Data Governance Policy:ರಾಷ್ಟ್ರೀಯ ಡೇಟಾ ಗವರ್ನೆನ್ಸ್ ಫ್ರೇಮ್ವರ್ಕ್ ನೀತಿ ಎಂಬುದು ಭಾರತ ಸರ್ಕಾರದ ಪ್ರಮುಖ ನೀತಿಯಾಗಿದೆ. ಇದನ್ನು ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ರೂಪಿಸಿದೆ.

Data Governance Policy: 2022 ಮೇ 26ರಂದು ಈ ನೀತಿಯನ್ನು ಅಧಿಕೃತವಾಗಿ ಸಾರ್ವಜನಿಕ ಸಲಹೆಗಳಿಗಾಗಿ ಬಿಡುಗಡೆಗೊಳಿಸಲಾಯಿತು.
Data Governance Policy: ಏನಿದು ರಾಷ್ಟ್ರೀಯ ಡೇಟಾ ಗವರ್ನೆನ್ಸ್ ಫ್ರೇಮ್ವರ್ಕ್ ನೀತಿ ?
ಭಾರತ ಸರ್ಕಾರದ ಇಲಾಖೆಗಳು ತಮಗೆ ಅಗತ್ಯವಿರುವಂತಹ ಡೇಟಾಗಳನ್ನು ಸಂಗ್ರಹಿಸುತ್ತವೆ. ಮತ್ತು ಸಂಗ್ರಹಿಸಿದ ಡೇಟಾಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವುದು.
ಮತ್ತು ಸುರಕ್ಷಿತವಾಗಿ ಹಂಚಿಕೊಳ್ಳಲು ರೂಪಿಸಿರುವ ಏಕರೂಪದ ಮಾರ್ಗಸೂಚಿಯೇ ಈ ನೀತಿ.
Data Governance Policy: ರಾಷ್ಟ್ರೀಯ ಡೇಟಾ ಗವರ್ನೆನ್ಸ್ ಫ್ರೇಮ್ವರ್ಕ್ ನೀತಿಯ ಪ್ರಮುಖ ವೈಶಿಷ್ಟ್ಯತೆಗಳು:
1.ಇಂಡಿಯಾ ಡೇಟಾಸೆಟ್ಸ್ ಪ್ರೋಗ್ರಾಂ:
•ಡೇಟಾ ಬ್ಯಾಂಕ್: ಇಲ್ಲಿ ಯಾವುದೇ ವೈಯಕ್ತಿಕ ಡೇಟಾವನ್ನು ಹೊಂದಿರುವುದಿಲ್ಲ.
ಹಾಗೂ ಸರ್ಕಾರಿ ವಲಯಗಳಿಂದ ಸಂಗ್ರಹಿಸಿದ ಡೇಟಾಗಳನ್ನು ಸಂಗ್ರಹಿಸಿರಲಾಗುತ್ತದೆ. ಇದೊಂದು ಡೇಟಾ ಸಂಗ್ರಹಣೆಯ ದೊಡ್ಡ ಬ್ಯಾಂಕ್ ಆಗಿರಲಿದೆ.
•ಮುಕ್ತವಾಗಿ ದೊರೆಯುವಿಕೆ: ಈ ಡೇಟಾವನ್ನು ಭಾರತದ ಅಭಿವೃದ್ಧಿಗಾಗಿ ಬಳಸಿಕೊಳ್ಳಲಾಗುತ್ತದೆ.
ಸ್ಟಾರ್ಟಪ್ ಗಳು, ಸಂಶೋಧನೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಈ ಡೇಟಾ ಮುಕ್ತವಾಗಿ ದೊರೆಯುತ್ತದೆ. ಇದರಿಂದ ಅವರ ಹೊಸ ಸಂಶೋಧನೆಗಳಿಗೆ ನೆರವಾಗಲಿದೆ.
•ತಂತ್ರಜ್ಞಾನಕ್ಕೆ ವೇಗ: ಈ ಡೇಟಾಗಳು ಹೆಚ್ಚಿನ ಮಾಹಿತಿಯನ್ನು ಹೊಂದಿರುತ್ತದೆ. ಮತ್ತು ಇವು ಹೊಸ ತಂತ್ರಜ್ಞಾನಗಳ ರಚನೆ.
ಹಾಗೂ ಕೃತಕ ಬುದ್ಧಿಮತ್ತೆಯ ಆವಿಷ್ಕಾರಗಳಿಗೆ ಸಹಕಾರಿಯಾಗಲಿದೆ. ಹಾಗೂ ಈ ತಂತ್ರಜ್ಞಾನಗಳ ವೇಗವನ್ನು ಹೆಚ್ಚಿಸಿ ದಕ್ಷತೆಯನ್ನು ಕಾಪಾಡಬಹುದಾಗಿದೆ.
2. ಇಂಡಿಯಾ ಡೇಟಾ ಮ್ಯಾನೇಜ್ಮೆಂಟ್ ಆಫೀಸ್ (IDMO) ಸ್ಥಾಪನೆ:
ಇಲ್ಲಿ IDMO ಎಂಬ ವಿಶೇಷ ಸಂಸ್ಥೆಯನ್ನು ಸ್ಥಾಪಿಸಲಾಗುತ್ತದೆ. ಮತ್ತು ಆ ಸಂಸ್ಥೆಯು ದೇಶದ ಡೇಟಾ ಆಡಳಿತ.
ಮತ್ತು ಭದ್ರತೆಗೆ ಸಂಬಂಧಪಟ್ಟ ನಿಯಮಗಳನ್ನು ರೂಪಿಸುವಂತದ್ದು. ಇಲ್ಲಿ ಪ್ರತಿಯೊಂದು ಸರ್ಕಾರಿ ಇಲಾಖೆಗಳು ತಮ್ಮ ಡೇಟಾವನ್ನು ಹಂಚಿಕೊಳ್ಳಬೇಕು. ಈ ಒಂದು IDMO ಈ ಡೇಟಾ ಹಂಚಿಕೊಳ್ಳುವಿಕೆಯ ಮೇಲ್ವಿಚಾರಣೆಯನ್ನು ನಡೆಸುತ್ತದೆ.
3. ಏಕರೂಪದ ಡೇಟಾ ವ್ಯವಸ್ಥೆ:
ಈ ಒಂದು ಡೇಟಾಗಳು ಅಭಿವೃದ್ಧಿಯಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತವೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡಕ್ಕೂ ಕೂಡ ಒಂದೇ ನಿಯಮಗಳನ್ನು ರಚಿಸಲಾಗುತ್ತದೆ.
ಆ ನಿಯಮದಡಿ ಎರಡು ಸರ್ಕಾರಗಳು ಕಾರ್ಯನಿರ್ವಹಿಸುತ್ತವೆ. ಇದರಿಂದಾಗಿ ವಿವಿಧ ಇಲಾಖೆಗಳ ನಡುವೆ ಡೇಟಾವನ್ನು ಹಂಚಿಕೊಳ್ಳಲು ಸುಲಭವಾಗುತ್ತದೆ. ಮತ್ತು ಸುರಕ್ಷತೆಯ ದೃಷ್ಟಿಯಿಂದ ಇದು ಉತ್ತಮವೆನಿಸುತ್ತದೆ.
4. ಖಾಸಗಿತನದ ರಕ್ಷಣೆ:
ಇಲ್ಲಿ ನಾಗರಿಕರ ಖಾಸಗಿತನಕ್ಕೆ ಧಕ್ಕೆ ಉಂಟಾಗುವುದಿಲ್ಲ. ಹಾಗೂ ನಾಗರಿಕರ ಖಾಸಗಿ ವಿವರಗಳನ್ನು ರಕ್ಷಿಸಲಾಗುತ್ತದೆ.
ಡೇಟಾವನ್ನು ಹಂಚಿಕೊಳ್ಳುವ ಮೊದಲು ಅದರಲ್ಲಿ ಇರುವಂತಹ ವೈಯಕ್ತಿಕ ವಿಚಾರಗಳನ್ನು ತೆಗೆದುಹಾಕಲಾಗುತ್ತದೆ. ಹಾಗೂ ಈ ಮಾಹಿತಿಗಳಿಂದ ಮುಂದಿನ ಕ್ರಮಗಳನ್ನು ಸುಲಭವಾಗಿ ತೆಗೆದುಕೊಳ್ಳಬಹುದಾಗಿದೆ.
5. ಡೇಟಾ ವಿನಂತಿ ಕಾರ್ಯ:
ಸ್ಟಾರ್ಟ್ಅಪ್ ಗಳಿಗೆ ಹಾಗೂ ಸಂಶೋಧನೆಗಳಿಗೆ ಮಾಹಿತಿಯ ಅಗತ್ಯವಿರುತ್ತದೆ. ಅಗತ್ಯವಿರುವ ಮಾಹಿತಿಗಳು ಈ ಡೇಟಾ ಮೂಲಕ ದೊರೆಯುವಂತದ್ದು.
ಈ ಡೇಟಾವನ್ನು ಪಡೆಯಲು ಐಡಿಎಂಒ ಮೂಲಕವೇ ಅರ್ಜಿ ಸಲ್ಲಿಸಬೇಕು. ಮತ್ತು ಮೊದಲು ಅರ್ಜಿಯ ಉದ್ದೇಶ ಮತ್ತು ಸುರಕ್ಷತೆಯ ಕುರಿತಾಗಿ ತಿಳಿದುಕೊಳ್ಳಲಾಗುತ್ತದೆ.
ಆನಂತರ ಡೇಟಾವನ್ನು ನೀಡಲಾಗುತ್ತದೆ. ಇದರಿಂದಾಗಿ ಡೇಟಾ ಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.
ರಾಷ್ಟ್ರೀಯ ಡೇಟಾ ಗವರ್ನೆನ್ಸ್ ಫ್ರೇಮ್ವರ್ಕ್ ನೀತಿಯ ಜಾರಿಯ ಉದ್ದೇಶಗಳು:
1. ತಾಂತ್ರಿಕ ಉದ್ದೇಶಗಳು:
ಡೇಟಾ ಒದಗಿಸುವಿಕೆ: ಭಾರತದ ಅಭಿವೃದ್ಧಿಗೆ ಹಲವಾರು ಸಂಶೋಧನೆಗಳು ನಡೆಯುವ ಅವಶ್ಯಕತೆ ಇದೆ. ಹಾಗೂ ಇಂತಹ ಸಂಶೋಧನೆಗಳಿಗೆ ಮಾಹಿತಿಯ ಅಗತ್ಯವಿರುವಂಥದ್ದು.
ಇಲ್ಲಿ ಈ ಹೊಸ ನೀತಿಯ ಮೂಲಕ ಸ್ಟಾರ್ಟ್ಅಪ್, ಉದ್ಯಮಿಗಳು ಮತ್ತು ಸಂಶೋಧಕರಿಗೆ ದೊಡ್ಡ ಮಟ್ಟದ ಡೇಟಾ ವನ್ನು ಒದಗಿಸಲಾಗುತ್ತದೆ.
ಹಾಗೂ ಈ ಮೂಲಕ ಅವರುಗಳು ಸುಲಭವಾಗಿ ಸಂಶೋಧನೆಗಳನ್ನು ಮಾಡಬಹುದಾಗಿದೆ.
ಕೃತಕ ಬುದ್ಧಿಮತ್ತೆ: ಎಐ ಅಭಿವೃದ್ಧಿಗೂ ಕೂಡ ಯಥೇಚ್ಛವಾದ ಮಾಹಿತಿಯ ಅಗತ್ಯವಿದೆ.
ಇದರ ಬೆಳವಣಿಗೆ ಮತ್ತು ಮುಂದಿನ ದಿನಗಳ ಹೊಸ ಆವಿಷ್ಕಾರಗಳಿಗೆ ಈ ಡೇಟಾವನ್ನು ನೀಡಲಾಗುತ್ತದೆ. ಇದರಿಂದಾಗಿ ಆವಿಷ್ಕಾರಗಳ ವೇಗ ಹೆಚ್ಚುತ್ತದೆ.
2. ದಕ್ಷತೆ ಹೆಚ್ಚಿಸುವುದು:
ಇಲಾಖೆಗಳ ಸಹಯೋಗ: ಇಲ್ಲಿ ಸರ್ಕಾರಿ ಇಲಾಖೆಗಳ ನಡುವೆ ಡೇಟಾವನ್ನು ಹಂಚಿಕೊಳ್ಳುವುದು ಅಗತ್ಯದ ವಿಷಯ.
ಈ ನೀತಿಯ ಮೂಲಕ ಈ ಒಂದು ಡೇಟಾ ಹಂಚಿಕೊಳ್ಳುವಿಕೆಯನ್ನು ಸುಗಮಗೊಳಿಸಲಾಗುತ್ತದೆ.
ಸಾರ್ವಜನಿಕ ಸೇವೆ: ಇಲ್ಲಿ ಡಿಜಿಟಲ್ ಆಡಳಿತವನ್ನು ಸುಗಮಗೊಳಿಸಲಾಗುತ್ತದೆ. ಅದಕ್ಕೆ ಅಗತ್ಯವಿರುವಂತಹ ವ್ಯವಸ್ಥೆಗಳನ್ನು ಮಾಡಲಾಗುತ್ತದೆ.
ಹಾಗೂ ಇದರಿಂದಾಗಿ ನಾಗರಿಕರಿಗೆ ಸರ್ಕಾರದಿಂದ ಅತಿ ಬೇಗನೆ ಸೇವೆಗಳು ದೊರೆಯುತ್ತವೆ. ಮತ್ತು ಇದರಲ್ಲಿ ಯಾವುದೇ ವಿಳಂಬ ಉಂಟಾಗುವುದಿಲ್ಲ.
3. ಏಕರೂಪದ ವ್ಯವಸ್ಥೆ:
ಮೊದಲೇ ತಿಳಿಸಿದಂತೆ ಇಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಎಲ್ಲಾ ಇಲಾಖೆಗಳಿಗೂ ಒಂದೇ ನಿಯಮಗಳಿರುತ್ತವೆ.
ಈ ಏಕರೂಪದ ನಿಯಮದ ವ್ಯವಸ್ಥೆಯಲ್ಲಿ ಎರಡು ಇಲಾಖೆಗಳು ಕಾರ್ಯನಿರ್ವಹಿಸುತ್ತವೆ.
ಹೊಸ ಡೇಟಾ ವ್ಯವಸ್ಥೆ: ಇದಕ್ಕೂ ಮುಂಚೆ ಕಾಗದ ಸಹಿತ ಡೇಟಾ ವ್ಯವಸ್ಥೆ ಗಳಿದ್ದವು. ಹಾಗೂ ಅವುಗಳ ನಿರ್ವಹಣೆ ಕಠಿಣವಾಗಿತ್ತು.
ಪ್ರಸ್ತುತ ಸರ್ಕಾರಿ ಇಲಾಖೆಗಳಿಗೆ ಗಳಲ್ಲಿ ಹಳೇ ಕಾಗದಗಳನ್ನು ಕಾಣಬಹುದು. ಹಾಗೂ ಕಾಗದಗಳನ್ನು ಬಹಳ ಸಮಯ ಇಟ್ಟುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.
ಈ ನಿಟ್ಟಿನಲ್ಲಿ ಡೇಟಾ ನಿರ್ವಹಣಾ ಪದ್ಧತಿಯನ್ನು ಆಧುನಿಕರಣಗೊಳಿಸಲಾಗುತ್ತದೆ. ಮತ್ತು ಈ ಮೂಲಕ ಡೇಟಾಗಳನ್ನು ಕಾಪಾಡಿಕೊಳ್ಳುವುದು ಸುಲಭವಾಗಿದೆ.
4. ಡೇಟಾ ಸುರಕ್ಷತೆ:
ಸಾಮಾನ್ಯವಾಗಿ ಖಾಸಗಿ ಡೇಟಾವನ್ನು ನಮೂದಿಸುವಾಗ ಹಲವು ಬಾರಿಯ ಯೋಚಿಸುತ್ತೇವೆ. ಡೇಟಾಗೆ ಸುರಕ್ಷತೆ ನೀಡುವುದು ಈ ನಿಟ್ಟಿನಲ್ಲಿ ಮುಖ್ಯವಾಗಿದೆ.
ಹೀಗಾಗಿ ಈ ಒಂದು ಹೊಸ ನೀತಿಯಲ್ಲಿ ಡೇಟಾಗೆ ಸುರಕ್ಷತೆಯನ್ನು ನೀಡಲಾಗುತ್ತದೆ.
ಇಲ್ಲಿ ಸಾರ್ವಜನಿಕರು ಡೇಟಾವನ್ನು ಬಳಸುವಾಗ ಖಾಸಗಿತನಕ್ಕೆ ರಕ್ಷಣೆ ನೀಡಲಾಗುತ್ತದೆ.
ವೈಯಕ್ತಿಕ ವಿಷಯಗಳು ಸೋರಿಕೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಮತ್ತು ಅನಾಮಧೇಯ ಎಂಬ ಹೆಸರಿನ ಮೂಲಕ ಡೇಟಾವನ್ನು ಬಳಕೆ ಮಾಡಲಾಗುತ್ತದೆ.
5. ನೀತಿ ನಿರೂಪಣೆ:
ನಿಖರವಾಗಿ ದೊರೆಯುವಂತಹ ಡೇಟಾ ಅಭಿವೃದ್ಧಿಯಲ್ಲಿ ಸಹಾಯ ಮಾಡುತ್ತದೆ. ಇವುಗಳ ಮೂಲಕ ಸರ್ಕಾರವು ಸರಿಯಾದ ನಿರ್ಧಾರಗಳನ್ನು ಕೈಗೊಳ್ಳಬಹುದಾಗಿದೆ.
ಶಿಕ್ಷಣ, ಕೃಷಿ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಪ್ರಮುಖ ಕ್ಷೇತ್ರಗಳ ನಿಖರವಾದ ಡೇಟಾಗಳ ಅವಶ್ಯಕತೆ ಇದೆ. ಹಾಗೂ ಆ ಮಾಹಿತಿ ಮೂಲಕ ಈ ಕ್ಷೇತ್ರಗಳ ಅಭಿವೃದ್ಧಿಯನ್ನು ಸಾಧಿಸಬಹುದಾಗಿದೆ.
ರಾಷ್ಟ್ರೀಯ ಡೇಟಾ ಗವರ್ನೆನ್ಸ್ ಫ್ರೇಮ್ವರ್ಕ್ ನೀತಿಯ ಅನುಷ್ಠಾನಕ್ಕಿರುವ ಸವಾಲುಗಳು:
1. ಮಾಹಿತಿ ಸೋರಿಕೆ:
ಸೈಬರ್ ಸಮಸ್ಯೆ: ಇಲ್ಲಿ ದೇಶದ ಪ್ರತಿಯೊಂದು ಇಲಾಖೆಯ ಮಾಹಿತಿಯು ಒಂದೆಡೆ ದೊರಕುತ್ತದೆ.
ಇದರಿಂದಾಗಿ ಇದು ಸೈಬರ್ ಅಪರಾಧಿಗಳ ಮೂಲಗುರಿ ಆಗುವ ಸಾಧ್ಯತೆ ಇರುತ್ತದೆ. ಹಾಗೂ ಈ ಮೂಲಕ ಅವರಿಗೆ ಮಾಹಿತಿ ಕಳ್ಳತನ ಮಾಡಲು ಸುಲಭವಾಗುತ್ತದೆ.
ಹೂಡಿಕೆ: ಮೇಲಿನ ಸೈಬರ್ ಸಮಸ್ಯೆಗಳನ್ನು ಸರಿದೂಗಿಸಲು ಸುರಕ್ಷತೆಯ ಕ್ರಮೈ ಕೈಗೊಳ್ಳಬೇಕಾಗುತ್ತದೆ. ಮತ್ತು ಇದಕ್ಕಾಗಿ ಅತ್ಯಾಧುನಿಕ ವ್ಯವಸ್ಥೆಗಳ ಅಗತ್ಯವಿರುತ್ತದೆ.
ಜೊತೆಗೆ ಹೆಚ್ಚಿನ ಮತ್ತು ನಿರಂತರ ಹೂಡಿಕೆಯ ಅಗತ್ಯವಿರುತ್ತದೆ. ಹಾಗೂ ಇದು ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಬಹುದಾಗಿದೆ.
2. ಡೇಟಾದ ಗುಣಮಟ್ಟ:
ಇಲಾಖೆ ಮೂಲಕ ಸಂಗ್ರಹ: ಪ್ರಸ್ತುತ ಇಲಾಖೆಗಳು ತಮ್ಮ ಡೇಟಾಗಳನ್ನು ತಾವೇ ಸಂಗ್ರಹಿಸುತ್ತವೆ.
ಪ್ರತಿ ಇಲಾಖೆಗೂ ನಿರ್ದಿಷ್ಟ ಡೇಟಾ ಅಗತ್ಯವಿದೆ. ಹಾಗೂ ಅವುಗಳ ಅನುಕೂಲಕ್ಕೆ ತಕ್ಕಂತೆ. ಮತ್ತು ಅವುಗಳಿಗೆ ಅಗತ್ಯವಿರುವ ಡೇಟಾವನ್ನು ಅವುಗಳ ಸಂಗ್ರಹಿಸುತ್ತವೆ.
ಹೆಚ್ಚಿನ ಶ್ರಮ: ಇಲಾಖೆಗಳು ಸಂಗ್ರಹಿಸಿದಂತಹ ಡೇಟಾವನ್ನು ಡಿಜಿಟಲೀಕರಣ ಗೊಳಿಸಬೇಕು. ಹಾಗೂ ಇಲಾಖೆಗಳು ತಮ್ಮ ಅಗತ್ಯಕ್ಕೆ ಮಾಹಿತಿಗಳನ್ನು ಸಂಗ್ರಹ ಮಾಡಿರುತ್ತದೆ.
ಅವುಗಳ ವಿಶ್ಲೇಷಣೆಯನ್ನು ನಡೆಸಬೇಕಾಗುತ್ತದೆ. ಹಾಗೂ ಇಲ್ಲಿ ಹಳೆಯ ಮತ್ತು ಅಸ್ತವ್ಯಸ್ತವಾಗಿರುವ ಮಾಹಿತಿಗಳನ್ನು ಒಂದೇ ಸೂರಿನಡಿ ತರಲಾಗುತ್ತದೆ. ಹಾಗೂ ಇದಕ್ಕೆ ಹೆಚ್ಚಿನ ಸಮಯ ಮತ್ತು ಶ್ರಮದ ವಿನಿಯೋಗ ಮಾಡಬೇಕಾಗುತ್ತದೆ.
3. ಗುರುತು ಪತ್ತೆ ಹಚ್ಚಬಹುದು:
ಖಾಸಗಿ ವಿಚಾರಗಳ ಬಹಿರಂಗ: ಮೊದಲೇ ತಿಳಿಸಿದಂತೆ ಇಲ್ಲಿ ಖಾಸಗಿ ವಿಚಾರಗಳನ್ನು ಬಹಿರಂಗಪಡಿಸುವುದಿಲ್ಲ. ಹಾಗೂ ವ್ಯಕ್ತಿಗಳ ಗುರುತು ಸಿಗದಂತೆ ಡೇಟಾವನ್ನು ನೀಡಲಾಗುತ್ತದೆ.
ಡೇಟಾ ಬಳಸುವಾಗ ಯಾರಿಗೆ ಸಂಬಂಧ ಪಟ್ಟ ಡೇಟಾ ಎಂಬ ಅರಿವು ಇರುವುದಿಲ್ಲ.
ಮರು ಗುರುತು: ಆದರೆ ಸುಧಾರಿತಗೊಂಡಂತಹ ಕೃತಕ ಬುದ್ಧಿಮತ್ತೆಯು ಡೇಟಾಗಳನ್ನು ಬಳಸುವಾಗ ಮರುಜೋಡಣೆ ಮಾಡುತ್ತದೆ.
ಅಥವಾ ವಿವಿಧ ಡೇಟಾವನ್ನು ಜೋಡಿಸುತ್ತದೆ. ಇದರಿಂದಾಗಿ ವ್ಯಕ್ತಿಗಳ ನಿಜವಾದ ಗುರುತು ಬಹಿರಂಗಗೊಳ್ಳಬಹುದು.
ಹಾಗೂ ಇದು ಅವರ ಖಾಸಗಿತನಕ್ಕೆ ಧಕ್ಕೆ ಉಂಟುಮಾಡುವ ಸಾಧ್ಯತೆ ಇರುತ್ತದೆ.
4. ತಾಂತ್ರಿಕ ಜ್ಞಾನದ ಕೊರತೆ:
ಇಲ್ಲಿ ದೊಡ್ಡ ಮಟ್ಟದ ಡೇಟಾ ಮಾಹಿತಿಗಳನ್ನು ಸಂಗ್ರಹಿಸಿ ಇಡಲಾಗುತ್ತದೆ. ಹಾಗೂ ಇವುಗಳು ಅಭಿವೃದ್ಧಿಯಲ್ಲಿ ಸಹಕಾರ ನೀಡುವಂತದ್ದು.
ಹಾಗೂ ಇವುಗಳ ನಿರ್ವಹಣೆಗೆ ಇಂಡಿಯಾ ಡೇಟಾ ಮ್ಯಾನೇಜ್ಮೆಂಟ್ ಆಫೀಸ್ ಅನ್ನು ಸ್ಥಾಪಿಸಲಾಗಿದೆ.
ಆದರೆ ಇಲ್ಲಿ ಕಾರ್ಯನಿರ್ವಹಿಸಲು ಹೆಚ್ಚಿನ ಉದ್ಯೋಗಿಗಳ ಅವಶ್ಯಕತೆ ಇದೆ.
ಹಾಗೂ ಡೇಟಾ ಸೈನ್ಸ್ ಮತ್ತು ಸೈಬರ್ ಭದ್ರತೆಯಲ್ಲಿ ಪರಿಣಿತಿ ಪಡೆದವರ ಅಗತ್ಯವಿರುವಂಥದ್ದು.
ಆದರೆ ಪ್ರಸ್ತುತ ಸರ್ಕಾರಿ ವಲಯದಲ್ಲಿ ಇಂತಹ ತಜ್ಞರ ಕೊರತೆ ಇರುವುದು ದೊಡ್ಡ ಸವಾಲಿನ ವಿಷಯವಾಗಿದೆ.
5. ಸಮನ್ವಯದ ಕೊರತೆ:
ಮೊದಲೇ ಹೇಳಿದಂತೆ ಇಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಒಂದೇ ನಿಯಮಗಳನ್ನು ರೂಪಿಸಲಾಗುತ್ತದೆ. ಈ ಎರಡರ ಇಲಾಖೆಗಳು ಕಾರ್ಯನಿರ್ವಹಿಸುತ್ತವೆ.
ಇಲ್ಲಿ ಸವಾಲಿನ ವಿಷಯವೆಂದರೆ ಪ್ರತಿ ರಾಜ್ಯಗಳಲ್ಲೂ ಒಂದೊಂದು ಸರ್ಕಾರವಿರುತ್ತದೆ. ಹಾಗೂ ಅವುಗಳನ್ನು ಒಂದೇ ವೇದಿಕೆಗೆ ತರುವುದು ಸವಾಲಾಗಿದೆ.
ಅವರಲ್ಲಿನ ಹೊಂದಾಣಿಕೆಯ ಕೊರತೆ ಮತ್ತು ಸಮನ್ವಯದ ಕೊರತೆ ಸಮಸ್ಯೆಯನ್ನು ಉಂಟು ಮಾಡುತ್ತವೆ.
ಹಾಗೂ ಎಲ್ಲಾ ರಾಜ್ಯದ ಡೇಟಾ ವಿವರಗಳನ್ನು ಒಂದೇ ಮಟ್ಟಕ್ಕೆ ತರುವುದು ಕೂಡ ದೊಡ್ಡ ಸವಾಲಾಗಿದೆ.
6.ಡಿಪಿಡಿಪಿ ಕಾಯ್ದೆ:
ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಕಾಯ್ದೆ (DPDP Act) ಎಂಬುದು ಒಂದು ಪ್ರಮುಖ ಕಾಯಿದೆಯಾಗಿದೆ.
ಈ ಕಾಯ್ದೆ ಮತ್ತು ಹೊಸ ನೀತಿಯನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕು. ಹಾಗೂ ಈ ಎರಡರ ನಡುವೆ ಹೊಂದಾಣಿಕೆಯನ್ನು ಮಾಡುವಂತದ್ದು ದೊಡ್ಡ ಸವಾಲಿನ ವಿಷಯವಾಗಿದೆ.
ಈ ಸವಾಲುಗಳನ್ನು ಎದುರಿಸಲು ಕೆಲವು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಅವುಗಳೆಂದರೆ:
1.ಖಾಸಗಿತನಕ್ಕೆ ರಕ್ಷಣೆ:
•ನಾಗರಿಕರಿಗೆ ಸಂಬಂಧಪಟ್ಟಂತಹ ಪ್ರತಿಯೊಂದು ವೈಯಕ್ತಿಕ ಮಾಹಿತಿಗಳನ್ನು ಕಟ್ಟುನಿಟ್ಟಾಗಿ ತೆಗೆದು ಹಾಕುವಂತದ್ದು.
•ಇದಕ್ಕೆ ಸಹಾಯಕವಾಗುವಂತೆ IDMO ನ ಆಧುನಿಕ ತಂತ್ರಜ್ಞಾನಗಳು ಮತ್ತು ಮಾದರಿಗಳನ್ನು ಬಳಸಿಕೊಳ್ಳುವುದು ಮತ್ತು ಅಗತ್ಯ ನಿಯಮಗಳನ್ನು ರೂಪಿಸುವುದು.
2. ಸುರಕ್ಷಿತ ಮೂಲ ಸೌಕರ್ಯ:
•ಸರ್ಕಾರಿ ಡೇಟಾಗಳನ್ನು ಸುರಕ್ಷಿತವಾಗಿ ಇಡಬೇಕಾಗಿದೆ.
•ಹಾಗೂ ಇದಕ್ಕಾಗಿ ಭಾರತ ಸರ್ಕಾರದ ಅಧಿಕೃತ ಮೇಘರಾಜ್ ಕ್ಲೌಡ್ ಹಾಗೂ ಸುರಕ್ಷಿತಾ ಸರ್ಕಾರಿ ಡೇಟಾ ಕೇಂದ್ರಗಳನ್ನು ಮಾತ್ರ ಬಳಸಬೇಕು.
3. ಪ್ರವೇಶದ ಪರಿಶೀಲನೆ:
•ಎಲ್ಲರಿಗೂ ಡೇಟಾ ದೊರೆಯುವುದಿಲ್ಲ.
•ಶಿಕ್ಷಣ ಸಂಸ್ಥೆಗಳು, ಸಂಶೋಧಕರು ಹಾಗೂ ಇತರರು ಡೇಟಾ ಪಡೆಯಲು ಮೊದಲು IDMO ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.
•ಅರ್ಜಿ ಸಲ್ಲಿಸಿದವರ ಉದ್ದೇಶ ಮತ್ತು ಹಿನ್ನೆಲೆಯನ್ನು ಪರಿಶೀಲಿಸಲಾಗುತ್ತದೆ.
•ಜೊತೆಗೆ ಅವರು ಬಳಸುವಂತಹ ಸುರಕ್ಷತಾ ಕ್ರಮಗಳನ್ನು ಕೂಡ ತಿಳಿದುಕೊಂಡ ನಂತರ ಅನುಮತಿ ನೀಡುವಂತದ್ದು.
4. ಪಾರದರ್ಶಕತೆ ಮತ್ತು ಜವಾಬ್ದಾರಿ:
•ಪ್ರತಿಯೊಂದು ಸರ್ಕಾರಿ ಇಲಾಖೆಗಳಲ್ಲಿ ಡೇಟಾ ಕಂಟ್ರಿಬ್ಯೂಷನ್ ಆಫೀಸರ್ ಅಧಿಕಾರಿಗಳು ಇರುತ್ತಾರೆ.
•ಮತ್ತು ಈ ಅಧಿಕಾರಿಯೂ ಆ ಇಲಾಖೆಗೆ ಸಂಬಂಧಪಟ್ಟ ಡೇಟಾಗಳ ಸುರಕ್ಷತೆ ಮತ್ತು ಗುಣಮಟ್ಟದ ಜವಾಬ್ದಾರಿಯನ್ನು ಹೊಂದಿರುತ್ತಾರೆ.
•ಡೇಟಾ ಪಡೆದವರ ವಿವರಗಳು ಮತ್ತು ಪಡೆಯುವುದಕ್ಕೆ ಕಾರಣಗಳನ್ನು ಸಂಪೂರ್ಣವಾಗಿ ಇವರು ದಾಖಲಿಸಿರುತ್ತಾರೆ. ಮತ್ತು ಇವೆಲ್ಲವೂ ಪಾರದರ್ಶಕವಾಗಿ ನಡೆದಿರುತ್ತದೆ.
5.DPDP ಕಾಯ್ದೆ ಜೊತೆ ಜೋಡಿಸುವುದು:
•ಈ ಒಂದು ನೀತಿಯು ಭಾರತ ಸರ್ಕಾರದ DPDP ಕಾಯ್ದೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
•ಡೇಟಾಗಳನ್ನು ವಿತರಿಸುವಾಗ ಒಂದು ವೇಳೆ ಮಾಹಿತಿಗಳು ಬಹಿರಂಗಗೊಂಡರೆ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವಂತಹ ವ್ಯವಸ್ಥೆ ಇರಲಿದೆ.
ಈ ಒಂದು ಹೊಸ ನೀತಿಯು ಡಿಜಿಟಲ್ ಭಾರತದ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಇಲ್ಲಿ ಡಿಜಿಟಲ್ ವ್ಯವಸ್ಥೆಯ ಸಂಪೂರ್ಣ ಸುರಕ್ಷತೆ ಮತ್ತು ಭದ್ರತೆಯನ್ನು ಕಾಯ್ದುಕೊಳ್ಳಲಾಗುತ್ತದೆ.
ಆಧುನಿಕ ಯುಗದಲ್ಲೂ ವೈಯಕ್ತಿಕ ಮಾಹಿತಿಗಳಿಗೆ ಗೌಪ್ಯತೆಯನ್ನು ನೀಡುವಂತದ್ದು.
ಹಾಗೂ ಮುಂದಿನ ದಿನಗಳಲ್ಲಿ ಈ ಒಂದು ನೀತಿಯ ಪರಿಣಾಮಕಾರಿ ಅನುಷ್ಠಾನದಿಂದ ಸರ್ಕಾರದ ಕಾರ್ಯಗಳಲ್ಲಿ ದಕ್ಷತೆ ಹೆಚ್ಚಾಗಲಿದೆ. ಮತ್ತು ಭಾರತವು ಅಭಿವೃದ್ಧಿಯತ್ತ ಸಾಗಲು ಇದು ಸಹಕರಿಸಲಿದೆ.
ಇನ್ನಷ್ಟು ಮಾಹಿತಿಗಾಗಿ: ministry of Electronics and Information Technology
ಇದನ್ನು ಓದಿ: ಸೈಬರ್ ಭದ್ರತೆ