One Nation One Subscription:ಏನಿದು ONOS? ಇಲ್ಲಿದೆ ಸಂಪೂರ್ಣ ಮಾಹಿತಿ

Spread the love

One Nation One Subscription: ಒನ್ ನೇಷನ್ ಒನ್ ಸಬ್‌ಸ್ಕ್ರಿಪ್ಷನ್ ಎಂಬುದು ಭಾರತ ಸರ್ಕಾರದ ಪ್ರಮುಖ ಯೋಜನೆ. ಇದನ್ನು 2025 ಜನವರಿ 1ರಂದು ಅಧಿಕೃತವಾಗಿ ಜಾರಿಗೊಳಿಸಲಾಯಿತು. ಇದೊಂದು ಡಿಜಿಟಲ್ ಯೋಜನೆಯಾಗಿದೆ.

 

One Nation One Subscription
One Nation One Subscription

One Nation One Subscription: ಏನಿದು ಒನ್ ನೇಷನ್ ಒನ್ ಸಬ್‌ಸ್ಕ್ರಿಪ್ಷನ್?

One Nation One Subscription: ದೇಶದ ಎಲ್ಲಾ ಸರ್ಕಾರಿ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳು ತಮ್ಮ ಜರ್ನಲ್ ಮತ್ತು ಸಂಶೋಧನಾ ಪ್ರಬಂಧಗಳನ್ನು ಹೊಂದಿರುತ್ತವೆ.

ಇವೆಲ್ಲವನ್ನು ಒಂದೇ ವೇದಿಕೆಯಲ್ಲಿ ತರುವಂತಹ ಪ್ರಯತ್ನವೇ ಈ ಯೋಜನೆ. ಇಲ್ಲಿ ಇ-ಜರ್ನಲ್‌ಗಳಿಗೆ ಉಚಿತ ಪ್ರವೇಶವನ್ನು ಒದಗಿಸಲಾಗುತ್ತದೆ.

One Nation One Subscription: ಈ ಯೋಜನೆಯ ವೈಶಿಷ್ಟತೆಗಳು:

1. ಬಜೆಟ್ ಮತ್ತು ಸಮಯ:

ಇದೊಂದು ಕೇಂದ್ರ ವಲಯದ ಯೋಜನೆಯಾಗಿ:ದೆ. ಇದರ ಸಂಪೂರ್ಣ ಆಡಳಿತ ಕೇಂದ್ರ ಪಟ್ಟಿಗೆ ಸೇರಿರುತ್ತದೆ. ಹಾಗೂ ಕೇಂದ್ರ ಸರ್ಕಾರವೇ ಇದಕೆ ಧನಸಹಾಯ ನೀಡುತ್ತದೆ.

ರಾಜ್ಯ ಸರ್ಕಾರದ ಪಾತ್ರ ಮುಖ್ಯವಾಗಿ ಇಲ್ಲಿ ಇರುವುದಿಲ್ಲ.
ಪ್ರಸ್ತುತ ಮೂರು ವರ್ಷಗಳಿಗೆ (2025-27) ₹6,000 ಕೋಟಿ ಅನುದಾನವನ್ನು ಮೀಸಲಿಟ್ಟಿದ್ದಾರೆ.

2. ಜಾಗತಿಕ ಜರ್ನಲ್ ಗಳು:

ಇಲ್ಲಿ ಜಗತ್ತಿನ ಪ್ರಮುಖ 30ಕ್ಕೂ ಹೆಚ್ಚು ಪ್ರಕಾಶಕರ ಜರ್ನಲ್ ಗಳು ದೊರೆಯುತ್ತವೆ. ಒಟ್ಟಾರೆಯಾಗಿ 13,000 ಕಿಂತ ಹೆಚ್ಚು ಇ- ಜರ್ನಲ್ ಗಳು ಓದಲು ಸಿಗುತ್ತವೆ.
ಉದಾಹರಣೆಗೆ ಇಲ್ಲಿನ ಪ್ರಕಾಶಕರುಗಳು: ವಿಲಿ, ಟೇಲರ್,ಎಲ್ಸೆವಿಯರ್ ಮತ್ತು ಇತರರು.

3. ಫಲಾನುಭವಿಗಳು ಹೆಚ್ಚು:

ಇಲ್ಲಿ ದೇಶದ ಹಲವಾರು ಸಂಸ್ಥೆಗಳು ಸೇರಿಕೊಂಡಿವೆ. ಮತ್ತು ಹೆಚ್ಚಿನ ಫಲಾನುಭವಿಗಳು ಈ ಮೂಲಕ ಲಾಭವನ್ನು ಪಡೆಯುತ್ತಿದ್ದಾರೆ.
ದೇಶದಲ್ಲಿ ಸುಮಾರು 6,400 ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳು.

ಹಾಗೂ ಕೇಂದ್ರೀಯ ಸಂಶೋಧನ ಪ್ರಯೋಗಾಲಯಗಳು ಈ ಒಂದು ಯೋಜನೆಯ ವ್ಯಾಪ್ತಿಗೆ  ಬರುತ್ತಾರೆ.
ಹಾಗೂ 1.8 ಕೋಟಿಗಿಂತ ಹೆಚ್ಚು ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಮತ್ತು ಸಂಶೋಧಕರು ಇದರ ಲಾಭವನ್ನು ಪಡೆಯುತ್ತಿದ್ದಾರೆ.

4. ಮುಕ್ತ ಪ್ರವೇಶ:

ಭಾರತೀಯ ಸಂಶೋಧಕರಿಗೆ ಇಲ್ಲಿ ಮುಕ್ತ ಪ್ರವೇಶವನ್ನು ನೀಡಲಾಗಿದೆ. ಈ ಮುಕ್ತ ಪ್ರವೇಶದ ಮೂಲಕ ಅವರು ತಮ್ಮ ಪ್ರಬಂಧಗಳನ್ನು ಪ್ರಕಟಿಸಬಹುದಾಗಿದೆ.
ಇಲ್ಲಿ ಲೇಖನ ಸಂಸ್ಕರಣಾ ಶುಲ್ಕದ ಅಗತ್ಯವಿರುತ್ತದೆ. ಇದಕ್ಕಾಗಿ ಸರ್ಕಾರದಿಂದ ವರ್ಷಕ್ಕೆ ₹150 ಕೋಟಿ ನಿಧಿಯನ್ನು ಮೀಸಲಿಡಲಾಗಿದೆ.

5. ಏಕರೂಪದಲ್ಲಿ ಡಿಜಿಟಲ್ ವ್ಯವಸ್ಥೆ:

ಇಲ್ಲಿ ಒಂದೇ ವೆಬ್ಸೈಟ್ ಇರಲಿದೆ. ಆ ಒಂದೇ ವೆಬ್ಸೈಟ್ ಮೂಲಕ ಎಲ್ಲಾ ಜರ್ನಲ್ ಗಳಿಗೂ ಪ್ರವೇಶವನ್ನು ಪಡೆಯಬಹುದಾಗಿದೆ.
ಇನ್‌ಫ್ಲಿಬ್‌ನೆಟ್ ಕೇಂದ್ರವು ಇದಕ್ಕೆ ಸಂಬಂಧಪಟ್ಟಂತೆ ಸಂಪೂರ್ಣ ಡಿಜಿಟಲ್ ವ್ಯವಸ್ಥೆಯನ್ನು ನಿರ್ವಹಣೆ ಮಾಡುತ್ತದೆ. ಹಾಗೂ ಈ ಕೇಂದ್ರವು ವಿಶ್ವವಿದ್ಯಾಲಯ ಧನಸಹಾಯ ಆಯೋಗದಡಿ ಬರುತ್ತದೆ.

ಈ ಯೋಜನೆಯ ಉದ್ದೇಶಗಳು:

 

1. ಮುಕ್ತ ಪ್ರಕಟಣೆ:

ವೆಚ್ಚ ಭರಿಸುವಿಕೆ: ಲೇಖನ ಮತ್ತು ಪ್ರಬಂಧಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಕಟಿಸುವಂಥದ್ದು. ಆದರೆ ಈ ಅಂತರಾಷ್ಟ್ರೀಯ ಮಠದ ಪ್ರಕಾರಣೆಗೆ ಬಹಳಷ್ಟು ವೆಚ್ಚ ತಗಲುತ್ತದೆ.

ಹಾಗೂ ಇದು ಲೇಖಕರಿಗೆ ದೊಡ್ಡ ಹೊರೆಯಾಗಿತ್ತು.
ಪ್ರಸ್ತುತ ಸರ್ಕಾರವೇ ಅಂತರಾಷ್ಟ್ರೀಯ ಮಟ್ಟದ ಪ್ರಕಟಣೆಗೆ ಅಗತ್ಯವಿರುವ ಶುಲ್ಕವನ್ನು ಪಾವತಿಸುತ್ತದೆ. ಇದಕ್ಕಾಗಿ ಮೀಸಲು ನಿಧಿಯನ್ನು ಇಡಲಾಗಿದೆ.

ಜಾಗತಿಕ ಸ್ಥಾನಮಾನ: ಹಾಗೂ ಅಂತರಾಷ್ಟ್ರೀಯ ಮಟ್ಟದ ಪ್ರಕಟಣೆಯು ಹೆಸರನ್ನು ತಂದುಕೊಡುತ್ತದೆ.
ಭಾರತದ ಪ್ರತಿಭೆಗಳಿಗೆ ಗುರುತು ನೀಡುತ್ತದೆ.

ಈ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತದ ಜ್ಞಾನವನ್ನು ಪಸರಿಸಲಾಗುತ್ತದೆ.ಹಾಗೂ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರಕಲಿದೆ.
ಈ ಮೂಲಕ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಪ್ರಬಂಧಗಳ ಸಂಖ್ಯೆಯನ್ನು ಹೆಚ್ಚಿಸುವುದು. ಮತ್ತು ಪ್ರಭಾವವನ್ನು ಹೆಚ್ಚಿಸುವುದು ಮೂಲ ಉದ್ದೇಶವಾಗಿದೆ.

2. ಉತ್ತಮ ಸಂಶೋಧನೆಗೆ ಉತ್ತೇಜಿಸುವಿಕೆ:

ಜರ್ನಲ್ ಗಳ ಲಭ್ಯತೆ: ಒಂದಷ್ಟು ಸಂಶೋಧನೆಗಳ ಜರ್ನಲ್ ಗಳು ಮತ್ತಷ್ಟು ಸಂಶೋಧನೆಗಳಿಗೆ ದಾರಿ ಮಾಡಿಕೊಡುತ್ತವೆ. ಹಾಗೂ ಸಂಶೋಧನೆಗಳ ಕುರಿತಾಗಿ ಜ್ಞಾನವನ್ನು ಹಂಚುತ್ತವೆ.
ಇಲ್ಲಿ 13 ಸಾವಿರಕ್ಕೂ ಹೆಚ್ಚು ಜರ್ನಲ್ ಗಳಿಕೆ ಮುಕ್ತ ಪ್ರವೇಶ ದೊರಕುತ್ತದೆ.

ವಿಜ್ಞಾನ, ತಂತ್ರಜ್ಞಾನ, ಆರೋಗ್ಯ, ಹಾಗೂ ಇತರ ವಿಷಯಗಳ ಕುರಿತಾಗಿ ಜರ್ನಲ್ ಗಳು ಇಲ್ಲಿ ಲಭ್ಯವಿದೆ. ಹಾಗೂ ಇದೆಲ್ಲವನ್ನು ಸಂಶೋಧಕರಿಗೆ ಸುಲಭವಾಗಿ ದೊರಕುವಂತೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.

ಸಂಶೋಧನೆಯ ವೇಗವನ್ನು ಹೆಚ್ಚಿಸುವುದು: ಸಂಶೋಧನೆಗಳು ಸಾಮಾನ್ಯವಾಗಿ ಮಾಹಿತಿಯ ಕೊರತೆಯಿಂದ ವಿಳಂಬವಾಗುತ್ತವೆ. ಸಂಶೋಧನೆಗೆ ಹೆಚ್ಚಿನ ಪ್ರಮಾಣದಲ್ಲಿ ಮಾಹಿತಿಗಳ ಅಗತ್ಯವಿರುತ್ತದೆ.

ಹಾಗೂ ಅವುಗಳ ಹುಡುಕಾಟಕ್ಕೆ ಬಹಳಷ್ಟು ಸಮಯ  ತೆಗೆದುಕೊಳ್ಳಬೇಕಾಗುತ್ತದೆ.
ಪ್ರಸ್ತುತ ಈ ವೇದಿಕೆಯಡಿ ಹಲವು ಸಂಶೋಧನೆಗಳು ದೊರಕುತ್ತವೆ.

ಈ ಮೂಲಕ ವಿಳಂಬವನ್ನು ತಪ್ಪಿಸಬಹುದಾಗಿದೆ. ಹಾಗೂ ಜಾಗತಿಕ ಮಟ್ಟಕ್ಕೆ ತಕ್ಕಂತೆ ಸಂಶೋಧನೆಗಳನ್ನು ನಡೆಸಬಹುದಾಗಿದೆ.

3. ಆರ್ಥಿಕ ಹೊರೆ ಇರುವುದಿಲ್ಲ:

 

ಸಂಸ್ಥೆಗಳು ಉಳಿತಾಯ ಮಾಡಬಹುದು:ಸಾಮಾನ್ಯವಾಗಿ ಕಾಲೇಜುಗಳು ಸಂಶೋಧನಾ ಕೇಂದ್ರಗಳು, ಸಂಶೋಧನೆಗಳನ್ನು ನಡೆಸುತ್ತದೆ.

ಹಾಗೂ ಅವುಗಳಿಗೆ ಇತರ ಸಂಶೋಧನೆಗಳ ಜರ್ನಲ್ ಗಳ ಅಗತ್ಯವಿರುತ್ತದೆ. ಹಾಗೂ ಖಂಡಿತವಾಗಿಯೂ ಇದಕ್ಕೆ ಹೆಚ್ಚಿನ ವೆಚ್ಚ ತಗುಲುತ್ತದೆ.

ಈ ಯೋಚನೆ ಮೂಲಕ ದುಬಾರಿ ವೆಚ್ಚವನ್ನು ತಪ್ಪಿಸುವ ಉದ್ದೇಶವನ್ನು ಹೊಂದಲಾಗಿದೆ.

ಸಾಮೂಹಿಕ ಸಬ್ಸ್ಕ್ರಿಪ್ಷನ್:
ಇಲ್ಲಿ ಸಬ್ಸ್ಕ್ರಿಪ್ಷನ್ ಅನ್ನು ಸರ್ಕಾರವೇ ಖರೀದಿ ಮಾಡುತ್ತದೆ. ಇದನ್ನು ಒಂದು ರೀತಿಯಲ್ಲಿ ಸಾಮೂಹಿಕ ಸಬ್ಸ್ಕ್ರಿಪ್ಷನ್ ಎನ್ನಬಹುದಾಗಿದೆ.

ಹಾಗೂ ಸಂಸ್ಥೆಗಳು ಸಬ್ಸ್ಕ್ರಿಪ್ಷನ್ ತೆಗೆದುಕೊಳ್ಳುವ ಅಗತ್ಯ ಬರುವುದಿಲ್ಲ. ಇದರಿಂದಾಗಿ ಜನರ ಹಣವನ್ನು ಉಳಿತಾಯ ಉಳಿಸಬಹುದು. ಮತ್ತು ಉತ್ತಮ ರೀತಿಯ ಸಂಶೋಧನೆಯನ್ನು ಕೂಡ ನಡೆಸಬಹುದಾಗಿದೆ.

4. ಜ್ಞಾನದಲ್ಲಿ ಸಮಾನತೆ:

 

ಸಮಾನತೆ ಮತ್ತು ಅವಕಾಶ: ಮೊದಲು ಹೆಚ್ಚಿನ ಶ್ರೀಮಂತ ಸಂಸ್ಥೆಗಳು ಜರ್ನಲ್ ಗಳನ್ನು ಖರೀದಿ ಮಾಡುತ್ತಿದ್ದವು.

ಹಾಗೂ ಚಿಕ್ಕ ಪುಟ್ಟ ಸಂಸ್ಥೆಗಳಿಗೆ ಹೆಚ್ಚಿನ ವೆಚ್ಚವನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ದೊಡ್ಡ ಸಂಸ್ಥೆಗಳ ಸಂಶೋಧನೆಗಳು ದಕ್ಷವಾಗಿರುತ್ತಿದ್ದವು.
ಆದರೆ ಈ ಹೊಸ ಯೋಜನೆಯ ಮೂಲಕ ಯಾವುದೇ ರೀತಿಯ ಆರ್ಥಿಕ ತಾರತಮ್ಯ ಮಾಡಲಾಗುವುದಿಲ್ಲ. ಬದಲಾಗಿ ಪ್ರತಿ ಸಂಸ್ಕೃತಿಗೂ ಕೂಡ ಈ ಅಂತರಾಷ್ಟ್ರೀಯ ಜರ್ನಲ್ ಗಳು ದೊರೆಯುತ್ತವೆ.

ಪ್ರಾದೇಶಿಕತೆ ಮತ್ತು ಸಮಾನತೆ: ಜರ್ನಲ್ ಗಳನ್ನು ಕೇವಲ ದೊಡ್ಡ ನಗರಗಳ ಸಂಸ್ಥೆಗೆ ನೀಡಲಾಗುವುದಿಲ್ಲ.
ಬದಲಾಗಿ ಎರಡನೇ ಹಂತ ಮತ್ತು ಮೂರನೇ ಹಂತದ ಪ್ರದೇಶಗಳಿಗೂ ನೀಡಲಾಗುವುದು.

ಹಾಗೂ ಗ್ರಾಮೀಣ ಬಾಗದ ಕಾಲೇಜುಗಳಿಗೂ ಕೂಡ ಅವಕಾಶವನ್ನು ನೀಡಲಾಗುತ್ತದೆ.

5. ಡಿಜಿಟಲೀಕರಣ ಮತ್ತು ಸರಳತೆ:

ಇಲ್ಲಿ ಒಂದೇ ಕೇಂದ್ರೀಕೃತ ವೆಬ್ ಪೋರ್ಟಲ್ ಇರುತ್ತದೆ. ಹಾಗೂ ಪ್ರತಿಯೊಂದು ಮಾಹಿತಿಯೂ ಕೂಡ ಇಲ್ಲಿಯೇ ಕೇಂದ್ರೀಕರಣಗೊಂಡಿರುತ್ತದೆ.
ದೇಶದ ಸುಮಾರು 6,400 ಕ್ಕೂ ಹೆಚ್ಚಿನ ಸಂಸ್ಥೆಗಳು ಈ ಪೋರ್ಟಲ್ ಮೂಲಕ ಲಾಭವನ್ನು ಪಡೆಯಬೇಕು.

ಸರಳತೆ: ಈ ಪೋರ್ಟಲ್ ಮೂಲಕ ಸಂಶೋಧನೆಗಳನ್ನು ಓದಲು ಮತ್ತು ಹುಡುಕಲು ಸರಳವಾದ ವ್ಯವಸ್ಥೆಯನ್ನು ರೂಪಿಸಲಾಗಿರುತ್ತದೆ. ಇದರಿಂದಾಗಿ ಪ್ರತಿಯೊಬ್ಬರೂ ಕೂಡ ಸುಲಭವಾಗಿ ಇದರ ಲಾಭವನ್ನು ಪಡೆದುಕೊಳ್ಳಬಹುದು.

ಒನ್ ನೇಷನ್ ಒನ್ ಸಬ್‌ಸ್ಕ್ರಿಪ್ಷನ್ ಯೋಜನೆ ಅನುಷ್ಠಾನಕ್ಕಿರುವ ಸವಾಲುಗಳು:

 

1. ಮೂಲಸೌಕರ್ಯ:

 

ತಾಂತ್ರಿಕ ಸವಾಲು: ಈ ಒಂದು ಯೋಜನೆ ಡಿಜಿಟಲ್ ವ್ಯವಸ್ಥೆಯಲ್ಲಿ ಜಾರಿಯಾಗಿರುವಂತದ್ದು. ಹಾಗೂ ಈ ಒಂದು ಜರ್ನಲ್ ಗಳನ್ನು ಪ್ರವೇಶಿಸಲು ಕಂಪ್ಯೂಟರ್ ಗಳ ಅಗತ್ಯವಿರುತ್ತದೆ.
ಹಲವಾರು ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ಕಾಲೇಜುಗಳಲ್ಲಿ ಡಿಜಿಟಲ್ ವ್ಯವಸ್ಥೆಯ ಕೊರತೆ ಇದೆ. ಇಲ್ಲಿ ಪ್ರತಿಯೊಂದು ಶಿಕ್ಷಣ ಸಂಸ್ಥೆ ಮತ್ತು ಕಾಲೇಜುಗಳು ಈ ತಾಂತ್ರಿಕ ವ್ಯವಸ್ಥೆಯಲ್ಲಿ ಸಮಾನತೆಯನ್ನು ಹೊಂದಿಲ್ಲ. ಇದರಿಂದಾಗಿ ಈ ಯೋಜನೆಯ ಎಲ್ಲಾ ಸಂಸ್ಥೆಗಳನ್ನು ತಲುಪಲು ಸಾಧ್ಯವಾಗುವುದಿಲ್ಲ.

ಇಂಟರ್ನೆಟ್ ವ್ಯವಸ್ಥೆ: ಈ ಜರ್ನಲ್‌ಗಳನ್ನು ಬಳಸಲು ಇಂಟರ್ನೆಟ್ ಅವಶ್ಯಕತೆ ಬಹಳಷ್ಟು ಇದೆ. ಮೊದಲ ಹಂತದ ನಗರಗಳಲ್ಲಿ ಇಂಟರ್ನೆಟ್ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.
ಅದರ ಹೊರತಾಗಿ ಎರಡನೇ ಹಂತ ಮತ್ತು ಮೂರನೇ ಹಂತದ ನಗರಗಳಲ್ಲಿ. ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್ನೆಟ್ ವ್ಯವಸ್ಥೆಯ ಕೊರತೆ ಇದೆ.
ಹಾಗೂ ಅಂತಹ ಪ್ರದೇಶಗಳಲ್ಲಿನ ಶಿಕ್ಷಣ ಸಂಸ್ಥೆಗಳು ಈ ಒಂದು ಸೌಕರ್ಯದಿಂದ ಹೊರಗುಳಿಯಬಹುದು.

ಇದರಿಂದ ಬಳಕೆದಾರರ ಜೊತೆಗೆ ದೇಶಕ್ಕೂ ನಷ್ಟವಿದೆ. ಇಂತಹ ಪ್ರದೇಶಗಳ ಉತ್ತಮ ಪ್ರತಿಭೆಗಳು ಅವರಲ್ಲಿನ ಕೌಶಲ್ಯಗಳು ಇಲ್ಲಿ ದೇಶಕ್ಕೆ ಕೊಡುಗೆ ನೀಡಲು ಸಾಧ್ಯವಾಗುವುದಿಲ್ಲ.

2. ಹಣಕಾಸಿನ ಸವಾಲುಗಳು:

ಪ್ರಸ್ತುತ ಕೇಂದ್ರ ಸರ್ಕಾರವು ಮೂರು ವರ್ಷಗಳಿಗೆ ಬಜೆಟ್ ಅನ್ನು ತಿಳಿಸಿದೆ. 2025 ರಿಂದ 27 ರ ತನಕ ₹6,000 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಹಾಗೂ ಭವಿಷ್ಯದಲ್ಲಿ ಇದರ ಸಬ್ಸ್ಕ್ರಿಪ್ಷನ್ ದರ ಹೆಚ್ಚಲು ಬಹುದು.

ಹಾಗೂ ಸರ್ಕಾರವು ಪ್ರತಿ ವರ್ಷವೂ ಇದಕ್ಕಾಗಿ ಬಜೆಟ್ ಅನ್ನು ನೀಡಬೇಕಾಗುತ್ತದೆ. ಚಂದಾದಾರಿಕೆಯ ದರ ಹೆಚ್ಚಾಗುವುದರಿಂದಾಗಿ ಹಣವನ್ನು ಹೊಂದಿಸಲು ಸರ್ಕಾರಕ್ಕೆ ಸವಾಲಿನ ವಿಷಯವಾಗಬಹುದಾಗಿದೆ.

3. ಖಾಸಗಿ ಸಂಸ್ಥೆಗಳಿಗೆ ಪ್ರವೇಶವಿಲ್ಲ:

ಯೋಜನೆಯ ವ್ಯಾಪ್ತಿ: ಪ್ರಸ್ತುತ ಈ ಯೋಜನೆಯ ಲಾಭವನ್ನು ಖಾಸಗಿ ಸಂಸ್ಥೆಗಳಿಗೆ ನೀಡಲಾಗುತ್ತಿಲ್ಲ.
ಕೇವಲ ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಈ ಚಂದದಾರಿಕೆಯ ಲಾಭವನ್ನು ನೀಡಲಾಗುತ್ತಿದೆ.

ಇದರಿಂದಾಗಿ ಖಾಸಗಿ ಸಂಸ್ಥೆಗಳ ಉತ್ತಮ ಸಂಶೋಧನೆಗಳ ಲಾಭವನ್ನು ಸರ್ಕಾರ ಪಡೆದುಕೊಳ್ಳುವಲ್ಲಿ ವಿಫಲವಾಗಬಹುದಾಗಿದೆ.

ವಿದ್ಯಾರ್ಥಿಗಳ ಸಂಖ್ಯೆ: ಭಾರತದಲ್ಲಿ ಹೆಚ್ಚಿನ ಉನ್ನತ ಶಿಕ್ಷಣದ ವಿದ್ಯಾರ್ಥಿಗಳು ಖಾಸಗಿ ಸಂಸ್ಥೆಯಲ್ಲಿ ಓದುತ್ತಿದ್ದಾರೆ. ಹಾಗೂ ಸರ್ಕಾರಿ ಸಂಸ್ಥೆಗಳಲ್ಲಿ ಕಡಿಮೆ ವಿದ್ಯಾರ್ಥಿಗಳಿರುವಂತದ್ದು.

ಇದರಿಂದಾಗಿ ಹೆಚ್ಚಿನ ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಪಡೆದುಕೊಳ್ಳುತ್ತಿಲ್ಲ. ಹಾಗೂ ಅವರ ಕೌಶಲ್ಯದ ಲಾಭವನ್ನು ದೇಶವು ಪಡೆದುಕೊಳ್ಳಲಾಗುತ್ತಿಲ್ಲ. ಹಾಗೂ ಇದನ್ನು ಸರಿಪಡಿಸಿ ಉತ್ತಮ ರೀತಿಗೆ ತರುವಂತದ್ದು ಸವಾಲಿನ ವಿಷಯವಾಗಿದೆ.

4. ಪ್ರಕಾಶಕರ ಏಕಸ್ವಾಮ್ಯತೆ:

 

ಬೆಲೆ ಏರಿಕೆ: ಈ ಜರ್ನಲ್‌ಗಳನ್ನು ಹಲವು ಪ್ರಸಿದ್ಧ ಪ್ರಕಾಶಕರು ಪ್ರಕಾಶಿಸುತ್ತಿದ್ದಾರೆ. ಹಾಗೂ ಇವುಗಳ ಬೆಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆ ಉಂಟಾಗುತ್ತಿದೆ.
ಈ ಅಂಶವು ಸರ್ಕಾರದ ಧನಸಹಾಯಕ್ಕೆ ಅಡ್ಡಿಯಾಗಬಹುದು. ಮುಂದಿನ ದಿನಗಳಲ್ಲಿ ಪ್ರಕಾಶಕರೊಡನೆ ಕಡಿಮೆ ದರಕ್ಕೆ ಮಾತುಕತೆ ಮಾಡುವ ಅನಿವಾರ್ಯತೆ ಉಂಟಾಗಬಹುದು.

ಹಾಗೂ ಅವರುಗಳನ್ನು ಕಡಿಮೆ ದರಕ್ಕೆ ಒಪ್ಪಿಸುವುದು ಕಠಿಣ ಸವಾಲಾಗಿದೆ.

ಸೀಮಿತತೆ: ಪ್ರಸ್ತುತ ಯೋಜನೆಯಲ್ಲಿ ಸೀಮಿತ ವ್ಯಾಪ್ತಿ ಇರುವಂತದ್ದು. ಪ್ರಸ್ತುತ ಕೇವಲ 30 ಪ್ರಕಾಶಕರನ್ನು ಈ ಯೋಜನೆಯು ಒಳಗೊಂಡಿದೆ. ಹಾಗೂ ಇದರಿಂದಾಗಿ ಕಡಿಮೆ ಪ್ರಮಾಣದ ಜರ್ನಲ್ ಗಳು ದೊರೆಯುತ್ತವೆ.

ಈ ಕಾರಣದಿಂದಾಗಿ, ಪ್ರಮುಖ ಪ್ರಕಾಶಕರ ಜರ್ನಲ್ ಗಳು. ಹಾಗೂ ಉನ್ನತ ಮಟ್ಟದ ಸಂಶೋಧನಾ ಪತ್ರಿಕೆಗಳು ಈ ಯೋಜನೆಯ ವ್ಯಾಪ್ತಿಯಿಂದ ಹೊರಗುಳಿಯುತ್ತದೆ. ಇದರಿಂದಾಗಿ ಅವುಗಳ ಲಾಭ ಸಿಗದೇ ಹೋಗುವ ಸಾಧ್ಯತೆ ಇರುತ್ತದೆ.

5. ಜಾಗೃತಿಯ ಕೊರತೆ:

ಬಳಕೆಯ ಜ್ಞಾನದ ಕೊರತೆ: ಇಲ್ಲಿ ಅಂತರಾಷ್ಟ್ರೀಯ ಮಟ್ಟದ ಡೇಟಾಬೇಸ್ ಗಳ ಅಧ್ಯಯನದ ಕುರಿತಾಗಿ ತಿಳಿದಿರಬೇಕು.

ಇಲ್ಲವಾದಲ್ಲಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳುವುದು ಕಠಿಣವಾಗುತ್ತದೆ.
ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರಿಗೆ ಇದರ ಬಳಕೆ ಕಠಿಣವಾಗಬಹುದು.

ಗ್ರಾಮೀಣ ಭಾಗಗಳಲ್ಲಿ ಇದರ ಕುರಿತಾದ ತರಬೇತಿಗಳು ಇರುವುದಿಲ್ಲ. ಇದು ಈ ಯೋಜನೆಯ ಅನುಷ್ಠಾನಕ್ಕೆ ಸವಾಲಿನ ವಿಷಯವಾಗಿದೆ.

ಬಳಕೆ ಕುಂಠಿತ: ಕೆಲವೊಮ್ಮೆ ಎಲ್ಲಾ ಪ್ರದೇಶಗಳಲ್ಲೂ ಬಳಕೆಗೆ ಬೇಕಾದಂತಹ ವ್ಯವಸ್ಥೆಗಳು ಇರುತ್ತವೆ. ಜೊತೆಗೆ ಬಳಸುವಂತಹ ಕ್ರಮವು ತಿಳಿದಿರುತ್ತದೆ. ಆದರೆ ಜಾಗೃತಿಯ ಕೊರತೆ ಇರುವಂತದ್ದು.

ಇದರಿಂದಾಗಿ ಬಳಕೆ ಕಡಿಮೆಯಾಗಬಹುದು. ಹಾಗೂ ಅದರಿಂದ ದೊರೆಯುವ ಜ್ಞಾನವು ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಹಾಗೂ ಉನ್ನತ ಮಟ್ಟದ ಸಂಶೋಧನೆಗಳು ಉಂಟಾಗುವುದಿಲ್ಲ.

ಇದರಿಂದಾಗಿ ಸರ್ಕಾರವು ಹೂಡಿಕೆ ಮಾಡಿರುವ ಬಂಡವಾಳ ನಷ್ಟವಾಗುವುದು ಸವಾಲಿನ ವಿಷಯ.

6. ಮುಕ್ತ ಪ್ರವೇಶದಲ್ಲಿ ಮಿತಿ:

ಪ್ರಸ್ತುತ ಭಾರತೀಯ ಪ್ರಕಾಶಕರಿಗೆ ಬಜೆಟ್ ಮೀಸಲಿಡಲಾಗಿದೆ. ಭಾರತೀಯ ಪ್ರಕಾಶಕರು ತಮ್ಮ ಸಂಶೋಧನೆಗಳನ್ನು  ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಕಿಗೆ ತರಲು ಶುಲ್ಕ ಪಾವತಿಸಬೇಕಾಗುತ್ತದೆ.

ಈ ನಿಟ್ಟಿನಲ್ಲಿ ಪ್ರಸ್ತುತ ಆ ಶುಲ್ಕವನ್ನು ಸರ್ಕಾರವೇ ಬರಿಸುತ್ತಿದೆ. ಹಾಗೂ ಅದಕ್ಕಾಗಿ 150 ಕೋಟಿಯನ್ನು ಮೀಸಲಿಡಲಾಗಿದೆ.

ಆದರೆ ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಮಟ್ಟದ ಸಂಶೋಧನೆಗಳು ನಡೆಯುತ್ತಿವೆ. ಹಾಗೂ ಭವಿಷ್ಯದಲ್ಲಿ ಈ ನಿಧಿಯು ಭಾರತದ ಸಂಶೋಧನೆಗಳಿಗೆ ಸಾಕಾಗದೆ ಇರಬಹುದು.

ಒನ್ ನೇಷನ್ ಒನ್ ಸಬ್‌ಸ್ಕ್ರಿಪ್ಷನ್ ಯೋಜನೆಯ ಭಾರತದ ಪಾಲಿಗೆ ಮಹತ್ವದ ಹೆಜ್ಜೆಯಾಗಿದೆ. ಜಾಗತಿಕ ಮಟ್ಟದಲ್ಲಿ ಜ್ಞಾನವನ್ನು ಪಡೆದುಕೊಂಡು, ಜ್ಞಾನವನ್ನು ಪಸರಿಸುವುದು ಉತ್ತಮ ಅಂಶವಾಗಿದೆ.

ಈ ಯೋಜನೆ ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಶೋಧನೆಗಳಿಗೆ ದಾರಿ ಮಾಡಿಕೊಡಲಿದೆ. ಹಾಗೂ ಹೆಚ್ಚಿನ ಅಭಿವೃದ್ಧಿಗೆ ಸಾಕ್ಷಿ ಆಗಲಿದೆ.

 

 

 

 

 

ಇನ್ನಷ್ಟು ಮಾಹಿತಿಗಾಗಿ: ONOS

ಇದನ್ನು ಓದಿ: ಭಾರತದ ಲಾಜಿಸ್ಟಿಕ್ಸ್ ನೀತಿ

Leave a Comment

Scroll to Top

Discover more from nirantarasuddhi

Subscribe now to keep reading and get access to the full archive.

Continue reading