Bharatiya Antariksh Station:ಭಾರತೀಯ ಅಂತರಿಕ್ಷ ಸ್ಟೇಷನ್ ಎಂಬುದು ಭಾರತದ ಸ್ವಂತ ಬಾಹ್ಯಾಕಾಶ ನಿಲ್ದಾಣವಾಗಿದೆ.

Bharatiya Antariksh Station: ಈ ನಿಲ್ದಾಣವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಅಭಿವೃದ್ಧಿಪಡಿಸುತ್ತಿದೆ. ಸೆಪ್ಟೆಂಬರ್ 18, 2024 ರಂದು ಈ ಯೋಜನೆಗೆ ಅಧಿಕೃತ ಚಾಲನೆ ನೀಡಲಾಯಿತು.
Bharatiya Antariksh Station: ಏನಿದು ಭಾರತೀಯ ಅಂತರಿಕ್ಷ ಸ್ಟೇಷನ್?
ಇದು ಭಾರತದ ಸ್ವಂತ ಬಾಹ್ಯಾಕಾಶ ನಿಲ್ದಾಣ. ಭೂಮಿಯಿಂದ ಸುಮಾರು 400 ರಿಂದ 450 ಕಿಲೋಮೀಟರ್ ಎತ್ತರದ ಕಕ್ಷೆಯಲ್ಲಿ ಇದು ಕಾರ್ಯನಿರ್ವಹಿಸುತ್ತದೆ.
ಇದರ ಬೇಸ್ ಮಾಡ್ಯೂಲ್ ಅನ್ನು 2028ರಲ್ಲಿ ಜಾರಿಗೊಳಿಸಲಾಗುತ್ತದೆ. ಮತ್ತು 2035 ರ ವೇಳೆಗೆ ಈ ನಿಲ್ದಾಣವು ಸಂಪೂರ್ಣವಾಗಿ ಸಿದ್ಧವಾಗಲಿದೆ.
Bharatiya Antariksh Station: ಭಾರತೀಯ ಅಂತರಿಕ್ಷ ಸ್ಟೇಷನ್ ನ ಪ್ರಮುಖ ವೈಶಿಷ್ಟ್ಯತೆಗಳು:
1. ಮಾಡ್ಯೂಲರ್ ರಚನೆ: ಇಲ್ಲಿ ಪ್ರಮುಖವಾಗಿ ಐದು ಮಾಡ್ಯೂಲರ್ ಗಳಿರುತ್ತವೆ. ಇವುಗಳನ್ನು ಹಂತ ಹಂತವಾಗಿ ಬಾಹ್ಯಾಕಾಶಕ್ಕೆ ಕಳುಹಿಸುತ್ತಾ ಜೋಡಿಸಲಾಗುತ್ತದೆ.
2. ಎತ್ತರ ಮತ್ತು ತೂಕ: ಈ ಸ್ಟೇಷನ್ ಸಂಪೂರ್ಣವಾಗಿ ಸಿದ್ಧವಾದಾಗ ಒಟ್ಟು 52 ಟನ್ ತೂಕ ಇರಲಿದೆ. ಮತ್ತು ಭೂಮಿಯಿಂದ 400 ರಿಂದ 450 ಕಿಲೋಮೀಟರ್ ಎತ್ತರದಲ್ಲಿರುವ ಕೆಳ ಭೂ ಕಕ್ಷೆಯಲ್ಲಿ ಇದನ್ನು ಸ್ಥಾಪಿಸಲಾಗುತ್ತದೆ.
3. ಸಿಬ್ಬಂದಿ ಮತ್ತು ಸಮಯ: ಇದರಲ್ಲಿ ಸುಲಭವಾಗಿ 3ರಿಂದ 4 ಗಗನಯಾತ್ರಿಗಳು ತಂಗಬಹುದಾಗಿದೆ. ಮತ್ತು 3ರಿಂದ 6 ತಿಂಗಳ ತನಕ ಇಲ್ಲಿ ಇದ್ದುಕೊಂಡು ಸಂಶೋಧನೆ ನಡೆಸಬಹುದಾಗಿದೆ.
4. ಉಡಾವಣೆ: 2028ರ ಸಮಯದಲ್ಲಿ ಮೊದಲ ಮಾಡ್ಯೂಲ್ ಅನ್ನು ಉಡಾವಣೆ ಮಾಡಲಾಗುತ್ತದೆ. ಹಾಗೂ ಇದಕ್ಕೆ ಹ್ಯೂಮನ್-ರೇಟೆಡ್ ಎಲ್ವಿಎಂ3 (LVM3) ರಾಕೆಟ್ ಅನ್ನು ಬಳಕೆ ಮಾಡಲಾಗುತ್ತದೆ.
5.ಡಾಕಿಂಗ್: ಇಲ್ಲಿ ಅಂತರಾಷ್ಟ್ರೀಯ ಮಾನದಂಡಗಳ ವಿನ್ಯಾಸವನ್ನು ಹೊಂದಲಾಗಿದೆ. ಇದರಿಂದ ಇತರ ದೇಶಗಳ ನೌಕೆಗಳು ಕೂಡ ಇಲ್ಲಿ ಡಾಕ್ ಮಾಡಬಹುದಾಗಿದೆ.
6. ಸ್ವದೇಶಿ ತಂತ್ರಜ್ಞಾನದ ಬಳಕೆ: ಇಲ್ಲಿ ಪರಿಸರ ನಿಯಂತ್ರಕ ಮತ್ತು ಜೀವ ರಕ್ಷಕ ವ್ಯವಸ್ಥೆಯನ್ನು ಮಾಡಲಾಗಿದೆ. ಇವುಗಳನ್ನು ಸೇರಿದಂತೆ ಸಂಪೂರ್ಣ ತಂತ್ರಜ್ಞಾನವನ್ನು ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಭಾರತೀಯ ಅಂತರಿಕ್ಷ ಸ್ಟೇಷನ್ ಯೋಜನೆಯ ಉದ್ದೇಶಗಳು:
1. ವೈದ್ಯಕೀಯ ಅಧ್ಯಯನ:
ಬಾಹ್ಯಾಕಾಶದಲ್ಲಿ ಮನುಷ್ಯನ ಜೀವನಕ್ಕೆ ತಕ್ಕ ವಾತಾವರಣ ಇರುವುದಿಲ್ಲ. ವಾತಾವರಣವನ್ನು ಸ್ವತಃ ಮನುಷ್ಯನೇ ತಯಾರಿಸಿಕೊಳ್ಳಬೇಕು. ಹಾಗೂ ಕೃತಕ ವಾತಾವರಣವು ನೈಸರ್ಗಿಕ ವಾತಾವರಣದಷ್ಟು ಯೋಗ್ಯವಾಗಿರುವುದಿಲ್ಲ.
ಇಂತಹ ವಾತಾವರಣದಲ್ಲಿ ಬದುಕುವಾಗ ಒಂದಷ್ಟು ಸಮಸ್ಯೆಗಳು ಎದುರಾಗಬಹುದು. ಇಲ್ಲಿ ದೀರ್ಘಕಾಲ ಬದುಕುವಾಗ ದೇಹ, ಮೂಳೆಗಳಿಗೆ ತೊಂದರೆ ಉಂಟಾಗಬಹುದು.
ಹಾಗೂ ಅಲ್ಲಿ ಇರುವಂತಹ ಸಮಯ ಈ ಪರಿಣಾಮಗಳ ಕುರಿತಾಗಿ ಸಂಶೋಧನೆ ನಡೆಸುವುದು ಮೂಲ ಉದ್ದೇಶವಾಗಿದೆ.
2. ಸ್ವದೇಶಿ ತಂತ್ರಜ್ಞಾನದ ಪರೀಕ್ಷೆ:
ಪ್ರಸ್ತುತ ಈ ಯೋಜನೆಯಲ್ಲಿ ಹಲವು ಉಪಕರಣಗಳನ್ನು ಭಾರತವೇ ತಯಾರಿಸುತ್ತಿದೆ. ಈ ಯೋಜನೆಯಲ್ಲಿ ಸ್ವದೇಶಿ ತಂತ್ರಜ್ಞಾನಗಳನ್ನು ಬಳಸುವುದು ಮಹತ್ವದ ಹೆಜ್ಜೆಯಾಗಿದೆ.
ಹಾಗೂ ನ್ಯಾವಿಗೇಶನ್, ಜೀವ ರಕ್ಷಣಾ ವ್ಯವಸ್ಥೆ (ECLSS), ಮತ್ತು ದೀರ್ಘಕಾಲಿಕ ಇಂಧನಕ್ಕೆ ಸಂಬಂಧಪಟ್ಟ ತಂತ್ರಜ್ಞಾನಗಳು.
ಹಾಗೂ ಇತರ ತಂತ್ರಜ್ಞಾನಗಳನ್ನು ಭಾರತವೇ ಅಭಿವೃದ್ಧಿಪಡಿಸುತ್ತಿದೆ. ಇವುಗಳು ಬಾಹ್ಯಾಕಾಶದಲ್ಲಿ ಯಾವ ರೀತಿಯಾಗಿ ಬಳಕೆಯಾಗುತ್ತವೆ ಎಂಬುದರ ಕುರಿತಾಗಿ ಅಧ್ಯಯನ ನಡೆಸಲಾಗುತ್ತದೆ.
ಇದರಿಂದ ಭವಿಷ್ಯದ ಯೋಜನೆಗಳಿಗೆ ಪುಷ್ಠಿ ನೀಡಿದಂತಾಗುತ್ತದೆ. ಮತ್ತು ಹಲವು ಪ್ರಶ್ನೆಗಳಿಗೆ ಉತ್ತರ ದೊರೆಯುತ್ತದೆ.
3.ಮೈಕ್ರೋಗ್ರಾವಿಟಿ:
ಪ್ರಸ್ತುತ ಭೂಮಿಯಲ್ಲಿ ಹಲವು ಸಂಶೋಧನೆಗಳನ್ನು ನಡೆಸಲಾಗುತ್ತಿಲ್ಲ. ಭೂಮಿ ಮೇಲಿರುವಂತ ಗುರುತ್ವಾಕರ್ಷಣ ಬಲವು ಕೆಲವು ಸಂಶೋಧನೆಗಳಿಗೆ ಎಡೆಮಾಡಿಕೊಳ್ಳುವುದಿಲ್ಲ.
ಈ ಕಾರಣದಿಂದಾಗಿ ಕೆಲವು ಜೈವಿಕ,ಭೌತಿಕ ಮತ್ತು ವೈಜ್ಞಾನಿಕ ಪ್ರಯೋಗಗಳನ್ನು ಬಾಹ್ಯಾಕಾಶದಲ್ಲಿ ಮಾಡುವ ಉದ್ದೇಶವನ್ನು ಹೊಂದಲಾಗಿದೆ.
4.2040 ರ ಮಿಷನ್ ಗೆ ಪುಷ್ಠಿ:
ಭಾರತವು 2040ರ ವೇಳೆಗೆ ಚಂದ್ರನ ಮೇಲೆ ಗಗನಯಾತ್ರಿಗಳನ್ನು ಕಳಿಸುವ ಯೋಜನೆಯನ್ನು ಹಾಕಿಕೊಂಡಿದೆ. ಹಾಗೂ ಈ ಯಾನಕ್ಕೆ ಹಲವು ತಯಾರಿಕೆಗಳು ನಡೆಯಬೇಕು. ಒಂದಷ್ಟು ಪ್ರಯೋಗಗಳನ್ನು ನಡೆಸುವ ಅಗತ್ಯವಿದೆ.
ಈ ನಿಟ್ಟಿನಲ್ಲಿ ಈ ಒಂದು ಬಾಹ್ಯಾಕಾಶ ನಿಲ್ದಾಣದಲ್ಲಿ ನಡೆಸುವಂತಹ ಪ್ರಯೋಗಗಳು ಸಹಕಾರ ನೀಡಲಿವೆ.
ಮುಂದಿನ ಯಾನಕ್ಕೆ ಯಾವ ತಯಾರಿಗಳು ನಡೆಯಬೇಕು ಎಂಬುದರ ಸ್ಪಷ್ಟ ಚಿತ್ರಣ ಇಲ್ಲಿ ದೊರೆಯುತ್ತದೆ. ಹಾಗೂ ಈ ಮೂಲಕ ಮುಂದಿನ ಯಾನ ಯಶಸ್ವಿಯಾಗಲಿದೆ.
5. ವಾಣಿಜ್ಯ ಮತ್ತು ಕೈಗಾರಿಕೆ:
ಇಲ್ಲಿ ಯಾನವನ್ನು ನಡೆಸಲು ಹಲವು ಉಪಕರಣಗಳ ಅಗತ್ಯವಿದೆ. ಈ ಒಂದು ನಿಲ್ದಾಣದ ನಿರ್ಮಾಣ ಮಾಡುವಾಗ ಉತ್ಪಾದನೆ ಮುಖ್ಯವಾದ ಅಂಶವಾಗಿದೆ.
ಕೃತಕ ಉಪಗ್ರಹಗಳ ದುರಸ್ತಿ, ಬಾಹ್ಯಾಕಾಶ ಪ್ರವಾಸೋದ್ಯಮ ಮತ್ತು ಹೊಸ ಲೋಹಗಳನ್ನು ಉತ್ಪಾದಿಸಬೇಕು.
ಇದು ಕೇವಲ ಸರ್ಕಾರಿ ಸಂಸ್ಥೆಯಿಂದ ಮಾಡುವಂಥದ್ದಲ್ಲ. ಒಂದು ವೇಳೆ ಮಾಡಿದರು ಕೂಡ ಬಹಳಷ್ಟು ಸಮಯ ವ್ಯಯವಾಗುತ್ತದೆ.
ಇದಕ್ಕಾಗಿ ಇಲ್ಲಿ ಖಾಸಗಿ ಸಂಸ್ಥೆಗಳಿಗೆ ಅವಕಾಶ ನೀಡಲಾಗುತ್ತದೆ. ಈ ಮೂಲಕ ಅಲ್ಲಿನ ಉದ್ಯೋಗಿಗಳ ಪ್ರತಿಭೆಯ ಅನಾವರಣ ನಡೆಯಲಿದೆ. ಮತ್ತು ಕೆಲಸಗಳು ಅತಿ ಬೇಗನೆ ಸಾಗುತ್ತವೆ.
6. ಬಾಹ್ಯಾಕಾಶ ದೂರದರ್ಶಕ:
ಖಗೋಳ ವೀಕ್ಷಣೆ ಎಂಬುದು ಹಲವು ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ. ಇಲ್ಲಿ ಹಲವು ವಿಷಯಗಳನ್ನು ತಿಳಿದುಕೊಳ್ಳುವ ಅಗತ್ಯವಿದೆ. ಇವೆಲ್ಲವೂ ಮುಂದಿನ ಯೋಜನೆಗಳಿಗೆ ದಾರಿದೀಪ ಎನ್ನಬಹುದು.
ಹೀಗಾಗಿ ಈ ಯೋಜನೆ ಮೂಲಕ ವಿಶ್ವದ ಆಳವಾದ ರಹಸ್ಯಗಳು, ನಕ್ಷತ್ರಗಳು ಮತ್ತು ಗ್ರಹಗಳ ಕುರಿತಾಗಿ ನಿಖರವಾದ ಮಾಹಿತಿಗಳನ್ನು ತಿಳಿದುಕೊಳ್ಳಲಾಗುತ್ತದೆ. ಇದಕ್ಕಾಗಿ ಸುಧಾರಿತ ಬಾಹ್ಯಾಕಾಶ ದೂರದರ್ಶಕಗಳನ್ನು ಅಳವಡಿಸಲಾಗುತ್ತದೆ.
ಭಾರತೀಯ ಅಂತರಿಕ್ಷ ಸ್ಟೇಷನ್ ನಿರ್ಮಾಣದಲ್ಲಿ ಎದುರಾಗುತ್ತಿರುವ ಸವಾಲುಗಳು:
1. ಕಸದ ಭಯ:
ಸಾಮಾನ್ಯವಾಗಿ ಎಲ್ಲಾ ದೇಶಗಳು ಬಾಹ್ಯಾಕಾಶ ಉಡಾವಣೆಗಳನ್ನು ನಡೆಸುತ್ತಿರುತ್ತವೆ. ಪ್ರತಿಯೊಂದು ದೇಶವು ಮಾಹಿತಿಗಳನ್ನು ತಿಳಿದುಕೊಳ್ಳುವಲ್ಲಿ ಹೆಜ್ಜೆ ಇಡುತ್ತಿದೆ. ಹೀಗಿರುವಾಗ ಅಲ್ಲಿ ಕಸದ ಭೀತಿ ಹೆಚ್ಚಿದೆ.
ಈಗಾಗಲೇ ಕಳುಹಿಸಿರುವಂತಹ ಕೃತಕ ಉಪಗ್ರಹ. ಮತ್ತು ರಾಕೆಟ್ ಗಳ ಹಳೆಯ ಅವಶೇಷಗಳ ಸಂಖ್ಯೆ ಹೆಚ್ಚುತ್ತಿರುವುದು ಭೀತಿ ಉಂಟುಮಾಡಿದೆ. ಈ ಅವಶೇಷಗಳು ಭಾರತ ನಿರ್ಮಿತ ನಿಲ್ದಾಣಕ್ಕೆ ಡಿಕ್ಕಿ ಹೊಡೆಯುವ ಸಾಧ್ಯತೆ ಇರುತ್ತದೆ.
ಇದರಿಂದ ನಮ್ಮ ಸಂಶೋಧನೆಗೆ ಧಕ್ಕೆ ಉಂಟಾಗಬಹುದು. ಹೀಗಾಗಿ ಇದನ್ನು ತಡೆಯಲು ಆಧುನಿಕ ಟ್ರಾಕಿಂಗ್ ವ್ಯವಸ್ಥೆಯ ಅಗತ್ಯವಿದೆ.
2. ಆರೋಗ್ಯದ ರಕ್ಷಣೆ:
ಗುರುತ್ವಾಕರ್ಷಣೆ: ಗಗನಯಾತ್ರಿಗಳು ದೀರ್ಘ ಕಾಲ ಇಲ್ಲಿ ಸಮಯವನ್ನು ಕಳೆಯಬೇಕಾಗುತ್ತದೆ. ಹಾಗೂ ಬಾಹ್ಯಾಕಾಶದಲ್ಲಿ ತಿಳಿದಿರುವಂತೆ ಗುರುತ್ವಾಕರ್ಷಣ ಬಲ ಇರುವುದಿಲ್ಲ.
ಹಾಗೂ ಗುರುತ್ವಾಕರ್ಷಣ ಬಲಕ್ಕೆ ಮನುಷ್ಯನ ದೇಹ ಹೊಂದಿಕೊಂಡಿರುವಂಥದ್ದು. ಈ ನಿಟ್ಟಿನಲ್ಲಿ ಅದರಿಂದ ಹೊರತಾಗಿ ಬದುಕಲು ಮನುಷ್ಯನಿಗೆ ಕಷ್ಟವೆನಿಸಬಹುದು.
ದೇಹದ ಮೇಲೆ ಪರಿಣಾಮ: ದೀರ್ಘಕಾಲ ಬಾಹ್ಯಾಕಾಶದಲ್ಲಿ ಇರುವುದರಿಂದ ಮೂಳೆಗಳ ಸಾಂದ್ರತೆ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಮತ್ತು ಮೆದುಳಿನಲ್ಲಿರುವ ದ್ರವದ ಒತ್ತಡವು ಬದಲಾಗಬಹುದು.
ಹಾಗೂ ಬಾಹ್ಯಾಕಾಶದಲ್ಲಿ ವಿಕಿರಣಗಳು ಹೆಚ್ಚಿರಲಿದೆ. ಮತ್ತು ಅವು ಭೂಮಿಯಲ್ಲಿ ಇರುವುದಕ್ಕಿಂತ ವಿಭಿನ್ನವಾಗಿರುತ್ತದೆ.
ಹಾಗೂ ಇದರ ಪ್ರಭಾವವನ್ನು ಎದುರಿಸುವುದು ಕಷ್ಟವಾಗುತ್ತದೆ. ಒಟ್ಟಾರೆಯಾಗಿ ಮಾನವನ ಆರೋಗ್ಯವು ಸವಾಲಿನ ವಿಷಯ.
3.ಜೀವ ರಕ್ಷಕ ವ್ಯವಸ್ಥೆ:
ವಾತಾವರಣ: ಬಾಹ್ಯಾಕಾಶದಲ್ಲಿ ಜೀವಿಸುವುದಕ್ಕೆ ಸಂಪೂರ್ಣವಾಗಿ ಭೂಮಿಯಂತಹ ವಾತಾವರಣದ ವ್ಯವಸ್ಥೆ ಇರಬೇಕು.
ಇಲ್ಲವಾದಲ್ಲಿ ಮನುಷ್ಯನಿಗೆ ಹೊಂದಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗೂ ಕೆಲವು ವಸ್ತುಗಳಿಲ್ಲದೆ ಬದುಕಲು ಸಾಧ್ಯವಾಗುವುದಿಲ್ಲ.
ಸ್ವದೇಶದಲ್ಲೇ ತಯಾರಿಕೆ: ಈ ಒಂದು ನಿಲ್ದಾಣದಲ್ಲಿ ಸಂಪೂರ್ಣ ವ್ಯವಸ್ಥೆಯನ್ನು ಸ್ವದೇಶದಿಂದ ಮಾಡಲಾಗುತ್ತದೆ.
ಆಮ್ಲಜನಕದ ಪೂರೈಕೆ, ಇಂಗಾಲದ ನಿಯಂತ್ರಣ, ತ್ಯಾಜ್ಯಗಳ ಮರುಬಳಕೆ ಮತ್ತು ತಾಪಮಾನದ ನಿರ್ವಹಣೆ ಅಗತ್ಯದ ಅಂಶವಾಗಿದೆ.
ಹಾಗೂ ಈ ವ್ಯವಸ್ಥೆಗಳನ್ನು ಇದೇ ಮೊದಲ ಬಾರಿಗೆ ಭಾರತದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.ಹಾಗಾಗಿ ಇದು ತಾಂತ್ರಿಕ ಸವಾಲಾಗಿದೆ.
ಇದು ಯಾವ ರೀತಿಯಾಗಿ ಕಾರ್ಯನಿರ್ವಹಿಸುತ್ತದೆ ಎಂಬುದರ ಅರಿವು ಇರುವುದಿಲ್ಲ. ಆದರೆ ಮುಂದಿನ ಯೋಜನೆಗಳಿಗೆ ಇದು ಸಹಕಾರಿಯಾಗಲಿದೆ.
4. ಮೂಲ ಸೌಕರ್ಯ:
ಇಸ್ರೋ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಈಗಾಗಲೇ ಹಲವು ಉಡಾವಣೆಗಳನ್ನು ನಡೆಸಿದೆ. ಆದರೆ ಈ ರೀತಿಯ ನಿಲ್ದಾಣದ ತಯಾರಿಕೆಯನ್ನು ಇದೇ ಮೊದಲ ಬಾರಿಗೆ ಮಾಡುತ್ತಿರುವುದು.
ಈ ಒಂದು ಸಂಸ್ಥೆಯು ಕೇವಲ ರಾಕೆಟ್ ಮತ್ತು ಉಪಗ್ರಹಗಳ ವಿನ್ಯಾಸದಲ್ಲಿ ಪರಿಣಿತಿಯನ್ನು ಹೊಂದಿದೆ. ಹಾಗಾಗಿ ಈ ಒಂದು ಹೊಸ ಸಂಶೋಧನೆಯು ಇಸ್ರೋ ಸಂಸ್ಥೆಗೆ ಸವಾಲಿನ ವಿಷಯ.
ಕೈಗಾರಿಕೆಗಳ ಪಾತ್ರ: ಪ್ರಸ್ತುತ ಅಗತ್ಯವಿರುವಂತಹ ಉಪಕರಣಗಳು ನಿಗದಿತ ಸಮಯದೊಳಗೆ ತಯಾರಾಗಬೇಕು.
2028ರ ಸುಮಾರಿಗೆ ಮೊದಲ ಬಾಹ್ಯಾಕಾಶಯಾನ ನಡೆಯಲಿದೆ. ಹಾಗೂ 2035 ರ ವೇಳೆಗೆ ಈ ಯೋಜನೆಯ ಸಂಪೂರ್ಣವಾಗಿ ಸಿದ್ಧಗೊಳ್ಳುತ್ತದೆ. ಹಾಗಾಗಿ ಈ ಸಮಯದೊಳಗೆ ಎಲ್ಲಾ ಕೆಲಸಗಳು ಮುಗಿಯಬೇಕಾಗಿದೆ.
ಈ ಕಾರ್ಯವನ್ನು ಪೂರ್ಣಗೊಳಿಸಲು ಭಾರತೀಯ ಕೈಗಾರಿಕೆಗಳು ತಮ್ಮ ಮೂಲಸೌಕರ್ಯದ ಪ್ರಮಾಣವನ್ನು ಹೆಚ್ಚಿಸಬೇಕಾಗುತ್ತದೆ. ಪ್ರಸ್ತುತ ಇರುವಂತ ಪ್ರಮಾಣವು ಕೊರತೆಯನ್ನು ಉಂಟುಮಾಡುತ್ತದೆ.
5. ಆರ್ಥಿಕ ಸಮಸ್ಯೆಗಳು:
ಬಜೆಟ್: ಗಗನಯಾನ ಕಾರ್ಯಕ್ರಮ ಮತ್ತು ಬಾಹ್ಯಾಕಾಶ ನಿಲ್ದಾಣದ ತಯಾರಿಕೆಗಾಗಿ ಇಸ್ರೋ ಸಂಸ್ಥೆಗೆ ಮೊದಲ ಹಂತದಲ್ಲಿ ಬಜೆಟ್ ನೀಡಲಾಗಿದೆ.
ಈ ಬಜೆಟ್ ಒಟ್ಟಾರೆಯಾಗಿ ₹20,193 ಕೋಟಿಯನ್ನು ಹೊಂದಿದೆ. ಮತ್ತು ಈ ಹಣವು ಮಂಜೂರು ಆಗಿರುತ್ತದೆ.
ಆದರೂ ಕೂಡ ಇದು ಉನ್ನತ ಮಟ್ಟದ ಮತ್ತು ಹೆಚ್ಚಿನ ಹಣದ ಅವಶ್ಯಕತೆ ಇರುವ ಯೋಜನೆ. ಹೀಗಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ಹಣದ ಅವಶ್ಯಕತೆ ಎದುರಾಗಬಹುದು.
ಜಾಗತಿಕ ಮಟ್ಟಕ್ಕೆ ಹೋಲಿಕೆ: ಜಾಗತಿಕ ಮಟ್ಟದಲ್ಲಿ ಹೋಲಿಕೆ ಮಾಡಿದರೆ ಭಾರತದ ಬಜೆಟ್ ಕಡಿಮೆ ಎನಿಸುತ್ತದೆ.
ಇದರ ದೇಶಗಳ ಬಾಹ್ಯಾಕಾಶ ಸಂಸ್ಥೆಗಳು ಹೆಚ್ಚಿನ ಪ್ರಯೋಗಗಳನ್ನು ನಡೆಸುತ್ತಿದೆ. ಹಾಗೆ ಹೆಚ್ಚಿನ ಹಣವನ್ನು ಅವುಗಳಿಗೆ ಮೀಸಲಿಡಲಾಗುತ್ತಿದೆ.
ಆದರೆ ಅವುಗಳಿಗೆ ಹೋಲಿಸಿದರೆ ಭಾರತದ ಸಂಶೋಧನೆಗಳು ಬಜೆಟ್ ಗೆ ಸೀಮಿತವಾಗಿದೆ. ಹಾಗಾಗಿ ಇನ್ನು ಹೆಚ್ಚಿನ ಸಂಶೋಧನೆಗಳು ನಡೆಯಲು ಹೆಚ್ಚಿನ ಆರ್ಥಿಕ ಸಹಕಾರದ ಅಗತ್ಯವಿರುತ್ತದೆ.
6.ಡಾಕಿಂಗ್ ಮತ್ತು ಮಾಡ್ಯುಲರ್:
ಇಲ್ಲಿ ಬಾಹ್ಯಾಕಾಶ ನಿಲ್ದಾಣವನ್ನು ಐದು ಮಾಡ್ಯೂಲ್ಗಳನ್ನು ಇಟ್ಟುಕೊಂಡು ಮಾಡಲಾಗುತ್ತದೆ. ಮೊದಲು ಅವುಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ.
ಮತ್ತು ನಂತರದಲ್ಲಿ ಅವುಗಳನ್ನು ಅಲ್ಲಿಯೇ ಒಂದಕ್ಕೊಂದರಂತೆ ಜೋಡಿಸಲಾಗುತ್ತದೆ (ಡಾಕಿಂಗ್).
ಈ ರೀತಿಯಾಗಿ ಜೋಡಿಸುವಿಕೆ ಮತ್ತು ಅವುಗಳ ನಡುವಿನ ಸಮಗ್ರತೆಯನ್ನು ದೀರ್ಘಕಾಲದವರೆಗೂ ಕಾಪಾಡಿಕೊಳ್ಳಬೇಕಾಗುತ್ತದೆ.
ಹಾಗೂ ಈ ಪ್ರಕ್ರಿಯೆಯು ಸಂಕೀರ್ಣವಾದ ತಂತ್ರಜ್ಞಾನವಾಗಿರುವುದು ಸವಾಲಿನ ವಿಷಯವಾಗಿದೆ.
ಸವಾಲುಗಳನ್ನು ಎದುರಿಸಲು ತೆಗೆದುಕೊಂಡಿರುವ ಮುನ್ನೆಚ್ಚರಿಕೆ ಕ್ರಮಗಳು:
1.ECLSS:
ಇಲ್ಲಿ ಬಾಹ್ಯಾಕಾಶಕ್ಕೆ ತೆಗೆದುಕೊಂಡು ಹೋದಂತಹ ನೀರು ಮತ್ತು ಆಮ್ಲಜನಕಗಳ ಮರುಬಳಕೆ ಮಾಡುವಂತಹ ಸಮಸ್ಯೆ ಇರುವುದು. ಈ ಸಮಸ್ಯೆಯನ್ನು ಬಗೆಹರಿಸಲು ಜೀವ ರಕ್ಷಕ ವ್ಯವಸ್ಥೆಯನ್ನು ಸೃಷ್ಟಿಸಲಾಗಿದೆ.
ಹಾಗೂ ಇದರಲ್ಲಿ ನೀರು ಮತ್ತು ಆಮ್ಲಜನಕವನ್ನು ಶೇಕಡ 90ಕ್ಕಿಂತಲೂ ಹೆಚ್ಚಾಗಿ ಮರುಬಳಕೆ ಮಾಡುವಂತಹ ತಂತ್ರಜ್ಞಾನವನ್ನು ಬಳಸಲಾಗುತ್ತದೆ.
2.ನೆಟ್ರಾ:
ಇಸ್ರೋ ನೆಟ್ರಾ ಎಂಬ ಬಾಹ್ಯಾಕಾಶ ಕಣ್ಗಾವಲು ವ್ಯವಸ್ಥೆಯನ್ನು ತಯಾರಿಸಿದೆ. ಇದು ಬಾಹ್ಯಾಕಾಶದಲ್ಲಿ ಎದುರಾಗುವ ಕಸದ ಭೀತಿಯನ್ನು ಬಗೆಹರಿಸುತ್ತದೆ. ನಿರಂತರವಾಗಿ ಕಸದ ಕುರಿತಾಗಿ ಗಮನಹರಿಸುತ್ತದೆ.
ಒಂದು ವೇಳೆ ಡಿಕ್ಕಿ ಆಗುವ ಸಾಧ್ಯತೆ ಇದ್ದರೆ ಮುನ್ಸೂಚನೆ ನೀಡುತ್ತದೆ. ಮತ್ತು ನಿಲ್ದಾಣದ ಕಕ್ಷೆಯನ್ನು ಸ್ವಯಂ ಚಾಲಿತವಾಗಿ ಬದಲಿಸುತ್ತದೆ.
3. ಆರೋಗ್ಯದ ಸಮಸ್ಯೆ ನಿವಾರಣೆ:
ಈ ನಿಲ್ದಾಣದಲ್ಲಿ ಗೋಡೆಗಳ ಮೇಲೆ ವಿಕಿರಣ ನಿರೋಧಕ ಕವಚಗಳನ್ನು ಅಳವಡಿಸಲಾಗುತ್ತದೆ.
ಮೂಳೆ ಹಾಗೂ ಸ್ನಾಯುಗಳಿಗೆ ಸಂಬಂಧಪಟ್ಟಂತೆ ಜಿಮ್ ಉಪಕರಣಗಳು ಮತ್ತು ಪೌಷ್ಟಿಕ ಆಹಾರವನ್ನು ನೀಡಲಾಗುತ್ತದೆ.
ಈ ಪೌಷ್ಟಿಕ ಆಹಾರಗಳನ್ನು ರಕ್ಷಣಾ ಆಹಾರ ಸಂಶೋಧನಾ ಸಂಸ್ಥೆಯು(DFRL) ತಯಾರಿಸಿರುತ್ತದೆ.
4.ಸ್ಪೇಡೆಕ್ಸ್:
ಇಸ್ರೋ ಸಂಸ್ಥೆಯು ಸ್ಪೇಡೆಕ್ಸ್ ಎಂಬ ತಂತ್ರಜ್ಞಾನವನ್ನು ಯಶಸ್ವಿಯಾಗಿ ಪರಿಶೀಲಿಸಿದೆ. ಇದರ ಮೂಲಕ ಬಾಹ್ಯಾಕಾಶದಲ್ಲಿ ಎರಡು ನೌಕೆಗಳು ಸ್ವಯಂ ಚಾಲಿತವಾಗಿ ಸುರಕ್ಷತೆಯಿಂದ ಒಂದಕ್ಕೊಂದು ಜೋಡಿಸಿಕೊಳ್ಳುತ್ತವೆ.
5.ತುರ್ತು ಪಾರುಗಾಣಿಕಾ ನೌಕೆ:
ಹಾಗೂ ಬಾಹ್ಯಾಕಾಶದ ನಿಲ್ದಾಣಕ್ಕೆ ಯಾವಾಗಲೂ ತುರ್ತು ಪಾರುಗಾಣಿಕ ನೌಕೆಯನ್ನು ಜೋಡಿಸಿರಲಾಗುತ್ತದೆ.
ಒಂದು ವೇಳೆ ಯಾವಾಗಲಾದರೂ ಅಪಘಾತ ಉಂಟಾಗುವ ಸನ್ನಿವೇಶ ಎದುರಾದರೆ, ಈ ನೌಕೆಯ ಮೂಲಕ ಗಗನಯಾನಿಯ ಸುರಕ್ಷಿತವಾಗಿ ಭೂಮಿಗೆ ಮರಳಬಹುದಾಗಿದೆ.
ಹಾಗೂ ಈ ನೌಕೆಯು ಅಗತ್ಯವಿದ್ದಲ್ಲಿ ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಭೂಮಿಗೆ ಮರಳಿಸಲು ನೆರವಾಗುತ್ತದೆ.
ಈ ಯೋಜನೆಯು ಕೇವಲ ಸಂಶೋಧನೆಯಲ್ಲ. ಇದೊಂದು ಹೊಸ ಹೆಜ್ಜೆ, ಜಾಗತಿಕ ಪ್ರದರ್ಶನ ಮತ್ತು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತದ ಸ್ವಾವಲಂಬನೆಯಾಗಿದೆ.
ಕೇವಲ ಯಾನ ನಡೆಸುವುದಷ್ಟೇ ಅಲ್ಲದೆ ECLSS, ನೆಟ್ರಾ, ಮತ್ತು ಸ್ಪೇಡೆಕ್ಸ್ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ಪರೀಕ್ಷೆಯಿಂದ ಸುರಕ್ಷತೆಗೆ ಪುಷ್ಟಿ ನೀಡಲಾಗಿದೆ.
ಹಾಗೂ ಇದು ಮತ್ತೊಂದು ಯಶಸ್ಸು ಎನ್ನಬಹುದಾಗಿದೆ. ಈ ಯೋಜನೆ ಒಂದಷ್ಟು ಪ್ರಶ್ನೆಗಳಿಗೆ ಉತ್ತರವನ್ನು ನೀಡುತ್ತದೆ. ಮತ್ತು ಮುಂದಿನ ಯಾನ ಗಳಿಗೆ ಅಡಿಪಾಯ ಹಾಕಿ ಕೊಡಲಿದೆ.
ಇನ್ನಷ್ಟು ಮಾಹಿತಿಗಾಗಿ: ISRO
ಇದನ್ನು ಓದಿ: ಮಿಷನ್ ಲೈಫ್ ಯೋಜನೆ