Attikodige Road: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕಲ್ಲುಗುಡ್ಡೆ ಗ್ರಾಮದ ಕನಸೊಂದು ಇದೀಗ ನನ್ನ ಸಾಗುತ್ತಿದೆ. ಬಹುದಿನಗಳಿಂದ ಈ ಗ್ರಾಮದ ರಸ್ತೆಗಳು ಹದಗೆಟ್ಟಿ ಹೋಗಿತ್ತು. ಇದೀಗ ರಸ್ತೆಗಳಿಗೆ ಹೊಸ ಜೀವ ತುಂಬ ಸಮಯ ಬಂದಿದೆ.

Attikodige Road: ಬಿಳಾಲುಕೊಪ್ಪ – ಕಲ್ಲುಗುಡ್ಡೆ ಸಂಪರ್ಕಿಸುವ ರಸ್ತೆಯನ್ನು ದುರಸ್ತಿ ಮಾಡಿಕೊಡಬೇಕಾಗಿ ಬಹು ಸಮಯದಿಂದ ಜನರ ಬೇಡಿಕೆ ಇತ್ತು.
ಸಚಿವರಾದ ಡಿ ಎನ್ ಜೀವರಾಜ್ ನೇತೃತ್ವದಲ್ಲಿ ಹಾಗೂ ಜಿಲ್ಲಾ ದಿಶಾ ಕಮಿಟಿಯ ಸದಸ್ಯರಾದ ಮಣಿಕಂಠನ್ ಕಂದಸ್ವಾಮಿಯವರ ಮಾರ್ಗದರ್ಶನದಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಕೋಟಾ ಶ್ರೀನಿವಾಸ್ ಪೂಜಾರಿ ಅವರಲ್ಲಿ ಬೇಡಿಕೆಯನ್ನ ಇಡಲಾಗಿತ್ತು.
ಇದೀಗ ಈ ಬೇಡಿಕೆಗೆ ಸಂಸದರಾದ ಶ್ರೀನಿವಾಸ್ ಪೂಜಾರಿ ಅಸ್ತು ಎಂದಿದ್ದಾರೆ. ಸದಾ ಅಭಿವೃದ್ಧಿಯ ಯೋಚನೆಯಲ್ಲಿಯೇ ಯೋಚಿಸುವ ನಮ್ಮ ಸಂಸದರು ಈ ರಸ್ತೆಗೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಅಡಿಯಲ್ಲಿ ಅಸ್ತು ಅಂದಿರುವಂತದ್ದು.
ಹಾಗೂ ಸದ್ಯದಲ್ಲೇ ಸರ್ವೇ ಕೆಲಸ ಪ್ರಾರಂಭವಾಗಿ ಸಂಚಾರಕ್ಕೆ ಯೋಗ್ಯವಾದ ರಸ್ತೆ ಕೆಲಸ ಶುರುವಾಗಲಿದೆ.
ಹಾಗೂ ಈ ವಿಷಯವು ಕಲ್ಲುಗುಡ್ಡೆ ಗ್ರಾಮದ ಜನತೆಯ ಮುಖದಲ್ಲಿ ಮಂದಹಾಸ ತಂದಿದೆ. ಇದೊಂದು ಬಹು ಬೇಡಿಕೆಯ ರಸ್ತೆಯಾಗಿದ್ದು, ಇದರ ಅವಶ್ಯಕತೆ ಜನರಿಗೆ ಬಹಳಷ್ಟು ಇತ್ತು.
ಇದೀಗ ಇದರ ಅಭಿವೃದ್ಧಿಗೆ ಕಾರಣೀಕರ್ತರಾಗಿರುವ ಮಾನ್ಯ ಸಂಸದರಿಗೂ, ಮಾಜಿ ಸಚಿವರಾದ ಡಿ. ಎನ್ ಜೀವರಾಜ್, ಕೊಪ್ಪ ತಾಲೂಕು ಅಧ್ಯಕ್ಷರಾದ ದಿನೇಶ್ ಹೊಸೂರು ಹಾಗೂ ಸದಾ ಕಾರ್ಯಕರ್ತರ ಧ್ವನಿಯಾಗಿರುವ ಜಿಲ್ಲಾ ದಿಶಾ ಕಮಿಟಿಯ ಸದಸ್ಯರಾದ ಮಣಿಕಂಠನ್ ಕಂದಸ್ವಾಮಿಯವರಿಗೂ ಬೂತ್ ಕಮಿಟಿ ಅಧ್ಯಕ್ಷರಿಗೂ ಕಲ್ಲುಗುಡ್ಡೆ ಹಾಗೂ ಬಿಳಾಲುಕೊಪ್ಪ ಗ್ರಾಮಸ್ಥರು ಧನ್ಯವಾದ ತಿಳಿಸುತ್ತಿದ್ದಾರೆ.
ಇದನ್ನು ಓದಿ: ಕೇಂದ್ರದಿಂದ ಉಚಿತ ಸ್ಟವ್: ಸ್ಪಷ್ಟನೆ ನೀಡಿದ ಪ್ರಹ್ಲಾದ್ ಜೋಶಿ