National Quantum Mission 2026: ರಾಷ್ಟ್ರೀಯ ಕ್ವಾಂಟಮ್ ಮಿಷನ್ ಎಂಬುದು ಭಾರತ ಸರ್ಕಾರದ ಪ್ರಮುಖ ಯೋಜನೆಯಾಗಿದೆ. ಇದೊಂದು ಎಂಟು ವರ್ಷಗಳ ಬೃಹತ್ ಯೋಜನೆ. ಭಾರತದಲ್ಲಿ ಕ್ವಾಂಟಮ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಇದನ್ನು ರೂಪಿಸಲಾಗಿದೆ.

National Quantum Mission 2026: ಏನಿದು ರಾಷ್ಟ್ರೀಯ ಕ್ವಾಂಟಮ್ ಮಿಷನ್?
ಇದು ಭೌತಶಾಸ್ತ್ರದಲ್ಲಿ ಬರುವಂತಹ ಒಂದು ವಿಷಯವಾಗಿದೆ. ಕ್ವಾಂಟಮ್ ಮೆಕ್ಯಾನಿಕ್ಸ್ ಎಂಬ ನಿಯಮದ ಆಧಾರದ ಮೇಲೆ ಕಾರ್ಯನಿರ್ವಹಿಸುವ ಒಂದು ತಂತ್ರಜ್ಞಾನವೇ ಕ್ವಾಂಟಮ್ ಕಂಪ್ಯೂಟಿಂಗ್.
ನಾವು ಬಳಸುವ ಮೊಬೈಲ್ ಮತ್ತು ಕಂಪ್ಯೂಟರ್ಗಳಿಗೆ ಅತ್ಯಂತ ಸಂಕೀರ್ಣವಾದ ಲೆಕ್ಕಾಚಾರಗಳನ್ನು ಮಾಡಲು ಸಾಧ್ಯವಿಲ್ಲ. ಆದರೆ ಈ ಅಂಶವು ಕೆಲವೇ ಸೆಕೆಂಡುಗಳಲ್ಲಿ ಅದನ್ನು ಸಾಧ್ಯಗೊಳಿಸುತ್ತದೆ.
ತಂತ್ರಜ್ಞಾನ ಮತ್ತು ವಿಜ್ಞಾನ ಇಲಾಖೆಗಳ ಅಡಿಯಲ್ಲಿ ಇದು ಕಾರ್ಯನಿರ್ವಹಿಸುತ್ತಿದೆ. ಇದಕ್ಕೆ ಮೀಸಲಿಟ್ಟಿರುವಂತಹ ಬಜೆಟ್ ನ ಒಟ್ಟು ಮೊತ್ತ 6,003.65 ಕೋಟಿ ಆಗಿರುತ್ತದೆ.
ಈ ಯೋಜನೆ ಅಡಿಯಲ್ಲಿ 4 ಥೀಮ್ಯಾಟಿಕ್ ಹಬ್ ಗಳನ್ನು ಸ್ಥಾಪಿಸಲಾಗಿದೆ.
National Quantum Mission 2026: 4 ಥೀಮ್ಯಾಟಿಕ್ ಹಬ್ ಗಳು:
•ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರಿನಲ್ಲಿ ಕ್ವಾಂಟಮ್ ಕಂಪ್ಯೂಟಿಂಗ್ ಅನ್ನು ಸ್ಥಾಪಿಸಲಾಗಿದೆ.
ಇಲ್ಲಿ 50 ರಿಂದ 1000ದ ತನಕ ಫಿಸಿಕಲ್ ಕ್ಯೂಬಿಟ್ಗಳ ಕಂಪ್ಯೂಟರ್ ಅಭಿವೃದ್ಧಿಯನ್ನು ಮಾಡಲಾಗುತ್ತದೆ.
•ಇನ್ನೊಂದು ಹಬ್ ಮದ್ರಾಸ್ ನ ಐಐಟಿಯಲ್ಲಿ ಸ್ಥಾಪನೆಯಾಗಿದೆ. ಇಲ್ಲಿ 2,000 ಕಿಲೋಮೀಟರ್ ಇರುವ ನಗರಗಳ ನಡುವೆ ಸುಕ್ಷಿತವಾದ ಉಪಗ್ರಹ ಸಂಪರ್ಕ ಜಾಲವನ್ನು ಅಭಿವೃದ್ಧಿಪಡಿಸಲಾಗುವುದು.
•ಬಾಂಬೆ ಐಐಟಿ ನೇತೃತ್ವದಲ್ಲಿ ಒಂದು ಹಬ್ ಅನ್ನು ಸ್ಥಾಪಿಸಲಾಗಿದೆ. ಇಲ್ಲಿ ಪರಮಾಣು ಗಡಿಯಾರಗಳು ಮತ್ತು ಮ್ಯಾಗ್ನೆಟೋಮೀಟರ್ಗಳ ತಯಾರಿಕೆ ನಡೆಯುತ್ತದೆ.
•ಇನ್ನು ಐಐಟಿ ದೆಹಲಿಯಲ್ಲಿ ಹಬ್ ಸ್ಥಾಪನೆಯಾಗಿದೆ. ಇಲ್ಲಿ ಈ ತಂತ್ರಜ್ಞಾನಕ್ಕೆ ಅಗತ್ಯವಿರುವ ಸೂಪರ್ ಕಂಡಕ್ಟರ್ ಗಳ ಸಂಶೋಧನೆ ನಡೆಯಲಿದೆ.
National Quantum Mission 2026: ಈ ಯೋಜನೆಯ ಉದ್ದೇಶಗಳು ಈ ರೀತಿ ಇವೆ:
•ಕಮ್ಯುನಿಕೇಷನ್:
ಸುರಕ್ಷಿತವಾದ ಉಪಗ್ರಹ ಆಧಾರಿತ ಕ್ವಾಂಟಮ್ ಸಂಪರ್ಕ ಜಾಲವನ್ನು ಹೆಚ್ಚಿಸುವುದು. ಇದು ಇದರ ಮೂಲ ಉದ್ದೇಶವಾಗಿದೆ. ಇದು ದೇಶಾದ್ಯಂತ ಒಟ್ಟು 2,000 ಕಿಲೋಮೀಟರ್ ವ್ಯಾಪ್ತಿಯನ್ನು ಒಳಗೊಂಡಿರುತ್ತದೆ.
• ಕಂಪ್ಯೂಟಿಂಗ್:
ಇಲ್ಲಿ ಸೂಪರ್ ಕಂಡಕ್ಟಿಂಗ್ ಮತ್ತು ಫೋಟೋನಿಕ್ ತಂತ್ರಜ್ಞಾನಗಳನ್ನು ಆದರಿಸಲಾಗುತ್ತದೆ. ಮತ್ತು ಈ ಮೂಲಕ ಪ್ರೊಸೆಸರ್ ಗಳನ್ನು ತಯಾರಿಸಲಾಗುತ್ತದೆ.
ಹಾಗೂ ಇಲ್ಲಿ 50 ರಿಂದ 1,000 ಫಿಸಿಕಲ್ ಕ್ಯೂಬಿಟ್ ಸಾಮರ್ಥ್ಯದಲ್ಲಿ. ಮತ್ತು ಮಧ್ಯಮ ಪ್ರಮಾಣದಲ್ಲಿ ಕ್ವಾಂಟಮ್ ಕಂಪ್ಯೂಟರ್ ಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಲಾಗಿದೆ.
•ಮೆಟ್ರೋಲಜಿ ಮತ್ತು ಸೆನ್ಸಿಂಗ್:
ಅತ್ಯಂತ ನಿಖರವಾದ ನ್ಯಾವಿಗೇಶನ್ ನಡೆಸುವುದು. ಮತ್ತು ಭೂಗರ್ಭದ ಸಂಶೋಧನೆಗೆ ಹೆಚ್ಚು ಸೂಕ್ಷ್ಮತೆ ಇರುವ ಮ್ಯಾಗ್ನೆಟೋಮೀಟರ್ಗಳ ಅವಶ್ಯಕತೆ ಇರುತ್ತದೆ. ಹಾಗೂ ಅವುಗಳ ತಯಾರಿಕೆಯ ಉದ್ದೇಶವನ್ನು ಈ ಮಿಷನ್ ಹೊಂದಿದೆ.
ಹಾಗೂ ಇಲ್ಲಿ ನಿಖರವಾದ ಪರಮಾಣು ಗಡಿಯಾರವನ್ನು ವಿನ್ಯಾಸಗೊಳಿಸಲಾಗುತ್ತದೆ. ಮತ್ತು ಇವುಗಳನ್ನು ರಕ್ಷಣಾ ಮತ್ತು ಸಂವಹನ ವ್ಯವಸ್ಥೆ ಗಳಿಗಾಗಿ ಬಳಸಲಾಗುತ್ತದೆ.
•ಕ್ವಾಂಟಮ್ ಡಿವೈಸಸ್ ಮತ್ತು ಮೆಟೀರಿಯಲ್ಸ್:
ಕ್ವಾಂಟಮ್ ತಂತ್ರಜ್ಞಾನಕ್ಕೆ ಸೂಪರ್ ಕಂಡಕ್ಟರ್ ಗಳು ಮತ್ತು ಟೊಪೊಲಾಜಿಕಲ್ ಗಳ ಅಗತ್ಯವಿರುತ್ತದೆ. ಇವುಗಳನ್ನು ಶೋಧಿಸುವುದು ಕೂಡ ಮುಖ್ಯ ಉದ್ದೇಶವಾಗಿದೆ.
ಹಾಗೂ ಹೊಸ ತಲೆಮಾರಿನ ಚಿಪ್ ಗಳು. ಮತ್ತು ಸೆಮಿಕಂಡಕ್ಟರ್ ಉಪಕರಣಗಳನ್ನು ಸ್ಥಳೀಯವಾಗಿ ಉತ್ಪಾದಿಸುವ ಉದ್ದೇಶವನ್ನು ಹೊಂದಿದೆ.
ಈ ರೀತಿಯಾಗಿ ವೈಜ್ಞಾನಿಕ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಬರುವುದು ಇದರ ಮೂಲ ಉದ್ದೇಶ. ಹಾಗೂ ಈ ಯೋಜನೆಯ ಜಾರಿಯಿಂದಾಗಿ ಹಲವು ಕ್ಷೇತ್ರಗಳಲ್ಲಿ ಬದಲಾವಣೆಗಳು ಉಂಟಾಗಲಿವೆ.
ಈ ಯೋಜನೆಯಿಂದ ಉಂಟಾಗುವ ಲಾಭಗಳೇನು?:
1.ಸೈಬರ್ ರಕ್ಷಣೆ:
ಸುರಕ್ಷತೆ: ತಂತ್ರಜ್ಞಾನಗಳು ಅಭಿವೃದ್ಧಿ ಹೊಂದುತ್ತಿದ್ದಂತೆ, ಅಸುರಕ್ಷತೆಯು ಹೆಚ್ಚುತ್ತಿದೆ. ಈ ಯೋಜನೆಯು ಸೈಬರ್ ಸುರಕ್ಷತೆಗೆ ಎಡೆ ಮಾಡಿಕೊಡಲಿದೆ.
ಇಲ್ಲಿ ವಿಶೇಷವಾಗಿ ಕ್ವಾಂಟಮ್ ಕೀ ಡಿಸ್ಟ್ರಿಬ್ಯೂಷನ್ (QKD) ಅನ್ನು ಬಳಸಲಾಗುತ್ತದೆ. ಇದನ್ನು ಹ್ಯಾಕ್ ಮಾಡಲು ಸಾಮಾನ್ಯವಾಗಿ ಕಂಪ್ಯೂಟರ್ ಗಳಿಂದ ಸಾಧ್ಯವಿಲ್ಲ.
ಈ ಮೂಲಕವಾಗಿ ರಾಜಕೀಯ, ಮಿಲಿಟರಿ, ಬ್ಯಾಂಕಿಂಗ್. ಹಾಗೂ ರಕ್ಷಣಾ ಕ್ಷೇತ್ರದಲ್ಲಿ ಸುರಕ್ಷತಾ ಸಂವಹನವನ್ನು ಮಾಡಬಹುದಾಗಿದೆ.
ಕ್ವಾಂಟಮ್ ಸೆನ್ಸರ್: ಸಾಮಾನ್ಯವಾಗಿ ಜಲಗಾಮಿ ನೌಕೆಗಳು. ಮತ್ತು ಯುದ್ಧ ವಿಮಾನಗಳಿಗೆ ಸಿಗ್ನಲ್ ಇಲ್ಲದ ಪ್ರದೇಶಗಳಲ್ಲಿ ಚಲಿಸಲು ಸಾಧ್ಯವಾಗುವುದಿಲ್ಲ. ಆದರೆ ಇಲ್ಲಿ ಕ್ವಾಂಟಮ್ ಸೆನ್ಸರ್ ಗಳನ್ನು ಬಳಸಲಾಗುತ್ತದೆ.
ಇವುಗಳ ಸಹಾಯದಿಂದಾಗಿ ಸಿಗ್ನಲ್ ಇಲ್ಲದೆಯೂ ನಿಖರವಾಗಿ ಚಲಿಸಬಹುದಾಗಿದೆ.
2.ಜೈವಿಕ ಮತ್ತು ಆರೋಗ್ಯ ಕ್ಷೇತ್ರ:
ಹೊಸ ಲಸಿಕೆಗಳು: ಹೊಸ ಲಸಿಕೆಗಳು, ಔಷಧಿಗಳು ಬಹಳ ಅಗತ್ಯವಾದುದು. ಪ್ರಸ್ತುತ ಕಾಲಘಟ್ಟದಲ್ಲಿ ಅನೇಕ ಹೊಸ ವೈರಸ್ ಗಳು ಜನ್ಮ ತಾಳುತ್ತಿದೆ.
ಉದಾಹರಣೆಗೆ ಕೊರೊನ ವೈರಸ್, ಇದು ಜಗತ್ತನ್ನು ಒಂದು ಬಾರಿ ದಂಗಾಗಿಸಿಬಿಟ್ಟಿತು.
ಇಂತಹ ಕಾಯಿಲೆಗಳಿಗೆ ಲಸಿಕೆಯನ್ನು ಕಂಡುಹಿಡಿಯುವುದು ಕಷ್ಟಕರ ಕೆಲಸ. ಇದಕ್ಕೆ ಸಾಮಾನ್ಯ ಕಂಪ್ಯೂಟರ್ಗಳು ಬಹಳಷ್ಟು ಸಮಯವನ್ನು ತೆಗೆದುಕೊಳ್ಳುತ್ತವೆ.
ಆದರೆ ಕ್ವಾಂಟಮ್ ಕಂಪ್ಯೂಟಿಂಗ್ ಅದಕ್ಕೆ ಅಗತ್ಯವಿರುವ ರಾಸಾಯನಿಕಗಳನ್ನು ಕೆಲವೇ ದಿನಗಳಲ್ಲಿ ವಿಶ್ಲೇಷಿಸುತ್ತದೆ. ಮತ್ತು ಸುಲಭವಾಗಿ ಲಸಿಕೆಯನ್ನು ಅತಿ ಬೇಗನೆ ಕಂಡುಹಿಡಿಯುತ್ತದೆ.
ಅಗತ್ಯ ಚಿಕಿತ್ಸೆ: ಗೂ ಕೆಲವೊಮ್ಮೆ ರೋಗಿಗಳ ಡಿಎನ್ಎ ಗೆ ತಕ್ಕಂತೆ ಚಿಕಿತ್ಸೆಯನ್ನು ಮಾಡಬೇಕಾಗುತ್ತದೆ. ಕಂಪ್ಯೂಟಿಂಗ್ ಮೂಲಕ ಅಂತಹ ಚಿಕಿತ್ಸಾ ಪದ್ಧತಿಯನ್ನು ಸುಲಭವಾಗಿ ವಿನ್ಯಾಸಗೊಳಿಸಬಹುದಾಗಿದೆ.
3.ತಾಂತ್ರಿಕತೆ:
ಜಾಗತಿಕ ಅಂಶಗಳು: ಪ್ರಸ್ತುತ ಕ್ವಾಂಟಮ್ ತಂತ್ರಜ್ಞಾನದಲ್ಲಿ ಹಲವು ದೇಶಗಳು ಮುಂಚೂಣಿಯಲ್ಲಿವೆ. ಅವುಗಳಲ್ಲಿ ಚೀನಾ, ಅಮೆರಿಕ, ಯೂರೋಪ್ ಕೂಡ ಹೌದು.
ಭಾರತದಲ್ಲಿ ಈ ತಂತ್ರಜ್ಞಾನವು ಯಶಸ್ವಿಯಾಗುವುದು ಬಹಳ ಅಗತ್ಯವಾಗಿದೆ. ಇದರಿಂದಾಗಿ ಭಾರತವು ಕೂಡ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಲಿದೆ. ಮತ್ತು ಆ ಕೆಲವೇ ಗಣ್ಯ ದೇಶಗಳ ಪಟ್ಟಿಗೆ ಸೇರ್ಪಡೆಯಾಗಲಿದೆ.
ಸ್ವದೇಶಿ ಉತ್ಪಾದನೆ: ಪರ್ ಕಂಡಕ್ಟರ್ ಮತ್ತು ಸೆಮಿ ಕಂಡಕ್ಟರ್ ಗಳನ್ನು ಭಾರತದಲ್ಲಿ ತಯಾರಿಸಲಾಗುತ್ತದೆ. ಇವುಗಳನ್ನು ಕ್ವಾಂಟಮ್ ಮೆಟೀರಿಯಲ್ಸ್ ಹಬ್ ಗಳ ಮೂಲಕ ತಯಾರು ಮಾಡಲಾಗುತ್ತದೆ.
ಈ ರೀತಿಯಾಗಿ ಸ್ವದೇಶಿ ಉತ್ಪಾದನೆಯಿಂದ ವಿದೇಶಗಳ ಮೇಲಿನ ಅವಲಂಬನೆ ತಪ್ಪಲಿದೆ. ಹಾಗೂ ಈ ಅಂಶಗಳಿಂದಾಗಿ ಆಮದು ಮಾಡಿಕೊಳ್ಳುವಂತಹ ವೆಚ್ಚವೂ ಕೂಡ ಕಡಿಮೆಯಾಗಲಿದೆ.
ಇದರಿಂದಾಗಿ ಜಾಗತಿಕ ನಾಯಕತ್ವದ ಜೊತೆಗೆ ಹಣವನ್ನು ಕೂಡ ಉಳಿತಾಯ ಮಾಡಬಹುದು. ಹಾಗೂ ತಂತ್ರಜ್ಞಾನದ ಅಭಿವೃದ್ಧಿಯು ಕೂಡ ಸಾಧ್ಯವಾಗಲಿದೆ.
4.ಕೈಗಾರಿಕೆ ಮತ್ತು ಆರ್ಥಿಕತೆ:
ಹೂಡಿಕೆ: ಈ ಕ್ವಾಂಟಮ್ ಯೋಜನೆಯಿಂದಾಗಿ ಭಾರತದ ಉದ್ಯಮಗಳಿಗೆ ಪುಷ್ಠಿ ನೀಡಬಹುದು. ಹಾಗೂ ಹೊಸ ಉದ್ಯಮಗಳ ಆರಂಭ ಕೂಡ ಸಾಧ್ಯವಾಗುತ್ತದೆ.
ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ಹೂಡಿಕೆಗಳನ್ನು ಆಕರ್ಷಿಸಲು ಸುಲಭವಾಗುತ್ತದೆ. ಜೊತೆ ಜೊತೆಗೆ ಉದ್ಯೋಗದ ಸೃಷ್ಟಿ ಕೂಡ ಸಾಧ್ಯವಾಗಲಿದೆ.
ಆಪ್ಟಿಮೈಸೇಶನ್: ಬ್ಯಾಂಕಿಂಗ್ ವಲಯದಲ್ಲಿ ರಿಸ್ಕ್ ಮ್ಯಾನೇಜ್ಮೆಂಟ್. ಮತ್ತು ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆಯ ಪೋರ್ಟ್ಫೋಲಿಯೊಗಳನ್ನು ಆಪ್ಟಿಮೈಸ್ ಮಾಡಬೇಕಾಗುತ್ತದೆ.
ಇದನ್ನು ನಿಖರವಾಗಿ ಮಾಡಲು ಈ ಒಂದು ಯೋಜನೆಯಿಂದ ಸುಲಭವಾಗುತ್ತದೆ.
5.ಹವಾಮಾನ ಮತ್ತು ಕೃಷಿ:
ಕೃಷಿ: ಕೃಷಿ ಕ್ಷೇತ್ರದಲ್ಲಿ ಸಾರಜನಕದ ಸ್ಥಿರೀಕರಣ ಪ್ರಕ್ರಿಯೆ ಬಹಳ ಅಗತ್ಯವಾದುದಾಗಿದೆ. ಹಾಗೂ ಇದನ್ನು ಸುಧಾರಿಸಲು ಹೊಸ ಜೈವಿಕ ರಾಸಾಯನಿಕಗಳ ಅವಶ್ಯಕತೆ ಇದೆ. ಈ ರಾಸಾಯನಿಕಗಳನ್ನು ತಯಾರಿಸಲು ಈ ತಂತ್ರಜ್ಞಾನವು ಸಹಾಯ ಮಾಡಲಿದೆ.
ಹಾಗೂ ಈ ತಂತ್ರಜ್ಞಾನವು ರಾಸಾಯನಿಕಗಳ ತಯಾರಿಕೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇಂಧನವನ್ನು ಉಳಿಸಲು ಸಹಾಯ ಮಾಡುತ್ತದೆ.
ಹವಮಾನ ಮುನ್ಸೂಚನೆ: ವಮಾನ ವೈಪರೀತ್ಯ ಎಂಬುದು ಕೃಷಿ ಕ್ಷೇತ್ರಕ್ಕೆ ತಟ್ಟಿದ ಶಾಪ. ಇದರಿಂದಾಗಿ ಕೃಷಿಯಲ್ಲಿ ಸಮತೋಲನಂತೆ ಕಾಪಾಡಿಕೊಳ್ಳುವುದು ಕಷ್ಟವಾಗಿದೆ. ಈ ನಿಟ್ಟಿನಲ್ಲಿ ಹವಾಮಾನ ವೈಪರೀತ್ಯಗಳ ಕುರಿತಾಗಿ ಮುಂಚಿತವಾಗಿ ತಿಳಿಯುವುದು ಅವಶ್ಯಕ.
ಈ ಹೊಸ ತಂತ್ರಜ್ಞಾನದ ಮೂಲಕ ಹವಮಾನದ ಕುರಿತಾಗಿ ಮುಂಚಿತವಾಗಿಯೇ ತಿಳಿದುಕೊಳ್ಳಬಹುದು. ಹಾಗೂ ಇದರಿಂದ ಬೆಳೆ ನಾಶವಾಗುವುದನ್ನು ತಡೆಯಬಹುದು.
National Quantum Mission 2026: ಈ ಯೋಜನೆಗಿರುವ ಸವಾಲುಗಳು:
•ತಾಂತ್ರಿಕ ಸವಾಲುಗಳು:
ಸ್ಥಿರತೆಯ ಅವಶ್ಯಕತೆ: ಕ್ವಾಂಟಮ್ ಕ್ಯೂಬಿಟ್ಗಳು ಬಹಳ ಸೂಕ್ಷ್ಮತೆಯನ್ನು ಹೊಂದಿರುತ್ತವೆ. ಇದಕ್ಕೆ ವಾತಾವರಣದಲ್ಲಿ ಸ್ಥಿರತೆಯ ಅವಶ್ಯಕತೆ ಇರುತ್ತದೆ. ಕೆಲವೊಮ್ಮೆ ವಾತಾವರಣದಲ್ಲಿ ತಾಪಮಾನಗಳ ಬದಲಾವಣೆ ಉಂಟಾಗುತ್ತದೆ. ಮತ್ತು ಕಂಪನಗಳು ಉಂಟಾಗುತ್ತವೆ.
ಇಂತಹ ಸಂದರ್ಭದಲ್ಲಿ ಇದು ತನ್ನ ಸ್ಥಿತಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ಲೆಕ್ಕಾಚಾರದಲ್ಲಿ ತಪ್ಪುಗಳು ಉಂಟಾಗಬಹುದಾಗಿದೆ. ಹಾಗೂ ಸರಿಯಾದ ಫಲಿತಾಂಶಗಳು ದೊರೆಯುವುದಿಲ್ಲ.
ವಾತಾವರಣ ತಂಪಾಗಿರಬೇಕು: ಹೆಚ್ಚಿನ ಕ್ವಾಂಟಮ್ ಕಂಪ್ಯೂಟರ್ ಗಳು ಕಾರ್ಯನಿರ್ವಹಿಸಲು ವಾತಾವರಣ ತಂಪಾಗಿರಬೇಕು. ಸಾಮಾನ್ಯವಾಗಿ ಇದಕ್ಕೆ ಮೈನಸ್ 273 ಡಿಗ್ರಿ ಸೆಲ್ಸಿಯಸ್ ಅಷ್ಟು ವಾತಾವರಣದ ಅವಶ್ಯಕತೆ ಇದೆ.
ಹಾಗೂ ಇದು ಬಾಹ್ಯಾಕಾಶದಲ್ಲಿನ ವಾತಾವರಣಕ್ಕಿಂತಲೂ ಕಡಿಮೆಯಾಗಿರುತ್ತದೆ. ಇದನ್ನು ಭೂಮಿಯ ಮೇಲೆ ಸೃಷ್ಟಿಸುವುದು ಕಠಿಣವಾಗಿದೆ. ಮತ್ತು ಬಹಳ ವೆಚ್ಚ ಉಂಟಾಗುವ ಸಾಧ್ಯತೆ ಇರಲಿದೆ.
ಸ್ಥಳೀಯ ಉತ್ಪಾದನೆ: ಪ್ರಸ್ತುತ ಭಾರತವು ಹಲವು ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಕ್ವಾಂಟಮ್ ಚಿಪ್ ಗಳು, ಗಡಿಯಾರಕ್ಕೆ ಬೇಕಾಗಿರುವ ಉಪಕರಣಗಳು ಮತ್ತು ಸೂಪರ್ ಕಂಡಕ್ಟಿಂಗ್ ವಸ್ತುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.
•ಮಾನವ ಸಂಪನ್ಮೂಲ:
ಕೊರತೆ: ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಸಾಫ್ಟ್ವೇರ್ ಡೆವಲಪರ್ ಗಳು ಮತ್ತು ಸಂಶೋಧಕರ ಅಗತ್ಯವಿದೆ.
ಹಾಗೂ ಇವರುಗಳು ಕಂಪ್ಯೂಟರ್ ಸೈನ್ಸ್, ಕ್ವಾಂಟಮ್ ಮೆಕ್ಯಾನಿಕ್ಸ್, ಮತ್ತು ಮೆಟೀರಿಯಲ್ ಇಂಜಿನಿಯರಿಂಗ್ ಗಳಲ್ಲಿ ಪರಿಣಿತಿಯನ್ನು ಹೊಂದಿರಬೇಕು.
ಹಾಗೂ ಪ್ರಸ್ತುತ ಇವರುಗಳ ಸಂಖ್ಯೆ ಭಾರತದಲ್ಲಿ ತೀರಾ ಕಡಿಮೆ ಇರುವುದು ದೊಡ್ಡ ಸವಾಲಿನ ವಿಷಯವಾಗಿದೆ.
ವಲಸೆ: ವಿದೇಶಿ ಮಾರುಕಟ್ಟೆ. ಮತ್ತು ಜಾಗತಿಕ ದೈತ್ಯ ಕಂಪನಿಗಳು ಉದ್ಯೋಗಿಗಳಿಗೆ ಆಕರ್ಷಕ ಕೊಡುಗೆಗಳನ್ನು ನೀಡುತ್ತವೆ. ಹಾಗೂ ಭಾರತದ ಇಂಜಿನಿಯರ್ ಗಳು ಮತ್ತು ಸಂಶೋಧಕರು ಇವುಗಳ ಆಕರ್ಷಣೆಗೆ ಒಳಗಾಗಿದ್ದಾರೆ.
ಮತ್ತು ಅವರುಗಳು ವಿದೇಶಗಳಿಗೆ ವಲಸೆ ಹೋಗುವ ಸಾಧ್ಯತೆ ಕೂಡ ಹೆಚ್ಚಾಗಿದೆ. ಇದು ಈ ಯೋಜನೆಯ ಜಾರಿಗೆ ಬಹುದೊಡ್ಡ ಸವಾಲಾಗಿದೆ.
•ಮೂಲಸೌಕರ್ಯದ ಕೊರತೆ:
ಪಾಠ ಮತ್ತು ಕೈಗಾರಿಕೆ: ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ಸಂಶೋಧನೆಗಳು ಕೇವಲ ಸಿದ್ದಾಂತಗಳಿಗೆ ಸೀಮಿತವಾಗುತ್ತಿವೆ. ಹಾಗೂ ಅವುಗಳು ಕೈಗಾರಿಕಾ ಕ್ಷೇತ್ರಕ್ಕೆ ಹೊಂದಿಕೆಯಾಗುತ್ತಿಲ್ಲ.
ಆ ಸಂಶೋಧನೆಗಳನ್ನು ಕೈಗಾರಿಕಾ ಕ್ಷೇತ್ರದಲ್ಲಿ ಉತ್ಪಾದನೆಯ ತನಕ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಹಾಗೂ ಈ ಕಾರ್ಯದಲ್ಲಿ ಭಾರತ ಇನ್ನೂ ಕೂಡ ಮೊದಲ ಹಂತದಲ್ಲಿರುವುದು ಸವಾಲಿನ ವಿಷಯವಾಗಿದೆ.
ಸೌಲಭ್ಯಗಳು ಸಿಗುತ್ತಿಲ್ಲ: ಬೆಳೆಯುತ್ತಿರುವ ಕ್ವಾಂಟಮ್ ಸ್ಟಾರ್ಟಪ್ ಗಳಿಗೆ ಕ್ಯೂಬಿಟ್ಗಳನ್ನು ಪರೀಕ್ಷಿಸುವುದು ಬಹಳ ಮುಖ್ಯವಾಗಿರುತ್ತದೆ.
ಹಾಗೂ ಈ ಪರೀಕ್ಷೆಗಳಿಗೆ ಕ್ವಾಂಟಮ್ ಹಾರ್ಡ್ವೇರ್ ಲ್ಯಾಬ್ ಗಳ ಕೊರತೆ ಇದೆ. ಹಾಗೂ ಪ್ರಸ್ತುತ ಅವರು ವಿದೇಶಿ ಕ್ಲೌಡ್ ಗಳನ್ನು ಅವಲಂಬಿಸಿದ್ದಾರೆ.
•ಜಾಗತಿಕ ಸ್ಪರ್ಧೆ:
ಅಮೆರಿಕ ಮತ್ತು ಚೀನಾ ದೇಶಗಳು ಈಗಾಗಲೇ ಈ ತಂತ್ರಜ್ಞಾನದ ಮೇಲೆ ನೂರಾರು ಕೋಟಿಯನ್ನು ಹೂಡಿಕೆ ಮಾಡಿದೆ. ಹಾಗೂ 2026ರ ಈ ಸಮಯದಲ್ಲಿ ನೂರಾರು ಕ್ಯೂಬಿಟ್ ಕಂಪ್ಯೂಟರ್ ಗಳ ಪ್ರದರ್ಶನ ನಡೆಸಲು ತಯಾರಾಗಿದೆ.
ಭಾರತವು ತನ್ನ ತಯಾರಿಯನ್ನು ಕೇವಲ 2023ರಲ್ಲಿ ಪ್ರಾರಂಭಿಸಿತು. ಇದು ಬಹಳಷ್ಟು ತಡವಾದ ಪ್ರಾರಂಭವಾಗಿದೆ.
ಇದರಿಂದಾಗಿ ಜಾಗತಿಕ ವೇಗವನ್ನು ತಲುಪಲು ಬಹಳ ಒತ್ತಡಗಳು ಬೀಳುತ್ತವೆ. ಈ ಒತ್ತಡ ಕೂಡ ಸವಾಲಿನ ವಿಷಯವಾಗಿದೆ.
ಹಾಗೂ ಈ ಎಲ್ಲಾ ಉದ್ದೇಶಗಳನ್ನು ಭಾರತ ದಾಟುವುದು ಅತ್ಯಗತ್ಯವಾಗಿದೆ. ಇದೊಂದು ಮಹತ್ವದ ಹೆಜ್ಜೆಯಾಗಿದ್ದು, ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದುವರಿಯುವುದು ಬಹಳ ಅಗತ್ಯವಾಗಿದೆ. ಹಾಗೂ ಈ ಮಹತ್ವದ ಬೆಳವಣಿಗೆ ಭವಿಷ್ಯದ ಭಾರತಕ್ಕೆ ಹಲವು ಕೊಡುಗೆಗಳನ್ನು ನೀಡುತ್ತವೆ.
ಇನ್ನಷ್ಟು ಮಾಹಿತಿಗಾಗಿ: NQM; DEPARTMENT OF SCIENCE AND TECHNOLOGY
ಇದನ್ನು ಓದಿ: PM E- Drive Scheme