PM E-DRIVE Scheme:ವಿದ್ಯುತ್ ವಾಹನಗಳಿಗೆ ಹೊಸ ಉತ್ತೇಜನ

Spread the love

PM E-DRIVE Scheme: ಭಾರತ ಸರ್ಕಾರವು ವಾಹನಗಳಿಗೆ ಸಂಬಂಧಪಟ್ಟಂತೆ PM E-DRIVE ಎಂಬ ಯೋಜನೆಯನ್ನು ಜಾರಿಗೊಳಿಸಿದೆ.

PM E-DRIVE Scheme
PM E-DRIVE Scheme

PM E-DRIVE Scheme:ಭಾರತದಲ್ಲಿ ವಿದ್ಯುತ್ (ಎಲೆಕ್ಟ್ರಿಕ್) ವಾಹನಗಳ (EV) ಬಳಕೆಯನ್ನು ಹೆಚ್ಚಿಸುವುದು. ಈ ಯೋಜನೆಯ ಮೂಲ ಉದ್ದೇಶವಾಗಿದೆ. ಈ ಯೋಜನೆಯನ್ನು 2024ರ ಅಕ್ಟೋಬರ್ 1ರಂದು ಜಾರಿಗೊಳಿಸಲಾಯಿತು.

 

ಈ ಯೋಜನೆಯಲ್ಲಾಗಿರುವ ನವೀಕರಣಗಳು:

•ಜಾರಿಗೊಳಿಸುವಾಗ ಈ ಯೋಜನೆಯನ್ನು ಎರಡು ವರ್ಷದ ಅವಧಿಗೆ ರೂಪಿಸಲಾಗಿತ್ತು. ಅಂದರೆ ಮಾರ್ಚ್ 31,2026 ರ ತನಕ ರೂಪಿಸಲಾಗಿತ್ತು.

•ಹಾಗೂ ಇತ್ತೀಚಿನ ತಿದ್ದುಪಡಿಯಲ್ಲಿ ಮತ್ತೆರಡು ವರ್ಷ ಮುಂದೂಡಲಾಗಿದೆ. ಇದೀಗ ಮಾರ್ಚ್ 31, 2028 ರ ತನಕ ಯೋಜನೆಯನ್ನು ವಿಸ್ತರಿಸಲಾಗಿದೆ.

•ಹಾಗೂ ಜುಲೈ 31, 2026 ರ ತನಕ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಸಬ್ಸಿಡಿಯನ್ನು ವಿಸ್ತರಿಸಲಾಗಿದೆ.

•ಮತ್ತು ಇ-ರಿಕ್ಷಾ/ಇ-ಕಾರ್ಟ್‌ಗಳ ಸಬ್ಸಿಡಿಯನ್ನು ಮಾರ್ಚ್ 3, 2028 ರ ತನಕ ವಿಸ್ತರಿಸಿದೆ.

 

PM E-DRIVE Scheme: ಈ ಯೋಜನೆಯ ಪ್ರಮುಖ ಉದ್ದೇಶಗಳೇನು?

 

•ವೇಗವನ್ನು ಅಳವಡಿಸುವಿಕೆ:

ಇಲ್ಲಿ ಎಲೆಕ್ಟ್ರಾನಿಕ್ ವಾಹನಗಳು ಹೆಚ್ಚಾದಂತೆ ದೇಶವು ಸ್ವಾವಲಂಬಿಯಾಗುತ್ತಾ ಹೋಗುತ್ತದೆ. ಇದು ಮುಂದುವರಿಯುತ್ತಿರುವ ಜಗತ್ತಿನಲ್ಲಿ ಸ್ಥಾನವನ್ನು ದಿಟ್ಟಿಸಿಕೊಳ್ಳಲು ಭಾರತಕ್ಕೆ ಅವಶ್ಯವಾದ ಯೋಜನೆಯಾಗಿದೆ.

ಈ ನಿಟ್ಟಿನಲ್ಲಿ ಎಲೆಕ್ಟ್ರಾನಿಕ್ ವಾಹನಗಳ ಬಳಕೆಯ ವೇಗವನ್ನು ಹೆಚ್ಚಿಸುವ ಅವಶ್ಯಕತೆ ಇದೆ. ಇದಕ್ಕಾಗಿ ಭಾರತ ಸರ್ಕಾರವು ಈ ಯೋಜನೆಯ ಮೂಲಕ ಧನಸಹಾಯ ನೀಡುತ್ತಿದೆ.

ಎಲೆಕ್ಟ್ರಿಕ್ ದ್ವಿಚಕ್ರ, ತ್ರಿಚಕ್ರ , ಇ ಆಂಬುಲೆನ್ಸ್, ಇ ಟ್ರಕ್ ಗಳಿಗೆ ಆರ್ಥಿಕ ಸಹಾಯವನ್ನು ಮಾಡುತ್ತಿದೆ. ಇದರಿಂದಾಗಿ ಅವುಗಳ ಬಳಕೆಯನ್ನು ವೇಗವಾಗಿ ಹೆಚ್ಚಿಸಬಹುದಾಗಿದೆ.

•ಮಾಲಿನ್ಯದ ಕುಸಿತ:

ಪ್ರಸ್ತುತ ವಾಯುಮಾಲಿನ್ಯ ಗಣನೀಯವಾಗಿ ಹೆಚ್ಚಿದೆ. ಇದರಿಂದಾಗಿ ಶುದ್ಧ ಗಾಳಿಗೂ ಪರದಾಡುವ ಸ್ಥಿತಿ ಬಂದು ಒದಗಿದೆ. ಆಮ್ಲಜನಕವನ್ನು ಕೂಡ ಕೊಳ್ಳುವ ಪರಿಸ್ಥಿತಿ ಎದುರಾಗಬಹುದು.

ಈ ನಿಟ್ಟಿನಲ್ಲಿ ಮಾಲಿನ್ಯವನ್ನು ಕಡಿಮೆ ಮಾಡುವ ಅವಶ್ಯಕತೆ ಬಹಳಷ್ಟು ಇದೆ. ಹೀಗಾಗಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಒತ್ತು ನೀಡಬೇಕಾಗಿದೆ.

ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆಯಾಗಿಸುವುದು. ಮತ್ತು ಎಲೆಕ್ಟ್ರಿಕ್ ಬಳಕೆಯಿಂದ ವಾಯು ಮಾಲಿನ್ಯವನ್ನು ಕಡಿತಗೊಳಿಸುವುದು ಮೂಲ ಉದ್ದೇಶವಾಗಿದೆ.

•ಸಾರ್ವಜನಿಕ ಸಾರಿಗೆಯ ಬೆಳವಣಿಗೆ: 

ಜನಸಂಖ್ಯೆಗೆ ತಕ್ಕಂತೆ ಸಾರ್ವಜನಿಕ ಸಾರಿಗೆಗಳನ್ನು ಬಳಸಲಾಗುತ್ತದೆ. ಹಾಗೂ ನಗರ ಪ್ರದೇಶಗಳಲ್ಲಿ ಹೆಚ್ಚಿನ ಸಾರ್ವಜನಿಕ ವಾಹನಗಳು ರಸ್ತೆಯಲ್ಲಿ ಇರುತ್ತವೆ. ಇವುಗಳಿಂದಲೂ ಕೂಡ ಹೆಚ್ಚಿನ ವಾಯುಮಾಲಿನ್ಯ ಉಂಟಾಗುತ್ತದೆ.

ಹಾಗೂ ಈ ಯೋಜನೆಯಡಿಯಲ್ಲಿ ಇವಿ ಬಸ್ ಗಳ ಖರೀದಿಗೆ ಧನಸಹಾಯ ನೀಡಲಾಗುತ್ತದೆ. ಈ ಮೂಲಕ ಸಾರ್ವಜನಿಕ ಸಾರಿಗೆಯನ್ನು ಪರಿಸರಸ್ತೆಯನ್ನಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ.

•ಮೂಲಸೌಕರ್ಯದ ಅಭಿವೃದ್ಧಿ:

ಪ್ರಸ್ತುತ ಎಲೆಕ್ಟ್ರಾನಿಕ್ ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಳಸಲು ಪ್ರಾರಂಭಿಸಿದ್ದಾರೆ. ಅಂದರೆ ಅವುಗಳಿಗೆ ಅವಶ್ಯಕತೆ ಇರುವ ಮೂಲಸೌಕರ್ಯದ ಕೊರತೆ ಎದುರಾಗಿದೆ.

ಅವಶ್ಯಕವಾದ ಮೂಲ ಸೌಕರ್ಯ ವಾದಂತಹ ಚಾರ್ಜಿಂಗ್ ಪಾಯಿಂಟ್ ಗಳು ಪ್ರಸ್ತುತ ಎಲ್ಲೆಡೆ ಲಭ್ಯವಿಲ್ಲ. ಇವುಗಳನ್ನು ಹೆಚ್ಚಿಸುವ ಮೂಲಕ ಎಲೆಕ್ಟ್ರಾನಿಕ್ ವಾಹನಗಳಿಗೆ ಇನ್ನಷ್ಟು ಪುಷ್ಟಿ ನೀಡಬಹುದಾಗಿದೆ.

•ಸ್ವದೇಶಿ ಉತ್ಪಾದನೆ:

ಎಲೆಕ್ಟ್ರಾನಿಕ್ ವಾಹನಗಳ ಬಳಕೆಗೆ ಹಲವು ಕಾರಣಗಳಿವೆ. ಪ್ರಸ್ತುತ ಭಾರತವು ಪಳೆಯುಳಿಕೆ ಇಂಧನಗಳ ಮೇಲೆ ಅವಲಂಬಿತವಾಗಿದೆ.

ಅಂದರೆ ಅವುಗಳನ್ನು ಹೆಚ್ಚಾಗಿ ವಿದೇಶಗಳಿಂದಲೇ ಆಮದು ಮಾಡಿಕೊಳ್ಳುತ್ತಿದೆ.

ಎಲೆಕ್ಟ್ರಾನಿಕ್ ವಾಹನಗಳ ಹೆಚ್ಚಳದಿಂದಾಗಿ ಆಮದು ವೆಚ್ಚ ಕಡಿಮೆಯಾಗಿಸಬಹುದು. ಆದರೆ ಎಲೆಕ್ಟ್ರಾನಿಕ್ ವಾಹನಗಳ ತಯಾರಿಕೆ ಮತ್ತು ಅವುಗಳ ಬಿಡಿ ಭಾಗಗಳ ತಯಾರಿಕೆ, ಸ್ವದೇಶದಲ್ಲೆ ಮಾಡಬೇಕು.

ಇದರಿಂದಾಗಿ ಮತ್ತಷ್ಟು ವೆಚ್ಚವನ್ನು ಕಡಿಮೆಯಾಗಿಸಬಹುದು. ಜಾಗತಿಕವಾಗಿ ಪ್ರಭಾವ ಬೀರಬಹುದಾಗಿದೆ. ಹಾಗೂ ದೇಶದ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ.

ಈ ಯೋಜನೆಗೆ ಮೀಸಲಿಡಲಾದ ಬಜೆಟ್:

 

•ಒಟ್ಟಾರೆಯಾಗಿ ಈ PM E-DRIVE ಯೋಜನೆಗೆ 10,000 ಕೋಟಿ ಬಜೆಟ್ ಅನ್ನು ಮೀಸಲಿಡಲಾಗಿದೆ.

•2026-27ನೇ ಕೇಂದ್ರ ಬಜೆಟ್ ನಲ್ಲಿ ಪ್ರಸಕ್ತ ಸಾಲಿಗಾಗಿ ಹಣವನ್ನು ಬಿಡುಗಡೆ ಮಾಡಲಾಗಿದೆ.

•ಕೇಂದ್ರ ಬಜೆಟ್ ನ ಹಣ ಒಟ್ಟು ₹1,500 ಕೋಟಿ ರೂಗಳಾಗಿರುತ್ತದೆ.

•ಸಂಪೂರ್ಣ ಬಜೆಟ್ ಅನ್ನು ಬಳಸಿ. ದೇಶದ ಒಟ್ಟು 28.30 ಲಕ್ಷಕ್ಕೂ ಹೆಚ್ಚು ಎಲೆಕ್ಟ್ರಾನಿಕ್ ವಾಹನಗಳಿಗೆ ಸಬ್ಸಿಡಿ ನೀಡುವ ಉದ್ದೇಶವನ್ನು ಹೊಂದಲಾಗಿದೆ.

ಈ ಯೋಜನೆಯ ಲಾಭ ಯಾರಿಗೆಲ್ಲ ಸಿಗಲಿದೆ?

•ಸ್ವಂತ ವಾಹನ:

ಇಲ್ಲಿ ಸ್ವಂತ ಬಳಕೆಗೆ ವಾಹನ ಖರೀದಿ ಮಾಡುವವರಿಗೆ ಕೇಂದ್ರ ಸರ್ಕಾರದಿಂದ ಲಾಭ ದೊರೆಯುತ್ತದೆ. ಜೊತೆಗೆ ಕಚೇರಿ ಕೆಲಸಗಳಿಗಾಗಿಯೂ ಕೂಡ ಕೆಲವರು ವಾಹನಗಳ ಖರೀದಿ ಮಾಡುತ್ತಾರೆ.

ಈ ರೀತಿ ಖರೀದಿಯ ಎಲೆಕ್ಟ್ರಿಕ್ ಸ್ಕೂಟರ್ ಅಥವಾ ಬೈಕ್ ಇವುಗಳ ಖರೀದಿಗೆ ಸಬ್ಸಿಡಿ ದೊರೆಯಲಿದೆ. ಇದು ಸಣ್ಣ ಮಟ್ಟದ ಖರೀದಿ ಮಾಡುವವರಿಗೆ ಸಂತೋಷದ ವಿಷಯವಾಗಿದೆ.

•ವಾಣಿಜ್ಯಕ್ಕೆ ಸಂಬಂಧಪಟ್ಟ ವಾಹನಗಳು:

ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳ ಖರೀದಿಗೆ ಈ ಲಾಭ ದೊರೆಯುತ್ತದೆ. ಸರಕು ಸಾಧನೆ ಮಾಡುವ ಇ-ರಿಕ್ಷಾ, ಇ-ಆಟೋರಿಕ್ಷಗಳು, ಇ- ಕಾರ್ಟ್ ಗಳ ಖರೀದಿ ಮಾಡುವವರು. ಈ ಯೋಜನೆಯ ನೇರ ಲಾಭವನ್ನು ಪಡೆಯಬಹುದಾಗಿದೆ.

ದೊಡ್ಡ ಗಾತ್ರದ ಇ-ಟ್ರಕ್‌ ಗಳಿಂದಾಗಿ ಭಾರಿ ಪ್ರಮಾಣದಲ್ಲಿ ಮಾಲಿನ್ಯ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗೂ ಇಂತಹ ಟ್ರಕ್ ಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಬದಲಾಯಿಸುವುದು ಅವಶ್ಯವಾದದ್ದು.

ಈ ನಿಟ್ಟಿನಲ್ಲಿ ಇವುಗಳನ್ನು ಖರೀದಿಸುವ ಲಾಜಿಸ್ಟಿಕ್ಸ್ ಮತ್ತು ಸಾರಿಗೆ ಸಂಸ್ಥೆಗಳಿಗೆ ಸಬ್ಸಿಡಿ ನೀಡಲಾಗುತ್ತದೆ. ಇದು ಬಾರಿ ಪ್ರಮಾಣದಲ್ಲಿ ಮಾಲಿನ್ಯವನ್ನು ತಗ್ಗಿಸಲು ಕೊಡುಗೆ ನೀಡಿದಂತಾಗುತ್ತದೆ.

ಸಾರ್ವಜನಿಕ ಸಾರಿಗೆ ಸಂಸ್ಥೆಗಳು:

ಸರ್ಕಾರವು ತನ್ನ ಸಾರಿಗೆ ವ್ಯವಸ್ಥೆಯನ್ನು ಮಾಲಿನ್ಯ ರಹಿತ ಮಾಡುವ ಉದ್ದೇಶವನ್ನು ಹೊಂದಿದೆ. ಸರ್ಕಾರದ ಹಲವಾರು ಬಸ್ಸುಗಳು ದಿನನಿತ್ಯ ಓಡಾಡುವುದುಂಟು. ಹಾಗೂ ಇವುಗಳು ಕೂಡ ಮಾಲಿನ್ಯಕ್ಕೆ ಕೊಡುಗೆ ನೀಡುತ್ತವೆ.

ಈ ಪರಿಸ್ಥಿತಿಯನ್ನು ಮಟ್ಟ ಹಾಕುವುದು ಅನಿವಾರ್ಯವಾಗಿದೆ. ಇದಕ್ಕಾಗಿ ಸರ್ಕಾರಿ ಬಸ್ಸುಗಳ ಸಂಸ್ಥೆಗಳಿಗೆ ಸಬ್ಸಿಡಿ ನೀಡಲಾಗುತ್ತದೆ. ಉದಾಹರಣೆಗೆ ಕರ್ನಾಟಕದ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ಸುಗಳು ಈ ಸಬ್ಸಿಡಿಯನ್ನು ಪಡೆಯುತ್ತವೆ.

ಹಾಗೂ ಇವುಗಳಲ್ಲಿ ಇವಿ ಬಸ್ಸುಗಳನ್ನು ಚಾಲನೆಗೆ ತರುವ ಮೂಲಕ.ಮಾಲಿನ್ಯದ ಪ್ರಮಾಣವನ್ನು ಕೊಂಚಮಟ್ಟಿಗೆ ತಗ್ಗಿಸಬಹುದಾಗಿದೆ.

ಆರೋಗ್ಯ ಸೇವೆಗಳು:

ಆರೋಗ್ಯ ಕ್ಷೇತ್ರದಲ್ಲಿ ಆಂಬುಲೆನ್ಸ್ ವಾಹನಗಳ ಬಳಕೆ ಆಗುತ್ತದೆ. ಹಾಗೂ ಮಾಲಿನ್ಯಕ್ಕೆ ಕೊಡುಗೆ ಕೊಡುವಲ್ಲಿ ಈ ವಾಹನಗಳು ಹೊರತಾಗಿಲ್ಲ.

ಈ ನಿಟ್ಟಿನಲ್ಲಿ ಆರೋಗ್ಯ ಕ್ಷೇತ್ರದಲ್ಲೂ ಎಲೆಕ್ಟ್ರಿಕ್ ವ್ಯವಸ್ಥೆ ತರಲು ಯೋಚಿಸಲಾಗಿದೆ. ಇ-ಆಂಬುಲೆನ್ಸ್ ಗಳನ್ನು ಖರೀದಿ ಮಾಡಲು ಆರೋಗ್ಯ ಸಂಸ್ಥೆಗಳು ಧನಸಹಾಯವನ್ನು ಪಡೆಯಬಹುದಾಗಿದೆ. ಇದರಿಂದಾಗಿ ಪರಿಸರಸ್ನೇಹಿ ಆಂಬುಲೆನ್ಸ್ ಗಳ ಬಳಕೆ ಹೆಚ್ಚಾಗಿ ಪ್ರಾರಂಭವಾಗಲಿದೆ.

ಚಾರ್ಜಿಂಗ್ ಪಾಯಿಂಟ್ ಹೂಡಿಕೆ:

ಕೇವಲ ಎಲೆಕ್ಟ್ರಾನಿಕ್ ವಾಹನಗಳನ್ನು ತಂದರೆ ಸಾಲದು. ಅವುಗಳಿಗೆ ತಕ್ಕಂತೆ ಮೂಲಭೂತ ಸೌಕರ್ಯವನ್ನು ಒದಗಿಸುವುದು ಅಗತ್ಯ.

ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಪಾಯಿಂಟ್ ನ ಅವಶ್ಯಕತೆ ಇದೆ. ಇವುಗಳನ್ನು ಸ್ಥಾಪಿಸಲು ಬಯಸುವಂತಹ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಿಗೆ ಅನುದಾನ ದೊರೆಯಲಿದೆ.

ಹೆದ್ದಾರಿಗಳು, ಸಾರ್ವಜನಿಕ ಸ್ಥಳಗಳು ಮತ್ತು ವಾಣಿಜ್ಯ ಸಂಕೀರ್ಣಗಳಲ್ಲಿ ಇವುಗಳ ಸ್ಥಾಪನೆಯಾಗಬೇಕಿದೆ. ಈ ರೀತಿಯಾಗಿ ಇವಿ ಫಾಸ್ಟ್ ಚಾರ್ಜಿಂಗ್ ಪಾಯಿಂಟ್ ಗಳ ಸ್ಥಾಪನೆಯೂ ಎಲೆಕ್ಟ್ರಾನಿಕ್ ವಾಹನಗಳಿಗೆ ಮತ್ತಷ್ಟು ಪುಷ್ಠಿ ನೀಡುತ್ತದೆ.

ಯೋಜನೆ ಲಭ್ಯವಿಲ್ಲದಿರುವುದು:

ಇದು ಖಾಸಗಿ ಅಥವಾ ವೈಯಕ್ತಿಕ ಕ್ಷೇತ್ರಗಳಿಗೆ ಮಾತ್ರವೇ ಮೀಸಲಾಗಿರುತ್ತದೆ. ಕೇಂದ್ರ ಅಥವಾ ರಾಜ್ಯ ಸರ್ಕಾರದ ಇಲಾಖೆಗಳ ಖರೀದಿಗೆ ಅನುದಾನ ದೊರೆಯುವುದಿಲ್ಲ.

ಜೊತೆಗೆ ಇವುಗಳಿಗೆ ಸಂಬಂಧಪಟ್ಟ ಕಚೇರಿಗಳ ಬಳಕೆಗೂ ಕೂಡ ಅನುದಾನ ನೀಡಲಾಗುವುದಿಲ್ಲ.

ಈ ರೀತಿಯಾಗಿ ಸರ್ಕಾರವು ಅನುದಾನ, ಸಬ್ಸಿಡಿ ದರಗಳಿಂದಾಗಿ ಈ ಯೋಜನೆಯನ್ನು ಜಾರಿಗೆ ತಂದಿದೆ. ಹಾಗೂ ಮೂಲಸೌಕರ್ಯಗಳು ಇನ್ನಷ್ಟು ಬೆಳವಣಿಗೆ ಹೊಂದಬೇಕಾಗಿದೆ.

ಇದರಿಂದಾಗಿ ಸಾರ್ವಜನಿಕರು ವಾಹನಗಳನ್ನು ಕೊಳ್ಳಲು ಮತ್ತಷ್ಟು ಪುಷ್ಠಿ ನೀಡಿದಂತಾಗುತ್ತದೆ.

ಈ ಒಂದು ಯೋಜನೆಯು ಸರ್ಕಾರದ ಮಹತ್ವದ ಹೆಜ್ಜೆಯಾಗಿದೆ. ಆದರೂ ಕೂಡ ಇದರ ಅನುಷ್ಠಾನದಲ್ಲಿ ಹಲವಾರು ಸವಾಲುಗಳಿವೆ.

PM E-DRIVE ಯೋಜನೆಗಿರುವ ಸವಾಲುಗಳು:

•ಸಬ್ಸಿಡಿಯಲ್ಲಿ ಕಡಿತ:

ಯೋಜನೆಯ ನಿಯಮದ ಪ್ರಕಾರ, ಸಬ್ಸಿಡಿಯನ್ನು ಕಡಿತಗೊಳಿಸಲಾಗುತ್ತದೆ. ಅಂದರೆ ವರ್ಷದಿಂದ ವರ್ಷಕ್ಕೆ ಕ್ರಮೇಣವಾಗಿ ಇದು ಕಡಿತಗೊಳ್ಳುತ್ತಾ ಹೋಗುತ್ತದೆ.

ಉದಾಹರಣೆಗೆ ದ್ವಿಚಕ್ರವಾಹನಗಳ ಸಬ್ಸಿಡಿ, ಮೊದಲ ವರ್ಷಕ್ಕಿಂತ ಎರಡನೇ ವರ್ಷಕ್ಕೆ ಅರ್ಧದಷ್ಟು ಕಡಿಮೆಯಾಗಿದೆ. ಇದು ಗ್ರಾಹಕರ ಮೇಲೆ ವಿಪರೀತ ಹೊರೆಯನ್ನು ಹರಿಸುತ್ತದೆ.

ಕೆಲವೊಮ್ಮೆ ಮಧ್ಯಮ ಕುಟುಂಬ ವರ್ಗದವರು ಏನನ್ನಾದರೂ ಕೊಳ್ಳಲು ವರ್ಷಗಟ್ಟಲೆ ಯೋಜನೆ ಹಾಕುತ್ತಾರೆ.

ಇಂತಹ ಸಂದರ್ಭಗಳಲ್ಲಿ ಅವರು ಕೊಳ್ಳಲು ಮನಸ್ಸು ಮಾಡದೆ ಇರಬಹುದು. ಇದರಿಂದಾಗಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಕಡಿಮೆಯಾಗುವ ಸಾಧ್ಯತೆ ಇರಲಿದೆ. ಈ ನಿಯಮಗು ಈ ಯೋಜನೆಗೆ ಹೊಡೆತ ನೀಡುವ ಸಾಧ್ಯತೆ ಇರುತ್ತದೆ.

•ಮೂಲ ಸೌಲಭ್ಯದ ಕೊರತೆ:

ಚಾರ್ಜಿಂಗ್ ಪಾಯಿಂಟ್ ಗಳ ಸ್ಥಾಪನೆಗೆ ಸಾವಿರ ಕೋಟಿ ಅನುದಾನವನ್ನು ಮೀಸಲಿಡಲಾಗಿದೆ. ಆದರೂ ಕೂಡ ಹೆದ್ದಾರಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಇವುಗಳ ಸ್ಥಾಪನೆ ಸವಾಲಿನ ವಿಷಯವಾಗಿದೆ.

ಹಾಗೂ ಒಂದೇ ಸಮನೆ ಸಾವಿರಾರು ವಾಹನಗಳು ಚಾರ್ಜ್ ಆಗುತ್ತವೆ. ಇಂತಹ ಸಮಯದಲ್ಲಿ ಇದು ವಿದ್ಯುತ್ ಗ್ರಿಡ್ ಗಳ ಮೇಲೆ ಪರಿಣಾಮ ಬೀರಬಹುದು. ಬಾರಿ ಪ್ರಮಾಣದ ಒತ್ತಡವನ್ನು ಹೇರುವ ಸಾಧ್ಯತೆ ಇರುತ್ತದೆ.

ಇದರಿಂದಾಗಿ ಗ್ರಿಡ್ ನ ಬೆಳವಣಿಗೆ ಅಗತ್ಯವಿದೆ. ಅದನ್ನು ಆಧುನಿಕರಣ ಗೊಳಿಸುವ ಮೂಲಕ ಈ ಸವಾಲಿಗೆ ತೆರೆ ಎಳೆಯಬಹುದಾಗಿದೆ.

•ಉತ್ಪಾದನಾ ನಿಯಮಗಳು:

ಈ ವಾಹನಗಳಿಗೆ ಬಳಕೆಯಾಗುವಂತಹ ಬಿಡಿ ಭಾಗಗಳು ಭಾರತದಲ್ಲಿ ತಯಾರಾಗಿರಬೇಕು. ಭಾರತದಲ್ಲಿ ಉತ್ಪಾದನೆಯಾದರೆ ಮಾತ್ರವೇ ಸಬ್ಸಿಡಿ ಹಣ ದೊರಕುತ್ತದೆ.

ಪ್ರಸ್ತುತ ಭಾರತದಲ್ಲಿ ಪೂರ್ಣ ಪ್ರಮಾಣದಲ್ಲಿ ಎಲ್ಲಾ ಬಿಡಿ ಭಾಗಗಳ ತಯಾರಿಕೆ ನಡೆಯುತ್ತಿಲ್ಲ. ಉತ್ಪಾದಿಸುವಂತಹ ಪರಿಸರದ ವ್ಯವಸ್ಥೆ ಇನ್ನೂ ಕೂಡ ಸಿದ್ಧವಾಗಿಲ್ಲ. ಹೀಗಿರುವಾಗ ಸಬ್ಸಿಡಿ ದೊರೆಯುವ ಸಾಧ್ಯತೆ ಇರುವುದಿಲ್ಲ.

ಈ ನಿಯಮವನ್ನು ಪಾಲಿಸಲು ಆಟೋಮೊಬೈಲ್ ಕಂಪನಿಗಳಿಗೆ ಕಠಿಣವಾಗಿದೆ.

•ಬ್ಯಾಟರಿ ಮತ್ತು ತಂತ್ರಜ್ಞಾನ:

ಈ ಯೋಜನೆ ಕೆಲವು ಮಿತಿಗಳನ್ನು ಹೊಂದಿದೆ. ಇದು ಕೇವಲ ಸುಧಾರಿತ ಕೆಮಿಸ್ಟ್ರಿ ಬ್ಯಾಟರಿಗಳಿಗೆ ಮಾತ್ರವೇ ಸಬ್ಸಿಡಿ ನೀಡುತ್ತದೆ.

ಭಾರತದ ತೀವ್ರ ಬೇಸಿಗೆ ಹಾಗೂ ಹವಾಮಾನಕ್ಕೆ ತಕ್ಕಂತೆ ಬ್ಯಾಟರಿಗಳನ್ನು ಉತ್ಪಾದಿಸಬೇಕು.

ಹಾಗೂ ಅವುಗಳು ದೀರ್ಘಕಾಲ ಬಾಳಿಕೆ ಬರುವಂತಿರಬೇಕು. ಇಂತಹ ಬ್ಯಾಟರಿಯನ್ನು ಉತ್ಪಾದನೆ ಮಾಡುವುದು ಉತ್ಪಾದಕರಿಗೆ ದೊಡ್ಡ ಸವಾಲಿನ ವಿಷಯವಾಗಿದೆ.

•ಸಾರಿಗೆ ಮತ್ತು ಟ್ರಕ್; ನಿಧಾನ ಗತಿ:

ಇವಿ ಬಸ್ ಗಳು ಮತ್ತು ಟ್ರಕ್ ಗಳು ಇವುಗಳ ಬೆಲೆ ಸಾಮಾನ್ಯವಾಗಿ ಡೀಸೆಲ್ ವಾಹನಗಳಿಗಿಂತ ಹೆಚ್ಚಾಗಿರುತ್ತದೆ. ಡೀಸೆಲ್ ವಾಹನಗಳಿಗಿಂತ ಎರಡು ಮೂರು ಪಟ್ಟು ಹೆಚ್ಚಿರುವ ಸಾಧ್ಯತೆ ಇರುತ್ತದೆ.

ಹಾಗೂ ಈ ವಾಹನಗಳಿಗೆ ಬ್ಯಾಂಕುಗಳು ಸುಲಭವಾಗಿ ಸಾಲ ನೀಡುತ್ತಿಲ್ಲ. ಈ ರೀತಿಯಾದ ಬ್ಯಾಂಕುಗಳ ಹಿಂಜರಿಕೆಯೂ ಕೂಡ ಈ ಯೋಜನೆಯು ವೇಗವಾಗಿ ಸಾಗಲು ಅಡ್ಡವಾಗುತ್ತಿದೆ.

ಈ ರೀತಿಯಾಗಿ ಈ ಯೋಜನೆಯ ಹಲವಾರು ಉದ್ದೇಶ, ಉಪಯೋಗಗಳ ಜೊತೆಗೆ ಸವಾಲುಗಳನ್ನು ಕೂಡ ಹೊಂದಿದೆ.

ಒಂದು ವೇಳೆ ಯೋಜನೆಯು ಯಶಸ್ವಿಯಾದಲ್ಲಿ, ಇದೊಂದು ಐತಿಹಾಸಿಕ ಹೆಜ್ಜೆಯಾಗಲಿದೆ. ಸುಲಭವಾಗಿ ದೇಶ ಸ್ವಾವಲಂಬಿ ಆಗಬಹುದು.

ಹಾಗೂ ಮಾಲಿನ್ಯವನ್ನು ಕೂಡ ತಡೆಗಟ್ಟಬಹುದು. ಇದು ಭವಿಷ್ಯದಲ್ಲಿ ದೇಶದ ಜಾಗತಿಕ ನಾಯಕತ್ವಕ್ಕೆ ಕೊಡುಗೆ ನೀಡಲಿದೆ.

ಇನ್ನಷ್ಟು ಮಾಹಿತಿಗಾಗಿ: PIB

ಇದನ್ನು ಓದಿ: INDIA AI MISSION

Leave a Comment

Scroll to Top

Discover more from nirantarasuddhi

Subscribe now to keep reading and get access to the full archive.

Continue reading