National Geospatial Policy:ಉದ್ದೇಶಗಳು, ಪ್ರಯೋಜನಗಳು & ಅನುಷ್ಠಾನ

Spread the love

National Geospatial Policy:ರಾಷ್ಟ್ರೀಯ ಜಿಯೋಸ್ಪೇಷಿಯಲ್ ನೀತಿ ಎಂಬುದು ಭಾರತ ಸರ್ಕಾರದ ಪ್ರಮುಖ ಹೆಜ್ಜೆಯಾಗಿದೆ. ಇದನ್ನು ಫೆಬ್ರವರಿ 28, 2022 ರಲ್ಲಿ ಜಾರಿಗೊಳಿಸಲಾಯಿತು.

National Geospatial Policy
National Geospatial Policy

National Geospatial Policy: ಇದು 2030, 2035 ರ ತನಕ ಸಾಧಿಸಲು ಹಲವಾರು ಗುರಿಗಳನ್ನು ಹೊಂದಿದೆ. ದೇಶದ ಭೂವ್ಯೋಮ ವಲಯವನ್ನು ಜಾಗತಿಕ ಮಟ್ಟದಲ್ಲಿ ಮುಂಚೂಣಿಗೆ ತರುವುದು.

ಮತ್ತು ಡಿಜಿಟಲ್ ಆರ್ಥಿಕ ವ್ಯವಸ್ಥೆಯನ್ನು ಬಲಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

National Geospatial Policy: ಜಿಯೋಸ್ಪೇಷಿಯಲ್ ಎಂದರೇನು?

ಜಿಯೋಸ್ಪೇಷಿಯಲ್ ಎಂದರೆ ಭೂಮಿಯ ಮೇಲೆ ಇರುವಂತಹ ಒಂದು ನಿರ್ದಿಷ್ಟ ಸ್ಥಳ ಅಥವಾ ವಸ್ತುವಿನ ಕುರಿತಾದ ಮಾಹಿತಿಯಾಗಿದೆ.

ಒಂದು ವಸ್ತು ಎಲ್ಲಿದೆ ಮತ್ತು ಹೇಗಿದೆ ಎಂಬುದರ ಕುರಿತಾದ ವಿವರಣೆಯೇ ಜಿಯೋಸ್ಪೇಷಿಯಲ್ ಡೇಟಾ.

ಇದರಲ್ಲಿ ಎರಡು ಪ್ರಮುಖ ಅಂಶಗಳಿವೆ:

•ಸ್ಥಳ: ಇಲ್ಲಿ ವಸ್ತುವಿನ ರೇಖಾಂಶ ಮತ್ತು ಅಕ್ಷಾಂಶವನ್ನು ಗುರುತಿಸಲಾಗುವುದು. ಮತ್ತು ಅದರ ಎತ್ತರ ಮತ್ತು ವಿಳಾಸದ ಗುರುತು ಹಿಡಿಯಲಾಗುತ್ತದೆ.

•ಗುಣಲಕ್ಷಣ: ಆ ಒಂದು ಸ್ಥಳದಲ್ಲಿ ಏನೇನಿದೆ ಮತ್ತು ಹೇಗಿದೆ ಎಂಬುದರ ಕುರಿತಾದ ಮಾಹಿತಿಯಾಗಿದೆ. ಉದಾಹರಣೆಗೆ ಆ ಸ್ಥಳದ ಹವಾಮಾನ, ಅಲ್ಲಿನ ಹೆಸರು ಇತ್ಯಾದಿಗಳು.

 

National Geospatial Policy:ಈ ನೀತಿಯು ಜಾರಿಯಾದ ಹಂತಗಳು:

>2022 ಡಿಸೆಂಬರ್ 16ರಂದು ಪ್ರಧಾನಿ ಮೋದಿ ನೇತೃತ್ವದ ಸಚಿವ ಸಂಪುಟ ಈ ನೀತಿಗೆ ಅನುಮೋದನೆ ನೀಡಿತು.

>ಹಾಗೂ 2022 ಡಿಸೆಂಬರ್ 28ರಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಇದನ್ನು ತಕ್ಷಣವೇ ಬಿಡುಗಡೆಗೊಳಿಸಿತು. ಮತ್ತು ತಕ್ಷಣವೇ ಜಾರಿಗೊಳಿಸುವಂತೆ ಆದೇಶ ನೀಡಿತು.

>2021 ಫೆಬ್ರವರಿಯಲ್ಲಿ ಭೂವ್ಯೋಮ ಡೇಟಾ ಸಂಗ್ರಹಣೆ. ಮತ್ತು ಇದರ ಬಳಕೆಯ ಉದಾರೀಕರಣ ಸಲುವಾಗಿ ಮಾರ್ಗಸೂಚಿಗಳನ್ನು ರೂಪಿಸಲಾಗಿತ್ತು. ಇದೇ ಈ ಹೊಸ ನೀತಿಯ ಜಾರಿಗೆ ಅಡಿಪಾಯವಾಗಿದೆ.

ಜಿಯೋಸ್ಪೇಷಿಯಲ್ ನೀತಿಯ ಲಕ್ಷಣಗಳು:

 

ಉದಾರೀಕರಣ: ಇಲ್ಲಿ ಭದ್ರತಾ ದೃಷ್ಟಿಯಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಭದ್ರತಾ ದೃಷ್ಟಿಯಿಂದ ಸೂಕ್ಷ್ಮವಲ್ಲದೆ ಇರುವಂತಹ ಸರ್ಕಾರಿ ಡೇಟಾವನ್ನು ಮುಕ್ತವಾಗಿ ಲಭ್ಯವಾಗಿಸುವುದು.

ಹಾಗೂ ಈ ಡೇಟಾವನ್ನು ಬಳಸಲು ಖಾಸಗಿ ಕಂಪನಿಗಳಿಗೆ ಪರವಾನಗಿಯ ಅಗತ್ಯವಿತ್ತು. ನಂತರದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ.

ಪ್ರಸ್ತುತ ಪರವಾನಗಿ ಮತ್ತು ಮುಂಚಿತ ಅನುಮತಿಯ ನಿಯಮಗಳನ್ನು ತೆಗೆದುಹಾಕಲಾಗಿದೆ. ಈ ಮೂಲಕ ಖಾಸಗಿ ಕಂಪನಿಗಳು ಸುಲಭವಾಗಿ ಡೇಟಾವನ್ನು ಬಳಸಬಹುದಾಗಿದೆ.

ಮೂಲಸೌಕರ್ಯ: ಈ ನೀತಿಯು 2035ರ ವೇಳೆಗೆ ಸಾಧಿಸಲು ಹಲವು ಗುರಿಗಳನ್ನು ಹೊಂದಿದೆ. ಹೀಗಾಗಿ ದೇಶದ ಪ್ರಮುಖ ನಗರಗಳ ಸ್ಮಾರ್ಟ್ ಯೋಜನೆಗಾಗಿ ಹೈ-ರೆಸಲ್ಯೂಶನ್ ‘ರಾಷ್ಟ್ರೀಯ ಡಿಜಿಟಲ್ ಟ್ವಿನ್ಸ್’ ಅನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.

ಸಂಪೂರ್ಣ ದೇಶಕ್ಕೆ ಒಂದೇ ರೀತಿಯ ಡಿಜಿಟಲ್ ಎಲಿವೇಶನ್ ಮಾಡೆಲ್. ಮತ್ತು ಟೊಪೊಗ್ರಾಫಿಕಲ್ ಡೇಟಾವನ್ನು ಸಿದ್ಧಪಡಿಸುವುದಾಗಿದೆ.

ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು: ಎಲ್ಲಾ ಭೂವ್ಯೋಮ ಡೇಟಾವನ್ನು ಒಂದೇ ಕಡೆ ಸಂಗ್ರಹಿಸಿರುವ ಯೋಜನೆಯನ್ನು ಹೊಂದಿದೆ. ಈ ಸಲುವಾಗಿ ರಾಷ್ಟ್ರೀಯ ಜಿಯೋಸ್ಪೇಷಿಯಲ್ ಡೇಟಾ ರಿಜಿಸ್ಟ್ರಿ ಯನ್ನು ರಚಿಸಲಾಗಿದೆ.

ಇಲ್ಲಿ ಗ್ರಾಹಕರು ಸುಲಭವಾಗಿ ಡೇಟಾವನ್ನು ಹುಡುಕಲು ಮತ್ತು ಬಳಸಲು ಅವಕಾಶ ಮಾಡಿಕೊಡಲಾಗಿದೆ. ಇದಕ್ಕಾಗಿ ಏಕೀಕೃತ ಜಿಯೋಸ್ಪೇಷಿಯಲ್ ಇಂಟರ್ಫೇಸ್ ಅನ್ನು ಅಭಿವೃದ್ಧಿಗೊಳಿಸಲಾಗಿದೆ.

ಆರ್ಥಿಕ ಪ್ರಗತಿ: ಈ ಒಂದು ನೀತಿಯ ಮೂಲಕ ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜನ ನೀಡಲಾಗುವುದು. ಮತ್ತು ಈ ಮೂಲಕ 10 ಲಕ್ಷಕ್ಕೂ ಹೆಚ್ಚು ಉದ್ಯೋಗವನ್ನು ಸೃಷ್ಟಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.

ಹಾಗೂ ಇಲ್ಲಿ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಲುವಾಗಿ ಹೆಚ್ಚಿನ ಮಟ್ಟದ ಜಿಯೋಸ್ಪೇಷಿಯಲ್ ಡೇಟಾ ಪ್ರಚಾರ ಮತ್ತು ಅಭಿವೃದ್ಧಿ ಸಮಿತಿಯ ರಚನೆ ಮಾಡಲಾಗಿದೆ.

ಸ್ಥಳೀಯ ಹೊಸತನ: ಇಲ್ಲಿ ಆತ್ಮ ನಿರ್ಧಾರ ಭಾರತ ಯೋಜನೆ ಅಡಿ ಕೆಲವೊಂದು ಕ್ರಮಗಳನ್ನು ಕೈಗೊಳ್ಳಲಾಗಿದೆ. ಭಾರತದ ಸ್ಥಳೀಯ ಪ್ರತಿಭೆಗಳಿಗೆ ಅವಕಾಶಗಳನ್ನು ನೀಡುವ ಗುರಿ ಇಟ್ಟುಕೊಳ್ಳಲಾಗಿದೆ.

ಇದಕ್ಕಾಗಿ ಭಾರತದ ಮೂಲ ಕಂಪನಿಗಳಿಗೆ ಉನ್ನತ ಮಟ್ಟದ ರೆಸಲ್ಯೂಶನ್ ಡೇಟಾ ಸಂಗ್ರಹಣೆಯಲ್ಲಿ ಅವಕಾಶ ಮತ್ತು ಆದ್ಯತೆಗಳನ್ನು ನೀಡಲಾಗುತ್ತದೆ.

ಜಿಯೋಸ್ಪೇಷಿಯಲ್ ನೀತಿಯ ಉದ್ದೇಶಗಳು:

1.ಮೂಲಸೌಕರ್ಯ:

 

NGDR: ಇಲ್ಲಿ ದೇಶದ ಎಲ್ಲಾ ಮ್ಯಾಪಿಂಗ್ ಡೇಟಾವನ್ನು ಒಂದೇ ವೇದಿಕೆಯಲ್ಲಿ ತರುವ ಪ್ರಯತ್ನವನ್ನು ಮಾಡಲಾಗುತ್ತಿದೆ. ರಾಷ್ಟ್ರೀಯ ಜಿಯೋಸ್ಪೇಷಿಯಲ್ ಡೇಟಾ ರಿಜಿಸ್ಟ್ರಿ(NGDR) ಚಾಲನೆಗೆ ತರುವ ಮೂಲಕ ಈ ಉದ್ದೇಶವನ್ನು ಕಾರ್ಯಗತಗೊಳಿಸಲಾಗುತ್ತದೆ.

ಡೇಟಾ ಲಭ್ಯತೆ: ರಾಜ್ಯಮಟ್ಟದ ಮತ್ತು ಸ್ಥಳೀಯ ಮಠದ ಸಂಸ್ಥೆಗಳಿಗೆ ಡೇಟಾ ದ ಅವಶ್ಯಕತೆ ಇರುತ್ತದೆ. ಈ ನಿಟ್ಟಿನಲ್ಲಿ ಅವುಗಳನ್ನು ಅವರಿಗೆ ಸಿಗುವಂತೆ ಮಾಡಲಾಗುತ್ತದೆ. ಮತ್ತು ಆ ಪ್ರಕ್ರಿಯೆಯನ್ನು ಸುಲಭಗೊಳಿಸುವ ಉದ್ದೇಶವನ್ನು ಹೊಂದಿದೆ.

ನಿಯಮಗಳ ಸಡಿಲಿಕೆ: ಭೂವ್ಯೋಮ ವಲಯದ ಸುಧಾರಣೆಯು ಅಗತ್ಯವಾಗಿದೆ. ಇದಕ್ಕಾಗಿ ಕಾನೂನು ಮತ್ತು ಆಡಳಿತಕ್ಕೆ ಸಂಬಂಧಪಟ್ಟಂತಹ ನಿಯಮಗಳನ್ನು ಸುಲಭಗೊಳಿಸುವ ಗುರಿಯನ್ನು ಹೊಂದಲಾಗಿದೆ.

2. ಜ್ಞಾನ ಮತ್ತು ತಾಂತ್ರಿಕತೆ:

DEM: ಇಲ್ಲಿ ದೇಶದ ಸುತ್ತಳತೆಯ ಕುರಿತು ತಿಳಿದುಕೊಳ್ಳುವುದು ಅಗತ್ಯವಾದ ಅಂಶವಾಗಿದೆ. ಮತ್ತು ಇದು ಪ್ರತಿಯೊಬ್ಬ ಜನತೆಗೂ ತಿಳಿಸುವ ಉದ್ದೇಶವನ್ನು ಕೂಡ ಹೊಂದಿದೆ.

ಈ ನಿಟ್ಟಿನಲ್ಲಿ ದೇಶದ ಎತ್ತರ ಮತ್ತು ಆಳವನ್ನು ಅಳೆಯುವ ಅಗತ್ಯವಿದೆ. ಇದಕ್ಕಾಗಿ ಡಿಜಿಟಲ್ ಎಲಿವೇಶನ್ ಮಾಡೆಲ್(DEM) ಅನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿದೆ.

ಮ್ಯಾಪಿಂಗ್ ವ್ಯವಸ್ಥೆ: ದೇಶದ ಕುರಿತಾಗಿ ತಿಳಿಯಲು ದೇಶದ ಮ್ಯಾಪ್ ಬಹಳ ಅಗತ್ಯವಾಗಿದೆ. ಪ್ರತಿಯೊಂದು ಸಂಶೋಧನೆಗಳಲ್ಲೂ ತರಗತಿಗಳಲ್ಲೂ ಬಳಸಲಾಗುತ್ತದೆ.

ಹಾಗೂ ಇಲ್ಲಿ ದೇಶದ ಭೂಪ್ರದೇಶಕ್ಕೆ ತಕ್ಕಂತೆ ನಿಖರವಾದ ಟೊಪೊಗ್ರಾಫಿಕಲ್ ಸರ್ವೆ. ಮತ್ತು ನಕ್ಷೆಗಳನ್ನು ತಯಾರಿಸುವ ಉದ್ದೇಶವನ್ನು ಹೊಂದಲಾಗಿದೆ.

ಮೂಲಸೌಕರ್ಯಗಳು: ಜಿಯೋಸ್ಪೇಷಿಯಲ್ ಜ್ಞಾನ ಬಹಳ ಮುಖ್ಯವಾದ ಅಂಶವಾಗಿದೆ. ಇದನ್ನು ಪ್ರತಿಯೊಬ್ಬರೂ ಬಳಸುತ್ತಾರೆ. ಮತ್ತು ಪ್ರತಿಯೊಬ್ಬರ ತಿಳುವಳಿಕೆಗೆ ಇದು ಅಗತ್ಯಕರ ಅಂಶವಾಗಿದೆ.

ಈ ನಿಟ್ಟಿನಲ್ಲಿ ಈ ಯೋಜನೆ ಅಡಿ ಜಿಯೋಸ್ಪೇಷಿಯಲ್ ಜ್ಞಾನಕ್ಕೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.

3. ಭವಿಷ್ಯ ಭಾರತದ ಗುರಿಗಳು:

ನಗರ ಅಭಿವೃದ್ಧಿ: ಈ ಯೋಜನೆ ಅಡಿಯಲ್ಲಿ ನಗರಗಳ ಅಭಿವೃದ್ಧಿಗೆ ಅಗತ್ಯವಿರುವ ಅಂಶಗಳನ್ನು ಮುನ್ನಲೆಗೆ ತರಲಾಗುತ್ತದೆ. ಇಲ್ಲಿ ನಗರ ಯೋಜನೆ ಮತ್ತು ವಿಪತ್ತು ನಿರ್ವಹಣೆಗೆ ಒತ್ತು ನೀಡಲಾಗಿದೆ.

ಇದಕ್ಕೆ ಸಂಬಂಧಪಟ್ಟಂತೆ ಪ್ರಮುಖ ನಗರಗಳ ನೈಜ ಮತ್ತು 3D ಮಾದರಿಗಳನ್ನು ಸೃಷ್ಟಿಸಲಾಗುತ್ತದೆ. ಇದು ನಗರಗಳಿಗೆ ಸಂಬಂಧಪಟ್ಟಂತೆ ಅಭಿವೃದ್ಧಿ ಕ್ರಮಗಳನ್ನು ಜಾರಿಗೊಳಿಸಲು ಸಹಾಯ ಮಾಡಲಿದೆ.

ಬ್ಲೂ ಎಕಾನಮಿ: ಬ್ಲೂ ಎಕಾನಮಿಯು ಭಾರತದ ಮತ್ತೊಂದು ಪ್ರಮುಖ ಅಂಶವಾಗಿದೆ. ಇವರ ಅಭಿವೃದ್ಧಿಯು ಕೂಡ ಸರ್ವತೋಮುಖ ಅಭಿವೃದ್ಧಿಯಲ್ಲಿ ಪಾತ್ರವಹಿಸಲಿದೆ.

ಮತ್ತು ಇದಕ್ಕೆ ಸಂಬಂಧಪಟ್ಟಂತೆ ಈ ಎಂದು ಯೋಜನೆಯ ಅಡಿಯಲ್ಲಿ ಕೆಲವು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ.

ಸಮುದ್ರಗಳ ಆಳ ಮತ್ತು ಜಲ ಮೂಲಗಳ ವಿವರಣೆಗಳನ್ನು ಒಳಗೊಂಡಂತಹ ಡೇಟಾವನ್ನು ಇಲ್ಲಿ ಸಂಗ್ರಹಿಸಲಾಗುತ್ತದೆ. ಈ ಮೂಲಕ ನಿಖರವಾದ ಮಾಹಿತಿಗಳು ದೊರೆಯಲಿದೆ.

ಮತ್ತು ಇವು ಭವಿಷ್ಯದಲ್ಲಿ ಕೈಗೊಳ್ಳುವ ಅಭಿವೃದ್ಧಿಗಳಿಗೆ ಮತ್ತು ಸಂಶೋಧನೆಗಳಿಗೆ ಸಹಕಾರ ನೀಡಲಿವೆ.

4. ಆರ್ಥಿಕತೆ ಮತ್ತು ಉದ್ಯೋಗ:

ಸ್ವಾವಲಂಬಿ ಭಾರತ: ಪ್ರಸ್ತುತ ಭಾರತೀಯರು ಹೆಚ್ಚಾಗಿ ಮ್ಯಾಪ್ ಗಳ ಮೇಲೆ ಅವಲಂಬಿತರಾಗಿದ್ದಾರೆ. ಮ್ಯಾಪ್ ಗಳಿಲ್ಲದೆ ಪಯಣವೇ ಸಾಗುವುದಿಲ್ಲ ಎಂಬ ಮಟ್ಟಿಗೆ ಬಂದಿದ್ದೇವೆ.

ಹಾಗೂ ಎಲ್ಲಾ ರೀತಿಯ ಪ್ರಯಾಣಗಳಿಗೂ ಮ್ಯಾಪ್ ಬಹುದೊಡ್ಡ ಕೊಡುಗೆ ನೀಡುತ್ತದೆ.

ಈ ನಿಟ್ಟಿನಲ್ಲಿ ನಾವು ಪ್ರಸ್ತುತ ವಿದೇಶಗಳ ಮೇಲೆ ಮ್ಯಾಪ್ ಗಳಿಗಾಗಿ ಅವಲಂಬಿಸಿದ್ದೇವೆ. ಇದರಿಂದಾಗಿ ಭಾರತದಲ್ಲಿ ಜಿಯೋಸ್ಪೇಷಿಯಲ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು ಅಗತ್ಯ ಅಂಶವಾಗಿದೆ.

ಇದು ಭಾರತವನ್ನು ಮ್ಯಾಪಿಂಗ್ ವಿಚಾರದಲ್ಲಿ ಜಾಗತಿಕ ಹಬ್ ಮಾಡಲು ಸಹಕಾರ ನೀಡುತ್ತದೆ. ಮತ್ತು ಮ್ಯಾಪ್ ಗಳಿಗಾಗಿ ವಿದೇಶಿಯರನ್ನು ಅವಲಂಬಿಸುವುದು ಕೂಡ ತಪ್ಪುತ್ತದೆ. ಜೊತೆಗೆ ಭಾರತ ಈ ವಿಷಯದಲ್ಲಿ ಸ್ವಾವಲಂಬಿಯಾಗಿ ಮುನ್ನುಗ್ಗಬಹುದಾಗಿದೆ.

ಉದ್ಯೋಗದ ಅಭಿವೃದ್ಧಿ: ಸ್ವದೇಶಿ ಮ್ಯಾಪಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇದರಿಂದಾಗಿ ಸ್ವದೇಶಗಳಲ್ಲಿ ಇದಕ್ಕೆ ಸಂಬಂಧಪಟ್ಟಂತಹ ಸಂಸ್ಥೆಗಳನ್ನು ತೆರೆಯಬೇಕಾಗುತ್ತದೆ.

ಈ ನಿಟ್ಟಿನಲ್ಲಿ ದೇಶದ ಸ್ಟಾರ್ಟ್‌ಅಪ್‌ಗಳಿಗೆ ಮಾರುಕಟ್ಟೆಗಳನ್ನು ಮುಕ್ತಗೊಳಿಸಲಾಗುತ್ತದೆ. ಮತ್ತು ಈ ಮೂಲಕ ಇಲ್ಲಿ 10 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಉದ್ದೇಶವನ್ನು : ಹೊಂದಲಾಗಿದೆ.

ಇದರಿಂದಾಗಿ ಕೇವಲ ಸ್ವಾವಲಂಬಿಯಾಗುವುದಲ್ಲದೆ, ಸ್ವದೇಶೀಯರಿಗೂ ಉದ್ಯೋಗ ಪ್ರಾಪ್ತಿಯಾಗಲಿದೆ.

ಜಿಯೋಸ್ಪೇಷಿಯಲ್ ನೀತಿ ಜಾರಿಗಿರುವ ಸವಾಲುಗಳು:

1.ರಾಷ್ಟ್ರದ ಭದ್ರತೆ:

 

ರಕ್ಷಣಾ ಕ್ಷೇತ್ರ: ಈ ರೀತಿ ಜಾರಿಯಾಗುವುದರಿಂದ ಹೈ-ರೆಸಲ್ಯೂಶನ್ ನಕ್ಷೆಗಳು ಜನರ ಕೈ ಸೇರುತ್ತದೆ. ಮತ್ತು ಇದು ಕೇವಲ ಧನಾತ್ಮಕವಾಗಿ ಬಳಕೆಯಾಗುತ್ತದೆ ಎಂಬ ಖಾತ್ರಿ ಇಲ್ಲ.

ಇದನ್ನು ಜನರು ಋಣಾತ್ಮಕವಾಗಿ ಕೂಡ ಬಳಸಿಕೊಳ್ಳುವ ಸಾಧ್ಯತೆ ಇರುತ್ತದೆ. ಅದಲ್ಲದೆ ಪ್ರತಿ ಪ್ರದೇಶದ ನಕ್ಷೆಗಳು ಜಾರಿಯಾಗಲಿವೆ. ಸೇನಾ ನೆಲೆಗಳು, ಗಡಿ ಪ್ರದೇಶಗಳು ಹೀಗೆ ಇತ್ಯಾದಿ ಸೂಕ್ಷ್ಮ ವಲಯಗಳ ನಕ್ಷೆ ಕೂಡ ಸಿಗಲಿವೆ. ಹಾಗೂ ಇಂತಹ ಪ್ರದೇಶಗಳಲ್ಲಿ ಅಭದ್ರತೆಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುತ್ತದೆ.

ಹೈ-ರೆಸಲ್ಯೂಶನ್ ನಕ್ಷೆ ಎಂಬುದು ಉತ್ತಮ ಅಂಶವಾಗಿದೆ. ಅದಾಗಿಯೂ ಕೂಡ ಅದರ ಬಳಕೆ ಯಾವ ರೀತಿ ಆಗುತ್ತದೆ ಎಂಬುದನ್ನು ಊಹಿಸಲು ಸಾಧ್ಯವಾಗುವುದಿಲ್ಲ.

ಸ್ಪಷ್ಟೀಕರಣ: ಹಾಗೂ ಈ ನಕ್ಷೆಯನ್ನು ತಯಾರಿಸುವಾಗ ಅದನ್ನು ಎರಡು ವಿಧಗಳಾಗಿ ತಯಾರಿಸುವ ಅಗತ್ಯವಿದೆ. ಒಂದು ವಿಧಾನ ಸೂಕ್ಷ್ಮ ಮತ್ತೊಂದು ಮುಕ್ತ.

ಸೂಕ್ಷ್ಮ ನಕ್ಷೆಗಳು ಎಲ್ಲರಿಗೂ ದೊರಕುವಂತಿಲ್ಲ. ಜೊತೆಗೆ ಮುಕ್ತವಾದವುಗಳು ಸಾರ್ವಜನಿಕರ ಕೈಗೆ ಸಿಗಬಹುದಾಗಿದೆ. ಆದರೆ ಈ ರೀತಿಯಾಗಿ ವಿಭಾಗಿಸಲು ಇನ್ನೂ ಯಾವುದೇ ಸ್ಪಷ್ಟವಾದ ಗಡಿ ರೇಖೆಗಳು ಇರದೆ ಇರುವುದು ಸವಾಲಿನ ವಿಷಯವಾಗಿದೆ.

2. ಹಣಕಾಸು ಮತ್ತು ತಾಂತ್ರಿಕ ಸಮಸ್ಯೆ:

ಹೆಚ್ಚಿನ ವೆಚ್ಚ: ನಗರಗಳ 3D ಮಾದರಿ ಮತ್ತು ಸಮುದ್ರದ ಆಳದ ನಕ್ಷೆಗಳನ್ನು ತಯಾರಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಆದರೆ ಇವುಗಳ ತಯಾರಿಕೆಗೆ ಕೋಟ್ಯಾಂತರ ರೂಪಾಯಿ ವೆಚ್ಚ ಆಗುವ ಸಾಧ್ಯತೆ ಇದೆ. ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನದ ಅವಶ್ಯಕತೆ ಕೂಡ ಉಂಟಾಗಲಿದೆ.

ಆಧುನೀಕರಣ: ಪ್ರಸ್ತುತ ಲಭ್ಯವಿರುವಂತಹ ನಕ್ಷೆಗಳು ಬಹಳ ಹಳೆಯ ನಕ್ಷೆಗಳಾಗಿವೆ. ಹಾಗೂ ಪ್ರಸ್ತುತ ಸಾರ್ವಜನಿಕರು ಅದೇ ನಕ್ಷೆಯ ಬಳಕೆಯನ್ನು ಮಾಡುತ್ತಿದ್ದಾರೆ. ಮತ್ತು ಆ ನಕ್ಷೆಗಳಲ್ಲಿ ಹಲವಾರು ಗೊಂದಲಗಳು,ತಪ್ಪುಗಳು ಕೂಡ ಸಹಜವಾಗಿ ಇವೆ.

ಇದನ್ನು ಬದಲಾಯಿಸುವ ಅಗತ್ಯವಿದ್ದು, ಈ ಒಂದು ಕ್ರಮವು ಅಭಿವೃದ್ಧಿಗೆ ನೆರವಾಗುತ್ತದೆ. ಪ್ರಸ್ತುತ ಇರುವಂತಹ ಜಾಗತಿಕ ಮಟ್ಟಕ್ಕೆ ಸರಿಯಾಗಿ ಹೊಂದುವಂತೆ ಈ ನಕ್ಷೆಯನ್ನು ತಯಾರಿಸುವುದು ದೊಡ್ಡ ಸವಾಲಿನ ವಿಷಯವಾಗಿದೆ.

3. ಹೆಚ್ಚಿನ ಕೌಶಲ್ಯದ ಅವಶ್ಯಕತೆ:

ತಜ್ಞರ ಅವಶ್ಯಕತೆ: ಇಲ್ಲಿ ಕೃತಕ ಬುದ್ಧಿಮತ್ತೆಯ ಸಹಾಯದಿಂದ ಕಾರ್ಯವನ್ನು ನಿರ್ವಹಿಸಬೇಕಾಗುತ್ತದೆ. ಮತ್ತು ಜಿಯೋಸ್ಪೇಷಿಯಲ್ ಡೇಟಾ ಗಳ ವಿಶ್ಲೇಷಣ ಕಾರ್ಯಗಳು ನಡೆಯುತ್ತವೆ.

ಜೊತೆಗೆ ಬೃಹತ್ ಡೇಟಾಗಳನ್ನು ನಿರ್ವಹಿಸಬೇಕಾಗುತ್ತದೆ. ಹಾಗೂ ಈ ಎಲ್ಲಾ ಕಾರ್ಯಗಳನ್ನು ನಡೆಸಲು ನುರಿತ ತಂತ್ರಜ್ಞಾನ ಅವಶ್ಯಕತ ಇರಲಿದೆ. ಪ್ರಸ್ತುತ ಭಾರತದಲ್ಲಿ ಇವರುಗಳ ಸಂಖೆ ಕಡಿಮೆ ಇರುವುದು ಸವಾಲಿನ ವಿಷಯವಾಗಿದೆ.

4. ಇಲಾಖೆಗಳ ಸಮನ್ವಯತೆ:

ಇಲಾಖೆಗಳ ಹಿಂಜರಿಯುವಿಕೆ: ಈ ಒಂದು ನಕ್ಷೆಗಳನ್ನು ತಯಾರಿಸಲು ಹಲವಾರು ಅಂಶಗಳ ಅಗತ್ಯವಿದೆ. ಹಾಗೂ ಈ ಅಂಶಗಳು ಆಯ ಪ್ರದೇಶಗಳ ಪ್ರತಿಯೊಂದು ಮಾಹಿತಿಯನ್ನು ಒಳಗೊಂಡಿರುತ್ತದೆ.

ಆ ಪ್ರದೇಶಗಳ ಪ್ರತಿಯೊಂದು ಮಾಹಿತಿಯೂ ಆಯಾ ಇಲಾಖೆಗೆ ಸಂಬಂಧಪಟ್ಟ ಆಗಿರುತ್ತದೆ. ಉದಾಹರಣೆಗೆ ನಗರ ಅರಣ್ಯ ಇತ್ಯಾದಿ ಇಲಾಖೆಗಳು. ಆದರೆ ಈ ಎಲ್ಲರೂ ಕೂಡ ತಮ್ಮ ಡೇಟಾಗಳನ್ನು ಪರಸ್ಪರ ಹಂಚಿಕೊಳ್ಳಬೇಕಾಗುತ್ತದೆ.

ಹಾಗೂ ಪ್ರಸ್ತುತ ಇವರುಗಳು ಡೇಟಾಗಳನ್ನು ಹಂಚಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಇದರಿಂದಾಗಿ ಸರಿಯಾದ ಸಮಯಕ್ಕೆ ಕೆಲಸಗಳು ಮುಗಿಯುವುದಿಲ್ಲ ಹಾಗೂ ಸರಿಯಾದ ನಕ್ಷೆಯನ್ನು ತಯಾರಿಸಲು ಸಾಧ್ಯವಾಗುವುದಿಲ್ಲ.

ಹೆಚ್ಚಿನ ಸಮಯ: ಹಾಗೂ ಕೇಂದ್ರ ಸರ್ಕಾರದ ನೀತಿಗಳು ಮತ್ತು ಆಯಾ ರಾಜ್ಯ ಸರ್ಕಾರದ ನೀತಿಗಳ ನಡುವೆ ವ್ಯತ್ಯಾಸಗಳಿರುತ್ತವೆ. ಇದರಿಂದಾಗಿ ಈ ಎರಡರ ನಡುವೆ ಸಮಯ ಸಮನ್ವಯತೆಯನ್ನು ಸಾಧಿಸಿ ಕೆಲಸಗಳನ್ನು ನಿರ್ವಹಿಸುವುದು ತಡವಾಗಬಹುದಾಗಿದೆ.

5. ಖಾಸಗಿ ಹೂಡಿಕೆ:

ಈ ಒಂದು ಕಾರ್ಯದಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳ ರಕ್ಷಣೆಯನ್ನು ಅಗತ್ಯವಾಗಿ ಮಾಡಬೇಕಾಗುತ್ತದೆ. ಹಾಗೂ ಇದಕ್ಕೆ ತಕ್ಕಂತೆ ಕಾನೂನು ಕ್ರಮಗಳನ್ನು ಕೂಡ ಜಾರಿಗೊಳಿಸಬೇಕಾಗುತ್ತದೆ. ಈ ಎಲ್ಲಾ ಅಂಶಗಳು ಹೂಡಿಕೆಗಳನ್ನು ಆಕರ್ಷಿಸಲು ಸಹಾಯ ಮಾಡಲಿವೆ.

ಆದರೆ ಪ್ರಸ್ತುತ ಈ ಯಾವುದೇ ಕಾನೂನು ಕ್ರಮಗಳು ಇರುವುದಿಲ್ಲ. ಇದರಿಂದಾಗಿ ಬೃಹತ್ ಕಂಪನಿಗಳು ಮತ್ತು ಸ್ಟಾರ್ಟ್‌ಅಪ್‌ಗಳು ಹೂಡಿಕೆ ಮಾಡಲು ಯೋಚಿಸುವ ಪರಿಸ್ಥಿತಿ ಎದುರಾಗಿದೆ.

ಈ ಒಂದು ಹೊಸ ನೀತಿಯು ಅಭಿವೃದ್ಧಿ ಹೊಂದುತ್ತಿರುವ ಭಾರತ ದೇಶದ ಉತ್ತಮ ಹೆಜ್ಜೆಯಾಗಿದೆ. ಹಾಗೂ ಈಗಾಗಲೇ ಹಳೆಯ ಮ್ಯಾಪಿಂಗ್ ವ್ಯವಸ್ಥೆಯಿಂದಾಗಿ ಜನರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಈ ಎಲ್ಲ ಸಮಸ್ಯೆಗಳಿಗೂ ತೆರೆ ಎಳೆಯಲು ಈ ಒಂದು ನೀತಿಯನ್ನು ಜಾರಿಗೊಳಿಸಿರುವುದು ಶ್ಲಾಘನೀಯವಾಗಿದೆ.

 

ಇನ್ನಷ್ಟು ಮಾಹಿತಿಗಾಗಿ:Dept of Science and Technology 

ಇದನ್ನು ಓದಿ:DIGITAL RUPEE

Leave a Comment

Scroll to Top

Discover more from nirantarasuddhi

Subscribe now to keep reading and get access to the full archive.

Continue reading