National Logistics Policy India: ಭಾರತದ ಸಾರಿಗೆ ಮತ್ತು ಸಾಗಣೆ ವ್ಯವಸ್ಥೆ!

Spread the love

National Logistics Policy India: ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿ ಎಂಬುದು ಭಾರತ ಸರ್ಕಾರದ ಪ್ರಮುಖ ಯೋಜನೆಯಾಗಿದೆ. ಇದನ್ನು 2022 ಸೆಪ್ಟೆಂಬರ್ 17ರಂದು ಜಾರಿಗೊಳಿಸಲಾಯಿತು.

 

National Logistics Policy India
National Logistics Policy India

National Logistics Policy India:ಸರಕು ಸಾಗಣೆಯ ವೆಚ್ಚವನ್ನು ಕಡಿಮೆಯಾಗಿಸುವುದು. ಪೂರೈಕೆಯ ಸರಪಳಿಯನ್ನು ಬಲಪಡಿಸುವುದು. ಮತ್ತು ಜಾಗತಿಕ ವ್ಯಾಪಾರವನ್ನು ಉತ್ತೇಜಿಸುವುದು ಈ ನೀತಿಯ ಮುಖ್ಯ ಉದ್ದೇಶವಾಗಿದೆ.

National Logistics Policy India:ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯ ವೈಶಿಷ್ಟ್ಯತೆಗಳು:

1. ಆಧಾರ ಸ್ತಂಭಗಳು:

IDS (Integration of Digital System): ಇಲ್ಲಿ 7 ಪ್ರತ್ಯೇಕ ಇಲಾಖೆಗಳ 30 ಡಿಜಿಟಲ್ ವ್ಯವಸ್ಥೆಯನ್ನು ಒಂದೇ ಕಡೆ ಸಂಯೋಜನೆ ಮಾಡಲಾಗುತ್ತದೆ.

ಈ ಮೂಲಕ ಎಲ್ಲಾ ಡೇಟಾಗಳು ಒಂದೆಡೆ ಸಿಗಲು ಅನುಕೂಲವಾಗುತ್ತದೆ. ಇಲ್ಲಿ ವಾಣಿಜ್ಯ, ವಾಯುಯಾನ, ರೈಲ್ವೆ, ಕಸ್ಟಮ್ಸ್, ರಸ್ತೆಗೆ ಸಂಬಂಧಪಟ್ಟ ಇಲಾಖೆಗಳು ಇಲ್ಲಿ ಸೇರಿಕೊಂಡಿವೆ.

ELOGS (Ease of Logistics): ಇದೊಂದು ಡಿಜಿಟಲ್ ಪೋರ್ಟಲ್ ಆಗಿದೆ.

ಕೆಲವೊಮ್ಮೆ ಉದ್ಯಮ ಸಂಸ್ಥೆಗಳಿಗೆ ಒಂದಷ್ಟು ಸವಾಲುಗಳು ಮತ್ತು ತಾಂತ್ರಿಕ ಸಮಸ್ಯೆಗಳು ಎದುರಾಗುತ್ತವೆ. ಅವುಗಳನ್ನು ಈ ಪೋರ್ಟಲ್ ಮೂಲಕ ಸರ್ಕಾರದೊಂದಿಗೆ ಹಂಚಿಕೊಳ್ಳಬಹುದಾಗಿದೆ.

SIG (System Improvement Group): ಇದೊಂದು ಸುಸಜ್ಜಿತ ಅಧಿಕಾರಿಗಳ ತಂಡವಾಗಿದೆ. ಈ ತಂಡವು ಲಾಜಿಸ್ಟಿಕ್ಸ್ ವಲಯದ ಅಡೆತಡೆಗಳನ್ನು ಮೇಲ್ವಿಚಾರಣೆ ನಡೆಸುತ್ತದೆ. ಮತ್ತು ಸಾಂಸ್ಥಿಕ ಸುಧಾರಣೆಗಳನ್ನು ತರುತ್ತವೆ.

ULIP (Unified Logistics Interface Platform): ಇದು ಲೈವ್ ಲೊಕೇಶನ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇಲ್ಲಿ ಸರಕುಗಳ ನೈಜ ಚಲನೆಯನ್ನು ಮತ್ತು ಚಲನವಲನಗಳನ್ನು ತಿಳಿದುಕೊಳ್ಳಬಹುದು.

2. ಮೂಲಸೌಕರ್ಯ:

ಸಾರಿಗೆ ವ್ಯವಸ್ಥೆ: ಇಲ್ಲಿ ಮಲ್ಟಿ ಮಾಡೆಲ್ ಸಾರಿಗೆ ವ್ಯವಸ್ಥೆಯನ್ನು ಸೃಷ್ಟಿಸಲಾಗುತ್ತದೆ. ಎಲ್ಲ ರೀತಿಯ ಸಾರಿಗೆ ವ್ಯವಸ್ಥೆಗಳನ್ನು ಸಂಯೋಜನೆಗೆ ತರಲಾಗುತ್ತದೆ.

ಈ ಮೂಲಕ ವಸ್ತು ಸಾಗಣೆ ಸುಲಭ. ಮತ್ತು ಅತಿ ಕಡಿಮೆ ವೆಚ್ಚದಲ್ಲಿ ಕೆಲಸ ಮುಗಿಯುತ್ತದೆ.

ಉದ್ಯೋಗಿಗಳು: ಈ ಒಂದು ಕ್ಷೇತ್ರದಲ್ಲಿ ಕೆಲಸ ಮಾಡಲು ನುರಿತ ಉದ್ಯೋಗಿಗಳ ಅವಶ್ಯಕತೆ ಇದೆ.

ಈ ನಿಟ್ಟಿನಲ್ಲಿ ಪಠ್ಯಕ್ರಮಗಳಲ್ಲಿ ಈ ವಿಷಯಗಳನ್ನು ಸೇರಿಸುವಂಥದ್ದು. ಹಾಗೂ ಅವರಿಗೆ ತರಬೇತಿ ನೀಡುವ ವ್ಯವಸ್ಥೆಯನ್ನು ಬಲಪಡಿಸುವಂತದ್ದಾಗಿದೆ.

ದಾಸ್ತಾನಿನ ವ್ಯವಸ್ಥೆ: ವಸ್ತುಗಳನ್ನು ಬಹಳ ಕಾಲ ಇಡುವ ಅವಶ್ಯಕತೆ ಇರುತ್ತದೆ. ಇಂತಹ ಸಮಯದಲ್ಲಿ ಅವುಗಳನ್ನು ಕೆಡದಂತೆ ಕಾಪಾಡಿಕೊಳ್ಳಬೇಕು.

ಹಾಗೂ ಇದಕ್ಕೆ ಅನುಕೂಲವಾಗುವಂತೆ ದಾಸ್ತಾನಿನ ವ್ಯವಸ್ಥೆಗಳನ್ನು ಸೃಷ್ಟಿಸುವಂಥದ್ದು. ಹಾಗೂ ಇಲ್ಲಿ ಡಿಜಿಟಲಿಕರಣಕ್ಕೆ ಒತ್ತು ನೀಡುವುದು.

3. ರಾಜ್ಯಗಳ ಪಾಲು:

ಕೇಂದ್ರದ ನೀತಿಗೆ ಪೂರಕವಾಗಿ ರಾಜ್ಯಗಳಲ್ಲಿ ನಿಯಮಗಳು ಜಾರಿಯಾಗಬೇಕು. ಪ್ರತಿ ರಾಜ್ಯ ಹಾಗೂ ಕೇಂದ್ರ ಆಡಳಿತ ಪ್ರದೇಶಗಳಲ್ಲಿ ಲಾಜಿಸ್ಟಿಕ್ಸ್  ಯೋಜನೆಗಳನ್ನು ಜಾರಿಗೊಳಿಸುವುದು ಕಡ್ಡಾಯವಾಗಿದೆ.
ಇಲ್ಲಿ ಉದ್ಯೋಗಿಗಳಿಗೆ ಅನುಮತಿ ಪತ್ತು ಪರವಾನಗಿ ಅಗತ್ಯವಿರುತ್ತದೆ. ಇದಕ್ಕಾಗಿ ಈ ಪರವಾನಗಿಗಳನ್ನು ರಾಜ್ಯ ಸರ್ಕಾರವೇ ಕೊಡುತ್ತದೆ. ಹಾಗೂ ಈ ವ್ಯವಸ್ಥೆಗಾಗಿ ಏಕಗವಾಕ್ಷಿ ವ್ಯವಸ್ಥೆಯನ್ನು ರಾಜ್ಯಗಳಲ್ಲಿ ಜಾರಿಗೊಳಿಸಲಾಗುತ್ತದೆ.

National Logistics Policy India: ಈ ಯೋಜನೆಯ ಉದ್ದೇಶಗಳು:

1. ಖರ್ಚು ಕಡಿಮೆ:

ವೆಚ್ಚ ಕಡಿಮೆ ಮಾಡುವುದು: ಪ್ರಸ್ತುತ ಈ ವಲಯಕ್ಕೆ ಬಹಳಷ್ಟು ಖರ್ಚು ಮಾಡಲಾಗುತ್ತಿದೆ. ಭಾರತದ ಜಿಡಿಪಿಯಲ್ಲಿ ಒಂದಷ್ಟು ಭಾಗವನ್ನು ಮೀಸಲಿಡಲಾಗುತ್ತಿದೆ.

ಹಾಗೂ ಇವುಗಳನ್ನು ಕಡಿಮೆ ಮಾಡುವಂತಹ ಉದ್ದೇಶವನ್ನು ಹೊಂದಲಾಗಿದೆ.
2030ರ ವೇಳೆಗೆ ಈ ಒಂದು ಜಿಡಿಪಿಯ ಭಾಗದಲ್ಲಿ ಕೇವಲ 8 ಶೇಕಡಕ್ಕೆ ಲಾಜಿಸ್ಟಿಕ್ಸ್ ವೆಚ್ಚವನ್ನು ಇಳಿಸುವ ಯೋಜನೆಯ ಹೊಂದಿದೆ.

ಜಾಗತಿಕ ಮಟ್ಟದ ಹೆಸರು: ಲಾಜಿಸ್ಟಿಕ್ಸ್ ವ್ಯವಸ್ಥೆಯನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿಸುವ ಗುರಿಯನ್ನು ಕೇಂದ್ರ ಸರ್ಕಾರವು ಹೊಂದಿದೆ.

ಇಲ್ಲಿ ಬೆಲೆಯನ್ನು ಕಡಿಮೆ ಮಾಡುವುದು ಅಥವಾ ವೆಚ್ಚವನ್ನು ಕಡಿಮೆಗೊಳಿಸಲಾಗುತ್ತದೆ.
ಇದರಿಂದಾಗಿ ಭಾರತದ ಹೆಚ್ಚಿನ ಉತ್ಪನ್ನಗಳು ಮಾರುಕಟ್ಟೆಯನ್ನು ತಲುಪಲು ಸಾಧ್ಯವಾಗುತ್ತದೆ. ಹಾಗೂ ಇದು ನಮ್ಮ ಉತ್ಪನ್ನಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲಿದೆ.

2. ಡೇಟಾ ಆಧಾರ:

ಇಲ್ಲಿ ವಸ್ತುಗಳ ಚಲನವಲನವನ್ನು ನಿಖರವಾಗಿ ಪತ್ತೆಹಚ್ಚಲಾಗುತ್ತದೆ. ಹಾಗೂ ಈ ಒಂದು ಸಾರಿಗೆ ಮತ್ತು ಕಸ್ಟಮ್ಸ್ ವಿಭಾಗದಲ್ಲಿ ಕಾಗದ ಸಹಿತ ವ್ಯವಹಾರಗಳು ನಡೆಯುತ್ತಿವೆ.

ಇದನ್ನು ಸಂಪೂರ್ಣವಾಗಿ ತಪ್ಪಿಸುವುದು. ಹಾಗೂ ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸುವುದು. ಮತ್ತು ಕಾಗದ ರಹಿತ ವ್ಯವಸ್ಥೆಯನ್ನು ಜಾರಿಗೆ ತರುವುದು ಇಲ್ಲಿನ ಮೂಲ ಉದ್ದೇಶವಾಗಿದೆ.

3. ಜಾಗತಿಕ ಮಟ್ಟದಲ್ಲಿ ಬದಲಾವಣೆ:

ವಿಶ್ವ ಬ್ಯಾಂಕ್ ನಲ್ಲಿ ಲಾಜಿಸ್ಟಿಕ್ಸ್ ಕಾರ್ಯಕ್ಷಮತೆಯ ಸೂಚ್ಯಂಕಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗುತ್ತದೆ.

ಹಾಗೂ ಈ ಪಟ್ಟಿಯಲ್ಲಿ ಭಾರತದ ಹೆಸರು ಇರಬೇಕೆಂಬುದು ಆಶಯವಾಗಿದೆ.
2030ರ ವೇಳೆಗೆ ಈ ಸೂಚ್ಯಂಕದ  ವಿಶ್ವದ ಮೊದಲ 25 ದೇಶಗಳ ಪಟ್ಟಿಯಲ್ಲಿ ಭಾರತದ ಹೆಸರು ಇರಬೇಕೆಂಬುದು ಉದ್ದೇಶವಾಗಿದೆ.

ಈ ಮೂಲಕ ಭಾರತದಲ್ಲಿ ನೀತಿ ಮತ್ತು ಉತ್ಪನ್ನಗಳಿಗೆ ವಿದೇಶಕರನ್ನು ಆಕರ್ಷಣೆ ಗೊಳಿಸಬಹುದಾಗಿದೆ.

4. ಸೌಕರ್ಯಗಳ ಹೆಚ್ಚಿನ ಬಳಕೆ:

 

ಪಿಎಂ ಗತಿಶಕ್ತಿ ಯೋಜನೆಯ ಸಂಯೋಜನೆಯಾಗಿದೆ: ಈ ಒಂದು ನೀತಿಯನ್ನು ಸುಸಜ್ಜಿತವಾಗಿ ಜಾರಿಗೊಳಿಸಲು ಹಲವಾರು ಕ್ರಮಗಳ ಅಗತ್ಯವಿರುತ್ತದೆ.

ಜೊತೆಗೆ ಸಾಕಷ್ಟು ಮೂಲಭೂತ ಸೌಕರ್ಯಗಳ ಅಗತ್ಯವು ಇದೆ. ಹೀಗಾಗಿ,ವಿವಿಧ ಇಲಾಖೆಗಳಿಗೆ ಸಂಬಂಧಪಟ್ಟಂತಹ ಮೂಲಸೌಕರ್ಯಗಳ ಯೋಜನೆಗಳನ್ನು ಸಂಯೋಜಿಸಲಾಗುತ್ತದೆ.

ಈ ಮೂಲಕ ಅವುಗಳನ್ನು ಬಳಸಿಕೊಳ್ಳಲು ಸುಲಭವಾಗುತ್ತದೆ. ಹೀಗೆ ದೇಶದಲ್ಲಿನ ರೈಲು, ರಸ್ತೆ ಹಾಗೂ ಜಲಮಾರ್ಗಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಉದ್ದೇಶವನ್ನು ಹೊಂದಲಾಗಿದೆ.

ಸರಕಿನ ವ್ಯರ್ಥ: ಇಲ್ಲಿ ವಸ್ತುಗಳ ಸಂಗ್ರಹಣೆ ಅಗತ್ಯ. ಇದಕ್ಕಾಗಿ ಆಧುನಿಕ ಗೋಧಾಮಗಳು ಮತ್ತು ಕೋಲ್ಡ್ ಸ್ಟೋರೇಜ್ ಗಳನ್ನು ನಿರ್ಮಿಸಲಾಗುತ್ತದೆ.
ಇದರಿಂದಾಗಿ ಕೃಷಿ ಮತ್ತು ಇನ್ನಿತರ ಉತ್ಪನ್ನಗಳು ಸಾಗಣೆಯ ಸಮಯದಲ್ಲಿ ಹಾಳಾಗದಂತೆ ತಡೆಯಬಹುದಾಗಿದೆ.

5. ಕೌಶಲ್ಯ ಮತ್ತು ಉದ್ಯೋಗ:

ಹೊಸ ನೀತಿಯಿಂದಾಗಿ ಲಾಜಿಸ್ಟಿಕ್ಸ್ ವಲಯದಲ್ಲಿ ಹಲವಾರು ಬದಲಾವಣೆಗಳು ಉಂಟಾಗಲಿವೆ. ಹಾಗೂ ಇಲ್ಲಿ ಹೆಚ್ಚಿನ ಉದ್ಯೋಗಗಳ ಸೃಷ್ಟಿಯಾಗಲಿದೆ. ಉದ್ಯೋಗವನ್ನು ಲಭಿಸುವಂತೆ ಮಾಡುವ ಉದ್ದೇಶವನ್ನು ಹೊಂದಿದೆ.

ಮತ್ತು ಈ ವಲಯಕ್ಕೆ ಸಂಬಂಧಪಟ್ಟಂತೆ ತರಬೇತಿಗಳನ್ನು ನೀಡುವುದು.

ಇಲ್ಲಿನ ಆಧುನಿಕ ತಂತ್ರಜ್ಞಾನ ಮತ್ತು ನಿರ್ವಹಣೆಯ ಕೌಶಲ್ಯದ ಕುರಿತಾಗಿ ತರಬೇತಿಗಳನ್ನು ನೀಡಲಾಗುತ್ತದೆ.
ಈ ಮೂಲಕ ಈ ಒಂದು ವಲಯದಲ್ಲಿ ದಕ್ಷತೆಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ.

ಈ ನೀತಿಯ ಅನುಷ್ಠಾನಕ್ಕಿರುವ ಸವಾಲುಗಳು:

1. ರಸ್ತೆಯ ಅವಲಂಬನೆ:

ಭಾರತದಲ್ಲಿ ಸರಕು ಸಾಗಾಣಿಕೆ ಹೆಚ್ಚಾಗಿ ರಸ್ತೆಯನ್ನೇ ಬಳಸಲಾಗುತ್ತದೆ. ಸರಕು ಸಾಗಾಟದಲ್ಲಿ ಸುಮಾರು 70% ಪ್ರಸ್ತುತ ರಸ್ತೆ ಮಾರ್ಗವನ್ನು ಬಳಸಲಾಗುತ್ತಿದೆ.

ಹಾಗೂ ರಸ್ತೆ ಮಾರ್ಗವೂ ದುಬಾರಿಯಾಗಿರುವಂಥದ್ದು.
ರಸ್ತೆ ಮಾರ್ಗಕ್ಕೆ ಹೋಲಿಸಿದರೆ ಜಲಮಾರ್ಗ ಮತ್ತು ರೈಲ್ವೆ ಕಡಿಮೆ ವೆಚ್ಚದಾಗಿದೆ.

ಹಾಗೂ ಪ್ರಸ್ತುತ ಇಂಧನದ ಬೆಲೆಯಲ್ಲಿನ ಏರಿಳಿತಗಳು ರಸ್ತೆ ಮಾರ್ಗಕ್ಕೆ ಇನ್ನೂ ಹೆಚ್ಚಿನ ತೊಂದರೆ ಉಂಟು ಮಾಡುತ್ತದೆ.

2. ಮೂಲಸೌಕರ್ಯದ ಕೊರತೆ:

ಮೊದಲೇ ತಿಳಿಸಿದಂತೆ, ವಸ್ತುಗಳನ್ನು ಸಂಗ್ರಹಿಸಲು ದಾಸ್ತಿನಿನ ಅಗತ್ಯವಿರುತ್ತದೆ. ಹಾಗೂ ಪ್ರಸ್ತುತ ದಾಸ್ತಾನು ಹಾಗೂ ಕೋಲ್ಡ್ ಸ್ಟೋರೇಜ್ ನ ಕೊರತೆಯಿದೆ.

ಇದರಿಂದಾಗಿ ಉತ್ಪನ್ನಗಳನ್ನು ಬಹಳ ದಿನಗಳ ಕಾಲ ಇಡಲು ಸಾಧ್ಯವಾಗುತ್ತಿಲ್ಲ. ಹಾಗೂ ಇದು ದೊಡ್ಡ ಸವಾಲಿನ ವಿಷಯವಾಗಿದೆ.

3.ಅಸಂಘಟಿತ ವಲಯ:

ಭಾರತದ ಲಾಜಿಸ್ಟಿಕ್ಸ್ ವಲಯವು ಸಂಘಟಿತವಾಗಿಲ್ಲ. ಇದರಲ್ಲಿ ಸುಮಾರು 90% ರಷ್ಟು ಭಾಗವು ಅಸಂಘಟಿತವಾಗಿದೆ.ಹಾಗೂ ಇದರಿಂದಾಗಿ ಕೆಲಸದ ವೇಗವು ಕುಂಠಿತವಾಗಿದೆ.

ಈ ಸಣ್ಣ ಸಂಸ್ಥೆಗಳಲ್ಲಿ ಡಿಜಿಟಲ್ ಜ್ಞಾನದ ಕೊರತೆಯಿರುವುದು ಸವಾಲಿನ ವಿಷಯ. ಇದರಿಂದಾಗಿ ಟ್ರಾಕಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದು ಇಲ್ಲಿ ಕಠಿಣವಾಗಿದೆ.

4.ಆಡಳಿತದ ಸಮಸ್ಯೆಗಳು:

ಇಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಸಮನ್ವಯತೆಯನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಹಾಗೂ ಇವುಗಳ ನಿಯಮಗಳು ಹಾಗೂ ಕ್ರಮಗಳು ಹೊಂದಿಕೊಳ್ಳಬೇಕು.
ಇಲ್ಲಿ ನಿಯಮಗಳು, ಪರವಾನಗಿ ಹಾಗೂ GST ವಿಚಾರದಲ್ಲಿ ಹೊಂದಾಣಿಕೆ ಬೇಕು. ಈ ಎಲ್ಲ ಹೊಂದಾಣಿಕೆಯ ಕೊರತೆಗಳು ಈ ನೀತಿಯ ವಿಳಂಬಕ್ಕೆ ಕಾರಣವಾಗಬಹುದಾಗಿದೆ.
ಇಲ್ಲಿ ವಿವಿಧ ಸರ್ಕಾರಗಳು ಹಾಗೂ ಇನ್ನಿತರ ಅಂಶಗಳು ದೊಡ್ಡ ಸವಾಲಿನ ವಿಷಯವಾಗಿದೆ.

5.ಸಣ್ಣ ಉದ್ಯಮಗಳು:

ಇದರ ಕುರಿತಾಗಿ NCAER-DPIIT ಯು ವರದಿ ಮಾಡಿದೆ. ಇಲ್ಲಿ ದೊಡ್ಡ ಉದ್ಯಮಗಳಿಗೆ ಲಾಜಿಸ್ಟಿಕ್ಸ್ ವೆಚ್ಚ ಕಡಿಮೆಯಿದೆ. ಮತ್ತು ಹೊರೆಯೆನಿಸುತ್ತಿಲ್ಲ.

ಆದರೆ ಸಣ್ಣ ಉದ್ಯಮಗಳಿಗೆ ಇದು ದೊಡ್ಡ ಹೊರೆಯಾಗಿ ಪರಿಣಮಿಸಿದೆ. ಈ ವೆಚ್ಚವು ಅವರ ಅವರ ಒಟ್ಟು ವ್ಯವಹಾರದ 16.9% ರಷ್ಟಾಗುತ್ತದೆ. ಇದು ಅವರ ವ್ಯವಹಾರಕ್ಕೆ ಹೊರೆಯಾಗಿದೆ.

6.ಯೋಜನೆಗಳ ವಿಳಂಬ:

ಇಲ್ಲಿ ಸರಕು ಕಾರಿಡಾರ್ ಗಳು ಹಾಗೂ ಮಲ್ಟಿಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್‌ಗಳ ನಿರ್ಮಾಣದ ಅಗತ್ಯವಿದೆ. ಹಾಗೂ ಇದಕ್ಕಾಗಿ ಭೂಮಿಗಳನ್ನು ಸ್ವಾಧೀನಪಡಿಸಿಕೊಳ್ಳಬೇಕಿದೆ.

ಈ ನಿಟ್ಟಿನಲ್ಲಿ ಸ್ವಾಧೀನಪಡಿಸಿಕೊಳ್ಳುವಿಕೆ ಹಾಗೂ ಅವುಗಳ ದಾಖಲೆಗಳನ್ನು ಪಡೆಯುವಿಕೆ ಸವಾಲಾಗಿ ಪರಿಣಮಿಸಿದೆ.ಹಾಗೂ ಇವುಗಳ ವಿಳಂಬ ಯೋಜನೆಯ ಅನುಷ್ಠಾನದ ವಿಳಂಬಕ್ಕೆ ಕಾರಣವಾಗಿದೆ.

ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿ ಮತ್ತು ಪಿಎಂ ಗತಿಶಕ್ತಿ ಯೋಜನೆ ನಡುವಿನ ವ್ಯತ್ಯಾಸಗಳು:

1. ಡಿಜಿಟಲ್ ವ್ಯವಸ್ಥೆ:

ಪಿಎಂ ಗತಿಶಕ್ತಿ: ಈ ಯೋಜನೆ GIS (Geographic Information System) ನಕ್ಷೆಯನ್ನು ಹೊಂದಿದೆ. ಇದು ಪೂರ್ತಿ ದೇಶದ ಭೂಪ್ರದೇಶ ಮತ್ತು ಮೂಲಸೌಕರ್ಯಗಳ ಮಾಹಿತಿಯನ್ನು ಒಳಗೊಂಡಿದೆ.

ಮತ್ತು ಇದು ಹೊಸ ರಸ್ತೆ ಮತ್ತು ರೈಲ್ವೆ ಮಾರ್ಗವನ್ನು ಇಲ್ಲಿ ನಿರ್ಮಿಸಬೇಕು ಎಂದು ಯೋಜಿಸುತ್ತದೆ.

ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿ: ULIP ಎಂಬುದು ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿ ಅಡಿಯಲ್ಲಿ ಬರುವ ಸಾಫ್ಟ್ವೇರ್ ಆಗಿದೆ. ಇದು ಲೈವ್ ಮಾಹಿತಿಯನ್ನು ತಿಳಿಸುತ್ತದೆ.

ವೇಗದ ಮಾರ್ಗ: ಉದಾಹರಣೆಗೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸರಕು ಸಾಗಾಟ ಮಾಡುವಾಗ GIS ಉತ್ತಮ ಮಾರ್ಗಗಳನ್ನು ತೋರಿಸುತ್ತದೆ.

ಹಾಗೂ ULIP ಆಮಾರ್ಗದಲ್ಲಿ ಇರುವ ಟ್ರಾಫಿಕ್, ಟೋಲ್ ಹಾಗೂ ಇನ್ನಿತರ ಮಾಹಿತಿಗಳನ್ನು ತಿಳಿಸುತ್ತದೆ.

ವಿಳಂಬ ಇರುವುದಿಲ್ಲ: ಇಲ್ಲಿ ರೈಲ್ವೆ ಮತ್ತು ರಸ್ತೆಗೆ ಸಂಬಂಧಪಟ್ಟ ಎಲ್ಲಾ ಮಾಹಿತಿಗಳು ಒಂದೆಡೆ ದೊರಕಲಿವೆ. ಇದರಿಂದ ಚೆಕ್ ಪೋಸ್ಟ್ ಗಳಲ್ಲಿ ಲಾರಿಗಳು ಕಾಯುವ ಅಗತ್ಯ ಬರುವುದಿಲ್ಲ.

ವೆಚ್ಚ ಕಡಿಮೆ: ಇಲ್ಲಿ ಸುಲಭವಾದ ಮಾರ್ಗವನ್ನು ತೋರಿಸಲಾಗುತ್ತದೆ. ಮತ್ತು ಈ ಮಾರ್ಗವನ್ನು ಬಳಸುವುದರಿಂದಾಗಿ ಅತಿ ಬೇಗನೆ ಸ್ಥಳವನ್ನು ತಲುಪಬಹುದು.

ಇದರಿಂದ ಹೆಚ್ಚಿನ ವೆಚ್ಚ ಉಂಟಾಗುವುದಿಲ್ಲ. ಕಡಿಮೆ ಇಂಧನ ಮತ್ತು ಸಮಯದ ಖರ್ಚಾಗುತ್ತದೆ.

2. ಸಾಫ್ಟ್ವೇರ್ ಮತ್ತು ಹಾರ್ಡ್ವೇರ್:

ಪಿಎಂ ಗತಿಶಕ್ತಿ: ಇದು ಒಂದು ಬೃಹತ್ ಡಿಜಿಟಲ್ ಪ್ಲಾಟ್‌ಫಾರ್ಮ್ ಆಗಿದೆ. ಈ ಮೂಲಕ ರೈಲ್ವೆ ಮಾರ್ಗ, ಬಂದರು, ವಿಮಾನ ನಿಲ್ದಾಣ ಇತರ ಮೂಲಭೂತ ಸೌಕರ್ಯಗಳನ್ನು ಯೋಜಿಸಲಾಗುತ್ತದೆ ಮತ್ತು ನಿರ್ಮಿಸಲಾಗುತ್ತದೆ.

ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿ: ಇಲ್ಲಿ ಗತಿಶಕ್ತಿ ನಿರ್ಮಿಸಿರುವ ಮೂಲಭೂತ ಸೌಕರ್ಯಗಳನ್ನು ಸಮರ್ಥವಾಗಿ ಬಳಸಿಕೊಳ್ಳಲಾಗುತ್ತದೆ. ಹಾಗೂ ಅವುಗಳನ್ನು ಸುಲಭವಾಗಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

ಈ ಸಲುವಾಗಿ ನಿಯಮಗಳು, ಡಿಜಿಟಲ್ ಸೇವೆಗಳು, ಮತ್ತು ಮಾನವ ಸಂಪನ್ಮೂಲವನ್ನು ಇಲ್ಲಿ ಒದಗಿಸಲಾಗುತ್ತದೆ.

3.ಮಲ್ಟಿಮೋಡಲ್ ಸಂಪರ್ಕ:

ಪಿಎಂ ಗತಿಶಕ್ತಿ: ಇದು ದೇಶದ ಎಲ್ಲಾ ಸಾರಿಗೆ ವ್ಯವಸ್ಥೆಯನ್ನು ಮುನ್ನಡೆ ಕಲ್ಪಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ಕಾರಿಡಾರ್‌ಗಳನ್ನು ವಿನ್ಯಾಸಗೊಳಿಸಲಿದೆ.

NLP: ಇದು ಒಂದು ಸಾರಿಗೆಯಿಂದ ಮತ್ತೊಂದು ಸಾರಿಗೆಗೆ ಸರಕುಗಳನ್ನು ವರ್ಗಾಯಿಸುತ್ತದೆ. ಇಲ್ಲಿ ಕಾಗದರಹಿತ ವ್ಯವಹಾರ ನಡೆಯುತ್ತದೆ. ಮತ್ತು ಯಾವುದೇ ವಿಳಂಬ ಉಂಟಾಗುವುದಿಲ್ಲ.

4. ವೆಚ್ಚ ಕಡಿಮೆ:

•ಗತಿಶಕ್ತಿಯ ಮೂಲಕ ವಿಳಂಬವನ್ನು ತಡೆಗಟ್ಟಬಹುದಾಗಿದೆ.
ಇದು ರಸ್ತೆ ಮತ್ತು ರೈಲ್ವೆ ನಿರ್ಮಾಣದಲ್ಲಿ ಉಂಟಾಗುವಂತಹ ವಿಳಂಬವನ್ನು ತಡೆಗಟ್ಟುತ್ತದೆ. ಇದರಿಂದಾಗಿ ವೆಚ್ಚವು ಕೂಡ ಕಡಿಮೆ ಆಗುತ್ತದೆ.

•NLP ಯು ಸರಕು ಸಾಗಣೆಯ ವೆಚ್ಚ ಮತ್ತು ಸಮಯವನ್ನು ಕಡಿಮೆಯಾಗಿಸುತ್ತದೆ. ಹಾಗೂ ಈ ಮೂಲಕ ವೆಚ್ಚವನ್ನು GDP ಯನ್ನು 8% ಕ್ಕೆ ಇಳಿಸುವ ಗುರಿಯನ್ನು ಅತಿ ಬೇಗನೆ ತಲುಪಬಹುದಾಗಿದೆ.

ಒಟ್ಟಾರೆಯಾಗಿ ಲಾಜಿಸ್ಟಿಕ್ಸ್ ವಲಯದಲ್ಲಿ ಈ ಹೊಸ ನೀತಿಯ ಪರಿಣಾಮ ಧನಾತ್ಮಕವಾಗಿರಲಿದೆ. ಸರಕು ಸಾಗಾಟ ವ್ಯವಸ್ಥೆಯಲ್ಲಿ ದಕ್ಷತೆಯನ್ನು ತರಲು ಈ ಹೊಸ ನೀತಿಯು ನೆರವಾಗಲಿದೆ.

ಈ ನೀತಿಯು ಭಾರತ ಸರ್ಕಾರದ ಪ್ರಮುಖ ಹೆಜ್ಜೆಯಾಗಿದೆ. ಈ ಮೂಲಕ ಮುಂದೆ ಜಾಗತಿಕವಾಗಿ ಭಾರತದ ಉತ್ಪನ್ನಗಳಿಗೆ ಹಾಗು ವ್ಯವಸ್ಥೆಗೆ ಹೆಚ್ಚಿನ ಮನ್ನಣೆ ದೊರೆಯಲಿದೆ.

ಇನ್ನಷ್ಟು ಮಾಹಿತಿಗಾಗಿ: Press Information Bureau 

ಇದನ್ನು ಓದಿ: ಭಾರತದ ಬ್ಲ್ಯೂ ಎಕಾನಮಿ ನೀತಿ

Leave a Comment

Scroll to Top

Discover more from nirantarasuddhi

Subscribe now to keep reading and get access to the full archive.

Continue reading