IAS OFFICER: ಐಎಎಸ್ ಅಧಿಕಾರಿ ನಾಪತ್ತೆಯಾಗಿಲ್ಲ: ಪ್ರಿಯಾಂಕ್ ಖರ್ಗೆ ಸ್ಪಷ್ಟನೆ!

Spread the love

IAS OFFICER: ಕಳೆದ ಕೆಲವು ದಿನಗಳಿಂದ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದ ಐಎಎಸ್ ಅಧಿಕಾರಿ ಇದೀಗ ಸರ್ಕಾರದೊಂದಿಗೆ ಸಂಪರ್ಕಕ್ಕೆ ಸಿಕ್ಕಿದ್ದಾರೆ.

IAS officer Gyanendra Kumar Gangwar is not missing, Priyank Kharge clarifies.(IMAGE SOURCE:MINT)
IAS officer Gyanendra Kumar Gangwar is not missing, Priyank Kharge clarifies.(IMAGE SOURCE:MINT)

IAS OFFICER: 2016ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರು ಇದೀಗ ಸರ್ಕಾರದೊಂದಿಗೆ ಸಂಪರ್ಕ ಸಾಧಿಸಿದ್ದಾರೆ. ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸ್ವಗ್ರಾಮಕ್ಕೆ ತೆರಳಿದ್ದಾಗಿ ಗೊಂದಲಗಳು ಉಂಟಾಗಿವೆ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಜ್ಞಾನೇಂದ್ರ ಕುಮಾರ್ ಸದ್ಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಗಸ್ಟ್ 20ರಿಂದ ಅವರು ಕುಟುಂಬಸ್ಥರು ಮತ್ತು ಇತರರ ಸಂಪರ್ಕಕ್ಕೆ ಸಿಕ್ಕಿರುವುದಿಲ್ಲ ಎಂದು ವರದಿಯಾಗಿತ್ತು.

ಅಧಿಕಾರಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಲು ವಿಮಾನ ಟಿಕೆಟ್ ಬುಕ್ ಮಾಡಿದ್ದರು.

ಬಳಿಕ ಅವರ ಮೊಬೈಲ್ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಕೆಲವು ಗೊಂದಲಗಳು ಉಂಟಾಗಿತ್ತು. ಆರಂಭದಲ್ಲಿ ಅವರ ಕೊನೆಯ ಸ್ಥಳ ಕೆಂಪೇಗೌಡ ವಿಮಾನ ನಿಲ್ದಾಣ ಎಂಬುದಾಗಿ ತಿಳಿದು ಬಂದಿತ್ತು.

ಮಾತನಾಡಿದ್ದ ಗೃಹ ಸಚಿವರು ಅಧಿಕಾರಿಯ ಕುಟುಂಬದಿಂದ ಯಾವುದೇ ದೂರು ದಾಖಲಾಗಿಲ್ಲ. ಅಧಿಕಾರಿಯನ್ನು ಸಂಪರ್ಕಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸರ್ಕಾರ ಮಾಹಿತಿ ಕಲೆ ಹಾಕುತ್ತಿತ್ತು ಎಂದು ತಿಳಿಸಿದ್ದರು.

ಇದೀಗ ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ರಜೆ ಪಡೆದು ಸ್ವಗ್ರಾಮಕ್ಕೆ ತೆರಳಿದ್ದಾರೆ. ಅಧಿಕೃತ ಫೋನ್ ಮೂಲಕ ಸಂಪರ್ಕ ಸಾಧ್ಯವಾಗದ ಕಾರಣ ಊಹಾಪೋಹಗಳು ಮೂಡಿದ್ದವು ಎಂದು ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ.

ಕೆಪಿಎಸ್ಸಿ ಹಿನ್ನೆಲೆಯಿಂದ ಕುತೂಹಲ

ಜ್ಞಾನೇಂದ್ರ ಕುಮಾರ್ ಈ ಹಿಂದೆ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸಿದ್ದರು. ಈ ವರ್ಷದ ಮಾರ್ಚ್ ತಿಂಗಳಲ್ಲಿ ಅವರ ಹುದ್ದೆಯಿಂದ ಬದಲಾಯಿಸಲಾಗಿತ್ತು.

ಹಾಗೂ ಇದೇ ವೇಳೆ ಕೆಪಿಎಸ್ಸಿಗೆ ಸಂಬಂಧಿಸಿದ ತನಿಖೆಗಳು ನಡೆಯುತ್ತಿರುವ ಕಾರಣ ಸಂಪರ್ಕ ಕಡಿತದ ಸುದ್ದಿ ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿತ್ತು. ಆದರೆ ಅವರ ಸಂಪರ್ಕಕ್ಕೆ ಸಿಗದಿರುವ ಘಟನೆಗೂ ಕೆಪಿಎಸ್ಸಿ ತನಿಖೆಗೂ ನೇರ ಸಂಬಂಧವಿದೆ ಎಂದು ದೃಢಪಟ್ಟಿಲ್ಲ.

ಸದ್ಯ ಅಧಿಕಾರಿ ಸರ್ಕಾರದೊಂದಿಗೆ ಸಂಪರ್ಕ ಸಾಧಿಸಿರುವುದರಿಂದ ನಾಪತ್ತೆ ಪ್ರಕರಣದ ಕುರಿತು ಉಂಟಾಗಿದ್ದ ಗೊಂದಲಕ್ಕೆ ತೆರೆ ಬಿದ್ದಿದೆ.

Leave a Comment

Scroll to Top