Chikkamagaluru: ಕಸ್ತೂರಿರಂಗನ್ ವರದಿ ಮಲೆನಾಡಿಗರಿಗೆ ಮರಣಶಾಸನವಾಗಬಾರದು; ವಿಶ್ವನಾಥ್ ಗದ್ದೆಮನೆ

Spread the love

Chikkamagaluru: ಕಸ್ತೂರಿರಂಗನ್ ವರದಿ ಮಲೆನಾಡಿಗರಿಗೆ ಮರಣಶಾಸನವಾಗಬಾರದು; ವಿಶ್ವನಾಥ್ ಗದ್ದೆಮನೆ

Vishwanath Gaddemane speaks at a Chikkamagaluru meeting opposing the Kasturirangan Report's impact on Malnad residents.
Vishwanath Gaddemane speaks at a Chikkamagaluru meeting opposing the Kasturirangan Report’s impact on Malnad residents.

Chikkamagaluru: ಕಸ್ತೂರಿರಂಗನ್ ವರದಿಯು ಮಲೆನಾಡಿನ ರೈತರು ಹಾಗೂ ಜನಸಾಮಾನ್ಯರಿಗೆ ಯಾವುದೇ ಕಾರಣಕ್ಕೂ ಮರಣಶಾಸನವಾಗಬಾರದು ಎಂದು ಮಲೆನಾಡು ನಾಗರಿಕ ರೈತ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿಶ್ವನಾಥ್ ಗದ್ದೆಮನೆ ಹೇಳಿದ್ದಾರೆ.

ಚಿಕ್ಕಮಗಳೂರು ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಕಸ್ತೂರಿರಂಗನ್ ವರದಿ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ವರದಿಯನ್ನು ಸಂಪೂರ್ಣವಾಗಿ ವಿರೋಧಿಸುವುದಿಲ್ಲ.

ಆದರೆ ವರದಿಯಲ್ಲಿರುವ ಗಂಭೀರ ನ್ಯೂನತೆಗಳನ್ನು ಸರಿಪಡಿಸಿ, ವಾಸ್ತವಾಂಶಗಳ ಆಧಾರದ ಮೇಲೆ ಅಂತಿಮ ಅಧಿಸೂಚನೆ ಹೊರಡಿಸಬೇಕು ಎಂದು ಹೇಳಿದರು.

137 ಹಳ್ಳಿಗಳನ್ನು ಸೇರಿಸಿರುವುದಕ್ಕೆ ಆಕ್ಷೇಪ

ಕೇವಲ ಉಪಗ್ರಹ ಚಿತ್ರಗಳನ್ನು ಆಧರಿಸಿ, ಯಾವುದೇ ಸ್ಥಳ ಪರಿಶೀಲನೆ ನಡೆಸದೆ ಜಿಲ್ಲೆಯ ಸುಮಾರು 137 ಹಳ್ಳಿಗಳನ್ನು ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಸೇರಿಸಿರುವುದು ಅವೈಜ್ಞಾನಿಕವಾಗಿದೆ ಎಂದು ವಿಶ್ವನಾಥ್ ಗದ್ದೆಮನೆ ಆಕ್ಷೇಪ ವ್ಯಕ್ತಪಡಿಸಿದರು.

ಕಚೇರಿಗಳಲ್ಲಿ ಕುಳಿತು ನಕ್ಷೆ ಗುರುತಿಸುವ ಬದಲು ಅಧಿಕಾರಿಗಳು ಸ್ಥಳಕ್ಕೆ ತೆರಳಿ ವಾಸ್ತವ ಸ್ಥಿತಿಯನ್ನು ಪರಿಶೀಲಿಸಬೇಕು.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮ ಸಭೆಗಳನ್ನು ಕರೆದು ಸಾರ್ವಜನಿಕರು ಮತ್ತು ರೈತರೊಂದಿಗೆ ಮುಕ್ತವಾಗಿ ಚರ್ಚಿಸಿ, ಅವರ ಅಭಿಪ್ರಾಯಗಳನ್ನು ಪಡೆದ ನಂತರವೇ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮಲೆನಾಡಿಗರಲ್ಲಿ ಭವಿಷ್ಯದ ಆತಂಕ

ಪರಿಸರ ಸೂಕ್ಷ್ಮ ವಲಯ ಎಂದು ಘೋಷಣೆಯಾದ ಬಳಿಕ ಅಲ್ಲಿನ ಜನರಲ್ಲಿ ಭವಿಷ್ಯದ ಬಗ್ಗೆ ತೀವ್ರ ಆತಂಕ ಮನೆಮಾಡಿದೆ. ಮನೆ ನಿರ್ಮಾಣ, ತೋಟ-ಗದ್ದೆಗಳ ನಿರ್ವಹಣೆ ಹಾಗೂ ಸ್ವಾಧೀನದ ವಿಚಾರದಲ್ಲಿ ಜನರಲ್ಲಿ ಗೊಂದಲ ಉಂಟಾಗಿದೆ ಎಂದು ಅವರು ಹೇಳಿದರು.

ಈ ಹಿಂದೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಯೋಜನೆಗಳ ಸಂದರ್ಭದಲ್ಲಿ ಆರಂಭದಲ್ಲಿ ಯಾವುದೇ ಒತ್ತಾಯವಿಲ್ಲ ಎಂದು ಹೇಳಿ, ನಂತರ ರೈತರನ್ನು ಅಲ್ಲಿಂದ ಸ್ಥಳಾಂತರಿಸಿದ ಇತಿಹಾಸವಿದೆ.

ಅದೇ ರೀತಿಯ ಪರಿಸ್ಥಿತಿ ಈ ಬಾರಿಯೂ ನಿರ್ಮಾಣವಾಗಬಹುದು ಎಂಬ ಭಯ ಮಲೆನಾಡಿಗರಲ್ಲಿ ಇದೆ ಎಂದು ವಿಶ್ವನಾಥ್ ಗದ್ದೆಮನೆ ತಿಳಿಸಿದರು.

ರೈತರ ತೋಟಗಳು, ಮನೆಗಳನ್ನು ಹೊರಗಿಡಲು ಒತ್ತಾಯ

ಈಗಾಗಲೇ ಮೀಸಲು ಅರಣ್ಯ ಎಂದು ಗುರುತಿಸಲಾಗಿರುವ ಪ್ರದೇಶಗಳ ಬಗ್ಗೆ ತಮ್ಮ ಆಕ್ಷೇಪವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ರೈತರ ಅಡಿಕೆ, ಕಾಫಿ, ರಬ್ಬರ್ ತೋಟಗಳು, ಗದ್ದೆಗಳು ಹಾಗೂ ಮನೆಗಳಿರುವ ಸರ್ವೆ ನಂಬರ್‌ಗಳನ್ನು ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯಿಂದ ಸಂಪೂರ್ಣವಾಗಿ ಹೊರಗಿಡಬೇಕು ಎಂದು ಒತ್ತಾಯಿಸಿದರು.

ಪರಿಸರ ಸಂರಕ್ಷಣೆಯ ಅಗತ್ಯವನ್ನು ಒಪ್ಪಿಕೊಂಡರೂ, ಅದರ ಹೆಸರಿನಲ್ಲಿ ಮಲೆನಾಡಿನ ರೈತರು ಹಾಗೂ ಜನಸಾಮಾನ್ಯರ ಜೀವನೋಪಾಯಕ್ಕೆ ತೊಂದರೆಯಾಗಬಾರದು.

ಇದನ್ನು ಓದಿ:Chikkamagaluru: ಮಲೆನಾಡಿನ ಉಳಿವಿಗಾಗಿ ನಡೆದ ಸಭೆ; ರೈತರ ಬದುಕಿಗೆ ಧಕ್ಕೆ ಆಗಲು ಬಿಡಲ್ಲ ಎಂದ ಕೋಟ ಶ್ರೀನಿವಾಸ ಪೂಜಾರಿ

ಸ್ಥಳೀಯ ವಾಸ್ತವಾಂಶಗಳನ್ನು ಪರಿಗಣಿಸಿ, ಜನರ ಅಭಿಪ್ರಾಯ ಪಡೆದು ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂಬುದು ಸಭೆಯಲ್ಲಿ ವ್ಯಕ್ತವಾದ ಪ್ರಮುಖ ಅಭಿಪ್ರಾಯವಾಗಿದೆ.

Leave a Comment

Scroll to Top