Digital Rupee (CBDC):ಡಿಜಿಟಲ್ ರೂಪಾಯಿ ಎಂಬುದು ಒಂದು ಡಿಜಿಟಲ್ ಕರೆನ್ಸಿ ಆಗಿದೆ. ಇದನ್ನು ಭಾರತೀಯ ರಿಸರ್ವ್ ಬ್ಯಾಂಕ್ ಜಾರಿಗೊಳಿಸಿರುವಂಥದ್ದು.

Digital Rupee (CBDC): ಇದು ಸಂಪೂರ್ಣವಾಗಿ ಡಿಜಿಟಲ್ ರೂಪದಲ್ಲಿ ಇರಲಿದೆ. ಮತ್ತು ಕಾಗದದ ಹಣದಷ್ಟೇ ಮಹತ್ವವುಳ್ಳದ್ದಾಗಿದೆ.
2022ರ ಕೇಂದ್ರ ಬಜೆಟ್ ನಲ್ಲಿ ಇದರ ಅಧಿಕೃತ ಘೋಷಣೆಯಾಯಿತು.
ಕೇಂದ್ರ ಸರ್ಕಾರದ ಹಣಕಾಸು ಸಚಿವರು ಡಿಜಿಟಲ್ ಕರೆನ್ಸಿ ಯನ್ನು ಜಾರಿಗೊಳಿಸುವುದಾಗಿ ಘೋಷಿಸಿದ್ದರು. ನಂತರದ ದಿನಗಳಲ್ಲಿ ಹಂತ ಹಂತವಾಗಿ ಇದನ್ನು ಜಾರಿಗೊಳಿಸಲಾಯಿತು.
ಮೊದಲಿಗೆ ಬೆಂಗಳೂರು, ಭುವನೇಶ್ವರ, ನವದೆಹಲಿ ಮತ್ತು ಮುಂಬೈಗಳಲ್ಲಿ ಮಾತ್ರವೇ ಇದನ್ನು ಆರಂಭಿಸಲಾಗಿತ್ತು. ನಂತರದ ಹಂತಗಳಲ್ಲಿ ಇದು ವಿಸ್ತರಣೆಗೊಳ್ಳುತ್ತಾ ಬಂದಿರುತ್ತದೆ.
Digital Rupee (CBDC): ಯುಪಿಐ ಗಿಂತ ಡಿಜಿಟಲ್ ಕರೆನ್ಸಿ ಹೇಗೆ ಭಿನ್ನವಾಗಿದೆ?
1.ಬ್ಯಾಂಕ್ ಖಾತೆ ಇಲ್ಲದಿರುವಿಕೆ:
ಯುಪಿಐ ಮೂಲಕ ಹಣ ಕಳುಹಿಸಲು ಮುಖ್ಯವಾಗಿ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಹಾಗೂ ಡಿಜಿಟಲ್ ಕರೆನ್ಸಿಯಲ್ಲಿ ಬ್ಯಾಂಕ್ ಖಾತೆ ಹೊಂದಿರುವ ಅಗತ್ಯವಿರುವುದಿಲ್ಲ.
ಕಾಗದದ ನೋಟುಗಳನ್ನು ಬಳಸುವಾಗ ಕೈಯಿಂದ ಕೈಗೆ ವ್ಯವಹಾರ ನಡೆಯುತ್ತದೆ. ಬ್ಯಾಂಕ್ ಖಾತೆಗಳನ್ನು ಇಲ್ಲಿ ಬಳಸಲಾಗುವುದಿಲ್ಲ. ಹೀಗೆ ಡಿಜಿಟಲ್ ಕರೆನ್ಸಿಯು ಆರ್ಬಿಐ ಇಂದ ನೇರವಾಗಿ ನಮ್ಮ ವಾಲೆಟ್ ಗೆ ಬರುತ್ತದೆ.
•ವಾಲೆಟ್ ಬಳಕೆ:
ಹಾಗೂ ಟ್ರಾನ್ಸಾಕ್ಷನ್ ಮಾಡುವಾಗ ವಾಲೆಟ್ ಇಂದ ವಾಲೆಟ್ ಗೆ ವ್ಯವಹಾರಗಳು ನಡೆಯುತ್ತವೆ. ಮಧ್ಯದಲ್ಲಿ ಬ್ಯಾಂಕ್ ಗೆ ಸಂಬಂಧಪಟ್ಟ ಯಾವುದೇ ಉಪಕರಣಗಳ ಕೆಲಸ ಇರುವುದಿಲ್ಲ.
ಮೊದಲ ಹಂತದಲ್ಲಿ ಖಾತೆ:
ಮೊದಲಿಗೆ ಖಾತೆಯನ್ನು ಹೊಂದಿರಬೇಕು. ಅನಂತನದಲ್ಲಿ ಅದರ ಸಂಪೂರ್ಣ ಹಣವನ್ನು ಡಿಜಿಟಲ್ ನೋಟುಗಳನ್ನಾಗಿ ಬದಲಾಯಿಸಬೇಕು. ಮತ್ತು ವಾಲೆಟ್ ಗೆ ಅದನ್ನು ಹಾಕಿಕೊಳ್ಳಬೇಕು.
ಆನಂತರ ವ್ಯವಹಾರಗಳನ್ನು ನಡೆಸಲು ಬ್ಯಾಂಕ್ ಖಾತೆಗೆ ಲಿಂಕ್ ಆಗುವ ಅವಶ್ಯಕತೆ ಇರುವುದಿಲ್ಲ.
2. ಟ್ರಾನ್ಸಾಕ್ಷನ್ ವಿಫಲವಾಗುವ ಸಾಧ್ಯತೆ ಕಡಿಮೆ:
•ಸರ್ವರ್ ಬಳಕೆ ಇಲ್ಲ:
ಯುಪಿಐ ಬಳಕೆಯಲ್ಲಿ ಸರ್ವರ್ ನ ಪಾತ್ರ ಬಹಳಷ್ಟು ಇರುತ್ತದೆ. ಹಣ ಪಡೆಯುವವರು ಮತ್ತು ಕಳುಹಿಸುವವರು ಇಬ್ಬರ ಬ್ಯಾಂಕ್ ಸರ್ವರ್ ಕೂಡ ಸರಿಯಾಗಿ ಕಾರ್ಯನಿರ್ವಹಿಸಬೇಕು.
ಡಿಜಿಟಲ್ ಕರೆನ್ಸಿಯಲ್ಲಿ ಕೇವಲ ರಿಸರ್ವ್ ಬ್ಯಾಂಕ್ ನ ಸರ್ವರ್ ಮುಖ್ಯವಾಗುತ್ತದೆ. ಇದರಿಂದಾಗಿ ಸರ್ವರ್ ಡೌನ್ ಎಂಬ ಸಂದರ್ಭ ಉಂಟಾಗುವುದಿಲ್ಲ.
•ನೆಟ್ವರ್ಕ್ ಅವಶ್ಯಕತೆ ಇಲ್ಲ:
•ಹಾಗೆಯೇ ಯುಪಿಐ ಬಳಕೆ ಮಾಡುವಾಗ ನೆಟ್ವರ್ಕ್ ನ ಅವಶ್ಯಕತೆ ಇದೆ.
•ಡಿಜಿಟಲ್ ಕರೆನ್ಸಿಯ ವಿಚಾರಕ್ಕೆ ಬಂದರೆ ಇಲ್ಲಿ ನೆಟ್ವರ್ಕ್ ನ ಅವಶ್ಯಕತೆ ಇರುವುದಿಲ್ಲ. ನೆಟ್ವರ್ಕ್ ಲಭ್ಯವಿರೋಧ ಜಾಗದಲ್ಲೂ ಕೂಡ ವ್ಯವಹಾರಗಳನ್ನು ನಡೆಸಬಹುದಾಗಿದೆ.
3. ಗೌಪ್ಯತೆ:
•ಪಾಸ್ ಬುಕ್ ದಾಖಲೆ:
ನಮ್ಮ ಪ್ರತಿಯೊಂದು ವರ್ಗಾವಣೆಗಳು ಕೂಡ ಬ್ಯಾಂಕ್ ಪಾಸ್ ಬುಕ್ ಮತ್ತು ಸ್ಟೇಟ್ಮೆಂಟ್ ನಲ್ಲಿ ದಾಖಲಾಗುತ್ತದೆ. ಯುಪಿಐ ಮತ್ತು ನೆಟ್ ಬ್ಯಾಂಕಿಂಗ್ ಮೂಲಕ ಮಾಡುವ ಸಣ್ಣ ವರ್ಗಾವಣೆ ಕೂಡ ದಾಖಲಾಗುತ್ತದೆ.
ಆದರೆ ಡಿಜಿಟಲ್ ರುಪಾಯಿ ಮೂಲಕ ಮಾಡುವಂತಹ ಸಣ್ಣಪುಟ್ಟ ವರ್ಗಾವಣೆಗಳು ದಾಖಲಾಗುವುದಿಲ್ಲ.
•ಗೌಪ್ಯತೆಯ ರಕ್ಷಣೆ ಮಾಡಲಾಗುವುದು:
RBI ಬ್ಯಾಂಕ್ ಸಣ್ಣಪುಟ್ಟ ವ್ಯವಹಾರಗಳಿಗೆ ಅನಾಮಧೇಯತೆಯನ್ನು ಸೂಚಿಸುವ ತಂತ್ರಜ್ಞಾನವನ್ನು ರೂಪಿಸಿದೆ.
ಕಾಗದ ಹಣಕ್ಕೆ ಸಂಬಂಧಿಸಿದ ವ್ಯವಹಾರಗಳು ಹೇಗೆ ಗೌಪ್ಯವಾಗಿರುತ್ತದೆಯೋ ಹಾಗೆಯೇ ಇದು ಕೂಡ ಇರಲಿದೆ.
ಡಿಜಿಟಲ್ ಕರೆನ್ಸಿಯ ಉದ್ದೇಶಗಳು:
1. ನಿರ್ವಹಣೆಯ ವೆಚ್ಚ ಕಡಿಮೆ:
ಪ್ರಸ್ತುತ ಕಾಗದ ನೋಟಿಗೆ ಸಂಬಂಧಪಟ್ಟಂತೆ RBI ಹಲವಾರು ಕಾರ್ಯಗಳನ್ನು ನಿರ್ವಹಿಸುತ್ತಿದೆ.
ನೋಟುಗಳ ಮುದ್ರಣ, ಸಾಗಣೆ, ಎಟಿಎಂಗೆ ತುಂಬಿಸುವಿಕೆ, ಮತ್ತು ಹಳೆಯ ನೋಟುಗಳ ನಾಶ ಇತ್ಯಾದಿ.
ಹಾಗೂ ಡಿಜಿಟಲ್ ಕರೆನ್ಸಿ ಮಿಷನ್ ಜಾರಿಗೆ ತಂದಲ್ಲಿ ಈ ಎಲ್ಲಾ ವೆಚ್ಚಗಳು ಕಡಿಮೆಯಾಗಲಿವೆ.
ಹಾಗೂ ಹೆಚ್ಚಿನ ಲಾಭವನ್ನು ಕೂಡ ಮಾಡಬಹುದಾಗಿದೆ. ಇದರಿಂದಾಗಿ ಉಳಿದಂತಹ ಹಣ ಬೇರೆ ಕೆಲಸಗಳಿಗೆ ಬಳಸಿಕೊಳ್ಳಬಹುದು.
2. ಆಫ್ಲೈನ್ ಸೌಕರ್ಯ:
•ಬ್ಯಾಂಕಿಂಗ್ ವ್ಯವಹಾರ ಜ್ಞಾನ:
ಹಿಂದುಳಿದ ಪ್ರದೇಶಗಳಲ್ಲಿ ಹಲವಾರು ಜನರು ಬ್ಯಾಂಕ್ ಖಾತೆಗಳನ್ನು ಹೊಂದಿರುವುದಿಲ್ಲ.
ಹಾಗೂ ಇವರುಗಳು ಬ್ಯಾಂಕ್ ವ್ಯವಹಾರಗಳಿಂದ ದೂರವಾಗಿಯೇ ಉಳಿದುಬಿಟ್ಟಿದ್ದಾರೆ. ಇದರಿಂದಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಚ್ಚಿನ ಬದಲಾವಣೆಗಳು ಆಗಲು ಸಾಧ್ಯವಾಗುತ್ತಿರಲಿಲ್ಲ.
ಪ್ರಸ್ತುತ ಈ ಒಂದು ಯೋಜನೆಯಿಂದಾಗಿ ಪ್ರತಿ ಪ್ರದೇಶದ ಜನರು ಕೂಡ ಈ ಮಿಷನ್ ನ ಲಾಭ ಪಡೆದುಕೊಳ್ಳಬಹುದು. ಪ್ರತಿಯೊಬ್ಬರೂ ಕೂಡ ಇದನ್ನು ಸುಲಭವಾಗಿ ಬಳಸಬಹುದಾಗಿದೆ.
•ನೆಟ್ವರ್ಕ್ ಸಮಸ್ಯೆಗೆ ಪರಿಹಾರ:
ಹಳ್ಳಿ ಪ್ರದೇಶದಲ್ಲಿ ನೆಟ್ವರ್ಕ್ ಸಮಸ್ಯೆಗಳು ಕೂಡ ಹೆಚ್ಚಾಗಿದೆ. ಈ ಡಿಜಿಟಲ್ ಕರೆನ್ಸಿಯನ್ನು ಆಫ್ಲೈನ್ ಮೂಲಕವೂ ಬಳಸಬಹುದಾಗಿದೆ. ಹಾಗೂ ಇದು ಇಂಟರ್ನೆಟ್ ಇಲ್ಲದೆಯೂ ಕಾರ್ಯನಿರ್ವಹಿಸುತ್ತದೆ. ಇದರಿಂದಾಗಿ ಹಳ್ಳಿ ಪ್ರದೇಶದ ಜನರಿಗೆ ಸಹಾಯವಾಗಲಿದೆ.
3. ದಕ್ಷತೆ ಮತ್ತು ಹೊಸತನ:
•ವೇಗದ ವರ್ಗಾವಣೆ:
ಇಲ್ಲಿ ಬ್ಯಾಂಕುಗಳ ಮಧ್ಯಸ್ಥಿಕೆ ಇರುವುದಿಲ್ಲ. ಇದರಿಂದಾಗಿ ವ್ಯವಹಾರಗಳಿಗೆ ವರ್ಗಾವಣೆ ಗಳಿಗೆ ಬಹಳಷ್ಟು ಸಮಯ ಹಿಡಿಯುವುದಿಲ್ಲ.
ಗ್ರಾಹಕರಿಂದ ವ್ಯಾಪಾರಿಗಳಿಗೆ ಅಥವಾ ಗ್ರಾಹಕರಿಂದ ಗ್ರಾಹಕರಿಗೆ ಕನಿಷ್ಠ ಸಮಯದಲ್ಲಿ ವರ್ಗಾವಣೆ ಮಾಡಬಹುದಾಗಿದೆ. ಈ ಹಣವು ತಕ್ಷಣವೇ ತಲುಪುತ್ತದೆ. ಮತ್ತು ಇದು ವ್ಯವಹಾರದ ದಕ್ಷತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
•ವಿದೇಶಗಳಿಗೆ ಹಣ ವರ್ಗಾವಣೆ:
ಇದಕ್ಕೂ ಮುಂಚೆ ವಿದೇಶಗಳಿಗೆ ಹಣ ಕಳುಹಿಸುವಂತಹ ವ್ಯವಸ್ಥೆಯು ದುಬಾರಿಯಾಗಿತ್ತು. ಆದರೆ ಈ ಒಂದು ಹೊಸ ಕಲ್ಪನೆಯಿಂದ ಅದು ಕೂಡ ಸುಲಭವಾಗಿದೆ.
ವಿದೇಶಗಳಿಗೆ ಹಣ ಕಳುಹಿಸುವುದು ಸುಲಭ ಮತ್ತು ವೇಗದ ಪ್ರಕ್ರಿಯೆಯಾಗಿ ಮಾರ್ಪಾಡಾಗಿದೆ.
4. ಸುರಕ್ಷತಾ ದೃಷ್ಟಿಕೋನ:
•ಬ್ಲಾಕ್ಚೈನ್ ತಂತ್ರಜ್ಞಾನ:
ನೋಟುಗಳ ವ್ಯವಹಾರವಿದ್ದಾಗ ನಕಲಿ ನೋಟುಗಳ ಹಾವಳಿ ಬಹಳ ಹೆಚ್ಚಾಗಿತ್ತು. ಹಾಗೂ ಈ ಒಂದು ಕಲ್ಪನೆಯು ಬ್ಲಾಕ್ಚೈನ್ ಮತ್ತು ಸುರಕ್ಷಿತ ತಂತ್ರಜ್ಞಾನದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ.
ಹಾಗೂ ಇದರಿಂದಾಗಿ ನಕಲಿ ನೋಟುಗಳ ಪ್ರಮಾಣ ಬಹುತೇಕವಾಗಿ ತಗ್ಗಲಿದೆ. ಡಿಜಿಟಲ್ ಕರೆನ್ಸಿ ವ್ಯವಹಾರದಲ್ಲಿ ನಕಲಿ ನೋಟುಗಳ ಪ್ರಸಂಗವೇ ಬರುವುದಿಲ್ಲ.
5. ಸಬ್ಸಿಡಿಗಳ ಲಭ್ಯತೆ:
•ಸಬ್ಸಿಡಿಗಳ ಸದ್ಬಳಕೆ:
ಸರ್ಕಾರವು ಹಲವು ಕ್ಷೇತ್ರಗಳಿಗೆ ಸಬ್ಸಿಡಿ ನೀಡುತ್ತದೆ. ಒಂದಷ್ಟು ಸಬ್ಸಿಡಿಗಳು ಸದ್ಬಳಕೆ ಆಗುತ್ತವೆ. ಮತ್ತೊಂದಷ್ಟು ಸಬ್ಸಿಡಿಗಳು ದುರ್ಬಳಕೆಯಾಗುತ್ತಿದೆ. ಮಧ್ಯವರ್ತಿಗಳು ಮತ್ತು ಹಲವರು ಇದರ ದುರುಪಯೋಗಗಳನ್ನು ಮಾಡುತ್ತಿದ್ದಾರೆ.
•ಡಿಜಿಟಲ್ ರೂಪಾಯಿಯ ಪ್ರೋಗ್ರಾಮ್:
ಕೃಷಿ ಹಾಗೂ ಇತರ ಕ್ಷೇತ್ರಗಳಿಗೆ ನೀಡುವ ಸಬ್ಸಿಡಿಯನ್ನು ಅದೇ ನಿರ್ದಿಷ್ಟ ಉದ್ದೇಶಕ್ಕೆ ಬಳಸುವಂತೆ ಡಿಜಿಟಲ್ ಕರೆನ್ಸಿಯನ್ನು ಪ್ರೋಗ್ರಾಮ್ ಮಾಡಬಹುದಾಗಿದೆ.
ಇದರಿಂದಾಗಿ ಸಬ್ಸಿಡಿಗಳ ದುರುಪಯೋಗ ಉಂಟಾಗುವುದಿಲ್ಲ. ಮತ್ತು ಇದರ ಸದ್ಬಳಕೆ ಮಾಡಲು ಸಹಾಯವಾಗುತ್ತದೆ.
6. ಕ್ರಿಪ್ಟೋ ಕರೆನ್ಸಿ ನಿಯಂತ್ರಣ:
•ಅಪಾಯಗಳಿಂದ ತಪ್ಪಿಸುವಿಕೆ:
ಕ್ರಿಪ್ಟೋ ಕರೆನ್ಸಿ ಗಳಿಗೆ ಸರ್ಕಾರಗಳಿಂದ ನೀಡಿದ ಯಾವುದೇ ಗ್ಯಾರಂಟಿ ಇರುವುದಿಲ್ಲ. ಬಿಟ್ಕಾಯಿನ್ನಂತಹ ಕ್ರಿಪ್ಟೋ ಕರೆನ್ಸಿ ಗಳು ಅಪಾಯಕಾರಿಯಾಗಿದೆ.
ಅವುಗಳ ಬದಲಾಗಿ ಜನರಿಗೆ ಸರ್ಕಾರಿ ಬ್ಯಾಂಕಿಂಗ್ ಮತ್ತು ಸುರಕ್ಷಿತ ಡಿಜಿಟಲ್ ವ್ಯವಸ್ಥೆಯನ್ನು ಮಾಡಿಕೊಡುವುದು RBI ನ ಉದ್ದೇಶವಾಗಿದೆ.
•ಸುರಕ್ಷಿತ ವ್ಯವಹಾರ:
ಹಾಗೂ ಈ ಉದ್ದೇಶದಿಂದಾಗಿ ಅಪಾಯಕಾರಿ ಕ್ರಿಪ್ಟೋ ಕರೆನ್ಸಿ ಗಳನ್ನು ತಡೆಗಟ್ಟಬಹುದಾಗಿದೆ. ಜೊತೆಗೆ ಜನರ ಹಣಕ್ಕೆ ಸುರಕ್ಷತೆಯನ್ನು ಕೂಡ ಒದಗಿಸಿದಂತಾಗುತ್ತದೆ.
ಡಿಜಿಟಲ್ ರೂಪಾಯಿ ಯೋಜನೆಗಿರುವ ಸವಾಲುಗಳು:
1. ಜಾಗೃತಿಯ ಕೊರತೆ:
•ಯುಪಿಐ ಜನಪ್ರಿಯತೆ: ದೇಶದಲ್ಲಿ ಪ್ರತಿಯೊಬ್ಬರೂ ಕೂಡ ಯುಪಿಐ ವ್ಯವಸ್ಥೆಯನ್ನ ಬಳಸುತ್ತಿದ್ದಾರೆ. ಪ್ರಸ್ತುತ ಯುಪಿಐ ವ್ಯವಸ್ಥೆ ಬಹಳಷ್ಟು ಜನಪ್ರಿಯವಾಗಿದೆ. ಹಾಗೂ ಇದು ಬಳಸಲು ಕೂಡ ಸುಲಭವಾಗಿದೆ.
ಪ್ರಸ್ತುತ ಬಳಸುತ್ತಿರುವಂತಹ ಯುಪಿಐಯನ್ನು ಬಿಟ್ಟು ಹೊಸ ಯೋಜನೆಗೆ ಜನರನ್ನು ಕರೆತರುವುದು ಕಠಿಣವಾಗಿದೆ.
•ಜನರ ನಂಬಿಕೆ ಗಳಿಸುವುದು: ಜನರು ನಂಬಿಕೆಯನ್ನು ಗಳಿಸುವುದು ಬಹಳ ಕಠಿಣ. ಯುಪಿಐ ಬದಲಿಗೆ ಜನ ಇನ್ನೊಂದು ಯೋಜನೆಯನ್ನು ಬಳಸುವಂತೆ ಮಾಡುವುದು ಸವಾಲಿನ ವಿಷಯವಾಗಿದೆ.
ಹಾಗೂ ಯುಪಿಐ ಮತ್ತು ಡಿಜಿಟಲ್ ಕರೆನ್ಸಿಯ ನಡುವಿನ ವ್ಯತ್ಯಾಸವನ್ನು ಜನರಿಗೆ ತಿಳಿಸುವುದು ಕಷ್ಟಕರವಾಗಿದೆ. ಈ ಎಲ್ಲ ಸಮಸ್ಯೆಗಳಿಂದ ಪ್ರತಿ ಹಳ್ಳಿಗೂ ಈ ವ್ಯವಸ್ಥೆಯನ್ನು ತಲುಪಿಸುವುದು ಸವಾಲಿನ ವಿಷಯ ಎನ್ನಬಹುದಾಗಿದೆ.
2. ತಾಂತ್ರಿಕ ಸಮಸ್ಯೆಗಳು:
•ಡಬಲ್ ಸ್ಪೆಂಡಿಂಗ್: ಈ ಹೊಸ ವ್ಯವಸ್ಥೆಯಲ್ಲಿ ಇಂಟರ್ನೆಟ್ ಬಳಕೆಯ ಅವಶ್ಯಕತೆ ಇರುವುದಿಲ್ಲ. ನೆಟ್ವರ್ಕ್ ಸಹಾಯವಿಲ್ಲದೆ ಪಾವತಿ ಮಾಡಬಹುದಾಗಿದೆ.
ಇದರಿಂದಾಗಿ ಇಲ್ಲಿ ಡಬಲ್ ಸ್ಪೆಂಡಿಂಗ್ ಆಗುವ ಸಾಧ್ಯತೆ ಇರುತ್ತದೆ. (ಒಂದೇ ನೋಟನ್ನು ಎರಡು ಬಾರಿ ಬಳಸುವುದು).
ಹಾಗೂ ಇದನ್ನು ತಡೆದು ಸುರಕ್ಷಿತವಾದ ವ್ಯವಹಾರ ನಡೆಯುವಂತೆ ಮಾಡುವುದು ತಾಂತ್ರಿಕವಾಗಿ ಸವಾಲಿನ ವಿಷಯವಾಗಿದೆ.
•ನಿರಂತರ ತಾಂತ್ರಿಕ ಸವಾಲು: ಗ್ರಾಮೀಣ ಭಾಗಗಳಲ್ಲಿ ಹಾಗೂ ಹಲವು ಭಾಗಗಳಲ್ಲಿ ನಿರಂತರವಾಗಿ ನೆಟ್ವರ್ಕ್ ಇರುವುದಿಲ್ಲ.
ಇಂತಹ ಸಂದರ್ಭದಲ್ಲಿ ಆ ಮೂಲಸೌಕರ್ಯಗಳ ಕೊರತೆ ಇರುತ್ತದೆ. ಮತ್ತು ನಿರಂತರವಾದ ತಾಂತ್ರಿಕ ಸಂಪರ್ಕದ ಕೊರತೆಯೂ ಕೂಡ ಇರುತ್ತದೆ.
ಇದರಿಂದಾಗಿ RBI ಬ್ಯಾಂಕ್ ವಾಲೆಟ್ ಜೊತೆಗೆ ಸಂಪರ್ಕ ಹೊಂದಿರಲು ಸಾಧ್ಯವಾಗದೇ ಇರಬಹುದು.
3. ವ್ಯವಸ್ಥೆಯ ಮೇಲೆ ಪ್ರಭಾವ ಬೀರುವಿಕೆ:
•ವಾಲೆಟ್ ಬಳಕೆಯ ಪ್ರಭಾವ: ಈ ಒಂದು ಯೋಜನೆಯ ಜಾರಿಯಿಂದಾಗಿ ಜನರು ಡಿಜಿಟಲ್ ನತ್ತ ಮುಖ ಮಾಡಲು ಪ್ರಾರಂಭಿಸುತ್ತಾರೆ.
ಇದರಿಂದ ಜನರು ಬ್ಯಾಂಕುಗಳಲ್ಲಿರುವ ಹಣವನ್ನು ತೆಗೆದು RBI ವಾಲೆಟ್ ನಲ್ಲಿ ಇಡಲು ಪ್ರಾರಂಭ ಮಾಡುತ್ತಾರೆ.
•ಠೇವಣಿ ಪ್ರಮಾಣ ಕಡಿಮೆ: ಹಾಗೂ ಈ ಕಾರಣದಿಂದಾಗಿ ಬ್ಯಾಂಕುಗಳಲ್ಲಿ ಠೇವಣಿ ಇರುವವರ ಪ್ರಮಾಣ ಕಡಿಮೆಯಾಗಬಹುದಾಗಿದೆ. ಹಾಗೂ ಒಂದು ವ್ಯವಸ್ಥೆಯು ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಮಸ್ಯೆಯನ್ನುಂಟು ಮಾಡಬಹುದು.
ಇನ್ನು ಬ್ಯಾಂಕುಗಳಲ್ಲಿ ಠೇವಣಿ ಕಡಿಮೆಯಾದಾಗ, ಅವುಗಳಿಂದ ಸಾಲ ಸೌಲಭ್ಯ ನೀಡುವ ಪ್ರಮಾಣವು ಕಡಿಮೆಯಾಗಲಿದೆ. ಇದರಿಂದಾಗಿ ಬ್ಯಾಂಕುಗಳ ಲಾಭದ ಜೊತೆ ಜನರಿಗೂ ಕೂಡ ಸಮಸ್ಯೆ ಉಂಟಾಗುತ್ತದೆ.
4. ಸೈಬರ್ ಸಮಸ್ಯೆಗಳು:
•ಅಭದ್ರತೆಯ ಸಮಸ್ಯೆ: ಈ ಒಂದು ಹೊಸ ವ್ಯವಸ್ಥೆಯು ಸಂಪೂರ್ಣವಾಗಿ ಡಿಜಿಟಲೀಕರಣವಾಗಿರುತ್ತದೆ. ಇಲ್ಲಿ ಪ್ರತಿಯೊಂದು ಹೆಜ್ಜೆಯೂ ಕೂಡ ಡಿಜಿಟಲ್ ವೇದಿಕೆಯ ಮೂಲಕವೇ ಇರಬೇಕಾಗುತ್ತದೆ.
ಆದರೆ ಡಿಜಿಟಲ್ ವೇದಿಕೆಯಲ್ಲಿ ಸೈಬರ್ ಕ್ರೈಂ ಮತ್ತು ಹ್ಯಾಕಿಂಗ್ ಸಮಸ್ಯೆಗಳು ಹೆಚ್ಚಿರುತ್ತದೆ. ಹಾಗೂ ಈ ಹ್ಯಾಕಿಂಗ್ ಗಳು ನೇರವಾಗಿ ವಾಲೆಟ್ ಮೇಲೆ ದಾಳಿ ನಡೆಸುವ ಸಾಧ್ಯತೆ ಕೂಡ ಇರುತ್ತದೆ.
•ನಿರಂತರ ಕೆಲಸ: ಇಂತಹ ಸಂದರ್ಭದಲ್ಲಿ ವಾಲೆಟ್ ಅನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದು RBI ಬ್ಯಾಂಕಿಗಿರುವ ನೇರ ಸವಾಲಾಗಿದೆ. ಮತ್ತು ಇದೊಂದು ನಿರಂತರವಾದ ಕೆಲಸವಾಗಿ ಪರಿಣಾಮ ಬೀರಬಹುದಾಗಿದೆ.
ತಂತ್ರಜ್ಞಾನದ ಅರಿವಿಲ್ಲದ ಎಷ್ಟೋ ಜನರು ಈ ಯೋಜನೆಯ ಲಾಭ ಪಡೆಯುತ್ತಿರುತ್ತಾರೆ. ಅಂತಹವರನ್ನು ಗುರಿ ಮಾಡಿ ನಕಲಿ ಆಪ್ ಗಳ ಮೂಲಕ ಅಥವಾ ಫಿಶಿಂಗ್ ಲಿಂಕ್ಗಳ ಮೂಲಕ ಹ್ಯಾಕ್ ಮಾಡುವ ಸಾಧ್ಯತೆ ಇರುತ್ತದೆ.
5. ಕಾನೂನು ಮತ್ತು ಗೌಪ್ಯತೆ:
•ಕಾನೂನು ಬಾಹಿರತೆ: ಕಾಗದದ ಹಣದಂತೆ ಡಿಜಿಟಲ್ ರುಪಾಯಿಗೂ ಕೂಡ ಗೌಪ್ಯತೆಯನ್ನು ನೀಡಬಹುದಾಗಿದೆ. ಆದರೆ ಈ ರೀತಿಯ ಗೌಪ್ಯತೆಗಳು ಕಪ್ಪು ಹಣ ವರ್ಗಾವಣೆ ಮತ್ತು ಕಾನೂನು ಬಾಹಿರ ಚಟುವಟಿಕೆಗಳಿಗೆ ದಾರಿ ಮಾಡಿಕೊಡುವ ಸಾಧ್ಯತೆ ಇರುತ್ತದೆ
•ಖಾಸಗಿ ತನಕ್ಕೆ ಧಕ್ಕೆ: ಇದನ್ನು ತಡೆಯುವ ಸಲುವಾಗಿ ಗ್ರಾಹಕರ ಪ್ರತಿಯೊಂದು ಚಟುವಟಿಕೆಯನ್ನು ಕೂಡ ಟ್ರ್ಯಾಕ್ ಮಾಡಬಹುದಾಗಿದೆ.
ಆದರೆ ಇದು ಗ್ರಾಹಕರ ಖಾಸಗಿತನಕ್ಕೆ ಧಕ್ಕೆಯುಂಟು ಮಾಡುತ್ತದೆ. ಹಾಗೂ ಈ ಎರಡರ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವುದು. ಈ ಯೋಜನೆಗೆ ಇರುವಂತಹ ದೊಡ್ಡ ಸವಾಲಿನ ವಿಷಯವಾಗಿದೆ.
ಸವಾಲುಗಳನ್ನು ಎದುರಿಸಲು ಆರ್ ಬಿ ಐ ತೆಗೆದುಕೊಳ್ಳುತ್ತಿರುವ ಕ್ರಮಗಳು:
1. ಅಧಿಕೃತ ಆಫ್ ಲೈನ್ ಪಾವತಿ:
ನೆಟ್ವರ್ಕ್ ಇಲ್ಲದ ಪ್ರದೇಶಗಳಿಗಾಗಿ RBI ಬ್ಯಾಂಕ್ ನಿಯರ್ ಫೀಲ್ಡ್ ಕಮ್ಯುನಿಕೇಷನ್ ಎಂಬ ತಂತ್ರಜ್ಞಾನವನ್ನು ಅಧಿಕೃತವಾಗಿ ಪರಿಚಯಿಸಿದೆ.
ಇಲ್ಲಿ ಗ್ರಾಹಕರು ತಮ್ಮ ಮೊಬೈಲ್ ಅನ್ನು ಇನ್ನೊಂದು ಸಾಧನಕ್ಕೆ ಟಚ್ ಮಾಡಿಸುವುದು.
ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಹಣವನ್ನು ವರ್ಗಾಯಿಸಬಹುದಾಗಿದೆ.
2. ಯುಪಿಐ ಜೊತೆ ಹೊಂದಾಣಿಕೆ:
ಗ್ರಾಹಕರಿಗೆ ಗೊಂದಲಗಳು ಉಂಟಾಗದಂತೆ ಯುಪಿಐ ಜೊತೆಗೆ ಡಿಜಿಟಲ್ ರುಪಾಯಿಯನ್ನು ಹೊಂದಿಸಲಾಗಿದೆ.
ಅಂಗಡಿಗಳಲ್ಲಿ ಯುಪಿಐ ಕ್ಯು ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಡಿಜಿಟಲ್ ವಾಲೆಟ್ ನಿಂದಲೇ ಹಣದ ವರ್ಗಾವಣೆ ಮಾಡಬಹುದು.
ಈ ಒಂದು ವ್ಯವಸ್ಥೆಯು ಹೊಸ ಯೋಜನೆಗೆ ಜನರು ಹೊಂದಿಕೊಳ್ಳಲು ಸುಲಭದಾಯಕವಾಗಿದೆ.
3. ಸಬ್ಸಿಡಿ ಸೌಲಭ್ಯ:
RBI ಈ ಸೌಲಭ್ಯದ ಬಳಕೆಯನ್ನು ಸಾರ್ವಜನಿಕರಲ್ಲಿ ಹೆಚ್ಚಿಸುವ ಗುರಿಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ಸರ್ಕಾರದಿಂದ ಬರುವಂತಹ ಹಲವು ಸಬ್ಸಿಡಿಗಳನ್ನು ಡಿಜಿಟಲ್ ರೂಪಾಯಿ ಮೂಲಕ ಬರುವಂತೆ ಮಾಡಿದೆ.
ಚಂಡಿಗಡ, ಪುದುಚೇರಿ ಮತ್ತು ಗುಜರಾತ್ ಸೇರಿದಂತೆ ಹತ್ತಕ್ಕೂ ಹೆಚ್ಚು ಪ್ರದೇಶಗಳಲ್ಲಿ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.
ಇಲ್ಲಿ ಸಬ್ಸಿಡಿ ಹಣವನ್ನು ಡಿಜಿಟಲ್ ರೂಪಾಯಿ ಮೂಲಕ ಸಾರ್ವಜನಿಕರಿಗೆ ನೀಡಲಾಗುತ್ತಿದೆ. ಮತ್ತು ಇದರ ಬಳಕೆಯನ್ನು ಉತ್ತೇಜಿಸಲಾಗುತ್ತಿದೆ.
4. ಸೈಬರ್ ಸುರಕ್ಷತೆ:
RBI ಹಣಕಾಸು ಸಂಸ್ಥೆ ಗಳಿಗಾಗಿ ಪ್ರತ್ಯೇಕ ಕ್ಲೌಡ್ ಪ್ಲಾಟ್ಫಾರ್ಮ್ ಗಳನ್ನು ರೂಪಿಸಿದೆ.
ಇವುಗಳಿಂದಾಗಿ ಹಣದ ವರ್ಗಾವಣೆಯು ಸುರಕ್ಷಿತವಾಗಿ ನಡೆಯುತ್ತದೆ. ಈ ಮೂಲಕವಾಗಿ ಸೈಬರ್ ಅಕ್ರಮಗಳನ್ನು ತಪ್ಪಿಸಲು ಸಹಾಯಕವಾಗುತ್ತದೆ.
ಹಾಗೂ ಸಣ್ಣ ಪುಟ್ಟ ವ್ಯವಹಾರಗಳಿಗೆ ನಿಯಮಿತವಾದ ಆರಾಮಧೇಯತೆಯನ್ನು ನೀಡಲಾಗುತ್ತದೆ.
ಇದರಿಂದಾಗಿ ಗ್ರಾಹಕರ ಖಾಸಗಿತನವನ್ನು ರಕ್ಷಣೆ ಮಾಡುವ ಕ್ರಮವನ್ನು ಕೈಗೊಳ್ಳಲಾಗುತ್ತಿದೆ.
5. ಅಂತರಾಷ್ಟ್ರೀಯ ಮಟ್ಟದ ವಿಸ್ತರಣೆ:
ರಿಟೇಲ್ ಬಳಕೆಯಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತಿವೆ. ಇದಕ್ಕಾಗಿ RBI ಅಂತರಾಷ್ಟ್ರೀಯ ಪಾವತಿಗಳತ್ತ ಗಮನಹರಿಸುತ್ತಿದೆ.
RBI ಸಿಂಗಾಪುರ ಮತ್ತು ಯುಎಇ ಗಳ ದೇಶಗಳ ಹಣಕಾಸು ಸಂಸ್ಥೆಗಳ ಜೊತೆಗೆ ಒಪ್ಪಂದಗಳನ್ನು ಮಾಡಿಕೊಂಡಿದೆ.
ಮತ್ತು ಈ ಮೂಲಕ ವಿದೇಶಗಳಿಗೆ ಸುಲಭವಾಗಿ ಹಣವನ್ನು ವರ್ಗಾಯಿಸುವ ಜಂಟಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.
ಈ ಒಂದು ಡಿಜಿಟಲ್ ರೂಪಾಯಿ RBI ತೆಗೆದುಕೊಂಡಿರುವಂತಹ ಪ್ರಮುಖ ಹೆಜ್ಜೆಯಾಗಿದೆ. ಈ ಯೋಜನೆಯಿಂದಾಗಿ ಹಳ್ಳಿಗಾಡಿನ ಪ್ರದೇಶದಲ್ಲೂ ಕೂಡ ಡಿಜಿಟಲ್ ವ್ಯವಸ್ಥೆಗೆ ಹೊಂದಿಕೊಳ್ಳಬಹುದಾಗಿದೆ.
ಇದು ಕೇವಲ ಬ್ಯಾಂಕಿಂಗ್ ಕ್ಷೇತ್ರವನ್ನಷ್ಟೇ ಅಲ್ಲದೆ ಡಿಜಿಟಲ್ ಇಂಡಿಯಾ ಕನಸನ್ನು ಕೂಡ ನನಸು ಮಾಡಲು ಸಹಕಾರಿಯಾಗಲಿದೆ.
ಇನ್ನಷ್ಟು ಮಾಹಿತಿಗಾಗಿ: Indian banks association
ಇದನ್ನು ಓದಿ: 6G Mission