National Cyber Security Strategy:ಸೈಬರ್ ಭದ್ರತೆಯ ಸಂಪೂರ್ಣ ಮಾಹಿತಿ!

Spread the love

National Cyber Security Strategy:ರಾಷ್ಟ್ರೀಯ ಸೈಬರ್ ಭದ್ರತಾ ಕಾರ್ಯತಂತ್ರವು ಭಾರತ ಸರ್ಕಾರದ ಒಂದು ಪ್ರಮುಖ ಯೋಜನೆಯಾಗಿದೆ. ಇದನ್ನು ಸೈಬರ್ ದಾಳಿಗಳಿಂದ ರಕ್ಷಿಸಲು ಮಾಡಿರುವಂಥದ್ದು.

National Cyber Security Strategy
National Cyber Security Strategy

National Cyber Security Strategy: ಇದನ್ನು ದೇಶದ ಡಿಜಿಟಲ್ ವ್ಯವಸ್ಥೆ, ಬ್ಯಾಂಕಿಂಗ್ ಮತ್ತು ಪ್ರಮುಖ ಮೂಲ ಸೌಕರ್ಯಗಳನ್ನು ಸೈಬರ್ ದಾಳಿಗಳಿಂದ ರಕ್ಷಿಸಲು ಈ ಒಂದು ಯೋಜನೆಯನ್ನು ರೂಪಿಸಲಾಗಿದೆ.

ಭಾರತ ಸರ್ಕಾರವು ರಾಷ್ಟ್ರೀಯ ಸೈಬರ್ ಭದ್ರತಾ ನೀತಿ (National Cyber Security Policy)ಯನ್ನು 2 ಜುಲೈ 2013ರಂದು ಬಿಡುಗಡೆ ಮಾಡಿತು.

ತದನಂತರದಲ್ಲಿ ತಂತ್ರಜ್ಞಾನಕ್ಕೆ ತಕ್ಕಂತೆ ಹೊಸ ವಿಷಯಗಳನ್ನು ಅಳವಡಿಸಲಾಗುತ್ತದೆ. ಹಾಗೂ ರಾಷ್ಟ್ರೀಯ ಸೈಬರ್ ಭದ್ರತಾ ಕಾರ್ಯತಂತ್ರದ ಕರುಡು ಪ್ರತಿಯನ್ನು 2020ರಲ್ಲಿ ಸಿದ್ಧಪಡಿಸಲಾಯಿತು.

 

National Cyber Security Strategy: ರಾಷ್ಟ್ರೀಯ ಸೈಬರ್ ಭದ್ರತಾ ಕಾರ್ಯತಂತ್ರ ಯೋಜನೆಯ ವೈಶಿಷ್ಟತೆಗಳು:

 

1. ಸುರಕ್ಷಿತವಾದ ಡಿಜಿಟಲ್ ವ್ಯವಸ್ಥೆ:

ಸೈಬರ್ ಭದ್ರತಾ ಪರಿಶೀಲನೆ: ಈ ಯೋಜನೆಯ ಮುಖ್ಯ ಗುರಿ ಸೈಬರ್ ಸುರಕ್ಷತೆ ಯಾಗಿರುತ್ತದೆ. ಹೀಗಾಗಿ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಸೈಬರ್ ಅನ್ನು ಆಗಾಗ್ಗೆ ಪರಿಶೀಲನೆ ನಡೆಸುವುದು.

ಮಾಲ್ವೇರ್: ಕಂಪ್ಯೂಟರ್ಗಳಿಗೆ ಅಗತ್ಯವಿರುವ ಕ್ಲೀನಿಂಗ್ ಕೇಂದ್ರ ಗಳನ್ನು ಸ್ಥಾಪಿಸುವುದು. ಈ ಮೂಲಕ ವೈರಸ್ ಗಳು ಮತ್ತು ಮಾಲ್ವೇರ್ ಗಳಿಂದ ರಕ್ಷಿಸಲು ಸುಲಭವಾಗುತ್ತದೆ.

ಸ್ವದೇಶಿ ತಂತ್ರಜ್ಞಾನ: ಮತ್ತು ಇಲ್ಲಿ ವಿದೇಶಿ ಸಾಫ್ಟ್ವೇರ್ ಗಳ ಬಳಕೆಯನ್ನು ಕಡಿಮೆಯಾಗಿಸುವುದು. ಈ ಮೂಲಕ ಭಾರತದ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿಸುವುದು. ಮತ್ತು ಪ್ರೋತ್ಸಾಹಿಸುವಂಥದ್ದು.

2. ಸಂಶೋಧನೆ ಮತ್ತು ಕೌಶಲ್ಯ:

ಶಾಲಾ ಕಾಲೇಜುಗಳಲ್ಲಿ ಸೈಬರ್ ಭದ್ರತೆಗೆ ಸಂಬಂಧಪಟ್ಟಂತೆ ಪಠ್ಯಗಳನ್ನು ನೀಡುವಂತದ್ದು. ಈ ಮೂಲಕ ಬೆಳೆಯುತ್ತಲೇ ಮಕ್ಕಳಿಗೆ ಅದರ ಅರಿವು ಇರಲಿದೆ.

ಹಾಗೂ ಸೈಬರ್ ಸುರಕ್ಷತ ಕ್ಷೇತ್ರದಲ್ಲಿ ಲಕ್ಷಾಂತರ ಪರಿಣಿತರನ್ನು ಸಿದ್ಧಪಡಿಸುವಂತದ್ದು. ಅವರುಗಳಿಗೆ ತರಬೇತಿಗಳನ್ನು ನೀಡುವುದು. ಹಾಗೂ ಹೆಚ್ಚಿನ ಹೊಸ ಸೈಬರ್ ಆವಿಷ್ಕಾರಗಳ ಅಗತ್ಯವಿದೆ. ಇದಕ್ಕಾಗಿ ಹೆಚ್ಚಿನ ಪ್ರೋತ್ಸಾಹ ಧನವನ್ನು ನೀಡುವುದು.

3. ಸಹಯೋಗ:

ಸಾರ್ವಜನಿಕ ಮತ್ತು ಖಾಸಗಿ: ಇಲ್ಲಿ ಸೈಬರ್ ಅಕ್ರಮಗಳನ್ನು ತಡೆಯುವುದು ಮೂಲ ವಿಷಯವಾಗಿದೆ. ಇದಕ್ಕಾಗಿ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಪರಸ್ಪರ ಇದಕ್ಕೆ ಸಂಬಂಧಪಟ್ಟ ಡೇಟಾಗಳನ್ನು ಹಂಚಿಕೊಳ್ಳುವುದು.

ಪರಸ್ಪರ ತಮಗೆ ಬಂದಿರುವಂತಹ ಬೆದರಿಕೆ ಗಳನ್ನು ಹಂಚಿಕೊಂಡಾಗ ಪರಿಹಾರವನ್ನು ಒದಗಿಸಲು ಸುಲಭವಾಗುತ್ತದೆ.

ಜಾಗತಿಕ ಸಹಯೋಗ: ಇನ್ನೂ ಅಂತರಾಷ್ಟ್ರೀಯ ಮಟ್ಟದಲ್ಲೂ ಸೈಬರ್ ಅಪರಾಧಗಳು ಜರುಗುತ್ತದೆ. ಈ ವಿಷಯವಾಗಿ ವಿದೇಶಿ ತನಿಖಾ ದಳಗಳೊಂದಿಗೆ ಕೈಜೋಡಿಸುವುದು ಅಗತ್ಯವಾಗಿದೆ.

4. ಬಿಕ್ಕಟ್ಟು:

CERT-In: ಸೈಬರ್ ದಾಳಿಗಳು ನಡೆದ ಕೂಡಲೇ ಕಾರ್ಯಾಚರಣೆ ನಡೆಸುವುದು ಅಗತ್ಯವಾಗಿದೆ .

ಈ ನಿಟ್ಟಿನಲ್ಲಿ ಈ ವಿಚಾರಣೆಗಾಗಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ CERT-In ಸಾಮರ್ಥ್ಯವನ್ನು ಇನ್ನಷ್ಟು ಬಲಗೊಳಿಸುವಂತದ್ದು. ಮತ್ತು ಇವರು ಪ್ರತಿಕ್ಷಣ ಅಲರ್ಟ್ ಆಗಿರುವಂತೆ ತಿಳಿಸುವುದು.

ಪಾವತಿ ಸುರಕ್ಷತೆ: ಯುಪಿಐ ಮತ್ತು ಮೊಬೈಲ್ ಬ್ಯಾಂಕಿಂಗ್ ಮೂಲಕವೂ ಕೂಡ ವಂಚನೆಗಳು ನಡೆಯುತ್ತವೆ. ಇವುಗಳನ್ನು ತಡೆಯಲು ವಿಶೇಷ ನಿಗಾ ಘಟಕಗಳನ್ನು ಸ್ಥಾಪಿಸುವಂತದ್ದು.

5. ಮೂಲಸೌಕರ್ಯದ ರಕ್ಷಣೆ:

ಹೆಚ್ಚಿನ ಮಟ್ಟದ ರಕ್ಷಣೆ: ಇಲ್ಲಿ ದೂರಸಂಪರ್ಕ ವ್ಯವಸ್ಥೆ, ವಿದ್ಯುತ್ ಗ್ರಿಡ್ ಹಾಗೂ ಅಣುಸ್ಥಾವರಗಳಿಗೆ ಹೆಚ್ಚಿನ ರಕ್ಷಣೆಯ ಅವಶ್ಯಕತೆ ಇದೆ. ಮತ್ತು ಅವುಗಳಿಗೆ ಹೆಚ್ಚಿನ ರಕ್ಷಣೆ ಎನ್ನು ಒದಗಿಸುವುದು.

NCIIPC: ಮತ್ತು ಪ್ರಮುಖ ಮೂಲ ಸೌಕರ್ಯಗಳ ರಕ್ಷಣೆಗಾಗಿ NCIIPC ಸಂತೆಯನ್ನು ಬಲಪಡಿಸುವಂತದ್ದು. NCIIPC: National Critical Information Infrastructure Protection Centre.

 

National Cyber Security Strategy: ರಾಷ್ಟ್ರೀಯ ಸೈಬರ್ ಭದ್ರತಾ ಕಾರ್ಯತಂತ್ರ ಯೋಜನೆಯ ಉದ್ದೇಶಗಳು:

 

1. ಸುರಕ್ಷಿತ ಸಮಾಜ:

ವಿಶ್ವಾಸಾರ್ಹತೆ: ಪ್ರಸ್ತುತ ಸಾಮಾಜಿಕ ಜಾಲತಾಣಗಳು ಹಾಗೂ ಇನ್ನಿತರ ಡಿಜಿಟಲ್ ವ್ಯವಸ್ಥೆಗಳನ್ನು ಬಳಸಲು ಸುರಕ್ಷತೆಯ ಕೊರತೆ ಇದೆ. ಹಾಗೂ ಅವುಗಳಿಂದಾಗಿ ಜನರು ಇದರ ಬಳಕೆಗಳಿಗೆ ಹಿಂಜರಿಯುತ್ತಿದ್ದಾರೆ.

ಹೀಗಾಗಿ ವಿಶ್ವಾಸಾರ್ಹ ವ್ಯವಸ್ಥೆಯನ್ನು ಸೃಷ್ಟಿಸಬೇಕಾಗಿದೆ. ಈ ಯೋಜನೆಯ ಅನುಷ್ಠಾನದ ಮೂಲಕ ಜನರಲ್ಲಿ ವಿಶ್ವಾಸವನ್ನು ಹೆಚ್ಚಿಸುವಂಥದ್ದು ಮೂಲ ಉದ್ದೇಶವಾಗಿದೆ.

ವಂಚನೆಗಳು: ಸಾಮಾನ್ಯ ಜನರಿಗೆ ಸಾಮಾನ್ಯವಾಗಿ ಹಣದ ವಿಷಯದಲ್ಲಿ ಅಕ್ರಮಗಳು ನಡೆಯುತ್ತವೆ.

ಹೀಗಾಗಿ ಯುಪಿಐ ವ್ಯವಸ್ಥೆ ಮತ್ತು ಮೊಬೈಲ್ ಬ್ಯಾಂಕಿಂಗ್ ಕ್ಷೇತ್ರವನ್ನು ಸುರಕ್ಷಿತಗೊಳಿಸುವಂಥದ್ದು. ಇದರಿಂದಾಗಿ ಜನರು ಯಾವುದೇ ಭಯವಿಲ್ಲದೆ ಈ ಡಿಜಿಟಲ್ ವ್ಯವಸ್ಥೆಗಳನ್ನು ಬಳಸಬಹುದಾಗಿದೆ.

2. ಮೂಲಸೌಕರ್ಯಗಳ ರಕ್ಷಣೆ:

ಡೇಟಾ ಸುರಕ್ಷತೆ: ಸಾಮಾನ್ಯವಾಗಿ ನಾವು ನಮ್ಮ ಮಾಹಿತಿಗಳನ್ನು ಡಿಜಿಟಲ್ ವ್ಯವಸ್ಥೆಯಲ್ಲಿ ಅಪ್ಲೋಡ್ ಮಾಡಿರುತ್ತೇವೆ.

ಹಾಗೆ ಸರ್ಕಾರವು ಕೂಡ ಅನೇಕ ವಿಷಯಗಳನ್ನು ಅಪ್ಲೋಡ್ ಮಾಡಿರುತ್ತದೆ. ಹೀಗಿರುವಾಗ ಈ ಡೇಟಾಗಳ ಸುರಕ್ಷತೆ ಅಗತ್ಯವಾದದ್ದಾಗಿದೆ.

ಹೀಗಾಗಿ ಡೇಟಾ ಸುರಕ್ಷತೆಯನ್ನು ಬಲಪಡಿಸುವುದು ಈ ಕಾರ್ಯತಂತ್ರದ ಪ್ರಮುಖ ಉದ್ದೇಶವಾಗಿದೆ.

ಭದ್ರತೆ: ವಿದ್ಯುತ್ ಸರಬರಾಜು, ಬ್ಯಾಂಕಿಂಗ್ ಕ್ಷೇತ್ರ, ಮತ್ತು ರಕ್ಷಣಾ ವಲಯಗಳ ಸುರಕ್ಷತೆಯು ಮುಖ್ಯವಾಗಿದೆ. ಬಹಳ ಸೂಕ್ಷ್ಮ ಮಾಹಿತಿಗಳನ್ನು ಒಳಗೊಂಡಿರುತ್ತವೆ.

ಹಾಗೂ ಇವುಗಳ ಕಂಪ್ಯೂಟರ್ ಗಳನ್ನು ರಕ್ಷಿಸುವುದು ಮೂಲ ಉದ್ದೇಶ. ಇದರಿಂದಾಗಿ ದೇಶಕ್ಕೆ ಸಂಬಂಧಪಟ್ಟಂತಹ ಮುಖ್ಯ ಮಾಹಿತಿಗಳನ್ನು ರಕ್ಷಿಸಬಹುದಾಗಿದೆ.

3. ಅಭಿವೃದ್ಧಿ ಮತ್ತು ಸ್ವಾವಲಂಬನೆ:

ಸ್ವದೇಶಿ ಉತ್ಪನ್ನಗಳ ತಯಾರಿಕೆ: ಕೆಲವೊಮ್ಮೆ ವಿದೇಶಿ ಸಾಫ್ಟ್ವೇರ್ ಗಳ ಬಳಕೆ ಕೂಡ ಅಸುರಕ್ಷತೆಗೆ ಕಾರಣವಾಗಬಹುದು. ಇದರಿಂದಾಗಿ ಸ್ವದೇಶಿ ಉತ್ಪನ್ನಗಳ ಬಳಕೆ ಅಗತ್ಯವಾಗಿದೆ.

ಆ ಪ್ರಸ್ತುತ ಸ್ವದೇಶಿ ಉತ್ಪನ್ನಗಳ ಪ್ರಮಾಣ ಕಡಿಮೆ ಇರುವಂತದ್ದು. ಅದು ಈ ಯೋಜನೆ ಮೂಲಕ ಸ್ವದೇಶಿ ಸಾಧನ ಗಳ ಬಳಕೆಗೆ ಉತ್ತೇಜಿಸುವುದು. ಮತ್ತು ಅವುಗಳ ತಯಾರಿಕೆಯನ್ನು ಹೆಚ್ಚಿಸುವುದು.

ಹೊಸತನ: ಬದಲಾಗುತ್ತಿರುವ ಜಗತ್ತಿಗೆ ಆಧುನಿಕರಣಕ್ಕೆ ಪದೇಪದೇ ಅಪ್ಡೇಟ್ ಆಗುವ ಅನಿವಾರ್ಯತೆ ಇದೆ. ಹೀಗಾಗಿ ಹೊಸ ಆವಿಷ್ಕಾರಗಳನ್ನು ತಯಾರಿಸಲು ಉತ್ತೇಜಿಸಲಾಗುತ್ತಿದೆ.

ಸೈಬರ್ ಸುರಕ್ಷತೆಗೆ ಸಂಬಂಧಪಟ್ಟಂತೆ ಹೊಸ ತಂತ್ರಜ್ಞಾನಗಳ ಅವಶ್ಯಕತೆ ಇರುವುದು. ಈ ಕಾರಣದಿಂದಾಗಿ ಹೊಸ ಸಂಶೋಧನೆಗಳಿಗೆ ಉತ್ತೇಜನ. ಮತ್ತು ಪ್ರೋತ್ಸಾಹವನ್ನು ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.

4. ಕೌಶಲ್ಯದ ಅಭಿವೃದ್ಧಿ:

ನಿರಂತರ ಗಮನ ಹರಿಸುವಿಕೆ: ಸೈಬರ್ ದಾಳಿಗಳನ್ನು ತಪ್ಪಿಸಲು 24 ಗಂಟೆಯೂ ಸುರಕ್ಷತಾ ಕ್ರಮಗಳನ್ನು ವಹಿಸುತ್ತಿರಬೇಕು. ಈ ದಾಳಿಗಳು ಯಾವ ಸಮಯದಲ್ಲಾದರೂ ಆಗುವ ಸಾಧ್ಯತೆಗಳಿರುತ್ತವೆ.

ಈ ಸುರಕ್ಷತೆಯ ಕಾರ್ಯವನ್ನು ರಾಷ್ಟ್ರೀಯ ನಿಯಂತ್ರಣ ಕೇಂದ್ರಗಳು ನಿರ್ವಹಿಸುತ್ತವೆ. ಹಾಗೂ ಇಲ್ಲಿ ಈ ಕೇಂದ್ರಗಳನ್ನು ಬಲಪಡಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಮೂಲಕ ಸೈಬರ್ ದಾಳಿಗಳನ್ನು ತಡೆಯುವುದು ಸುಲಭವಾಗಲಿದೆ.

ತಜ್ಞರ ಬಳಕೆ: ಇಲ್ಲಿ ಸೈಬರ್ ಅಪರಾಧಗಳನ್ನು ತಡೆಯುವುದು. ಮತ್ತು ಅವುಗಳ ಕುರಿತಾಗಿ ತನಿಖೆ ನಡೆಸುವುದು ಮುಖ್ಯ ಅಂಶಗಳಾಗಿವೆ.

ಹಾಗೂ ಇದಕ್ಕೆ ನುರಿತ ತಜ್ಞರ ಅವಶ್ಯಕತೆ ಇರುವಂತದ್ದು. ಮತ್ತು ಆ ತಜ್ಞರ ಕೊರತೆ ಪ್ರಸ್ತುತ ಇದೆ.

ಈ ನಿಟ್ಟಿನಲ್ಲಿ ತಜ್ಞರ ಸೃಷ್ಟಿ ಮಾಡುವುದು. ಮತ್ತು ಅವರಿಗೆ ಅವಶ್ಯಕತೆ ಇರುವಂತಹ ತರಬೇತಿಗಳನ್ನು ಕೊಡುವುದು ಈ ಯೋಜನೆಯ ಉದ್ದೇಶ.

5. ಸಹಯೋಗ:

ಮಾಹಿತಿ ಹಂಚಿಕೊಳ್ಳುವಿಕೆ: ಮೊದಲೇ ತಿಳಿಸಿದಂತೆ ಮಾಹಿತಿಗಳನ್ನು ಹಂಚಿಕೊಳ್ಳುವುದು ಅಗತ್ಯಕರ ಅಂಶವಾಗಿದೆ. ಇಲ್ಲಿ ಕೇವಲ ಸರ್ಕಾರಿ ಸಂಸ್ಥೆಗಳಲ್ಲದೆ ಖಾಸಗಿ ಸಂಸ್ಥೆಗಳು ಕೂಡ ಬರುತ್ತವೆ.

ಹಾಗೂ ಖಾಸಗಿ ಸಂಸ್ಥೆಗಳಲ್ಲೂ ಕೆಲವೊಮ್ಮೆ ಸೈಬರ್ ಅಕ್ರಮಗಳು ನಡೆಯುತ್ತವೆ.

ಈಗಾಗಿ ಪರಸ್ಪರ ಎರಡು ಸಂಸ್ಥೆಗಳು ತಕ್ಷಣವೇ ತಮಗಾದ ಅಕ್ರಮಗಳ ಕುರಿತಾಗಿ ಮಾಹಿತಿಯನ್ನು ಹಂಚಿಕೊಳ್ಳಬೇಕಾಗುತ್ತದೆ. ಇದರಿಂದ ಆ ಕುರಿತಾಗಿ ಕ್ರಮವನ್ನು ಕೈಗೊಳ್ಳಲು ಸಹಾಯವಾಗಲಿದೆ.

ಅಂತರಾಷ್ಟ್ರೀಯ ಮಟ್ಟದ ಒಕ್ಕೂಟ: ಜಾಗತಪ್ಪ ಮಟ್ಟದಲ್ಲಿ ಉಂಟಾಗುವ ಸೈಬರ್ ಅಪರಾಧಗಳನ್ನು ತಡೆಯುವುದು ಕಠಿಣವಾಗಿದೆ. ಇವುಗಳನ್ನು ಕೇವಲ ದೇಶಿಯ ಉತ್ಪನ್ನಗಳ ಮೂಲಕ ಮಾಡಲು ಸಾಧ್ಯವಾಗುವುದಿಲ್ಲ.

ಹಾಗೂ ಇಲ್ಲಿ ವಿದೇಶಗಳ ಸಹಕಾರದ ಅಗತ್ಯವಿರುತ್ತದೆ. ಹಾಗಾಗಿ ವಿದೇಶಿ ತನಿಖಾ ಸಂಸ್ಥೆಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳುವ ಅಗತ್ಯವಿದೆ.

ಈ ಒಪ್ಪಂದವನ್ನು ಮಾಡಿಕೊಳ್ಳುವಲ್ಲಿ ಹೊಸ ಯೋಜನೆಯ ತನ್ನ ಕಾರ್ಯವನ್ನು ನಿರ್ವಹಿಸಲಿದೆ.

 

ರಾಷ್ಟ್ರೀಯ ಸೈಬರ್ ಭದ್ರತಾ ಕಾರ್ಯತಂತ್ರ ಯೋಜನೆಯ ಅನುಷ್ಠಾನಕ್ಕಿರುವ ಸವಾಲುಗಳು:

 

1. ಮೂಲಸೌಕರ್ಯದ ಸವಾಲುಗಳು:

 

ವಿದೇಶಗಳ ಮೇಲಿನ ಅವಲಂಬನೆ: ಪ್ರಸ್ತುತ ಭಾರತ ದೇಶವು ಹಲವು ದೇಶಗಳಿಂದ ಇದಕ್ಕೆ ಸಂಬಂಧಪಟ್ಟ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದೆ.

ಐಸಿಟಿ ಹಾರ್ಡ್ವೇರ್ ಮತ್ತು ಸೆಮಿಕಂಡಕ್ಟರ್ ಉಪಕರಣಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.

ಇಲ್ಲಿ ದೇಶಿಯ ಮಾಹಿತಿಗಳು ಸೋರಿಕೆಯಾಗುವ ಸಾಧ್ಯತೆಗಳಿರುತ್ತದೆ. ಹಾಗೂ ಆ ಉಪಕರಣಗಳಲ್ಲಿ ಗೂಢಚಾರಿಕೆಗೆ ಸಂಬಂಧಪಟ್ಟಂತಹ ಸಾಫ್ಟ್ವೇರ್ ಗಳು ಇರುವ ಸಾಧ್ಯತೆ ಇದೆ.

ಆಧುನೀಕರಣದ ಕೊರತೆ: ಪ್ರಸ್ತುತ ದೇಶದಲ್ಲಿ ಆಧುನಿಕರಣದ ಕೊರತೆ ಇರುವಂತದ್ದು.

ವಿದ್ಯುತ್ ಇಲಾಖೆ ಸೇರಿದಂತೆ ದೇಶದ ಹಲವು ಇಲಾಖೆಗಳು ಹಳೆಯ ಸಾಫ್ಟ್ವೇರ್ ಅನ್ನು ಬಳಸುತ್ತಿವೆ. ಹಾಗೂ ಅವುಗಳನ್ನು ಸುಲಭವಾಗಿ ಹ್ಯಾಕ್ ಮಾಡುವ ಸಾಧ್ಯತೆ ಇರುತ್ತದೆ.

ಸ್ವದೇಶಿ ಉತ್ಪಾದನೆಯ ಕೊರತೆ: ಜಾಗತಿಕ ಮಟ್ಟದ ಫೈರ್‌ವಾಲ್ ಮತ್ತು ಆಂಟಿವೈರಸ್ ತಂತ್ರಜ್ಞಾನಗಳನ್ನು ನಾವು ಬಳಸುತ್ತಿದ್ದೇವೆ.

ಇದಕ್ಕೆ ಪರ್ಯಾಯವಾಗಿ ದೇಶಿಯ ಉತ್ಪನ್ನಗಳು ದೊರೆಯುತ್ತಿಲ್ಲ. ಇವುಗಳು ಉತ್ಪಾದನೆಯ ಕೊರತೆಯು ದೊಡ್ಡ ಸವಾಲಿನ ವಿಷಯವಾಗಿದೆ.

2. ಕಾನೂನು ಸಮಸ್ಯೆಗಳು:

 

ಸಹಕಾರದ ಸಮಸ್ಯೆ: ಸೈಬರ್ ಅಪರಾಧಗಳು ನಡೆದ ಸಮಯದಲ್ಲಿ ಸಹಕಾರದ ಅಗತ್ಯವಿರುತ್ತದೆ. ಹಲವು ಇಲಾಖೆಗಳು ತಮ್ಮ ತಮ್ಮ ಮಾಹಿತಿಗಳನ್ನು ತಮ್ಮೊಳಗೆ ಹಂಚಿಕೊಳ್ಳಬೇಕು.

ಇದರಿಂದ ಅತಿ ಬೇಗನೆ ಸಮಸ್ಯೆಯನ್ನು ಪರಿಹರಿಸಬಹುದು. ಆದರೆ ಪ್ರಸ್ತುತ ಇವರುಗಳ ನಡುವೆ ಇರುವಂತಹ ಸಮನ್ವಯದ ಕೊರತೆಯೂ ಸವಾಲಿನ ವಿಷಯ.

ಕಾನೂನಿನ ವಿಳಂಬ: ಈ ಒಂದು ಅಪರಾಧಗಳಿಗೆ ಸಂಬಂಧಪಟ್ಟಂತೆ ಮಾಹಿತಿ ತಂತ್ರಜ್ಞಾನ ಕಾಯ್ದೆ ಇರುವಂತದ್ದು. ಈ ಮೂಲಕ ಅಪರಾಧಿಗಳಿಗೆ ಸುಲಭವಾಗಿ ಶಿಕ್ಷೆ ನೀಡಬಹುದು.

ಆದರೂ ಕೂಡ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವುದು. ಮತ್ತು ಗಡಿಯಾಚೆಗಿನ ಅಪರಾಧಿಗಳನ್ನು ಬಂಧಿಸುವುದು ಈ ಪ್ರಕ್ರಿಯೆಗಳು ಕಠಿಣವಾಗಿದೆ.

 

3. ಮಾನವ ಸಂಪನ್ಮೂಲ ಮತ್ತು ಜಾಗೃತಿ:

 

ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಿಕೆ: ಪ್ರಸ್ತುತ ಯುಪಿಐ ಮತ್ತು ಡಿಜಿಟಲ್ ಬ್ಯಾಂಕಿಂಗ್ ದೇಶದ ಎಲ್ಲೆಡೆ ಹರಡಿದೆ. ಈ ರೀತಿಯ ಡಿಜಿಟಲ್ ವ್ಯವಸ್ಥೆಯನ್ನು ಅರೆ ನಗರವಾಸಿಗಳು ಮತ್ತು ಗ್ರಾಮೀಣ ವಾಸಿಗಳು ಕೂಡ ಬಳಸುತ್ತಿದ್ದಾರೆ.

ಹಾಗೂ ಜನರನ್ನು ಸಾಮಾನ್ಯವಾಗಿ ಮೋಸಕ್ಕೆ ತುತ್ತಾಗುವಂತೆ ಮಾಡುವುದು ಇದೇ ಡಿಜಿಟಲ್ ವೇದಿಕೆಗಳಲ್ಲಿ. ಕೆಲವೊಮ್ಮೆ ಹಣದಾಸೆಗಾಗಿ ಅಥವಾ ಜ್ಞಾನದ ಕೊರತೆಯಿಂದ ಜನರು ಇಲ್ಲಿ ಮೋಸಕ್ಕೆ ಬಲಿಯಾಗುತ್ತಾರೆ.

ಓಟಿಪಿ ವಂಚನೆ ಮತ್ತು ಫಿಶಿಂಗ್ ಲಿಂಕ್ ಗಳ ಮೂಲಕ ಇಲ್ಲಿ ಸೈಬರ್ ಅಪರಾಧಗಳು ನಡೆಯುತ್ತವೆ. ಇದರ ಮಾಹಿತಿಯ ಕೊರತೆಯು ಸವಾಲಿನ ವಿಷಯವಾಗಿದೆ.

ಕೌಶಲ್ಯದ ಅಭಾವ: ಭಾರತದಲ್ಲಿ ಹೆಚ್ಚಿನ ಮಟ್ಟದಲ್ಲಿ ಅಪರಾಧಗಳು ನಡೆಯುತ್ತವೆ. ಆದರೆ ಅವುಗಳ ಸಂಖ್ಯೆಗೆ ತಕ್ಕದಾದ ತಜ್ಞರ ಸಂಖ್ಯೆ ಇಲ್ಲ.

ಅಷ್ಟರ ಮಟ್ಟಿಗಿನ ಸೈಬರ್ ಅಪರಾಧಗಳನ್ನು ತಡೆಯುವುದು ಕಠಿಣವಾಗಿದೆ. ಹಾಗೂ ಅದಕ್ಕೆ ಸರಿಯಾದ ವ್ಯವಸ್ತೆಗಳು ಮತ್ತು ತಜ್ಞರ ಕೊರತೆಯು ಸವಾಲಿನ ವಿಷಯವಾಗಿದೆ.

4. ಹೊಸ ತಂತ್ರಜ್ಞಾನಗಳು:

 

ಪ್ರಸ್ತುತ ಕೃತಕ ಬುದ್ಧಿಮತ್ತೆಯ ಬಳಕೆ ಹೆಚ್ಚಾಗುತ್ತಿದೆ. ಇದನ್ನು ಎಷ್ಟರಮಟ್ಟಿಗೆ ಒಳಿತಾಗಿ ಬಳಸಲಾಗುತ್ತಿದೆಯೋ ಅಷ್ಟೇ ಕೆಡುಕಾಗಿಯೂ ಬಳಸಲಾಗುತ್ತಿದೆ. ಎಐ ದುರ್ಬಳಕೆಯು ಸವಾಲಿನ ವಿಷಯ ಎನ್ನಬಹುದಾಗಿದೆ.

ಈ ಕೃತಕ ಬುದ್ಧಿಮತ್ತೆಯ ಮೂಲಕ ನಿಖರವಾಗಿ ಡೀಪ್‌ಫೇಕ್ ಮತ್ತು ವಾಯ್ಸ್ ಕ್ಲೋನಿಂಗ್ ಅಪರಾಧಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿವೆ. ಇದರಿಂದ ಮೋಸ ನಡೆಯುತ್ತಿದೆ ಎನ್ನುವುದೇ ಗೊತ್ತಾಗದ ಮಟ್ಟಿಗೆ ಅಪರಾಧಗಳು ನಡೆಯುತ್ತಿರುವಂಥದ್ದು.

ಹೀಗಾಗಿ ಆಧುನಿಕರಣದ ಜೊತೆಗೆ ಅಕ್ರಮಗಳನ್ನು ತಡೆಯುವುದು ಸವಾಲಿನ ವಿಷಯವಾಗಿದೆ.

 

ಭಾರತವು ತನ್ನ ಡಿಜಿಟಲ್ ಇಂಡಿಯಾ ಕನಸನ್ನು ನನಸು ಮಾಡಲು ದಾಪುಗಾಲು ಇಡುತ್ತಿದೆ. ಈ ನಿಟ್ಟಿನಲ್ಲಿ ಕಾಗದ ರಹಿತ ವ್ಯವಸ್ಥೆ ಮತ್ತು ಡಿಜಿಟಲ್ ವ್ಯವಸ್ಥೆಗಳನ್ನು ಜಾರಿಗೊಳಿಸಲಾಗುತ್ತಿದೆ.

ಹಾಗೂ ಈ ಕನಸು ನನಸಾಗಲು ಸೈಬರ್ ಭದ್ರತೆಯು ಅವಶ್ಯಕವಾದದ್ದು. ಸೈಬರ್ ಭದ್ರತೆಗಾಗಿ ಜಾರಿಯಲ್ಲಿರುವ ಈ ಹೊಸ ಯೋಜನೆಯು ಮಹತ್ವದ ಹೆಜ್ಜೆಯಾಗಿದೆ. ಮುಂದಿನ ದಿನಗಳಲ್ಲಿ ಭಾರತವನ್ನು ಸಂಪೂರ್ಣವಾಗಿ ಡಿಜಿಟಲೀಕರಣ ಗೊಳಿಸಲು ಈ ಯೋಜನೆ ಸಹಕಾರ ನೀಡುತ್ತದೆ.

ಮತ್ತು ಮುಂದಿನ ದಿನಗಳಲ್ಲಿ ಜನರು ಸಂಪೂರ್ಣ ವಿಶ್ವಾಸದಿಂದ ಡಿಜಿಟಲ್ ವ್ಯವಸ್ಥೆಗಳನ್ನು ಬಳಸಲು ರಾಷ್ಟ್ರೀಯ ಸೈಬರ್ ಭದ್ರತಾ ಕಾರ್ಯತಂತ್ರವು ದಾರಿ ಮಾಡಿಕೊಡಲಿದೆ.

 

ಇನ್ನಷ್ಟು ಮಾಹಿತಿಗಾಗಿ: National Cyber Crime 

ಇದನ್ನು ಓದಿ:One Nation One subscription 

Leave a Comment

Scroll to Top

Discover more from nirantarasuddhi

Subscribe now to keep reading and get access to the full archive.

Continue reading