Chikkamagaluru schools: ಚಿಕ್ಕಮಗಳೂರಲ್ಲಿ 7 ಸರ್ಕಾರಿ ಶಾಲೆಗಳಿಗೆ ಬೀಗ

Spread the love

Chikkamagaluru schools: ಬರು ಬರುತ್ತಾ ಸರ್ಕಾರಿ ಶಾಲೆಗಳ ಸ್ಥಿತಿ ಅಧೋಗತಿಗೆ ತಲುಪುತ್ತಿದೆ. ಶಿಕ್ಷಕರ ಕೊರತೆ ಒಂದು ಕಾರಣವಾದರೆ, ಇನ್ನೊಂದು ಕಾರಣ ಮಕ್ಕಳ ಕೊರತೆಯಾಗಿದೆ. ಹೀಗಾಗಿ ಹಲವು ಶಾಲೆಗಳು ಮುಚ್ಚುವ ಪರಿಸ್ಥಿತಿಯನ್ನು ತಲುಪಿವೆ.

Chikkamagaluru schools
Chikkamagaluru schools

Chikkamagaluru schools: ಹೌದು, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ 7 ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ವಿದ್ಯಾರ್ಥಿಗಳ ದಾಖಲಾತಿ ಇಲ್ಲದ ಕಾರಣ ಮುಚ್ಚಿರುವಂತದ್ದು.

 

Chikkamagaluru schools:ಸರ್ಕಾರಿ ಶಾಲೆಯ ದಾಖಲಾತಿಗಳನ್ನು ಉಳಿಸಿಕೊಳ್ಳಲು ಸರ್ಕಾರವು ದಾಖಲಾತಿ ಆಂದೋಲನವನ್ನು ಮಾಡಿತ್ತು. 2025 ರ ನವೆಂಬರ್ ತಿಂಗಳಲ್ಲಿ ಮನೆ ಮನೆಗೆ ಭೇಟಿ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಆದರೂ ಕೂಡ ನಿರೀಕ್ಷಿತ ಪ್ರಮಾಣದಲ್ಲಿ ದಾಖಲಾತಿ ಇಲ್ಲದಿರುವುದು ಶಾಲೆಗಳ ಮುಚ್ಚುವಿಕೆಗೆ ಕಾರಣವಾಗುತ್ತಿದೆ.

ಕಡಿಮೆ ದಾಖಲಾತಿಯಿಂದ ಮುಚ್ಚಲ್ಪಟ್ಟ ಶಾಲೆಗಳು:

•ಸರ್ಕಾರಿ ಕಿರಿಯ ತಮಿಳು ಪ್ರಾಥಮಿಕ ಶಾಲೆ, ಲಕ್ಕವಳ್ಳಿ

•ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಬಂಡೆ ಕಾಲೋನಿ

•ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಪುಂಡನಹಳ್ಳಿ

•ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ,ಬಿ.ಸಿದ್ದರಹಳ್ಳಿ

 

ಬೀಗ ಹಾಕಲಾಗಿರುವ ಶಾಲೆಗಳು:

•ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕುರುಬರಹಳ್ಳಿ, ಅಜ್ಜಂಪುರ ತಾಲೂಕು

•ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ದೊಡ್ಡಬೋಕಿಕೆರೆ

•ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ,ಕಲೇನಹಳ್ಳಿ

 

ಪ್ರಸ್ತುತ ತರೀಕೆರೆ ತಾಲೂಕಿನ 45 ಶಾಲೆಗಳ ಅಭಿವೃದ್ಧಿಗಾಗಿ ಅಂದಾಜು ಪಟ್ಟಿಯನ್ನು ಸಲ್ಲಿಸಿದ್ದಾರೆ. ಹಾಗೂ ಅಜ್ಜಂಪುರ ತಾಲೂಕಿನಲ್ಲಿ 18 ಶಾಲೆಗಳ ದುರಸ್ತಿ ಕಾಮಗಾರಿ ಅಭಿವೃದ್ಧಿಯ ಅಗತ್ಯವಿದೆ. ಮತ್ತು ಅದಕ್ಕೂ ಕೂಡ ಅಂದಾಜು ಪಟ್ಟಿಯನ್ನು ಸಲ್ಲಿಸಲಾಗಿದೆ.

ಹಾಗೂ ಪೂರ್ಣವಾಗಿ ಶಿಥಿಲಗೊಂಡಿರುವ 18 ಶಾಲೆಗಳನ್ನು ನೆಲಸಮಗೊಳಿಸಬೇಕೆಂದು ಮನವಿಗಳು ಬಂದಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ಸರ್ಕಾರವು ಉಚಿತವಾಗಿ ಸಮವಸ್ತ್ರ, ಬಿಸಿಯೂಟ, ಪಠ್ಯಪುಸ್ತಕ ಇದರ ವ್ಯವಸ್ಥೆಗಳನ್ನು ನೀಡುತ್ತಿದೆ. ಆದರೂ ಕೂಡ ಬೆಳೆಯುತ್ತಿರುವ ಪ್ರಪಂಚಕ್ಕೆ ಇದು ಸಾಲದು ಎನ್ನುವಂತಾಗಿದೆ.

ಇಷ್ಟೆಲ್ಲವನ್ನು ನೀಡಿದರೂ ಕೂಡ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವುದು ಕಠಿಣವಾಗಿದೆ. ಹಾಗೂ ಅನುಷ್ಠಾನದಲ್ಲಿರುವ ಯೋಜನೆಗಳು ಸರಿಯಾಗಿ ಸದ್ಬಳಕೆ ಆಗುತ್ತಿಲ್ಲ.

ಸ್ಥಳೀಯರ ಅಭಿಪ್ರಾಯ:

ಲಕ್ಕವಳಿಯ ಸಮೀಪದಲ್ಲಿ ಹೆಚ್ಚಿನ ತಮಿಳು ಕುಟುಂಬಗಳು ವಾಸವಾಗಿವೆ. ಹಾಗಾಗಿ ಅಲ್ಲಿ ತಮಿಳು ಶಾಲೆಗಳ ಅಗತ್ಯವಿರುವಂಥದ್ದು.

ಇತ್ತೀಚಿಗೆ ಅಲ್ಲಿನ ತಮಿಳು ಶಾಲೆಯಲ್ಲಿ ಶಿಕ್ಷಕರೇ ಇಲ್ಲದ ಕಾರಣ ಅದನ್ನು ಮುಚ್ಚಬೇಕಾದ ಪರಿಸ್ಥಿತಿ ಒದಗಿ ಬಂದಿದೆ.

ಸ್ಥಳೀಯರ ಅಭಿಪ್ರಾಯದ ಪ್ರಕಾರ, ತಮಿಳು ಶಾಲೆಗೆ ತಮಿಳು ಶಿಕ್ಷಕರ ಜೊತೆಗೆ ಇಂಗ್ಲಿಷ್ ಮಾಧ್ಯಮವನ್ನು ಕೂಡ ಪ್ರಾರಂಭ ಮಾಡಿದರೆ ಒಳಿತು ಎನ್ನಲಾಗುತ್ತದೆ. ಇದರಿಂದ ಶಾಲೆ ಮರುವ ಆರಂಭವಾಗುವುದು ಮತ್ತು ಹೆಚ್ಚಿನ ಮಕ್ಕಳು ದಾಖಲಾಗುವ ನಿರೀಕ್ಷೆಯು ಕೂಡ ಸ್ಥಳೀಯರಲ್ಲಿದೆ.

ಒಟ್ಟಾರೆಯಾಗಿ ಗ್ರಾಮೀಣ ಭಾಗದ ಮಕ್ಕಳಿಗೆ ದಾರಿ ಆಗಿದ ಸರ್ಕಾರಿ ಶಾಲೆಗಳು ಮುಚ್ಚುತ್ತಿರುವುದು ಖಂಡನೀಯ. ಕೇವಲ ಸವಲತ್ತುಗಳನ್ನು ಕೊಡುವುದಷ್ಟೇ ಅಲ್ಲ.

ಅವುಗಳನ್ನು ಸಕಾಲಕ್ಕೆ ಸರ್ಕಾರಿ ಶಾಲೆಗಳಿಗೆ ತಲುಪಿಸುವುದು ಇಲಾಖೆ ಮತ್ತು ಸರ್ಕಾರದ ಜವಾಬ್ದಾರಿಯಾಗಿರುತ್ತದೆ.

ತರೀಕೆರೆ ಶೈಕ್ಷಣಿಕ ವಲಯದ ಶಾಲೆಗಳ ಸ್ಥಿತಿಗತಿ ಈ ರೀತಿ ಇದೆ:

39 ಸರ್ಕಾರಿ ಶಾಲೆಗಳು ಎಲ್ ಕೆ ಜಿ ಮತ್ತು ಯು ಕೆ ಜಿ ಆರಂಭಿಸಿದೆ.

56 ಶಾಲೆಗಳಲ್ಲಿ ಹತ್ತಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ.

7 ಬಾಗಿಲು ಮುಚ್ಚಿರುವ ಶಾಲೆಗಳು.

37 ಶಾಲೆಗಳಲ್ಲಿ ಕೇವಲ ಒಬ್ಬರೇ ಶಿಕ್ಷಕರಿದ್ದಾರೆ.

33 ದ್ವಿಭಾಷ ಮಾಧ್ಯಮವನ್ನು ಅನುಸರಿಸುತ್ತಿರುವ ಶಾಲೆಗಳು.

ಸಾಮಾನ್ಯ ಮಕ್ಕಳ ಸರಾಸರಿಗಿಂತ ಹೆಚ್ಚು ಮಕ್ಕಳಿರುವ ಶಾಲೆಗಳು 35.

Source: Vijaya Karnataka 

ಇದನ್ನು ಓದಿ: ಆಗಸ್ಟ್ 17 ಮತ್ತು 18ರಂದು ಮತ್ತೆ ಮಳೆ ಸೂಚನೆ

Leave a Comment

Scroll to Top

Discover more from nirantarasuddhi

Subscribe now to keep reading and get access to the full archive.

Continue reading