BioE3 Policy India: BioE3 ನೀತಿ ಎಂದರೇನು? ಇಲ್ಲಿದೆ ಸಂಪೂರ್ಣ ಮಾಹಿತಿ

Spread the love

BioE3 Policy India: BioE3 ನೀತಿ ಎಂಬುದು ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾಗಿದೆ. ಇದೊಂದು ರಾಷ್ಟ್ರೀಯ ಜೈವಿಕ ಯೋಜನೆ. ಇದಕ್ಕೆ 2024 ಆಗಸ್ಟ್ ತಿಂಗಳಲ್ಲಿ ಕೇಂದ್ರ ಸರ್ಕಾರವು ಅನುಮೋದನೆ ನೀಡಿತು.

 

BioE3 Policy India
BioE3 Policy India

BioE3 Policy India: ಇಲ್ಲಿ ಜೈವಿಕ ಆರ್ಥಿಕತೆಯನ್ನು ಬಲಪಡಿಸುವುದು. ಮತ್ತು ಸುಸ್ಥಿರ ಹಸಿರು ಬೆಳವಣಿಗೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಲಾಗಿದೆ.

ಇದಕ್ಕಾಗಿ ಒಂದು ರಾಷ್ಟ್ರೀಯ ಚೌಕಟ್ಟನ್ನು ನಿರ್ಮಿಸಲಾಗಿದೆ. ರಾಷ್ಟ್ರೀಯ ಚೌಕಟ್ಟಿನ ಹೆಸರೇ BioE3 ನೀತಿ.

BioE3 Policy India: ಈ ನೀತಿಯು ಈ ಕೆಳಗಿನ ಪ್ರಮುಖ ಆರು ಕ್ಷೇತ್ರಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತದೆ:

 

1. ಬಯೋ ಕೆಮಿಕಲ್ಸ್:

ಪ್ಲಾಸ್ಟಿಕ್ ಮತ್ತು ಇತರ ಕೈಗಾರಿಕೆಗಳಲ್ಲಿ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಮತ್ತು ಪ್ರಸ್ತುತ ಈ ರಾಸಾಯನಿಕಗಳನ್ನು ತಯಾರಿಸಲು ಹೆಚ್ಚಿನ ಕಚ್ಚಾ ತೈಲದ ಬಳಕೆಯಾಗುತ್ತಿದೆ.

ಹೆಚ್ಚಿನ ತೈಲದ ಬಳಕೆಯಿಂದಾಗಿ ಮಾಲಿನ್ಯವೂ ಹೆಚ್ಚುತ್ತದೆ. ಜೊತೆ ಜೊತೆಗೆ ವೆಚ್ಚ ಕೂಡ ಹೆಚ್ಚಾಗುತ್ತದೆ. ಹಾಗಾಗಿ ಇವುಗಳ ಬಳಕೆಯನ್ನು ಕಡಿಮೆ ಮಾಡುವುದು.

ಮತ್ತು ಜೈವಿಕ ವಿಘಟನೀಯ ರಾಸಾಯನಿಕಗಳನ್ನು ಉತ್ಪಾದಿಸಲು ಈ ಒಂದು ನೀತಿಯು ಆದ್ಯತೆ ನೀಡಲಿದೆ.

2. ಪ್ರೋಟೀನ್ ಮತ್ತು ಆಹಾರ:

ಪ್ರಸ್ತುತ ಆಹಾರಕ್ಕಾಗಿ ಪಶುಸಂಗೋಪನೆ ಮತ್ತು ಕೃಷಿಯನ್ನು ದೇಶ ಅವಲಂಬಿಸಿದೆ. ಆದರೆ ಹೆಚ್ಚುತ್ತಿರುವ ಜನಸಂಖ್ಯೆಗೆ ಈ ಮೂಲಗಳಿಂದ ಆಹಾರವನ್ನು ಒದಗಿಸುವುದು ಅಸಾಧ್ಯ.

ಈ ಕಾರಣದಿಂದಾಗಿ ಪರ್ಯಾಯವಾಗಿ ಆಹಾರದ ತಯಾರಿಕೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ. ಮತ್ತು ಆಹಾರವನ್ನು ಜೈವಿಕ ತಂತ್ರಜ್ಞಾನದ ಮೂಲಕ ಉತ್ಪಾದಿಸಲಾಗುತ್ತದೆ.

3. ಜೈವಿಕ ಚಿಕಿತ್ಸೆ:

ಕ್ಯಾನ್ಸರ್ ತರಹದ ಕಾಯಿಲೆಗಳಿಗೆ ಭಾರತದಲ್ಲಿ ಔಷಧಿಗಳನ್ನು ಉತ್ಪಾದನೆ ಮಾಡುವುದಾಗಿದೆ. ಇದಕ್ಕೆ ಅಗತ್ಯವಿರುವ ಜೀನ್ ಥೆರಪಿ, ಲಸಿಕೆಗಳು ಮತ್ತು ಜೀವಕೋಶ ಆಧಾರಿತ ಔಷಧಿಗಳನ್ನು ಕಡಿಮೆ ವೆಚ್ಚದಲ್ಲಿ ತಯಾರಿಸುವುದು.

4. ಕೃಷಿ ಮತ್ತು ಹವಾಮಾನ:

ರೈತರಿಗೆ ಬರಗಾಲ ಮತ್ತು ಹವಾಮಾನ ವೈಪರೀತ್ಯಗಳು ದೊಡ್ಡ ಸಮಸ್ಯೆಯಾಗಿದೆ. ಹಾಗೂ ಇವುಗಳನ್ನು ತಡೆದುಕೊಳ್ಳುವಂತಹ ಜೀನ್-ಎಡಿಟೆಡ್ ಬೆಳೆಗಳನ್ನು ಅಭಿವೃದ್ಧಿಪಡಿಸುವಂತದ್ದು.

ಮತ್ತು ಇದಕ್ಕಾಗಿ ರಾಸಾಯನಿಕ ವಿಲ್ಲದ ಜೈವಿಕ ಗೊಬ್ಬರದ ಬಳಕೆಯನ್ನು ಉತ್ತೇಜಿಸುವಂತದ್ದು.

5. ಇಂಗಾಲದ ಬಳಕೆ:

ಈಗಾಗಲೇ ಕಾರ್ಖಾನೆ ಮತ್ತು ವಾಹನಗಳಿಂದಾಗಿ ಇಂಗಾಲದ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಮತ್ತು ಆ ಇಂಗಾಲದ ಮರುಬಳಕೆ ಮಾಡುವಂತದ್ದು.

ಇಲ್ಲಿ ವಾತಾವರಣದಲ್ಲಿರುವ ಇಂಗಾಲದ ಡೈ ಆಕ್ಸೈಡ್ ಅನ್ನು ಹೀರಿಕೊಳ್ಳುವಂತದ್ದು. ಮತ್ತು ಅವುಗಳನ್ನು ಜೈವಿಕ ಇಂಧನ ಅಥವಾ ಇತರ ಉಪಯುಕ್ತ ವಸ್ತುಗಳನ್ನಾಗಿ ಮಾರ್ಪಾಡಿಸುವುದಾಗಿದೆ.

6. ಬಾಹ್ಯಾಕಾಶ ಮತ್ತು ಸಮುದ್ರ:

ಸಮುದ್ರದ ಆಳ ಮತ್ತು ಬಾಹ್ಯಾಕಾಶದ ತೀವ್ರ ವಾತಾವರಣದಲ್ಲಿ ಮನುಷ್ಯರು ಬದುಕಲು ಅಸಾಧ್ಯ.

ಈ ನಿಟ್ಟಿನಲ್ಲಿ ಅವುಗಳಲ್ಲಿ ಬದುಕಬಲ್ಲಂತಹ ಸೂಕ್ಷ್ಮಜೀವಿಗಳನ್ನು ಬಳಸುವುದು. ಮತ್ತು ಅವುಗಳಿಂದ ಹೊಸ ಜೈವಿಕ ತಂತ್ರಜ್ಞಾನವನ್ನು ತಯಾರಿಸುವಂಥದ್ದು.

ಮುಖ್ಯವಾಗಿ ಈ ಆರು ಪ್ರಮುಖ ಕ್ಷೇತ್ರಗಳಿಗೆ ಈ ಹೊಸ ನೀತಿಯು ಪ್ರಾಮುಖ್ಯತೆಯನ್ನು ನೀಡಲಿದೆ.

 

BioE3 Policy India: BioE3 ನೀತಿ ಉದ್ದೇಶಗಳು:

 

1. ಆರ್ಥಿಕತೆ:

ಈ ಒಂದು ನೀತಿಯು 2030ರ ವೇಳೆಗೆ ಸಾಧಿಸಲು ಹಲವಾರು ಗುರಿಗಳನ್ನು ಹೊಂದಿದೆ. ಇದರಲ್ಲಿ 2030ರ ವೇಳೆಗೆ ಭಾರತದ ಜೈವಿಕ ಆರ್ಥಿಕತೆಯನ್ನು ಮುಂಚೂಣಿಗೆ ತರುವುದು.

ಮತ್ತು $300 ಬಿಲಿಯನ್ ಡಾಲರ್ ನತ್ತ ತೆಗೆದುಕೊಂಡು ಹೋಗುವ ಉದ್ದೇಶವನ್ನು ಹೊಂದಿದೆ.

2. ಹಸಿರು ಜೈವಿಕತೆ:

ಪ್ರಸ್ತುತ ಸಾಂಪ್ರದಾಯಿಕ ಪೆಟ್ರೋಲಿಯಂ ಅನ್ನು ಬಳಕೆ ಮಾಡುತ್ತಿದ್ದೇವೆ. ಇದು ಇಂದಿನ ಬೃಹತ್ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ. ಹಾಗೂ ಇದನ್ನು ತಡೆಗಟ್ಟಲು ಈಗಾಗಲೇ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ.

ಪೆಟ್ರೋಲಿಯಂ ಬಳಕೆ ಯನ್ನು ಉಂಟುಮಾಡುವುದಲ್ಲದೆ, ದೇಶದ ಖಜಾನೆಗೂ ಕೂಡ ಕನ್ನ ಹಾಕುತ್ತದೆ.

3.ಸ್ವಾವಲಂಬನೆ:

ಪ್ರಸ್ತುತ ನಾವು ಈ ಉತ್ಪನ್ನಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ಹಾಗೂ ಇದಕ್ಕೆ ತಗುಲುವಂತಹ ವೆಚ್ಚವೂ ಕೂಡ ಬೃಹತ್ ಮಟ್ಟದಲ್ಲಿಯೇ ಇದೆ.

ಈ ಹೊಸ ನೀತಿಯಲ್ಲಿ ಪೆಟ್ರೋಲಿಯಂ ಬಳಕೆಯ ಬದಲಿಗೆ ಮರುಬಳಕೆ ಮಾಡಬಹುದಾದ ಜೈವಿಕತೆ ಆಧಾರಿತ ಉತ್ಪನ್ನಗಳನ್ನು ಬಳಸಲಾಗುತ್ತದೆ. ಮತ್ತು ಇದು ಪರಿಸರ ಸ್ನೇಹಿಯು ಕೂಡ ಆಗಿರುತ್ತದೆ.

4.ಉದ್ಯೋಗದ ಸೃಷ್ಟಿ:

ಈ ಒಂದು ಹೊಸ ನೀತಿಯ ಮೂಲಕ ಹಲವು ಹೊಸ ಕ್ರಮಗಳನ್ನು ಕೈಗೊಳ್ಳಲಿದೆ. ಹಾಗೂ ಇಲ್ಲಿ ಸ್ಥಳೀಯ ಉತ್ಪಾದನೆಗಳಿಗೆ ಬೆಂಬಲವು ದೊರಕಲಿದೆ. ಈ ನಿಟ್ಟಿನಲ್ಲಿ ಸ್ಥಳೀಯವಾಗಿ ಉದ್ಯೋಗಗಳು ಸೃಷ್ಟಿ ಆಗಲಿವೆ.

ಇಲ್ಲಿ ದೇಶದ ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಸಲಾಗುತ್ತದೆ. ಸ್ಥಳೀಯ ಜೈವಿಕ ತ್ಯಾಜ್ಯ ಮತ್ತು ಸಂಪನ್ಮೂಲಗಳನ್ನು ಬಳಸಿಕೊಂಡು ಈ ಉದ್ಯೋಗದ ಸೃಷ್ಟಿ ನಡೆಯುತ್ತದೆ.

5. ಮೂಲ ಸೌಕರ್ಯ: ಪ್ರಸ್ತುತ ಈ ಯೋಜನೆ ಹೊಸದಾಗಿದೆ. ಮತ್ತು ಇದಕ್ಕಾಗಿ ಅನೇಕ ಮೂಲ ಸೌಕರ್ಯಗಳ ಅವಶ್ಯಕತೆ ಇರಲಿದೆ. ಈ ನಿಟ್ಟಿನಲ್ಲಿ ಈ ಮೂಲಸೌಕರ್ಯಗಳನ್ನು ರಚಿಸುವುದು ಕೂಡ ಮುಖ್ಯವಾಗಿದೆ.

ಹಾಗೂ ಮುಖ್ಯವಾಗಿ ಸಂಶೋಧನಾ ಕೇಂದ್ರಗಳು ಮತ್ತು ಕೈಗಾರಿಕೆಗಳ ನಡುವಿನ ವ್ಯತ್ಯಾಸವನ್ನು ಕಡಿಮೆ ಮಾಡಬೇಕಾಗಿದೆ.

6.ಅಂತರವನ್ನು ಕಡಿತಗೊಳಿಸುವುದು: ಹಲವು ಬಾರಿ ಸಂಶೋಧನೆಯಲ್ಲಿ ನಡೆದಿರುವಂತದ್ದು ಕೈಗಾರಿಕೆಯಲ್ಲಿ ಅಸಾಧ್ಯವಾಗಿರುತ್ತದೆ. ಸಾಧ್ಯವಾದರೂ ಕೂಡ ಅವುಗಳ ತಯಾರಿಕೆ ಕಡಿಮೆ ಪ್ರಮಾಣದಲ್ಲಿ ಸಾಗುತ್ತದೆ.

ಈ ಅಂತರವನ್ನು ತಡೆಯುವ ಸಲುವಾಗಿ ಬಯೋ ಉತ್ಪಾದನಾ ಹಬ್ ಗಳು, ಬಯೋಫೌಂಡ್ರಿಗಳು, ಮತ್ತು ಬಯೋ AI ಕೇಂದ್ರಗಳನ್ನು ಸ್ಥಾಪಿಸುವುದು ಅಗತ್ಯವಾಗಿದೆ.

7. ಪರಿಸರ ಮತ್ತು ಹವಾಮಾನ: ಪ್ರಸ್ತುತ ಕೈಗಾರಿಕೆಗಳಿಂದ ಮಾಲಿನ್ಯ ಉಂಟಾಗುತ್ತಿರುವುದು ತಿಳಿದಿರುವ ವಿಷಯ. ಹಾಗೂ ಇದನ್ನು ತಡೆಯುವುದು ಕೂಡ ಅಗತ್ಯವಾದ ಅಂಶವಾಗಿದೆ.

ಹೀಗಾಗಿ ಇಲ್ಲಿ ಕೈಗಾರಿಕೆಗಳಿಂದ ಹೊರಬರುವಂತಹ ಇಂಗಾಲದ ಪ್ರಮಾಣವನ್ನು ಕಡಿಮೆಯಾಗಿಸುವ ಗುರಿಯನ್ನು ಹೊಂದಲಾಗಿದೆ.

ಜೊತೆಗೆ ಜೈವಿಕ ತಂತ್ರಜ್ಞಾನದ ಬಳಕೆಯನ್ನು ಉತ್ತೇಜಿಸಲಾಗುತ್ತದೆ. ಮತ್ತು ಈ ಮೂಲಕ ನೆಟ್-ಜೀರೋ ಇಂಗಾಲದ ಗುರಿಯನ್ನು ತಲುಪುವ ತಲುಪಲು ಸಾಧ್ಯವಾಗುತ್ತದೆ.

8. ಆರೋಗ್ಯ ಮತ್ತು ಆಹಾರದ ಭದ್ರತೆ: ಮುಖ್ಯವಾಗಿ ನಾವು ಆರೋಗ್ಯಕ್ಕೆ ಸಂಬಂಧಪಟ್ಟಂತಹ ಹಲವು ಔಷಧಿ ಇಲಾಖೆಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ.

ಹಾಗೂ ಅವುಗಳ ಪ್ರಮಾಣ ನಮ್ಮಲ್ಲಿ ಕಡಿಮೆ ಇದೆ. ಮತ್ತು ಯೋಗ್ಯವಾದದನ್ನು ತಯಾರಿಸುವ ಅಗತ್ಯವಿದೆ.

ಹೀಗಾಗಿ ಉನ್ನತ ಮಟ್ಟದ ಔಷಧೀಯ ಸೌಲಭ್ಯಗಳು ಮತ್ತು ಆಹಾರವನ್ನು ಜನರಿಗೆ ಒದಗಿಸುವಂಥದ್ದು. ಹಾಗೂ ಇವುಗಳು ಜನರಿಗೆ ಸುಲಭವಾಗಿ ದೊರೆಯುವಂತೆ ಮಾಡುವ ಉದ್ದೇಶವನ್ನು ಹೊಂದಲಾಗಿದೆ.

ಆರೋಗ್ಯ ಮತ್ತು ಆಹಾರದ ಭದ್ರತೆಯಲ್ಲಿ ಸರ್ಕಾರವು ಹಲವು ರೂಪುರೇಷೆಗಳನ್ನು ರೂಪಿಸಿದೆ:

 

1. ಪರ್ಯಾಯ ಪ್ರೋಟೀನ್ ವ್ಯವಸ್ಥೆಗೆ ಆದ್ಯತೆ:
ಧನಸಹಾಯ:

ಪ್ರಸ್ತುತ ಹಾಲು ಮತ್ತು ಮಾಂಸದಲ್ಲಿ ಹೆಚ್ಚಿನ ಪ್ರೋಟೀನ್ ದೊರೆಯುತ್ತದೆ. ಹಾಗೂ ಹೆಚ್ಚುತ್ತಿರುವ ಜನಸಂಖ್ಯೆಗೆ ತಕ್ಕಂತೆ ಇವುಗಳನ್ನು ಉತ್ಪಾದಿಸುವುದು ಕಠಿಣವಾಗಿದೆ.

ಹೀಗಾಗಿ ಬಟಾಣಿ, ಸೋಯಾಬೀನ್, ಹಾಗೂ ಸ್ಥಳೀಯ ಧಾನ್ಯಗಳಿಂದ ಹೆಚ್ಚಿನ ಪ್ರೋಟೀನ್ ಯುಕ್ತ. ಆಹಾರಗಳನ್ನು ತಯಾರಿಸಲು ಸ್ಥಳೀಯ ಸಂಸ್ಥೆಗಳಿಗೆ ಆದ್ಯತೆ ನೀಡಲಾಗುತ್ತಿದೆ.

ಹಾಗೂ ಇವುಗಳಿಗೆ ಅಗತ್ಯವಿರುವಂತಹ ಧನ ಸಹಾಯವನ್ನು ಈ ಹೊಸ ಯೋಚನೆಯ ಮೂಲಕ ನೀಡಲಾಗುತ್ತದೆ.

ಸ್ಟಾರ್ಟಪ್ ಗಳು:

ಈ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳನ್ನು ಸೃಷ್ಟಿಸುವ ಅಗತ್ಯವಿದೆ.

ಹಾಗೂ ಈ ಕೆಲಸವನ್ನು ನಿರ್ವಹಿಸುತ್ತಿರುವ ಸ್ಟಾರ್ಟಪ್ ಗಳಿಗೆ BIRAC ಮೂಲಕ ಅನುದಾನವನ್ನು ಒದಗಿಸಲಾಗುತ್ತದೆ. ಇವುಗಳನ್ನು ಆರಂಭಿಕ ಹಂತದಲ್ಲಿ ನೀಡಲಾಗುತ್ತದೆ.

2.ಬಯೋಫೌಂಡ್ರಿ ಮತ್ತು ಪ್ರಿಸಿಷನ್ ಫರ್ಮೆಂಟೇಶನ್:

 

ಬಯೋಫೌಂಡ್ರಿ ಗಳು:

ಇಲ್ಲಿ ಸೂಕ್ಷ್ಮಜೀವಿಗಳನ್ನು ಬಳಸಿಕೊಂಡು ಪೋಷಕಾಂಶಗಳು ಮತ್ತು ಎಂಜೈಮ್ ಗಳನ್ನು ತಯಾರಿಸಲಾಗುತ್ತದೆ.

ಹಾಗೂ ಇವುಗಳನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದನೆ ಮಾಡಲು ಬಯೋಫೌಂಡ್ರಿ ಗಳ ಅಗತ್ಯವಿದೆ. ಹಾಗಾಗಿ ದೇಶಾದ್ಯಂತ ಆಧುನಿಕ ಬಯೋಫೌಂಡ್ರಿ ಗಳನ್ನು ಸ್ಥಾಪಿಸಲಾಗುತ್ತಿದೆ.

ಕಡಿಮೆ ವೆಚ್ಚ:

ಇಲ್ಲಿ ಆಹಾರಗಳನ್ನು ಉತ್ಪಾದಿಸಲು ಮತ್ತು ಅವುಗಳನ್ನು ಪರೀಕ್ಷಿಸಲು ಮೂಲಸೌಕರ್ಯಗಳ ಅಗತ್ಯವಿದೆ.

ಈ ಹಬ್ ಗಳು ಪರೀಕ್ಷೆ ಮತ್ತು ಉತ್ಪಾದನೆಗೆ ಅಗತ್ಯವಿರುವ ಮೂಲಸೌಕರ್ಯವನ್ನು ಸಣ್ಣ ಮಟ್ಟದ ಉತ್ಪಾದಕರಿಗೆ ಒದಗಿಸುತ್ತವೆ.

ಈ ಮೂಲಕ ಬೃಹತ್ ಪ್ರಮಾಣದ ಉತ್ಪಾದಕರಿಗಾಗಿ ಕಾಯುವ ಅವಶ್ಯಕತೆ ಇರುವುದಿಲ್ಲ.ಹಾಗೂ ಅವರಿಗೆ ಬೃಹತ್ ಪ್ರಮಾಣದಲ್ಲಿ ಹೂಡಿಕೆಯನ್ನು ಹೂಡುವ ಅಗತ್ಯ ಇರುವುದಿಲ್ಲ.

3. ಹವಾಮಾನ ವೈಪರೀತ್ಯದಿಂದ ಪಾರಾಗುವಿಕೆ:

 

ಜೀನ್-ಎಡಿಟಿಂಗ್:

ಪ್ರಸ್ತುತ ವಿಜ್ಞಾನಿಗಳು ಜೀನ್-ಎಡಿಟಿಂಗ್ ತಂತ್ರಜ್ಞಾನವನ್ನು ಬಳಸಿ ಹೊಸ ತಳಿಗಳನ್ನು ಸೃಷ್ಟಿ ಮಾಡುತ್ತಿದ್ದಾರೆ. ಹಾಗೂ ಇವುಗಳು ಕಡಿಮೆ ನೀರಿನಲ್ಲಿ ಬೆಳೆಯುತ್ತವೆ.

ಮತ್ತು ಕೀಟಬಾಧೆಯನ್ನು ತಡೆದುಕೊಳ್ಳುವ ಶಕ್ತಿ ಹೊಂದಿರುತ್ತದೆ. ಹಾಗೂ ಈ ತಳಿಗಳಲ್ಲಿ ಹೆಚ್ಚಿನ ವಿಟಮಿನ್ ಅಂಶ ಇರಲಿದೆ.

ಹವಮಾನದಿಂದ ರಕ್ಷಣೆ:

ಹಾಗೂ ಹವಾಮಾನ ವೈಪರೀತ್ಯ ಎಂಬುದು ಸಾಮಾನ್ಯವಾಗಿ ವಿಷಯವಾಗಿದೆ.

ಆದರೆ ಇದು ಬೆಳೆಗಳ ಮೇಲೆ ಅಸಾಧಾರಣ ಪರಿಣಾಮವನ್ನು ಬೀರುತ್ತದೆ. ಹಾಗೂ ಈ ಹೊಸ ತಳಿಯೂ ಈ ವೈಪರಿತ್ಯದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ.

ಜೈವಿಕ ಗೊಬ್ಬರ:

ಪ್ರಸ್ತುತ ಕೃಷಿಯಲ್ಲಿ ಬಳಸುತ್ತಿರುವುದು ರಾಸಾಯನಿಕ ಗೊಬ್ಬರ. ಈ ಗೊಬ್ಬರ ಅತಿ ಬೇಗನೆ ಫಲಿತಾಂಶವನ್ನು ನೀಡುತ್ತದೆ.

ಆದರೆ ಆರೋಗ್ಯಕ್ಕೆ ಒಳಿತನ್ನು ನೀಡುವುದಿಲ್ಲ. ಈ ನಿಟ್ಟಿನಲ್ಲಿ ರಾಸಾಯನಿಕವನ್ನು ಸಂಪೂರ್ಣವಾಗಿ ತಪ್ಪಿಸುವ ಗುರಿಯನ್ನು ಈ ನೀತಿಯು ಹೊಂದಿದೆ.

ಹಾಗೂ ಅವುಗಳ ಬದಲಿಗೆ ಜೈವಿಕ ಗೊಬ್ಬರದ ಬಳಕೆಯನ್ನು ಉತ್ತೇಜಿಸುವುದು ಇದರ ಮೂಲ ಉದ್ದೇಶವಾಗಿದೆ. ಮತ್ತು ಜೈವಿಕ ಗೊಬ್ಬರದ ಉತ್ಪಾದನೆಗೂ ಇಲ್ಲಿ ಆದ್ಯತೆ ನೀಡಲಾಗುತ್ತಿದೆ.

4. ಸರಪಳಿ:

ಈ ಯೋಜನೆ ಅಡಿಯಲ್ಲಿ ಪ್ರಯೋಗಾಲಯಗಳಲ್ಲಿ ಆಹಾರಗಳು ಸಿದ್ಧವಾಗುತ್ತವೆ. ಕ್ರಿಯಾತ್ಮಕ ಆಹಾರಗಳು ಮತ್ತು ಇತರ ಆಹಾರ ಉತ್ಪನ್ನಗಳ ತಯಾರಿಕೆ ನಡೆಯುತ್ತದೆ.

ಹಾಗೂ ಇಂತಹ ಆಹಾರಗಳು ಮಾರುಕಟ್ಟೆಗೆ ಬರಲು ನಿಯಂತ್ರಕ ಮಂಡಳಿಗಳಿಂದ ಅನುಮೋದನೆ ದೊರಕಬೇಕು.

ಈ ಅನುಮೋದನೆ ದೊರೆಯುವಿಕೆಯ ವೇಗವನ್ನು ಹೆಚ್ಚಿಸಲಾಗುತ್ತಿದೆ. ಈ ಮೂಲಕ ಆದಷ್ಟು ಬೇಗ ಈ ಆಹಾರ ಉತ್ಪನ್ನಗಳು ಮಾರುಕಟ್ಟೆಗೆ ಧಾವಿಸಿ ಬರಲಿವೆ.

BioE3 ನೀತಿಯ ಅನುಷ್ಠಾನಕ್ಕಿರುವ ಸವಾಲುಗಳು:

 

1. ಬಂಡವಾಳ ಮತ್ತು ಹೂಡಿಕೆ:

ಬಂಡವಾಳ: ಜೈವಿಕ ಉತ್ಪಾದನೆ ಎನ್ನುವುದು ಬಹಳ ಸುದೀರ್ಘವಾದ ಕ್ರಿಯೆ ಆಗಿದೆ. ಇದರಿಂದ ಉಪಯೋಗಗಳು ಕೂಡ ಹೆಚ್ಚಿನ ಮಟ್ಟದಲ್ಲಿವೆ.

ಹಾಗಾಗಿ ಇದರ ಸಂಶೋಧನೆಯು ಬಹಳಷ್ಟು ಕಾಲ ತೆಗೆದುಕೊಳ್ಳುತ್ತದೆ. ಮತ್ತು ಅತಿಹೆಚ್ಚಿನ ಮಟ್ಟದಲ್ಲಿ ಹಣವನ್ನು ಖರ್ಚು ಮಾಡಬೇಕಾಗುತ್ತದೆ.

ಹೂಡಿಕೆ: ಪ್ರಸ್ತುತ ಭಾರತ ತನ್ನ ಜಿಡಿಪಿಯಲ್ಲಿಯಲ್ಲಿ 1ಕ್ಕಿಂತ ಕಡಿಮೆ ಹಣವನ್ನು ಹೂಡಿಕೆ ಮಾಡಿಸುವಂತದ್ದು. ಹಾಗೂ ಈ ಹೂಡಿಕೆಯ ಪ್ರಮಾಣವು ಜೈವಿಕ ಉತ್ಪಾದನೆಗೆ ಸಾಕಾಗುವುದಿಲ್ಲ.

ಜೊತೆಗೆ ಖಾಸಗಿ ಕಂಪನಿ ಗಳಿಂದ ಯಾವುದೇ ಹೂಡಿಕೆಗಳು ಹರಿದು ಬರುತ್ತಿಲ್ಲ.

ಈ ಕಾರಣಗಳು ಈ ಜೈವಿಕ ನೀತಿಯ ಅನುಷ್ಠಾನಕ್ಕೆ ಎದುರಾಗಿರುವ ಸವಾಲುಗಳು.ಇವುಗಳಿಗೆ ಪರಿಹಾರವನ್ನು ಒದಗಿಸುವಲ್ಲಿ ಈ ಸವಾಲನ್ನು ಬೇಧಿಸಬಹುದಾಗಿದೆ.

2. ಪ್ರಯೋಗಾಲಯದಿಂದ ಮಾರುಕಟ್ಟೆಗೆ:

 

ಸಣ್ಣ ಮಟ್ಟದಲ್ಲಿದೆ: ಪ್ರಸ್ತುತ ಸಣ್ಣ ಸಂಶೋಧನಾಲಯಗಳಲ್ಲಿ ಈ ಸಂಶೋಧನೆಗಳು ಯಶಸ್ವಿಯಾಗಿದೆ. ಹಾಗೂ ಅವುಗಳಿಗೆ ಸಣ್ಣ ಮಟ್ಟದ ಮೂಲ ಸೌಕರ್ಯಗಳ ಅವಶ್ಯಕತೆ ಇತ್ತು.

ಹಾಗಾಗಿ ಆ ಒಂದು ಉತ್ಪಾದನೆಯು ಯಾವುದೇ ಹೆಚ್ಚಿನ ರೀತಿಯಲ್ಲಿ ಪರಿಣಾಮ ಬೀರಿರಲಿಲ್ಲ. ಹೆಚ್ಚು ವೆಚ್ಚ ಕೂಡ ಆಗಿರಲಿಲ್ಲ.

ಮೂಲಸೌಕರ್ಯದ ಅಗತ್ಯ: ದರೆ ಸಣ್ಣ ಸಂಶೋಧನಾಲಯಗಳ ಪ್ರಯೋಗವನ್ನು ದೊಡ್ಡ ಕೈಗಾರಿಕೆಗಳಿಗೆ ತರುವುದು ಕಠಿಣವಾಗಿದೆ. ಇಲ್ಲಿ ಬೃಹತ್ ಪ್ರಮಾಣದ ಮೂಲ ಸೌಕರ್ಯದ ಅಗತ್ಯವಿರುತ್ತದೆ.

ಜೊತೆಗೆ ತಜ್ಞರು ಮತ್ತು ಹೆಚ್ಚಿನ ಹೂಡಿಕೆಯ ಅಗತ್ಯವಿರುತ್ತದೆ. ಇವುಗಳನ್ನು ಒದಗಿಸುವುದು ಈ ಹೊಸ ನೀತಿಯ ಜಾರಿಗೆ ಇರುವಂತಹ ಸವಾಲಿನ ವಿಷಯವಾಗಿದೆ.

3.ನಿಯಂತ್ರಣ ಪ್ರಕ್ರಿಯೆಗಳು:

ಇಲ್ಲಿ ತಯಾರಿಸಲಾಗುವಂತಹ ಜೈವಿಕ ಬೆಳೆಗಳು ಮತ್ತು ಜೈವಿಕ ಆಹಾರಗಳಿಗೆ ಅನುಮೋದನೆಯ ಅಗತ್ಯವಿದೆ. ಹಾಗೂ ಈ ಅನುಮೋದನೆಗಳು ವಿವಿಧ ಇಲಾಖೆಗಳಿಂದ ದೊರೆಯಬೇಕಾಗಿದೆ.

ಹಾಗೂ ಇವುಗಳು ಸಮಯಕ್ಕೆ ಸರಿಯಾಗಿ ದೊರೆಯದ ಕಾರಣ, ಜೈವಿಕ ಆಹಾರಗಳು, ಮಾರುಕಟ್ಟೆಗೆ ಬರುವುದು ತಡವಾಗಲಿದೆ.

ಹಾಗೂ ಈ ವಿಳಂಬವನ್ನು ತಡೆಗಟ್ಟಿದಲ್ಲಿ ಈ ಸವಾಲನ್ನು ತಡೆಯಬಹುದಾಗಿದೆ.

4. ಕಾರ್ಮಿಕರ ಕೊರತೆ:

ಪ್ರಸ್ತುತ ಭಾರತದಲ್ಲಿ ಪದವೀಧರರು ಮತ್ತು ವಿಜ್ಞಾನಿಗಳ ಸಂಖ್ಯೆ ಬಹಳ ಹೆಚ್ಚಿದೆ.

ಆದರೆ ಜೈವಿಕ ಬೆಳೆಗಳು ಮತ್ತು ಆಹಾರದ ಉತ್ಪಾದನೆಯಲ್ಲಿ ತರಬೇತಿ ಅವಶ್ಯಕತೆ ಇರುತ್ತದೆ. ಮತ್ತು ಇಂತಹ ತರಬೇತಿಯನ್ನು ಪಡೆದವರ ಸಂಖ್ಯೆ ಬಹಳ ಕಡಿಮೆ ಇದೆ.

ನುರಿತ ಕಾರ್ಮಿಕರ ಕೊರತೆ: ಸಿಂಥೆಟಿಕ್ ಬಯೋಲಜಿ, ಬಯೋಇನ್ಫರ್ಮ್ಯಾಟಿಕ್ಸ್, ಹಾಗೂ ಜೈವಿಕ ಸಂಸ್ಕರಣೆಯಂತಹ ಸುಧಾರಿತ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ಅಗತ್ಯವಿದೆ.

ಇದಕ್ಕೆ ತಕ್ಕಂತಹ ತರಬೇತಿ ಪಡೆದಿರುವ ಕಾರ್ಮಿಕರ ಕೊರತೆಯು ಈ ಯೋಜನೆಗೆ ದೊಡ್ಡ ಸವಾಲಿನ ವಿಷಯವಾಗಿದೆ.

5. ಜಾಗತಿಕ ಪೂರೈಕೆ:

ಭಾರತವು ಪ್ರಸ್ತುತ ಹಲವು ವಿಷಯಗಳಲ್ಲಿ ವಿದೇಶಗಳ ಮೇಲೆ ಅವಲಂಬಿತವಾಗಿದೆ.

ಇದು ಕೂಡ ಭಾರತದ ಅಭಿವೃದ್ಧಿಗಳು ಕುಂಠಿತವಾಗುವುದಕ್ಕೆ ಕಾರಣ. ಹಾಗೂ ಜೈವಿಕ ಉತ್ಪಾದನೆಯಲ್ಲಿಯೂ ಕೂಡ ಅವಲಂಬನೆಯು ಅಡ್ಡಿಯಾಗಿದೆ.

ಪ್ರಸ್ತುತ ಈ ಜೈವಿಕ ಉತ್ಪಾದನೆಗೆ ಅಗತ್ಯವಿರುವ ಕಚ್ಚಾ ವಸ್ತುಗಳು ಮತ್ತು ಅತ್ಯಾಧುನಿಕ ಉಪಕರಣಗಳನ್ನು ಭಾರತದಲ್ಲಿ ತಯಾರಿಸಲಾಗುತ್ತಿಲ್ಲ.

ಆಮದು: ಹಾಗೂ ಇವುಗಳನ್ನು ವಿದೇಶಗಳಿಂದ ಆವದು ಮಾಡಿಕೊಳ್ಳಬೇಕಾಗಿದೆ.

ಇದರಿಂದ ಪ್ರಕ್ರಿಯೆಗಳು ತಡವಾಗಬಹುದಾಗಿದೆ. ಮತ್ತು ವಿದೇಶಿ ವಿನಿಮಯದ ವೆಚ್ಚ ಕೂಡ ಹೆಚ್ಚಾಗಲಿದೆ. ಇದರಿಂದಾಗಿ ಜೈವಿಕ ಉತ್ಪಾದನೆಯ ಮೇಲೆ ಇದು ವಿಪರೀತ ಪರಿಣಾಮ ಬೀರಬಹುದು.

6. ಮೂಲಸೌಕರ್ಯ:

ಈ ಒಂದು ಜೈವಿಕ ಉತ್ಪಾದನೆಯಲ್ಲಿ ಬಯೋಟೆಕ್ ಕ್ಲಸ್ಟರ್‌ಗಳ ಅಗತ್ಯವಿರುತ್ತದೆ. ಆದರೆ ದೇಶದಲ್ಲಿ ಕ್ಲಸ್ಟರ್ ಗಳು ಕೇವಲ ಬೆಂಗಳೂರು, ಪುಣೆ ,ಹೈದರಾಬಾದ್ ನಂತಹ ದೊಡ್ಡ ನಗರಗಳಲ್ಲಿ ಮಾತ್ರವೇ ಇವೆ.

ಹಾಗೂ ಈ ಯೋಜನೆಯ 2ನೇ ಮತ್ತು 3ನೇ ಹಂತದ ನಗರಗಳಲ್ಲಿ ಬಯೋಟೆಕ್ ಕ್ಲಸ್ಟರ್‌ಗಳನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿದೆ. ಈ ಸ್ಥಾಪನೆಯ ಉದ್ದೇಶವು ಸವಾಲಿನ ವಿಷಯವಾಗಿದೆ.

7. ಸಾರ್ವಜನಿಕ ನಂಬಿಕೆ:

ಜೀನ್-ಎಡಿಟೆಡ್ ಮತ್ತು ಪ್ರಯೋಗಾಲಯಗಳಲ್ಲಿ ತಯಾರಿಸುವ ಆಹಾರಗಳು ಸಂಪೂರ್ಣ ಹೊಸದು. ಇದಕ್ಕೆ ಭಾರತೀಯ ಪ್ರಜೆಗಳು ಹೊಂದಿಕೊಳ್ಳುವುದು ಕಠಿಣವಾಗಿದೆ.

ಭಾರತವು ಸಾಂಪ್ರದಾಯಿಕ ದೇಶವಾಗಿರುವುದರಿಂದ ನಂಬಿಕೆಗಳು ಮುಖ್ಯವಾಗಿವೆ. ಹಾಗೂ ಜನರು ಈ ಬೆಳೆಗಳ ಕುರಿತಾಗಿ ಆತಂಕ ಗೊಂಡಿರುವಂಥದ್ದು. ಹಾಗಾಗಿ ಈ ಆಹಾರಗಳ ಕುರಿತಾಗಿ ಜನರಲ್ಲಿ ನಂಬಿಕೆ ಗಳಿಸುವುದು ಸವಾಲಿನ ವಿಷಯವಾಗಿದೆ.

ಪ್ರಸ್ತುತ ಇರುವಂತ ಹಲವಾರು ಸವಾಲುಗಳನ್ನು ಎದುರಿಸಿ ಜೈವಿಕ ಉತ್ಪಾದನೆಗಳನ್ನು ನಡೆಸುವುದು ಅಗತ್ಯ ಅಂಶವಾಗಿದೆ. ಹಾಗೂ ಈ BioE3 ನೀತಿಯು ದೇಶದ ಪ್ರಮುಖ ಹೆಜ್ಜೆಯಾಗಿದೆ.

ಭವಿಷ್ಯದಲ್ಲಿ ಆಹಾರ ಕ್ಷೇತ್ರದಲ್ಲಿ ಉಂಟಾಗುವಂತಹ ಸಮಸ್ಯೆಗಳಿಗೆ ಈ ಯೋಜನೆಯ ಪರಿಹಾರವನ್ನು ಒದಗಿಸುತ್ತದೆ. ಹಾಗೂ ಜನರಲ್ಲಿ ಆರೋಗ್ಯದ ವೃದ್ದಿಗೆ ಇದು ಸಹಕರಿಸಲಿದೆ.

 

ಇನ್ನಷ್ಟು ಮಾಹಿತಿಗಾಗಿ:BIRAC

ಇದನ್ನು ಓದಿ: ಜಿಯೋಸ್ಪೇಷಿಯಲ್ ನೀತಿ

Leave a Comment

Scroll to Top

Discover more from nirantarasuddhi

Subscribe now to keep reading and get access to the full archive.

Continue reading