Theerthahalli: ಗೂಡ್ಸ್-ಸ್ಕೂಟಿ ನಡುವೆ ಅಪಘಾತ; ಸವಾರನ ಸ್ಥಿತಿ ಗಂಭೀರ

Spread the love

Theerthahalli: ಗೂಡ್ಸ್ ವಾಹನ ಹಾಗೂ ಸ್ಕೂಟಿ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟಿ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ತೀರ್ಥಹಳ್ಳಿಯ ಶೇಡ್ಗಾರ್ ಸಮೀಪದ ಅರಮನೆಕೇರಿ ವೃತ್ತದಲ್ಲಿ ನಡೆದಿದೆ.

Theerthahalli goods vehicle and scooter accident, rider in critical condition.
Theerthahalli goods vehicle and scooter accident, rider in critical condition.

ಮೃಗಾವಧೆ ದೇವಸ್ಥಾನದಿಂದ ದೇವಂಗಿ ಕಡೆಗೆ ದಂಪತಿ ಸ್ಕೂಟಿಯಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ. ಇದೇ ವೇಳೆ ಕಟ್ಟೆಹಕ್ಕಲಿನಿಂದ ಕುದುರೆಗುಂಡಿ ಕಡೆಗೆ ತೆರಳುತ್ತಿದ್ದ ಗೂಡ್ಸ್ ವಾಹನವು ಅರಮನೆಕೇರಿ ವೃತ್ತದ ಬಳಿ ಸ್ಕೂಟಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

ಅಪಘಾತದ ಪರಿಣಾಮವಾಗಿ ಸ್ಕೂಟಿ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಇದನ್ನು ಓದಿ: ಐಎಎಸ್ ಅಧಿಕಾರಿ ನಾಪತ್ತೆಯಾಗಿಲ್ಲ.

ಹಿಂಬದಿಯಲ್ಲಿ ಕುಳಿತಿದ್ದ ಪತ್ನಿ ಅಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ಸವಾರನನ್ನು ತಕ್ಷಣವೇ ತಕ್ಷಣವೇ ಕಟ್ಟೆಹಕ್ಕಲು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ

Leave a Comment

Scroll to Top