India AI Mission: AI ಮಿಷನ್: ಭಾರತದ ತಂತ್ರಜ್ಞಾನ ಕ್ರಾಂತಿ

Spread the love

India AI Mission: ಮುಂದುವರಿಯುತ್ತಿರುವ ಜಗತ್ತಿನಲ್ಲಿ ಎಐ (ಕೃತಕ ಬುದ್ಧಿಮತ್ತೆ) ಬಹಳ ಮುಖ್ಯವಾದ ಅಂಶವಾಗಿದೆ. ಭಾರತ ಸರ್ಕಾರವು ಎಐ ಅನ್ನು ಉತ್ತೇಜಿಸುವ ಸಲುವಾಗಿ ಇಂಡಿಯಾಎಐ ಮಿಷನ್ ಅನ್ನು ಜಾರಿಗೊಳಿಸಿದೆ.

India AI Mission
India AI Mission

India AI Mission: ಮನುಷ್ಯನಂತೆ ಯೋಚಿಸುವ, ನಿರ್ಧರಿಸುವ, ಕಲಿಯುವ ತಂತ್ರಜ್ಞಾನವೇ ಎಐ.

ಒಟ್ಟಾರೆಯಾಗಿ ಮಾನವನ ಬುದ್ಧಿವಂತಿಕೆಯ ಸಹಜ ಗುಣಗಳನ್ನು ಎಐ ಹೊಂದಿದೆ. ಈ ಇಂಡಿಯಾಎಐ ಮಿಷನ್ ಅನ್ನು 2024 ಮಾರ್ಚ್ 7ರಂದು ಅಧಿಕೃತವಾಗಿ ಜಾರಿಗೊಳಿಸಲಾಯಿತು.

 

India AI Mission: ಎಐ ಮೂರು ಹಂತಗಳಲ್ಲಿ ಕೆಲಸ ಮಾಡುತ್ತದೆ:

1. ಮಾಹಿತಿ ಸಂಗ್ರಹಣೆ:

ಮೊದಲ ಹಂತದಲ್ಲಿ ಅಪಾರವಾದ ಮಾಹಿತಿ ಮತ್ತು ನಿಯಮಗಳನ್ನು ಕೃತಕ ಬುದ್ಧಿಮತ್ತೆಗೆ ನೀಡಬೇಕು.

2. ವಿಶ್ಲೇಷಣಾ ಕ್ರಿಯೆ:

ಆ ಮಾಹಿತಿಗಳನ್ನು ಅಧ್ಯಯನ ನಡೆಸಲಾಗುತ್ತದೆ. ತದನಂತರ ಒಂದು ತೀರ್ಮಾನಕ್ಕೆ ಬರಲು ಯಂತ್ರಗಳು ತಯಾರಾಗುತ್ತದೆ.

3. ಸ್ವಯಂ ತಿದ್ದುಪಡಿ ಮಾಡುತ್ತದೆ:

ಒಮ್ಮೆ ಅಪ್ಲೋಡ್ ಮಾಡಿದ ನಂತರ ಎಐ ತಾನೇ ಕಲಿಯುತ್ತದೆ. ತಾನಿ ತಿದ್ದುಪಡಿಗಳನ್ನು ಮಾಡುತ್ತದೆ. ಮತ್ತು ಮುಂದಿನ ಬಾರಿ ನಿಖರವಾದ ನಿರ್ಧಾರಗಳನ್ನು, ಸಲಹೆಗಳನ್ನು ನೀಡುತ್ತದೆ.

ಇಂಡಿಯಾಎಐ ಮಿಷನ್ ಪ್ರಾರಂಭವಾದ ಹಂತಗಳು:

•2024ರಲ್ಲಿ ಈ ಮಿಷನ್ ಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು.

•ಹಾಗೂ ಇದರ ಮೇಲೆ ಒಟ್ಟಾರೆಯಾಗಿ ₹10,371.92 ಕೋಟಿ ಬಜೆಟ್ ಹೂಡಿಕೆ ಮಾಡಲಾಗಿದೆ.

•ಹಾಗೂ ಮಾರ್ಚ್ ತಿಂಗಳಲ್ಲೇ ಅಧಿಕೃತ ವೆಬ್ಸೈಟ್ ಅನ್ನು ಕೂಡ ಚಾಲನೆಗೊಳಿಸಲಾಗಿದೆ.

ರಾಷ್ಟ್ರೀಯ AI ಪೋರ್ಟಲ್ ಎಂಬುದು ಅಧಿಕೃತ ವೆಬ್ಸೈಟ್ ಆಗಿರುತ್ತದೆ.

•ಇದರ ಪ್ರಮುಖ ಅಂಗವಾಗಿ,ಭಾರತ್‌ಜೆನ್ ಅನ್ನು ಅಕ್ಟೋಬರ್ 2024ರಲ್ಲಿ ಜಾರಿಗೊಳಿಸಲಾಯಿತು.ಇದು ವಿಶ್ವದ ಮೊದಲ ಸರ್ಕಾರಿ ಧನ ಸಹಾಯದಿಂದ ರಚಿತವಾದ ಎಐ ಮಾದರಿಯಾಗಿರುತ್ತದೆ.

ಹಾಗೂ ಈ ಮಾದರಿಯನ್ನು ಭಾರತದ ಭಾಷೆಗಳಿಗಾಗಿ ರಚನೆ ಮಾಡಲಾಗಿದೆ.

 

ಜಗತ್ತಿಗೆ ಎಐ ಏಕೆ ಮುಖ್ಯ? ಪ್ರಮುಖ ಕಾರಣಗಳು:

 

ವೇಗದ ಕೆಲಸ ಮತ್ತು ಸಮಯದ ಉಳಿತಾಯ: ಇಲ್ಲಿ ಕೃತಕ ಬುದ್ಧಿಮತ್ತೆಯು ಮನುಷ್ಯರಂತೆ ದಣಿವಾಗುವುದಿಲ್ಲ. ಪದೇಪದೇ ಒಂದೇ ಕೆಲಸವನ್ನು ಮಾಡಲು ಬೇಸರಿಸುವುದಿಲ್ಲ.

ಹಾಗೂ ಯಾವುದೇ ತಪ್ಪುಗಳಿಲ್ಲದೆ ಕೆಲಸದಲ್ಲಿ ದಕ್ಷತೆ ಉಂಟಾಗಲಿದೆ. ಮತ್ತು ಇಲ್ಲಿ ಸಮಯದ ಮಿತಿ ಇರುವುದಿಲ್ಲ. ಮತ್ತು ದಿನದ 24 ಗಂಟೆಯೂ ಕೂಡ ಇದು. ಕೆಲಸ ನಿರ್ವಹಿಸುತ್ತದೆ.

ಆರೋಗ್ಯ ಕ್ಷೇತ್ರದಲ್ಲಿ ಸಹಕಾರಿ: ಎ ಐ ಆರೋಗ್ಯ ಕ್ಷೇತ್ರದಲ್ಲಿ ಮತ್ತಷ್ಟು ನಿಖರತೆಯಾಗಿರುತ್ತದೆ.

ಎಕ್ಸ್ ರೇ ಚಿತ್ರಗಳ ಮೂಲಕ ಎ ಐ ಕಾಯಿಲೆಯನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಇದರಿಂದಾಗಿ ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳಿಗೆ ತಕ್ಷಣವೇ ಚಿಕಿತ್ಸೆ ಪ್ರಾರಂಭಿಸಬಹುದಾಗಿದೆ.

ಮೊದಲೆಲ್ಲ ಔಷಧಗಳ ಸಂಶೋಧನೆ ಮತ್ತು ಪ್ರಯೋಗಗಳಿಗೆ ವರ್ಷಾನುಗಟ್ಟಲೆ ಸಮಯ ಹಿಡಿಯುತ್ತಿತ್ತು. ಇಂತಹ ಸಂಶೋಧನೆಗಳನ್ನು ಎಐ ಈಗ ತಿಂಗಳುಗಳಲ್ಲಿ ಮಾಡಿ ಮುಗಿಸುತ್ತದೆ.

ಶಿಕ್ಷಣ ಕ್ಷೇತ್ರ: 

ಪ್ರತಿಯೊಬ್ಬ ವಿದ್ಯಾರ್ಥಿಯ ಕಲಿಕೆಯ ರೀತಿಯು ವಿಭಿನ್ನವಾಗಿರುತ್ತದೆ. ಕೆಲವರಿಗೆ ಕಡಿಮೆ ಸಮಯ ಹಿಡಿಯುತ್ತದೆ ಮತ್ತು ಕೆಲವರಿಗೆ ಹೆಚ್ಚು ಸಮಯ.

ಕೃತಕ ಬುದ್ಧಿಮತ್ತೆಯು ವಿದ್ಯಾರ್ಥಿಗಳ ಕಲಿಕೆಯ ಮಟ್ಟಕ್ಕೆ ತಕ್ಕಂತೆ ಪಾಠಗಳನ್ನು ರೂಪಿಸುತ್ತದೆ.ಪ್ರತಿ ವಿದ್ಯಾರ್ಥಿಗಳಿಗೂ ಉತ್ತಮ ಶಿಕ್ಷಣ ಮತ್ತು ಮಾಹಿತಿಯನ್ನು ದೊರಕುವಂತೆ ಮಾಡುತ್ತದೆ.

ಇಲ್ಲಿ ವಿದ್ಯಾರ್ಥಿಗಳ ನಡುವೆ ತಾರತಮ್ಯ ಬರುವುದಿಲ್ಲ. ಕೃತಕ ಬುದ್ಧಿಮತ್ತೆ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಸಮನಾಗಿ ಕಾಣುತ್ತ, ಕಲಿಸುತ್ತದೆ.

ಆಹಾರ ಮತ್ತು ಕೃಷಿ ಕ್ಷೇತ್ರ: 

•ಎಐ ಮೂಲಕ ಹವಮಾನ ಮುನ್ಸೂಚನೆಯನ್ನು ಮೊದಲೇ ಪಡೆಯಬಹುದು. ಇದು ಹವಮಾನದ ಕುರಿತು ಮತ್ತು ಕೀಟಗಳ ದಾಳಿಯ ಕುರಿತು ರೈತರಿಗೆ ಮುಂಚಿತವಾಗಿ ತಿಳಿಸುತ್ತದೆ.

•ಇಲ್ಲಿ ಡ್ರೋನ್ ಮತ್ತು AI ಸೆನ್ಸಾರ್‌ ಗಳು ಉತ್ತಮ ಅಂಶಗಳಾಗಿವೆ. ಇವುಗಳ ಮೂಲಕ ಬೆಳೆಗಳ ಆರೋಗ್ಯವನ್ನು ತಿಳಿದುಕೊಳ್ಳಬಹುದು. ಜೊತೆಗೆ ಅವುಗಳಿಗೆ ಯಾವುದರ ಅವಶ್ಯಕತೆ ಇದೆ ಎಂದು ತಿಳಿಯಬಹುದಾಗಿದೆ.

ದತ್ತಾಂಶಗಳು:

•ಪ್ರತಿದಿನ ಕೋಟ್ಯಾಂತರ ಲೆಕ್ಕದಲ್ಲಿ ಡೇಟಾಗಳು ಉತ್ಪಾದನೆ ಯಾಗುತ್ತವೆ. ಇದೆಲ್ಲದರ ಕುರಿತಾಗಿ ತಿಳಿಯಲು ಮನುಷ್ಯನಿಗೆ ಬಹಳಷ್ಟು ಸಮಯ ಹಿಡಿಯುವುದು. ಹಾಗೂ ಇದು ಅಸಾಧ್ಯವೇ ಸರಿಯನ್ನಬಹುದು.

•ಆದರೆ ಕೇವಲ ಸೆಕೆಂಡುಗಳಲ್ಲಿ ಎಐ ಇದರ ದತ್ತಾಂಶಗಳನ್ನು ನೀಡುತ್ತದೆ. ಮತ್ತು ಅದರ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಇದು ಬಹುತೇಕ ಉದ್ಯಮಿಗಳಿಗೆ ಲಾಭದಾಯಕವಾಗಿದೆ.

ಸಾರಿಗೆ ಸುರಕ್ಷತೆ:

•ಇಲ್ಲಿನ ಮುಖ್ಯ ಬೆಳವಣಿಗೆ ಸ್ವಯಂ ಚಾಲಿತ ವಾಹನಗಳು ಮತ್ತು ಎಐ ಸಂಚಾರ ನಿಯಂತ್ರಣಗಳು. ಇದರ ಬಳಕೆಯಿಂದಾಗಿ ಹೆಚ್ಚಿನ ಅಪಘಾತಗಳನ್ನು ತಪ್ಪಿಸಬಹುದಾಗಿದೆ.

ಪ್ರತಿಯೊಂದು ಕ್ಷೇತ್ರದಲ್ಲಿ ಎಐ ನ ಅವಶ್ಯಕತೆ ಬಹಳಷ್ಟಿದೆ. ಮನುಷ್ಯನನ್ನು ಸ್ವಾವಲಂಬಿಯಾಗಿಸಲು ಕೂಡ ಇದು ಅವಶ್ಯಕವಾಗಿದೆ.

ಭಾರತವು ಕೇವಲ ಆಡಳಿತಕ್ಕೆ ಕೃತಕ ಬುದ್ಧಿಮತ್ತೆಯನ್ನು ಉಪಯೋಗಿಸುತ್ತಿಲ್ಲ. ಬದಲಾಗಿ ಸರ್ವತೋಮುಖ ಬೆಳವಣಿಗೆಗೆ ಬಳಸಲಾಗುತ್ತಿದೆ. ಪ್ರಸ್ತುತ ಭಾರತದ ಸುಮಾರು 89 ಶೇಕಡ ಹೊಸ ಸ್ಟಾರ್ಟಪ್ ಗಳು ಎಐಯನ್ನು ಬಳಸಿಕೊಳ್ಳುತ್ತಿವೆ.

2026ರಲ್ಲಿ ಭಾರತದಲ್ಲಿ ಎಐ ಬಳಕೆ ವಿಧಾನ ಈ ರೀತಿ ಇದೆ:

 

ಸ್ವದೇಶಿ ಎಐ ಮಾದರಿಗಳು:

ಭಾರತ ಸರ್ಕಾರವು ದೇಶದ ಸ್ವಂತ ಮಾದರಿಗಳನ್ನು ತಯಾರಿಸಲು ಧನಸಹಾಯ ನೀಡುತ್ತಿದೆ. ಭಾರತ್‌ಜೆನ್, ಜ್ಞಾನಿ, ಸರ್ವಂ ಎ ಐ, ಸಾಕೆಟ್ ಇವು ಇತ್ತೀಚಿಗೆ ಜಾರಿಯಲ್ಲಿರುವ ದೇಶಿಯ ಎಐ ಮಾದರಿಗಳು.

ಇವುಗಳು ಭಾರತದ ಸ್ಥಳೀಯ ಭಾಷೆಯಲ್ಲಿ ಕಾರ್ಯನಿರ್ವಹಿಸುತ್ತವೆ. ಮತ್ತು ಇದರಿಂದಾಗಿ ಸಾರ್ವಜನಿಕರ ಬಳಕೆಗೆ ಸಹಕಾರಿಯಾಗಲಿದೆ.

ಡೇಟಾ ಮೂಲಸೌಕರ್ಯ:

•ಭಾರತದಲ್ಲಿ ಕಡಿಮೆ ದರದ ಕಂಪ್ಯೂಟಿಂಗ್ ಅನ್ನು ಒದಗಿಸಲಾಗುತ್ತಿದೆ.

•ಗಂಟೆಗೆ ಕೇವಲ 65 ರೂ ಗಳಿಗೆ 38,000 ಕ್ಕೂ ಹೆಚ್ಚು GPU ಗಳನ್ನು ಒದಗಿಸುತ್ತಿದೆ.

•ಇದು ಭಾರತದ ಸ್ಟಾರ್ಟ್‌ಅಪ್‌ಗಳು ಮತ್ತು ಸಂಶೋಧಕರಿಗೆ ಸಹಾಯ ಮಾಡಲಿದೆ.

•ಈಗಾಗಲೇ ದೇಶಾದ್ಯಂತ 27 ‘ಇಂಡಿಯಾ ಡೇಟಾ ಮತ್ತು AI ಲ್ಯಾಬ್‌’ಗಳನ್ನು ಸ್ಥಾಪಿಸಲಾಗಿದೆ.

•ಹಾಗೂ AIKosh ಎಂಬ ಪ್ಲಾಟ್‌ಫಾರ್ಮ್ ಮೂಲಕ 7, 500ಕ್ಕೂ ಹೆಚ್ಚು ಡೇಟಾ ಸೆಟ್ ಗಳು. ಮತ್ತು 273 ಕ್ಕಿಂತ ಹೆಚ್ಚು ಮಾದರಿಗಳನ್ನು ಹಂಚಿಕೊಳ್ಳಲಾಗುತ್ತಿದೆ.

ಆರೋಗ್ಯ ಮತ್ತು ಕೃಷಿ:

•ಇದು ಹವಮಾನದ ಮುನ್ಸೂಚನೆ ಮತ್ತು ಬೆಳೆ ರೋಗದ ಕುರಿತಾಗಿ ಮುನ್ಸೂಚನೆಯನ್ನು ನೀಡುತ್ತದೆ.

•ಇದು ಆಯಾ ಸ್ಥಳೀಯ ಭಾಷೆಗಳಲ್ಲಿ ಮಾಹಿತಿ ತಿಳಿಸುವುದರಿಂದಾಗಿ ರೈತರಿಗೆ ಸುಲಭದಾಯಕವಾಗಿದೆ.

•ಭಾರತದ ಸ್ಥಳೀಯ ವೈದ್ಯಕೀಯ ಆಧಾರಗಳ ಮೇಲೆ ಕೆಲವು ಎಐ ಮಾದರಿಗಳನ್ನು ತಯಾರಿಸಲಾಗಿದೆ.

•ಇವುಗಳು ಕ್ಷಯರೋಗ ಮತ್ತು ಡಯಾಬಿಟಿಕ್ ರೆಟಿನೋಪತಿಯಂತಹ ರೋಗಗಳನ್ನು ಆರಂಭದಲ್ಲೇ ನಿಖರವಾಗಿ ಪತ್ತೆಹಚ್ಚಲು ಸಹಾಯ ಮಾಡುತ್ತದೆ.

ಜಾಗತಿಕ ನಾಯಕತ್ವ: 

•ಇತ್ತೀಚಿಗೆ ಇಂಡಿಯಾ-ಎಐ ಇಂಪ್ಯಾಕ್ಟ್ ಶೃಂಗಸಭೆ 2026 ಅನ್ನು ಯಶಸ್ವಿಯಾಗಿ ನಡೆಸಲಾಯಿತು.

•ಇದನ್ನು ಫೆಬ್ರವರಿ 2026ರಲ್ಲಿ ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಸಲಾಯಿತು.

•ಇದು ಜಾಗತಿಕ ದಕ್ಷಿಣ ದೇಶಗಳಲ್ಲಿ ಮೊದಲ ಬಾರಿಗೆ ನಡೆದ ಅಂತರಾಷ್ಟ್ರೀಯ ಎಐ ಶೃಂಗಸಭೆಯಾಗಿದೆ.

•ಎಐ ಕೇವಲ ಶ್ರೀಮಂತ ರಾಷ್ಟ್ರಗಳಿಗೆ ಸೀಮಿತವಾಗಬಾರದು. ಇದಕ್ಕಾಗಿ ಡೇಟಾ ಮತ್ತು ಕಂಪ್ಯೂಟರ್ ಪವರನ್ನು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಹಂಚಿಕೊಳ್ಳಬೇಕು.

ಈ ಕಾರಣದ ಸಲುವಾಗಿ ಭಾರತವು ಶೃಂಗಸಭೆಯಲ್ಲಿ ಎಐ ಕಾಮನ್ಸ್ ಮಾದರಿಯನ್ನು ಪ್ರತಿಪಾದನೆ ಮಾಡಿತು.

ತರಬೇತಿ:

•ಪ್ರಸ್ತುತ ಡಿಜಿಟಲ್ ಕ್ಷೇತ್ರದಲ್ಲಿ ಹಲವು ರೀತಿಯಲ್ಲಿ ದುರ್ಬಳಕೆಗಳು ನಡೆಯುತ್ತಿವೆ.

•ಇದನ್ನೆಲ್ಲಾ ತಡೆಯುವ ಸಲುವಾಗಿ ಎ ಐ ಬಳಕೆಯಲ್ಲಿ ಕಟ್ಟುನಿಟ್ಟಾದ ನಿಯಂತ್ರಣ ಕ್ರಮಗಳು. ಮತ್ತು ಸ್ವತಂತ್ರ ಪರಿಶೀಲನ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.

•ಫ್ಯೂಚರ್‌ಸ್ಕಿಲ್ಸ್ ಎಂಬ ಕಾರ್ಯಕ್ರಮದ ಅಡಿಯಲ್ಲಿ ಎಐ ತರಬೇತಿ ಮತ್ತು ಧನಸಹಾಯ ನೀಡಲಾಗುತ್ತಿದೆ.

• ಇದರಲ್ಲಿ 8,000 ಹೆಚ್ಚು ಪದವಿ ಮತ್ತು 5000ಕ್ಕೂ ಹೆಚ್ಚು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ.

•ಜೊತೆಗೆ ರೂ. 500ಕ್ಕೂ ಹೆಚ್ಚು ಪಿಎಚ್‌ಡಿ ಸಂಶೋಧಕರಿಗೂ ನೀಡಲಾಗುತ್ತಿದೆ.

ಭಾರತ ಸರ್ಕಾರವು ಇತ್ತೀಚೆಗೆ ಘೋಷಿಸಿರುವ ಎಐ ಉಪಕ್ರಮಗಳು:

 

ಎಐ ಶೃಂಗಸಭೆ:

•ಈ ಸಭೆಯು ಫೆಬ್ರವರಿ 2020ರಲ್ಲಿ ಪ್ರಧಾನಿ ನರೇಂದ್ರಮೋದಿಯವರ ನೇತೃತ್ವದಲ್ಲಿ ನಡೆಯಿತು.

•ಈ ಸಭೆಯಲ್ಲಿ ತಂತ್ರಜ್ಞಾನ ಕ್ಷೇತ್ರಕ್ಕೆ 200 ಬಿಲಿಯನ್ ಡಾಲರ್ ಗು ಹೆಚ್ಚು ಹೂಡಿಕೆಯ ಭರವಸೆ ಸಿಕ್ಕಿದೆ.

•ಗೂಗಲ್ ಸಂಸ್ಥೆಯು ವಿಶಾಖಪಟ್ಟಣದಲ್ಲಿ $15 ಬಿಲಿಯನ್ ವೆಚ್ಚದ ಎಐ ಹಬ್ ನಿರ್ಮಿಸಲಿದೆ.

•ಹಾಗೂ ಸುಮಾರು 20 ಮಿಲಿಯನ್ ಸರ್ಕಾರಿ ನೌಕರರಿಗೆ ತರಬೇತಿ ನೀಡುವುದಾಗಿ ಘೋಷಣೆ ಮಾಡಿದೆ.

ಸ್ವದೇಶಿ ಮಾದರಿಗಳಿಗೆ ಧನ ಸಹಾಯ:

•ಇಲ್ಲಿ ಭಾರತೀಯ ಭಾಷೆಗಳು ಮತ್ತು ಸಂಸ್ಕೃತಿಗೆ ಗೌರವ ನೀಡುವಂತಹ ಉದ್ದೇಶವನ್ನು ಇಟ್ಟುಕೊಳ್ಳಲಾಗಿದೆ.

•ಈ ಸಲುವಾಗಿ ಭಾರತ ಸರ್ಕಾರವು 20 ಪ್ರಮುಖ ಪ್ರಸ್ತಾಪಗಳನ್ನು ಆಯ್ಕೆ ಮಾಡಿರುವಂತದ್ದು.

ಸರ್ವಂ ಎಐ, ಜ್ಞಾನಿ, ಸಾಕೆಟ್, ಮತ್ತು ಭಾರತ್‌ಜೆನ್ ಇವುಗಳು ಭಾರತದ ಪ್ರಮುಖ ಸ್ವದೇಶಿ ಮಾದರಿಗಳಾಗಿವೆ.

•ಹಾಗೂ ಇವುಗಳಿಗೆ ಸರ್ಕಾರದಿಂದ ಹೆಚ್ಚಿನ ಸಬ್ಸಿಡಿ ಮತ್ತು ಪ್ರೋತ್ಸಾಹ ಧನ ಸಿಗುತ್ತಿದೆ.

2026-27ರ ಕೇಂದ್ರ ಬಜೆಟ್:

•ಈ ವರ್ಷದ ಬಜೆಟ್ ನಲ್ಲಿ ಇಂಡಿಯಾಎಐ ಮಿಷನ್‌ಗೆ 1 ಸಾವಿರ ಕೋಟಿ ಮೀಸಲಿಡಲಾಗಿದೆ.

•ಭಾರತವನ್ನು ಎಐ ಹಬ್ ಮಾಡಲು ಕ್ಲೌಡ್ ಮತ್ತು AI ಡೇಟಾ ಸೆಂಟರ್ ಗಳನ್ನು ಸ್ಥಾಪಿಸುವ ಅವಶ್ಯಕತೆ ಇದೆ.

•ಇವುಗಳನ್ನು ಸ್ಥಾಪಿಸುವ ಕಂಪನಿಗಳಿಗೆ 2047 ರ ತನಕ ತೆರಿಗೆ ರಜೆಯನ್ನು ಘೋಷಿಸಲಾಗಿದೆ.

•ಅತ್ಯಾಧುನಿಕ ಸಂಶೋಧನೆ ನಡೆಸಲು ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ ನಿಧಿ ಅಡಿಯಲ್ಲಿ 20 ಸಾವಿರ ಕೋಟಿಯನ್ನು ಬಿಡುಗಡೆ ಮಾಡಲಾಗಿದೆ.

ಸುರಕ್ಷಿತ ಮಾರ್ಗ ಸೂಚಿಗಳು:

•ಕೃತಕ ಬುದ್ಧಿ ಮತ್ತು ಮೂಲಕ ಹಲವು ಅಪರಾಧಗಳು ವಂಚನೆಗಳು ನಡೆಯುವ ಸಾಧ್ಯತೆ ಇರಲಿದೆ.

•ಇದನ್ನು ಹತ್ತಿಕ್ಕುವ ಸಲುವಾಗಿ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ.

•ಇದಕ್ಕಾಗಿ ಮಾಹಿತಿ ತಂತ್ರಜ್ಞಾನ ಮತ್ತು ತಿದ್ದುಪಡಿ ನಿಯಮಗಳು 2026 ಅನ್ನು ಜಾರಿಗೊಳಿಸಲಾಗಿದೆ.

•ಜವಾಬ್ದಾರಿಯುತವಾಗಿ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳಬೇಕಾಗಿದೆ.

•ಇದನ್ನು ಖಚಿತಪಡಿಸಿಕೊಳ್ಳಲು ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯು ಇತ್ತೀಚಿಗೆ ‘Techno-Legal Framework’ ಎಂಬ ಶ್ವೇತಪತ್ರವನ್ನು ಹೊರಡಿಸಿದೆ.

ಉದ್ಯಮ ಮತ್ತು ಯುವ ಪ್ರತಿಭೆಗಳಿಗೆ ಅವಕಾಶಗಳು:

• ಇಲ್ಲಿ ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ.

•ಜೊತೆಗೆ ವಿಕಲಚೇತನ ನಾಯಕರನ್ನು ಒಳಗೊಂಡಿರುವ ಎಐ ಸ್ಟಾರ್ಟಪ್ ಗಳಿಗೆ ಪ್ರೋತ್ಸಾಹಿಸಲಾಗುತ್ತಿದೆ.

•ಇವುಗಳಿಗೆ ಜಾಗತಿಕ ವೇದಿಕೆಯನ್ನು ಕಲ್ಪಿಸಲು ಉಡಾನ್ ಎಂಬ ಯೋಜನೆಯನ್ನು ಜಾರಿಗೊಳಿಸಲಾಗಿದೆ.

•ದೇಶದ ಪ್ರಮುಖ ಐಐಟಿ ಸಂಸ್ಥೆಗಳಲ್ಲಿ 10,000 ಸಂಶೋಧಕರಿಗೆ ತಂತ್ರಜ್ಞಾನ ಫಿಲೋಷಿಪ್ ಗಳನ್ನು ನೀಡಲಾಗುತ್ತಿದೆ.

•ಈ ಮೂಲಕ ಯುವ ಸಂಶೋಧಕರಿಗೆ ಎಐ ತರಬೇತಿಯನ್ನು ನೀಡಲಾಗುತ್ತಿದೆ.

India AI Mission: ಎಐ ತಂತ್ರಜ್ಞಾನ ಎದುರಿಸುತ್ತಿರುವ ಸವಾಲುಗಳು:

 

ಉದ್ಯೋಗ ನಷ್ಟದ ಭೀತಿ:

•ಕಾರ್ಖಾನೆಗಳು ಮತ್ತು ಹಲವು ಕಂಪನಿಗಳಲ್ಲಿ ಎಐ ಬಳಕೆ ಮಾಡಲಾಗುತ್ತಿದೆ.

•ಸಾಂಪ್ರದಾಯಿಕವಾಗಿ ಮಾಡುವ ಎಷ್ಟೋ ಕೆಲಸಗಳ ಬದಲಿಗೆ ಇದನ್ನು ಬಳಸಲಾಗುತ್ತಿದೆ.

•ಇದರಿಂದಾಗಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಮತ್ತು ಕಳೆದುಕೊಳ್ಳುತ್ತಿದ್ದಾರೆ.

•ಈ ತಂತ್ರಜ್ಞಾನಗಳಿಗೆ ತಕ್ಕಂತೆ ಜನರು ಹೊಸ ಕೌಶಲ್ಯಗಳನ್ನು ಕಲಿಯುವ ಅಗತ್ಯವಿದೆ.

•ಇಲ್ಲವಾದಲ್ಲಿ ಪ್ರಸ್ತುತ ಇರುವ ಉದ್ಯೋಗ ಮಾರುಕಟ್ಟೆಯಲ್ಲಿ ಬದುಕುಳಿಯುವುದು ಕಷ್ಟದ ಸಂಗತಿ.

ಅಕ್ರಮಗಳು:

•ಪ್ರಸ್ತುತ ಕೃತಕ ಬುದ್ಧಿಮತ್ತೆ ಬಳಸಿಕೊಂಡು ಹಲವು ಅಕ್ರಮಗಳನ್ನು ನಡೆಸಲಾಗುತ್ತಿದೆ.

•ರಾಜಕಾರಣಿಗಳು, ದೊಡ್ಡ ದೊಡ್ಡ ವ್ಯಕ್ತಿಗಳು, ಅಥವಾ ಮಹಿಳೆಯರ ಫೋಟೋಗಳನ್ನು ಅಸಭ್ಯವಾಗಿ ರಚಿಸಲಾಗುತ್ತಿದೆ.

•ಈ ಕಾರಣಗಳು ಚುನಾವಣೆಗಳ ಮೇಲೆ ಪರಿಣಾಮ ಬೀರಬಹುದು.

•ಹಾಗೂ ಇದರಿಂದಾಗಿ ಸಮಾಜದಲ್ಲಿ ಗಲಾಟೆ ಗದ್ದಲಗಳು ಪ್ರಾರಂಭವಾಗುವ ಸಾಧ್ಯತೆ ಇರುತ್ತದೆ.

ಎಐ ದುರುಪಯೋಗ:

•ಸೈಬರ್ ಅಪರಾಧಿಗಳು ಅತ್ಯಂತ ಅಪಾಯಕಾರಿಗಳನ್ನು ರಚಿಸಲು ಕೃತಕ ಬುದ್ಧಿಮತ್ತೆಯನ್ನು ಬಳಸುತ್ತಿದ್ದಾರೆ .

•ಇದರಿಂದಾಗಿ ರಕ್ಷಣಾ ಕ್ಷೇತ್ರ ಮತ್ತು ಬ್ಯಾಂಕ್ ಕ್ಷೇತ್ರಕ್ಕೆ ಕೃತಕ ಬುದ್ಧಿಮತ್ತೆಯು ತಲೆನೋವಿನ ವಿಷಯವಾಗಿದೆ.

•ಯುದ್ಧಗಳಲ್ಲಿ ಸ್ವಯಂ ಚಾಲಿತ ಡ್ರೋನ್ ಮತ್ತು ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡಲಾಗುತ್ತಿದೆ.

•ಇದರಿಂದಾಗಿ ಜಾಗತಿಕ ಶಾಂತಿಗೆ ಧಕ್ಕೆ ಉಂಟಾಗಬಹುದಾಗಿದೆ. ಹಾಗೂ ಇದು ದ್ವೇಷದ ಬೀಜವನ್ನು ಬಿತ್ತಬಹುದಾಗಿದೆ.

ಗೌಪ್ಯತಾ ವಿಚಾರ:

•ಕೃತಕ ಬುದ್ಧಿಮತ್ತೆಯು ಸರಿಯಾಗಿ ಕಾರ್ಯನಿರ್ವಹಿಸಲು ನಾವು ಹೆಚ್ಚಿನ ವೈಯಕ್ತಿಕ ಡೇಟಾವನ್ನು ಅಪ್ಲೋಡ್ ಮಾಡಬೇಕು.

•ಹಾಗೂ ಇಲ್ಲಿ ಖಾಸಗಿ ಮಾಹಿತಿ ಸೋರಿಕೆಯ ಸಾಧ್ಯತೆಯೂ ಇರಬಹುದು

•ಇದರಿಂದಾಗಿ ಬ್ಲಾಕ್ ಮೇಲ್ ಮತ್ತು ವಂಚನೆಗಳು ಪ್ರಾರಂಭವಾಗಬಹುದು.

ತಾರತಮ್ಯ:

•ಎಐ ಮನುಷ್ಯ ನೀಡಿದ ಡೇಟಾದ ಮೂಲಕ ಕಾರ್ಯನಿರ್ವಹಿಸುತ್ತದೆ.

•ಮನುಷ್ಯರು ಡೇಟಾ ಫೀಡ್ ಮಾಡುವಾಗ ತಾರತಮ್ಯಗಳ ಬಳಕೆ ಮಾಡುತ್ತಾರೆ ಎಂದಿಟ್ಟುಕೊಳ್ಳೋಣ.

•ಕೃತಕ ಬುದ್ಧಿಮತ್ತೆಯು ಯಾವುದೇ ಮಾಹಿತಿಯನ್ನು ಬದಲಾವಣೆಗೊಳಿಸುವುದಿಲ್ಲ.

•ಹಾಗೂ ಇದರಿಂದಾಗಿ ಜಾತಿ ತಾರತಮ್ಯಗಳ ಅಥವಾ ಇನ್ನಿತರ ತಾರತಮ್ಯಗಳ ಕುರಿತಾಗಿ, ಕೃತಕ ಬುದ್ಧಿಮತ್ತೆಯು ಅಭಿಪ್ರಾಯವನ್ನು ನೀಡುವ ಸಾಧ್ಯತೆ ಇರುತ್ತದೆ.

ಆಸ್ತಿಗಳ ಉಲ್ಲಂಘನೆ:

•ಕೃತಕ ಬುದ್ಧಿಮತ್ತೆಯು ಬೇರೆ ಲೇಖಕರು ಅಥವಾ ವ್ಯಕ್ತಿಗಳ ಮಾಹಿತಿಗಳನ್ನು ಬಳಸಿಕೊಳ್ಳುತ್ತದೆ. ಮತ್ತು ಹೊಸ ಮಾಹಿತಿಗಳನ್ನು ಸೃಷ್ಟಿಸುತ್ತದೆ.

•ಇದರಿಂದಾಗಿ ಮೂಲ ವ್ಯಕ್ತಿಗಳಿಗೆ ಕ್ರೆಡಿಟ್ ಸಿಗದೆ ಹೋಗಬಹುದು.

ಈ ರೀತಿಯಾಗಿ ಕೃತಕ ಬುದ್ಧಿಮತ್ತೆಯು ಹಲವಾರು ಉಪಯೋಗಗಳನ್ನು ನೀಡುತ್ತದೆ. ಜೊತೆಗೆ ಹಲವು ಸಮಸ್ಯೆಗಳನ್ನು ಕೂಡ ತರುತ್ತದೆ.

ಒಟ್ಟಾರೆಯಾಗಿ ಇದು ದೇಶದ ಬೆಳವಣಿಗೆಗೆ ಅಪಾರ ಕೊಡುಗೆಯನ್ನು ನೀಡಲಿದೆ.

ಎಲ್ಲ ರೀತಿಯ ಕೆಲಸಗಳಲ್ಲಿ ವೇಗ ಮತ್ತು ದಕ್ಷತೆಯನ್ನು ಹೆಚ್ಚಿಸುತ್ತದೆ. ದೇಶದ ಮುಂದಿನ ಭವಿಷ್ಯಕ್ಕೆ ಇದು ಉತ್ತಮವಾದ ಕೊಡುಗೆಗಳನ್ನು ನೀಡಲಿದೆ.

ಇನ್ನಷ್ಟು ಮಾಹಿತಿಗಾಗಿ:indiaai.gov.in

ಇದನ್ನು ಓದಿ: sports rules 2026

 

Leave a Comment

Scroll to Top

Discover more from nirantarasuddhi

Subscribe now to keep reading and get access to the full archive.

Continue reading