Census 2027 India: ಭಾರತದ ಜನಗಣತಿ 2027 ಇದೆ ಏಪ್ರಿಲ್ 1, 2026 ರಿಂದ ಪ್ರಾರಂಭವಾಗಿದೆ. ಇದು ದೇಶದಲ್ಲಿಡೆ ಎರಡು ಹಂತಗಳಲ್ಲಿ ನಡೆಯುತ್ತದೆ.

Census 2027 India:ಏನಿದು ಜನಗಣತಿ 2027?: ದೇಶದ ಜನಸಂಖ್ಯೆ, ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಪತ್ತೆಹಚ್ಚಲು ಜನಗಣತಿಯನ್ನು ನಡೆಸಲಾಗುತ್ತದೆ. ಇದೊಂದು ಬೃಹತ್ ಮಟ್ಟದ ಆಡಳಿತಾತ್ಮಕ ಮತ್ತು ಸಾಂಖ್ಯಿಕ ಪ್ರಕ್ರಿಯೆಯಾಗಿರುತ್ತದೆ.
ಒಟ್ಟಾರೆಯಾಗಿ ಇದು ದೇಶದ 16ನೇ ರಾಷ್ಟ್ರೀಯ ಜನಗಣತಿಯಾಗಿದೆ. ಹಾಗೂ ಸ್ವಾತಂತ್ರ್ಯ ಭಾರತದ 8ನೇ ಜನಗಣತಿ ಆಗಿರುತ್ತದೆ. ಹಾಗೂ ಈ ಒಂದು ಜಾತಿ ಗಣತಿಗೆ ಖರ್ಚಾಗುವ ಅಂದಾಜು ವೆಚ್ಚ ₹11,718.24 ಕೋಟಿ ಆಗಿರುತ್ತದೆ.
ಈ ಜನಗಣತಿಯು 2021 ರಲ್ಲಿ ನಡೆಯಬೇಕಿತ್ತು. ಕೋವಿಡ್ 19 ಕಾರಣದಿಂದಾಗಿ ಮುಂದೂಡಲ್ಪಟ್ಟಿತ್ತು. ಮತ್ತು ಇದೀಗ ಹೊಸ ವೇಳಾಪಟ್ಟಿಯೊಂದಿಗೆ ನಡೆಯುತ್ತಿದೆ.
Census 2027 India:ಜನಗಣತಿ 2027 ನಡೆಯುವ ಹಂತಗಳು:
ಸಂಪೂರ್ಣವಾಗಿ ಡಿಜಿಟಲ್ ವ್ಯವಸ್ಥೆಯ ಮೂಲಕ ನಡೆಯುತ್ತದೆ. ಹಾಗೂ ಎರಡು ಪ್ರಮುಖ ಹಂತಗಳಲ್ಲಿ ನಡೆಯುವಂತಹದ್ದು.
1. ಮನೆಗಳ ಪಟ್ಟಿ ಮತ್ತು ವಸತಿ ಗಣತಿ:
•ಇದು ಏಪ್ರಿಲ್ 2026 ರಿಂದ ಸೆಪ್ಟೆಂಬರ್ 2026ರ ತನಕ ನಡೆಯುತ್ತದೆ.
•ಇಲ್ಲಿ ದೇಶದ ಒಟ್ಟು ಮನೆಗಳ ಸಂಖ್ಯೆ, ಅವುಗಳ ಸ್ಥಿತಿಗತಿ. ಮತ್ತು ನಾಗರಿಕರು ಹೊಂದಿರುವ ಸೌಕರ್ಯಗಳ ಕುರಿತು ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.
•ಇಲ್ಲಿ ಪ್ರತಿಯೊಂದು ಕಟ್ಟಡಕ್ಕೂ ಒಂದು ನಂಬರ್ ನೀಡುವ ಮೂಲಕ ಪಟ್ಟಿ ಮಾಡಲಾಗುತ್ತದೆ.
•ಈ ಮೊದಲ ಹಂತದಲ್ಲಿ ಒಟ್ಟು 33 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇದರಲ್ಲಿ ಮನೆ, ವಿದ್ಯುತ್ ,ಶೌಚಾಲಯ, ನೀರು, ಇಂಟರ್ನೆಟ್ ಇದರ ಪ್ರಶ್ನೆಗಳು ಒಳಗೊಂಡಿರುತ್ತವೆ.
2. ಜನಸಂಖ್ಯೆಯ ಎಣಿಕೆ:
•ಇದು ದೇಶದಾದ್ಯಂತ ಫೆಬ್ರವರಿ 2027ರಲ್ಲಿ ಏಕಕಾಲದಲ್ಲಿ ನಡೆಯುತ್ತದೆ.
•ಇಲ್ಲಿ ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ,ಆರ್ಥಿಕ ಮತ್ತು ಸಾಮಾಜಿಕ ವಿವರಗಳನ್ನು ಪಡೆಯಲಾಗುತ್ತದೆ.
•ವ್ಯಕ್ತಿಯ ಹೆಸರು, ಜಾತಿ, ವಯಸ್ಸು ,ಧರ್ಮ, ಸಾಕ್ಷರತೆಯ ಕುರಿತು ಮಾಹಿತಿ ಸಂಗ್ರಹಣೆ ನಡೆಯುತ್ತದೆ.
•ಈ ಬಾರಿ ಸ್ವತಂತ್ರ ನಂತರದಲ್ಲಿ ಮೊದಲ ಬಾರಿಗೆ ಮುಕ್ತ ಜಾತಿ ಗಣತಿಯ ಡೇಟಾವನ್ನು ಸಂಗ್ರಹಿಸಲಾಗುತ್ತಿದೆ.
Census 2027 India: ಜನಗಣತಿ 2027ರ ಪ್ರಾಮುಖ್ಯತೆಗಳು:
1. ಸಂಪನ್ಮೂಲಗಳನ್ನು ಹಂಚುವುದು:
ಕೇಂದ್ರದಿಂದ ಬರುವ ಆದಾಯ: ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಆದಾಯ ದೊರಕುತ್ತದೆ. ಇದು ರಾಜ್ಯ ಸರ್ಕಾರಗಳ ಅಭಿವೃದ್ಧಿಗೆ ನೆರವಾಗುವಂತದ್ದು.
ಇಲ್ಲಿ ರಾಜ್ಯಗಳ ಜನಸಂಖ್ಯೆಯ ಆಧಾರದ ಮೇಲೆ ಹಣವನ್ನು ನೀಡಲಾಗುತ್ತದೆ. ಹಾಗೂ ಜನಗಣತಿಯಿಂದ ರಾಜ್ಯಗಳ ಜನಸಂಖ್ಯೆ ಸುಲಭವಾಗಿ ತಿಳಿಯುವಂತದ್ದು.
ಹಿಂದುಳಿದ ಪ್ರದೇಶಗಳಿಗೆ ಸಹಕಾರ: ಜಾಗತಿಯ ಮೂಲಕ ಹಿಂದುಳಿದ ಪ್ರದೇಶಗಳನ್ನು ಪತ್ತೆಹಚ್ಚಬಹುದು.
ಹಾಗೂ ಅಲ್ಲಿಗೆ ಅಗತ್ಯವಿರುವಂತಹ ಸೌಕರ್ಯಗಳ ಕುರಿತಾಗಿ ಮಾಹಿತಿ ದೊರಕುತ್ತದೆ. ಈ ಮೂಲಕ ಹಿಂದುಳಿದ ಪ್ರದೇಶಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಹಾಯವಾಗುತ್ತದೆ.
2. ಸರ್ಕಾರಿ ಯೋಜನೆಗಳನ್ನು ರೂಪಿಸುವುದು:
ಸರ್ಕಾರಿ ಮೂಲ ಸೌಕರ್ಯ: ಈ ಜನಗಣತಿ ಮೂಲಕ ಪ್ರತಿ ಗ್ರಾಮದ ಕಟ್ಟಡಗಳ ಸಂಖ್ಯೆ ದೊರೆಯುತ್ತದೆ. ಹಾಗೂ ಅದಕ್ಕೆ ತಕ್ಕನಾಗಿ ಅಲ್ಲಿರುವಂತಹ ಸೌಕರ್ಯಗಳ ಕುರಿತಾಗಿ ಮಾಹಿತಿ ಸಿಗುತ್ತದೆ.
ಈ ಮೂಲಕ ಅಲ್ಲಿಗೆ ಅಗತ್ಯವಿರುವ ರಸ್ತೆ, ಶಾಲೆಗಳು ಮತ್ತು ಆಸ್ಪತ್ರೆಗಳನ್ನು ನಿರ್ಮಿಸಬಹುದು. ಹಾಗೂ ಯಾವ ಪ್ರದೇಶದಲ್ಲಿ ನಿರ್ಮಿಸಬಹುದು ಎಂಬ ಖಚಿತ ಮಾಹಿತಿಯು ಕೂಡ ಜನಗಣತಿ ಮೂಲಕ ದೊರೆಯುತ್ತದೆ.
ಉಚಿತ ವಿತರಣೆಗಳು: ಪ್ರಸ್ತುತ ಪಡಿತರ ವ್ಯವಸ್ಥೆ, ವಿದ್ಯಾರ್ಥಿ ವೇತನ ಇನ್ನಿತರ ವ್ಯವಸ್ಥೆಗಳಿವೆ. ಇವುಗಳನ್ನು ಯಾರಿಗೆ ತಲುಪಿಸಬೇಕು. ಹಾಗೂ ಯಾವ ವ್ಯಕ್ತಿ ಇದಕ್ಕೆ ಅರ್ಹರು ಎಂಬ ಡೇಟಾ ಜನಗಣತಿ ಮೂಲಕ ದೊರಕುತ್ತದೆ.
ಇಲ್ಲಿ ಅರ್ಹ ಪಲಾನುಭವಿಗಳಿಗೆ ನ್ಯಾಯ ದೊರಕುತ್ತದೆ. ಮತ್ತು ಸರ್ಕಾರದ ಯೋಜನೆಗಳು ಪೋಲಾಗುವುದು ತಡೆಯಬಹುದು.
3. ಕೈಗಾರಿಕೆ ಮತ್ತು ಉದ್ಯೋಗ:
ಕೈಗಾರಿಕೆ: ಈ ಪ್ರಕ್ರಿಯೆಗೆ ಸಾಮಾಜಿಕ ಮತ್ತು ಆರ್ಥಿಕ ಡೇಟಾ ಸಹಕಾರ ನೀಡುತ್ತದೆ. ಇಲ್ಲಿ ಯಾವುದರ ಸ್ಥಾಪನೆ ಎಲ್ಲಿ ಮಾಡಬೇಕು. ಮತ್ತು ಎಲ್ಲಿ ಅದರ ಅಗತ್ಯವಿದೆ ಹಾಗೂ ಎಲ್ಲಿ ಜನಸಂದಣಿ ಇದೆ ಎಂಬುದನ್ನು ತಿಳಿಯಬಹುದು.
ಖಾಸಗಿ ಕಂಪನಿ, ಕಾರ್ಖಾನೆಗಳು, ಸೂಪರ್ ಮಾರ್ಕೆಟ್ ಗಳು, ಮತ್ತು ಕಚೇರಿಗಳನ್ನು ಜನಗಣತಿಯ ಮೂಲಕ ಸರಿಯಾದ ಸೂಕ್ತ ಸ್ಥಳದಲ್ಲಿ ಸ್ಥಾಪಿಸಬಹುದಾಗಿದೆ.
ಉದ್ಯೋಗಗಳ ಲಭಿಸುವಿಕೆ: ಹಾಗೂ ಹೆಚ್ಚಿನ ಕೈಗಾರಿಕೆಗಳು ಮತ್ತು ಇತರ ಕಟ್ಟಡಗಳ ಸ್ಥಾಪನೆಯಿಂದಾಗಿ ಹೆಚ್ಚಿನ ಉದ್ಯೋಗವಕಾಶಗಳು ಹರಿದು ಬರುತ್ತವೆ. ನಿರುದ್ಯೋಗದ ಸಮಸ್ಯೆಗಳನ್ನು ತಪ್ಪಿಸಬಹುದಾಗಿದೆ.
4. ರಾಜಕೀಯ ಪ್ರಾತಿನಿಧ್ಯಕ್ಕೆ ಸಹಕಾರ:
ಕ್ಷೇತ್ರಗಳ ಮರುವಿಂಗಡಣೆ: ಜನಗಣತಿ ಮೂಲಕ ಪ್ರತಿಯೊಂದರ ನಿಖರವಾದ ಮಾಹಿತಿ ದೊರಕುತ್ತದೆ. ಹಾಗೂ ಪ್ರಸ್ತುತ ಇರುವಂತಹ ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳ ಸಂಪೂರ್ಣ ಮಾಹಿತಿ ತಿಳಿಯಬಹುದು.
ಅಲ್ಲಿನ ಜನಸಂಖ್ಯೆ ಮತ್ತು ಗಡಿ ಪ್ರದೇಶಗಳ ಕುರಿತಾಗಿ ವಿವರಗಳನ್ನು ಪಡೆಯಬಹುದಾಗಿದೆ. ಹಾಗೂ ಈ ಎಲ್ಲಾ ಆಧಾರದ ಮೇಲೆ ಅವುಗಳ ಮರು ವಿಂಗಡಣೆಯನ್ನು ಮಾಡಬಹುದಾಗಿದೆ.
ಹಾಗೂ ಮರುಲಿಂಗಡಣೆಯು ಆ ಪ್ರದೇಶಗಳ ಉನ್ನತ ಅಭಿವೃದ್ಧಿಗೆ ಸಹಕಾರ ನೀಡಲಿದೆ.
ಮೀಸಲಾತಿ: ಸಂಸತ್ತಿನಲ್ಲಿ ಮಹಿಳೆಯರಿಗೆ 33 ಶೇಕಡ ಮೀಸಲಾತಿ ನೀಡಬೇಕು ಎಂಬ ಕಾಯ್ದೆ ಮುಂದೆ ಬಾರಿಗೆ ಬರುತ್ತದೆ. ಇದು ನಾರಿ ಶಕ್ತಿ ವಂದನ್ ಅಧಿನಿಯಮದಡಿ ಬರುವಂತದ್ದು.
ಹಾಗೂ ಈ ನಿಯಮವು ಈ ಜನಗಣತಿಯ ನಂತರವೇ ಜಾರಿಗೆ ಬರುತ್ತದೆ. ಇದರಿಂದ ಮಹಿಳೆಯರ ಸ್ಪಷ್ಟ ಸಂಖ್ಯೆಗಳು ದೊರೆಯುತ್ತವೆ. ಮತ್ತು ಮುಂದಿನ ಮೀಸಲಾತಿಯನ್ನು ನೀಡಲು ಸಹಕಾರವಾಗುತ್ತದೆ.
5. ಸಾಮಾಜಿಕ ಮತ್ತು ಜಾತಿಯಲ್ಲಿ ಸಮಾನತೆ:
ಹಿಂದುಳಿದ ಜಾತಿಗಳು: ಈ ಬಾರಿ ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ದೇಶವ್ಯಾಪಿ ಸಮಗ್ರ ಜಾತಿ ಗಣತಿಯನ್ನು ಜನಗಣತಿ ಎರಡನೇ ಹಂತದಲ್ಲಿ ನಡೆಸಲಾಗುತ್ತದೆ.
ಹಾಗೂ ಈ ಜನಗಣತಿ ಮೂಲಕ ಪ್ರತಿ ಜಾತಿಯ ಪ್ರತಿ ಮಾಹಿತಿಗಳು ದೊರೆಯುತ್ತವೆ.
ಇಲ್ಲಿ ಯಾವ ಜಾತಿ ನಿಜವಾಗಿಯೂ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿದೆ. ಹಾಗೆ ಶೈಕ್ಷಣಿಕವಾಗಿ ಹಿಂದುಳಿದಿದೆ. ಎಂಬುದರ ನಿಖರ ಮಾಹಿತಿ ದೊರೆಯುತ್ತದೆ.
ಈ ಮೂಲಕ ಆಯಾ ಮಾಹಿತಿಗಳಿಗೆ ತಕ್ಕಂತೆ ಯೋಜನೆಗಳನ್ನು ಅಥವಾ ಕ್ರಮಗಳನ್ನು ತೆಗೆದುಕೊಳ್ಳುವುದು ಸಾಧ್ಯವಾಗುತ್ತದೆ.
ಮೀಸಲಾತಿಯ ಬದಲಾವಣೆ: ಇದರಿಂದಾಗಿ ಪ್ರತಿಯೊಂದು ಜಾತಿಯ ನಿಖರವಾದ ಮಾಹಿತಿ ದೊರೆಯುತ್ತದೆ. ಹಾಗೂ ಈ ಮೂಲಕ ಮೀಸಲಾತಿಯ ವಿಚಾರವನ್ನು ಇನ್ನಷ್ಟು ಪರಿಣಾಮಕಾರಿಯನ್ನಾಗಿ ಮಾಡಬಹುದಾಗಿದೆ.
ಇಲ್ಲಿ ಇದುವರೆಗೂ ಅವಕಾಶಗಳು ಸಿಗದ ಜಾತಿಯವರಿಗೆ ಅವಕಾಶಗಳು ದೊರೆಯುವ ಸಾಧ್ಯತೆ ಇರುತ್ತದೆ. ಇದರಿಂದ ಸಮಾನತೆಯ ಸೃಷ್ಟಿ ಮಾಡಬಹುದಾಗಿದೆ.
6. ಡಿಜಿಟಲೀಕರಣ ಮತ್ತು ಆಧುನಿಕರಣ:
ಕಾಗದರಹಿತ ಜನಗಣತಿ: ಈ ಬಾರಿ ಜನಗಣತಿಯನ್ನು ಡಿಜಿಟಲ್ ವ್ಯವಸ್ಥೆ ಮೂಲಕ ಮಾಡಲಾಗುತ್ತದೆ. ಇದರಿಂದ ಕಾಗದದ ಬಳಕೆಯನ್ನು ತಪ್ಪಿಸಬಹುದು.
ಈ ಮೂಲಕ ತ್ಯಾಜ್ಯ ಉಂಟಾಗುವುದಿಲ್ಲ.
ಹಾಗೂ ಪರಿಸರ ಮಾಲಿನ್ಯವು ಉಂಟಾಗುವುದಿಲ್ಲ. ಹಾಗೂ ಕಾಗದದ ಮೂಲಕ ಹಲವು ತಪ್ಪುಗಳಾಗುವ ಸಾಧ್ಯತೆಗಳಿತ್ತು. ಮತ್ತು ತಪ್ಪುಗಳಾಗುತ್ತಿದ್ದವು.
ಇದೀಗ ಮಾನವೀಯ ದೋಷಗಳನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಮತ್ತು ಈ ಮೂಲಕ ನಿಖರವಾದ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ.
ಪಾರದರ್ಶಕತೆ: ಇಲ್ಲಿ ಜನಗಣತಿ ಮಾಡಲು ಮೊಬೈಲ್ ಆಪ್ ಗಳು ಮತ್ತು ಆನ್ಲೈನ್ ಪೋರ್ಟಲ್ ಗಳನ್ನು ಬಳಸಲಾಗುತ್ತದೆ. ಈ ಮೂಲಕ ಜನಗಣತಿಯ ವಿಳಂಬವನ್ನು ತಪ್ಪಿಸಬಹುದು.
ಇದರಿಂದಾಗಿ ಅತಿ ವೇಗವಾಗಿ ಜನಗಣತಿ ಮಾಡಲು ಸಾಧ್ಯವಾಗುತ್ತದೆ. ಮತ್ತು ಪಾರದರ್ಶಕತೆಯನ್ನು ಹೊಂದಿರುತ್ತದೆ.
ಜನಗಣತಿ 2027 ಮಾಡುವುದಕ್ಕೆ ಅಡ್ಡಿಪಡಿಸುವ ಸವಾಲುಗಳು:
1. ಸಿಬ್ಬಂದಿಗಳ ನಿರ್ವಹಣೆ ಮತ್ತು ತರಬೇತಿ:
ಹೆಚ್ಚಿನ ಸಿಬ್ಬಂದಿಗಳು: ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿದೆ. ಈ ಜನಸಂಖ್ಯೆಯನ್ನು ಅಳೆದು ತೂಗಲು ಬಹಳ ಕಠಿಣವೆನಿಸುತ್ತದೆ.
ಹಾಗಾಗಿ ಇದರ ಜನಗಣತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿಗಳ ಅಗತ್ಯವಿದೆ.
ಈ ಕಾರಣದಿಂದ ದೇಶಾದ್ಯಂತ ಸುಮಾರು 30 ಲಕ್ಷಕ್ಕೂ ಹೆಚ್ಚು ಸಿಬ್ಬಂದಿಗಳನ್ನು ನೇಮಕಗೊಳಿಸಲಾಗಿದೆ. ಇವರು ಸರ್ಕಾರಿ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗಕ್ಕೆ ಸಂಬಂಧಪಟ್ಟವರಾಗಿರುತ್ತಾರೆ.
ಇವರುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸುವುದು. ಮತ್ತು ಶಾಲೆಗಳಲ್ಲು ಇವರನ್ನು ಸರಿದೂಗಿಸುವಿಕೆ ಕಠಿಣ ಸವಾಲಾಗಿದೆ.
ಹೊಸ ವ್ಯವಸ್ಥೆಯ ತರಬೇತಿ: ಈ ಜನಗಣತಿಯಲ್ಲಿ ಡಿಜಿಟಲೀಕರಣಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಮೊದಲೆಲ್ಲ ಸಿಬ್ಬಂದಿಗಳು ಕಾಗದ ಮೂಲಕ ಗಣತಿಯನ್ನು ಮಾಡುತ್ತಿದ್ದರು.
ಹಾಗೂ ಈ ಬದಲಾವಣೆಯು ಹೊಂದಿಕೊಳ್ಳುವುದಕ್ಕೆ ಕಷ್ಟವೆನಿಸುತ್ತದೆ.
ಪ್ರಸ್ತುತ ಸಿಬ್ಬಂದಿ ವರ್ಗದವರಿಗೆ ಆಪ್ ಗಳನ್ನು ಬಳಕೆ ಮಾಡಲು ತರಬೇತಿ ನೀಡಬೇಕಾಗುತ್ತದೆ. ಹಾಗೂ ಇದಕ್ಕೆ ಅಗತ್ಯವಿರುವಷ್ಟು ಸಮಯ ಸರ್ಕಾರದ ಬಳಿಯಲ್ಲಿ ಇಲ್ಲ.
2. ತಾಂತ್ರಿಕ ಸವಾಲುಗಳು:
ಇಂಟರ್ನೆಟ್ ಸಮಸ್ಯೆ: ಈ ಒಂದು ಡಿಜಿಟಲ್ ವ್ಯವಸ್ಥೆಯನ್ನು ಬಳಸಲು ಇಂಟರ್ನೆಟ್ ಸಂಪರ್ಕದ ಅಗತ್ಯವಿದೆ. ಆದರೆ ಭಾರತದಲ್ಲಿ ಎಲ್ಲಾ ಭಾಗವೂ ಇಂಟರ್ನೆಟ್ ಸಂಪರ್ಕವನ್ನು ಹೊಂದಿಲ್ಲ.
ತೀರಾ ಹಳ್ಳಿ ಪ್ರದೇಶಗಳಿಗೆ ಹೋದಾಗ ಅಥವಾ ಗುಡ್ಡ ಕಾಡು ಪ್ರದೇಶಗಳಲ್ಲಿ ಇಂಟರ್ನೆಟ್ ಸಂಪರ್ಕ ಇಲ್ಲದಿರುವುದು ಸವಾಲಾಗಿದೆ.
ಡಿಜಿಟಲ್ ಜ್ಞಾನದ ಕೊರತೆ: ಈ ಒಂದು ಜನಗಣತಿಯಲ್ಲಿ ನಾಗರಿಕರು ತಾವಾಗಿಯೇ ತಮ್ಮ ಮಾಹಿತಿಗಳನ್ನು ದಾಖಲಿಸಬಹುದು.
ಈ ಮೂಲಕ ಗಣತಿಯು ಅತಿ ಬೇಗನೆ ಮುಗಿಯುವಂಥದ್ದು.
ಆದರೆ ಪ್ರಸ್ತುತ ಎಲ್ಲಾ ಸಾರ್ವಜನಿಕರಿಗೂ ಡಿಜಿಟಲ್ ವ್ಯವಸ್ಥೆಯ ಜ್ಞಾನ ಇರುವುದಿಲ್ಲ. ಇದರಿಂದಾಗಿ ಜನಗಣತಿಯು ತಡವಾಗಬಹುದು.
ಸೈಬರ್ ಸುರಕ್ಷತೆ: ಇಲ್ಲಿ ಕೋಟ್ಯಾಂತರ ಜನರ ಡೇಟ್ ಮೊಬೈಲ್ ಗಳ ಮೂಲಕ ಅಪ್ಲೋಡ್ ಆಗುತ್ತದೆ. ಅಥವಾ ಡಿಜಿಟಲ್ ವ್ಯವಸ್ಥೆಯ ಮೂಲಕ ದಾಖಲಾಗುತ್ತದೆ.
ಹಾಗೂ ಈ ಸಮಯದಲ್ಲಿ ಡೇಟಾ ಸೋರಿಕೆ ಆಗುವ ಸಾಧ್ಯತೆ ಇರುತ್ತದೆ. ಅಥವಾ ಸೈಬರ್ ದಾಳಿಗಳು ನಡೆಯಬಹುದು ಇದರಿಂದ ಸಾರ್ವಜನಿಕರ ಮಾಹಿತಿಗಳು ಸೋರಿಕೆಯಾಗಬಹುದು.
ಮತ್ತು ಆ ಮಾಹಿತಿಗಳ ಮೂಲಕ ಹಲವು ಅಕ್ರಮಗಳು ನಡೆಯುವ ಸಾಧ್ಯತೆ ಇರುತ್ತದೆ.
3. ಸಂಕೀರ್ಣ ಪರಿಸ್ಥಿತಿ:
ಹೆಚ್ಚಿನ ಸಂಖ್ಯೆಯ ಜಾತಿಗಳು: ಭಾರತದಲ್ಲಿ ಸಾವಿರಾರು ಸಂಖ್ಯೆಗಳಲ್ಲಿ ಜಾತಿ ಮತ್ತು ಉಪಜಾತಿಗಳಿವೆ. ಪ್ರಾದೇಶಿಕ ಭಾಗಗಳಿಗೆ ಹೋಗುತ್ತಾ ಅವುಗಳ ಸಂಖ್ಯೆ ಹೆಚ್ಚುವ ಸಾಧ್ಯತೆ ಇರುತ್ತದೆ.
ಮತ್ತು ಅವುಗಳನ್ನು ಜನರು ವಿವಿಧ ರೀತಿಯಲ್ಲಿ ಉಚ್ಚಾರಣೆ ಮಾಡುತ್ತಾರೆ. ಮತ್ತು ವಿವಿಧ ರೀತಿಯಲ್ಲಿ ಬರೆಯುತ್ತಾರೆ.
ಇದರಿಂದಾಗಿ ಅವುಗಳನ್ನು ಸರಿಯಾದ ರೀತಿಯಲ್ಲಿ ವಿಂಗಡನೆ ಮಾಡುವುದು ಕಷ್ಟವಾಗಬಹುದು. ಹೀಗಾಗಿ ಅವುಗಳ ಮಾಹಿತಿಯು ನಿಖರವಾಗಿ ಸಿಗದೇ ಹೋಗುವ ಸಾಧ್ಯತೆ ಇರುತ್ತದೆ.
ರಾಜಕೀಯ ಸೂಕ್ಷ್ಮತೆಗಳು: ಜಾತಿ ಆಧಾರಿತ ದತ್ತಾಂಶಗಳನ್ನು ಸಂಗ್ರಹಿಸುವುದು ಹಲವು ವಿವಾದಗಳಿಗೆ ಎಡೆ ಮಾಡಿಕೊಡಬಹುದು.
ಇದರಿಂದ ರಾಜಕೀಯ ವಿವಾದಗಳು ಅಥವಾ ಸಾಮಾಜಿಕ ಉದ್ವಿಗ್ನತೆಗಳು ಉಂಟಾಗಬಹುದು.
ಈ ಯಾವುದು ಆಗದಂತೆ ದತ್ತಾಂಶಗಳನ್ನು ಸಂಗ್ರಹಿಸಿ ಗಣತಿ ನಡೆಸುವುದು ಸವಾಲಿನ ವಿಷಯವಾಗಿದೆ.
4. ವಾತಾವರಣದ ಅಡೆತಡೆಗಳು:
ಕಠಿಣ ಪ್ರದೇಶಗಳು: ಭಾರತದ ಕೆಲವು ಭಾಗಗಳಲ್ಲಿ ವಿಪರೀತ ಹಿಮಪಾತ ಮತ್ತು ಅನೇಕ ಭೌಗೋಳಿಕ ಸವಾಲುಗಳಿವೆ. ಲಡಾಕ್, ಹಿಮಾಚಲ ಪ್ರದೇಶ ಮತ್ತು ಈಶಾನ್ಯ ಭಾರತದ ಹಲವು ಭಾಗಗಳು ಈ ಸಮಸ್ಯೆಗಳಿಂದ ಕೂಡಿವೆ.
ಈ ಸಮಸ್ಯೆಗಳನ್ನು ಭೇದಿಸಿಕೊಂಡು ಅಲ್ಲಿನ ಹವಾಮಾನಕ್ಕೆ ಹೊಂದಿಕೊಂಡು ಜಾತಿ ಗಣತಿಯನ್ನು ನಡೆಸಬೇಕಾಗುತ್ತದೆ. ಹಾಗೂ ಇದು ಗಣತಿ ಮಾಡುವವರ ಆರೋಗ್ಯದ ಮೇಲೂ ಕೂಡ ಪರಿಣಾಮ ಬೀರಬಹುದು.
ವಲಸೆಗಳು: ಜನರು ಕೆಲಸದ ನಿಮಿತ್ತ ಬೇರೆ ಊರುಗಳಿಗೆ ಪ್ರಯಾಣ ಮಾಡುತ್ತಿರುತ್ತಾರೆ. ನಗರ ಪ್ರದೇಶದಲ್ಲಿ ಕಟ್ಟಡ ಕಾರ್ಮಿಕರು ಹಾಗೂ ಇತರ ಕಾರ್ಮಿಕರುಗಳು ನಿರಂತರವಾಗಿ ಸ್ಥಳಗಳನ್ನು ಬದಲಾಯಿಸುತ್ತಾರೆ.
ಹಾಗೂ ಹಲವರು ಬೇರೆ ರಾಜ್ಯದ ತೋಟಗಳಿಗೆ ಕೆಲಸಕ್ಕೆ ಹೋಗುವುದುಂಟು.
ಇದರಿಂದಾಗಿ ಅವರುಗಳ ಗಣತಿ ಮಾಡುವುದು ಕಷ್ಟವಾಗಬಹುದು. ಹಾಗೂ ಈ ಮೂಲಕ ಎಣಿಕೆಯು ನಿಖರವಾಗಿರಲು ಸಾಧ್ಯವಿಲ್ಲ.
5. ಸಾರ್ವಜನಿಕರಲ್ಲಿ ಜಾಗೃತಿಯ ಕೊರತೆ:
ಕೆಲವೊಮ್ಮೆ ಸಾರ್ವಜನಿಕರು ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡುವ ಸಾಧ್ಯತೆ ಇರುತ್ತದೆ. ಹಲವರು ತಮ್ಮ ಆಸ್ತಿ ಮತ್ತು ಆದಾಯದ ಕುರಿತು ನಿಖರವಾದ ಮಾಹಿತಿಯನ್ನು ಕೊಡಲು ಹಿಂಜರಿಯುತ್ತಾರೆ.
ಇದರಿಂದ ಅವರ ಕುರಿತಾಗಿ ಮಾಹಿತಿಗಳನ್ನು ಸಂಗ್ರಹಿಸುವಲ್ಲಿ ಅನೇಕ ತಪ್ಪುಗಳಾಗಬಹುದು.
ಹಾಗೂ ಇದಕ್ಕೆಲ್ಲ ಕಾರಣ ಸಾರ್ವಜನಿಕರಲ್ಲಿ ಇರುವಂತಹ ಮಾಹಿತಿಯ ಕೊರತೆ.
ಹಾಗಾಗಿ ಸಾರ್ವಜನಿಕರಲ್ಲಿ ನಿರಂತರವಾಗಿ ಜಾಗೃತಿಯನ್ನು ಮೂಡಿಸುವುದು ಸವಾಲಿನ ವಿಷಯವಾಗಿದೆ.
ಮೊದಲ ಬಾರಿಗೆ ಭಾರತವು ಜನಗಣತಿಯಲ್ಲಿ ಡಿಜಿಟಲೀಕರಣವನ್ನು ಬಳಸಿಕೊಂಡಿದೆ. ಇದು ಕೇವಲ ಜನಗಣತಿಯಾಗದೆ ಮುಂದಿನ ಮಹತ್ವದ ಯೋಜನೆಗಳಿಗೆ ಅಡಿಪಾಯವಾಗಿದೆ.
ದಶಕಗಳನ್ನು ನಂತರ ಜರುಗುತ್ತಿರುವ ಜಾತಿ ಗಣತಿಯು ಸಾಮಾಜಿಕವಾಗಿ ಆರ್ಥಿಕವಾಗಿ ಜನರ ನಡುವೆ ಸಮಾನತೆ ತರಲು ದಾರಿ ಮಾಡಿಕೊಡುತ್ತದೆ.
ನವ ಭಾರತವನ್ನು ಸೃಷ್ಟಿಸುವಲ್ಲಿ ಇದೊಂದು ಐತಿಹಾಸಿಕ ಹೆಜ್ಜೆ ಎನ್ನಬಹುದಾಗಿದೆ.
ಇನ್ನಷ್ಟು ಮಾಹಿತಿಗಾಗಿ: census of India
ಇದನ್ನು ಓದಿ: ಭಾರತೀಯ ಅಂತರಿಕ್ಷ ನಿಲ್ದಾಣ