Anupama Gowda Farewell:ಕನ್ನಡದ ಖ್ಯಾತ ನಿರೂಪಕಿಯರಲ್ಲಿ ಒಬ್ಬರಾದ ಅನುಪಮಾ ಗೌಡ ಇದೀಗ ತಮ್ಮ ನಿರೂಪಣೆ ಕ್ಷೇತ್ರಕ್ಕೆ ವಿದಾಯ ಹೇಳಿದ್ದಾರೆ. ನಿರೂಪಕಿಯಾಗಿ ಕಲರ್ಸ್ ಕನ್ನಡ ಮೂಲಕ ಮನೆ ಮಾತಾಗಿದ್ದವರು ಅನುಪಮಾ.

Anupama Gowda Farewell: ತಾನು ನಿರೂಪಕಿಯಾಗಿ ವಿದಾಯ ಹೇಳುತ್ತಿದ್ದೇನೆ ಎಂದು ಇದೀಗ ಅನುಪಮಾ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.
2018 ಜೂನ್ 22ರಂದು ಮೊಟ್ಟಮೊದಲ ಬಾರಿಗೆ ಒಂದು ಪೇಮೆಂಟ್ ಮೂಲಕ ನಿರೂಪಕಿಯಾಗಿ ಜೀವನ ಆರಂಭಿಸಿದ್ದರು.
ತದನಂತರದಲ್ಲಿ ಕನ್ನಡ ಕೋಗಿಲೆ, ನಮ್ಮಮ್ಮ ಸೂಪರ್ ಸ್ಟಾರ್, ಅನುಬಂಧ ಅವಾರ್ಡ್, ಜಾಕ್ ಪಾಟ್, ರಾಜ ರಾಣಿ ಸೇರಿದಂತೆ ಹಲವು ರಿಯಾಲಿಟಿ ಶೋಗಳಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದರು. ಹಾಗೂ 2026 ಮೇ 5ರಂದು ತಮ್ಮ ಈ ಜೀವನಕ್ಕೆ ಕೊನೆಯ ದಿನವೆಂದು ಕೂಡ ವಿಡಿಯೋದಲ್ಲಿ ತಿಳಿಸಿದ್ದಾರೆ.
ಲಂಕೇಶ್ ಪತ್ರಿಕೆ ಸಿನಿಮಾ ಮೂಲಕ 2003ರಲ್ಲಿ ಬಾಲ ನಟಿಯಾಗಿ ಚಿತ್ರಣಕ್ಕೆ ಕಾಲಿಡಿಸಿದವರು ಅನುಪಮಾ ಗೌಡ. ತದನಂತರದಲ್ಲಿ ಅವರಿಗೆ ಸಿಕ್ಕ ದೊಡ್ಡ ಯಶಸ್ಸು ಅಕ್ಕ ಧಾರಾವಾಹಿ ಹಾಗೂ ಬಿಗ್ ಬಾಸ್. ಎರಡು ಕಲರ್ಸ್ ಕನ್ನಡದ ಕಾರ್ಯಕ್ರಮಗಳಿಂದ ಕರ್ನಾಟಕದ ಮನೆ ಮಾತಾಗಿ ಬೆಳೆದವರು ಅನುಪಮ.
ಸಿನಿಮಾಗಿಂತಲೂ ನಿರೂಪಣೆಯು ಅವರನ್ನು ಆರ್ಥಿಕವಾಗಿ ಬಲಪಡಿಸಿದೆ. ಹಾಗೂ ಅವರನ್ನು ಈ ಕ್ಷೇತ್ರಕ್ಕೆ ಪರಿಚಯಿಸಿ ಮಾರ್ಗದರ್ಶನ ನೀಡಿದ ಪರಮೇಶ್ವರ ಗುಂಡ್ಕಲ್ ಇವರಿಗೆ ಅನುಪಮಾ ಧನ್ಯವಾದ ತಿಳಿಸಿದ್ದಾರೆ.
ತಮ್ಮ ಯಶಸ್ಸಿನ ಮೂಲವೇ ನಿರೂಪಣೆ ಎಂದು ಅನುಪಮಾ ವಿಡಿಯೋ ಮೂಲಕ ತಿಳಿಸಿದ್ದಾರೆ. ಆಗುತ್ತಮ ಇಷ್ಟವಾದ ರಿಯಾಲಿಟಿ ಶೋ ಗಿಚ್ಚ ಗಿಲಿ ಗಿಲಿ ಜೂನಿಯರ್ಸ್ ಇಂದು ಕೂಡ ತಿಳಿಸಿದ್ದಾರೆ.
ಹಾಗೂ ನಿರೂಪಣೆಯ ಹಾದಿಯಲ್ಲಿ ತನ್ನ ಪ್ರೀತಿಯಾದ ನಟನ ಕ್ಷೇತ್ರವನ್ನು ತಾನು ಮರೆಯಬಾರದು. ಹಾಗೂ ಅಲ್ಲಿಯೇ ಮುಂದುವರಿಯಬೇಕೆಂದು ಅನುಭವ ಇದೀಗ ಆಸೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ತಾನು ನಿರೂಪಣ ಕ್ಷೇತ್ರಕ್ಕೆ ವಿದಾಯ ಹೇಳುವುದಾಗಿಯೂ. ಮತ್ತು ನಟನೆಯಲ್ಲಿ ಮುಂದುವರೆಯುವುದಾಗಿ ಪ್ರೇಕ್ಷಕರಿಗೆ ತಿಳಿಸಿ ಹೇಳಿದ್ದಾರೆ.
ಅನುಪಮಾ ಗೌಡ ಕೇವಲ ಟಿವಿ ಮೂಲಕ ಅಷ್ಟೇ ಅಲ್ಲದೆ ಯೂಟ್ಯೂಬ್ ಮೂಲಕ ಕೂಡ ಯುವ ಜನತೆಯ ಜೊತೆಯಲ್ಲಿ ಬೆರೆತಿದ್ದಾರೆ ಎನ್ನಬಹುದು.
ಇನ್ನಷ್ಟು ಮಾಹಿತಿಗಾಗಿ: ಅನುಪಮಾ
ಇದನ್ನು ಓದಿ: ಎಲೆಕ್ಟ್ರಿಕ್ ಸ್ಟವ್ ಬಗ್ಗೆ ಕೇಂದ್ರ ಸ್ಪಷ್ಟನೆ