಬರಲಿವೆ. ಹಾಗೂ ಇದು ಕ್ರೀಡಾ ಕ್ಷೇತ್ರದ ಆರ್ಥಿಕ ಪ್ರಗತಿಗೆ ಸಹಾಯ ಮಾಡುತ್ತದೆ.

•ಈ ಹೊಸ ನಿಯಮಗಳಿಂದಾಗಿ ಕ್ರೀಡಾ ಕ್ಷೇತ್ರದಲ್ಲಿ ಉದ್ಯೋಗದ ಸೃಷ್ಟಿಯು ಕೂಡ ಸಾಧ್ಯವಿದೆ. ಕ್ರೀಡಾ ವಿಜ್ಞಾನ, ಕೋಚಿಂಗ್ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಉದ್ಯೋಗದ ಸೃಷ್ಟಿ ಆಗುತ್ತದೆ.

ಕ್ರೀಡೆಯಲ್ಲಿ ಕಾನೂನಿನ ರಕ್ಷಣೆ: 

ಇಲ್ಲಿ ನ್ಯಾಯ ಮಂಡಳಿಯು ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ಇದರಿಂದಾಗಿ ಕ್ರೀಡಾ ಸಂಸ್ಥೆಗಳು ಮತ್ತು ಕ್ರೀಡಾಪಟುಗಳು ನ್ಯಾಯಕ್ಕಾಗಿ ವರ್ಷದ ಕಡೆ ಕಾಯುವ ಅಗತ್ಯವಿಲ್ಲ.

ಎಲ್ಲಾ ರೀತಿಯ ವಿವಾದಗಳು ತಿಂಗಳುಗಳಲ್ಲಿ ಇತ್ಯರ್ಥಗೊಳ್ಳಲಿದೆ. ಹಾಗೂ ಇದರಿಂದ ಸಮಯವು ಉಳಿಯುತ್ತದೆ.

ಹೆಚ್ಚಿನ ಗೆಲುವುಗಳು:

•ಕ್ರೀಡಾ ಕ್ಷೇತ್ರ ಎಂಬುದು ಇದೀಗ ರಾಜಕೀಯದಿಂದ ಮುಕ್ತಿ ಪಡೆಯಲಿದೆ. ಹಾಗೂ ವೃತ್ತಿಪರತೆಯ ಕಡೆಗೆ ಗಮನ ಹೆಚ್ಚುತ್ತದೆ.

ಇದರಿಂದಾಗಿ ಕ್ರೀಡಾಪಟುಗಳಿಗೆ ಜಾಗತಿಕ ಮಟ್ಟದ ತರಬೇತಿಗಳನ್ನು ನೀಡಲು ಸುಲಭವಾಗುತ್ತದೆ.

•ತಾರತಮ್ಯವನ್ನು ತಳ್ಳಿ ಹಾಕುತ್ತದೆ. ಮತ್ತು ಅರ್ಹತೆಯ ಆಧಾರದ ಮೇಲೆ ಇಲ್ಲಿ ಕ್ರೀಡಾಪಟುಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಇದರಿಂದಾಗಿ ಮುಂಬರುವ ಒಲಂಪಿಕ್. ಹಾಗೂ ಇನ್ನಿತರ ಕ್ರೀಡೆಗಳಲ್ಲಿ ಪದಕಗಳನ್ನು ಬಾಚಿಕೊಳ್ಳುವ ಅವಕಾಶ ದೊರೆಯಲಿದೆ.

2026 ರ ಕ್ರೀಡಾ ನಿಯಮಗಳ ಮುಖ್ಯ ನಿಬಂಧನೆಗಳು ಈ ಕೆಳಗಿನಂತಿವೆ:

 

ಕ್ರೀಡಾ ಮಂಡಳಿಯ ಅಧಿಕಾರಗಳು: 

•ಜಾರಿಗೊಳಿಸಿದ ನಿಯಮಗಳನ್ನು ಪಾಲಿಸದ ಕ್ರೀಡಾ ಸಂಸ್ಥೆಗಳ ಮಾನ್ಯತೆಯನ್ನು ತಕ್ಷಣವೇ ರದ್ದುಪಡಿಸಬಹುದಾಗಿದೆ.

ಹಾಗೂ ಹೊಸ ಕ್ರೀಡಾ ಸಂಸ್ಥೆಗಳಿಗೆ ಮಾನ್ಯತೆಯನ್ನು ನೀಡಬಹುದಾಗಿದೆ.

•ಕ್ರೀಡಾ ಒಕ್ಕೂಟಗಳ ಲೆಕ್ಕ ಪತ್ರಗಳನ್ನು ಪರಿಶೋಧಿಸುವ ಹಕ್ಕನ್ನು ಮಂಡಳಿಯು ಹೊಂದಿರುತ್ತದೆ. ಹಾಗೂ ಇಲ್ಲಿ ನಿಯಮಗಳ ಉಲ್ಲಂಘನೆಯಾದರೆ ಸರ್ಕಾರದ ಅನುದಾನವನ್ನು ತಡೆಹಿಡಿಯಬಹುದಾಗಿದೆ.

ಕ್ರೀಡಾಪಟುಗಳ ಪ್ರಾತಿನಿಧ್ಯ: 

•ಕ್ರೀಡಾಪಟುಗಳಿಗೆ ಪದಾಧಿಕಾರಿಗಳಂತೆ ಸಮಾನ ಹಕ್ಕನ್ನು ಮತದಾನದಲ್ಲಿ ನೀಡಲಾಗಿದೆ.

•ಹಾಗೂ ಸಭೆಗಳಲ್ಲಿ ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳಾ ಕ್ರೀಡಾಪಟುಗಳು ಕಡ್ಡಾಯವಾಗಿ ಇರಬೇಕು. ಹಾಗೂ ಈ ನಾಲ್ಕು ಮಂದಿಗೆ ಕ್ರೀಡಾಪಟುಗಳ ಪರವಾಗಿ ಧ್ವನಿ ಎತ್ತಲು ಅವಕಾಶ ದೊರೆಯಲಿದೆ.

ಅಧಿಕಾರದ ಮಿತಿ: 

•ಪದಾಧಿಕಾರಿಗಳು ಕಡ್ಡಾಯವಾಗಿ 70 ವರ್ಷಕ್ಕೆ ನಿವೃತ್ತಿ ಹೊಂದಬೇಕಾಗಿದೆ.

•ಕೆಲವೊಮ್ಮೆ ಓರ್ವ ವ್ಯಕ್ತಿಯು ಸತತವಾಗಿ ಎರಡು ಬಾರಿ ಅಧಿಕಾರಕ್ಕೆ ಬರುತ್ತಾರೆ. ಅಂತಹ ವ್ಯಕ್ತಿಯು ಮುಂದಿನ ಚುನಾವಣೆಗೂ ಮುನ್ನ ಕಡ್ಡಾಯವಾಗಿ ವಿರಾಮವನ್ನು ಪಡೆಯಲೇಬೇಕು.

ಚುನಾವಣಾ ಸಮಿತಿ: 

•ಇಲ್ಲಿ ಕ್ರೀಡಾ ಒಕ್ಕೂಟಗಳು ತಮ್ಮದೇ ಜನರನ್ನು ಬಳಸಿಕೊಂಡು ಚುನಾವಣೆ ನಡೆಸುವ ಅಧಿಕಾರವನ್ನು ಹೊಂದಿಲ್ಲ.

•ಹಾಗೂ ನಿಗದಿತ ಅವಧಿಗೂ ಮುಂಚೆಯೇ ಸ್ವತಂತ್ರ ಸಮಿತಿಯ ಉಸ್ತುವಾರಿಯಲ್ಲಿ ಪಾರದರ್ಶಕ ಚುನಾವಣೆಯನ್ನು ನಡೆಸಲಾಗುವುದು.

•ರಾಷ್ಟ್ರೀಯ ಕ್ರೀಡಾ ನ್ಯಾಯ ಮಂಡಳಿ:

•ಕ್ರೀಡಾಪಟುಗಳ ಕ್ರಿಯೆಗೆ ಸಂಬಂಧಪಟ್ಟ ಎಲ್ಲಾ ವಿವಾದಗಳು ಕೂಡ ಈ ಮಂಡಳಿಯಲ್ಲಿಯೇ ಬಗೆಹರಿಯುತ್ತದೆ.

•ಹಾಗೂ ನ್ಯಾಯಮಂಡಳಿಗಳು ತಮ್ಮ ಬೈಲಾ ಗಳಲ್ಲಿ (BY LAWS) ಸಿವಿಲ್ ನ್ಯಾಯಾಲಯಗಳನ್ನು ಬಳಸುವಂತಿಲ್ಲ.

ಬದಲಿಗೆ ಮಂಡಳಿಗಳನ್ನೇ ಬಳಸಬೇಕು ಎಂಬ ನಿಬಂಧನೆಯನ್ನು ಕಡ್ಡಾಯವಾಗಿ ಸೇರಿಸಬೇಕಾಗಿರುತ್ತದೆ.

ಒಟ್ಟಾರೆಯಾಗಿ ಈ ಎಲ್ಲಾ ನಿಯಮಗಳು ಕೂಡ ಕ್ರೀಡಾಪಟುಗಳಿಗೆ ಹೊಸ ಹುರುಪನ್ನು ನೀಡಲಿದೆ. ಕ್ರೀಡೆ ಎಂಬುದು ರಾಜಕೀಯದಿಂದ ಮುಕ್ತಿ ಪಡೆದು, ಎಲ್ಲರ ನಂಬಿಕೆಯನ್ನು ಗಳಿಸುತ್ತದೆ.

ಇದರಿಂದಾಗಿ ಎಷ್ಟೋ ಯುವಕರ ಕನಸು ನನಸಾಗಲಿದೆ. ಹಾಗೂ ಭವಿಷ್ಯದ ಭಾರತ ಇನ್ನೂ ಹೆಚ್ಚಿನ ಕ್ರೀಡಾ ಸಾಧನೆಯನ್ನು ಮಾಡಲಿದೆ.

ಇನ್ನಷ್ಟು ಮಾಹಿತಿಗಾಗಿ: ಪರೀಕ್ಷೆಗಳ ಭದ್ರತೆಗಾಗಿ ವಿಶೇಷ ಕಾರ್ಯಪಡೆ ರಚನೆ

ಇದನ್ನು ಓದಿ: ministry of youth affairs and sports

 

 

Leave a Comment

Scroll to Top