Toxic:ಬೆಂಗಳೂರಿನಲ್ಲಿ ಅಡ್ವಾನ್ಸ್ ಬುಕಿಂಗ್, ಕೆಲವೇ ನಿಮಿಷಗಳಲ್ಲಿ Sold Out!

Spread the love

Toxic:ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಸಿನಿಮಾ ಕುರಿತು ಅಭಿಮಾನಿಗಳಲ್ಲಿರುವ ನಿರೀಕ್ಷೆ ಇದೀಗ ಅಡ್ವಾನ್ಸ್ ಬುಕಿಂಗ್‌ನಲ್ಲಿಯೂ ಸ್ಪಷ್ಟವಾಗಿ ಕಾಣಿಸಿಕೊಂಡಿದೆ.

Toxic
Toxic

Toxic: ಆಗಸ್ಟ್ 21ರಿಂದ ಚಿತ್ರದ ಮುಂಗಡ ಟಿಕೆಟ್ ಬುಕಿಂಗ್ ಆರಂಭವಾಗಿದೆ. ಹಾಗೂ ಬುಕಿಂಗ್ ತೆರೆದ ಕೆಲವೇ ನಿಮಿಷಗಳಲ್ಲಿ ಬೆಂಗಳೂರಿನ ಹಲವು ಚಿತ್ರಮಂದಿರಗಳ ಮೊದಲನೆ ದಿನದ ಶೋಗೆ ಭರ್ಜರಿ ಬೇಡಿಕೆ ಉಂಟಾಗಿದೆ.ಕೆಲವು ಮಲ್ಟಿಪ್ಲೆಕ್ಸ್‌ಗಳ ಶೋಗಳ ಟಿಕೆಟ್‌ಗಳು ವೇಗವಾಗಿ ಸೋಲ್ಡ್ ಔಟ್ ಆಗಿವೆ.

ಟಿಕೆಟ್ ಬುಕ್ಕಿಂಗ್ ಆರಂಭವಾಗುತ್ತಿದ್ದಂತೆ ಅಭಿಮಾನಿಗಳು ಆನ್ಲೈನ್ ಬುಕಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ಮುಗಿದಿದ್ದಾರೆ. ಕೆಜಿಎಫ್ ನಂತರ ಯಶ್ ಅವರ ಸಿನಿಮಾವನ್ನು ದೊಡ್ಡ ಪರದೆಯಲ್ಲಿ ನೋಡಲು ಅಭಿಮಾನಿಗಳು ಆಗಿದ್ದಾರೆ.

ಇದನ್ನುಓದಿ: ಮಲೆನಾಡಿನ ಸೂಕ್ಷ್ಮ ಪ್ರದೇಶ; ಆಕ್ಷೇಪಣೆ ಸಲ್ಲಿಸಲು ಈ ಅರ್ಜಿ ಬಳಸಿಕೊಳ್ಳಿ

ವರದಿಗಳ ಪ್ರಕಾರ ಸಿನಿಮಾ ವಿಶ್ವದಾದ್ಯಂತ ಸುಮಾರು 12,000 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಕನ್ನಡದ ಜೊತೆಗೆ ಇಂಗ್ಲಿಷ್, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಸಿನಿಮಾ ಬಿಡುಗಡೆಯಾಗಲಿದೆ.

ವಿದೇಶಗಳಲ್ಲಿಯೂ ಕೂಡ ಅಡ್ವಾನ್ಸ್ ಬುಕಿಂಗ್ ಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಅಮೆರಿಕಾದಲ್ಲು ಈಗಾಗಲೇ ಸಾವಿರಾರು ಟಿಕೆಟ್ ಗಳು ಮಾರಾಟವಾಗಿದೆ.

ಇನ್ನೇನು 26ರಂದು ಟಾಕ್ಸಿಕ್ ಸಿನಿಮಾ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಬಿಡುಗಡೆಯಾದ ನಂತರ ಬಾಕ್ಸ್ ಆಫೀಸ್ ನಲ್ಲಿ ಯಾವ ರೀತಿಯಾದ ದಾಖಲೆ ಬರೆಯಲಿದೆ ಎಂಬ ಕುತೂಹಲ ಈಗಾಗಲೇ ಮೂಡುತ್ತಿದೆ.

Leave a Comment

Scroll to Top

Discover more from nirantarasuddhi

Subscribe now to keep reading and get access to the full archive.

Continue reading