Rain Forecast:ಆಗಸ್ಟ್ 17 ಮತ್ತು 18ರಂದು ರಾಜ್ಯಾದ್ಯಂತ ಮತ್ತೆ ಮಳೆ ಆಗುವ ಮುನ್ಸೂಚನೆ ಇದೆ.

Rain Forecast:ವಾಯುವ್ಯ ಬಂಗಾಳಕೊಲ್ಲಿ ಹಾಗೂ ಪಶ್ಚಿಮ ಬಂಗಾಳ-ಉತ್ತರ ಒಡಿಶಾ ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದೆ.
ಈ ಕಾರಣದಿಂದ ಮತ್ತೆ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚಿದೆ.
ವಾಯುಭಾರತ ಕುಸಿತದಿಂದಾಗಿ ಆಗಸ್ಟ್ 17 ಮತ್ತು 18 ರಂದು ರಾಜ್ಯಾದ್ಯಂತ ಮಳೆಯಾಗುವ ಸೂಚನೆ ಇದೆ.
ಈ ನಿಟ್ಟಿನಲ್ಲಿ ಬಲವಾದ ಗಾಳಿ ಗುಡುಗು ಮಿಂಚು ಹೆಚ್ಚಿರುವ ಸಾಧ್ಯತೆ ಇರುತ್ತದೆ. ಹೀಗಾಗಿ ಇಂತಹ ಸಮಯದಲ್ಲಿ ತೆರೆದ ಪ್ರದೇಶಗಳಲ್ಲಿ ನಿಲ್ಲದಂತೆ ಅವಮಾನ ಇಲಾಖೆಯು ಎಚ್ಚರಿಸಿದೆ.
ಎಲ್ಲೆಲ್ಲಿ ಮಳೆ ಆಗಲಿದೆ?
•ಸಾಧಾರಣ ಮಳೆ: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ
•ಉತ್ತರ ಒಳನಾಡು ಪ್ರದೇಶಗಳು: ಬೆಳಗಾವಿ ಹಾವೇರಿ, ಕೊಪ್ಪಳ, ಗದಗ, ಧಾರವಾಡ, ರಾಯಚೂರು, ಬೀದರ್,, ಕಲ್ಬುರ್ಗಿ ಬಾಗಲಕೋಟೆ, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.
•ದಕ್ಷಿಣ ಒಳನಾಡು ಪ್ರದೇಶಗಳು: ಶಿವಮೊಗ್ಗ ,ಚಿಕ್ಕಮಗಳೂರು, ಹಾಸನ, ಕೊಡಗು ,ಮಂಡ್ಯ ,ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಹಗುರವಾದ ಮಳೆ ಆಗಲಿದೆ.
ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ದಾವಣಗೆರೆ, ಕೋಲಾರ, ಚಿತ್ರದುರ್ಗ ,ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಆಗಲಿದೆ.
ತುರ್ತು ಸಂದರ್ಭದಲ್ಲಿ ಸುರಕ್ಷಿತ ಪ್ರದೇಶಗಳಲ್ಲಿ ಆಶ್ರಯ ಪಡೆಯಲು ತಿಳಿಸಲಾಗಿದೆ. ಮತ್ತು ಹವಮಾನ ಇಲಾಖೆಯ ಅಧಿಕೃತ ಸೂಚನೆಗಳನ್ನು ಪಾಲಿಸಲು ತಿಳಿಸಲಾಗಿದೆ.
ನೈರುತ್ಯ ಮುಂಗಾರು ಭಾನುವಾರ ಸಂಜೆಯಿಂದ ಕರಾವಳಿ ಭಾಗದಲ್ಲಿ ಸಾಮಾನ್ಯವಾಗಿತ್ತು. ಮತ್ತು ಒಳನಾಡು ಪ್ರದೇಶಗಳಲ್ಲಿ ದುರ್ಬಲವಾದ ಮಟ್ಟಿಗೆ ಇತ್ತು.
ಕರಾವಳಿ ಕರ್ನಾಟಕದ ಹಲವು ಭಾಗಗಳು ಮತ್ತು ಒಳನಾಡಿನ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗಿತ್ತು. ಹಾಗೂ ಆಗುಂಬೆಯಲ್ಲೂ ಕೂಡ ಮಳೆ ಆಗಿರುವುದರ ಕುರಿತಾಗಿ ಹವಾಮಾನ ಇಲಾಖೆಯು ತಿಳಿಸಿದೆ.
ಇನ್ನಷ್ಟು ಮಾಹಿತಿಗಾಗಿ: IMD
ಇದನ್ನು ಓದಿ: ಕಾಫಿ, ಟೀ: ಆರೋಗ್ಯಕ್ಕೆ ಉಪಕಾರಿ