Bharat 6G Mission: ಭಾರತದ ಡಿಜಿಟಲ್ ಭವಿಷ್ಯದ ಹೊಸ ಅಧ್ಯಾಯ

Spread the love

Bharat 6G Mission:ಭಾರತ್ 6G ಮಿಷನ್ ಎನ್ನುವುದು ಭಾರತ ಸರ್ಕಾರದ ಒಂದು ಪ್ರಮುಖ ಯೋಜನೆಯಾಗಿದೆ. ಇದನ್ನು 2023ರಲ್ಲಿ ಜಾರಿಗೊಳಿಸಲಾಯಿತು.

 

Bharat 6G Mission
Bharat 6G Mission

Bharat 6G Mission: 2030ರ ವೇಳೆಗೆ ದೇಶದಲ್ಲಿ 6G ತಂತ್ರಜ್ಞಾನವನ್ನು ಜಾರಿಗೊಳಿಸುವ ಸಲುವಾಗಿ ರೂಪಿಸಿರುವ ಯೋಜನೆಯಾಗಿದೆ.

ಇದು ಭಾರತದಲ್ಲಿ 6ನೇ ತಲೆಮಾರಿನ ತಂತ್ರಜ್ಞಾನವನ್ನು ವಿನ್ಯಾಸಗೊಳಿಸಲು, ಅಭಿವೃದ್ಧಿಪಡಿಸಲು ಮತ್ತು ಜಾರಿಗೆ ತರಲು ರೂಪಿಸಲಾದ ಯೋಜನೆಯಾಗಿದೆ.

Bharat 6G Mission: 6G ಎಂದರೇನು?:

6G ಎಂಬುದು 5G ನೆಟ್ವರ್ಕ್ ಗಿಂತಲೂ ವೇಗವನ್ನು ಹೊಂದಿರುತ್ತದೆ. ಮತ್ತು ಅದರ ಮುಂದಿನ ಹಂತವಾಗಿರುತ್ತದೆ.

ಇದು 5G ಗಿಂತಲೂ 50 ರಿಂದ 100 ಪಟ್ಟು ಹೆಚ್ಚಿನ ವೇಗವನ್ನು ಹೊಂದಿರಲಿದೆ. ಹಾಗೂ ಇದೊಂದು ಸುಧಾರಿತ ಸೆಲ್ಯುಲಾರ್ ತಂತ್ರಜ್ಞಾನವಾಗಿದೆ.

 

Bharat 6G Mission: 6G ಮಿಷನ್ ನ ಪ್ರಮುಖ ಉದ್ದೇಶಗಳೇನು?

 

•ಜಾಗತಿಕ ಪ್ರಾಬಲ್ಯತೆ: 

6G ತಂತ್ರಜ್ಞಾನದ ಮೂಲಕ ಭಾರತವು ಜಾಗತಿಕ ನಾಯಕತ್ವದತ್ತ ಮುಖ ಮಾಡಿದೆ. ಸುರಕ್ಷಿತ ಮತ್ತು ಕೈಗೆಟುಕುವ 6G ಉತ್ಪನ್ನಗಳ ಪೂರೈಕೆದಾರನಾಗುವ ಗುರಿಯನ್ನು ಹೊಂದಲಾಗಿದೆ.

ಇಲ್ಲಿ ಕೇವಲ ಈ ತಂತ್ರಜ್ಞಾನವನ್ನು ಬಳಕೆಗಾಗಿ ಮಾಡಲಾಗುತ್ತಿಲ್ಲ. ಬದಲಾಗಿ 6G ತಂತ್ರಜ್ಞಾನವನ್ನು ಸೃಷ್ಟಿ ಮಾಡುವ ಒಂದು ದೇಶವಾಗಿ ಭಾರತ ಬದಲಾಗಲಿದೆ.

ಇದರಿಂದಾಗಿ ಭಾರತದ ತಂತ್ರಜ್ಞಾನ ವ್ಯವಸ್ಥೆಯನ್ನು ಜಗತ್ತಿನ ಎದುರು ಪ್ರದರ್ಶಿಸಬಹುದಾಗಿದೆ.

•ಸ್ವದೇಶದಲ್ಲಿ ಉತ್ಪಾದನೆ:

ಈ ಒಂದು ಯೋಜನೆಯ ಭಾರತವನ್ನು ಸ್ವಾವಲಂಬಿಯಾಗಿ ಮಾಡಲಿದೆ. ಯೋಜನೆಯ ಮುಖ್ಯ ಉದ್ದೇಶ ತಂತ್ರಜ್ಞಾನದ ಅಭಿವೃದ್ಧಿ, ವಿನ್ಯಾಸ ಎಲ್ಲವನ್ನು ಭಾರತವೇ ಮಾಡುವುದು.

ಇವುಗಳನ್ನು ಭಾರತದಲ್ಲಿ ಮಾಡುವುದರಿಂದ ಸ್ವಾವಲಂಬನೆ ಹೆಚ್ಚುತ್ತದೆ. ಮತ್ತು ವಿದೇಶಗಳ ಮೇಲಿನ ಅವಲಂಬನೆ ಕುಂಠಿತವಾಗುತ್ತದೆ.

ಹಾಗೂ ಕಚ್ಚಾ ವಸ್ತುಗಳ ಆಮದು ಪ್ರಮಾಣವನ್ನು ಕಡಿಮೆಯಾಗಿಸಬಹುದು. ಮತ್ತು ಅದಕ್ಕೆ ಉಂಟಾಗುತ್ತಿದ್ದಂತಹ ವೆಚ್ಚವನ್ನು ಕೂಡ ಉಳಿಸಬಹುದಾಗಿದೆ.

•ಬೌದ್ಧಿಕ ಆಸ್ತಿ ಮತ್ತು ಪೇಂಟೆಡ್ ಗಳು: 

ಈ ತಂತ್ರಜ್ಞಾನಕ್ಕೆ ಸಂಬಂಧಪಟ್ಟಂತೆ ಭಾರತೀಯ ಕಂಪನಿಗಳು ಹಾಗೂ ಸಂಶೋಧಕರು ಕಾರ್ಯನಿರ್ವಹಿಸುತ್ತಾರೆ. ಹಾಗೂ ಇದು ಸಂಪೂರ್ಣವಾಗಿ ಭಾರತದಲ್ಲಿ ತಯಾರಾಗಲಿದೆ.

ಇದಕ್ಕೆ ಸಂಬಂಧಪಟ್ಟಂತೆ ಕಂಪನಿಗಳು. ಮತ್ತು ಸಂಶೋಧಕರಿಂದ ಹೆಚ್ಚಿನ ಮಟ್ಟದ ಪೇಂಟೆಡ್ ಗಳನ್ನು ನೋಂದಾಯಿಸುವ ಉದ್ದೇಶವನ್ನು ಹೊಂದಲಾಗಿದೆ.

ಇದಕ್ಕೆ ಸಂಬಂಧಪಟ್ಟಂತೆ ಅಂತರಾಷ್ಟ್ರೀಯ ಸಂಸ್ಥೆಗಳು ಕೆಲವು ಜಾಗತಿಕ ಮಾನದಂಡಗಳನ್ನು ವಿಧಿಸುತ್ತವೆ. ಅಂತಹ ಜಾಗತಿಕ ಮಾನದಂಡಗಳಲ್ಲಿ ಭಾರತದ ತಂತ್ರಜ್ಞಾನ ಸೇರ್ಪಡೆಯಾಗುವಂತೆ ಮಾಡುವುದು.

•ಸಂಯೋಜಿಸಲಾದ ವ್ಯವಸ್ಥೆ: 

ಇದಕ್ಕೆ ಸಂಬಂಧಪಟ್ಟಂತಹ ಎಲ್ಲಾ ಅಂಶಗಳನ್ನು ಸಂಯೋಜಿಸುವುದು ಅಗತ್ಯವಾಗಿದೆ. ದೇಶದ ಐಟಿ ಕಂಪನಿಗಳು, ಸರ್ಕಾರಿ ಸಂಶೋಧನಾ ಕೇಂದ್ರಗಳು. ಮತ್ತು ಪ್ರಮುಖ ಶೈಕ್ಷಣಿಕ ಸಂಸ್ಥೆ, ಸ್ಟಾರ್ಟ್‌ಅಪ್‌ಗಳು ಇವುಗಳನ್ನು ಒಂದೇ ಸೂರಿನ ಡಿ ತರುವ ಉದ್ದೇಶವನ್ನು ಹೊಂದಲಾಗಿದೆ.

ಹಾಗೂ ಹೊಸತನಕ್ಕೆ ಅಗತ್ಯವಿರುವಂತಹ ವಾತಾವರಣವನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿದೆ. ಈ ಮೂಲಕ ವೇಗದ ಉತ್ಪಾದನೆ ಸಾಧ್ಯವಾಗಲಿದೆ.

•ಆಧುನಿಕ ತಂತ್ರಜ್ಞಾನಗಳು: 

ಇಲ್ಲಿ ಭಾರತದ ಪ್ರತಿ ಭಾಗಕ್ಕೂ ತಡೆರಹಿತ ಇಂಟರ್ನೆಟ್ ವ್ಯವಸ್ಥೆಯನ್ನು ಕಲ್ಪಿಸಿಕೊಡುವ ಉದ್ದೇಶವಿದೆ. ಇದಕ್ಕಾಗಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲಾಗುತ್ತದೆ.

AI, ಟೆರಾಹರ್ಟ್ಜ್ ತರಂಗಾಂತರ ಹಾಗೂ ಬಾಹ್ಯಾಕಾಶ ನೆಲದ ಸಮನ್ವಯದ ನೆಟ್ವರ್ಕ್ ಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಈ ಮೂಲಕ ನೆಟ್ವರ್ಕ್ ಅನ್ನು ಪ್ರತಿ ಹಳ್ಳಿಗೂ ತಲುಪುವಂತೆ ಮಾಡಲಾಗುತ್ತದೆ.

ಭಾರತ್ 6G ಅಲಯನ್ಸ್ ಎಂದರೇನು?

ಇದನ್ನು 2023 ಜುಲೈ 23ರಂದು ಅಧಿಕೃತವಾಗಿ ಜಾರಿಗೊಳಿಸಲಾಯಿತು. ಇದನ್ನು ಭಾರತ್ 6G ಮಿಷನ್ ಸಾಕಾರಗೊಳಿಸುವ ಸಲುವಾಗಿ ಜಾರಿಗೊಳಿಸಲಾಗಿದೆ.

ಇದನ್ನು ಭಾರತ ಸರ್ಕಾರದ ದೂರ ಸಂಪರ್ಕ ಇಲಾಖೆಯು ಪ್ರಾಯೋಜಿಸಿದೆ. ಇದೊಂದು ಉದ್ಯಮ ಮತ್ತು ಶಿಕ್ಷಣ ಸಂಸ್ಥೆಗಳ ನೇತೃತ್ವದ ಪ್ರಮುಖ ಸಹಯೋಗದ ವೇದಿಕೆ.

ಪ್ರಸ್ತುತ ಈ ಒಕ್ಕೂಟವನ್ನು 90ಕ್ಕೂ ಹೆಚ್ಚು ಸಂಸ್ಥೆಗಳಿಗೆ ವಿಸ್ತರಿಸಲಾಗಿದೆ. ದೂರಸಂಪರ್ಕ ಇಲಾಖೆಯ ಪ್ರಮುಖ ಸಂಸ್ಥೆಗಳು, ಐಟಿ ಕಂಪನಿಗಳು, ಐಐಟಿ ಯಂತಹ ಸಂಸ್ಥೆಗಳು, ಸಂಶೋಧನಾ ಕೇಂದ್ರಗಳು ಮತ್ತು ಸ್ಟಾರ್ಟ್‌ಅಪ್‌ಗಳು ಇಲ್ಲಿ ಒಟ್ಟಾಗಿ ಕಾರ್ಯನಿರ್ವಹಿಸುತ್ತವೆ.

ಭಾರತ್ 6G ಅಲಯನ್ಸ್ ನ ಪ್ರಮುಖ ಉದ್ದೇಶಗಳು ಮತ್ತು ಕಾರ್ಯಗಳು:

 

•ಸ್ವದೇಶಿ ತಂತ್ರಜ್ಞಾನ: 

6G ತಂತ್ರಜ್ಞಾನಕ್ಕೆ ಸಂಬಂಧಪಟ್ಟಂತೆ ಪ್ರತಿಯೊಂದು ಕೆಲಸವನ್ನು ಭಾರತದಲ್ಲಿ ನಡೆಸಬೇಕು ಎಂಬ ಗುರಿಯನ್ನು ಹೊಂದಿದೆ.

ತಂತ್ರಜ್ಞಾನದ ವಿನ್ಯಾಸ, ಅಭಿವೃದ್ಧಿ, ಉತ್ಪಾದನೆ ಎಲ್ಲವನ್ನೂ ಭಾರತದಲ್ಲಿ ನಡೆಸಲಾಗುತ್ತದೆ. ಮತ್ತು ಇದಕ್ಕೆ ಪೂರಕವಾದಂತಹ ಪರಿಸರ ವ್ಯವಸ್ಥೆಯನ್ನು ಕಲ್ಪಿಸುವುದು ಇದರ ಉದ್ದೇಶವಾಗಿದೆ.

•ಪೇಂಟೆಡ್ ಗಳನ್ನು ಪಡೆಯುವಿಕೆ: 

6G ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಪೇಂಟೆಂಟ್ ಗಳನ್ನು ಪಡೆಯುವುದು ಅಗತ್ಯವಾಗಿದೆ.

ಸಂಶೋಧಕರು ಮತ್ತು ಶಿಕ್ಷಣ ಸಂಸ್ಥೆಗಳು ಈ ಒಂದು ಪೇಂಟೆಡ್ ಗಳನ್ನು ಪಡೆಯಬೇಕಾಗಿದೆ. ಇವುಗಳನ್ನು ಪಡೆಯಲು ಭಾರತ್ 6G ಅಲಯನ್ಸ್ ತಾಂತ್ರಿಕ ಸಹಕಾರವನ್ನು ನೀಡುತ್ತದೆ.

•ಗುಂಪುಗಳ ರಚನೆ:

ಕಾರ್ಯನಿರ್ವಹಿಸಲು ಸಹಾಯವಾಗುವಂತೆ ಹಲವು ಗುಂಪುಗಳನ್ನು ರಚಿಸಿಕೊಳ್ಳಲಾಗಿದೆ. ಆಯಾ ಗುಂಪುಗಳು ಅವರಿಗೆ ಹಂಚಲಾಗಿರುವ ಕೆಲಸಗಳನ್ನು ಮಾಡಬೇಕಾಗುತ್ತದೆ. ಪ್ರಮುಖವಾಗಿ ಒಟ್ಟು 7 ಗುಂಪುಗಳನ್ನು ರಚಿಸಲಾಗಿದೆ.

ತಂತ್ರಜ್ಞಾನ ಅಪ್ಲಿಕೇಶನ್ ಗಳು, ಸ್ಪೆಕ್ಟ್ರಮ್, ಹಸಿರು ಮತ್ತು ಸುಸ್ಥಿರತೆ ಸೇರಿದಂತೆ ಹಲವು ವಿಷಯಗಳಲ್ಲಿ ಈ ತಂಡಗಳು ಕಾರ್ಯನಿರ್ವಹಿಸುತ್ತವೆ.

•ಜಾಗತಿಕ ಪಾಲು:

ಇಲ್ಲಿ ಜಾಗತಿಕ 6G ಸಂಸ್ಥೆಗಳೊಂದಿಗೆ ದ್ವಿಪಕ್ಷೀಯ ಒಪ್ಪಂದಗಳನ್ನು ಮಾಡಿಕೊಳ್ಳಲಾಗುತ್ತದೆ. ಮತ್ತು ಈ ಮೂಲಕ ಅಂತರಾಷ್ಟ್ರೀಯ ಮಟ್ಟದ ಜ್ಞಾನವನ್ನು ವಿನಿಮಯ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ.

ಅಮೆರಿಕಾದ NextG Alliance, ಯುರೋಪ್ ಒಕ್ಕೂಟದ 6G-IA ಮತ್ತು ಯುರೋಪ್ ಸ್ಪೇಸ್ ಏಜೆನ್ಸಿ ಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ.

6G ತಂತ್ರಜ್ಞಾನದ ವೈಶಿಷ್ಟ್ಯಗಳೇನು?

 

•ವಿಳಂಬವಿಲ್ಲ ಮತ್ತು ಅಲ್ಟ್ರಾ ಸ್ಪೀಡ್: 

6G ಯು 5G ಗಿಂತಲೂ 100 ಪಟ್ಟು ಹೆಚ್ಚು ವೇಗವನ್ನು ಹೊಂದಿರುತ್ತದೆ. ಹಾಗೂ ಇದು 1 ಸೆಕೆಂಡಿಗೆ 1 ಟೆರಾಬೈಟ್ ತನಕ ವೇಗವನ್ನು ತಲುಪಬಹುದು.

ಇನ್ನು ಈ ಒಂದು ನೆಟ್ವರ್ಕ್ ನಲ್ಲಿ ಮಾಹಿತಿಗಳು ರವಾನೆಯಾಗುವಂತಹ ಸಮಯ ಬಹಳಷ್ಟು ಕಡಿಮೆ ಇರುತ್ತದೆ. ಸುಮಾರು 0.1 ಮಿಲಿಸೆಕೆಂಡ್‌ಗಿಂತ ಈ ಸಮಯವು ಕಡಿಮೆ ಇರಲಿದೆ.

ಇದರಿಂದಾಗಿ ರೋಬೋಟ್ ಗಳು ಮತ್ತು ಯಂತ್ರಗಳು ಯಾವುದೇ ವಿಳಂಬ ಮಾಡುವುದಿಲ್ಲ. ಸಮಯಕ್ಕೆ ಸರಿಯಾಗಿ ಸ್ಪಂದಿಸುತ್ತವೆ ಮತ್ತು ಕಾರ್ಯನಿರ್ವಹಿಸುತ್ತವೆ.

•AI ಮತ್ತು ನೆಟ್ವರ್ಕ್: 

ಇಲ್ಲಿ ನೆಟ್ವರ್ಕ್ ದಟ್ಟಣೆಯನ್ನು ನಿರ್ವಹಿಸುವುದು. ಮತ್ತು ಸೈಬರ್ ದಾಳಿಯನ್ನು ತಡೆಯುವ ಅವಶ್ಯಕತೆ ಇರುತ್ತದೆ. ಈ ಕೆಲಸಗಳನ್ನು ಕೃತಕ ಬುದ್ಧಿಮತ್ತೆಯು ನಿರ್ವಹಿಸಲಿದೆ.

ಇಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಮೆಷಿನ್ ಲರ್ನಿಂಗ್ ಅನ್ನು ಅಳವಡಿಸಲಾಗಿರುತ್ತದೆ. ಇದು ಸ್ವಯಂ ಚಾಲಿತವಾಗಿ ಕಾರ್ಯನಿರ್ವಹಿಸಲು ಸಹಕಾರ ನೀಡುತ್ತದೆ.

•ಟೆರಾಹರ್ಟ್ಜ್:

6G ತಂತ್ರಜ್ಞಾನವು ಹೆಚ್ಚಿನ ಆವರ್ತನ ಇರುವ ತರಂಗಗಳನ್ನು ಬಳಸುತ್ತದೆ. ಮತ್ತು ಇವು ಸಬ್ ಮಿಲಿಮೀಟರ್ ತರಂಗಗಳಾಗಿರುತ್ತವೆ. ಹಾಗೂ ಇದರ ಬಳಕೆಯು ನೆಟ್ವರ್ಕ್ ನ ಬ್ಯಾಂಡ್‌ವಿಡ್ತ್ ಮತ್ತು ದಕ್ಷತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

•ನೆಟ್ವರ್ಕ್ ನ ಸಮನ್ವಯ: 

ಇಲ್ಲಿ ನೆಟ್ವರ್ಕ್ ಕೇವಲ ಭೂಮಿಯ ಮೇಲಿರುವ ಟವರ್ ಗಳ ಮೇಲೆ ಅವಲಂಬಿತವಾಗಿರುವುದಿಲ್ಲ. ಬದಲಾಗಿ ಬಾಹ್ಯಾಕಾಶದ ಉಪಗ್ರಹಗಳ ಜೊತೆ ನೇರ ಸಂಪರ್ಕವನ್ನು ಹೊಂದಿರುತ್ತವೆ.

ಪ್ರಸ್ತುತ ಇರುವಂತಹ ಹಳ್ಳಿಗಾಡಿನಲ್ಲಿ ಇರುವಂತಹ ನೆಟ್ವರ್ಕ್ ಸಮಸ್ಯೆಗಳು ಈ ಮೂಲಕ ಆ ದೂರಾಗಲಿದೆ.

ಉಪಗ್ರಹಗಳ ಕಾರಣದಿಂದಾಗಿ ನೆಟ್ವರ್ಕ್ ಸಮಸ್ಯೆ ಉಂಟಾಗುವುದಿಲ್ಲ. ಪತಿ ಭಾಗಕ್ಕೂ ಕೂಡ ನೆಟ್ವರ್ಕ್ ಸುಲಭವಾಗಿ ದೊರಕಲಿದೆ.

•ಹಸಿರು ಮತ್ತು ಸುಸ್ಥಿರತೆ:

5G ಗಿಂತಲೂ 6G ಸುಧಾರಿತವಾಗಿರುತ್ತದೆ. ಜೊತೆಗೆ ಹೆಚ್ಚಿನ ವೇಗವನ್ನು ಹೊಂದಿರುತ್ತದೆ. ಆದರೆ ಇದು ಕಡಿಮೆ ವಿದ್ಯುತ್ ಅನ್ನು ಬಳಸುತ್ತದೆ. ಕಡಿಮೆ ವಿದ್ಯುತ್ ಬಳಸುವಂತೆ 6G ತಂತ್ರಜ್ಞಾನದ ವಿನ್ಯಾಸಗೊಳಿಸಲಾಗುತ್ತದೆ.

ಬ್ಯಾಟರಿ ರಹಿತ ಸಂವೇದಕಗಳು ಮತ್ತು ಪರಿಸರ ಸ್ನೇಹಿ ತಂತ್ರಜ್ಞಾನಕ್ಕೆ ಇಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ.

•ಹೊಲೊಗ್ರಾಫಿಕ್:

ಈ ತಂತ್ರಜ್ಞಾನಗಳಲ್ಲಿ ವಿಡಿಯೋ ಕರೆಗಳ ಅವಶ್ಯಕತೆ ಇರುವುದಿಲ್ಲ. ಅದರ ಬದಲಾಗಿ ಇನ್ನು ಉತ್ತಮ ರೀತಿಯಲ್ಲಿ ಸಂಭಾಷಣೆಯನ್ನು ಮಾಡಬಹುದಾಗಿದೆ. ಇಲ್ಲಿ 3D ರೂಪದಲ್ಲಿ ಪ್ರತ್ಯಕ್ಷವಾಗಿ ಮಾತನಾಡಬಹುದಾಗಿದೆ.

ಈ ತಂತ್ರಜ್ಞಾನದಲ್ಲಿ ಹ್ಯಾಪ್ಟಿಕ್ ಸಂವಹನ ಸಾಧ್ಯವಾಗಲಿದೆ. ಅಂದರೆ ವರ್ಚುವಲ್ ಜಗತ್ತಿನಲ್ಲಿ ವಸ್ತುಗಳನ್ನು ಸ್ಪರ್ಶಿಸುವ ಅನುಭವ ದೊರೆಯುತ್ತದೆ.

ಈ ಯೋಜನೆಯ ಅನುಷ್ಠಾನಕ್ಕಿರುವ ಸವಾಲುಗಳು:

 

1.ಮೂಲಸೌಕರ್ಯದ ಕೊರತೆ:

ಟೆರಾಹರ್ಟ್ಜ್: ಇಲ್ಲಿ ಟೆರಾಹರ್ಟ್ಜ್ ತರಂಗಗಳನ್ನು ಬಳಸುವ ಗುರಿ ಹೊಂದಲಾಗಿದೆ. ಆದರೆ ಈ ತರಂಗಗಳು ಕಡಿಮೆ ದೂರದ ತನಕ ಚಲಿಸಬಲ್ಲವು.

ಮತ್ತು ಇವು ಮರ ಗಿಡಗಳು ಹಾಗೂ ಗೋಡೆಗಳನ್ನು ಭೇದಿಸುವುದು ಕಷ್ಟವಾಗುತ್ತದೆ. ಅಂದರೆ ಅಡೆತಡೆಗಳಲ್ಲಿ ಇದು ನಿರ್ವಹಿಸುವುದು ಕಠಿಣವಾಗಿದೆ.

ಫೈಬರ್: 6G ತಂತ್ರಜ್ಞಾನವು ಅತಿ ವೇಗವನ್ನು ಹೊಂದಿರುತ್ತದೆ. ಹಾಗೂ ಈ ಯೋಜನೆಯಲ್ಲಿ ದೇಶದ ಮೂಲೆ ಮೂಲೆಗೂ ಈ ತಂತ್ರಜ್ಞಾನವನ್ನು ಹರಡಿಸಬೇಕಾಗಿದೆ.

ಹಾಗೂ ಈ ವೇಗವನ್ನು ಕಾಪಾಡಿಕೊಳ್ಳಲು ಕೆಲವು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಇದಕ್ಕಾಗಿ ಆಪ್ಟಿಕಲ್ ಫೈಬರ್ ಗೆ ದೇಶದ ಎಲ್ಲಾ ಮೊಬೈಲ್ ಟವರ್ ಗಳನ್ನು ಜೋಡಿಸಬೇಕು.

ಪ್ರಸ್ತುತ ಭಾರತದಲ್ಲಿ ಆಪ್ಟಿಕಲ್ ಫೈಬರ್ ನ ಪ್ರಮಾಣ ಕಡಿಮೆ ಇದೆ. ಇದು ಈ ಯೋಜನೆಯ ಜಾರಿಗೆ ಮತ್ತು ವೇಗಕ್ಕೆ ಬಹುದೊಡ್ಡ ಸವಾಲಾಗಿದೆ.

ನೆಟ್ವರ್ಕ್ ನ ದಟ್ಟತೆ: ಈ ಯೋಜನೆಯ ಮುಖ್ಯ ಉದ್ದೇಶ ನೆಟ್ವರ್ಕ್ ವಿತರಣೆಯಲ್ಲಿ ತಡೆ ಇರಬಾರದು. ಅದು ತಡೆರಹಿತವಾಗಿ, ಸರಾಗವಾಗಿ ಸಾಗಬೇಕು.

ಇದನ್ನು ಪೂರೈಸಲು ಪ್ರತಿ ಕೆಲವು ಮೀಟರ್ ಗಳಿಗೆ ಸಣ್ಣ ಸಣ್ಣ ಟವರ್ ಗಳನ್ನು ಹಾಕಿಸಬೇಕಾಗುತ್ತದೆ. ಹಾಗೂ ಭಾರತವು ವಿಸ್ತೀರ್ಣದಲ್ಲಿ ವಿಶಾಲವಾಗಿದೆ.

ಮತ್ತು ಜನಸಂಖ್ಯೆಯು ಕೂಡ ಹೆಚ್ಚಿದೆ. ಇಂತಹ ಪರಿಸ್ಥಿತಿಯಲ್ಲಿ ಈ ದಟ್ಟತೆಯನ್ನು ಕಾಯ್ದುಕೊಳ್ಳುವುದು ಕಠಿಣವಾಗಿದೆ.

2. ಬಹುಮಟ್ಟದ ಹೂಡಿಕೆ:

ಹೆಚ್ಚಿನ ವೆಚ್ಚ:ಈ ತಂತ್ರಜ್ಞಾನದ ಅನುಷ್ಠಾನಕ್ಕೆ ಹೊಸ ಮೂಲಸೌಕರ್ಯಗಳ ಅಗತ್ಯವಿದೆ. ಮತ್ತು ಹಲವು ಸಂಶೋಧನೆಗಳು ನಡೆಯಬೇಕಿದೆ.

ಜೊತೆಗೆ ಹೊಸ ಹೊಸ ಉಪಕರಣಗಳನ್ನು ಉತ್ಪಾದಿಸಬೇಕು. ಈ ಎಲ್ಲಾ ಕೆಲಸಗಳು ನಡೆಯಲು ಬಹುಮಟ್ಟದ ಹೂಡಿಕೆಯನ್ನು ಮಾಡಬೇಕಾಗುತ್ತದೆ.

ಕಂಪನಿಗಳ ಆರ್ಥಿಕ ಸ್ಥಿತಿ: ಈಗಾಗಲೇ ಕಂಪನಿಗಳು 5G ತಂತ್ರಜ್ಞಾನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡಿವೆ. ಈಗ ಮತ್ತೊಮ್ಮೆ ಹೂಡಿಕೆ ಮಾಡುವುದು ಕಂಪನಿಗಳಿಗೆ ಕಷ್ಟಕರವಾಗಬಹುದು.

3. ಸೈಬರ್ ಸುರಕ್ಷತೆ:

ಸೈಬರ್ ದಾಳಿಯ ಸಾಧ್ಯತೆ: ಈ ಹೊಸ ತಂತ್ರಜ್ಞಾನವು ಸಂಪೂರ್ಣವಾಗಿ ಎಐ ಆಧಾರಿತವಾಗಿರುತ್ತದೆ. ಮತ್ತು ಇದಕ್ಕೆ ಲಕ್ಷಾಂತರ ಸಾಧನಗಳನ್ನು ಜೋಡಿಸಲಾಗಿರುತ್ತದೆ.

ಇವೆಲ್ಲವೂ ಆನ್ಲೈನ್ ಮೂಲಕವೇ ನಡೆಯಲಿವೆ. ಇದರಿಂದಾಗಿ ಇಲ್ಲಿ ಹ್ಯಾಕಿಂಗ್ ನಡೆಯುವ ಸಾಧ್ಯತೆ ಇರುತ್ತದೆ.

ಖಾಸಗೀತನಕ್ಕೆ ಧಕ್ಕೆ: ಇಲ್ಲಿ ವ್ಯಕ್ತಿಗಳ ಖಾಸಗಿ ಮಾಹಿತಿ ಇರಲಿದೆ. ಜೊತೆಗೆ ಅವರ ಸ್ಥಳಗಳ ವಿವರಗಳು ಕೂಡ ಹಂಚಿಕೆಯಾಗುತ್ತದೆ. ಇದರಿಂದಾಗಿ ವ್ಯಕ್ತಿಗಳ ಖಾಸಗಿತನಕ್ಕೆ ಧಕ್ಕೆ ಉಂಟಾಗಬಹುದಾಗಿದೆ.

4. ಕೈಗೆಟುಕುವ ದರ:

ಸಾಮಾನ್ಯವಾಗಿ ಪ್ರತಿ ವಸ್ತುವಿನ ದರ ಮೊದಲಿಗೆ ಹೆಚ್ಚಾಗಿಯೇ ಇರುತ್ತದೆ. ಅದರಂತೆ 6G ಸಾಧನೆಗಳು ಮತ್ತು ಸ್ಮಾರ್ಟ್ ಫೋನ್ ಗಳು ಮೊದಲಿಗೆ ದುಬಾರಿಯಾಗಿರಲಿವೆ.

ಗ್ರಾಮೀಣ ಭಾಗದ ಜನರಿಗೆ ಈ ಸೇವೆಯನ್ನು ತಲುಪಿಸುವುದು ಈ ನಿಟ್ಟಿನಲ್ಲಿ ದೊಡ್ಡ ಸವಾಲಾಗಿದೆ.

5. ಸ್ವದೇಶಿ ಉತ್ಪಾದನೆ ಮತ್ತು ಪ್ರತಿಭೆ:

6G ಮತ್ತು AI ತಂತ್ರಜ್ಞಾನಗಳ ಅಭಿವೃದ್ಧಿಗೆ ಹೆಚ್ಚಿನ ಜ್ಞಾನ ಅವಶ್ಯಕ. ಇದಕ್ಕೆ ನುರಿತ ವಿಜ್ಞಾನಿಗಳು ಮತ್ತು ಇಂಜಿನಿಯರ್ ಗಳ ಅವಶ್ಯಕತೆ ಇರುತ್ತದೆ.

ಇನ್ನು ಈ ತಂತ್ರಜ್ಞಾನದ ತಯಾರಿಕೆಗೆ ಅತ್ಯಾಧುನಿಕ ಸೆಮಿಕಂಡಕ್ಟರ್ ಗಳು ಮತ್ತು ಮೈಕ್ರೋ ಚಿಪ್ ಗಳ ಅಗತ್ಯವಿರುತ್ತದೆ. ಹಾಗೂ ಇವುಗಳ ಉತ್ಪಾದನೆ ಭಾರತದಲ್ಲಿ ಪ್ರಸ್ತುತ ಆರಂಭಿಕ ಹಂತದಲ್ಲಿದೆ.

ಎಲ್ಲಾ ಅಂಶಗಳು ಒಟ್ಟಾರೆಯಾಗಿ ಈ ಯೋಜನೆಯ ಅನುಷ್ಠಾನಕ್ಕೆ ಸವಾಲಿನ ವಿಷಯಗಳಾಗಿವೆ.

6G ತಂತ್ರಜ್ಞಾನದ ಅಭಿವೃದ್ಧಿಯು ಮಹತ್ವದ ಯೋಜನೆಯಾಗಿದೆ. ಇದು ಭಾರತವನ್ನು ಜಾಗತಿಕ ನಾಯಕತ್ವದ ಕಡೆಗೆ ಕರೆದೊಯ್ಯುತ್ತದೆ.

ದೇಶದ ಪ್ರತಿ ಭಾಗಕ್ಕೂ ಈ ತಂತ್ರಜ್ಞಾನವು ತಲುಪಲಿದೆ. ಇದರಿಂದಾಗಿ ಹಳ್ಳಿಗಳಿಗೂ ಹಲವು ಸವಲತ್ತುಗಳು ಸಿಗಲಿವೆ.

ಇನ್ನಷ್ಟು ಮಾಹಿತಿಗಾಗಿ:Bharat 6G Alliance

ಇದನ್ನೂ ಓದಿ: National Quantum mission 2026

Leave a Comment

Scroll to Top

Discover more from nirantarasuddhi

Subscribe now to keep reading and get access to the full archive.

Continue reading