Free electric stove scam:ಉಚಿತ ಎಲೆಕ್ಟ್ರಿಕ್ ಸ್ಟವ್ ಬಗ್ಗೆ ಕೇಂದ್ರದ ಸ್ಪಷ್ಟನೆ

Spread the love

Free electric stove scam:ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕೇಂದ್ರ ಸರ್ಕಾರದಿಂದ ಉಚಿತ ಎಲೆಕ್ಟ್ರಿಕ್ ಸ್ಟವ್ ನೀಡಲಾಗುತ್ತದೆ ಎಂಬ ಮಾಹಿತಿ ಹರಿದಾಡುತ್ತಿದೆ. ಇದು ಸುಳ್ಳು ಸುದ್ದಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟನೆ ನೀಡಿದ್ದಾರೆ.

Prahlad joshi
Free electric stove scam (Image Source:Newsonair) 

Free electric stove scam: ಸಾಮಾಜಿಕ ಜಾಲ ಎಂಬುದು ನಂಬಿಕೆಗೆ ಅರ್ಹವಾಗಿರಬೇಕು. ಆದರೆ ಅದರ ಬದಲಾಗಿ ಇತ್ತೀಚಿನ ದಿನಗಳಲ್ಲಿ ಬರಿ ಸುಳ್ಳು ಸುದ್ದಿಯ ಜಾಲವಾಗಿದೆ.

ಇತ್ತೀಚಿಗೆ ಸಮಾಜಕ ಜಾಲತಾಣದಲ್ಲಿ ಎಲೆಕ್ಟ್ರಿಕ್ ಸ್ಟವ್ ತಾವು ಉಚಿತವಾಗಿ ನೀಡಲಾಗುತ್ತದೆ ಎಂಬ ಮಾಹಿತಿ ಹರಿದಾಡುತ್ತಿತ್ತು.

ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವಾಲಯ (MNRE) ಉಚಿತವಾಗಿ ನೀಡುತ್ತದೆ ಎಂಬ ಮಾಹಿತಿಗಳು ಲಭ್ಯವಾಗುತ್ತಿತ್ತು. ಆದರೆ ಇದೀಗ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಗಳನ್ನು ನಂಬಬೇಡಿ. ಎಚ್ಚರಿಕೆಯಿಂದ ಇರಿ ಎಂದು ಕರೆ ಕೊಟ್ಟಿದ್ದಾರೆ.

ಅಧಿಕೃತ ವೆಬ್ಸೈಟ್ ನೋಡಿ:

ಟೀ ಕುರಿತಾಗಿ ಮಾತನಾಡಿರುವ ಕೇಂದ್ರ ಸಚಿವ ಸರ್ಕಾರದ ಕುರಿತಾದ ಮಾಹಿತಿಗಳನ್ನು ಅಧಿಕೃತ ವೆಬ್ಸೈಟ್ಗಳ ಮೂಲಕ ನೋಡಿಕೊಳ್ಳಿ. ಅನ್ಯತಹ ಬೇರೆ ವೆಬ್ಸೈಟ್ಗಳ ಮಾಹಿತಿಗಳನ್ನು ನಂಬಬೇಡಿ ಎಂದು ಕರೆ ಕೊಟ್ಟಿದ್ದಾರೆ.

ಲಿಂಕ್ ಒತ್ತಬೇಡಿ:

ಹಾಗೂ ಈ ಕುರಿತಾಗಿ ಮಾತನಾಡುತ್ತಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಲಿಂಕ್ ಗಳನ್ನು ಒತ್ತಬೇಡಿ. ಅವುಗಳು ಹಣಜಾಲದ ಮೂಲ ಇರಬಹುದು. ಈ ಮೂಲಕ ಮೋಸ ಕೊಳಗಾಗಬೇಡಿ ಎಂದು ಹೇಳಿದ್ದಾರೆ.

ಮಾಹಿತಿ ಹಂಚಿಕೆ ಬೇಡ:

ಸಾಮಾನ್ಯವಾಗಿ ಮಾಹಿತಿಗಳನ್ನು ಕೇಳಲಾಗುತ್ತದೆ. ವ್ಯಕ್ತಿಯ ವೈಯಕ್ತಿಕ ಮಾಹಿತಿಗಳನ್ನು ಪಡೆಯುವಲ್ಲಿ ಬ್ಯಾಂಕ್ ಮತ್ತು ಆಧಾರ್ ಕುರಿತ ಮಾಹಿತಿಗಳನ್ನು ಕೂಡ ಪಡೆಯುತ್ತಾರೆ.

ಹಾಗೂ ಈ ಮೂಲಕ ಅವರು ಫೋನ್ ಗಳನ್ನು ಹ್ಯಾಕ್ ಮಾಡುತ್ತಾ, ಓಟಿಪಿ ಗಳನ್ನು ಬಳಸಿಕೊಂಡು ಹಣ ಗಳಿಸುವ ಹುನ್ನಾರ ಮಾಡಿರಲಾಗುತ್ತದೆ.

ಈ ಕುರಿತಾಗಿ ಮಾತನಾಡಿರುವ ಜೋಶಿ ಯಾವುದೇ ವೈಯಕ್ತಿಕ ಹಾಗೂ ಇನ್ನಿತರ ಮಾಹಿತಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಎಂದು ಮಾಹಿತಿ ನೀಡಿದ್ದಾರೆ.

ಯೋಜನೆ:

ಪ್ರಸ್ತುತ MNRE ಇಲಾಖೆಯಲ್ಲಿ ಯಾವುದೇ ಈ ರೀತಿಯ ಯೋಜನೆಗಳು ಇರುವುದಿಲ್ಲ. ಯಾವುದನ್ನು ಕೂಡ ಉಚಿತವಾಗಿ ಪ್ರಸ್ತುತ ನೀಡಲಾಗುತ್ತಿಲ್ಲ.

ಈ ಕುರಿತಾಗಿ ಜನ ಯಾವುದೇ ಇತರ ಮಾಹಿತಿಗಳನ್ನು ನಂಬಕೂಡದು ನಂಬಿ ಮೋಸ ಹೋಗಬಾರದೆಂದು ತಿಳಿಸಲಾಗಿದೆ.

ಪ್ರಸ್ತುತ ದಿನಗಳಲ್ಲಿ ಈ ರೀತಿಯ ಮೋಸ ಜಾಲಗಳು ಹೆಚ್ಚಾಗಿ ಹರಡುತ್ತಿವೆ. ಮೋಸಕ್ಕೆ ಒಳಗಾಗುವವರು ಹೆಚ್ಚಾದಂತೆ ಮೋಸ ಮಾಡುವವರು ಹೆಚ್ಚುತ್ತಾರೆ ಎಂಬುದಕ್ಕೆ ಇದೇ ಸಾಕ್ಷಿ.

ಉಚಿತವಾಗಿ ಪಡೆಯಲು ಹೋಗಿ ನಮ್ಮದೆಲ್ಲವನ್ನು ಕಳೆದುಕೊಳ್ಳುವ ಮುನ್ನ ಜನರು ಜಾಗೃತಿಗೊಳ್ಳಬೇಕು.

ಇನ್ನಷ್ಟು ಮಾಹಿತಿಗಾಗಿ: MNRE

ಇದನ್ನು ಓದಿ: ಚಿಕ್ಕಮಗಳೂರು ಜಿಲ್ಲೆಯ ಏಳು ಶಾಲೆಗಳಿಗೆ ಬೀಗ

Leave a Comment

Scroll to Top

Discover more from nirantarasuddhi

Subscribe now to keep reading and get access to the full archive.

Continue reading